ಇಂಗ್ಲೆಂಡ್ ವಿರುದ್ಧ ನಡೆದ ಹೈದರಾಬಾದ್ ನ ಟೆಸ್ಟ್ ನಲ್ಲಿ ಮೊದಲ ಇನಿಂಗ್ಸ್ ನಲ್ಲಿ 190 ರನ್ ಗಳ ಬೃಹತ್ ಮುನ್ನಡೆ ಪಡೆದರೂ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 28 ರನ್ ಗಳಿಂದ ಸೋಲು ಕಂಡಿದೆ. ಪಂದ್ಯದ ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ವೈಫಲ್ಯವೇ ಕಾರಣವಾಗಿದ್ದರೂ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಆಟಗಾರರನ್ನು ಸಮರ್ಥಿಸಿಕೊಂಡಿದ್ದಾರೆ. ತವರಿನ ಅಂಗಣದಲ್ಲಿ ಮೊದಲ ಇನಿಂಗ್ಸ್ ನಲ್ಲಿ 100 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಮುನ್ನಡೆ ಪಡೆದ ನಂತರ ಸೋಲು ಕಂಡ ಮೊದಲ ನಿದರ್ಶನ ಇದಾಗಿದೆ. ಆ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಹಿನ್ನಡೆ ಅನುಭವಿಸಿದೆ. ಪಂದ್ಯ ಮುಗಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಹೈದರಾಬಾದ್ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ನಾವು ಉತ್ತಮ ಬ್ಯಾಟಿಂಗ್ ನಡೆಸಿಲ್ಲ ಮತ್ತು ಮೊದಲ ಇನಿಂಗ್ಸ್ ನಲ್ಲಿ 70 ರನ್ ಕಡಿಮೆ…
Author: AIN Author
ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹೊಸದಾಗಿ ಕಂಪನಿ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ (Infinix Smart 8 Plus) ಎಂಬ ಮೊಬೈಲ್ ಅನ್ನು ಅನಾವರಣ ಮಾಡಿದೆ ಫೋನ್ 90 Hz ರಿಫ್ರೆಶ್ ರೇಟ್ 6.60-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಜೊತೆಗೆ 1612×720 ಪಿಕ್ಸೆಲ್‌ಗಳ (HD+) ರೆಸಲ್ಯೂಶನ್ ನೀಡುತ್ತದೆ. Infinix Smart 8 ಆಕ್ಟಾ-ಕೋರ್ Unisoc T606 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 4GB RAM ನೊಂದಿಗೆ ಬರುತ್ತದೆ. Infinix Smart 8 ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ ಮತ್ತು 5000mAh ತೆಗೆಯಲಾಗದ ಬ್ಯಾಟರಿಯಿಂದ ಚಾಲಿತವಾಗಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಇನ್ಫಿನಿಕ್ಸ್ ಸ್ಮಾರ್ಟ್ 8 ಹಿಂಭಾಗದಲ್ಲಿ 13-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪ್ಯಾಕ್ ಮಾಡುತ್ತದೆ. ಇದು ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು 8-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. Infinix Smart 8 ರನ್‌ಗಳು XOS ಆಂಡ್ರಾಯ್ಡ್ 13 ಅನ್ನು ಆಧರಿಸಿದೆ ಮತ್ತು 128GB ಅಂತರ್ಗತ ಸಂಗ್ರಹಣೆಯನ್ನು…
ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ತುಸು ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,620 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,300 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 30ಕ್ಕೆ):- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,800 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,050 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 762 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,800 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,050 ರೂ
ಈ ಸಮಯ ನೀವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಕೂಡಾ ಅಷ್ಟೇ ಮುಖ್ಯ. ನಾವಿಂದು ಹೇಳಿಕೊಡುತ್ತಿರುವ ಹೆಸರು ಬೇಳೆಯ ಸೂಪ್ ರೆಸಿಪಿ ಹಲವು ವಿಧಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಪ್ರೋಟೀನ್, ಬಿ-ಕಾಂಪ್ಲೆಕ್ಸ್, ವಿಟಮಿನ್ ಸಿ ಸೇರಿದಂತೆ ಹೆಚ್ಚಿನ ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ. ಇಮ್ಯೂನಿಟಿ ಬೂಸ್ಟಿಂಗ್‌ಗಾಗಿ ನೀವೂ ಹೆಸರು ಬೇಳೆ ಸೂಪ್ ಮಾಡಿ ಸವಿಯಿರಿ. ಬೇಕಾಗುವ ಪದಾರ್ಥಗಳು: ಹೆಸರು ಬೇಳೆ – 1 ಕಪ್ ನೀರು – 4 ಕಪ್ ಎಣ್ಣೆ ಅಥವಾ ತುಪ್ಪ – 1 ಟೀಸ್ಪೂನ್ ಜೀರಿಗೆ – 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಈರುಳ್ಳಿ – 1 ತುರಿದ ಬೆಳ್ಳುಳ್ಳಿ – 3-4 ತುರಿದ ಶುಂಠಿ – 1 ಇಂಚು ಹೆಚ್ಚಿದ ಟೊಮೆಟೋ – 1 ಅರಿಶಿನ ಪುಡಿ – ಅರ್ಧ ಟೀಸ್ಪೂನ್ ಜೀರಿಗೆ ಪುಡಿ – ಅರ್ಧ ಟೀಸ್ಪೂನ್ ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್ ಕೆಂಪು ಮೆಣಸಿನ ಪುಡಿ – ಕಾಲು…
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಎಂಥ ವೈರಸ್ ದಾಳಿ ಮಾಡಿದರೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಮೇಲೆ ಪ್ರತಿಯೊಬ್ಬರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ,ವ್ಯಾಯಾಮದ ಕಡೆ ಗಮನಕೊಡುತ್ತಿದ್ದಾರೆ. ರೋಗ ನಿರೋಧ ಶಕ್ತಿ ನಮ್ಮ ದೇಹವನ್ನು ರೋಗಕಾರಕಗಳಿಂದ ರಕ್ಷಿಸುತ್ತದೆ. ಸಂತೋಷದಾಯಕ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಓಂ ಕಾಳು ಅಥವಾ ಬಿಷಪ್ಸ್ ವೀಡ್ (Carom Seeds) ಎಂದೂ ಕರೆಯಲ್ಪಡುವ ಓಂ ಕಾಳು ಭಾರತೀಯ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿ ಬಳಸುವ ಜನಪ್ರಿಯ ಮಸಾಲೆಯಾಗಿದೆ. ಭಕ್ಷ್ಯಗಳಿಗೆ ವಿಶಿಷ್ಟವಾದ ಪರಿಮಳವನ್ನು ಸೇರಿಸುವುದರ ಹೊರತಾಗಿ, ಓಂ ಕಾಳು ಹಲವಾರು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಓಂ ಕಾಳು ಕೆಲವು ಪ್ರಯೋಜನಗಳು ಮತ್ತು ಅವುಗಳನ್ನು ಹೇಗೆ ಬಳಸುವುದು: ಜೀರ್ಣಕಾರಿ ನೆರವು: ಓಂ ಕಾಳು ಸಾಂಪ್ರದಾಯಿಕವಾಗಿ ಅಜೀರ್ಣ, ಉಬ್ಬುವುದು ಮತ್ತು ವಾಯು ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಅವರು ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತಾರೆ, ಒಟ್ಟಾರೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತಾರೆ.…
ಲಕ್ನೋ: ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಪತ್ನಿ ಕಚ್ಚಿ ಗಾಯಗೊಳಿಸಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಹಮೀರ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮು ನಿಶಾದ್ (34) ಗಾಯಗೊಂಡ ಪತಿ. ಪತ್ನಿಯ ಕೃತ್ಯದಿಂದ ನಿಶಾದ್ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಡೆದಿದ್ದೇನು..?: ಜನವರಿ 28ರಂದು ಸೆಕ್ಸ್ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದಗಳು ನಡೆದಿವೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ರೊಚ್ಚಿಗೆದ್ದ ಪತ್ನಿ, ಪತಿಯ ಖಾಸಗಿ ಅಂಗವನ್ನೇ ಕಚ್ಚಿದ್ದಾಳೆ. ಬಳಿಕ ತಪ್ಪಿನ ಅರಿವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇತ್ತ ಪತ್ನಿಯ ಕೃತ್ಯದಿಂದ ನಿಶಾದ್ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದರಿಂದ ಬೇಸರಗೊಂಡಿರುವುದಾಗಿ ಪತ್ನಿ ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿರಿಯ…
ಬೆಂಗಳೂರು:- PM ಹೆಸರಿನಲ್ಲಿ ವ್ಯಕ್ತಿಯೊಬ್ಬ ಬೆಂಗಳೂರಿನ ಉದ್ಯಮಿಯೊಬ್ಬರಿಗೆ 6.28 ಲಕ್ಷ ರೂಪಾಯಿ ವಂಚಿಸಿದ್ದಾರೆ. ಜನವರಿ 27 ರಂದು ವಂಚನೆ ಪ್ರಕರಣ ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತರನ್ನು ಚಿಕ್ಕಲಸಂದ್ರ ನಿವಾಸಿ ಜಿ ಹರೀಶ್ ಕಶ್ಯಪ್ (44) ಎಂದು ಗುರುತಿಸಲಾಗಿದೆ. ದತ್ತ ಪ್ರಸಾದ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ 2023ರ ಅಕ್ಟೋಬರ್ 25 ರಂದು ಪದ್ಮನಾಭ ನಗರದ ಗೋಕುಲ್ ವೆಜ್ ಹೋಟೆಲ್‌ಗೆ ಕಶ್ಯಪ್ ಮತ್ತು ಇತರ ಹಲವರನ್ನು ಆಹ್ವಾನಿಸಿದ್ದಾನೆ. ಹೊಸ ಇಂಧನ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸೆನೀ ಟ್ರೇಡರ್ಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ತಾನು ನಡೆಸುತ್ತಿದ್ದೇನೆ ಎಂದು ಪ್ರಸಾದ್ ಹೇಳಿಕೊಂಡಿದ್ದಾನೆ. ನಂತರ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಜನರಿಗೆ ಮನವಿ ಮಾಡಿದ್ದಾನೆ. ನಂತರ ಕಶ್ಯಪ್ ಸೇರಿದಂತೆ ಹಲವರು ಪ್ರಸಾದ್ ಸೂಚಿಸಿದ ಖಾತೆಗಳಿಗೆ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿದ್ದಾರೆ. ಕೆಲವು ದಿನಗಳ ನಂತರ, ಹೂಡಿಕೆಗಳು ಹೆಚ್ಚಿನ ಆದಾಯವನ್ನು ತಂದುಕೊಟ್ಟವು. ಆದರೆ ಮೊತ್ತವನ್ನು ಹಿಂದಿರುಗಿಸದೆ ಪ್ರಸಾದ್ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಂಗಳೂರು:- ವೇಣೂರಿನಲ್ಲಿ ಸಂಬಂಧಿಸಿದ ದುರಂತಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಟಾಕಿ ತಯಾರಿಕ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಮೇಣೂರಿನ ತೋಟದ ಮನೆಯಲ್ಲಿದ್ದ ಪಟಾಕಿ ಗೋಡಾನ್ನಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದ ಪ್ರಕರಣದ ನಂತರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಜಿಲ್ಲೆಯಲ್ಲಿರುವ ಎಲ್ಲಾ ಪಟಾಕಿ ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ನಿರ್ಬಂಧಿಸಿ ಅಮಾನತ್ತಿನಲಿಡಲು ಆದೇಶಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ, ಸರ್ಕಾರದ ಮಾರ್ಗಸೂಚಿ ಪಾಲನೆಯ ಮರುಪರಿಶೀಲನೆಗಾಗಿ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಪಟಾಕಿ ತಯಾರಿಕೆ, ಮಾರಾಟ ಘಟಕಗಳ ಮರುಪರಿಶೀಲನೆಗೆ ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಮಂಗಳೂರು ಮತ್ತು ಪುತ್ತೂರು ಎಸಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ತಕ್ಷಣ ಸೀಲ್ಡೌನ್ ಮಾಡಲು ಆದೇಶಿಸಲಾಗಿದೆ
ಮಂಡ್ಯ:-ಕೆರೆಗೋಡು ಹನುಮ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಓ ಸಸ್ಪೆಂಡ್ ಮಾಡಲಾಗಿದೆ. ಕೆರಗೋಡು ಹನುಮ ಧ್ವಜ ಪ್ರಕರಣದಲ್ಲಿ ಕೆರಗೋಡು ಗ್ರಾಮ ಪಂಚಾಯತಿಯ ಪಿಡಿಓ ತಲೆದಂಡವಾಗಿದೆ. ಪಿಡಿಓ ಜೀವನ್ ಬಿ.ಎಂ ಅವರನ್ನು ಐದು ಕಾರಣ ನೀಡಿ ಅಮಾನತು ಮಾಡಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ತನ್ವೀರ್ ಆಶೀಫ್ ಸೇಠ್ ಪಿಡಿಓ ಅವರನ್ನು ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ. ಗ್ರಾಪಂ ಸ್ವತ್ತನ್ನು ಖಾಸಗಿಯವರಿಗೆ ನೀಡುವುದಕ್ಕೆ ಸರ್ಕಾರದ ಅನುಮತಿ ಕಡ್ಡಾಯ. ಈ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿ ಖಾಸಗಿಯವರಿಗೆ ನೀಡಲಾಗಿದೆ. ಕೆರಗೋಡು ಗ್ರಾಮದಲ್ಲಿ ನಡೆದ ಸಂಘರ್ಷಕ್ಕೆ ಪಿಡಿಓ ನೇರ ಕಾರಣವಾಗಿದ್ದಾರೆ. ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೇ ಧ್ವಜ ಸ್ತಂಭದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಅನುಮತಿ ನೀಡಿ, ಷರತ್ತು ಉಲ್ಲಂಘಿಸಿದ್ದರೂ ಕ್ರಮಕೈಗೊಳ್ಳದೆ ಪಿಡಿಓ ನಿರ್ಲಕ್ಷವಹಿಸಿದ್ದಾರೆ. ರಾಷ್ಟ್ರ ಧ್ವಜದ ಬದಲು ಹನುಮ ಧ್ವಜ ಹಾರಿಸಲು ಅವಕಾಶ ನೀಡಿರುವುದು ಹಾಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ…
ಬೆಂಗಳೂರು:- ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಚಿವ ಕೆ.ಎನ್.ರಾಜಣ್ಣಹಾಗೂ ಶಾಸಕ ಶಾಮನೂರು ಶಿವಶಂಕರಪ್ಪಗೆ ಶಿಸ್ತು ಮೀರಿ ಮಾತನಾಡದಂತೆ ವಾರ್ನಿಂಗ್ ಮಾಡಿದ್ದಾರೆ. ಬಿಜೆಪಿ ಸಂಸದ ರಾಘವೇಂದ್ರ ಗೆಲ್ಲಿಸುವಂತೆ ಶಾಮನೂರು ಶಿವಶಂಕರಪ್ಪ ಅವರು ಕರೆ ನೀಡಿದ್ದರು. ಸಚಿವ ಕೆ.ಎನ್.ರಾಜಣ್ಣ ಅವರು, ನಾವು ಕಾಂಗ್ರೆಸ್ ಹೈಕಮಾಂಡ್ ಗುಲಾಮರಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ಕರೆ ಮಾಡಿರುವ ಕೆ.ಸಿ ವೇಣುಗೋಪಾಲ್ ಅವರು ನೋಟಿಸ್ ನೀಡುವ ಎಚ್ಚರಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಇದೆ ಎಂಬ ಕಾರಣಕ್ಕೆ ಸದ್ಯಕ್ಕೆ ನೋಟಿಸ್ ನೀಡುತ್ತಿಲ್ಲ. ಹೀಗೆ ವಿವಾದಾತ್ಮಕವಾಗಿ ಮಾತನಾಡುವುದು ಮುಂದುವರಿದರೆ ನೋಟಿಸ್ ನೀಡಬೇಕಾಗುತ್ತದೆ. ಅಲ್ಲದೆ ಶಿಸ್ತುಬದ್ಧ ಕ್ರಮ ಎದುರಿಸಬೇಕಾಗುತ್ತದೆ ಎಂದೂ ವಾರ್ನ್ ಮಾಡಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.