ವಾಷಿಂಗ್ಟನ್: ಸಿರಿಯಾ ಗಡಿ ಸಮೀಪದಲ್ಲಿರುವ ಈಶಾನ್ಯ ಜೋರ್ಡಾನ್‌ನಲ್ಲಿ ಅಮೆರಿಕ ಸೇನೆಯ ಮೇಲೆ ಡ್ರೋನ್ ದಾಳಿ ನಡೆದಿದ್ದು, ಮೂರು ಸೈನಿಕರು ಸಾವನ್ನಪ್ಪಿದ್ದಾರೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಇದರಿಂದ ಕೆಂಡಾಮಂಡಲವಾದ ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden) ಪ್ರತಿದಾಳಿಯ ಸುಳಿವು ಕೊಟ್ಟಿದ್ದಾರೆ. ಇದು ಇರಾನ್ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಆಗಿದೆ. ದಾಳಿಯಲ್ಲಿ ನಮ್ಮ ಮೂವರು ಸೈನಿಕರು ಮರಣ ಹೊಂದಿದ್ದಾರೆ. ಇದಕ್ಕೆ ತಕ್ಕ ಉತ್ತರ ಅಮೆರಿಕ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೈಡನ್ ಹೇಳಿಕೆಗೆ ಇರಾನ್ ಬೆಂಬಲಿತ ರಾಷ್ಟ್ರಗಳ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ಹಮಾಸ್ನೊಂದಿಗೆ ಇಸ್ರೇಲ್ನಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯದಲ್ಲಿ ಯುಎಸ್ ಮಿಲಿಟರಿ ಸಿಬ್ಬಂದಿಯನ್ನು ನೇರವಾಗಿ ಗುರಿಯಾಗಿಸಲಾಗಿದೆ. ಹಮಾಸ್ ವಕ್ತಾರ ಸಮಿ ಅಬು ಝಹ್ರಿ ಮಾತನಾಡಿ, ಈ ದಾಳಿಯು ಅಮೆರಿಕದ ಆಡಳಿತಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದಿದ್ದಾರೆ.
Author: AIN Author
ಮೈಸೂರು:- ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ವಿಚಾರವಾಗಿ 2 ಕೋಮುಗಳ ನಡುವೆ ಗಲಾಟೆ ನಡೆದಿದ್ದು, ಮನೆಗಳಿಗೆ ಕಲ್ಲು ತೂರಾಟ ನಡೆಸಿ, ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂ ಮಾಡಿದ ಘಟನೆ ಜರುಗಿದೆ ಕಿಡಿಗೇಡಿಗಳಿಂದ ಹಲ್ಲರೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನೀಮಾರ್ಣವಾಗಿದ್ದು, ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನೇಕ ಬಾರಿ ನಾವು ಹಸಿವಿಗಿಂತ ಹೆಚ್ಚು ಆಹಾರ ತಿನ್ನುತ್ತೇವೆ, ಹೆಚ್ಚು ಎಣ್ಣೆಯುಕ್ತ ಮಸಾಲೆಯುಕ್ತ ಆಹಾರವನ್ನು ತಿನ್ನುತ್ತೇವೆ ಅಥವಾ ಆಹಾರವನ್ನು ಸೇವಿಸಿದ ನಂತರ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ, ಇದರಿಂದಾಗಿ ಅಜೀರ್ಣ ಉಂಟಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿಯಾಗುತ್ತದೆ. ಈ ಆಮ್ಲೀಯ ರಸವು ಮತ್ತೆ ಮತ್ತೆ ಬಾಯಿಗೆ ಬರುತ್ತದೆ. ಇದು ಹುಳಿ ತೇಗು. ಈ ಸಮಸ್ಯೆಯನ್ನು ತೊಡೆದುಹಾಕಲು ನೀವು ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ವಸ್ತುಗಳ (home remedies) ಸಹಾಯದಿಂದ, ನೀವು ಹುಳಿ ತೇಗು ಸಮಸ್ಯೆ ನಿವಾರಿಸಬಹುದು. ಸೋಂಪು ಕಾಳುಗಳು (Fennel Seeds): ಹುಳಿ ತೇಗು ಸಮಸ್ಯೆ ತೊಡೆದು ಹಾಕಲು ನೀವು ಸೋಂಪು ಕಾಳಿನ ನೀರನ್ನು ಕುಡಿಯಬಹುದು. ಇದರಲ್ಲಿ ಸಾಕಷ್ಟು ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 1 ಲೋಟ ನೀರಿನಲ್ಲಿ 1 ಟೀಸ್ಪೂನ್ ಸೋಂಪು ಕಾಳು ಹಾಕಿ ಕುದಿಸಿ. ಅದು ತಣ್ಣಗಾದ ನಂತರ, ಫಿಲ್ಟರ್ ಮಾಡಿ ಅದನ್ನು ಸೇವಿಸಿ. ನಿಂಬೆ ನೀರು ಮತ್ತು ಬ್ಲಾಕ್ ಸಾಲ್ಟ್: ಹುಳಿ ತೇಗನ್ನು ತೆಗೆದುಹಾಕಲು, ನಿಂಬೆ ನೀರಿನೊಂದಿಗೆ…
ಭಾರತದ ಒಟ್ಟು ಆದಾಯದ ಅರ್ಧದಷ್ಟು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದಲೇ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು, ಬೀಡಿ ಕಾರ್ಮಿಕರು, ಹ್ಯಾಡ್‍ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡು ಬರುತ್ತಾರೆ. ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ (ಪಿಎಮ್-ಎಸ್‌ವೈಎಂ) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ದಿನಕ್ಕೆ 2 ರೂಪಾಯಿ ಉಳಿಸಿದರೆ ವರ್ಷಕ್ಕೆ 36 ಸಾವಿರ ರೂ ಪಿಂಚಣಿ! ನೀವು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಯನ್ನು ಆರಂಭಿಸಲು ಮಾಸಿಕ 55 ರೂ. ಠೇವಣಿ ಮಾಡಬೇಕು. ಅಂದರೆ, ದಿನಕ್ಕೆ ಸುಮಾರು 2 ರೂಪಾಯಿ ಉಳಿತಾಯ ಮಾಡಬೇಕು. ನಿಮಗೆ 60 ವರ್ಷ ತುಂಬಿದ ಬಳಿಕ ವಾರ್ಷಿಕ…
ಬಿಗ್ ಬಾಸ್ ಸೀಸನ್ 10 ರ ಗ್ರ್ಯಾಂಡ್ ಫಿನಾಲೆಗೆ ಅದ್ದೂರಿ ತೆರೆ ಬಿದ್ದಿದೆ. ಈ ಸೀಸನ್ ನಲ್ಲಿ ಅತಿ ಹೆಚ್ಚು ಚರ್ಚೆ ಆಗಿದ್ದು ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ ಅವರ ವಿಷಯ. ಮೊದಲು ಸ್ನೇಹಿತರಾಗಿದ್ದ ಅವರು ನಂತರ ಬೇರೆ-ಬೇರೆ ಆದರು. ಹಲವು ಬಾರಿ ಈ ಸ್ನೇಹವನ್ನು ಮುಂದುವರಿಸಲು ಕಾರ್ತಿಕ್ ಪ್ರಯತ್ನಿಸಿದರೂ ಕೂಡ ಅದಕ್ಕೆ ಸಂಗೀತಾ ಶೃಂಗೇರಿ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಲಿಲ್ಲ. ಈಗ ಬಿಗ್ ಬಾಸ್ ಆಟ ಅಂತ್ಯವಾಗಿದೆ. ಕಾರ್ತಿಕ್ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಸಂಗೀತಾ ಶೃಂಗೇರಿ ಅವರು ಎರಡನೇ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಸಂಗೀತಾ ಜೊತೆ ಸ್ನೇಹ ಮುಂದುವರಿಸುವ ಕುರಿತು ತಮ್ಮ ನಿರ್ಧಾರ ಏನು ಎಂಬುದನ್ನು ಕಾರ್ತಿಕ್ ಮಹೇಶ್ ತಿಳಿಸಿದ್ದಾರೆ. ‘ ಬಿಗ್ ಬಾಸ್ ಗೆದ್ದ ಬಳಿಕ ಕಾರ್ತಿಕ್ಗೆ ಸಂಗೀತಾ ಏನು ಹೇಳಿದರು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಆ ಪ್ರಶ್ನೆಗೆ ಕಾರ್ತಿಕ್ ಮಹೇಶ್ ಉತ್ತರಿಸಿದ್ದಾರೆ. ‘ಅವರು ಏನೂ ಹೇಳಲಿಲ್ಲ. ವಿಶ್…
ಸೂರ್ಯೋದಯ: 06:52, ಸೂರ್ಯಾಸ್ತ : 06:06 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ , ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ ಋತು, ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಮ.1:57 ನಿಂದ ಮ.3:46 ತನಕ ಅಭಿಜಿತ್ ಮುಹುರ್ತ: ಮ.12:06 ನಿಂದ ಮ.12:51 ತನಕ ಮೇಷ ರಾಶಿ ಎಂಜಿನಿಯರಿಂಗ್ ಮೆಡಿಕಲ್ ಕ್ಷೇತ್ರದವರಿಗೆ ಶುಭ ಸಂದೇಶ, ನಾಜೂಕಿನ ಮತ್ತು ಹಿತವಚನದಿಂದ ಸಂಗಾತಿಯ ಮನಸ್ಸು ಗೆಲ್ಲುವಿರಿ, ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ ವಾತಾವರಣ, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ, ವಾಹನ ಚಾಲನೆ ಜಾಗೃತಿ ವಹಿಸಿ,ಮೊದಲನೇ ಬಾರಿ ಗರ್ಭಿಣಿಯಾದ ಹೆಣ್ಣುಮಕ್ಕಳು ಎಚ್ಚರದಿಂದಿರಬೇಕು, ಇವರಿಗೆ ಕುಟುಂಬ ವರ್ಗದಿಂದ ಕಾಳಜಿ ಮಾಡುವುದು ಉತ್ತಮ, ವಿಶ್ರಾಂತಿ ಅವಶ್ಯಕವಾಗಿದೆ, ವಿಚ್ಛೇದನ ಪಡೆದ ಮತ್ತು ವಿಧವಾ ಎರಡನೇ ಮದುವೆ ಚರ್ಚೆ ನಡೆಯಲಿದೆ,…
ಚಿಕ್ಕಮಗಳೂರು:- 30 ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್ ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ ಬಿಟ್ಟಿದೆ. ಹೀಗಾಗಿ ವಸತಿ ಶಾಲೆಯಲ್ಲಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು ಆತಂಕಗೊಂಡಿದ್ದರು. ಇದೀಗ ಶಾಲೆಯ ಆವರಣದಲ್ಲಿ ಬೀಡುಬಿಟ್ಟಿದ್ದ 30 ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಓಡಿಸಲಾಗಿದ್ದು, ಶಾಲಾ ಆವರಣದಿಂದ ಕಾಡಾನೆ ಹಿಂಡು ಹೊರಬಂದಿದೆ. ಆವರಣದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಪಟಾಕಿ ಸಿಡಿಸಿ ಸಿಬ್ಬಂದಿಗಳು ಓಡಿಸುತ್ತಿದ್ದಾರೆ. ಈ ಹಿನ್ನಲೆ ಕಾಡಾನೆ ಸಂಚಾರ ಮಾಡುವ ರಸ್ತೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಇದೀಗ ಕಾಡಾನೆ ಹಿಂಡು ಕದ್ರಿಮಿದ್ರಿ ಗ್ರಾಮದ ಕಡೆ ಸಂಚಾರ ಮಾಡುತ್ತಿದ್ದು, 9 ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ ಹೀಗಾಗಿ ಗ್ರಾಹಕರು ಮತ್ತು ಸವಾರರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು:- Cm ಸಿದ್ದರಾಮಯ್ಯ ಅವರು ಜಂಟಿ ಅಧಿವೇಶನಕ್ಕ ರಾಜ್ಯಪಾಲರನ್ನು ಅಧಿಕೃತ ಆಹ್ವಾನ ನೀಡಿದ್ದಾರೆ. ರಾಜ್ಯಪಾಲರ ಭೇಟಿ ವೇಳೆ ಫೆಬ್ರವರಿ 12 ರಿಂದ ಅಧಿವೇಶನಕ್ಕೆ ಆಹ್ವಾನ ನೀಡಿದ್ದಾರೆ. ಇದೇ ಸಮಯದಲ್ಲಿ ಫೆಬ್ರವರಿ 16 ರಂದು ಶಿಕ್ಷಕರ ಕ್ಷೇತ್ರದ ಚುನಾವಣಾ ಹಿನ್ನೆಲೆ ಬಜೆಟ್ ದಿನಾಂಕ ಮುಂದೂಡಿ ಎಂದು ಬಿಜೆಪಿ ದೂರಿನ ವಿಚಾರವೂ ರಾಜ್ಯಪಾಲರೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.
ಮಂಗಳೂರು:- ಶೆಟ್ಟರ್ ಡೀಸೆಂಟ್ ಜಂಟಲ್ ಮ್ಯಾನ್, ಕಾಂಗ್ರೆಸ್ಸಿಗರು ಉಳಿಸಿಕೊಳ್ಳಬೇಕಾಗಿತ್ತು ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮತ್ತೆ ಕಮಲ ಹಿಡಿದಿರುವ ಜಗದೀಶ್ ಶೆಟ್ಟರ್ ಅವರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಡೀಸೆಂಟ್ ಜಂಟಲ್ ಮ್ಯಾನ್. ಅವರನ್ನ ನಾವು ಉಳಿಸಿಕೊಳ್ಳಬೇಕಾಗಿತ್ತು. ಶೆಟ್ಟರ್ ಬಿಟ್ಟು ಹೋಗಿದ್ದಾರೆ ಅವರಿಗೆ ಒಳ್ಳೆಯದಾಗಲಿ. ಬೇರೆ ಯಾರು ಪಕ್ಷ ಬಿಟ್ಟು ಹೋಗುತ್ತಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಗುಪ್ತಚಾರ ಇಲಾಖೆ ನನ್ನ ಹತ್ತಿರ ಇಲ್ಲ. ಹಾಗಾಗಿ ಹೇಳಲು ಆಗಲ್ಲ ಎಂದರು. ಆರ್.ಅಶೋಕ್ ಪಾಪ ತಿರುಕನ ಕನಸು ಕಾಣುತ್ತಿದ್ದಾರೆ. ಅವರಿಗೆ ಆದಷ್ಟು ಬೇಗ ಮುಖ್ಯಮಂತ್ರಿ ಆಗುವ ಆಸೆ. ಅದಕ್ಕಾಗಿ ಬಹಳಷ್ಟು ಜನ ಸರತಿಯಲ್ಲಿ ನಿಂತಿದ್ದಾರೆ ಹಾಗಾಗಿ ಅವರ ಆಸೆ ಪೂರೈಸಲ್ಲ. ಅವರ ಆಸೆ ತಿರುಕನ ಕನಸಾಗೇ ಇರುತ್ತೆ. ಲೋಕಸಭಾ ಚುನಾವಣೆಗೆ ನನ್ನ ಹೆಸರು ಎಲ್ಲಿಯೂ ಪ್ರಸ್ತಾಪ ಇಲ್ಲ ಎಂದು ಹೇಳಿದರು. ಇದೇ ವೇಳೆ ಕೆರಗೋಡು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಕೆಹೆಚ್, ಕೆರಗೋಡು ಘಟನೆ ಬಿಜೆಪಿ ಗುಪ್ತ ಕಾರ್ಯಸೂಚಿ ಹಿಡನ್ ಅಜೆಂಡಾ.…
ಕೋಲಾರ : – ಈ ದೇಶದಲ್ಲಿ ರೈತರನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಈ ದೇಶದಲ್ಲಿ ರೈತರು ಇಲ್ಲದೆ ಇದ್ದರೆ ನಮಗೆ ಊಟ ಸಿಗುವುದಿಲ್ಲ ರೈತರಿಗೆ ಮೋಸ ಮಾಡುವುದು ಬಿಜೆಪಿಯವರು ಎಂದು ಕೋಲಾರ ಶಾಸಕರಾದ ಡಾ ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವ್ರು, ಸ್ವಾತಂತ್ರ್ಯ ಬಂದಾಗಿನಿಂದಲು ಕಾಂಗ್ರೆಸ್ ಪಕ್ಷ ರೈತರನ್ನು ಕಾಪಾಡಿ ಬಂದಿದೆ 2014 ರಿಂದ ಬಿಜೆಪಿ ಸರ್ಕಾರ ಬಂದಿದೆ ಅಲ್ಲಿಯವರೆಗೆ ಭಾರತ ಯಾವತ್ತಾದರು ಕಷ್ಟ ಕಾಲದಲ್ಲಿ ಸಿಕ್ಕಿಹಾಕಿಕೊಂಡಿತ್ತಾ ದುಡ್ಡು ಇಲ್ಲದೆ ಇತ್ತಾ ಅಕ್ಕಿ ಇಲ್ಲದೆ ಇತ್ತಾ ಎಲ್ಲವು ಸಹ ನಡೆದುಕೊಂಡು ಬರತ್ತಾ ಇದೆ. ಕೇಂದ್ರ ಸರ್ಕಾರದಿಂದ ಎನ್ ಡಿ ಆರ್ ಎಫ್ ಅನುದಾನ ಬಂದಿಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡು ಇಲ್ಲ ಎಂದು ಬಿಜೆಪಿ ಯವರು ದಾಖಲೆಯನ್ನು ಬಿಡುಗಡೆ ಮಾಡಿದ್ದಾರಾ ಬಾಯಿಗೆ ಬಂದಂತೆ ಮಾತನಾಡೊದು ಗಾಳಿಗೆ ಹೇಳಿದಂತೆ ಹೇಳಿಬಿಟ್ಟು ಹೋಗುವುದು ಬಿಜೆಪಿಯವರು ಹೇಳುವು ಮಾತುಗಳು ನೀರಿನ ಮೇಲೆ ಬರೆಯುವುದು ಎರಡು ಒಂದೇ ಎಂದು ಬಿಜೆಪಿ…