ಭೋಪಾಲ್: ವ್ಯಕ್ತಿಯೊಬ್ಬ ತನ್ನ ಪತ್ನಿ ಬ್ಯಾಂಕ್ ಖಾತೆ ಹಾಗೂ ಇನ್ಶುರೆನ್ಸ್‌ಗೆ ತನ್ನನ್ನು ನಾಮಿನಿ ಮಾಡದ ಕಾರಣಕ್ಕೆ ಆಕೆಯನ್ನು ಹತ್ಯೆಗೈದ ಘಟನೆ ಮಧ್ಯಪ್ರದೇಶದ ಶಹಪುರದಲ್ಲಿ ನಡೆದಿದೆ. ಡಿಂಡೋರಿ ಜಿಲ್ಲೆಯ ಶಹಪುರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನಿಶಾ ನಾಪಿತ್ ಹತ್ಯೆಯಾದ ಮಹಿಳೆಯಾಗಿದ್ದಾರೆ. ಆಕೆಯ ಪತಿ ಮನೀಶ್ ಶರ್ಮಾ ಹತ್ಯೆಗೈದ ಆರೋಪಿ ಯಾಗಿದ್ದಾನೆ. ನಿರುದ್ಯೋಗಿಯಾಗಿದ್ದ ಮನೀಶ್ ಶರ್ಮಾ, ತನ್ನ ಪತ್ನಿಯ ಬಳಿ ಆಗಾಗ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಬ್ಯಾಂಕ್ ಖಾತೆ ಹಾಗೂ ಇನ್ಶುರೆನ್ಸ್‌ಗೆ ನಾಮಿನಿ ಮಾಡುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಜ.28 ರಂದು ಸಹ ಇದೇ ವಿಚಾರಕ್ಕೆ ನಿಶಾ ನಾಪಿತ್ ಹಾಗೂ ಮನೀಶ್ ಶರ್ಮಾ ನಡುವೆ ಗಲಾಟೆಯಾಗಿದೆ. ಈ ವೇಳೆ ಮಹಿಳೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಬಳಿಕ ರಕ್ತದ ಕಲೆಯಾಗಿದ್ದ ತಲೆದಿಂಬು ಹಾಗೂ ಬೆಡ್‍ಶೀಟ್‍ನ್ನು ವಾಷಿಂಗ್ ಮಷಿನ್‍ನಲ್ಲಿ ಹಾಕಿ ಮುಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ನಿಶಾ ಅವರ ಸಹೋದರಿ ನಿಲಿಮಾ ನಾಪಿತ್ ಈ ಬಗ್ಗೆ…
Author: AIN Author
ಬೆಂಗಳೂರು:- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಹಾಕಿದ್ದ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ಕಳೆದ ಭಾನುವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿ ಗೆ ಹೊರಟಿದ್ದ ಯುವಕ ತನ್ನ ಬ್ಯಾಗ್‌ಚೆಕ್ ಮಾಡೋ ವೇಳೆ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಈ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಅಂದಿದ್ದಾನೆ. ಇದೇನಪ್ಪಾ ಅಂತಾ ಪೊಲೀಸರು ಈತನ ಇಡೀ ಲಗೇಜ್ ಜಾಲಾಡಿದ್ದಾರೆ. ಬಾಂಬ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆಸಾಮಿಯನ್ನ ಬಂಧಿಸಿ, ಅಪರಾಧ ಹಿನ್ನೆಲೆ ಏನಾದ್ರೂ ಇದೆಯಾ ಅನ್ನೋದನ್ನ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು:- ಮಂಜುನಾಥ್‌ರಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜಯದೇವ ನಿರ್ದೇಶಕ ಡಾ. ಮಂಜುನಾಥ್ ಅವರ ಸೇವಾವಧಿ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮಂಜುನಾಥ್ ಅವರ ಬಗ್ಗೆ ಮಾತನಾಡುತ್ತಾ ಇಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದ್ದಾರೆ. ಈ ಸಂಸ್ಥೆಗೆ ಪ್ರಥಮ ಬುನಾದಿ ಹಾಕಿದವರು ಡಾಕ್ಟರ್ ಚೆನ್ನಯ್ಯ. ಅವರಿಗೂ ಮಂಜುನಾಥ್ ಕಂಡರೆ ತುಂಬಾ ಪ್ರೀತಿ. ನೀವು ಹೊರದೇಶಕ್ಕೆ ಹೋಗಿ ಕೋಟ್ಯಂತರ ರೂಪಾಯಿ ದುಡಿಯಬಹುದು. ಆದರೆ ಇಲ್ಲಿಯ ಜನರ ಕಷ್ಟ ಕೇಳಿದಷ್ಟು ತೃಪ್ತಿ ಸಿಗುವುದಿಲ್ಲ ಎಂದರು. ನಾನು ಮತ್ತು ನನ್ನ ಶ್ರೀಮತಿ 15 ವರ್ಷ ಮಗಳು ಅನುಸೂಯ ಮನೆಯಲ್ಲಿಯೇ ಇದ್ದೆವು. ಅದು ನನ್ನ ಜೀವನದ ಸೌಭಾಗ್ಯ ಅಂತ ಹೇಳುತ್ತೇನೆ. ಇವತ್ತು ಹೆಮ್ಮೆ ಇದೆ ನನಗೆ, ಇಡೀ ರಾಷ್ಟ್ರದಲ್ಲಿ ಎರಡು ಸಾವಿರ ಬೆಡ್ ಆಸ್ಪತ್ರೆ ಬಹುಶಃ ಇಲ್ಲ ಅಂತ ನನ್ನ ಭಾವನೆ. ಸಚಿವ ಸುಧಾಕರ್ ಬಂದು…
ಮಾಲ್ಡೀವ್ಸ್ ಪ್ರವಾಸೋದ್ಯಮದ ಮೇಲೆ ಭಾರತೀಯ ಪ್ರವಾಸಿಗರ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನದ ಬಿಸಿ ತಟ್ಟಿದೆ. ಕಳೆದ ವರ್ಷ ಮಾಲ್ಡೀವ್ಸ್ ಪ್ರವಾಸದಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ (India) ವಿವಾದದ ಬಳಿಕ ಈಗ 5ನೇ ಸ್ಥಾನಕ್ಕೆ ಕುಸಿದೆ. ಕಳೆದ ಮೂರು ವಾರಗಳಲ್ಲಿ ಮಾಲ್ಡೀವ್ಸ್ ಪ್ರವಾಸದಲ್ಲಿ ಗಮನಾರ್ಹ ಬದಲಾವಣೆ ಎದುರಿಸಿದೆ. ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ಭಾರತೀಯರ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಜ.28 ರಲ್ಲಿ ಪಡೆದ ಅಂಕಿಅಂಶಗಳು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಿಕ್ಕಟ್ಟನ್ನು ಇದು ಪ್ರತಿಬಿಂಬಿಸುವಂತಿವೆ. 2023 ರಲ್ಲಿ ಯಾವ ದೇಶ ಯಾವ ಸ್ಥಾನದಲ್ಲಿತ್ತು? 1. ರಷ್ಯಾ: 18,561 ಪ್ರವಾಸಿಗರ ಆಗಮನ (10.6% ಮಾರುಕಟ್ಟೆ ಪಾಲು, 2023 ರಲ್ಲಿ 2 ನೇ ಸ್ಥಾನ) 2. ಇಟಲಿ: 18,111 ಆಗಮನ (10.4% ಮಾರುಕಟ್ಟೆ ಪಾಲು, 2023 ರಲ್ಲಿ 6 ನೇ ಸ್ಥಾನ) 3. ಚೀನಾ: 16,529 ಆಗಮನ (9.5% ಮಾರುಕಟ್ಟೆ ಪಾಲು, 2023 ರಲ್ಲಿ 3 ನೇ…
ನವದೆಹಲಿ:- ಪೆನ್ಷನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಸರ್ಕಾರೀ ಕೆಲಸದಲ್ಲಿರುವ ಮಹಿಳೆ ಅಕಾಲಿಕವಾಗಿ ಮರಣವನ್ನಪ್ಪಿದರೆ ಆಕೆಯ ಪಿಂಚಣಿ ಪಡೆಯಲು ಪತಿ ಅರ್ಹನಾಗಿರುತ್ತಿದ್ದರು. ಆದರೆ ಇನ್ನು ಮುಂದೆ ಆಕೆ ತನ್ನ ನಂತರ ಪಿಂಚಣಿ ಪಡೆಯಲು ಇಚ್ಛಾನುಸಾರ ಮಕ್ಕಳು ಅಥವಾ ಇತರೆ ಕುಟುಂಬ ಸದಸ್ಯರ ಹೆಸರನ್ನು ನಾಮಿನಿಯಾಗಿ ನೀಡಬಹುದಾಗಿದೆ. ಇದಕ್ಕೆ ಮೊದಲು ಮಹಿಳೆಯ ಪತಿ ಕೂಡಾ ಮರಣವನ್ನಪ್ಪಿದ್ದರೆ ಮಾತ್ರ ಮಕ್ಕಳು ಅಥವಾ ಕುಟುಂಬ ಸದಸ್ಯರು ಆಕೆಯ ಪಿಂಚಣಿಗೆ ಅರ್ಹರಾಗಿರುತ್ತಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಹೊಸ ಬದಲಾವಣೆಗೆ ಕಾರಣವೇನು? ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ, ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆ ತನ್ನ ಪತಿಗೆ ಪಿಂಚಣಿ ಹಣ ನೀಡಲು ಇಷ್ಟಪಡದೇ ಇದ್ದಲ್ಲಿ ತನ್ನ ಮಕ್ಕಳಿಗೆ ವರ್ಗಾಯಿಸಲು ಅನುಕೂಲವಾಗುವಂತೆ ಈ ಹೊಸ ನಿಯಮ ರೂಪಿಸಲಾಗಿದೆ ಅರ್ಜಿ ಸಲ್ಲಿಸುವುದು ಹೇಗೆ? ಪಿಂಚಣಿ ಪಡೆಯಲು ಯಾರು ಅರ್ಹರು? ಮಹಿಳೆ ತಾನು ನೌಕರಿ…
ಮೂತ್ರ ಪಿಂಡದ ಆರೋಗ್ಯ ಕೆಟ್ಟರೆ ಅದು ದೇಹದ ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ ಗೋಚರಿಸುತ್ತದೆ. ಕಾಲುಗಳಲ್ಲಿ ಕಾಣಿಸಿಕೊಳ್ಳುವ ನೋವು : ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಹೋದಾಗ ನಮ್ಮ ರಕ್ತದಲ್ಲಿ ವಿಷ ಮತ್ತು ಕೊಳಕು ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ. ಇದರಿಂದಾಗಿ ದೇಹದ ಎಲ್ಲಾ ಭಾಗಗಳಿಗೂ ಸರಿಯಾಗಿ ರಕ್ತ ಪೂರೈಕೆ ಆಗುವುದಿಲ್ಲ. ದೇಹದ ಎಲ್ಲಾ ಭಾಗಗಳಿಗೂ ರಕ್ತ ಪೂರೈಕೆಯಾಗದ ಕಾರಣ ಯಾವುದೇ ಸಣ್ಣ ಕೆಲಸ ಮಾಡಿದರೂ ಸುಸ್ತಾಗುತ್ತದೆ.ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದರ ಸ್ಪಷ್ಟ ಸಂಕೇತವಾಗಿದೆ ಒಣ ಮತ್ತು ಒರಟು ಚರ್ಮ : ಮೂತ್ರಪಿಂಡಗಳು ದೇಹದಿಂದ ವಿಷವನ್ನು ಹೊರ ಹಾಕಲು ಸಾಧ್ಯವಾಗದೇ ಹೋದಾಗ, ದೇಹದಲ್ಲಿ ಕೆಂಪು ರಕ್ತ ಕಣಗಳು ವೃದ್ದಿಯಾಗುವುದಿಲ್ಲ. ಇದು ದುರ್ಬಲ ಮೂಳೆಗಳು ಮತ್ತು ಒರಟು ಚರ್ಮಕ್ಕೆ ಕಾರಣವಾಗುತ್ತದೆ. ಚರ್ಮವು ಅದರ ಬಣ್ಣವನ್ನು ಕಳೆದುಕೊಳ್ಳುವುದರಿಂದ ಚರ್ಮವು ನಿರ್ಜೀವಗೊಂಡು ಶುಷ್ಕವಾಗುತ್ತಾ ಹೋಗುತ್ತದೆ. ಒಣ ಮತ್ತು ಒರಟು ಚರ್ಮ ಕೂಡಾ…
ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವಾಲಯವು ಬಿಗ್ ಅಪ್ಡೇಟ್‌ವೊಂದನ್ನು ನೀಡಿದೆ. ಜನವರಿ 31ರ ಒಳಗಾಗಿ ಫಾಸ್ಟ್‌ಟ್ಯಾಗ್‌ನ ಕೆವೈಸಿ ಮಾಡಿಸದೇ ಇದ್ದರೆ, ಫಾಸ್ಟ್‌ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದೆ. ಫಾಸ್ಟ್ಯಾಗ್ ಹೇಗೆ ಕೆಲಸ ಮಾಡುತ್ತದೆ? ವಾಹನ ಚಲಿಸುತ್ತಿರುವಾಗಲೇ ಸ್ಕ್ಯಾನರ್ಗಳು ಫಾಸ್ಟ್ಯಾಗ್ ಅನ್ನು ಸ್ಕ್ಯಾನ್ ಮಾಡುತ್ತವೆ. ನಿಗದಿತ ಟೋಲ್ ಹಣವನ್ನು ಅಕೌಂಟ್ನಿಂದ ಕಡಿತಗೊಳಿಸಲಾಗುತ್ತದೆ. ಈ ಫಾಸ್ಟ್ಯಾಗ್ ಸಾಧನದಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಅದರ ಟ್ಯಾಗ್ ಅನ್ನು ವಾಹನದ ವಿಂಡ್ಸ್ಕ್ರೀನ್ಗೆ ಅಂಟಿಸಲಾಗಿರುತ್ತದೆ. ಟೋಲ್ ಪ್ಲಾಜಾ ಬಳಿ ಸ್ಕ್ಯಾನರ್ ಈ ಟ್ಯಾಗ್ ಅನ್ನು ಸ್ಕ್ಯಾನ್ ಮಾಡಿ ಗುರುತಿಸುತ್ತದೆ. ಫಾಸ್ಟ್ಯಾಗ್ ಕೆವೈಸಿ ಅಪ್ಡೇಟ್ ಮಾಡುವ ಕ್ರಮ ಹೆದ್ದಾರಿ ನಿರ್ವಹಣೆ ಸಂಸ್ಥೆಯಾದ ಐಎಚ್ಎಂಸಿಎಲ್ನ ಫಾಸ್ಟ್ಯಾಗ್ ಪೋರ್ಟಲ್ಗೆ ಹೋಗಿ: fastag.ihmcl.com/ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಅಥವಾ ಒಟಿಪಿ ಬಳಸಿ ಲಾಗಿನ್ ಆಗಿ. ಡ್ಯಾಶ್ಬೋರ್ಡ್ನಲ್ಲಿ ಮೈ ಪ್ರೊಫೈಲ್ ಅನ್ನು ಆಯ್ಕೆ ಮಾಡಿ. ಇದರಲ್ಲಿ ನೀವು ಹಿಂದೆ ನೊಂದಾಯಿಸುವಾಗ ಸಲ್ಲಿಸಿದ್ದ ನಿಮ್ಮ ಕೆವೈಸಿ ವಿವರವನ್ನು…
ಹೆಚ್ಚಿನ ಜನರು ಮುಖ ತೊಳೆಯಲು ಫೇಸ್ ವಾಶ್ ಬಳಸುತ್ತಾರೆ. ಆದರೆ ಮುಖಕ್ಕೆ ಸೋಪ್ ಹಾಕಿ ತೊಳೆಯುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಹಿಂದೆಲ್ಲಾ ಪ್ರತಿಯೊಬ್ಬರೂ ಮುಖಕ್ಕೆ ಸೋಪ್ ಹಾಕಿಯೇ ಮುಖ ತೊಳೆಯುತ್ತಿದ್ದರು. ಮುಖಕ್ಕೆ ಸಾಬೂನು ಹಚ್ಚುವುದರಿಂದ ತ್ವಚೆಗೆ ಹಾನಿಯಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಸೋಪ್ ಶಕ್ತಿಯುತವಾದ ಕ್ಲೆನ್ಸರ್ ಆಗಿದ್ದರೂ ಸಹ, ಇದು ನಿಮ್ಮ ಮುಖದ ಹೊಳಪನ್ನು ತೆಗೆದುಹಾಕುತ್ತದೆ. ಸೋಪ್‌ನ ಅಡ್ಡಪರಿಣಾಮಗಳು ಸೋಪ್ ಚರ್ಮದ ಮೇಲೆ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾಲಿನ್ಯದಿಂದ ಮುಕ್ತ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಸೋಪ್ ಅನೇಕ ಉತ್ತಮ ಗುಣಗಳನ್ನು ಹೊಂದಿದ್ದರೂ ಸಹ, ನೀವು ಅದನ್ನು ಯಾವಾಗಲೂ ನಿಮ್ಮ ಮುಖದ ಮೇಲೆ ಬಳಸುವುದನ್ನು ತಪ್ಪಿಸಬೇಕು. ಸೋಪ್ ಅನ್ನು ಮುಖಕ್ಕೆ ಹಚ್ಚೋದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತ್ವಚೆ ತೇವಾಂಶ ಕಳೆದುಕೊಳ್ಳುತ್ತದೆ ಚರ್ಮದ ತಜ್ಞರ ಪ್ರಕಾರ, ಸೋಪ್ ಕೆಟ್ಟ ಚರ್ಮದ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ನಿಮ್ಮ ಚರ್ಮದಿಂದ ಮಾತ್ರವಲ್ಲದೆ ನಿಮ್ಮ…
ಭಾರತದ ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಯೋಜನೆ ಆರಂಭಿಸಿದೆ. ಆರಂಭದಲ್ಲಿ 18 ಕಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸಾಂಪ್ರದಾಯಿಕ ಕಲೆಗಳನ್ನೂ ಈ ಸ್ಕೀಮ್ನ ವ್ಯಾಪ್ತಿಗೆ ತರುವ ಸಾಧ್ಯತೆ ಇದೆ. ವಿಶ್ವಕರ್ಮ ಯೋಜನೆಯ ಅಡಿಯಲ್ಲಿ, ದೇಶಾದ್ಯಂತ ಈ ಯೋಜನೆಯು ಕುಶಲಕರ್ಮಿಗಳಿಗೆ ರೂ 2 ಲಕ್ಷದವರೆಗೆ ಸಬ್ಸಿಡಿ ಸಾಲಗಳನ್ನು ಒದಗಿಸುತ್ತದೆ. ಕುಶಲಕರ್ಮಿಗಳ ಕಲಾತ್ಮಕ ಅನ್ವೇಷಣೆಗಳಿಗೆ ಹಣಕಾಸಿನ ತೊಡಕು ಉಂಟಾಗಬಾರದು ಅನ್ನೋ ಕಾರಣಕ್ಕೆ ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಗಾಗಿ 13,000 ಕೋಟಿ ರೂಪಾಯಿ ಹಣವನ್ನು ಮೀಸಲಿರಿಸಲಾಗಿದೆ. ಸಬ್ಸಿಡಿ ಸಾಲ ಮಾತ್ರವಲ್ಲದೇ ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಕುಲಶಕರ್ಮಿಗಳಿಗೆ ಆರಂಭಿಕ ಹಂತದಲ್ಲಿ ಶೇ. 5ರ ಬಡ್ಡಿದರದಲ್ಲಿ 1 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಈ ಯೋಜನೆಯ ಬಡ್ಡಿದರವು ಮಾರುಕಟ್ಟೆಯಲ್ಲಿ ಸಾಲದ ಮೇಲಿನ ಬಡ್ಡಿದರಕ್ಕಿಂತ ಕಡಿಮೆಯಾಗಿದೆ. ಯೋಜನೆಯ ಮೂಲಕ ಹಂತ ಹಂತವಾಗಿ ಯೋಜನೆಯ ಸಾಲದ ಮೊತ್ತವನ್ನು ಏರಿಕೆ ಮಾಡಲಾಗುತ್ತದೆ. ಅದ್ರಲ್ಲೂ ಈ ಯೋಜನೆಯ ಮೂಲಕ 2 ಲಕ್ಷ ರೂ.ವರೆಗಿನ ಸಾಲವನ್ನು…
ನಿಮ್ಮ ತೂಕದಲ್ಲಿ ಹಠಾತ್ ಕುಸಿತ ಅಥವಾ ತೂಕದಲ್ಲಿ ಹಠಾತ್ ಹೆಚ್ಚಳ ಕಂಡುಬಂದರೆ, ನೀವು ಅದನ್ನು ನಿರ್ಲಕ್ಷಿಸಬಾರದು ಏಕೆಂದರೆ ಇದು ಅನೇಕ ಗಂಭೀರ ಕಾಯಿಲೆಗಳ ಚಿಹ್ನೆಗಳಾಗಿರಬಹುದು. ಆದ್ದರಿಂದ ತೂಕ ನಷ್ಟವನ್ನು ನಿರ್ಲಕ್ಷಿಸಬೇಡಿ ಮತ್ತು ಖಂಡಿತವಾಗಿಯೂ ಎಚ್‌ಐವಿ ಪರೀಕ್ಷೆಯನ್ನು ಮಾಡಿಸಿ ಎಂದು ಆರೋಗ್ಯತಜ್ಞರು ಎಚ್ಚರಿಸುತ್ತಾರೆ. ಹಠಾತ್ ತೂಕ ನಷ್ಟವು ಅನೇಕ ಗಂಭೀರ ಕಾಯಿಲೆಗಳ ಸಂಕೇತವಾಗಿದೆ, ಅವುಗಳಲ್ಲಿ ಒಂದು ಎಚ್‌ಐವಿ ಏಡ್ಸ್, ಆದ್ದರಿಂದ ಹಠಾತ್ ತೂಕ ನಷ್ಟವನ್ನು ಎಂದಿಗೂ ನಿರ್ಲಕ್ಷಿಸಿ, ಬದಲಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಿಸಿ ಏಕೆಂದರೆ ಸರಿಯಾದ ಮಾಹಿತಿಯೊಂದಿಗೆ, ಈ ಗಂಭೀರ ಕಾಯಿಲೆಯನ್ನು ತಡೆಯಲು ಸಾಧ್ಯವಿದೆ. ಎಚ್‌ಐವಿ ಅಥವಾ ಏಡ್ಸ್ ಕಾರಣಗಳು: ಎಚ್‌ಐವಿ ಅಥವಾ ಏಡ್ಸ್ಗೆ ಹಲವು ಕಾರಣಗಳಿರಬಹುದು, ಆದ್ದರಿಂದ ಅವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದಿರುವುದು ಮುಖ್ಯ. ಅಸುರಕ್ಷಿತ ಲೈಂಗಿಕತೆ ಅನೇಕ ಜನರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರುವುದು. ಎಚ್‌ಐವಿ ಸೋಂಕಿತ ರಕ್ತದ ವರ್ಗಾವಣೆ ಎಚ್‌ಐವಿ ಪೋಷಕರಿಂದ ಅಂದರೆ ಹುಟ್ಟುವಾಗಲೇ ಎಚ್‌ಐವಿ ಹೊಂದಿರುವ ಮಗು ಎಚ್‌ಐವಿ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ, ಅದನ್ನು ತಡೆಗಟ್ಟಲು ಸಾಧ್ಯವಿದೆ,…