Author: AIN Author

ಮಂಗಳೂರು: ವೇಣೂರು ಬಳಿ ಭೀಕರ ಸ್ಪೋಟ ಪ್ರಕರಣ ಸಂಬಂಧಿಸಿದಂತೆ ಆರೋಪಿ ಸಯ್ಯದ್ ಬಷೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವೇಣೂರಿನಿಂದ ಪರಾರಿಯಾಗುತ್ತಿದ್ದ ಬಶೀರ್‌ನನ್ನು ಪೊಲಿಸರು ಸುಳ್ಯದಲ್ಲಿ ಅರೆಸ್ಟ್ ಮಾಡಿದ್ದಾರೆ. ಸದ್ಯ ಬಶೀ‌ರ್ ಪೊಲೀಸರ ವಶದಲ್ಲಿದ್ದು, ಅಜ್ಞಾತ ಸ್ಥಳದಲ್ಲಿ ಆತನನ್ನು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ಬಳಿಕ ನಿಜ ಸಂಗತಿ ಏನೆಂಬುದು ಬಯಲಾಗಲಿದೆ. ಏನಿದು ಪಟಾಕಿ ಸ್ಫೋಟ ಪ್ರಕರಣ ? ನಿನ್ನೆ ಬೆಳ್ತಂಗಡಿ ತಾಲೂಕಿನ ವೇಣೂರು ಗೋಳಿಯಂಗಡಿ ಸಮೀಪದ ಪಟಾಕಿ ತಯಾರಿಕ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಐದು ಬಾರಿ ಸ್ಫೋಟ ಸಂಭವಿಸಿದ್ದರಿಂದ ಮೂವರು ಕಾರ್ಮಿಕರು ದುರ್ಮಣಕ್ಕೀಡಾಗಿದ್ದರು. ಆದ್ರೆ ಈ ಸ್ಫೋಟದ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಹೀಗಾಗಿ ಪೊಲೀಸರು ಸಮಗ್ರ ತನಿಖೆಗೆ ಇಳಿದಿದ್ದರು, ಪಟಾಕಿ ತಯಾರಿಕ ಘಟಕದ ಮಾಲೀಕ ಸಯ್ಯದ್ ಬಶೀರ್‌ನನ್ನು ವಿಚಾರಣೆ ನಡೆಸಲು ಮುಂದಾದರು. ಆದರೆ ಬಶೀರ್ ಪರಾರಿಯಾಗುತ್ತಿದ್ದ ವಿಚಾರ ತಿಳಿದು ಆತನನ್ನು ಪೊಲೀಸರು ಬಂಧಿಸಿದ್ದಾರೆ. 50 ಸೆಂಟ್ಸ್ ಜಾಗದಲ್ಲಿ ಪಟಾಕಿ ಉತ್ಪಾದನೆಗೆ ಲೈಸೆನ್ಸ್‌ ಪಡೆದಿದ್ದ ಬಶೀರ್…

Read More

ಮಾಲ್ಡೀವ್ಸ್ ಸರ್ಕಾರದ “ಭಾರತ ವಿರೋಧಿ ನಿಲುವು” ದ್ವೀಪ ರಾಷ್ಟ್ರದ ಅಭಿವೃದ್ಧಿಗೆ ಹಾನಿಕಾರಕವಾಗ ಬಹುದು ಎಂದು ಎರಡು ಪ್ರಮುಖ ವಿರೋಧ ಪಕ್ಷಗಳು ಎಚ್ಚರಿಸಿವೆ. ಚೀನಾದ ಹಡಗಿಗೆ ತಮ್ಮ ದೇಶದ ಜಲ ಪ್ರದೇಶಗಳಲ್ಲಿ ತಂಗಲು ಅವಕಾಶ ಕೊಟ್ಟಿದ್ದಕ್ಕೂ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಮಾಲ್ಡೀವ್ಸ್‌ – ಭಾರತ 2 ನೆರೆಹೊರೆಯ ದೇಶಗಳಾಗಿದ್ದು, ಇವರಿಬ್ಬರ ನಡುವಿನ ಸಂಬಂಧಗಳು ಹಳಸುತ್ತಿದೆ. ಹಾಗೂ, ಚೀನಾದ ಕಡೆಗೆ ಮಾಲ್ಡೀವ್ಸ್‌ನ ಬಾಂಧವ್ಯ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಂಭಾವ್ಯ ಮಹತ್ವದ ಭೌಗೋಳಿಕ ರಾಜಕೀಯ ಮತ್ತು ಮಿಲಿಟರಿ ಬದಲಾವಣೆಯ ನಡುವೆ 2 ವಿರೋಧ ಪಕ್ಷಗಳು ಮಾಲ್ಡೀವ್ಸ್‌ ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿವೆ.  ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು 2023 ರ ಚುನಾವಣೆಯನ್ನು ಭಾರತ ವಿರೋಧಿ ಹಾಗೂ ಮೋದಿ ವಿರೋಧಿ ನಿರೂಪಣೆಯ ಮೇಲೆ ಗೆದ್ದಿದ್ದಾರೆ. ಆದರೆ, ಇತರೆ ಪಕ್ಷಗಳು ಭಾರತದ ಪರ ನೀತಿಯನ್ನು ಅನುಸರಿಸುತ್ತಿದ್ದರು.  MDP ಮತ್ತು ಡೆಮೋಕ್ರಾಟ್‌ ಎರಡೂ ಪಕ್ಷಗಳು ಯಾವುದೇ ಅಭಿವೃದ್ಧಿ ಪಾಲುದಾರರನ್ನು ದೂರವಿಡುವುದು, ಮತ್ತು ವಿಶೇಷವಾಗಿ ದೇಶದ ದೀರ್ಘಾವಧಿಯ ಮಿತ್ರ ರಾಷ್ಟ್ರದ…

Read More

ಕಲಬುರ್ಗಿ:- ರಾಷ್ಟ್ರಪತಿ ಬಗ್ಗೆ ಸಿಎಂ ಸಿದ್ರಾಮಯ್ಯ ಏಕವಚನದಲ್ಲಿ ಮಾತಾಡಬಾರ್ದು ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ವಿಜಯೇಂದ್ರ ಈ ರೀತಿಯ ಯಾರು ನಿರೀಕ್ಷೆ ಮಾಡಲ್ಲ ಮುಖ್ಯಮಂತ್ರಿ ಬಾಯಿಂದ ಈ ಪದ ಯಾಕೆ ಹೊರಡ್ತು ಅನ್ನೋದು ಆಶ್ಚರ್ಯ ಅಂದ್ರು. ರಾಷ್ಟ್ರಪತಿ ಸ್ಥಾನಕ್ಕೆ ಸಿದ್ದರಾಮಯ್ಯ ಅಗೌರವ ತೋರಿಸ್ತಿದ್ದಾರೆ ಇದೊಂದು ಅಕ್ಷಮ್ಯ ಅಪರಾಧ. ಈ ವಿಚಾರ ಸಿಎಂ ಅಷ್ಟೇ ಅಲ್ಲ ಕಾಂಗ್ರೆಸ್ ನ ಎಲ್ಲರಿಗೂ ನೋವು ಕಾಡ್ತಿದೆ. ಇದು ಬಾಯಿ ತಪ್ಪಿ ಬಂದಿದೆ ಅಂತಾ ನನಗೆ ಅನ್ನಿಸ್ತಿಲ್ಲ ಅವರ ಮನಸ್ಸಲ್ಲಿರುವ ಭಾವನೆ ವ್ಯಕ್ತಪಡಿಸಿದ್ದಾರೆ ಅಂತಾ ಅನ್ಸುತ್ತೆ ಅಂತ ಹೇಳಿದ್ರು…

Read More

ಹುಬ್ಬಳ್ಳಿ: ಲಕ್ಷ್ಮಣಸವದಿ ಅವರು ಬಿಜೆಪಿಗೆ ಅವರು ಹೋಗ್ತಾರೋ ಇಲ್ವೋ ನೀವು ಅವರನ್ನೇ ಕೇಳ್ಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಶೆಟ್ಟರ್ ಅವರನ್ನು ಉಳಿಸಿಕೊಳ್ಳೋ ಕೆಲಸ ಮಾಡಿಲ್ಲ ಎಂಬ ಸವದಿ ಹೇಳಿಕೆಗೆ, ಅವರು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವಂತದ್ದು ಏನಿದೆ ಹೇಳಿ? ಅವರಿಗೆ ನಮ್ಮ ಪಕ್ಷ ಕರ್ಕೊಂಡು ಟಿಕೆಟ್ ಕೊಟ್ಟಿದೆ. ಅವರಿಗೆ ಎಂಎಲ್ಸಿ ಮಾಡಿದ್ದೀವಿ ಉಳಿಸಿಕೊಳ್ಳಬೇಕು ಅಂದ್ರೆ ಯಾವ ರೀತಿ ಉಳಿಸಿಕೊಳ್ಳಬೇಕು? ನನಗೆ ಗೊತ್ತಿಲ್ಲ. ಬಿಜೆಪಿ ಒಪರೇಷನ್ ಕಮಲದ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಅವರುನಾವು 136 ಇದೀವಿ, ಅವರಿಬ್ಬರೂ ಸೇರಿದ್ರೆ 85 ಇದ್ದಾರೆ. ಲೆಕ್ಕ ಪ್ರಕಾರ ಹೋದ್ರೆ 53 ಜನ ಹೋಗ್ಬೇಕು 53 ಜನ ಹೋದ್ರೆ ಮಾತ್ರ ಏನಾದ್ರೂ ಆಗಬಹುದು ಎಂದರು. ಪದೇ ಪದೇ ಇದೆ ಮಾತಾಡಿ ಸಾಕಾಗಿ ಹೋಗಿದ್ದು ಶ್ರೀಲಂಕಾ, ಬಾಂಗ್ಲಾ, ಅಫ್ಘಾನಿಸ್ತಾನ್ ಸರ್ಕಾರ ಬಿಳಿಸೋಕೆ ಹೇಳಿ ಅವರಿಗೆ ಯಾಕಂದ್ರೆ ವಿಶ್ವ ಗುರು ಅಲ್ಲ ಅದನ್ನು ಮಾಡಲಿಕ್ಕೆ ಹೇಳಿ. ಈ ದೇಶದ ಮೇಲೆ…

Read More

ಬೆಳ್ಳುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ಬೆಳ್ಳುಳ್ಳಿ ಕೆಜಿಗೆ 400 ರಿಂದ 500 ರೂ. ತಲುಪಿದೆ. ಕಳೆದ ವಾರ ಕೆ.ಜಿಗೆ 200 ರಿಂದ 300 ರೂ. ಇದ್ದ ಬೆಳ್ಳುಳ್ಳಿ ದರ ಈಗ 400- 500 ರೂ.ವರೆಗೆ ಏರಿಕೆಯಾಗಿದೆ. ಸದ್ಯಕ್ಕೆ ಬೆಳ್ಳುಳ್ಳಿ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಫೆಬ್ರವರಿವರೆಗೂ ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ಎರಡು ತಿಂಗಳಿಣಿಂದ ಏರುಗತಿಯಲ್ಲೇ ಇರುವ ಬೆಳ್ಳುಳ್ಳಿ ದರ ಇದೀಗ ಒಂದು ಕೆಜಿಗೆ 400 ರಿಂದ 500 ರೂ. ವರೆಗೆ ಮುಟ್ಟಿದೆ. ಟೊಮೆಟೊ, ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

Read More

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ, ತಮ್ಮ ಮಾಲೀಕತ್ವದ ಸಿದ್ಧಸಿರಿ ಇಥನಾಲ್ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಸರ್ಕಾರ ಆದೇಶ ನೀಡಿರುವುದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರವಾಗಿ ಖಂಡಿಸಿದ್ದಾರೆ. ತಮ್ಮ ಅಸಮಾಧಾನವನ್ನು ಎಕ್ಸ್ ಜಾಲತಾಣದಲ್ಲಿ ಹಾಕಿರುವ ಅವರು, “ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಎದುರಿಸಲಾಗದೆ ನಮ್ಮ ಎಥನಾಲ್ ಕಾರ್ಖಾನೆಗೆ ನೋಟಿಸ್ ಕೊಡಿಸಿದೆ. ರೈತರಿಗೆ ನೆರವಾಗಲು ಹಾಗೂ ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಸ್ಥಾಪಿಸಲಾಗಿದೆ. ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗುತ್ತದೆ. ಈ ನೋಟಿಸ್, ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ಮಾಡಲು ಶಕ್ತಿ ಇಮ್ಮಡಿಯಾಗಿದೆ’’ ಎಂದು ತಿಳಿಸಿದ್ದಾರೆ. ಅಲ್ಲದೆ, ‘ಕೈ’ಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ ಎಂಬುದು ಗೊತ್ತಿರುವ ವಿಷಯವೇ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಅವರು, “ಬಡವರಿಗೆ, ದೀನ-ದಲಿತರಿಗೆ, ಪಕ್ಷದ ಕಾರ್ಯಕರ್ತರಿಗೆ ಸಹಾನೂಭೂತಿಯಿಂದ ಕಾಣುತ್ತ ಬಂದಿರುವ ನಾನು, ನನ್ನ ಮಿತಿಯಲ್ಲಿ ನನ್ನದೇ ಕಾರ್ಖಾನೆಗಳಲ್ಲಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಜಿಲ್ಲೆಯ ಆರ್ಥಿಕತೆಯನ್ನು…

Read More

ಬೆಂಗಳೂರು:- ಸಂವಿಧಾನ ಬದಲಿಸುವ ಹುನ್ನಾರ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಮಾಜದಲ್ಲಿ ಬದಲಾವಣೆ ಒಪ್ಪದೆ ಅಸಮಾನತೆ ಪೋಷಿಸುವವರು, ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು. ಎಲ್ಲರಿಗೂ ಸಮಾನ ಅವಕಾಶ ಲಭಿಸಿ ಸಮಾಜದಲ್ಲಿ ಬದಲಾವಣೆಯಾಗಬಾರದು. ಯಾರೋ ದುಡಿದಿದ್ದನ್ನು ತಾವು ಕುಳಿತು ತಿನ್ನಬೇಕು ಎಂದು ಬಯಸುವವರು ಈಗಲೂ ನಮ್ಮ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಇಂಥವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅಭಿಪ್ರಾಯಪಟ್ಟರು. ಸಮಾಜದ ಬದಲಾವಣೆಗೆ ಒಪ್ಪದೆ ಅಸಮಾನತೆ ಪೋಷಿಸುವವರು ಬಹಳ ಅಪಾಯಕಾರಿ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬಾರದು ಎಂದು ಇವರು ಬಯಸುತ್ತಾರೆ. ನಮ್ಮ ಸಂವಿಧಾನ ಬದಲಾಯಿಸಬೇಕು ಎಂದು ಹುನ್ನಾರ ನಡೆಸುತ್ತಿದ್ದಾರೆ. ಇವರ ಬಗ್ಗೆ ಎಚ್ಚರದಿಂದ ಇರಬೇಕು. ಇವರ ಆಶಯಗಳು ನಾಶವಾಗುವಂತೆ ನಾವು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Read More

ಗಂಗಾವತಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜೊತೆಗೆ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ ಪಿಪಿ) ಪಕ್ಷವು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿದೆ ಎಂದು ಕೆಆರ್ ಪಿಪಿ ಅಧ್ಯಕ್ಷರಾದ ಗಾಲಿ ಜನಾರ್ದನ ರೆಡ್ಡಿಯವರು ಹೇಳಿದ್ದಾರೆ.  ಕೊಪ್ಪಳದಲ್ಲಿ ಈ ವಿಚಾರವಾಗಿ ಮಾತನಾಡಿರುವ ಅವರು, ಶತಮಾನಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ನಾಗರಿಕರ ಕನಸನ್ನು ನನಸು ಮಾಡಿದ್ದಾರೆ. ಹಾಗಾಗಿ, ಮತ್ತೊಮ್ಮೆ ಮೋದಿಯವರು ಈ ದೇಶದ ಪ್ರಧಾನಿಯಾಗಬೇಕು. ಲೋಕಸಭೆ ಚುನಾವಣೆಯಲ್ಲಿ ಕೆಆರ್ ಪಿಪಿ ಕೂಡ ಸ್ಪರ್ಧಿಸಲಿದೆ. ಅಂದಾಜು ನಾಲ್ಕೈದು ಕ್ಷೇತ್ರಗಳಲ್ಲಿ ನಾವು ನಮ್ಮ ಅಭ್ಯರ್ಥಿಗಳನ್ನು ಹಾಕುತ್ತೇನೆ. ನಮ್ಮ ಅಭ್ಯರ್ಥಿಗಳು ಗೆದ್ದ ನಂತರ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ’’ ಎಂದು ಹೇಳಿದ್ದಾರೆ.

Read More

ಬೆಂಗಳೂರು:- ಕೆಆರ್​ಪುರಂನಲ್ಲಿರುವ ಚಿನ್ನದ ಅಂಗಡಿ ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ದಾಳಿ ಮಾಡಿದವರು ಅಸಲಿ ಅಧಿಕಾರಿಗಳಲ್ಲ, ಬದಲಿಗೆ ನಕಲಿ ಅಧಿಕಾರಿಗಳು. 45 ನಿಮಿಷದ ಕಾರ್ಯಾಚರಣೆ ಥೇಟ್ ಸಿನಿಮಾ ಕಥೆಯನ್ನೇ ಹೊಲುವ ರೀತಿ ಇದೆ. ಯಾವಾಗ ಇವರು ನಕಲಿ ಅಧಿಕಾರಿಗಳು ಎಂದು ತಿಳಿಯಿತು, ಆಗ 30 ನಿಮಿಷದ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಇದು ಪ್ರಕರಣದ ಮೇಜರ್ ಟ್ವಿಸ್ಟ್ ಆಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕಾರಿಗಳು ಅಂತ ಹೇಳಿ ಇದೇ ತಿಂಗಳು 27 ರಂದು ಇನೋವ್​ ಕಾರ್​ನಲ್ಲಿ ಎಂಟ್ರಿ ಕೊಟ್ಟಿದ್ದ ನಾಲ್ವರು ಕೆಆರ್​ಪುರಂನಲ್ಲಿರುವ ಮಹಾಲಕ್ಷ್ಮಿ ಜ್ಯುವೆಲರ್ಸ್ ಮೇಲೆ ದಾಳಿ ಮಾಡಿದ್ದರು. ಬೆಂಗಳೂರಿನ ಹಲವು ಬಂಗಾರದ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಅದರಲ್ಲಿ‌ ನಿಮ್ಮದೂ ಒಂದು. ಹಾಲ್ ಮಾರ್ಕ್ ಇಲ್ಲದೆ ಅಕ್ರಮವಾಗಿ ನೀವು ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ನಮಗೆ ದೊರೆತಿದೆ ಹೀಗಾಗಿ ದಾಳಿ ಮಾಡಿದ್ದೇವೆ ಎಂದು ನಕಲಿ ಅಧಿಕಾರಿಗಳು ಹೇಳಿದ್ದಾರೆ. ಬಳಿಕ 45…

Read More

ನೆಲಮಂಗಲ:- ನಗರಸಭೆ ವ್ಯಾಪ್ತಿಯ ಜಾಸ್ ಟೋಲ್ ಸಮೀಪವಿರುವ ರಾಶಿ ಗೇಟ್ ವೇ ಬಡಾವಣೆಯ ನಿವಾಸಿಗಳಿಂದ ಬಡಾವಣೆಯ ಸುತ್ತಮುತ್ತ ಸ್ವಚ್ಛತಾ ಆಂದೋಲನವನ್ನು ನಗರ ಸಭೆ ಸಹಯೋಗದೊಂದಿಗೆ ಆಚರಿಸಲಾಯಿತು. ಇನ್ನು ಬಡಾವಣೆಯ ನಿವಾಸಿ ರಾಜಣ್ಣ ( ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ) ಮಾತನಾಡಿ ನಮ್ಮ ಸುತ್ತಮುತ್ತಲೂ ಉಂಟಾಗುವ ಗಲೀಜಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದು, ರಾಷ್ಟ್ರಪಿತ ಮಹಾತ್ಮಗಾಂಧಿಯವರು ತಾವೇ ಸ್ವತಃ ಸ್ವಚ್ಛತಾಕಾರ್ಯಕ್ಕೆ ಇಳಿಯುವ ಮೂಲಕ ಪೊರಕೆ ಹಿಡಿದು ನಿಂತಿದ್ದರು. , ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯಕರವಾದ ಜೀವನ ನಡೆಸಬಹುದಾಗಿದೆ. ವಾರದಲ್ಲಿ ಒಂದು ದಿನ ನಮ್ಮ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ರಾಶಿ ಗೇಟ್ ವೇ ಬಡಾವಣೆಯ ನಿವಾಸಿಗಳಾದ ಮಣಿಕಂಠ. ರವಿ ಅಂಗಡಿ. ರಮೇಶ್. ಶೈಲಜಾ. ವಸಂತಿ. ಪ್ರಕಾಶ್ ಕಂಠಿ. ಮತ್ತಿತರರು ಉಪಸ್ಥಿತರಿದ್ದರು

Read More