ಬಿಗ್ ಬಾಸ್ ಸೀಸನ್ 10 ರ ವಿಜೇತರಾಗಿ ಕಾರ್ತಿಕ್ ಹಾಗೂ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಹೊರಹೊಮ್ಮಿದ್ದಾರೆ. 113 ದಿನ ಪ್ರಸಾರ ಕಂಡಿದ್ದ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 10 ಫಿನಾಲೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಅಂತಿಮ 6 ಜನರಲ್ಲಿ ಕೊನೆಯದಾಗಿ ಮೂವರು ವೇದಿಕೆ ಹತ್ತಿದ್ದು ಅವರಲ್ಲಿ ಇಬ್ಬರ ಪೈಕಿ ಒಬ್ಬರನ್ನು ವಿಜೇತರನ್ನಾಗಿ ಘೋಷಿಸಲಾಗಿದೆ. ಕಾರ್ತಿಕ್ ಮಹೇಶ್ ಬಿಗ್ ಬಾಸ್ ಟ್ರೋಫಿ ಎತ್ತಿದ್ದು, ರನ್ನರ್ ಅಪ್ ಡ್ರೋನ್ ಪ್ರತಾಪ್ ಹೊರಹೊಮ್ಮಿದ್ದಾರೆ. ಫಿನಾಲೆ ವೇದಿಕೆಯಲ್ಲಿ ಇಬ್ಬರು ಖುಷಿ ಹಂಚಿಕೊಂಡಿದ್ದಾರೆ. ಫಿನಾಲೆ ಫಲಿತಾಂಶ ಅನೌನ್ಸ್ ಆಗುವ ಮುನ್ನ ಪ್ರತಾಪ್ ವೇದಿಕೆಯಲ್ಲಿ ಮಾತನಾಡಿದ್ದು, ತನ್ನ ಮಾತುಗಳಿಂದ ಮತ್ತೊಮ್ಮೆ ಅವರು ವೀಕ್ಷಕರ ಮನಗೆದ್ದಿದ್ದಾರೆ. “ನಾನು ಕಾರ್ಯಕ್ರಮಕ್ಕೆ ಬರುವಾಗ ಹೇಳಿದ್ದೆ, ಒಂದು ವೇಳೆ ನಾನು ಬಿಗ್ ಬಾಸ್ ಗೆದ್ದರೆ, ಟ್ರೋಫಿ ಮಾತ್ರ ನಾನು ಇಟ್ಟುಕೊಳ್ಳುತ್ತೇನೆ ಅದರಿಂದ ಬರುವ ಒಂದು ರೂಪಾಯಿಯೂ ನನಗೆ ಬೇಡ. ಅದನ್ನು ಯಾವುದೋ ಆಶ್ರಮಕ್ಕೆ ಅಥವಾ ಬಡವರಿಗೆ ದಾನ ಮಾಡುತ್ತೇನೆ ಎಂದಿದ್ದೆ.…
Author: AIN Author
ಹೈದರಾಬಾದ್: ತೆಲಂಗಾಣ (Telangana) ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (TSRERA) ಕಾರ್ಯದರ್ಶಿ ಮತ್ತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (HMDA) ಮಾಜಿ ನಿರ್ದೇಶಕ ಶಿವ ಬಾಲಕೃಷ್ಣ ಅವರ ಒಟ್ಟು 100 ರೂ. ಕೋಟಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಪತ್ತೆ ಮಾಡಿದೆ . ಎಸಿಬಿಯ ಪ್ರಾಥಮಿಕ ವರದಿಗಳ ಪ್ರಕಾರ, ಬಾಲಕೃಷ್ಣ ಹಲವಾರು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಮತಿ ನೀಡುವ ಮೂಲಕ ಕೋಟಿಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ. ಬಾಲಕೃಷ್ಣ ಅವರು ತಮ್ಮ ಆದಾಯದ ಮೂಲಗಳನ್ನು ಮೀರಿ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇಲೆ ಬಾಲಕೃಷ್ಣ ಮತ್ತು ಅವರ ಸಂಬಂಧಿಕರ ಮನೆಗಳು ಮತ್ತು ಕಚೇರಿಗಳು ಸೇರಿದಂತೆ ರಾಜ್ಯದಾದ್ಯಂತ ಹಲವಾರು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು. ಮುಂಜಾನೆ 5 ಗಂಟೆಗೆ ಬಾಲಕೃಷ್ಣ ಅವರಿಗೆ ಸೇರಿದ ಸುಮಾರು 20 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಎಸಿಬಿ ತಂಡಗಳು ಎಚ್‌ಎಂಡಿಎ ಮತ್ತು RERA ಕಚೇರಿಗಳ ಮೂಲಕ ದಾಳಿ ನಡೆಸಿದೆ. ತಮ್ಮ ಅಧಿಕೃತ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು…
ವಿಜಯಪುರ:- ವಿಜಯಪುರ ಜಿಲ್ಲೆಯ 2 ಕಡೆ ಮತ್ತೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.9 ರಷ್ಟು ತೀವ್ರತೆ ದಾಖಲಾಗಿದೆ. ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ 12.22 ನಿಮಿಷಕ್ಕೆ ಹಾಗೂ ರಾತ್ರಿ 1.20 ನಿಮಿಷಕ್ಕೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ತೀರ್ವತೆಯನ್ನು ರಿಕ್ಟರ್ ಮಾಪಕದಲ್ಲಿ 2.9 ಎಂದು ಅಳೆಯಲಾಗಿದೆ. ಭೂಮಿಯ 5 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿನ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗಿವೆ. ಪದೇ ಪದೆ ಭೂಕಂಪನದಿಂದ ಜನತೆ ಆತಂಕಗೊಂಡಿದ್ದಾರೆ. ವಿಜಯಪುರದಲ್ಲಿ ಪದೇಪದೆ ಭೂಕಂಪನ ಅನುಭವವಾಗುತ್ತಿದ್ದು, ಕಳೆದ ವರ್ಷವಂತೂ ಸುಮಾರು ಹತ್ತಕ್ಕೂ ಹೆಚ್ಚು ಸಲ ಈ ಪ್ರದೇಶದಲ್ಲಿ ಕಂಪನಗಳು ಸಂಭವಿಸಿದ್ದವು. ಇದೀಗ ಹೊಸ ವರ್ಷದಲ್ಲಿ ಮೊದಲ ಭೂಕಂಪನದ ಅನುಭವವಾಗಿದೆ ಎನ್ನುತ್ತಾರೆ ಸ್ಥಳೀಯರು.
ಬೆಂಗಳೂರು :- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದಲೇ ಶೀತಗಾಳಿ ಶುರುವಾಗಿದೆ. ವಿಜಯಪುರದಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ. ಬಳ್ಳಾರಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲೂ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದ್ದು, 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ಎಎಲ್ನಲ್ಲಿ 28.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,…
ಕಲಬುರ್ಗಿ:- ಲೋಕ ಸಮರಕ್ಕೆ ತಾಲೀಮು ಶುರು ಮಾಡಿರುವ ಕೇಸರಿಪಡೆ ಇವತ್ತು ಖರ್ಗೆ ತವರೂರು ಕಲಬುರಗಿಯಲ್ಲಿ ಸೌಂಡ್ ಮಾಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಆದ ನಂತ್ರ ಇದೇಮೊದಲ ಬಾರಿಗೆ ಕಲಬುರಗಿಗೆ ಆಗಮಿಸಲಿದ್ದು ಇಡೀ ನಗರ ಸಂಪೂರ್ಣ ಕೇಸರಿಯಾಗಿದೆ. ಸಂಜೆ ಎನ್ ವಿ ಮೈದಾನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದ್ದು ಸಭೆಗೂ ಮುನ್ನ ಬೈಕ್ ರಾಲಿ ಸಹ ನಡೆಯಲಿದೆ.
ವಿಜಯಪುರ: ಅಪ್ಪನ ಕೊಲೆ ಮಾಡಲು ಮಗನೇ ಮೂರು ಲಕ್ಷ ಸುಪಾರಿ ಕೊಟ್ಟ ಪ್ರಕರಣವೊಂದು ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಚೆನ್ನಪ್ಪ (66) ಕೊಲೆಯಾದ ತಂದೆ. ವಿಕಲಚೇತನನಾಗಿರುವ ಮಗ ಚೆನ್ನಬಸಪ್ಪ ವಿಜಯಪುರ (Vijayapur) ಜಿಲ್ಲೆ ನಿಡಗುಂದಿ ಮೂಲದ ಮಾಂತೇಶ್‍ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಆಸ್ತಿಗಾಗಿ ಕೊಲೆ: 32 ಎಕರೆ ಆಸ್ತಿ ಅದರಲ್ಲಿ ವಿಭಾಗ ಮಾಡುವ ವಿಚಾರಕ್ಕೆ ಪದೇ ಪದೇ ಕಲಹ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಅಪ್ಪನನ್ನು ಕೊಲೆ ಮಾಡಲು ಮಗ ಪ್ಲಾನ್ ಮಾಡಿದ್ದಾನೆ. ಅಂತೆಯೇ ಚೆನ್ನಬಸಪ್ಪ, ಸೊಸೆ ಶಿವಬಸವ್ವ ಹಾಗೂ ಮಗನ ಆಪ್ತ ರಮೇಶ್ ಮನಗೂಳಿ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದಾರೆ. ಬಳಿಕ ಮಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ಹಣ ನೀಡಿದ್ದಾರೆ. ಅಂತೆಯೇ ಚೆನ್ನಪ್ಪನನ್ನು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗ ಚನ್ನಬಸಪ್ಪ, ಸೊಸೆ ಶಿವಬಸವ್ವ, ಸುಪಾರಿ ಪಡೆದು ಕೊಲೆ…
ಮೈಸೂರು:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಲಗಾರರ ಕಾಟಕ್ಕೆ ಹೆದರಿ ಕುಟುಂಬ ನಾಪತ್ತೆಯಾಗಿದೆ. ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯ ಮಹೇಶ್(35), ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3), ಮಹೇಶ್ ತಂದೆ ಮಹದೇವಪ್ಪ(65), ತಾಯಿ ಸುಮಿತ್ರಾ(55) ನಾಪತ್ತೆಯಾದವರು. ಕಳೆದ 8 ದಿನಗಳಿಂದ ಈ ಕುಟುಂಬ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ವಾಟ್ಸಾಪ್ಗೆ ಸಂದೇಶ ರವಾನಿಸಿ 8 ದಿನಗಳಿಂದ ನಾಪತ್ತೆಯಾಗಿರುವ ಕುಟುಂಬವನ್ನು ಪತ್ತೆ ಹಚ್ಚುವಂತೆ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದ ಮಹೇಶ್ಗೆ, ವೀರೇಶ್ ಎಂಬುವರು ವ್ಯವಹಾರಕ್ಕೆ ಸಾಥ್ ನೀಡಿದ್ದರು. ಮಹೇಶ್ ಪರಿಚಯ ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದು ಪರಾರಿಯಾಗಿದ್ದರು. ವೀರೇಶ್ ಗೆ ಸಾಲ ನೀಡಿದವರಿಂದ ಮಹೇಶ್ ಮೇಲೆ ಒತ್ತಡ ಹೆಚ್ಚಾಗಿದೆ. ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ. ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ…
ಮ್ಮೂಸಿಕ್ ಮಾಂತ್ರಿಕ ಅರ್ಜುನ್ ಜನ್ಯರ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಗಡಿ ನಾಡು ಜಿಲ್ಲೆ ಚಾಮರಾಜನಗರದಲ್ಲಿ ಅದ್ದೂರಿಯಾಗಿ ಜರುಗಿದೆ. ಜಿಲ್ಲಾಡಳಿತ ವತಾಯಿಂದ ಕರ್ನಾಟಕ ಸುವರ್ಣ ಸಂಭ್ರಮ ರಸ ಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ತಂಡದಿಂದ ಗಾನ ಬಜಾನ ನಡೆದಿದ್ದು, ಕನ್ನಡ ಸೂಪರ್ ಹಿಟ್ ಚಲನಚಿತ್ರಗಳ ಹಾಡನ್ನ ಹಾಡಿ ಅರ್ಜುನ್ ಜನ್ಯ ರಂಜಿಸಿದ್ದಾರೆ. ಜನ್ಯರ ಕಂಠದಿಂದ ಸುಮದುರ ಗಾಯನ ಮೂಡಿ ಬಂದಿದೆ. ರಾಬರ್ಟ್ ಸಿನಿಮಾದ ಜೈ ಶ್ರೀರಾಮ್ ಹಾಡಿಗೆ ಗಡಿ ನಾಡ ಜನರು ಮಂತ್ರ ಮುಗ್ದರಾಗಿದ್ದಾರೆ. ಅರ್ಜುನ್ ಜನ್ಯರ ಅದ್ಭುತ ಗಾಯನಕ್ಕೆ ಚಾಮರಾಜನಗರ ಜನತೆ ಮನಸೋತಿದ್ದಾರೆ. ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮರಾಠ ಸಮಯದಾಯದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ (Manoj Jarange Patil) ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ಹಿಂದುಳಿದ ವರ್ಗಗಳ ಅಡಿಯಲ್ಲಿ ಮರಾಠ ಸಮಯದಾಯಕ್ಕೆ (Maratha Community) ಶಿಕ್ಷಣ ಮತ್ತು ಉದ್ಯೋಗಳಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಮಹಾರಾಷ್ಟ್ರ ಸರ್ಕಾರವು (Maharashtra Government) ನಮ್ಮ ಮನವಿಯನ್ನು ಸ್ವೀಕರಿಸಿದೆ ಎಂದು ಹೇಳಿ ಪಾಟೀಲ್ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಮುಖ್ಯಮಂತ್ರಿಗಳ ಕೈಯಿಂದ ತಂಪು ಪಾನೀಯ (ಜ್ಯೂಸ್) ಕುಡಿಯುವ ಮೂಲಕ ಉಪವಾಸ ಅಂತ್ಯಗೊಳಿಸಿದರು. ಈ ವೇಳೆ ಮಾತನಾಡಿ, ಸಿಎಂ ಏಕನಾಥ್ ಶಿಂಧೆ (Eknath Shinde) ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ಮನವಿ ಸ್ವೀಕರಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಇದರಿಂದ ನಮ್ಮ ಪ್ರತಿಭಟನೆ ಮುಗಿದಿದೆ ಎಂದು ತಿಳಿಸಿದ್ದಾರೆ. ಬೇಡಿಕೆಗಳಿಗೆ ಸರ್ಕಾರ ಅಸ್ತು: ಜನವರಿ 20 ರಂದು ಜಾಲ್ನಾದಿಂದ ಆರಂಭವಾದ ಮೀಸಲಾತಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಶನಿವಾರ…
ಮೈಸೂರು: ಮದುವೆಯಾಗಿ 12 ವರ್ಷವಾದರೂ ಹಣಕ್ಕಾಗಿ ಗಂಡ ಮತ್ತು ಆತನ ಮನೆಯವರು ಕಿರುಕುಳ ನೀಡುತ್ತಿದ್ದ ಪರಿಣಾಮ ಗೃಹಿಣಿ (House wife) ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜಗೂಡು ತಾಲೂಕಿನ ಹೊಸಕೋಟೆಯಲ್ಲಿ ನಡೆದಿದೆ. ವಿಜಯಲಕ್ಷ್ಮಿ (35) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಈಕೆ ನಂಜನಗೂಡು ತಾಲೂಕಿನ ಹೊಸಕೋಟೆಯ ಹರೀಶ್ ಎಂಬವರನ್ನು ಮದುವೆಯಾಗಿ 12 ವರ್ಷಗಳಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ವರದಕ್ಷಿಣೆ ಹಣಕ್ಕಾಗಿ ಗಂಡ ಹರೀಶ್, ಅತ್ತೆ ಮಲ್ಲಿಗಮ್ಮ, ಮಾವ ಮಹದೇವಮೂರ್ತಿ, ಮೈದುನರಾದ ರಾಘವೇಂದ್ರ ಮತ್ತು ಮಹೇಂದ್ರ ದಿನ ಪಿಡಿಸುತ್ತಿದ್ದರು. ಕಿರುಕುಳ ತಾಳಲಾರದೆ ಮನನೊಂದು ಇಬ್ಬರು ಮಕ್ಕಳನ್ನು ಬಿಟ್ಟು ಗಂಡನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಗಂಡ, ಅತ್ತೆ, ಮಾವ, ಮೈದುನರು ಪರಾರಿಯಾಗಿದ್ದಾರೆ. ಕಿರುಕುಳ ಇದೇ ಮೊದಲಲ್ಲ: ವಿಜಯಲಕ್ಷ್ಮಿ ಪೋಷಕರು ಚಿನ್ನಾಭರಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಡನ ಮನೆಯವರು ಮಾತ್ರ ಹಣಕ್ಕಾಗಿ ಆಕೆಯನ್ನು ದಿನ ಪಿಡಿಸುತ್ತಿದ್ದರು. ವರದಕ್ಷಿಣೆ ವಿಚಾರವಾಗಿ ಆಗಾಗ ಮನೆಯಲ್ಲಿ ಗಲಾಟೆ…