Author: AIN Author

ವಿಶೇಷವಾಗಿ ವಿಟಮಿನ್ ಎ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ರೆಟಿನಾದ ಆರೋಗ್ಯವನ್ನು ಸುಧಾರಿಸುವ ಮತ್ತು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವ ಪೋಷಕಾಂಶಗಳ ಬಗ್ಗೆ ಕಲಿಯೋಣ.ಸತು, ಲ್ಯೂಟಿನ್ ಮತ್ತು ಜಿಯೊಸ್ಕಾಂಟಿನ್ ನಂತಹ ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಕಣ್ಣಿನ ಆಂತರಿಕ ಕೋಶಗಳಿಗೆ ಹಾನಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ➔ ಕುಂಬಳಕಾಯಿ ಬೀಜಗಳಲ್ಲಿ, ಸೆಣಬಿನ ಬೀಜಗಳ ಸೇವನೆಯು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಸಹ ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ. ಈ ಜೀವಸತ್ವಗಳು ಸೂರ್ಯಕಾಂತಿ ಬೀಜಗಳಲ್ಲಿ ಕಂಡುಬರುತ್ತವೆ. ➔ ಪಾಲಕ್ ಮತ್ತು ಪಾಲಕ್ ನಂತಹ ಎಲೆಗಳ ತರಕಾರಿಗಳು ನಿಮ್ಮ ದೃಷ್ಟಿಯನ್ನು ಸುಧಾರಿಸುತ್ತವೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದರ ಉರಿಯೂತ ನಿವಾರಕ ಗುಣಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಣ್ಣಿನ ಸಮಸ್ಯೆಗಳಿಂದ ರಕ್ಷಿಸುತ್ತವೆ. ➔ ಡ್ರೈ ಪ್ರೂಟ್ಸ್ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತವೆ ಮತ್ತು ಕಣ್ಣಿನ ಸಮಸ್ಯೆಗಳನ್ನು ದೂರವಿಡುತ್ತವೆ. ಒಣ ಹಣ್ಣುಗಳಲ್ಲಿ…

Read More

ಊಟದ ಬಳಿಕ ಪಾನ್ ತಿನ್ನುದಕ್ಕೆ ಆಧ್ಯಾತ್ಮಿಕ ಕಾರಣವಿದೆ. ಪಾನ್ ಎಲೆಯಿಂದ ಸೂಕ್ಷ್ಮ ವಾಯು ಪ್ರಕ್ಷೇಪಿತವಾಗುತ್ತದೆ. ಇದರಿಂದ ದೇಹದಲ್ಲಿರುವ ಪ್ರಾಣ ದೇಹ ಮತ್ತು ಪ್ರಾಣಮಯ ಕೋಶದ ಕ್ಷಮತೆ ಹೆಚ್ಚುತ್ತದೆ. ಶರೀರದಲ್ಲಿನ ಪಂಚಪ್ರಾಣದ ಕಾರ್ಯಕ್ಕೆ ಬಲ ಸಿಗುತ್ತದೆ ಮತ್ತು ಅನ್ನದಲ್ಲಿನ ರಜ-ತಮ ಕಣಗಳ ಬಿಗಡನೆ ಮಾಡಲು ಸಹಕರಿಸುತ್ತದೆ. ಪಾನಿನಿಂದ ಸ್ತೂಲ ಮತ್ತು ಸೂಕ್ಷ್ಮ ರೀತಿಯಿಂದ ಜೀರ್ಣಪ್ರಕ್ರಿಯೆ ನಡೆಯುತ್ತದೆ.ದೇಹದಲ್ಲಿನ ಸೂಕ್ಷ್ಮ ವಾಯು ಸರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

Read More

Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್

Read More

ಪೃಥ್ವಿ ಅಂಬಾರ್ ಒಂದರ ಹಿಂದೊಂದು ವಿಶಿಷ್ಠ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾವೊಂದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಆ ಸಿನಿಮಾವೇ ‘ಜೂನಿ’. ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ಟ್ರೇಲರ್, ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಮಾಧ್ಯಮದರೊಂದಿಗೆ ಮಾಹಿತಿ ಹಂಚಿಕೊಂಡಿದೆ. ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ವೈಭವ್ ಎಷ್ಟು ಕ್ಲಾರಿಟಿಯಾಗಿ ಮಾತನಾಡಿದರೋ, ಅಷ್ಟೇ ಕ್ಲಾರಿಟಿಯಾಗಿ ಸಿನಿಮಾ ಮಾಡಿದ್ದಾರೆ. ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಬುದ್ಧಿವಂತಿಕೆ,ಅನುಭದಲ್ಲಿ ತುಂಬಾ ದೊಡ್ಡವರು. ಈ ಸಿನಿಮಾದಲ್ಲಿ ಕ್ರಿಕೆಟ್ ಟೀಂ ಎಂದುಕೊಂಡರೆ ಅತಿ ಹೆಚ್ಚು ಸ್ಕ್ರೋರ್ ಮಾಡುವವರು ವೈಭವ್. ಅವರಷ್ಟೇ ಸ್ಕ್ರೋರ್ ಮಾಡುವವರು ರಿಷಿಕಾ. ಎರಡೂವರೆ ತಿಂಗಳ ಬಹಳಷ್ಟು ರಿಹರ್ಸಲ್ ಮಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂದು ತುಂಬಾ ಡೆಡಿಕೇಟೆಡ್ ಆಗಿ ಚಿತ್ರ ಮಾಡಿದ್ದಾರೆ. ನನ್ನದು 50% ಪರಿಶ್ರಮಅಷ್ಟೇ ಇರುವುದು. ಎಲ್ಲರದ್ದೂ 100ರಷ್ಟು ಇದೆ ಎಂದು ತಿಳಿಸಿದರು. ನಾಯಕಿ ರಿಷಿಕಾ ಮಾತನಾಡಿ, ನಾವು 2022ರಲ್ಲಿ ಈ ಚಿತ್ರದ ಶೂಟಿಂಗ್ ಶುರು…

Read More

ವಿಜಯಪುರ: ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದ ಬಳಿಸಿದ ಪ್ರಯಾಣಿಕನಿಗೆ ಶೂ ಸೇವೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಚಿಲ್ಲರೆ ಹಣ ಕೊಡುವ ವಿಷಯವಾಗಿ ಪ್ರಯಾಣಿಕ ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.‌ ಇದರಿಂದ ಕುಪಿತಗೊಂಡ ಲೇಡಿ ಕಂಡಕ್ಟರ್ ಬೂಟಿನಿಂದ ಧರ್ಮದೇಟು ನೀಡಿದ್ದಾರೆ. ಬಳಿಕ ಲೇಡಿ ಕಂಡಕ್ಟರ್ ಗೆ ಜನ ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಈ ವೇಳೆ ಲೇಡಿ ಕಂಡಕ್ಟರ್ ಥಳಿಸುತ್ತಿರೋ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Read More

ಬಿಗ್‌ಬಾಸ್‌ ಕನ್ನಡ ಸೀಸನ್‌ 10ನಲ್ಲಿ ಎಲ್ಲ ಸ್ಪರ್ಧಿಗಳ ನಗುವಿನ ಮೊತ್ತ ತೆಗೆದರೆ ಅದರ ಬಹುಪಾಲು ತುಕಾಲಿ ಸಂತೋಷ್ ಅವರಿಗೆ ಹೋಗುತ್ತದೆ. ಅಷ್ಟೇ ಅಲ್ಲ, ಮನೆಯೊಳಗಿನ ಭಿನ್ನಾಭಿಪ್ರಾಯಗಳ ಮೂಲಗಳನ್ನು ಹುಡುಕಿಕೊಂಡು ಹೋದರೆ ಅದರಲ್ಲಿಯೂ ತುಕಾಲಿ ಸಂತೋಷ್ ಅವರ ಕೊಡುಗೆ ಸಣ್ಣದಲ್ಲ!! ಹೀಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ತುಕಾಲಿ ಸಂತೋಷ್ ಅವರದ್ದು. ಬಿಗ್‌ಬಾಸ್‌ನ ಐದನೇ ರನ್ನರ್ ಅಪ್ ಆಗಿ ಹೊಮ್ಮಿರುವ ತುಕಾಲಿ ಅವರು ಜಿಯೊಸಿನಿಮಾ ಜೊತೆಗೆ ನಡೆಸಿದ ಸಂದರ್ಶನ ಇಲ್ಲಿದೆ. https://go.jc.fm/fRhd/z4rcg0tk ‘’ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಸಂತೋಷ್‌ ಕುಮಾರ್ ಎಚ್.ಜಿ. ಅಲಿಯಾಸ್ ‘ತುಕಾಲಿ ಸಂತೋಷ್ ಅವರೇ’… ನಿಮ್ಮ ಪ್ರೀತಿ ಪಾತ್ರ. ಈ ಸೀಸನ್‌ನಲ್ಲಿ ಟಾಪ್‌ 6 ಫಿನಾಲೆ ಕಂಟೆಸ್ಟೆಟ್ಸ್‌ಗಳಲ್ಲಿ ನಾನೂ ಒಬ್ಬ. ಐದನೇ ರನ್ನರ್ ಅಪ್ ಆಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಈ ಜಾಗದಲ್ಲಿದ್ದೀನಿ. ಸಿಕ್ಕಾಪಟ್ಟೆ ಎಕ್ಸೈಟ್‌ಮೆಂಟ್ ಇದೆ. ನಾನು ಮನೆಗೆ ಹೋಗುವಾಗಲೇ ಅಂದುಕೊಂಡಿದ್ದೆ. ಷೋ ಮುಗಿಯುವ ದಿನವೇ ಮನೆಯಿಂದ ಹೊರಗೆ ಬರಬೇಕು ಅಂತ. ಹಾಗೇ ಆಗಿದೆ. ಗ್ರ್ಯಾಂಡ್ ಫಿನಾಲೆ…

Read More

ತುಮಕೂರು: ಕುಡಿದ ಅಮಲಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಘಟನೆ ತುಮಕೂರು‌ ಜಿಲ್ಲೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 1ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮೇಲೆ ಕುಡಿದ ಅಮಲಿನಲ್ಲಿ  ಯುವಕನೋರ್ವನಿಂದ ದುಷ್ಕೃತ್ಯವೆಸಗಿದ್ದಾನೆ. ಮನೆಯಲ್ಲಿ ಯಾರು‌ ಇಲ್ಲದ ವೇಳೆ ಮಧುಗಿರಿ ಮೂಲದ ಯುವಕನಿಂದ ಅತ್ಯಾಚಾರ ಮಾಡಲಾಗಿದೆ. ಈ ವೇಳೆ  ಬಾಲಕಿ ಕಿರುಚಿದ ಕಾರಣ ಸ್ಥಳಿಯರು ದೌಡಾಯಿಸಿದ್ದು, ಬಾಲಕಿಯ ರಕ್ಷಣೆ ಮಾಡಲಾಗಿದೆ. ಸದ್ಯ ಬಾಲಕಿಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ದಾವಣಗೆರೆ: ಮತ್ತೋಮ್ಮೆ ಮೋದಿ ಎಂಬ ಗೋಡೆ ಬರಹ ಬರೆಯುವ‌ ಮೂಲಕ ಅಭಿಯಾನಕ್ಕೆ  ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಮಾಜಿ ಶಾಸಕ, ಮಾಜಿ‌ ಸಚಿವ ರೇಣುಕಾಚಾರ್ಯ ಚಾಲನೆ ನೀಡಿದ್ದಾರೆ. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಪ್ರತಿ ಬೂತ್ ನಲ್ಲಿ ಐದು ಮನೆಗಳ ಮೇಲೆ ಮತ್ತೋಮ್ಮೆ ಮೋದಿ ಗೋಡೆ ಬರಹಕ್ಕೆ‌ ಚಾಲನೆ ನೀಡಿದರು. ಗೋಡೆ ಬರಹದ ಜೊತೆಗೆ ಕೇಂದ್ರ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜನರಿಗೆ ಮಾಹಿತಿ‌ ನೀಡಿದರು. ರೇಣುಕಾಚಾರ್ಯರಿಗೆ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

Read More

ಯಂಗ್ ಡೈನಾಮಿಕ್ ಪ್ರಣಮ್ ದೇವರಾಜ್ ನಟನೆಯ S/O ಮುತ್ತಣ್ಣ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಪ್ರಣಮ್ ಜನ್ಮದಿನದ ವಿಶೇಷವಾಗಿ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡ ಶುಭ ಕೋರಿದೆ. ಬೆಂಗಳೂರಿನ ಜಿಟಿ ಮಾಲ್ ನಲ್ಲಿರುವ ಎಂಎಂ ಲೆಗಸಿಯಲ್ಲಿ ಯಂಗ್ ಡೈನಾಮಿಕ್ ಪ್ರಣಮ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ, ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಾಯಕ ಪ್ರಣಮ್ ದೇವರಾಜ್ ಮಾತನಾಡಿ, S/o ಮುತ್ತಣ್ಣ ಶ್ರೀಕಾಂತ್ ಸರ್ ಫಸ್ಟ್ ಟೈಮ್ ಮನೆಗೆ ಬಂದಾಗ ಅವರು ಮಾತನಾಡಿದ ರೀತಿ ಕಥೆ ಹೇಳಿದ ರೀತಿಯಲ್ಲಿ ನಂಬಿಕೆ ಬಂತು. ಪ್ರಾಮಿಸ್ ಮಾಡಿದಕ್ಕಿಂತ ಸಖತ್ ಆಗಿ ಸಿನಿಮಾ ತೆಗೆದಿದ್ದಾರೆ. ಶ್ರೀಕಾಂತ್ ಯೋಚನೆಯೇ ಬೇರೆ. ಇಡೀ ಟೀಂ ಅಣ್ಣ ತಮ್ಮಂದಿರ ತರ ಇದ್ದೇವೆ. ನಿರ್ಮಾಪರು ಎಲ್ಲದಕ್ಕೂ ಬೆಂಬಲ ಕೊಟ್ಟಿದ್ದಾರೆ. ಖುಷಿ ರವಿ ಅವರು ಎಂಥ ನಟಿ ಅನ್ನೋದು ದಿಯಾದಿಂದ ಗೊತ್ತಾಗಿದೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು…

Read More

ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಹತ್ತು ವರ್ಷ ಆಯ್ತು.ಆದರೆ ಇನ್ನೂ ಚಾಲಕ ರಹಿತ ಟ್ರೈನ್ ಹಳಿಗೆ ಬಂದಿಲ್ಲ..ಬೇರೆ ಬೇರೆ ದೇಶಗಳಲ್ಲಿ ಈಗಾಗಲೇ ಚಾಲಕನಿಲ್ಲದೆ ಸ್ವಯಂಚಾಲಿತ ಟ್ರೈನ್ ಓಡುತ್ತದೆ.ಇದೇ ಮಾದರಿಯಲ್ಲಿ ಬೆಂಗಳೂರು ಮೆಟ್ರೋದಲ್ಲೂ ಚಾಲಕ ರಹಿತ ಮೆಟ್ರೋ ಓಡಿಸಲು ಮೆಟ್ರೋ ನಿಗಮ ಮುಂದಾಗಿದ್ದು,ಇದಕ್ಕೆ ಅಂತ ಎಲ್ಲಾ ರೀತಿಯ ಸಿದ್ದತೆಗಳು ಆರಂಭವಾಗಿವೆ.ಹಾಗಾದರೆ ಯಾವತ್ತಿನಿಂದ ಡ್ರೈವರ್ ಲೆಸ್ ಟ್ರೈನ್ ಓಡುತ್ತೆ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿಯಲ್ಲಿ. ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಒಂದು ದಶಕ ಕಳೆದಿದೆ.ಈಗಾಗಲೇ ನಗರದ ನಾಲ್ಕು ದಿಕ್ಕಿನಲ್ಲಿ ಮೆಟ್ರೋ ಓಡಾಟ ನಡೆಸುತ್ತಿದ್ದು, ಜನ ಕೂಡ ಸಿಕ್ಕಪಟ್ಟೆ ಪಿಧಾ ಆಗಿದ್ದಾರೆ.ಸದ್ಯ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಚಾಲಕರ ಮೂಲಕ ಮೆಟ್ರೋ ರನ್ ಮಾಡಲಾಗ್ತಿದೆ.ಆದ್ರೆ ಚಾಲಕ ಮೂಲಕ ಓಡುತ್ತಿರೋ ಮೆಟ್ರೋ ಚಾಲಕನ ತಪ್ಪು ಗಳಿಂದ ಆಗಾಗ ಸ್ಥಗಿತವಾಗ್ತಿದೆ‌‌.ಹೀಗಾಗಿ ಇದೀಗ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ಮುಂದಾಗಿದೆ. ಟ್ರೈನ್ನ್ನ ಕಾರ್ಯಾಚರಣೆಗೊಳಿಸಲು ಈಗಾಗಲೇ ಸಕಲ ಸಿದ್ದತೆ ನಡೆದಿದೆ.ಬೇರೆ ದೇಶಗಳಲ್ಲಿ ಚಾಲಕನಿಲ್ಲದೆ ಸ್ವಯಂಚಾಲಿತವಾಗಿ…

Read More