ಕೋಲಾರ: ಈ ದೇಶದಲ್ಲಿ ರೈತರನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಈ ದೇಶದಲ್ಲಿ ರೈತರು ಇಲ್ಲದೆ ಇದ್ದರೆ ನಮಗೆ ಊಟ ಸಿಗುವುದಿಲ್ಲ ರೈತರಿಗೆ ಮೋಸ ಮಾಡುವುದು ಬಿಜೆಪಿಯವರು ಎಂದು ಕೋಲಾರ ಶಾಸಕರಾದ ಡಾ ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವ್ರು, ಸ್ವಾತಂತ್ರ್ಯ ಬಂದಾಗಿನಿಂದಲು ಕಾಂಗ್ರೆಸ್ ಪಕ್ಷ ರೈತರನ್ನು ಕಾಪಾಡಿ ಬಂದಿದೆ 2014 ರಿಂದ ಬಿಜೆಪಿ ಸರ್ಕಾರ ಬಂದಿದೆ. ಅಲ್ಲಿಯವರೆಗೆ ಭಾರತ ಯಾವತ್ತಾದರು ಕಷ್ಟ ಕಾಲದಲ್ಲಿ ಸಿಕ್ಕಿಹಾಕಿಕೊಂಡಿತ್ತಾ ದುಡ್ಡು ಇಲ್ಲದೆ ಇತ್ತಾ ಅಕ್ಕಿ ಇಲ್ಲದೆ ಇತ್ತಾ ಎಲ್ಲವು ಸಹ ನಡೆದುಕೊಂಡು ಬರತ್ತಾ ಇದೆ. ಕೇಂದ್ರ ಸರ್ಕಾರದಿಂದ ಎನ್ ಡಿ ಆರ್ ಎಫ್ ಅನುದಾನ ಬಂದಿಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡು ಇಲ್ಲ ಎಂದು ಬಿಜೆಪಿ ಯವರು ದಾಖಲೆಯನ್ನು ಬಿಡುಗಡೆ ಮಾಡಿದ್ದಾರಾ ಬಾಯಿಗೆ ಬಂದಂತೆ ಮಾತನಾಡೊದು ಗಾಳಿಗೆ ಹೇಳಿದಂತೆ ಹೇಳಿಬಿಟ್ಟು ಹೋಗುವುದು ಬಿಜೆಪಿಯವರು ಹೇಳುವು ಮಾತುಗಳು ನೀರಿನ ಮೇಲೆ ಬರೆಯುವುದು ಎರಡು ಒಂದೇ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು.…
Author: AIN Author
ದೆಹಲಿ : ಆಸ್ಟ್ರೇಲಿಯನ್ ಓಪನ್-2024ರ ಪುರುಷರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಟೆನಿಸ್ ತಾರೆ, ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಾಧನೆಗೆ ವಯಸ್ಸು ಅಡ್ಡಿ ಬರುವುದಿಲ್ಲ ಎಂಬುವುದನ್ನು ರೋಹನ್ ಬೋಪಣ್ಣ ಸಾಬೀತುಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಗೆಲುವು ಸಾಧಿಸಿದ ರೋಹನ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಅವರು ನಡೆದು ಬಂದಿರುವ ಹಾದಿ ಸುಂದರವಾಗಿದೆ. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ. ಭವಿಷ್ಯದಲ್ಲಿ ರೋಹನ್ ಬೋಪಣ್ಣ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಧಾನಿ ಮೋದಿ ಶುಭಹಾರೈಸಿದ್ದಾರೆ. 43ನೇ ವಯಸ್ಸಿನಲ್ಲಿ ಸಾಧನೆಗೈದ ಹಿರಿಯ ಆಟಗಾರ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 43ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಆಟಗಾರ ರೋಹನ್ ಅವರು ತಮ್ಮ ಜೊತೆಗಾರ ಮ್ಯಾಥ್ಯೂ ಎನ್ಡೆನ್ ಜೊತೆಗೆ ಅವರು ಅಂತಿಮ ಪಂದ್ಯದಲ್ಲಿ ಪ್ರತಿಸ್ಪರ್ಧಿ ಸಿಮೊನೆ ಬೊಲಿಲಿ…
ಟೀಮ್ ಇಂಡಿಯಾ ಪರ ಆಡಬೇಕೆಂಬ ಕನಸನ್ನು ಸದಾ ಕಾಣುತ್ತಿದ್ದೆ ಎಂದು ಯುವ ಲೆಗ್ ಸ್ಪಿನ್ನರ್ ಸೌರಭ್ ಕುಮಾರ್ ಹೇಳಿದ್ದಾರೆ. ಅನುಭವಿ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸೌರಭ್ ಕುಮಾರ್ ಆಯ್ಕ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ವೇಳೆ ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಗಾಯಗೊಂಡು ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರನಡೆದಿದ್ದು, ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆದ ಅನೌಪಚಾರಿಕ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಸೌರಭ್ ಕುಮಾರ್ ಮತ್ತೊಮ್ಮೆ ಬಿಸಿಸಿಐನಿಂದ ಕರೆ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾದ ಮೇಲೆ ಪಿಟಿಐ ಜೊತೆ ಸೌರಭ್ ಕುಮಾರ್ ಸಂವಾದ ನಡೆಸಿದ್ದು, ಸುದೀರ್ಘ ಕಾಲದಿಂದ ಟೀಮ್ ಇಂಡಿಯಾ ಪರ ಆಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್…
ಹಾಸನ: ರಾಷ್ಟ್ರದ ಮೂರು ಲಾಂಛನಗಳನ್ನು ಚಿಕ್ಕದಾಗಿ ತೋರಿಸಿ, ಕಮಲದ ಹೂವನ್ನು (Lotus) ಬಹಳ ದೊಡ್ಡದಾಗಿ, ಎದ್ದು ಕಾಣುವ ರೀತಿಯಲ್ಲಿ ತೋರಿಸಿದ್ದರು. ಆದ್ದರಿಂದ ಮೂರು ಚಿಹ್ನೆಗಳು ಕಡಿಮೆ ಹಾಕಿ ಕಮಲವನ್ನು ಏಕೆ ದೊಡ್ಡದಾಗಿ ಹಾಕಿದ್ದೀರಾ ಎಂದು ಶಿಕ್ಷಕಿಯನ್ನು ಪ್ರಶ್ನಿಸಿದೆ ಎಂದು ಶಾಸಕ ಶಿವಲಿಂಗೇಗೌಡ (Shivalinge Gowda ) ಅವರು ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕಮಲದ ಹೂವಿನ ಚಿತ್ರ ಹಿಡಿದು ಶಾಲಾ ಮಕ್ಕಳು ನೃತ್ಯ ಮಾಡಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಇದೇ ಕಾರಣಕ್ಕೆ ಮೊದಲ ಬಹುಮಾನ ಪಡೆದ ಶಾಲೆಗೆ ನಾಲ್ಕನೇ ಬಹುಮಾನ ನೀಡಿದ್ದರು ಎಂಬ ಆರೋಪ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆಯಲ್ಲಿ (Arsikere) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/another-virus-disaster-in-this-country-more-than-230-children-died/ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮ ನಗರದ ಒಂದು ಶಾಲೆ ನೃತ್ಯ ಮಾಡಿದೆ. ಈ ಸಂದರ್ಭದಲ್ಲಿ ಪ್ರಾಣಿ ಹುಲಿ, ಪಕ್ಷಿ ನವಿಲು ಹಾಗೂ ಅಶೋಕ ಸ್ತಂಭದ ಚಿತ್ರಗಳನ್ನ ನೃತ್ಯದಲ್ಲಿ ಉಪಯೊಗಿಸಿದ್ದರು. ಅದರ ಜೊತೆಯಲ್ಲಿ ಕಮಲದ ಹೂವನ್ನೂ…
ವಿಶಾಖಪಟ್ಟಣದಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ ಘೋಷಿಸಿದೆ. ರವೀಂದ್ರ ಜಡೇಜಾ (Ravindra Jadeja) ಹಾಗೂ ಕೆಎಲ್ ರಾಹುಲ್ (KL Rahul)ಹೊರಬಿದ್ದಿದ್ದರಿಂದ ಟೀಂ ಇಂಡಿಯಾಕ್ಕೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಈ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 28 ರನ್ಗಳಿಂದ ಸೋತು ಟೀಂ ಇಂಡಿಯಾ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ 4 ನೇ ದಿನದ ಆಟದಲ್ಲಿ ಜಡೇಜಾ ಬ್ಯಾಟಿಂಗ್ ಮಾಡುವಾಗ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ರಾಹುಲ್ ಅವರು ಬಲ ಕ್ವಾಡ್ರಿಸೆಪ್ಸ್ ನೋವಿನಿಂದ ಬಳಲುತ್ತಿದ್ದಾರೆ. ಸದ್ಯ ಈ ಇಬ್ಬರು ಹೊರಗುಳಿದ ನಂತರ ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಸಮಿತಿಯು ಎರಡನೇ ಟೆಸ್ಟ್ ತಂಡಕ್ಕೆ ಸೇರಿಸಿದೆ. ಟೀಂ…
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ಅವರ ಗರ್ಲ್ ಫ್ರೆಂಡ್ (Girlfriend) ಕುರಿತಂತೆ ಹಲವಾರು ರೀತಿಯಲ್ಲಿ ಚರ್ಚೆ ಮಾಡಲಾಯಿತು. ದೊಡ್ಮನೆಯಲ್ಲಿ ಮೊದ ಮೊದಲ ಕಾರ್ತಿಕ್ ಮತ್ತು ಸಂಗೀತಾ ಸ್ನೇಹದ ಬಗ್ಗೆ ಮಾತನಾಡಲಾಯಿತು. ಆಮೇಲೆ ನಮ್ರತಾ ಅವರ ಹೆಸರಿನ ಜೊತೆ ತಳುಕು ಹಾಕಲಾಯಿತು. ನಮ್ರತಾ ಸೇರಿದಂತೆ ಹಲವರು ಕಾರ್ತಿಕ್ ಅವರಿಗೆ ಗರ್ಲ್ ಫ್ರೆಂಡ್ ಇದ್ದಾಳೆ ಎಂದು ಮಾತನಾಡಿದರು. ಅದಕ್ಕೆಲ್ಲ ಕಾರ್ತಿಕ್ ಈಗ ಸ್ಪಷ್ಟನೆ ನೀಡಿದ್ದಾರೆ. ನನಗೆ ಗರ್ಲ್ ಫ್ರೆಂಡ್ ಇಲ್ಲ. ಅನೇಕ ಫ್ರೆಂಡ್ಸ್ ಇದ್ದಾರೆ. ನನ್ನ ಜೊತೆ ಬಿಗ್ ಬಾಸ್ ಮನೆಯಲ್ಲಿ ಯಾರೂ ಕನೆಕ್ಟ್ ಆಗಬಾರದು. ಹತ್ತಿರಕ್ಕೆ ಬರಬಾರದು ಎನ್ನುವ ಕಾರಣಕ್ಕಾಗಿ ಆ ರೀತಿ ಸುದ್ದಿಯನ್ನು ಹರಿಬಿಡಲಾಯಿತು ಎಂದು ಹೇಳಿದ್ದಾರೆ. ನನಗೆ ತುಂಬಾ ಕನಸುಗಳಿವೆ. ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಸದ್ಯಕ್ಕೆ ಗರ್ಲ್ ಫ್ರೆಂಡ್ ಕುರಿತಂತೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಕಾರ್ತಿಕ್ (Karthik) ಅವರ ಬಿಗ್‌ಬಾಸ್ (Bigg Boss Kannada) ಜರ್ನಿಯಲ್ಲಿ ವಿನಯ್ ಗೌಡ (Vinay)ಅವರ ಪಾಲು ದೊಡ್ಡದಿದೆ. ಬಿಗ್‌ಬಾಸ್ ಷೋಗಿಂತಲೂ ಮೊದಲಿನಿಂದ, ಅಂದರೆ…
ವೆಂಕಟ್ ಭಾರದ್ವಾಜ್ ನಿರ್ದೇಶನದ ‘ನಗುವಿನ ಹೂಗಳ ಮೇಲೆ’ (Naguvina Hoogala Mele) ಚಿತ್ರ ಇದೇ ಫೆ.9ರಂದು ರಿಲೀಸ್ ಈಗಾಗಲೇ ಹಾಡುಗಳ ಮೂಲಕ, ಒಟ್ಟಾರೆ ಕಥೆಯ ಒಂದಷ್ಟು ಸುಳಿವುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾ ಟ್ರೈಲರ್ ಅನ್ನು ಜ.29ಕ್ಕೆ ಖ್ಯಾತ ನಿರ್ದೇಶಕ ಎ.ಹರ್ಷ (A.Harsha) ರಿಲೀಸ್ ಮಾಡಿದ್ದಾರೆ ‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಎ.ಹರ್ಷ ಶುಭಕೋರಿದ್ದಾರೆ. ಈಗಾಲೇ ಒಂದಷ್ಟು ಭಿನ್ನ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ವೆಂಕಟ್ ಭಾರದ್ವಾಜ್. ಅವರೀಗ ‘ನಗುವಿನ ಹೂಗಳ ಮೇಲೆ’ ಚಿತ್ರದ ಮೂಲಕ ಪರಿಶುದ್ಧವಾದ ಪ್ರೇಮಕಥಾನಕದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಪ್ರೇಮ ಕಥನದ ಚಿತ್ರಗಳೆಂದರೇನೇ ಯಾವತ್ತಿಗೂ ಮುಸುಕಾಗದಂಥಾ ಮೋಹವೊಂದು ಪ್ರೇಕ್ಷಕರಲ್ಲಿರುತ್ತದೆ. ಅದನ್ನು ಮತ್ತಷ್ಟು ಮುದಗೊಳಿಸುವ ಲಕ್ಷಣಗಳಿರೋ ಈ ಸಿನಿಮಾ ಟ್ರೈಲರ್, ಮೂಲಕ ಈ ಚಿತ್ರದ ಸಾರವನ್ನು ಪ್ರೇಕ್ಷಕರ ಮುಂದಿಟ್ಟಿದೆ. ಕಿರುತೆರೆಯಲ್ಲಿ ಒಂದಷ್ಟು ಹೆಸರು ಮಾಡಿರುವ ಅಭಿದಾಸ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಶರಣ್ಯಾ…
ಹೊಸ ಪ್ರತಿಭೆಗಳ ಸಮಾಗಮದಂತಿರುವ `ಧೀರ ಸಾಮ್ರಾಟ್’ (Dheera Samrat) ಚಿತ್ರ ಹಂತ ಹಂತವಾಗಿ ಸದ್ದು ಮಾಡುತ್ತಾ ಸಾಗಿ ಬಂದಿದೆ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಇದೇ 31ರಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಧೀರ ಸಾಮ್ರಾಟ್ ಟ್ರೈಲರ್ (Trailer) ಅನಾವರಣ ಮಾಡಲಿದ್ದಾರೆ. ಪವನ್ ಕುಮಾರ್ (ಪಚ್ಚಿ) (Pawan Kumar) ನಿರ್ದೇಶನದಲ್ಲಿ ಮೂಡಿ ಬಂದಿರುವ `ಧೀರ ಸಾಮ್ರಾಟ್’ ತನ್ನ ಶೀರ್ಷಿಕೆಯಲ್ಲಿಯೇ ರಗಡ್ ಫೀಲ್ ಅನ್ನು ಬಚ್ಚಿಟ್ಟುಕೊಂಡಂತಿರುವ ಚಿತ್ರ. ಯಾವುದಕ್ಕೂ ಸೈ ಎಂಬಂಥಾ ಹುರುಪಿನ ಹುಡುಗರ ಕಥನ ಈ ಸಿನಿಮಾದ ಜೀವಾಳ. ಈಗಾಗಲೇ ಹಾಡು ಸೇರಿದಂತೆ ನಾನಾ ರೀತಿಗಳಲ್ಲಿ ಧೀರ ಸಾಮ್ರಾಟ್ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಇನ್ನೆರಡು ದಿನದಲ್ಲಿ ಹೊರಬೀಳಲಿರುವ ಟ್ರೈಲರ್ ನಲ್ಲಿ ಒಟ್ಟಾರೆ ಚಿತ್ರದ ಬಗೆಗಿನ ಮತ್ತಷ್ಟು ಇಂಟ್ರೆಸ್ಟಿಂಗ್ ಅಂಶಗಳು ಜಾಹೀರಾಗುವ ನಿರೀಕ್ಷೆಯಿದೆ. ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ಗುರು ಬಂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಕೇಶ್ ಬಿರಾದಾರ್ ಮತ್ತು ಅದ್ವಿತಿ…
ಕನ್ನಡದ ಮತ್ತೊಂದು ಹೊಸ ಬಗೆಯ ಸಿನಿಮಾ ರೆಡಿಯಾಗಿದೆ. ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ ಚಿತ್ರದ ಮತ್ತೊಂದು ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ಸಾರಾಂಶ ಎಂಬುದು ವಿಶೇಷ ಕಥಾ ಹಂದರದೊಳಗೆ ನಾನಾ ಬೆರಗುಗಳನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ ಎಂಬ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಅದೀಗ ಈ ಹಾಡಿನ ಮೂಲಕ ಸಮ್ಮೋಹಕವಾಗಿ ಸಾಬೀತಾಗಿ ಬಿಟ್ಟಿದೆ. ಒಟ್ಟಾರೆ ಸಿನಿಮಾದ ಇಂಚಿಂಚನ್ನೂ ಹೊಸತನದೊಂದಿಗೆ ಸಿಂಗರಿಸಬೇಕೆಂಬಂಥಾ ತಪನೆ ಹೊಂದಿರುವವರು ಸೂರ್ಯ ವಸಿಷ್ಠ. ಅದಕ್ಕೆ ಉದಿತ್ ಹರಿತಾಸ್ ರಂಥಾ ಸಂಗೀತ ನಿರ್ದೇಶಕರ ಸಾಥ್ ಸಿಕ್ಕಿರೋದರಿಂದಾಗಿ ಸಾರಾಂಶದ ನಶೆಯ ನಕಾಶೆ ಚೆಂದದ ಹಾಡಿನ ಮೂಲಕ ಪಸರಿಸುವಂತಾಗಿದೆ. ನಶೆಯೋ ನಕಾಶೆಯೋ ಎಂಬ ಈ ಹಾಡು ಮಾಧುರಿ ಶೇಷಾದ್ರಿ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಮತ್ತು ಉದಿತ್ ಹರಿತಾಸ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡು ರಾಮ್ ಕುಮಾರ್ ನೃತ್ಯ ನಿರ್ದೇಶನದೊಂದಿಗೆ ಕಳೆಗಟ್ಟಿಕೊಂಡಿದೆ. ಇದರ ಮೂಲಕವೇ ಶೃತಿ ಹರಿಹರನ್ ಪಾತ್ರದ ಝಲಕ್ ಕೂಡಾ ಜಾಹೀರಾಗಿದೆ. ಈ ವೀಡಿಯೋ ಸಾಂಗ್…
ಯಂಗ್ ಡೈನಾಮಿಕ್ ಪ್ರಣಮ್ ದೇವರಾಜ್ (Pranam Devaraj) ನಟನೆಯ ’S/o ಮುತ್ತಣ್ಣ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಪ್ರಣಮ್ ಜನ್ಮದಿನದ ವಿಶೇಷವಾಗಿ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡ ಶುಭ ಕೋರಿದೆ. ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಯಂಗ್ ಡೈನಾಮಿಕ್ ಪ್ರಣಮ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ, S/o ಮುತ್ತಣ್ಣ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಈ ವೇಳೆ, ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಾಯಕ ಪ್ರಣಮ್ ದೇವರಾಜ್ ಮಾತನಾಡಿ, S/o ಮುತ್ತಣ್ಣ ಶ್ರೀಕಾಂತ್ ಸರ್ ಫಸ್ಟ್ ಟೈಮ್ ಮನೆಗೆ ಬಂದಾಗ ಅವರು ಮಾತನಾಡಿದ ರೀತಿ ಕಥೆ ಹೇಳಿದ ರೀತಿಯಲ್ಲಿ ನಂಬಿಕೆ ಬಂತು. ಪ್ರಾಮಿಸ್ ಮಾಡಿದಕ್ಕಿಂತ ಸಖತ್ ಆಗಿ ಸಿನಿಮಾ ತೆಗೆದಿದ್ದಾರೆ. ಖುಷಿ ರವಿ (Kushee Ravi) ಅವರು ಎಂಥ ನಟಿ ಅನ್ನೋದು ‘ದಿಯಾ’ದಿಂದ (Dia) ಗೊತ್ತಾಗಿದೆ. ಅವರ ಜೊತೆ ಕೆಲಸ ಮಾಡಿದ್ದು, ಖುಷಿ ಕೊಟ್ಟಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು. ನಾಯಕಿ ಖುಷಿ ರವಿ ಮಾತನಾಡಿ, S/o ಮುತ್ತಣ್ಣ…