Author: AIN Author

ಸೂರ್ಯೋದಯ: 06:52, ಸೂರ್ಯಾಸ್ತ : 06:05 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ , ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ ಋತು, ತಿಥಿ: ಚೌತಿ, ನಕ್ಷತ್ರ: ಹುಬ್ಬ ಯೋಗ: ಶೋಭನ ಕರಣ: ಬಾವ ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ: 01:30 ನಿಂದ 03:00 ತನಕ ಅಮೃತಕಾಲ: ಬೆ.11:44 ನಿಂದ ಮ.1:32 ತನಕ ಅಭಿಜಿತ್ ಮುಹುರ್ತ: ಮ.12:06 ನಿಂದ ಮ.12:51 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಮನೆಯಲ್ಲಿ ತಯಾರಿಸಿ ವ್ಯಾಪಾರ-ವಹಿವಾಟು ಮಾಡುವವರಿಗೆ ಅಧಿಕ ಲಾಭ,ಇಂಟೀರಿಯರ್ ಡಿಸೈನರ್ ಉದ್ಯೋಗದಲ್ಲಿ ಧನಲಾಭ. ಆರ್ಥಿಕ ಸಂಕಷ್ಟದಲ್ಲಿ ಇದ್ದವರಿಗೆ ಅನಿರೀಕ್ಷಿತ ಧನಲಾಭ. ಸಂತಾನ ಪ್ರಾಪ್ತಿ. ಸಂಗೀತ, ಹಿನ್ನೆಲೆ ಗಾಯನ, ನಟನೆ,…

Read More

ಚಿಕ್ಕಬಳ್ಳಾಪುರ:- ಹೆಚ್‍ಡಿಕೆ ಸಹವಾಸ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕುಮಾರಸ್ವಾಮಿಯವರ ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ ಎಂದರು. ಕುಮಾರಸ್ವಾಮಿ ಕಥೆ ಇತಿಹಾಸ ಹೇಳುತ್ತಾ ಹೋದರೆ ಹಲವು ವರ್ಷಗಳೆ ಬೇಕು. ಅವರ ಸಹವಾಸದಿಂದ ಸುಖವಿಲ್ಲ. ಅವರನ್ನು ನಂಬಿದವರಿಗೆ ದೇವರೇ ಗತಿ. ನನಗೆ ಸಿಎಂ ಆಗಿ, ರಾಜಕೀಯದಲ್ಲಿ 50-55 ವರ್ಷದ ರಾಜಕೀಯ ಅನುಭವವಿದೆ. ನನ್ನ ರಾಜಕೀಯ ಇತಿಹಾಸದಲ್ಲಿ ಈ ಅನುಭವ ಇದೆ ಎಂದಿದ್ದಾರೆ. ಕುಮಾರಸ್ವಾಮಿಯವರ ತಂದೆಯವರ ಜೊತೆ ನಾನು ಚೆನ್ನಾಗಿ ಇದ್ದ ಕಾಲವೂ ಇದೆ. ಅದೇ ಪ್ರಕಾರ ಕಷ್ಟ ನಷ್ಟ ಅನುಭವಿಸಿದ್ದು ಇದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಮಾರಸ್ವಾಮಿ ಜೊತೆ ಬಹಳ ಜನ ಸ್ನೇಹ ಮಾಡಿದ್ರು, ಯಾರೂ ಉದ್ಧಾರ ಆಗಿಲ್ಲ. ಅವರ ಜೊತೆ ಸ್ನೇಹ ಮಾಡಿದವರು ಗುಂಡಿಗೆ ಬೀಳುತ್ತಾರೆ. ಬಿಜೆಪಿ (BJP) ಉದ್ಧಾರ ಆಗುವುದಾದರೆ ಆಗಲಿ ಎಂದಿದ್ದಾರೆ.

Read More

ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಔಟ್​ ಆಗಿದ್ದು, ಎಲ್ಲರಿಗೂ ಶಾಕ್​ ಆಗಿದೆ. ಕಪ್ ಗೆಲ್ಲಬೇಕು ಎನ್ನುವ ಕನಸು ಕಂಡು ದೊಡ್ಮನೆಗೆ ಹೋದವರು ವಿನಯ್ ಗೌಡ. ಆದರೆ, ಅವರ ಕನಸು ನನಸಾಗಲೇ ಇಲ್ಲ. ಟಾಪ್​ ಆರರ ಪೈಕಿ ಮೂರನೇ ವ್ಯಕ್ತಿ ಆಗಿ ಅವರು ಎಲಿಮಿನೇಟ್ ಆಗಿದ್ದಾರೆ. ಇದು ವಿನಯ್ ಗೌಡ ಅವರಿಗೆ ಶಾಕಿಂಗ್ ಆಗಿತ್ತು. ಅವರು ಹೊರ ಹೋಗಿದ್ದರಿಂದ ಅವರ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಟಾಪ್ ಎರಡರಲ್ಲಿ ಅವರು ಇರಬಹುದು ಎನ್ನುವ ಊಹೆ ತಪ್ಪಾಗಿದೆ. ಟಾಪ್​ ಆರರ ಪೈಕಿ ತುಕಾಲಿ ಸಂತೋಷ್ ಅವರು ಬಿಗ್ ಬಾಸ್​ನಿಂದ ಮೊದಲು ಔಟ್ ಆದರು. ಆ ಬಳಿಕ ಔಟ್ ಆಗಿದ್ದು ವರ್ತೂರು ಸಂತೋಷ್. ಮೂರನೇ ರನ್ನರ್​ಅಪ್ ಆಗಿ ವಿನಯ್ ಗೌಡ ಹೊರ ಬಂದರು. ವಿನಯ್ ಅವರಿಗೆ ಈ ವಿಚಾರ ಕೇಳಿ ನಿಜಕ್ಕೂ ಶಾಕ್ ಆಗಿದೆ. ‘ನಾವೇ ಟಾಪ್​ನಲ್ಲಿ ಬರೋದು’ ಎಂದು ವಿನಯ್ ಗೌಡ ಆ್ಯಂಡ್ ಟೀಂ ಹೇಳಿತ್ತು. ಈಗ ಅವರ ಟೀಂನ ಎಲ್ಲರೂ ಔಟ್ ಆದಂತೆ…

Read More

ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ಇದೀಗ ದೂರ ದಾಖಲಾಗಿದೆ. ಡ್ರೋನ್ ಪ್ರತಾಪ್, ಸಿರಣ್ ಮಾದವ್, ಸಾರಂಗ ಸಿಮಂತ್ ಮಾನೆ ಮತ್ತು ಸಾಗರ್ ಗಾರ್ಗ್ ಇವರು ಡ್ರೋನಾರ್ಕ್ ಏರೋಸ್ಪೇಸ್ ಪ್ರೈ.ಲಿ ಮತ್ತು ಕ್ಯಾಸ್ಟರ್ ಡ್ರೋಣಾಟಿಕ್ಸ್ ಪ್ರೈ.ಲಿ ಕಂಪನಿಗಳನ್ನ ತೆರೆದು ಸುಳ್ಳು ಮಾಹಿತಿ ನೀಡಿ ರೈತರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಡಾ. ಪ್ರಯಾಗ್ ದೂರು ದಾಖಲಿಸಿದ್ದಾರೆ ಇದರ ಸೂಕ್ತ ತನಿಖೆ ಮಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ.ಪ್ರಯಾಗ್ ಮನವಿ ಮಾಡಿದ್ದಾರೆ. ಡಾ. ಪ್ರಯಾಗ್ ನೀಡಿದ ದೂರನ್ನ ಸ್ವೀಕರಿಸಿ ಸ್ವೀಕೃತಿ ಪತ್ರವನ್ನು ಆರ್.ಆರ್ ನಗರದ ಪೊಲೀಸರು ನೀಡಿದ್ದಾರೆ.

Read More

ಚಿಕ್ಕಮಗಳೂರು:- ರಾಷ್ಟ್ರಪತಿಗೆ ಅಗೌರದ ಮಾತುಗಳನ್ನಾಡಿದ ಸಿದ್ದರಾಮಯ್ಯ ಅವರು ಕೂಡಲೇ ಕ್ಷಮೆ ಕೇಳುವಂತೆ ಮಾಜಿ ಶಾಸಕ ಸಿಟಿ ರವಿ ಆಗ್ರಹಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಶೋಷಿತರ ಹೆಸರಿನಲ್ಲಿ ಸಮಾವೇಶ ಮಾಡಿದ್ದಾರೆ. ಅಲ್ಲಿಗೆ ಬಂದವರು ಯಾರು? ಸ್ಪಾನ್ಸರ್ ಮಾಡಿದ್ದು ಯಾರು? ಭೈರತಿ ಸುರೇಶ್ ಕೋಟಿ ಕೋಟಿ ಹಣಕೊಟ್ಟು ಶೋಷಿತರ ಸಮಾವೇಶ ಮಾಡಿದ್ದಾರೆ. ಇವರು ಶೋಷಿತರಾ? ಹೆಸರು ಮಾತ್ರ ಶೋಷಿತ ಸಮಾವೇಶ ಅಷ್ಟೇ. ಸಿದ್ದರಾಮಯ್ಯನವರಿಗೆ ಅಧಿಕಾರ ತಪ್ಪಿ ಹೋಗಬಾರದು ಅಂತ ಶೋಷಿತ ಸಮಾವೇಶ ಮಾಡಿದ್ದಾರೆ ಎಂದರು. ಶೋಷಿತರ ಸಮಾವೇಶದಲ್ಲಿ ಮಹಾಮಹಿಮ ರಾಷ್ಟ್ರಪತಿ ಅವರಿಗೆ ಕಿಂಚಿತ್ತು ಗೌರವ ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಏಕವಚನದಲ್ಲಿ ರಾಷ್ಟ್ರಪತಿ ಬಗ್ಗೆ ಮಾತನಾಡಿದ್ದಾರೆ. ಮಹಿಳೆ ಎನ್ನುವುದನ್ನು ನೋಡದೆ ಅವಳು ಇವಳು ಎಂದು ಮಾತನಾಡಿದ್ದಾರೆ. ನಾಲಿಗೆ ಕುಲ ಹೇಳುತ್ತದೆ ಎಂದು ಹಳ್ಳಿಗಳಲ್ಲಿ ಆಡು ಮಾತಿದೆ. ಆ ಸ್ಥಾನಕ್ಕೆ ಗೌರವ ಕೊಡದ ನಿಮ್ಮ ವ್ಯಕ್ತಿತ್ವ ರಾಜ್ಯಕ್ಕೆ ಕಪ್ಪು ಚುಕ್ಕಿ. ಇದು ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್​ನ ಸಂಸ್ಕೃತಿಯನ್ನು ತೋರಿಸುತ್ತದೆ. ರಾಷ್ಟ್ರಪತಿ ಸ್ಥಾನದ ಬಗ್ಗೆ ನಿಮಗೆ ಕಿಂಚಿತ್ತು…

Read More

ಬೆಂಗಳೂರು:- ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಮಂಸೋರೆ ಅವರ ದಾಂಪತ್ಯ ಕಲಹ ಪೊಲೀಸ್​ ಠಾಣೆಗೆ ತಲುಪಿದೆ. ಮಂಸೋರೆ ಅವರ ವಿರುದ್ಧ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿದೆ. ಮಂಸೋರೆ, ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಸಹೋದರಿ ಹೇಮಲತಾ ವಿರುದ್ಧ ಪತ್ನಿ ಅಖಿಲಾ ದೂರು ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದೂರಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಪತ್ರ ಬರೆದಿರುವ ಮಂಸೋರೆ, “ನನ್ನ ಪತ್ನಿ ಅಖಿಲಾ ಮಾನಸಿಕ ಅಸ್ವಸ್ಥರು. ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿರುವ ಈ ದೂರನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯತೆಯನ್ನು ಮನಗಾಣಬೇಕಿದೆ. ಬಳಿಕ ನಾವು ಒಟ್ಟಿಗಿರಬೇಕೆ ಅಥವಾ ಬೇಡವೇ ಎಂಬುದನ್ನು ನಿಶ್ಚಯಿಸುತ್ತೇವೆ” ಎಂದು ತಿಳಿಸಿದ್ದಾರೆ. ಪತ್ನಿ ಅಖಿಲಾ ತಮ್ಮ ದೂರಿನಲ್ಲಿ, ”ಪತಿ ಮಂಸೋರೆ ವೈವಾಹಿಕ ಜೀವನದ ಆರಂಭದಿಂದಲೂ ಕಿರುಕುಳ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ನಮ್ಮ ಮನೆಯವರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ” ಎಂದು ಆರೋಪಿಸಿದ್ದಾರೆ.…

Read More

ಬೆಂಗಳೂರು:- ತಲ್ಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯ ಭೀಕರ ಹತ್ಯೆ ನಡೆದಿದೆ. ಗಾಳಪ್ಪ @ ಗುಟ್ಟೆಗಾಳಪ್ಪ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ತಲಘಟ್ಟಪುರದ ಚಿಕ್ಕೆಗೌಡನ ಪಾಳ್ಯದಲ್ಲಿ ಘಟನೆ ಜರುಗಿದೆ. ಶೆಡ್ಡ್ ವೊಂದರಲ್ಲಿ ಗಾಳಪ್ಪನನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಗಾಳಪ್ಪ ಅಲಿಯಾಸ್ ಹುಚ್ಚುಗಾಳ ಕೊಲೆಯಾದ ರೌಡಿ ಶೀಟರ್ ಆಗಿದ್ದಾನೆ. ಕೆಂಗೇರಿ ತಾವರೇಕೆರೆ ಪೊಲೀಸ್ ಠಾಣೆಯಲ್ಲಿ ಗಾಳಪ್ಪ ರೌಡಿ ಶೀಟ್ ಹೊಂದಿದ್ದ. ಎರಡು ಕೊಲೆಯಲ್ಲಿ ಈ ಹಿಂದೆ ಭಾಗಿಯಾಗಿದ್ದ ಎನ್ನಲಾಗಿದೆ. ಇಂದು ಚಿಕ್ಕೆಗೌಡನ ಪಾಳ್ಯಕ್ಕೆ ಬಂದಿದ್ದ ವೇಳೆ ಘಟನೆ ಜರುಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಆರೋಪಿಗಳು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ತುಮಕೂರು:- ಸರ್ಕಾರಿ ಜಾಗದಲ್ಲಿ ಹನುಮಾನ್‌ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಷ್ಟ್ರಧ್ವಜ ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿ ನಿಂದ ಅನುಮತಿ ಪಡೆದಿದ್ದರು. ಆದರೆ ರಾಷ್ಟ್ರಧ್ವಜ ಬದಲು ಹನುಮ ಧ್ವಜ ಹಾರಿಸಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದರಿಂದ ತೆರವುಗೊಳಿಸಿದ್ದಾರೆ ಎಂದು ಇದಾದ ಬಳಿಕ ಕೆಲ ಪ್ರತಿಭಟನೆಗಳು, ಬೇರೆಲ್ಲಾ ಆಗಿವೆ ಎಂದು ಹೇಳಿದ್ದಾರೆ. ಲಘು ಲಾಠಿಪ್ರಹಾರ ನಡೆಸಿ ರಾಷ್ಟ್ರೀಯ ಧ್ವಜವನ್ನ ಹಾರಿಸಲಾಗಿದೆ. ಸಮಾಜದಲ್ಲಿ ಇದು ಒಂದು ರೀತಿಯಲ್ಲಿ ಶಾಂತಿ ಕದಡುವ ಕೆಲಸವಾಗಿದೆ. ಕಾನೂನಿಗೆ ವಿರುದ್ಧವಾದ ಕೆಲಸವೆಂದು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ವಿಚಾರವಾಗಿ ಮಾತನಾಡಿದ ಅವರು, ಪದೇ ಪದೇ ಇದನ್ನ ಹೇಳುತ್ತಿದ್ದಾರೆ. ಅದಕ್ಕೇನು ಹೆಚ್ಚು ಅರ್ಥ ಕಲ್ಪಿಸುವುದು ಇಲ್ಲ. ಪದೇ ಪದೇ ಕಾಂಗ್ರೆಸ್​ನವ್ರು, ರಾಜ್ಯ ಸರ್ಕಾರ ಹಿಂದೂ ವಿರೋಧಿಗಳು ಅಂತಾ ಹೇಳುತ್ತಿದ್ದಾರೆ. ಆದರೆ ನಾವು ಕೂಡ ಹೇಳುತ್ತಿದ್ದೇವೆ. ನಾವು ಕೂಡ ಹಿಂದೂಗಳೇ, ನಾವೇನು ಬೇರೆಯವರಲ್ಲ.…

Read More

ಭಾರತದ ವಿರುದ್ಧ ಇಂಗ್ಲೆಂಡ್‌ಗೆ 28 ರನ್‌ಗಳ ಜಯ ಸಿಕ್ಕಿದೆ. ಟಾಮ್‌ ಹಾರ್ಟ್ಲಿ 7 ವಿಕೆಟ್‌ ಕಬಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 231 ರನ್‌ ಗುರಿ ನೀಡಿದ್ದ ಇಂಗ್ಲೆಂಡ್‌ 202 ರನ್‌ಗಳಿಗೆ ಆಲೌಟ್‌ ಮಾಡಿತು. 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು. ಟೀಂ ಇಂಡಿಯಾದ ರೋಹಿತ್‌ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್‌ ಉತ್ತಮ ಆರಂಭ ನೀಡಲು ಯತ್ನಿಸಿದರು. ರೋಹಿತ್‌ 39 ರನ್‌ಗಳಿಸಿ ಔಟಾದರು. ನಂತರ ಬಂದ ಯಾವೊಬ್ಬ ಬ್ಯಾಟರ್‌ ಕೂಡ ಉತ್ತಮ ರನ್‌ ಕಲೆ ಹಾಕುವಲ್ಲಿ ವಿಫಲರಾದರು. 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಒಲೀ ಪೊಪ್‌ ಅಮೋಘ ಬ್ಯಾಟಿಂಗ್‌ ಮಾಡಿದರು. 196 ರನ್‌ ಗಳಿಸಿದ ಅವರು ಕೇವಲ 4 ರನ್‌ಗಳಿಂದ ದ್ವಿಶತಕ ವಂಚಿತರಾದರು. ಇಂಗ್ಲೆಂಡ್‌ ಬೌಲರ್‌ ಟಾಮ್‌ ಹಾರ್ಟ್ಲಿ 7 ವಿಕೆಟ್‌ ಉರುಳಿಸಿ ತಂಡದ ಗೆಲುವಿಗೆ ಕಾರಣರಾದರು.

Read More

ಬಿಗ್ ಬಾಸ್ ಕನ್ನಡ 10 ವಿನ್ನರ್ ಘೋಷಣೆಗೆ ಕ್ಷಣಗಣನೆ ಶುರುವಾಗಿದ್ದು, ತುಕಾಲಿ ಸಂತು ಎಲಿಮಿನೇಟ್ ಆಗ್ತಿದ್ದಂತೆ ವರ್ತೂರು ಸಂತೋಷ್ ಕೂಡ ಎಲಿಮಿನೇಟ್ ಆಗಿದ್ದಾರೆ. ಹಳ್ಳಿಕಾರ್ ವರ್ತೂರು ಸಂತೋಷ್ ಅವರು ಟಾಪ್ 2ನಲ್ಲಿ ಇರುತ್ತಾರೆ ಎಂದೇ ಭಾವಿಸಲಾಗಿತ್ತು. ಇದೀಗ ತುಕಾಲಿ ಸಂತು ಆಪ್ತ ಸ್ನೇಹಿತ ವರ್ತೂರು ಸಂತೋಷ್‌ಗೆ ದೊಡ್ಮನೆಯ ಆಟ ಅಂತ್ಯವಾಗಿದೆ. ವರ್ತೂರು ಸಂತೋಷ್ ಅವರ ವಿಚಾರದಲ್ಲಿ ಅದೇನೇ ವಿವಾದವಾಗಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಟಫ್ ಫೈಟ್ ನೀಡಿದ್ದರು. ಮನೆಯಿಂದ ಹೊರಗೆ ಮತ್ತು ದೊಡ್ಮನೆಯಲ್ಲಿ ಸಾಕಷ್ಟು ಏಳು- ಬೀಳು ಕಂಡಿದ್ದರು ವರ್ತೂರು. ಅದನ್ನೆಲ್ಲಾ ಮೀರಿ ವರ್ತೂರು ಸಂತೋಷ್ ಸಖತ್ ಆಗಿ ಆಟ ಆಡಿದ್ದರು. ಕೊನೆ ದಿನಗಳಲ್ಲಿ ವರ್ತೂರು ಸಂತೋಷ್ ಅವರ ನಟನೆ, ಮಿಮಿಕ್ರಿ ಎಲ್ಲವೂ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗ ದೊಡ್ಮನೆಯಿಂದ ವರ್ತೂರು ಸಂತೋಷ್ ಹೊರಬಂದಿದ್ದಾರೆ.

Read More