Author: AIN Author

ಬೆಳಗಾವಿ: ಲಕ್ಷ್ಮಣ  ಸವದಿಯವರು ಬಿಜೆಪಿಗೆ ಮರಳಿ ಬಂದರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಲಕ್ಷ್ಮಣ ಸವದಿ ಬಿಜೆಪಿಗೆ ಸೇರ್ತಾರೆ ಎಂಬ ವಿಚಾರ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಲಕ್ಷ್ಮಣ  ಸವದಿಯವರು ಬಿಜೆಪಿಗೆ ಬರುವ ಕುರಿತು ಈಗಾಗಲೇ ಚರ್ಚೆ ಶುರುವಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಚರ್ಚೆ ಪ್ರಾರಂಭ ಆಗಿದೆ. ನಮ್ಮನ್ನೂ ಕೂಡ ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ. ಸವದಿಯವರನ್ನ ಕರೆತರುವ ಚರ್ಚೆಯಲ್ಲಿ ನಾನು ಕೂಡ ಒಬ್ಬ ಎಂದಿದ್ದಾರೆ. https://ainlivenews.com/if-you-save-%e2%82%b92-per-day-you-will-get-a-pension-of-%e2%82%b936000-every-year-apply-today/ ಸವದಿ ಅವರಿಗೆ ಸ್ಥಾನಮಾನ ಕೊಡುವ ಬಗ್ಗೆ ಮಾತನಾಡಿದ ಅವರು, ಸ್ಥಾನಮಾನಕ್ಕಾಗಿ ಯಾರೂ ಬರುವುದಿಲ್ಲ. ಕಾಂಗ್ರೆಸ್‌ಗೆ ಹೋದಾಗ ಏನು ಸ್ಥಾನಮಾನ ಕೇಳಿ ಹೋಗಿದ್ದರು ಅವರು ಏನು ಕೊಟ್ಟರೊ. ನಮ್ಮ ಪಕ್ಷಕ್ಕೆ ಬಂದರೆ ಏನು ಕೊಡಬೇಕು ಎಂಬುದನ್ನು ನಮ್ಮನ್ನ ಕರೆದು ನಿರ್ಣಯ ಮಾಡ್ತಾರೆ. ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರು ಹೇಳಿದಂತೆ ಗೌರವಯುತವಾಗಿ ಅವರನ್ನ ಬರಮಾಡಿಕೊಳುತ್ತೇವೆ ಎಂದು ಪರೋಕ್ಷವಾಗಿ ಸವದಿಯನ್ನ ಕರೆತರುವ ವಿಚಾರ ಫೈನಲ್ ಹಂತಕ್ಕೆ ತಲುಪಿದೆ…

Read More

ತುಮಕೂರು:- ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರಿನ ಶಿರಾ ಗೇಟ್ ಬಳಿಯಿರುವ KRDL ಇಂಜಿನಿಯರ್​ ಹನುಮಂತರಾಯಪ್ಪ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ಕೊರಟಗೆರೆಯ ಕಚೇರಿ, ಮಿಡಿಗೇಶಿಯ ಫಾರಂ ಹೌಸ್ ಮೇಲೆ ದಾಳಿ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ.

Read More

ಮಂಡ್ಯ:- ಇಲ್ಲಿನ ಲೋಕೋಪಯೋಗಿ ಇಲಾಖೆ ಇಇ ಆಗಿರುವ ಹರ್ಷಾ ಅವರ ಕಚೇರಿ, ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಮನೆ, ಮಂಡ್ಯ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗಳು, ಮಂಡ್ಯದ ಕಚೇರಿ, ಕಲ್ಲಹಳ್ಳಿಯಲ್ಲಿರುವ ಮಾವನ ಮನೆ, ನಾಗಮಂಗಲದಲ್ಲಿರುವ ಫಾರ್ಮ್​ಹೌಸ್​​ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸಜೀತ್ ನೇತೃತ್ವದಲ್ಲಿ ದಾಳಿ ನಡೆದಿದೆ

Read More

ಮಂಡ್ಯ: ಮಾಜಿ ಪ್ರಧಾನಿಯವರ ಮಗನಾದ ಕುಮಾರಸ್ವಾಮಿ ಅವರು ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ ಎಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಜಿ ಸಿಎಂ ಹೆಚ್‌ಡಿಕೆಗೆ ಮಂಡ್ಯ ಎಲ್ಲಾ ರೀತಿಯ ಶಕ್ತಿ ನೀಡಿದೆ. ಈ ಜಿಲ್ಲೆಯ ಜನರು ಅವರಿಗೆ ಸ್ವಂತ ಜಿಲ್ಲೆಗಿಂತ ಹೆಚ್ಚಿನ ಪ್ರೀತಿ, ಮಹತ್ವ ಕೊಟ್ಟಿದ್ದರು. ಆದರೂ ಅವರು ಇಲ್ಲಿನ ಜನರ ನೆಮ್ಮದಿ ಹಾಳು ಮಾಡುವ ಅವಶ್ಯಕತೆ ಇತ್ತಾ? ನಮ್ಮ ಯುವಕರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ. ನನ್ನ ಮೇಲೆ ಅಥವಾ ಸ್ಥಳೀಯ ಶಾಸಕರ ಮೇಲೆ ದ್ವೇಷ ಮಾಡಿ. ಆದರೆ ಜಿಲ್ಲೆಯ ಜನತೆ ಮೇಲೆ ದ್ವೇಷ ಮಾಡಿ ಗಲಭೆ ಮಾಡಿಸಬೇಡಿ ಎಂದಿದ್ದಾರೆ. ನಮ್ಮ ಜಿಲ್ಲೆಯ ಜನ ಸ್ವಾಭಿಮಾನ, ಗೌರವದಲ್ಲಿ ರಾಜ್ಯದಲ್ಲೇ ಮಾದರಿ ಆಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ಬಂದು ಜನರಿಗೆ ಅವಮಾನ ಮಾಡಬೇಡಿ ಎಂದಿದ್ದಾರೆ. ಕುಮಾರಸ್ವಾಮಿ ಸಿಎಂ ಮಾಡಲು ಈ ಜಿಲ್ಲೆ…

Read More

ಹೊಸಪೇಟೆ:- ನಗರದ ಹೊರವಲಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಜೀರೆ ನಿಧನರಾಗಿದ್ದಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ಮುನಿರಾಬಾದ್  ಠಾಣಾ ವ್ಯಾಪ್ತಿಯ ಬೂದಗುಪ್ಪ ಕ್ರಾಸ್ ಬಳಿ ಸಂಚರಿಸುವಾಗ ಅಪಘಾತ ನಡೆದಿದ್ದು, ತೀವ್ರ ಗಾಯಗೊಂಡಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ  ಜಾವ ನಿಧನರಾಗಿದ್ದಾರೆ.

Read More

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಸಾಧನೆಗಳ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ರಾಜ್ಯದಲ್ಲಿ ಎಲ್ಲ 28 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು,  ನರೇಂದ್ರ ಮೋದಿ ಅವರ ಸಾಧನೆಗಳನ್ನು ನೋಡಿ, ಪರಾಮರ್ಶಿಸಿದ ಬಳಿಕವೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಮೋದಿಯವರ ಕೈ ಬಲಪಡಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾಗಿ, ಈ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿಯೊಂದಿಗೆ ಲೋಕಸಭೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

Read More

ರಾಯಚೂರು:- ಸಿವಿಲ್ ನ್ಯಾಯಾಲಯ ಆದೇಶ ಹಿನ್ನೆಲೆ ಎಸಿ ಕಚೇರಿ ಪೀಠೋಪಕರಣ ಜಪ್ತಿ ಮಾಡಿರುವ ಘಟನೆ ರಾಯಚೂರಿನಲ್ಲಿ ಜರುಗಿದೆ. ಜಿಲ್ಲೆ ಮಾನ್ವಿ ತಾಲೂಕಿನ ದದ್ದಲ್ ಏತ ನೀರಾವರಿ ಹಾಗೂ ರಾಯಚೂರು ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದ್ದಕ್ಕೆ ಇಲ್ಲಿನ ಸಿವಿಲ್ ನ್ಯಾಯಾಲಯ ಆದೇಶದ ಮೇರೆಗೆ ಸಹಾಯಕ ಆಯುಕ್ತರ ಕಚೇರಿ ಆಸ್ತಿ ಜಪ್ತಿ ಮಾಡಿಕೊಂಡ ಪ್ರಸಂಗ ಮಂಗಳವಾರ ನಡೆಯಿತು. ತಾಲೂಕಿನ ಮಾನ್ವಿ ದದ್ದಲ್, ಸುಂಕೇಶ್ವರಹಾಳ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರಿಂದ 2008ರಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಐದು ಬಾರಿ ಕಚೇರಿ ಸಾಮಗ್ರಿ ಜಪ್ತಿಗೆ ಆದೇಶ ಮಾಡಿದರೂ ಸಹಾಯಕ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಕೊನೆಗೆ ಸಂತ್ರಸ್ತರ ಪರ ವಕೀಲರು ಹಾಗೂ ರೈತರು ಇಂದು ಎಸಿ ಕಚೇರಿಯ ಸಾಮಗ್ರಿಗಳನ್ನು ಜಪ್ತಿಗೆ ಮುಂದಾದರು. ಇದಕ್ಕೆ ಸಹಾಯಕ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದಲ್ಲದೇ ಆಕ್ರೋಶ ಹೊರಹಾಕಿದರು. ಆದರೂ ಲೆಕ್ಕಿಸದೆ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿಕೊಂಡು ಕಚೇರಿ ಹೊರಭಾಗ ತಂದಿಡಲಾಯಿತು. ಕೊನೆಗೆ ಎಸಿ…

Read More

ವಿಜಯಪುರ:- ವಿಜಯಪುರ ನಗರದ ಜನರಿಗೆ ಸಂಕಷ್ಟ ಬಂದಿದ್ದು, ಸದ್ಯ ನಗರ ಭಾಗದ ಜನರು ವಿಷಾನಿಲ ಉಸಿರಾಡುವ ಸ್ಥಿತಿ ನಿರ್ಮಾಣವಾಗಿದೆ. ವಿಜಯಪುರ ನಗರ ಭಾಗದ ಜನರಿಗೆ ಇದೀಗ ಭಯ ಆವರಿಸಿದೆ. ಕಳೆದ 10 ದಿನದಿಂದ ಇಡೀ ನಗರದ ಅರ್ಧ ಭಾಗದ ಪ್ರದೇಶಗಳಲ್ಲಿ ವಿಷಾನಿಲ ವ್ಯಾಪಿಸಿದೆ. ನಗರದ ಹೊರ ಭಾಗದಲ್ಲಿರೋ ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕದಲ್ಲಿರೋ ಮಿಶ್ರಣವಾಗಿರೋ ಕಸದ ರಾಶಿಗೆ ಬೆಂಕಿ ತಗುಲಿ ವಿಷಾನಿಲ ಹೊರ ಸೂಸುತ್ತಿದೆ. ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕಲ್ಲಿ 15000 ಟನ್ ಸಂಗ್ರಹವಾಗಿರೋ ಮಿಶ್ರಕಸದ ರಾಶಿ ಬಿದ್ದಿದೆ. ಇದಕ್ಕೆ ಪಕ್ಕದಲ್ಲಿರೋ ಬಯೋ ಮೆಡಿಕಲ್ ವೇಸ್ಟ್ ನಿಂದ ಬೆಂಕಿ ಕಸದ ರಾಶಿಗೆ ಹಚ್ಚಿ ಇಲ್ಲಿರೋ ಕಸದ ರಾಶಿ ಹೊತ್ತಿ ಉರಿಯುತ್ತಿದೆ. ಕಸದ ರಾಶಿಯ ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದು ವಿಜಯಪುರ, ಇಂಡಿ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟ ಪಟ್ಟಣ ಸೇರಿದಂತೆ ಇತರೆಡೆ ಸಂಪರ್ಕ ಕಲ್ಪಿಸಿರೋ ರಸ್ತೆಯಲ್ಲಿ ಸಂಚಾರ ಮಾಡದಷ್ಟು ಹೊಗೆ ಆವರಿಸಿದೆ. ನಿತ್ಯ ಸಾವಿರಾರು ವಾಹನಗಳು ವಾಹನ…

Read More

ಬೆಂಗಳೂರು:- ಪೀಣ್ಯ ಫ್ಲೈಓವರ್ ಘನ ವಾಹನ ಸಂಚಾರಕ್ಕೂ ಶೀಘ್ರ ಮುಕ್ತವಾಗಲಿದೆ. ಈ ಸಂಬಂಧ ಶುಕ್ರವಾರ ಅಧಿಕಾರಿಗಳ ಸಭೆ ಜರುಗಲಿದೆ. ಫ್ಲೈಓವರ್​ನ ಮೂರು ವ್ಯಾಪ್ತಿಯಲ್ಲಿರುವ ಪ್ರಿಸ್ಟ್ರೆಸ್ಡ್ ಕೇಬಲ್​​ಗಳು ತುಕ್ಕು ಹಿಡಿದಿರುವುದು ಬೆಳಕಿಗೆ ಬಂದು ಘನ ವಾಹನ ಸಂಚಾರ ಅಸಾಧ್ಯವಾದ ಕಾರಣ ನಿಷೇಧ ನಿರ್ಧಾರ ಕೈಗೊಳ್ಳಲಾಗಿತ್ತು. ಇದು ಸರ್ವೀಸ್ ರಸ್ತೆಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ವರ್ಷ 38.5 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕೇಬಲ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಲು ಮತ್ತು ಫ್ಲೈಓವರ್ ಅನ್ನು ಬಲಪಡಿಸಲು ಕಾಮಗಾರಿ ಆರಂಭಿಸಿತ್ತು. ಫ್ಲೈಓವರ್‌ನಲ್ಲಿ 120 ಸ್ಪ್ಯಾನ್‌ಗಳೊಂದಿಗೆ, ಎನ್‌ಎಚ್‌ಎಐ 240 ಪ್ರಿಸ್ಟ್ರೆಸ್ಡ್ ಕೇಬಲ್‌ಗಳನ್ನು ಸೇರಿಸಿದ್ದು, ಅದನ್ನು ಬಲಪಡಿಸಿದೆ ಲೋಡ್ ಟೆಸ್ಟಿಂಗ್ ಫಲಿತಾಂಶಗಳು ತೃಪ್ತಿಕರವಾಗಿವೆ ಮತ್ತು ಮುಂದಿನ ಅಗತ್ಯ ಕ್ರಮಕ್ಕಾಗಿ ವರದಿಯನ್ನು ಎನ್‌ಎಚ್‌ಎಐ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಚಂದ್ರ ಕಿಶನ್ ಜೆಎಂ ಹೇಳಿದ್ದಾರೆ. ಇವರು ಮೇಲ್ಸೇತುವೆ ಕುರಿತು ರಚಿಸಲಾಗಿರುವ ನಾಲ್ಕು…

Read More

ನವದೆಹಲಿ: ಭಯೋತ್ಪಾದನೆಯನ್ನು ಉತ್ತೇಜಿಸುವ ಮತ್ತು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಭಯೋತ್ಪಾದಕ ಗುಂಪು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಮೇಲೆ ವಿಧಿಸಲಾದ ನಿಷೇಧವನ್ನು ಕೇಂದ್ರ ಸರ್ಕಾರ (Central Govt) 5 ವರ್ಷಗಳವರೆಗೆ ವಿಸ್ತರಿಸಿದೆ. ಈ ಸಂಬಂಧ ಗೃಹ ಸಚಿವ ಅಮಿತ್‌ ಶಾ ತಮ್ಮ ಎಕ್ಸ್‌ನಲ್ಲಿ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯಲ್ಲಿ SIMIಯನ್ನು ಮತ್ತೆ ಮುಂದಿನ 5 ವರ್ಷಗಳ ಅವಧಿಗೆ ‘ಕಾನೂನುಬಾಹಿರ ಸಂಘʼ ಎಂದು ಘೋಷಿಸಲಾಗಿದೆ. ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಲ್ಲಿ ಸಿಮಿ ತೊಡಗಿಸಿಕೊಂಡಿದೆ ಎಂದು ಅಮಿತ್ ಶಾ‌ (Amitshah) ತಿಳಿಸಿದ್ದಾರೆ. ಗೃಹಸಚಿವಾಲಯದ ಅಧಿಸೂಚನೆಯಲ್ಲಿ ಏನಿದೆ?: SIMI ತನ್ನ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರಿಸಿದೆ ಮತ್ತು ಇನ್ನೂ ತಲೆಮರೆಸಿಕೊಂಡಿರುವ ತನ್ನ ಕಾರ್ಯಕರ್ತರನ್ನು ಪುನಃ ಸಂಘಟಿಸುವ ಪ್ರಯತ್ನ ಮಾಡುತ್ತಿದೆ. ಈ ಗುಂಪು ಕೋಮುವಾದ, ಸೌಹಾರ್ದತೆಯನ್ನು ಸೃಷ್ಟಿಸುವ ಮೂಲಕ ಜನರ ಮನಸ್ಸನ್ನು ಕದಡಿಸುವುದರ ಜೊತೆಗೆ ದೇಶ ವಿರೋಧಿ ಭಾವನೆಗಳನ್ನು…

Read More