ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್ ಅವರಿಗೆ ವಿಚ್ಚೇದನ ನೀಡಿದ್ದರು. ಈ ಮೂಲಕ 13 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ನಿಶ್ಚಿತಾರ್ಥ ಮಾಡಿಕೋಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದ್ದಾರೆ. ಡೀಪ್‌ಫೇಕ್ ಮೂಲಕ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮುಖವನ್ನು ಯಾರದ್ದೋ ಮದುವೆಯ ಫೋಟೊಗೆ ಎಡಿಟ್ ಮಾಡಿ ಶಮಿ ಮತ್ತು ಸಾನಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೋಂಡಿದ್ದಾರೆ ಎಂದು ಟ್ವೀಟರ್ ಎಕ್ಸ್ನಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಈ ಮೂಲಕ ಕೀಳು ಮಟ್ಟದ ಮನೋಭಾವ ತೋರಿದ್ದಾರೆ. ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಡೀಪ್‌ಫೇಕ್ ಫೋಟೊ ಕಂಡ ಕೆಲ…
Author: AIN Author
ನೂರಾರು ಬಾರಿ ಚಾಕುವಿನಿಂದ ಇರಿದು ಆತನ ಕೊಲೆ ಮಾಡಿರುವ ಆಘಾತಕಾರಿ ಪ್ರಕರಣ ವರದಿಯಾಗಿದೆ. ಆದರೂ ಸಹ ತನ್ನ ಪ್ರಿಯಕರನಿಗೆ 108 ಬಾರಿ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಕ್ಯಾಲಿಫೋರ್ನಿಯಾ ಮಹಿಳೆಯನ್ನು ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ. ಇದೇನಿದು ವಿಚಿತ್ರ ಅಂತೀರಾ.. ಕಾರಣ ಹೀಗಿದೆ.. ಅಮೆರಿಕದ ಮಹಿಳೆ ತನ್ನ ಬಾಯ್‌ಫ್ರೆಂಡ್‌ಗೆ ಇರಿದ ಸಂದರ್ಭದಲ್ಲಿ ಗಾಂಜಾ-ಪ್ರೇರಿತ ಮನೋವಿಕಾರ ದಲ್ಲಿದ್ದಳು ಮತ್ತು ಆಕೆಗೆ ತನ್ನ ಕ್ರಿಯೆಗಳ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. 2018 ರಲ್ಲಿ 32 ವರ್ಷದ ಮಹಿಳೆ ಬ್ರೈನ್ ಸ್ಪೆಜ್ಚರ್ ಡ್ರಗ್ಸ್ ತೆಗೆದುಕೊಂಡ ನಶೆಯಲ್ಲಿದ್ದಾಗ ಚಾಡ್ ಒ’ಮೆಲಿಯಾಳನನ್ನು ಇರಿದಿದ್ದರು. ಮತ್ತು ಅನೈಚ್ಛಿಕ ನರಹತ್ಯೆಯ ತಪ್ಪಿತಸ್ಥನೆಂದು ಕಂಡುಬಂದಿತ್ತು. ಈ ಸಂಬಂಧ ಮಂಗಳವಾರ, ಆಕೆಗೆ ಎರಡು ವರ್ಷಗಳ ಶಿಕ್ಷೆ ವಿಧಿಸಲಾಯಿತು ಮತ್ತು 100 ಗಂಟೆಗಳ ಸಮುದಾಯ ಸೇವೆಯನ್ನು ನಿರ್ವಹಿಸಲು ಆದೇಶಿಸಲಾಗಿತ್ತು. ಆದರೆ, ಸುಪೀರಿಯರ್ ಕೋರ್ಟ್ ನ್ಯಾಯಾಧೀಶರಾದ ಡೇವಿಡ್ ವರ್ಲಿ, ಈ ಘಟನೆ ನಡೆದಾಗ ಆರೋಪಿ ಮಹಿಳೆ ಬ್ರೈನ್ ಸ್ಪೆಜ್ಜರ್‌ಗೆ ಆಕೆ…
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆಗೊಂಡಿರುವ ರಾಮಮಂದಿರಕ್ಕೆ ಭವಿಷ್ಯದಲ್ಲಿ ಭೇಟಿ ನೀಡುವುದಾಗಿ ದಕ್ಷಿಣ ಆಫ್ರಿಕಾದಲ್ಲಿರುವ ಭಾರತದ ಸಂಜಾತ ಕೇಶವ್ ಮಹಾರಾಜ್ ತಿಳಿಸಿದ್ದಾರೆ. ಅಲ್ಲದೆ ತಾವು ಬ್ಯಾಟಿಂಗ್ ಮಾಡಲು ಬರುವಾಗ ‘ಆದಿಪುರುಷ್’ ಸಿನಿಮಾದ ‘ರಾಮ್ ಸೀತಾ ರಾಮ್’ ಗೀತೆಯನ್ನು ಪ್ಲೇ ಮಾಡುವ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಭಗವಾನ್ ಶ್ರೀರಾಮ ಮತ್ತು ಆಂಜನೇಯನ ಪರಮ ಭಕ್ತನಾಗಿರುವ ಕೇಶವ್ ಮಹಾರಾಜ್, ದಕ್ಷಿಣ ಆಫ್ರಿಕಾ ತಂಡದೊಂದಿಗೆ ಭಾರತದ ಪ್ರವಾಸ ಕೈಗೊಂಡಾಗ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಅಲ್ಲದೆ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಭಾರತೀಯರಿಗೆ ತಮ್ಮ ಎಕ್ಸ್ ಖಾತೆ ಮೂಲಕ ವಿಶೇಷ ಸಂದೇಶ ಕೋರಿದ್ದರು “ನಾನು ಈಗ ಬಿಡುವಿಲ್ಲದ ಕ್ರಿಕೆಟ್ ಆಡುತ್ತಿರುವುದರಿಂದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಆದರೆ ಭವಿಷ್ಯದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲು ತುಂಬಾ ಸಂತೋಷಪಡುತ್ತೇನೆ” ಎಂದು ದಕ್ಷಿಣ ಆಫ್ರಿಕಾದ ಖ್ಯಾತ ಸ್ಪಿನ್ನರ್ ಹೇಳಿದ್ದಾರೆ. ಖಂಡಿತವಾಗಿಯೂ ಭವಿಷ್ಯದಲ್ಲಿ…
ಬೆಂಗಳೂರು:- ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಅಳವಡಿಸಬೇಕಿದ್ದು, ಎಲ್ಲರೂ ಅದನ್ನು ಅನುಷ್ಠಾನಗೊಳಿಸಬೇಕೆಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಕೈಗಾರಿಕಾ ಮತ್ತು ವಾಣಿಜ್ಯ ಸಂಘ-ಸಂಸ್ಥೆಯ ಪ್ರತಿನಿಧಿಗಳಿಗೆ ತಿಳಿಸಿದರು. ಬೆಂಗಳೂರು ಅಭಿವೃದ್ಧಿ ಹಾಗೂ ನಾಗರಿಕ ಸಮಸ್ಯೆಗಳ ಕುರಿತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ(FKCCI)ಯು ಕೈಗಾರಿಕಾ ಮತ್ತು ವಾಣಿಜ್ಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವ ಕುರಿತು ಈಗಾಗಲೇ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ಗಳಲ್ಲಿನ 40 ಅಡಿ ರಸ್ತೆಗಳಲ್ಲಿರುವ ಮಳಿಗೆಗಳನ್ನು ಸರ್ವೇ ಮಾಡಿ ತಿಳುವಳಿಕೆ ಪತ್ರ ನೀಡಿ ನಾಮಫಲಕಗಳನ್ನು ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ. ಅದರಂತೆ ಈಗಾಗಲೇ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಗ್ರಸ್ಥಾನದಲ್ಲಿ ಅಳವಡಿಸುವ ಕಾರ್ಯ ನಗರದಾದ್ಯಂತ ಸಕ್ರಿಯವಾಗಿ ನಡೆಯುತ್ತಿದ್ದು, ಫೆಬ್ರವರಿ 28 ರೊಳಗಾಗಿ ಎಲ್ಲಾ ಮಳಿಗೆಗಳು ಕನ್ನಡ ನಾಮಫಲಕಗಳನ್ನು…
ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡಿರುವ ಹನುಮಾನ್ ಸಿನಿಮಾ ಇನ್ನೂ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ (OTT) ಸ್ಟ್ರೀಮಿಂಗ್ ಆಗುವ ಕುರಿತಂತೆ ಸುದ್ದಿಯೊಂದು ಬಂದಿದೆ. ಒಪ್ಪಂದ ಪ್ರಕಾರ ಸಿನಿಮಾ ರಿಲೀಸ್ ಆಗಿ ಮೂರೇ ಮೂರು ವಾರದಲ್ಲಿ ಚಿತ್ರ ಒಟಿಟಿಯಲ್ಲಿ ಬರಬೇಕಿತ್ತು. ಸಿನಿಮಾ ಇನ್ನೂ ಥಿಯೇಟರ್ ನಲ್ಲಿ ಇರುವ ಕಾರಣದಿಂದಾಗಿ 55 ದಿನಗಳ ನಂತರ ಚಿತ್ರವನ್ನು ಒಟಿಟಿಯಲ್ಲಿ ತರಲು ನಿರ್ಧರಿಸಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಝೀ 5ನಲ್ಲಿ ಚಿತ್ರವನ್ನು ವೀಕ್ಷಿಸಬಹುದು. ಪ್ರಶಾಂತ್ ವರ್ಮಾ (Prashant Verma) ನಿರ್ದೇಶನದಲ್ಲಿ ಮೂಡಿ ಬಂದಿರುವ ಹನುಮಾನ್ (Hanuman) ಚಿತ್ರ ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ರಿಲೀಸ್ ಆದ 14 ದಿನಕ್ಕೆ 250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾ ತನ್ನ ನಾಗಲೋಟವನ್ನು ಮುಂದುವರೆಸಿದೆ. ಹನುಮಾನ್ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಕಂಡಿರೋ ನಿರ್ದೇಶಕರಿಗೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಹನುಮಾನ್ ಪಾರ್ಟ್ 2 ಮಾಡಲು ಅವರು ಮುಂದೆ ಬಂದಿದ್ದಾರೆ. ಕೇವಲ ಬಾಯಿ…
ಭಾರತದಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಸ್ಯಾಮ್‌ಸಂಗ್ ಮಂಗಳವಾರ ದಿ ಸೆರಿಫ್ ಟಿವಿ ಮತ್ತು 2020 QLED 8K ಟಿವಿ ಲೈನ್ ಅನ್ನು ಬಿಡುಗಡೆ ಮಾಡಿದೆ.ಸೆರಿಫ್ ಮೂರು ಗಾತ್ರಗಳಲ್ಲಿ ಬರಲಿದೆ – 43-ಇಂಚಿನ (1m 08cm), 49-ಇಂಚಿನ (1m 23cm) ಮತ್ತು 55-ಇಂಚಿನ (1m 38cm), ಕ್ರಮವಾಗಿ ರೂ 83,900, ರೂ 1,16,900 ಮತ್ತು ರೂ 1,48,900, ಸ್ಯಾಮ್‌ಸಂಗ್ ಹೇಳಿದೆ. . ಅವುಗಳಲ್ಲಿ, OTT ಪ್ಲಾಟ್‌ಫಾರ್ಮ್‌ಗಳು, ಉತ್ತಮ ವಿಡಿಯೋ ಮತ್ತು ಆಡಿಯೋ ದೃಶ್ಯಗಳು ಸೇರಿವೆ. ಅದರಂತೆ, ಅನೇಕರು ಬಜೆಟ್ ಟಿವಿಗಳನ್ನು ಹುಡುಕುತ್ತಿರುತ್ತಾರೆ. ಈ ಹಿಂದೆ ದುಬಾರಿ ಬೆಲೆಗೆ ಸಿಗುತ್ತಿದ್ದ ಸ್ಮಾರ್ಟ್ ಟಿವಿಗಳು ಕೆಲ ದಿನಗಳಿಂದ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ನೀವು 32 ಇಂಚಿನ ಟಿವಿಗಳ ಮೇಲೆ ಕಣ್ಣಿಟ್ಟಿದ್ದರೆ ಇವು ರೂ. 7000 ರಿಂದ ಪ್ರಾರಂಭವಾಗುತ್ತದೆ. ಇವುಗಳಲ್ಲಿ ಎಲ್ಜಿ, ಸ್ಯಾಮ್‌ಸಂಗ್, ಸೋನಿ, ರೆಡ್ಮಿ ಯಂತಹ ಉನ್ನತ ಬ್ರಾಂಡ್‌ಗಳು ಸೇರಿವೆ Mi (32 ಇಂಚು) A ಸರಣಿ HD ರೆಡಿ ಟಿವಿ: ಈ ಟಿವಿ 60Hz…
ಮಯಾಂಕ್ ದಿಢೀರ್ ಅಸ್ವಸ್ಥರಾಗಲು ಕಾರಣ ಏನೆಂಬುವುದನ್ನು ಇಂಡಿಗೋ ಏರ್‌ಲೈನ್ಸ್ ಸ್ಪಷ್ಟನೆ ನೀಡಿದೆ. ಸೋಮವಾರ ತ್ರಿಪುರ ವಿರುದ್ಧ ಗೆಲುವು ದಾಖಲಿಸಿದ ಕರ್ನಾಟಕ ತಂಡ, ರೈಲ್ವೇಸ್ ವಿರುದ್ಧದ ತನ್ನ ಮುಂದಿನ ಪಂದ್ಯಕ್ಕಾಗಿ ಮಂಗಳವಾರ ಸೂರತ್‌ಗೆ ಪ್ರಯಾಣಿಸಲು ದೆಹಲಿ ವಿಮಾನ ಏರಿತು. ತಂಡದೊಂದಿಗೆ ವಿಮಾನ ಹತ್ತಿದ ಮಯಾಂಕ್ ಅಗರ್ವಾಲ್ ಸೀಟಿನ ಮುಂಭಾಗದಲ್ಲಿದ್ದ ನೀರು ಕುಡಿದಿದ್ದಾರೆ. ತಕ್ಷಣವೇ ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಮಾನದಲ್ಲಿ ಒಂದೆರಡು ಬಾರಿ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೆ ಮಯಾಂಕ್ ಅವರನ್ನು ವಿಮಾನದಿಂದ ಕೆಳಗೆ ಕರೆತಂದು ಅಗರ್ತಲದ ಐಎಲ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು ಕೆಲ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ ಎಂದು ತ್ರಿಪುರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಘಟನೆಯ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಆಗಿಲ್ಲ. ಮಯಾಂಕ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ನಂತರ ಶೀಘ್ರ ಬೆಂಗಳೂರಿಗೆ ಶ್‌ಟಿ ಮಾಡುವ ಸಾಧ್ಯತೆಗಳಿವೆ. ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ವಿಮಾನ…
ಬೆಂಗಳೂರು: ಸ್ಮಾರ್ಟ್‌ಫೋನ್ ಹೆಂಡತಿಗಿಂತ ಇಂಪಾರ್ಟೆಂಟಾ? ಸ್ಮಾರ್ಟ್‌ಫೋನ್ ಗರ್ಲ್’ಫ್ರೆಂಡ್’ಗಿಂತ ಇಂಪಾರ್ಟೆಂಟಾ? ಸ್ಮಾರ್ಟ್‌ಫೋನ್ ಪ್ರಾಣ ಕೊಡೋ ಗೆಳೆಯರಿಗಿಂತ ಇಂಪಾರ್ಟೆಂಟಾ? ಸ್ಮಾರ್ಟ್‌ಫೋನ್ ಜಾಬ್’ಗಿಂತ ಇಂಪಾರ್ಟೆಂಟಾ? ಹೌದು.. ಅಂತಾರೆ ಒಂದಿಷ್ಟು ಜನ.ಒಂದಿಷ್ಟು ಜನರಿಗೆಲ್ಲಾ ಮೊಬೈಲ್ ಸದಾ ಕೈಯಲ್ಲೇ ಇರಬೇಕು. ಒಂದು ಕ್ಷಣ ಇಲ್ಲ ಅಂದರೂ ಚಡಪಡಿಸಿಹೋಗುತ್ತಾರೆ. ಯಾರದೋ ಕಾಲ್.. ಯಾರದೋ ಮೆಸೇಜ್.. ಯಾರದೋ ವಾಟ್ಸಪ್. ಉಫ್, ಬೇಕೋ ಬೇಡವೋ ಮೊಬೈಲ್’ಗೆ ಮಿಡಿಯುತ್ತೆ ಮನ. ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಮೊಬೈಲ್ (Mobile) ಬಳಕೆ ಹೆಚ್ಚಾಗಿದೆ. ಯಾವುದೇ ಟೈಮ್ ಇಲ್ಲದೆ ಏನು ಕೆಲಸ ಅಂತಾ ತಿಳಿಯದೇ ಮೊಬೈಲ್ ನೋಡೊವರ ಸಂಖ್ಯೆ ಹೆಚ್ಚಾಗ್ತಿದೆ. ಬಸ್ಗೆ ಕಾಯುವಾಗ, ರಸ್ತೆ ದಾಟುವಾಗ ಹೀಗೆ ನಿರಂತರ ಮೊಬೈಲ್ ಬಳಕೆ ರಸ್ತೆ ಅಪಘಾತಕ್ಕೆ (Road Accident) ಕಾಣವಾಗ್ತೀದೆ. ಬೆಂಗಳೂರಿನಲ್ಲಿ ನಿತ್ಯ ಲಕ್ಷಂತಾರ ವಾಹನಗಳು ಸಂಚಾರ ಮಾಡ್ತೀದ್ದು ಹತ್ತಾರೂ ಅಪಘಾತಗಳು ಸಂಭವಿಸ್ತಾನೆ ಇರುತ್ತೆ. ಆದರೆ ಈ ಅಘಾತಗಳಿಗೆ ಅತಿಯಾದ ಮೊಬೈಲ್ ಬಳಕೆಯೂ ಕಾರಣವಾಗಿದೆ. ಸ್ಮಾರ್ಟ್‌ಫೋನ್ ಜೋಂಬಿಸ್ ಗೀಳು ಪಾದಚಾರಿಗಳ ಜೀವಕ್ಕೆ ಕುತ್ತು ತರ್ತಿದೆ ಎಂಬ ಬಗ್ಗೆ ವರದಿಯೊಂದರ ಮೂಲಕ…
ಬೆಂಗಳೂರು:- ಇಂದಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಳಿಯ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರ ಸೇವಾವಧಿ ಮುಗಿಯಲಿದೆ. ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈಗಾಗಲೇ 21 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 11 ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಜನವರಿ 31ರಂದೇ ಮುಖ್ಯಮಂತ್ರಿಗಳು 11 ವೈದ್ಯರ ಪೈಕಿ ಒಬ್ಬರನ್ನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಮೈಸೂರು ಜಯದೇವ ಆಸ್ಪತ್ರೆಯ ಎಂ.ಎಸ್ ಸದಾನಂದ ಹಾಗೂ ಡಾ. ದಿನೇಶ್ ಹೆಸರು ರೇಸ್‌ನಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಇತ್ತು. ಅದು 100 ಕ್ಕೆ100 ಆಗಿದೆ. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ. ನಾನು ಇಲ್ಲಿಗೆ ಬಂದಾಗ 300…
ಪ್ರಪಂಚದ ವಿವಿಧ ಭಾಗಗಳಲ್ಲಿ ಶ್ರೀಗಂಧವನ್ನು ಬೆಳೆಯಲಾಗುತ್ತದೆ. ಅದರ ಬೆಳವಣಿಗೆಯ ಸ್ಥಳವು ಅದರ ವೈವಿಧ್ಯತೆಯನ್ನು ನಿರ್ಧರಿಸುತ್ತದೆ. ಹೀಗಿದ್ದೂ ಭಾರತೀಯ ಶ್ರೀಗಂಧವು ಲಭ್ಯವಿರುವ ಅತ್ಯಂತ ಪ್ರಸಿದ್ಧ ಶ್ರೀಗಂಧದ ಮರಗಳಲ್ಲಿ ಒಂದಾಗಿದೆ. ಲಭ್ಯವಿರುವ ಇತರ ರೀತಿಯ ಶ್ರೀಗಂಧದ ಮರಗಳು; ಆಸ್ಟ್ರೇಲಿಯನ್ ಶ್ರೀಗಂಧದ ಮರ, ಹವಾಯಿಯನ್ ಶ್ರೀಗಂಧದ ಮರ, ಕೆಂಪು ಚಂದನ, ಮತ್ತು ಫಿಜಿ ಶ್ರೀಗಂಧದ ಮರ. ಭಾರತೀಯ ಶ್ರೀಗಂಧವನ್ನು ಬಿಳಿ ಶ್ರೀಗಂಧ ಎಂದೂ ಕರೆಯುತ್ತಾರೆ. ಚರ್ಮಕ್ಕೆ ಶ್ರೀಗಂಧದ ಪ್ರಯೋಜನಗಳೇನು ? ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳಿಗೆ ಶ್ರೀಗಂಧ: ಶ್ರೀಗಂಧವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಇದು ಚರ್ಮಕ್ಕೆ (Skin) ಹಾನಿಯಾಗದಂತೆ ತಡೆಯುತ್ತದೆ, ಇದು ಚರ್ಮದ ಮೇಲೆ ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಗುಣಪಡಿಸುತ್ತದೆ. ಶ್ರೀಗಂಧವು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮದ ಟೋನ್ ಅನ್ನು ಸರಿದೂಗಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಕಲೆಗಳಿರುವ ಸ್ಥಳಗಳಿಗೆ ನೀವು ಶ್ರೀಗಂಧವನ್ನು ಅನ್ವಯಿಸಿದಾಗ, ಕಾಲಾನಂತರದಲ್ಲಿ ಅದು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೊಡವೆಗಳಿಗೆ ಶ್ರೀಗಂಧ: ಅದರ ಉರಿಯೂತದ ಗುಣಲಕ್ಷಣಗಳಿಂದಾಗಿ, ಶ್ರೀಗಂಧವು ಮೊಡವೆ…