Author: AIN Author

ಧಾರವಾಡ: ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜಯ ಸಾಧಿಸಿದ ಹಿನ್ನೆಲೆ ಧಾರವಾಡದ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಪಟಾಕಿ‌ ಸಿಡಿಸಿ ಪರಸ್ಪರ ಸಹಿ ಹಂಚಿಕೊಂಡ ಬಿಜೆಪಿಗರು. ನಗರದ ಸುಭಾಷ್ ರಸ್ತೆಯ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಸಂಭ್ರಮಾಚರಣೆ ಮಾಡಲಾಗಿದ್ದು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದ ಕಾರ್ಯಕರ್ತರು. ಮಧ್ಯಪ್ರದೇಶ,ರಾಜಸ್ಥಾನ ಹಾಗೂ ಛತ್ತೀಸ್‌ಗಡ್‌ನಲ್ಲಿ ಬೆಜೆಪಿಗೆ ಅಧಿಕಾರ ಬಂದಿರುವುದರಿಂದ ಮೂರು ರಾಜ್ಯದ ಮತದಾರರಿಗೆ ಜಿಲ್ಲೆಯ ಬಿಜೆಪಿಗರು ಧನ್ಯವಾದ ತಿಳಿಸಿದರು.

Read More

ದಾವಣಗೆರೆ: ದೇಶದಲ್ಲಿ ಪಂಚರಾಜ್ಯ ಚುನಾವಣೆಯಲ್ಲಿ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆ ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ‌.ಪಿ‌.ರೇಣುಕಾಚಾರ್ಯ ಸಂಭ್ರಮಾಚರಣೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ನಿವಾಸದಲ್ಲಿ ಸಂಭ್ರಮಾಚರಣೆ ಮಾಡಿದ ಬಿಜೆಪಿ ಮುಖಂಡರು. ಮುಂದಿನ ಲೋಕಸಭಾ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿಯಾಗಿದ್ದು, ಇದು ಸೆಮಿ ಪೈನಲ್ ಚುನಾವಣೆಗಳು ಎಂದರೆ ತಪ್ಪಾಗಲಾರದು.  ಕರ್ನಾಟಕದಲ್ಲಿ ಕೊಟ್ಟ ಭರವಸೆಗಳು ಎಲ್ಲಾ ಪೇಲೂರ್ ಆಗಿದೆ‌. ಭರವಸೆಗಳಿಂದ ಜನರ ಮತಗಳನ್ನು ಪಡೆಯಲು ಸಾಧ್ಯವಿಲ್ಲಾ. ದೇಶಕ್ಕೆ ಬಲಿಷ್ಟ ನಾಯಕ ಬೇಕು, ಅದು ನರೇಂದ್ರ ಮೋದಿಜಿ . ಮುಂದೆ ದೇಶದಲ್ಲಿ 350 ಕ್ಕೂ ಹೆಚ್ಚು ಲೋಕಸಬಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿಜಿ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

Read More

ದಾವಣಗೆರೆ: ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ದಯವಿಟ್ಟು ಭಿನ್ನಾಭಿಪ್ರಾಯಗಳನ್ನು ಕೈ ಬಿಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮನವಿ ಮಾಡಿಕೊಂಡರು. ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಆತ್ಮೀಯ ಸ್ನೇಹಿತರು ಕೇಂದ್ರ ಸಚಿವರಾಗಿರುವ ಅನುಭವ ಇದೆ. ನಿಮ್ಮ ಬಗ್ಗೆ ಗೌರವವಿದೆ, ನಾನು ವಿನಂತಿ ಮಾಡುತ್ತೇನೆ. ನಮ್ಮ ಸಂಘರ್ಷದಿಂದಲೇ ಕಳೆದ ಬಾರಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಪ್ರತಿ ಬಾರಿ ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಹೇಳಿದರು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಎಲ್ಲರೂ ಒಟ್ಟಾಗಿ ಮಾಡಿದ್ದಾರೆ. ಮುಂದಿನ ಲೋಕಸಭೆಗೆ 28 ಸ್ಥಾನ ಗೆಲ್ಲ ಬೇಕು. ಯತ್ನಾಳ್ ಜೆಡಿಎಸ್ ಗೆ ಹೋದಾಗ ಯಡಿಯೂರಪ್ಪನವರು ಪಕ್ಷಕ್ಕೆ ವಾಪಸ್ ಕರೆ ತಂದಿದ್ದರು. ಆದರೆ ಯಡಿಯೂರಪ್ಪನವರ ಬಗ್ಗೆ ಪದೇ ಪದೇ ಟೀಕೆ ಮಾಡಿದರೆ ಒಳ್ಳೆಯದಲ್ಲ. ಈ ರೀತಿ ಟೀಕೆ ಮಾಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂದು ತಿಳಿಸಿದರು.

Read More

ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಕಳೆದ 4 -5 ದಿನಗಳಿಂದ ಚಿನ್ನದ ದರದಲ್ಲಿ ನಿರಂತರ ಇಳಿಕೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ… ಒಂದು ಗ್ರಾಂ ಚಿನ್ನ (1GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5845 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,376 ಎಂಟು ಗ್ರಾಂ ಚಿನ್ನ (8GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 46,760 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 51,008 ಹತ್ತು ಗ್ರಾಂ ಚಿನ್ನ (10GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 58,450 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 63,760 ನೂರು ಗ್ರಾಂ ಚಿನ್ನ (100GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.  5,84,500…

Read More

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಈ ವಾರ ನಮ್ರತಾ ಗೌಡ (Namratha Gowda) ಅವರು ಉತ್ತಮವಾಗಿ ಆಡಿದ್ದಾರೆ. ಸ್ಪರ್ಧಿಗಳಿಂದಲೇ ನಮ್ರತಾ ಉತ್ತಮ ಎಂದೆನೆಸಿಕೊಂಡಿದ್ದಾರೆ. 55 ದಿನಗಳ ನಂತರ ನಮ್ರತಾರ ಆಟ ಮತ್ತು ಆ್ಯಕ್ಟಿವಿಟಿ ನೋಡಿ ಸುದೀಪ್ ಕೂಡ ಮೆಚ್ಚುಗೆ ಸೂಚಿಸಿ ಚಪ್ಪಾಳೆ ತಟ್ಟಿದ್ದಾರೆ. ಕಳೆದ ವಾರ ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡಗೆ (Tanisha Kuppanda) ವೀಕ್ಷಕರಿಂದ ಹೆಚ್ಚಿನ ಮತ ಸಿಕ್ಕಿತ್ತು. ಇದರಿಂದ ನಮ್ರತಾ ತುಂಬ ಬೇಸರ ಮಾಡಿಕೊಂಡಿದ್ದರು. ಸಿಕ್ಕಾಪಟ್ಟೆ ಕೂಗಾಡುವ ತನಿಷಾ ಜನರಿಗೆ ಇಷ್ಟ ಆಗ್ತಾರೆ, ನಾನು ಹೊರಗಡೆ ಸುಮ್ಮನೆ ಪ್ರಾಜೆಕ್ಟ್ ಮಾಡಿಕೊಂಡು ಇರಬಹುದಿತ್ತು ಎಂದು ನಮ್ರತಾ ಹೇಳಿದ್ದರು. ಆದರೆ ಈ ವಾರ ಅವರ ಅದೃಷ್ಟ ಬದಲಾಗಿದೆ. ಈ ವಾರವೇ ನಮ್ರತಾ ಗೌಡ ಅವರು ಸ್ಪರ್ಧಿಗಳ ಕಣ್ಣಲ್ಲಿ ಉತ್ತಮ ಪಟ್ಟದ ಜೊತೆಗೆ ಕಿಚ್ಚ ಸುದೀಪ್ ಅವರಿಂದ ಕಿಚ್ಚನ ಚಪ್ಪಾಳೆಯನ್ನು ಕೂಡ ಪಡೆದರು. https://ainlivenews.com/congress-president-has-called-an-important-meeting-on-december-6/  ಕ್ಯಾಪ್ಟೆನ್ಸಿ ಹಣಾಹಣಿಯಲ್ಲಿ ಕಾಲಿಗೆ ಪೆಟ್ಟಾಗಿದ್ದರಿಂದ ತನಿಷಾ ಪರ ನಮ್ರತಾ ಆಟ ಆಡಿದ್ದರು. 4…

Read More

ಬೆಂಗಳೂರು: ರಾಜಸ್ಥಾನ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿದ್ದ ಪ್ರಹ್ಲಾದ್‌ ಜೋಷಿ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್​ನ ಸುಳ್ಳು ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ. ತೆಲಂಗಾಣ ಬಿಟ್ಟು ಉಳಿದ ಕಡೆ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. BRS ದುರಾಡಳಿತದ ಪರಿಣಾಮ ಕಾಂಗ್ರೆಸ್ ಗೆಲ್ಲುವಂತಾಗಿದೆ. https://ainlivenews.com/congress-president-has-called-an-important-meeting-on-december-6/ ರಾಜಸ್ಥಾನದಲ್ಲಿ ಕಾಂಗ್ರೆಸ್ ದುರಾಡಳಿತ ಬಗ್ಗೆ ಜನರಿಗೆ ತಿಳಿಸಿದ್ದೆವು. ಬಿಜೆಪಿಯ ಹಿರಿಯ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದೆವು. ರಾಜಸ್ಥಾನದಲ್ಲಿ 124ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ತೇವೆ. ಮಧ್ಯಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದೆ ಎಂದರು.

Read More

ನವದೆಹಲಿ: ತೆಲಂಗಾಣದಲ್ಲಿ ಬಿಆರ್​ಎಸ್​​ನಿಂದ ಆಪರೇಷನ್​ ಭೀತಿ ಹಿನ್ನೆಲೆ ಕರ್ನಾಟಕದಲ್ಲಿ ಕಾಂಗ್ರೆಸ್​ನಿಂದ 17 ಜನರನ್ನು ಯಾರು ಕಳಿಸಿದರು? ಎಂದು ದೆಹಲಿಯಲ್ಲಿ ಕಾಂಗ್ರೆಸ್​ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯಗೆ ಕುಮಾರಸ್ವಾಮಿ ಕುಟುಂಬ ಕಂಡರೆ ದ್ವೇಷ ಇದೆ. https://ainlivenews.com/congress-president-has-called-an-important-meeting-on-december-6/ ಈ ಹಿಂದೆ ಕಾಂಗ್ರೆಸ್​ನವರೇ ಶಾಸಕರನ್ನು ಕಳುಹಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ನಿಂದ ಜ್ಯೋತಿರಾದಿತ್ಯ ಏಕೆ ಬಂದರು. ಕಾಂಗ್ರೆಸ್​ನಲ್ಲೇ ಆಂತರಿಕ ಸಮಸ್ಯೆ ಇದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಜಗಳವಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಿಡಿಕಾರಿದರು.

Read More

ಬೆಂಗಳೂರು: ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈ ಹಿಂದೆ ರಾಜಸ್ಥಾನದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರದಲ್ಲಿತ್ತು. ಈಗ ರಾಜಸ್ಥಾನದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. https://ainlivenews.com/congress-president-has-called-an-important-meeting-on-december-6/ ಛತ್ತೀಸ್​ಗಢ ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಈ ಫಲಿತಾಂಶ ಕಾಂಗ್ರೆಸ್​ ಧೂಳೀಪಟ ಮಾಡುವುದಕ್ಕೆ ನಾಂದಿ ಹಾಡುತ್ತೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದರು.

Read More

ನವದೆಹಲಿ: ದೇಶದಲ್ಲಿ ಬಿಜೆಪಿಯ ಪರ ವಾತಾವರಣ ಇದೆ ಎಂದು ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಜನ ಬಯಸಿದ್ದಾರೆ. ಸುನಾಮಿ ರೀತಿ ಭಾರತೀಯ ಜನತಾ ಪಾರ್ಟಿಯ ಅಲೆ ಎದ್ದಿದೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಬಹುಮತ ಪಡೆಯುತ್ತೆ. https://ainlivenews.com/israeli-prime-minister-orders-to-find-and-kill-hamas-leaders/ ದೇಶದ ಜನರು ದೇಶದ ರಕ್ಷಣೆಯ ಗ್ಯಾರಂಟಿ ಬಯಸುತ್ತಿದ್ದಾರೆ. ಅಧಿಕಾರವನ್ನು ಕಬಳಿಸುವ ಗ್ಯಾರಂಟಿಯನ್ನು ಜನರು ಬಯಸುತ್ತಿಲ್ಲ. ಗ್ಯಾರಂಟಿ ಆಮಿಷವೊಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಇದರಿಂದ ರಾಜ್ಯದ ಜನರು ಪಶ್ಚಾತ್ತಾಪಪಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದರು.

Read More

ಶಿವಮೊಗ್ಗ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲವಿನತ್ತ ಸಾಗಿರುವುದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನತೆ ಮತ್ತೆ ಪ್ರದಾನಿಯಾಗಬೇಕು ಎಂದು ಬಯಸಿದ್ದು, ಮೂರು ರಾಜ್ಯಗಳಲ್ಲಿ ಗೆಲುವಿನ ಗಿಫ್ಟ್ ನೀಡಿದ್ದಾರೆ. ಇದು ದೇಶದ ಎಲ್ಲಾ ಕಾರ್ಯಕರ್ತರಿಗೆ ಸಂತಸ ತಂದಿದೆ. ಇಂತಹ ಸಂತಸ ಪದೇ ಪದೇ ಬರಲಿ ಮಧ್ಯ ಪ್ರದೇಶ ರಾಜಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ವಿತ್ತು. ಆದರೆ ಛತ್ತಿಸ್ ಘಡ ಗೆಲ್ಲುತ್ತೇವೆ ಎಂಬ ನಂಬಿಕೆ ಇರಲಿಲ್ಲ. ಕಾಂಗ್ರೇಸ್ ನವರು ಐದು ರಾಜ್ಯಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದರು. https://ainlivenews.com/israeli-prime-minister-orders-to-find-and-kill-hamas-leaders/ ಕೇವಲ ಒಂಜು ರಾಜ್ಯದಲ್ಲಿ ಅವರು ಗೆದ್ದಿದ್ದಾರೆ. ತೆಲಂಗಾಣದಲ್ಲಿ ಮುಖ್ಯಮಂತ್ರಿಗಳ ಮೇಲೆ ಜನರಿಗಿದ್ದ ಬೇಸರ, ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನತದೆಗೆ ಹೇಗೆ ಮೋಸ ಮಾಡಿದರೋ..ಹಾಗೆಯೇ ಮುಸ್ಲಿಂ ಮತಗಳನ್ನು ಕ್ರೂಡಿಕರಿಸಿ ಗೆಲುವು ಸಾಧಿಸಿದ್ದಾರೆ. ಗ್ಯಾರಂಟಿಗಳ ಮೂಲಕ ತೆಲಂಗಾಣ ಬಡವರಿಗೆ ಕಾಂಗ್ರೇಸ್ ಮೋಸ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಅವರು ತೆಲಂಗಾಣವನ್ನು ಕೂಡ ಗೆಲ್ಲಲು ಸಾಧ್ಯವಿಲ್ಲ. ಇಂದಿನ ಫಲಿತಾಂಶ ಮುಂದಿನ…

Read More