Author: AIN Author

ನಿಸರ್ಗದಲ್ಲಿ ನಮ್ಮ ದೇಹಕ್ಕೆ ಅನುಕೂಲಕರವಾಗಿ ಬೇಕಾದ ಹಲವಾರು ಆಹಾರ ಪದಾರ್ಥಗಳು ಲಭ್ಯವಿದೆ. ಸರಿಯಾಗಿ ನೋಡಿದರೆ ನಾವೇ ಅವುಗಳನ್ನು ಉಪಯೋಗಿಸಿ ಕೊಳ್ಳುತ್ತಿಲ್ಲ ಎನಿಸುತ್ತದೆ. ಮನುಷ್ಯನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇವು ನೈಸರ್ಗಿಕ ಪರಿಹಾರಗಳಾಗಿ ಕೆಲಸ ಮಾಡುತ್ತವೆ. ನಿಸರ್ಗದತ್ತವಾಗಿ ಸಿಗುವ ಅನೇಕ ಆಹಾರ ಪದಾರ್ಥಗಳಲ್ಲಿ ಎಳೆನೀರು ಕೂಡ ಒಂದು. ಇದೊಂದು ನೈಸರ್ಗಿಕವಾದ ಪಾನೀಯವಾಗಿದ್ದು, ನಮ್ಮ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. https://ainlivenews.com/ips-vs-ias-tussle-case-high-court-grants-relief-to-sindhu/ ತೆಂಗಿನ ನೀರು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದರ ಸೇವನೆಯು ದೇಹಕ್ಕೆ ಇತರ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಹಲವು ಪ್ರಯೋಜನಗಳಿಂದ ತುಂಬಿರುವ ಎಳನೀರು ಕೆಲವು ಜನರಿಗೆ ಒಳ್ಳೆಯದಲ್ಲ ಎಂದು ತಿಳಿದರೆ ನೀವು ಆಶ್ಚರ್ಯಪಡುವುದು ಖಂಡಿತ. ಎಳನೀರಿನ ಅತಿಯಾದ ಸೇವನೆಯು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು, ಎಲೆಕ್ಟ್ರೋಲೈಟ್ ಅಸಮತೋಲನವನ್ನು ಉಂಟುಮಾಡಬಹುದು. ಎಳನೀರು ಕುಡಿಯಲು ಇಷ್ಟಪಡುವ ಜನರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಹಾಗಾದರೆ ಎಳನೀರು ಯಾರಿಗೆಲ್ಲಾ ಹಾನಿಕಾರಕ ಮತ್ತು ಏಕೆ…

Read More

ಬೆಂಗಳೂರು:- IPS Vs IAS ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಮಾನನಷ್ಟ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್ ದಾಖಲಿಸಿದ್ದ ಕೇಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಹೈಕೋರ್ಟ್‌ ವಿಚಾರಣೆ ಮುಂದೂಡಿದೆ. ಮಾ.12 ರ ವರೆಗೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದೆ. ಅರ್ಜಿ ವಿಚಾರಣಾ ಸಂದರ್ಭದಲ್ಲಿ ರಾಜಿ ಸಂಧಾನಕ್ಕೆ ಪ್ರಯತ್ನಿಸುವಂತೆ ನ್ಯಾ.ಮೊಹಮ್ಮದ್ ನವಾಜ್ ಸಲಹೆ ನೀಡಿದ್ದಾರೆ. https://ainlivenews.com/mandya-a-young-woman-who-was-seriously-injured-after-being-hit-by-a-train-has-died/ ಬೆಂಗಳೂರಿನ 7 ನೇ ಎಸಿಎಂಎಂ ಕೋರ್ಟ್‌ಗೆ ರೂಪಾ‌ ಖಾಸಗಿ ದೂರು ಸಲ್ಲಿಸಿದ್ದರು. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಕೋರ್ಟ್ ನೋಟಿಸ್ ನೀಡಿತ್ತು. 2023ರ ಫೆ.19 ರಂದು ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ನೀಡಿದ್ದಾರೆ. ನಂತರ ಅದನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪ ಮಾಡಿದ್ದಾರೆ. ಈ ಹೇಳಿಕೆಯನ್ನು 1.8 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ರೋಹಿಣಿ ಸಿಂಧೂರಿ ಅವರ ಅವಹೇಳನಕಾರಿ ಹೇಳಿಕೆ ನಂತರ…

Read More

ಮಂಡ್ಯ : ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವನ್ನಪ್ಪಿದ ಘಟನೆ ಮಂಡ್ಯದ ರೈಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಜರುಗಿದೆ. https://ainlivenews.com/if-a-lakshmi-scorpion-comes-to-your-house-like-this-it-would-indicate-these-things/ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲಿಗೆ ಯುವತಿ ಸಿಲುಕಿದ್ದರು. ಮಂಡ್ಯದ ಹೆಬ್ಬಕವಾಡಿ ಗ್ರಾಮದ ವಿಜಯಲಕ್ಷ್ಮಿ ರೈಲಿಗೆ ಸಿಲುಕಿದ ಯುವತಿ ಎನ್ನಲಾಗಿದೆ. ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಗೆ ಮಿಮ್ಸ್ ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾರೆ.

Read More

ರಜೆ, ಇಲ್ಲವೆ ಯಾವುದಾದ್ರೂ ಹಬ್ಬ ಬಂದ್ರೆ, ಜನರು ಮನೆ ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಮನೆಗಳಲ್ಲಿ ಶುಚಿಗೊಳಿಸುವ ಸಮಯದಲ್ಲಿ, ಟೇಬಲ್‌, ಖುರ್ಚಿ ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಈ ವೇಳೆ ಅವುಗಳ ಕೆಳಗೆ ಅಡಗಿ ಕುಳಿರುತವ ಕೀಟಗಳು ಹೊರ ಬರುತ್ತವೆ. ಹಾಗೇಯೆ ಮನೆ ಕ್ಲೀನಿಂಗ್‌ ವೇಳೆ ಚೇಳು ಕಂಡರೆ ಪ್ಯಾನಿಕ್ ಆಗಬೇಡಿ, ಅವುಗಳನ್ನು ಕೊಲ್ಲಬೇಡಿ, ಏಕೆಂದರೆ ಅವುಗಳು ಒಳ್ಳೆಯ ಸಂಕೇತವೆಂದು ಹೇಳಲಾಗುತ್ತದೆ. https://ainlivenews.com/becareful-if-you-have-these-symptoms-dont-just-assume-its-a-cold-its-throat-cancer/ ಸಾಮಾನ್ಯವಾಗಿ ಲಕ್ಷ್ಮಿಚೇಳು ಹುಳುವನ್ನು ಎಲ್ಲರೂ ನೋಡಿರುತ್ತೀರಿ. ಒಣಗಿದ ಮರ, ತೇವವಿರುವ ಜಾಗ, ಕಲ್ಲುಗಳ ಕೆಳಗೆ ಹೀಗೆ ಅನೇಕ ಸ್ಥಳಗಳಲ್ಲಿ ನಾವು ಜರಿಗಳು ವಾಸಮಾಡುವುದನ್ನು ನೋಡಬಹುದು. ಕೆಲವರು ಇದರಲ್ಲಿ ವಿಷವಿರುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಇದು ಕಿವಿಯೊಳಗೆ ಹೋದರೆ ಮೆದುಳನ್ನು ತಿನ್ನುತ್ತದೆ ಎನ್ನುವ ಕಾರಣಕ್ಕಾಗಿ ಇದು ಮನೆಯೊಳಗೆ ಬಂದಾಕ್ಷಣ ಮನೆಯ ಸದಸ್ಯರು ಅದನ್ನು ಹೊಡೆದು ಹಾಕುತ್ತಾರೆ. ಅಷ್ಟು ಮಾತ್ರವಲ್ಲ ಜರಿ ಕಚ್ಚಿದರೆ ತುರಿಕೆ, ಉರಿ, ಅಲರ್ಜಿಯಂತಹ ಲಕ್ಷಣಗಳು ಕಚ್ಚಿದ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿಯೂ ಜನರು ಇದರಿಂದ ದೂರವಿರಲು, ಮನೆಯನ್ನು ಪ್ರವೇಶಿಸದಂತೆ…

Read More

ಗಂಟಲಿನ ಕ್ಯಾನ್ಸರ್ ಎಂಬುದು ಗಂಟಲಿನ ಮೇಲೆ ಪರಿಣಾಮ ಬೀರುವ ನಿರ್ದಿಷ್ಟ ರೀತಿಯ ಕ್ಯಾನ್ಸರ್ ಅನ್ನು ಉಲ್ಲೇಖಿಸುವ ಪದವಾಗಿದೆ. https://ainlivenews.com/if-anyone-talks-about-me-i-will-answer-myself-by-vijayendra/ ಗಂಟಲಿನ ಕ್ಯಾನ್ಸರ್ ಎಂದರೆ ಗಂಟಲಿನ ಯಾವುದೇ ಭಾಗದಲ್ಲಿ ಬೆಳೆಯುವ ಗೆಡ್ಡೆಗಳು. ಅವು ಟಾನ್ಸಿಲ್‌ಗಳು, ನಾಲಿಗೆಯ ಬುಡ ಅಥವಾ ಧ್ವನಿಪೆಟ್ಟಿಗೆಯನ್ನು ಒಳಗೊಂಡಂತೆ ಈ ಪ್ರದೇಶದ ಯಾವುದೇ ಭಾಗದ ಮೇಲೆ ಪರಿಣಾಮ ಬೀರಬಹುದು. ವಿಶ್ವಾದ್ಯಂತ ಕ್ಯಾನ್ಸರ್ ಸಂಬಂಧಿತ ಸಾವಿನ ಪ್ರಕರಣಗಳಲ್ಲಿ ಗಂಟಲಿನ ಕ್ಯಾನ್ಸರ್ ಆರನೇ ಸ್ಥಾನದಲ್ಲಿದೆ. ಈಗಂತೂ ಈ ರೋಗ ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಪ್ರತಿ ವರ್ಷ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಗಂಭೀರವಾಗಿ ಹೆಚ್ಚಾಗುತ್ತಿದೆ. ಮಹಿಳೆಯರಿಗಿಂತ ಪುರುಷರಲ್ಲಿ ಗಂಟಲು ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ. ಈ ಕ್ಯಾನ್ಸರ್‌ಗೆ ಪ್ರಮುಖ ಕಾರಣವೆಂದರೆ ಧೂಮಪಾನ, ಮಾದಕ ದ್ರವ್ಯ ಸೇವನೆ, ಅಧಿಕ ತೂಕ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (ಆಸಿಡ್ ರಿಫ್ಲಕ್ಸ್). ಈ ಕ್ಯಾನ್ಸರ್ ಅನ್ನನಾಳದ ಯಾವುದೇ ಭಾಗದಲ್ಲಿ ಬೇಕಾದರೂ ಬೆಳೆಯಬಹುದು. ಕ್ಯಾನ್ಸರ್ ಒಂದು ಮಾರಕ ಕಾಯಿಲೆ ಎಂದು ಹಲವರು ಭಯಪಡುತ್ತಾರೆ. ಆದರೆ,…

Read More

ಆನೇಕಲ್:- ಕಿಲ್ಲರ್ ಟ್ಯಾಂಕರ್ ಗೆ ವ್ಯಕ್ತಿ ಬಲಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬೆಟ್ಟದಾಸನಪುರದ ಬಳಿ ಜರುಗಿದೆ. https://ainlivenews.com/car-accident-ganguly-escapes-death/ ಬೆಟ್ಟದಾಸನಪುರ ವಾಸಿ ಶಿವಕುಮಾರ್(36) ಮೃತ ದುರ್ದೈವಿ. ರಸ್ತೆ ಬದಿಯಲ್ಲಿದ್ದವನ ಮೇಲೆ ಟ್ಯಾಂಕರ್ ವಾಹನ ಹರಿದಿದೆ. ಹೊಟ್ಟೆ ಮತ್ತು ಎದೆ ಮೇಲೆ ಚಕ್ರ ಹರಿದು ಸ್ಥಳದಲ್ಲಿಯೇ ಶಿವಕುಮಾರ್ ಮೃತಪಟ್ಟಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಮೃತ ಶಿವಕುಮಾರ್ ತೆರಳಿದ್ದರು. ಪತ್ನಿಗೆ ಪೋನ್ ಮಾಡಿ ಅಪಘಾತದ ಬಗ್ಗೆ ಸ್ಥಳೀಯರು ತಿಳಿಸಿದ್ದರು. ಮನೆಗೆ ಅಧಾರವಾಗಿದ್ದವನ ಬಲಿ ಟ್ಯಾಂಕರ್ ಪಡೆದಿದ್ದ. ನ್ಯಾಯ ಕೊಡಿಸುವಂತೆ ಮೃತನ ಪತ್ನಿ ಆಗ್ರಹಿಸಿದರು. ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ಪರಿಶೀಲನೆ ಮಾಡಿದ್ದಾರೆ.

Read More

ಕೋಲ್ಕತ್ತಾ:- ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಸೌರವ್ ಗಂಗೂಲಿ ಪಾರಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಜರುಗಿದೆ. https://ainlivenews.com/son-addicted-to-alcohol-he-stabbed-his-mother-and-stole-her-wallet-for-money/ ಬರ್ಧಮಾನ್‌ಗೆ ಗಂಗೂಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಂಗೂಲಿ ಅವರ ರೇಂಜ್ ರೋವರ್ ಕಾರು ಸಾಮಾನ್ಯ ವೇಗದಲ್ಲಿ ಚಲಿಸುತ್ತಿತ್ತು. ಈ ವೇಳೆ ಲಾರಿಯೊಂದು ಇದ್ದಕ್ಕಿದ್ದಂತೆ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಗಂಗೂಲಿ ಅವರ ಕಾರು ಚಾಲಕ ದಿಢೀರ್‌ ಬ್ರೇಕ್‌ ಹಾಕಿದ್ದಾನೆ. ಇದರಿಂದಾಗಿ ಗಂಗೂಲಿ ಅವರ ಕಾರಿನ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಒಂದು ಬೆಂಗಾವಲು ವಾಹನ ಗಂಗೂಲಿ ಅವರ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸದ ಕಾರಣ ಗಂಗೂಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read More

ಬೆಂಗಳೂರು:- ಪಾಪಿ ಮಗನೋರ್ವ ತನ್ನ ಚಟಕ್ಕಾಗಿ ಹೆತ್ತ ತಾಯಿಯ ತಾಳಿಯ ಮೇಲೆ ಕಣ್ಣಿಟ್ಟ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಯಿಯೇ ದೇವರು ಅಂತಾ ಪೂಜೆ ಮಾಡೋದು ಬಿಟ್ಟು ಎಣ್ಣೆಗಾಗಿ ತಾಯಿಗೆ ಚಾಕು ಇರಿದು ಈ ಪಾಪಿ ಕೃತ್ಯ ಎಸಗಿದ್ದಾನೆ. https://ainlivenews.com/outrage-against-betting-apps-protest-demanding-a-ban/ ಮಹೇಶ್ ಅಲಿಯಾಸ್ ಕಲರ್ಸ್ ಹೆತ್ತ ತಾಯಿ ಜಯಲಕ್ಷ್ಮಿಗೆ ಚಾಕು ಇರಿದ ಪಾಪಿ ಮಗ ಎನ್ನಲಾಗಿದೆ. ಕುಡಿತದ ಚಟಕ್ಕೆ ಆರೋಪಿ ರಾಹುಲ್ @ ಕಲರ್ಸ್ ದಾಸನಾಗಿದ್ದ. ಮಗ ಪೋಲಿಗೆ ಬಿದ್ದಿದ್ರೂ ಆಗಾಗ ಖರ್ಚಿಗೆ ತಾಯಿ ಹಣ ಕೊಡ್ತಿದ್ದರು. ಕೂಲಿಕೆಲಸ ಮಾಡಿ ಮಗನ ಖರ್ಚಿಗೆ ತಾಯಿ ಹಣ ಕೊಡ್ತಿದ್ದರು. ಆದರೆ ಕಳೆದ ಎರಡು ಮೂರು ದಿನಗಳಿಂದ ಖರ್ಚಿಗೆ ದುಡ್ಡು ಕೊಟ್ಟಿರಲಿಲ್ಲ. ಕುಡಿಯೋಕೆ ಹಣ ಕೊಡು ಅಂತಾ ಆರೋಪಿ ರಾಹುಲ್ @ ಕಲರ್ಸ್ ಪೀಡಿಸಿದ್ದ. ಆದ್ರೆ ಹಣ ಇರದೆ ಕೊಡೋಕೆ ಆಗ್ತಿರಲಿಲ್ಲ. ಹೀಗಾಗಿ ಹಣ ಇಲ್ಲ‌ ಎಂದಿದ್ದ ತಾಯಿ ಜಯಲಕ್ಷ್ಮಿ ತಾಳಿ ಕೊಡು ಎಂದು ಗಲಾಟೆ ತೆಗೆದಿದ್ದ. ಗಲಾಟೆ…

Read More

ಬೆಂಗಳೂರು:- ಬೆಟ್ಟಿಂಗ್ ಆಪ್ ಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ಹೊರ ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಬೆಟ್ಟಿಂಗ್ಆಪ್ ಗಳಿಂದ ಯುವಕರು ಬಲಿ ಆಗ್ತಿದ್ದಾರೆ. ಬಾಳಿ ಬದುಕಬೇಕಿದ್ದ ನೂರಾರು ಜನ ಡ್ರಗ್ಸ್ ಮಾದರಿಯಲ್ಲಿ ಅಡಿಟ್ ಆಗ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಕೊಡುವ ಈ ಆಪ್ ಗಳನ್ನ ಈ ಕೂಡಲೇ ನಿಷೇಧ ಆಗ್ಬೇಕು ಎಂದು ಕ ರ ವೇ ಶಿವರಾಮೇಗೌಡ್ರ ಬಣ ದ ಕಾರ್ಯಕರ್ತರು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. https://ainlivenews.com/hyderabad-based-doctor-neerupalu-body-found-after-thirty-hours/ ದುಡ್ಡಿಗಾಗಿ ಕಳ್ಳತನ, ಸುಲಿಗೆ, ದರೋಡೆಗಳು ಜಾಸ್ತಿ ಆಗ್ತಿದೆ.ಈಗಿನ ನಟ ನಟಿಯರಿಗೆ ಮಾನವೀಯತೆಗಿಂತ ದುಡ್ಡು ಮುಖ್ಯ ಆಗಿದೆ . ಡಾ, ರಾಜಕುಮಾರ್ ಚಿತ್ರ ನೋಡಿ ಜೀವನ ಬದಲಿಸಿಕೊಂಡ ಅದೆಷ್ಟೋ ನಿದರ್ಶನ ಇದೆ. ಆದ್ರೆ ಈಗಿನ ನಟರು ದುಡ್ಡು ಕೊಟ್ರೆ ಎನ್ ಬೇಕಾದ್ರು ಪ್ರಮೋಟ್ ಮಾಡ್ತಾರೆ. ಎಂದು ವಿದ್ಯಾರ್ಥಿ ಘಟಕದ ಅಧ್ಯಕ್ಷ ಯಲಹಂಕಗುರು ಮತ್ತು ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗಿದೆ. ಯಲಹಂಕ ತಾಲ್ಲೂಕು ದಂಡಾಧಿಕಾರಿಗಳಿಗೆ ಕರವೇ ಕಾರ್ಯಕರ್ತರು ಮನವಿ ಪತ್ರ ಕೊಟ್ಟಿದ್ದಾರೆ.

Read More

ಕೊಪ್ಪಳ: ಸ್ನೇಹಿತರ ಜೊತೆ ಈಜಲು ಹೋಗಿದ್ದ ವೈದ್ಯೆಯೊಬ್ಬಳು 20 ಅಡಿ ಎತ್ತರದಿಂದ ತುಂಗಭದ್ರಾ ನದಿಗೆ ಜಿಗಿದಿದ್ದು ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. https://ainlivenews.com/accident-while-swimming-kalburgi-man-dies-on-a-foreign-trip/ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದ ಬಳಿ ನದಿಗೆ ಹೈದರಾಬಾದ್ ಮೂಲದ 26 ವರ್ಷದ ಅನನ್ಯರಾವ್ ಜಿಗಿದಿದ್ದಳು. ಆದರೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಈಜಲು ಸಾಧ್ಯವಾಗದೇ ಮುಳುಗಿದ್ದಾಳೆ. ಹೈದರಬಾದ್ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅನನ್ಯರಾವ್, ನಿನ್ನೆ ಮೂವರು ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದು, ನಿನ್ನೆ ಬೆಳಗ್ಗೆ ನದಿಗೆ ಈಜಲು ತೆರಳಿದ್ದರು. ರೀಲ್ಸ್ ಗಾಗಿ ವಿಡಿಯೋ ಮಾಡುತ್ತಿದ್ದರು ಎನ್ನಲಾಗಿದೆ. ದೂರದಲ್ಲಿ ನಿಂತಿದ್ದ ವ್ಯಕ್ತಿಯೋರ್ವ ಒಂದು, ಎರಡು, ಮೂರು ಜಂಪ್ ಎಂದು ಹೇಳಿದ ತಕ್ಷಣ ಅನನ್ಯರಾವ್ ನದಿಗೆ ಜಿಗಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ವೈದ್ಯೆಗಾಗಿ ಶೋಧ ಕಾರ್ಯ ನಡೆಸಿದ್ದು, ಸತತ ಮೂವತ್ತು ಗಂಟೆಗಳ ಬಳಿಕ ಶವ ಪತ್ತೆಯಾಗಿದೆ. ವಿವಿಧ ತಂಡಗಳಿಂದ ಮೂವತ್ತು ಗಂಟೆಗಳ ಕಾರ್ಯಾಚರಣೆ ನಂತರ…

Read More