ಬೆಂಗಳೂರು:- ಲಾಲ್ ಬಾಗ್ ನಲ್ಲಿ ನಡೆದ ಫಲಪುಷ್ಪಪ್ರದರ್ಶನದ ಕೊನೆ ದಿನಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ವೀಕೆಂಡ್ ಹಿನ್ನೆಲೆ ೭೬,೫೦೦ ಜನರಿಂದ ಲಾಲ್ ಬಾಗ್ ವೀಕ್ಷಣೆ ಮಾಡಲಾಗಿದೆ. ಇಂದು ಒಂದೇ ದಿನಕ್ಕೆ 37.5 ಲಕ್ಷ ಕಲೆಕ್ಷನ್ ಮಾಡಲಾಗಿದ್ದು, ವಚನಕಾರರು..ಬಸವಣ್ಣನವರ ದರ್ಶನಕ್ಕೆ ಸಾವಿರಾರು ಜನರು ಬಂದಿದ್ದರು. ಇದೆ ಮೊದಲ ಬಾರಿಗೆ ಗಣರಾಜ್ಯೋತ್ಸವ ಫಲಪುಷ್ಪಪ್ರದರ್ಶನಕ್ಕೆ ಭರ್ಜರಿ ರೆಸ್ಪನ್ಸ್ ಸಿಕ್ಕಿದೆ. ೧೧ ದಿನದ ಫಲಪುಷ್ಪಪ್ರದರ್ಶನ ನೋಡಲು ೫.೬೧ ಲಕ್ಷ ಜನರು ಬಂದಿದ್ದು, ಈ ಪ್ರದರ್ಶನದಿಂದ ೨೫೯ ಲಕ್ಷ ರೂ. ಕಲೆಕ್ಷನ್ ಆಗಿದ್ದು,ದಾಖಲೆ ನಿರ್ಮಾಣ ಮಾಡಿದೆ.
Author: AIN Author
ಬಿಗ್ ಬಾಸ್ ಸೀಸನ್‌ನ ‘ಸಿಂಹಿಣಿ’ ಎಂದೇ ಪ್ರಸಿದ್ಧರಾಗಿದ್ದ ಸಂಗೀತಾ, ತಮ್ಮ ನೇರ ಮಾತು, ದಿಟ್ಟ ನಿಲುವಿನಿಂದ ಜನರ ಮೆಚ್ಚುಗೆ ಗಳಿಸಿದ್ದರು. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು. ಮುಖ್ಯವೇದಿಕೆಯಲ್ಲಿ ನಿಂತಿದ್ದ ಮೂವರು ಸ್ಪರ್ಧಿಗಳ ಮುಖದಲ್ಲಿ ಆತಂಕ ಎದ್ದು ಕಾಣಿಸುತ್ತಿತ್ತು. ಸ್ಪರ್ಧಿಗಳ ಮುಖದಲ್ಲಿಯಷ್ಟೇ ಅಲ್ಲ, ವೇದಿಕೆಯ ಪಕ್ಕ ಕೂತ ಹಿಂದಿನ ಸ್ಪರ್ಧಿಗಳು, ಎದುರಿನಲ್ಲಿನ ಪ್ರೇಕ್ಷರು ಎಲ್ಲರ ಮುಖದಲ್ಲಿಯೂ ಆತಂಕ ಎದ್ದು ಕಾಣಿಸುತ್ತಿತ್ತು. ಎಲ್ಲರ ಊಹೆಯನ್ನು ಬ್ರೇಕ್ ಮಾಡಿ ಹೊರಗೆ ಬಿದ್ದಿದ್ದು ಸಂಗೀತಾ ಶೃಂಗೇರಿ. ಫಿನಾಲೆ ವೀಕ್‌ನಲ್ಲಿ ಇದ್ದ ಒಬ್ಬರೇ ಒಬ್ಬರು ಮಹಿಳಾ ಸ್ಪರ್ಧಿ ಸಂಗೀತಾ ಗಟ್ಟಿ ವ್ಯಕ್ತಿತ್ವದಿಂದಲೇ ತನ್ನ ದಾರಿ ನಿರ್ಮಿನಿಸಿಕೊಂಡವರು. ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗುವುದಕ್ಕೂ ಹಿಂದೆ ಈ ಹೆಸರು ಕೇಳಿದಾಗ ಮನಸಲ್ಲಿ…
ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಪ್ಲಿಮೆಂಟ್ ಅಥವಾ ಔಷಧಿಗಳನ್ನು ಸೇವಿಸುವುದಕ್ಕಿಂತಲೂ ಆಹಾರದ ಮೂಲಕವೇ ಅದನ್ನು ಕಂಟ್ರೋಲ್ ಮಾಡಬಹುದು. ರಕ್ತ ಪರಿಚಲನೆಯ ಮೂಲಕ ದೇಹದ ಅಂಗಾಶಗಳಿಗೆ ಆಮ್ಲಜನಕವನ್ನು ತಲುಪಿಸುವ ಪ್ರಮುಖ ಸಾಧನ ಇದಾಗಿದೆ. ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಈ 10 ಆಹಾರವನ್ನು ಸೇವಿಸಿ. ಹಸಿರು ಸೊಪ್ಪು: ಪಾಲಕ್, ಕೇಲ್, ಸ್ವಿಸ್ ಚಾರ್ಡ್ ಮತ್ತು ಇತರ ಹಸಿರು ಸೊಪ್ಪಿನಲ್ಲಿ ಕಬ್ಬಿಣ ಮತ್ತು ಫೋಲೇಟ್ ಸಮೃದ್ಧವಾಗಿರುತ್ತದೆ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅವಶ್ಯಕವಾಗಿದೆ. ಮಾಂಸ: ಆರ್ಗನ್ ಮಾಂಸಗಳು ವಿಶೇಷವಾಗಿ ಯಕೃತ್ತು, ಕಬ್ಬಿಣ, ವಿಟಮಿನ್ ಬಿ 12 ಮತ್ತು ಕೆಂಪು ರಕ್ತ ಕಣಗಳ ರಚನೆಗೆ ಪ್ರಮುಖವಾದ ಇತರ ಪೋಷಕಾಂಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಬೀನ್ಸ್ ಮತ್ತು ಮಸೂರ: ದ್ವಿದಳ ಧಾನ್ಯಗಳು ಮತ್ತು ಬೀನ್ಸ್ (ಉದಾಹರಣೆಗೆ ಕಡಲೆ, ಕಪ್ಪು ಬೀನ್ಸ್) ಕಬ್ಬಿಣ, ಪ್ರೋಟೀನ್ ಮತ್ತು ಫೋಲೇಟ್‌ನ ಉತ್ತಮ ಮೂಲಗಳಾಗಿವೆ. ನಟ್ಸ್ ಮತ್ತು ಸೀಡ್ಸ್: ಬಾದಾಮಿ, ಸೂರ್ಯಕಾಂತಿ ಬೀಜಗಳು ಮತ್ತು ಕುಂಬಳಕಾಯಿ ಬೀಜಗಳು ಕಬ್ಬಿಣ, ವಿಟಮಿನ್ ಇ ಮತ್ತು…
ಹುಬ್ಬಳ್ಳಿ:- ಕರ್ನಾಟಕದಲ್ಲಿ 2018ರಿಂದ 2023ರ ಅವಧಿಯಲ್ಲಿ ಒಟ್ಟು 1,331 ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಈ ಪೈಕಿ 775 ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪೋಷಕರು 103 ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ಅಲ್ಲದೆ, ರಾಜ್ಯದ ದತ್ತು ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ತಜ್ಞರು ಹೇಳುವ ಪ್ರಕಾರ, ಈ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳೇ ಇರಲು ಪ್ರಮುಖ ಕಾರಣವೆಂದರೆ ಸಾಮಾಜಿಕ ಪೂರ್ವಾಗ್ರಹ ಮತ್ತು ಪೋಷಕರು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಆದ್ಯತೆ ಹೆಚ್ಚು ನೀಡುವುದು. ದತ್ತು ಸ್ವೀಕಾರದಲ್ಲಿ ದೇಶದಲ್ಲೇ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಮಹಾರಾಷ್ಟ್ರವು ದೇಶದಲ್ಲಿ ಅತಿ ಹೆಚ್ಚು ಮಕ್ಕಳನ್ನು ದತ್ತು ನೀಡಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿದೆ. ಮಕ್ಕಳ ದತ್ತು ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ ಪ್ರಕಾರ, 2018 ಮತ್ತು 2023 ರ ನಡುವೆ 18,177 ಮಕ್ಕಳು ಭಾರತ ಮತ್ತು ವಿದೇಶಗಳಲ್ಲಿ ಹೊಸ ಕುಟುಂಬವನ್ನು ಸೇರಿದ್ದಾರೆ. ಈ ಪೈಕಿ…
ರಷ್ಯಾ: ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ‘ರಷ್ಯನ್ ವಿದ್ಯಾರ್ಥಿ ದಿನ’ದ ಪ್ರಯುಕ್ತ ಕಲಿನಿನ್‌ಗ್ರಾಡ್ ಪ್ರದೇಶದ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್, ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದರು. ಪ್ರಸ್ತುತ ಪ್ರಧಾನ ಮಂತ್ರಿಯ ನಾಯಕತ್ವದ ಗುಣಗಳಿಂದಾಗಿ ಭಾರತವು ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಯ ದರವನ್ನು ಹೊಂದಿದೆ ಎಂದು ಪುಟಿನ್ ಹೇಳಿದ್ದಾಗಿ ರಷ್ಯಾ ಮೂಲದ ಮಾಧ್ಯಮ ನೆಟ್ವರ್ಕ್ ರಷ್ಯಾ ಟುಡೆ (ಆರ್ಟಿ) ವರದಿ ಮಾಡಿದೆ. ಭಾರತವು ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಯ ದರವನ್ನು ಹೊಂದಿದೆ ಮತ್ತು ಅದು ಕೂಡ ಪ್ರಸ್ತುತ ಪ್ರಧಾನ ಮಂತ್ರಿಯ ನಾಯಕತ್ವದ ಗುಣಗಳಿಂದಾಗಿ. ಅವರ ನಾಯಕತ್ವದಲ್ಲಿ ಭಾರತವು ಅಂತಹ ವೇಗವನ್ನು ತಲುಪಿತು ಎಂದು ಅವರು ಪ್ರಧಾನಿ ಮೋದಿಯನ್ನು ಶ್ಲಾಘಿಸಿದರು. ಪ್ರಧಾನಿ ಮೋದಿಯವರ ನೀತಿಗಳನ್ನು ಮೆಚ್ಚಿದ ಪುಟಿನ್, ಭಾರತ ಮತ್ತು ರಷ್ಯಾ ನಡುವೆ ನಿರಂತರವಾಗಿ ಬೆಳೆಯುತ್ತಿರುವ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಭಾರತ…
ಭಾರತದಲ್ಲಿ ಚಿನ್ನದ ದರ ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,300 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 29ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,700 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,950 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,700 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,950 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 730…
ಹಾವು-ಮುಂಗುಸಿ ಆ ಜನ್ಮದ ಶತ್ರುಗಳೆಂದೇ ಹೆಸರುವಾಸಿಯಾಗಿವೆ. ಉಭಯ ಜೀವಿಗಳು ಯಾವುದೇ ಕ್ಷಣದಲ್ಲಿ ಎದುರು-ಬದುರಾದರೆ ಸಾಕು ಅಲ್ಲೊಂದು ಯುದ್ಧ ನಡೆದೇ ತೀರುತ್ತದೆ. ಅಷ್ಟಕ್ಕೂ ಹಾವು-ಮುಂಗುಸಿ ನಡುವೆ ಇಷ್ಟೊಂದು ದ್ವೇಷ ಯಾಕೆ? ಇಬ್ಬರ ಮಧ್ಯೆ ಶಾಶ್ವತ ಪೈಪೋಟಿ ಏಕೆ? ಒಬ್ಬರನ್ನೊಬ್ಬರು ನೋಡಿ ಏಕೆ ಆಕ್ರಮಣ ಮಾಡುತ್ತವೆ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಅತ್ಯಂತ ಸರಳ ಉತ್ತರವೆಂದರೆ ಕೆಲವು ಅಧ್ಯಯನಗಳ ಪ್ರಕಾರ, ಹಾವುಗಳು ಮತ್ತು ಮುಂಗುಸಿಗಳು ನೈಸರ್ಗಿಕ ಶತ್ರುಗಳು ಎಂದು ಹೇಳಲಾಗಿದೆ. ಸರ್ವೈವಲ್ ಆಫ್ ಫಿಟ್ಟೆಸ್ಟ್ ಎಂಬ ಚಾರ್ಲ್ಸ್ ಡಾರ್ವಿನ್ ಸಿದ್ಧಾಂತದ ಪ್ರಕಾರ ತಮ್ಮ ಪ್ರಾಣ ಉಳಿಸಿಕೊಳ್ಳಲು ಉಭಯ ಜೀವಿಗಳು ಪರಸ್ಪರ ಆಕ್ರಮಣ ಮಾಡುತ್ತವೆ. ಹಾವು ಮುಂಗುಸಿಯನ್ನು ಕೊಂದು ಬದುಕಲು ಬಯಸುತ್ತದೆ. ಅಂತೆಯೇ, ಮುಂಗುಸಿಯು ಹಾವನ್ನು ಕೊಲ್ಲಲು ಬಯಸುತ್ತದೆ. ಮತ್ತೊಂದು ಉತ್ತರ ಪ್ರಕಾರ ಮುಂಗುಸಿಯ ಮರಿಗಳು ಹೆಚ್ಚಾಗಿ ಹಾವಿಗೆ ಬಲಿಯಾಗುತ್ತವೆ ಎಂದು ಹೇಳಲಾಗಿದೆ. ಹಾವು ಹೆಚ್ಚಾಗಿ ಮುಂಗುಸಿಯ ಮರಿಗಳನ್ನು ತಿನ್ನುತ್ತವೆ. ಆದ್ದರಿಂದ, ಮುಂಗುಸಿಯು ತನ್ನ ಮರಿಗಳನ್ನು ರಕ್ಷಿಸಲು ಹಾವಿನ ಮೇಲೆ…
ತೆಂಗಿನ ಎಣ್ಣೆಯ ಆರೋಗ್ಯ ಪ್ರಯೋಜನಗಳು ಹಿಂದೆ ಯೋಚಿಸಿದಷ್ಟು ಉತ್ತಮವಾಗಿಲ್ಲ ಎಂದು ಕೆಲವರು ವಾದಿಸುತ್ತಾರೆ. ಇದಕ್ಕೆ ಕಾರಣಗಳೇನು ತಿಳಿಯೋಣ. ಹೆಚ್ಚಿನ ಕೊಬ್ಬು ತೆಂಗಿನ ಎಣ್ಣೆಯು ಹೆಚ್ಚಿನ ಮಟ್ಟದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ದೇಹದಲ್ಲಿ LDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕೊಬ್ಬಿನಾಮ್ಲಗಳ ಉತ್ತಮ ಮೂಲ ಒಮೆಗಾ -3 ಮತ್ತು ಒಮೆಗಾ -6 ನಂತಹ ಅಗತ್ಯ ಕೊಬ್ಬಿನಾಮ್ಲಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅಗತ್ಯ. ಆದರೆ ಅವುಗಳು ಗಮನಾರ್ಹ ಪ್ರಮಾಣದಲ್ಲಿ ತೆಂಗಿನ ಎಣ್ಣೆಯಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಆರೋಗ್ಯಕರ ಕೊಬ್ಬಿನ ದೈನಂದಿನ ಸೇವನೆಗೆ ತೆಂಗಿನ ಎಣ್ಣೆಯನ್ನು ಮಾತ್ರ ಅವಲಂಬಿಸುವುದರಿಂದ ಕೊರತೆಯಾಗಬಹುದು. ಹೆಚ್ಚಿನ ಕ್ಯಾಲೋರಿ ತೆಂಗಿನ ಎಣ್ಣೆಯನ್ನು ಇತರ ಅಡುಗೆ ಎಣ್ಣೆಗಳಿಗೆ ‘ಆರೋಗ್ಯಕರ’ ಎಂದೇ ಹೇಳಲಾಗುತ್ತದೆ. ಆದರೆ ಇದರಲ್ಲಿ ಕೊಬ್ಬಿನಂಶ ಹೆಚ್ಚಾಗಿದೆ. ಇದು ಹೆಚ್ಚಿನ ಸಂಖ್ಯೆಯ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಗತ್ಯ ಪೋಷಕಾಂಶಗಳ ಕೊರತೆ ತೆಂಗಿನ ಎಣ್ಣೆಯು ವಿಟಮಿನ್ ಇ ಮತ್ತು ಲಾರಿಕ್ ಆಮ್ಲದಂತಹ ಕೆಲವು ಪ್ರಯೋಜನಕಾರಿ ಪೋಷಕಾಂಶಗಳನ್ನು ಹೊಂದಿದೆ. ಆದರೆ ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅನೇಕ…
ಕೆಲವರಲ್ಲಿ ಅತಿಯಾಗಿ ಟೀ ಕುಡಿದರೆ ಚರ್ಮ ಕಪ್ಪಾಗುತ್ತದೆ ಎಂಬ ನಂಬಿಕೆ ಇದು. ಈ ಬಗ್ಗೆ ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಚಹಾ ಕುಡಿಯುವಯದರಿಂದ ಚರ್ಮದ ಬಣ್ಣದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲವಂತೆ. ಚಹಾ ಚರ್ಮವನ್ನು ಕಪ್ಪಾಗಿಸುತ್ತದೆ ಎಂಬುದು ತಪ್ಪು ವಿಚಾರ. ಆದರೆ ಅತಿಯಾಗಿ ಟೀ ಕುಡಿಯುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ತುಟಿ ಮತ್ತು ಚರ್ಮ ನಿರ್ಜಲೀಕರಣದಿಂದ ಮಂದವಾಗಿ ಕಾಣಬಹುದು. ಆದರೇ ಟೀಯನ್ನು ಅತಿಯಾಗಿ ಸೇವಿಸಬಾರದು. ಯಾಕೆಂದರೆ ಇದು ದೇಹದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮಗೆ ಹಲವು ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾಗಿ ನೀವು ಚಹಾ ಕುಡಿದರೆ ಸಾಕಷ್ಟು ನೀರನ್ನು ಸೇವಿಸಿ.
ಹರಿಯಾಣ: ದೆಹಲಿಯ ಖ್ಯಾತ ಎಸಿಪಿ ಪುತ್ರನನ್ನು ಮದುವೆಗೆಂದು ಕೆರದುಕೊಂಡು ಹೋಗಿ ಆತನ ಸ್ನೇಹಿತರೇ (Friends) ಕೊಲೆ ಮಾಡಿರುವ ಘಟನೆ ಸೋನೆಪತ್‌ನಲ್ಲಿ (Sonepat) ನಡೆದಿದೆ. ಲಕ್ಷ್ಯ ಚೌಹಾಣ್ (24) ಮೃತ ವ್ಯಕ್ತಿ. ದೆಹಲಿಯ ಸಹಾಯಕ ಪೊಲೀಸ್ ಆಯುಕ್ತ ಯಶ್‌ಪಾಲ್ ಸಿಂಗ್ (Assistant Commissioner of Police) ಅವರ ಪುತ್ರನಾದ ಚೌಹಾಣ್ ತೀಸ್ ಹಜಾರಿ ನ್ಯಾಯಾಲಯದ ವಕೀಲರಾಗಿದ್ದರು. ಲಕ್ಷ್ಯ ಸ್ನೇಹಿತರಾದ, ವಿಕಾಸ್ ಭಾರದ್ವಾಜ್ ಮತ್ತು ಸಹಚರ ಅಭಿಷೇಕ್ ಕಾಲುವೆಗೆ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದರು. ನಡೆದಿದ್ದೇನು..?: ಸೋಮವಾರದಂದು ಲಕ್ಷ್ಯ ಅವರು ತಮ್ಮ ಸ್ನೇಹಿತರೊಂದಿಗೆ ಸೋನೆಪತ್‌ನಲ್ಲಿ ಮದುವೆಗೆಂದು ಅವರ ಸ್ನೇಹಿತರ ಜೊತೆ ಹೋಗಿದ್ದರು. ಆದರೆ ಅವರು ಮನೆಗೆ ಬಾರದ ಕಾರಣ ತಂದೆ ಯಶ್‌ಪಾಲ್ ಸಿಂಗ್ ಅವರು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ದೂರು ದಾಖಲಿಸಿಕೊಂಡು ಶೋಧ ಕಾರ್ಯ ನಡೆಸಿದಾಗ ಚೌಹನ್ ಅವರ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಗೆ ಕಾರಣವೇನು..?: ಚೌಹಣ್ ಅವರು ಭಾರದ್ವಾಜ್ ಬಳಿ ಸಾಲ ಪಡೆದಿದ್ದು, ಹಣವನ್ನು ಮರುಪಾವತಿಸಿರಲಿಲ್ಲ. ಇದನ್ನು…