ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣವನ್ನು ವಿಚಾರಣೆಯನ್ನು ಇಂದು ನಡೆಯಲಿದೆ. ಆದಾಯ ಮೀರಿ ಅಕ್ರಮ ಆಸ್ತಿಗಳಿಗೆ ಪ್ರಕರಣವನ್ನು CBI ತನಿಖೆ ನಡೆಸಲು ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸಮ್ಮತಿ ನೀಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮ್ಮತಿಯನ್ನು ಹಿಂಪಡೆದಿದೆ. ಇದನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಇಂದು ನ್ಯಾ.ಕೆ.ಸೋಮಶೇಖರ್, ನ್ಯಾ. ಉಮೇಶ್ ಎಂ.ಅಡಿಗರ ಅವರಿರುವ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ. 2018ರಲ್ಲಿ ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ಅಗತ್ಯವಿದೆ ಎಂಬ ಕಾರಣಕ್ಕೆ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅಂದಿನ ಸರ್ಕಾರದ ಸಮ್ಮತಿ ಪಡೆದು ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
Author: AIN Author
ಬೆಂಗಳೂರು: ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ (Dr CN Manjunath ಅವರ ಸೇವಾವಧಿ ಇದೇ ಜನವರಿ 31ರಂದು (ಬುಧವಾರ) ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆ (Jayadeva Hospital) ಸಿಬ್ಬಂದಿಯಿಂದ ಮಂಗಳವಾರ (ಜ.30) ಹೃದಯಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಿಬ್ಬಂದಿ ಮಂಜುನಾಥ ಅವರಿಗೆ ಅಭಿನಂದನೆ ಸಲ್ಲಿದರು, ಆರತಿ ಬೆಳಗಿ ಗೌರವಿಸಿದರು. ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈಗಾಗಲೇ 21 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 11 ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಜನವರಿ 31ರಂದೇ ಮುಖ್ಯಮಂತ್ರಿಗಳು (Chief Minister) 11 ವೈದ್ಯರ ಪೈಕಿ ಒಬ್ಬರನ್ನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಮೈಸೂರು ಜಯದೇವ ಆಸ್ಪತ್ರೆಯ ಎಂ.ಎಸ್ ಸದಾನಂದ ಹಾಗೂ ಡಾ. ದಿನೇಶ್ ಹೆಸರು ರೇಸ್‌ನಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಪಿಜಿಗಳು (PG) ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿವೆ. ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟಿಸುತ್ತಿದ್ದಂತೆ ಪಿಜಿ ಅಸೋಸಿಯೇಷನ್ ಹೊಸ ನಿರ್ಧಾರಕ್ಕೆ ಬಂದಿದೆ. ಪೊಲೀಸರಿಗೆ ನೆರವಾಗಲು ಹಾಗೂ ಪಿಜಿಯಲ್ಲಿದ್ದವರ ಸುರಕ್ಷತೆಗೆ ಐಡಿ ಕಾರ್ಡ್ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಪಿಜಿ ನಿವಾಸಿಗಳ ಸುರಕ್ಷತೆ, ಭದ್ರತೆಯ ವಿಚಾರಕ್ಕೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗಿತ್ತು. ಇದೀಗ ಪೊಲೀಸರಿಗೆ ಸಹಾಯಕಾರಿಯಾಗಲು ಪಿಜಿ ಅಸೋಸಿಯೇಷನ್ ಮತ್ತಷ್ಟು ಸ್ಮಾರ್ಟ್ ಪ್ಲ್ಯಾನ್ ಮಾಡಿದೆ. ಪಿಜಿಯಲ್ಲಿ ವಾಸ ಮಾಡುವವರಿಗೆ ಇನ್ಮುಂದೆ ಪಿಜಿ ಅಡ್ಮಿಶನ್‌ನ ಐಡಿ ಕಾರ್ಡ್ ನೀಡಲು ಚಿಂತನೆ ನಡೆಸುತ್ತಿದೆ. ಜೊತೆಗೆ ಫ್ಯಾಮಿಲಿ ಹಾಗೂ ಸ್ನೇಹಿತರ ಫೋನ್ ನಂಬರ್‌ಗಳನ್ನು ಸಂಗ್ರಹಿಸಿಕೊಳ್ಳಲು ಮುಂದಾಗಿದೆ. ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪಾಲಿಕೆ, ಬೆಸ್ಕಾಂ, ಜಲಮಂಡಳಿ ಪ್ರಕಾರ 50 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪೊಲೀಸರ ತನಿಖೆ ಹಾಗೂ ಪಿಜಿ ವಾಸಿಗಳ ಸುರಕ್ಷತೆಯ ನಿಟ್ಟಿನಲ್ಲಿ ಆಯಾ ಪಿಜಿಗಳಲ್ಲಿ ಅಡ್ಮಿಷನ್…
ಬೆಂಗಳೂರು: ಅದೇನೊ ಗಾದೆ ಹೇಳ್ತಾರಲ್ಲ ಇರಲಾರದೇ ಇರುವೆ ಬಿಟ್ಕೊಂಡ್ರು ಅನ್ನೊ ಹಂಗಾಯ್ತು ಈ ಪ್ಯಾಸೆಂಜರ್ ನ ಕಥೆ. ಸುಮ್ಮನೇ ಇದ್ದಿದ್ದರೇ ಇವತ್ತು ಊರು ಸೇರ್ಕೊಂಡು ನೆಮ್ಮದಿಯಾಗಿರುತ್ತಿದ್ದ. ಆತ ಮಾಡಿದ ಒಂದು ಚೇಷ್ಟೆ ಇದೀಗ ಪೊಲೀಸರ ಅತಿಥಿಯಾಗುವಂತೆ ಮಾಡಿದೆ. ಕಳೆದ ಭಾನುವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ (Kempegowda International Airport) ಕೊಚ್ಚಿ ಗೆ ಹೊರಟಿದ್ದ ಯುವಕ ತನ್ನ ಬ್ಯಾಗ್‌ಚೆಕ್ ಮಾಡೋ ವೇಳೆ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಈ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಅಂದಿದ್ದಾನೆ. ಇದೇನಪ್ಪಾ ಅಂತಾ ಪೊಲೀಸರು ಈತನ ಇಡೀ ಲಗೇಜ್ ಜಾಲಾಡಿದ್ದಾರೆ. ಬಾಂಬ್ ಬೆದರಿಕೆ (Bomb Threat) ಹಾಕಿದ ಹಿನ್ನೆಲೆಯಲ್ಲಿ ಆಸಾಮಿಯನ್ನ ಬಂಧಿಸಿ, ಅಪರಾಧ ಹಿನ್ನೆಲೆ ಏನಾದ್ರೂ ಇದೆಯಾ ಅನ್ನೋದನ್ನ ಪ್ರಶ್ನೆ ಮಾಡಿದ್ದಾರೆ. ನಟ ವಿಷ್ಣು ವಿಶಾಲ್ ಅಭಿನಯದ `FIR’ ತಮಿಳು ಸಿನಿಮಾದಲ್ಲೂ ಇದೇ ರೀತಿಯ ಪ್ರಸಂಗ ನಡೆಯುತ್ತದೆ.
ಚಿಕ್ಕಮಗಳೂರು: ತನ್ನ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದ ನರೇಂದ್ರ ಸ್ವಾಮಿ) , ರಾಜಕೀಯವಾಗಿ ನವ್ ಹೀ ಈಸ್ ಸೀಡ್ ಲೆಸ್ ಎಂದು ಮಾಜಿ ಸಚಿವ ಸಿ.ಟಿ. ರವಿ ಟಾಂಗ್ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನರೇಂದ್ರ ಸ್ವಾಮಿ ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿ, ಗಮನ ಸೆಳೆಯುತ್ತಿದ್ದಾರೆ. ನವ್ ಹೀ ಈಸ್ ಸೀಡ್ ಲೆಸ್. ಯಾರು ಅದೇ ರೀತಿ ಇರ್ತಾರೆ, ಅವರು ಮಾತ್ರ ಅಂತಹ ಪದ ಬಳಕೆ ಮಾಡ್ತಾರೆ. ಅವರ ಮಾತಿನ ಧಾಟಿ ನೋಡಿದರೆ ನವ್ ಹೀ ಈಸ್ ಸೀಡ್ ಲೆಸ್. ಆ ಕಾರಣಕ್ಕೆ ಅವರ ಬಾಯಿಂದ ಅಂತಹ ಮಾತು ಬಂದಿದೆ. ಸೀಡ್ ಲೆಸ್ ಅಂದ್ರೆ ಗೊತ್ತಲ್ಲ, ಅದರಲ್ಲಿ ಬೀಜ ಇರಲ್ಲ ಮತ್ತು ಹುಟ್ಟಲ್ಲ. ರಾಜಕೀಯವಾಗಿ ನವ್ ಹೀ ಈಸ್ ಸೀಡ್ ಲೆಸ್. ಅದಕ್ಕೆ ಅವರು ಆ ಪದ ಬಳಸಿದ್ದಾರೆ ಎಂದು ರವಿ ತಿರುಗೇಟು ನೀಡಿದ್ದಾರೆ. https://ainlivenews.com/big-shock-5-free-guarantee-cancellation-kai-mlas-explosive-statement/ ಇದೇ ವೇಳೆ ಜ್ಞಾನವ್ಯಾಪಿ ಮಸೀದಿ ಕುರಿತು ಮಾತನಾಡಿದ ಅವರು, ಜ್ಞಾನವ್ಯಾಪಿ ಮಸೀದಿಯಲ್ಲಿ ದೇವಾಲಯ ಇತ್ತು…
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಭೇಟಿ ಬಗ್ಗೆ ಲಘುವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ಕೊಟ್ಟಿರುವ ಜೆಡಿಎಸ್; ಆ ಪಕ್ಷವನ್ನು ಗೊಸುಂಬೆ, ಊಸರವಳ್ಳಿ ಎಂದು ಜರೆದಿದೆ. ಗೊಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ. ಈ ದೇಶದಲ್ಲಿ ಯಾವುದಾದರೂ ಛದ್ಮವೇಷದಾರಿ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಕುಮಾರಸ್ವಾಮಿ ಅವರು ಹಾಗಲ್ಲ. ಏನಾದರೂ ಹೇಳಬೇಕೆಂದರೆ; ನೇರ, ದಿಟ್ಟ, ನಿಷ್ಠುರ. ಏನೇ ಬಂದರೂ ಎದುರಿಸುವ ಕೆಚ್ಚು ಅವರದ್ದು, ಪಲಾಯನ ಮಾಡುವ ಪೈಕಿ ಅವರಲ್ಲ ಎಂದು ಕಿಡಿಕಾರಿದೆ ಜೆಡಿಎಸ್. RSS ಬಗ್ಗೆ ಕುಮಾರಸ್ವಾಮಿ ಅವರು ಹಿಂದೆ ಮಾತನಾಡಿದ್ದಾರೆ, ಬರೆದಿದ್ದಾರೆ.. ನಿಜ. ಟೀಕೆ ಮಾಡಿದ್ದಾರೆನ್ನುವುದೂ ಹೌದು. ಹಾಗೆಯೇ, ಶ್ರೀ ಕಲ್ಲಡ್ಕ ಪ್ರಭಾಕರ ಭಟ್ಟರು ನಡೆಸುತ್ತಿರುವ ಶ್ರೀರಾಮ ವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ ಅವರು ಏನು ಹೇಳಬೇಕೋ ಅದನ್ನೇ ಹೇಳಿದ್ದಾರೆ. ಕಾಮಾಲೆ ಕಣ್ಣಿನ, ಕುತ್ಸಿತ ಕಿವಿಯ ಕಾಂಗ್ರೆಸ್ ಗೆ ಅದೆಲ್ಲಾ ಗೊತ್ತಾಗುವುದೇ ಇಲ್ಲ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಪ್ರಭಾಕರ ಭಟ್ಟರ ಶಾಲೆಯಲ್ಲಿ, ನಿನ್ನೆ ದಿನ…
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಬಜೆಟ್ ಮಂಡಿಸುತ್ತಿ ದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಇರುವುದರಿಂದ ಇದು ಮಧ್ಯಂತರ ಬಜೆಟ್ ಎಂದು ಪರಿಗಣಿಸ ಲಾಗುತ್ತದೆ. ಅಂದರೆ ಇದು ಇಡೀ ವರ್ಷಕ್ಕೆ ಅನ್ವಯ ಆಗುವುದಿಲ್ಲ. ಚುನಾವಣೆ ಮುಗಿದು ಹೊಸ ಸರ್ಕಾರ ಬಂದು ಹೊಸ ಬಜೆಟ್ ಮಂಡನೆ ಆಗುವವರೆಗೂ ಈ ಮಧ್ಯಂತರ ಬಜೆಟ್ ಹಣಕಾಸು ಬಳಕೆಗೆ ಕೀಲಿ ಒದಗಿಸುತ್ತದೆ. ಬಜೆಟ್ ಮಂಡನೆ ದಿನ ಮತ್ತು ಸಮಯ ಹಿಂದೆಲ್ಲಾ ಫೆಬ್ರುವರಿ ತಿಂಗಳ ಕೊನೆಯ ಕಾರ್ಯದಿನದಂದು ಬಜೆಟ್ ಮಂಡನೆ ಆಗುತ್ತಿತ್ತು. ಬ್ರಿಟಿಷರ ಕಾಲದಿಂದ ಬಂದ ರೂಢಿಯನ್ನೇ ಮುಂದುವರಿಸಲಾಗಿತ್ತು. ಆದರೆ, ಕೆಲ ವರ್ಷಗಳ ಹಿಂದೆ ಬಜೆಟ್ ದಿನವನ್ನು ಫೆಬ್ರುವರಿ 1ಕ್ಕೆ ನಿಗದಿ ಮಾಡಲಾಗಿದೆ. ಏಪ್ರಿಲ್ನಿಂದ ಶುರುವಾಗುವ ಹಣಕಾಸು ವರ್ಷಕ್ಕೆ ಬಜೆಟ್ ಅಂಶಗಳನ್ನು ಅಳವಡಿಸಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಈ ಬಾರಿಯದ್ದು ಮಧ್ಯಂತರ ಬಜೆಟ್ ಆದರೂ ಫೆಬ್ರುವರಿ 1ಕ್ಕೆಯೇ ಇರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬೆಳಗ್ಗೆ 11ಗಂಟೆಗೆ ಜಂಟಿ…
ಬೆಂಗಳೂರು: ಲೋಕಸಭೆಯಲ್ಲಿ ಸೋತರೆ ಗ್ಯಾರಂಟಿ ರದ್ದುಎಂದು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಟ್ವೀಟ್ ಮೂಲಕ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ ತಮ್ಮ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರೇ ಯುದ್ದಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿ ಎನ್ನುವ ರೀತಿ ಆಗಿದೆ ಹಾಗೆ ಪ್ರಧಾನಿ ನರೇಂದ್ರ ಮೋದಿಗೆ ಶರಣಾಗುವ ಮುನ್ಸೂಚನೆ ಕೂಡ ನೀಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ https://ainlivenews.com/big-shock-5-free-guarantee-cancellation-kai-mlas-explosive-statement/ ಕಾಂಗ್ರೆಸ್ ಗ್ಯಾರಂಟಿ ಕೇವಲ ಜನರ ಮತ ಸೆಳೆಯಲು ಸೃಷ್ಟಿಸಿದ ಗಾಳ ಆಗಿದ್ದು ಅವರ ಗ್ಯಾರಂಟಿ ಜನರ ಬದುಕು ರೂಪಿಸುವ ಶಾಶ್ವತ ಯೋಜನೆಗಳಲ್ಲ ಮೋಸ ಎಂದು ಈಗ ಅವರಿಗೂ ಅರ್ಥ ಆಗುತ್ತಿದೆ ಹಾಗೆ ಭಾರತೀಯರ, ಕನ್ನಡಿಗರ ವಿಶ್ವಾಸ, ನಂಬಿಕೆ ಮೋದಿ ಗ್ಯಾರಂಟಿ ಮೇಲೆ ಅಷ್ಟೇ ಕಾಂಗ್ರೆಸ್ಸಿನ ಗ್ಯಾರಂಟಿ ಮೇಲೆ ಜನ ನಂಬಿಕೆ ಇಟ್ಟುಕೊಂಡಿಲ್ಲ ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ವಿರುದ್ದ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಂಚಿ: ಜಾರ್ಖಂಡ್ ರಾಜಕೀಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೀತಿದೆ. ಭೂಹಗರಣದಲ್ಲಿ ಸಿಲುಕಿರೋ ಸಿಎಂ ಹೇಮಂತ್ ಸೋರೆನ್ ಬಂಧನ ಭೀತಿ ಎದುರಿಸ್ತಿದ್ದಾರೆ. ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ವಿಚಾರಣೆಗೆ ಧಾವಿಸಿದ್ದ ಸಂದರ್ಭದಲ್ಲಿ ಅಧಿಕೃತ ನಿವಾಸ ತೊರೆದಿದ್ದ ಸಿಎಂ ಹೇಮಂತ್ ಸೋರೆನ್ 30 ಗಂಟೆಗಳ ಕಾಲ ಯಾರ ಕೈಗೂ ಸಿಕ್ಕಿರಲಿಲ್ಲ. ಈ ಸಂಬಂಧ ಸ್ವತಃ ರಾಜ್ಯಪಾಲರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಬಿಜೆಪಿಗರಂತೂ (BJP) ಸಿಎಂ ಎಸ್ಕೇಪ್ ಆಗಿದ್ದಾರೆ. ರಣಹೇಡಿ ಸಿಎಂ ಎಂದು ಲೇವಡಿ ಮಾಡಿದ್ರು. ಸಿಎಂ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ 11ಸಾವಿರ ನಗದು ಬಹುಮಾನ ಎಂದು ಮಾಜಿ ಸಿಎಂ ಬಾಬುಬಾಲ್ ಮರಂಡಿ ಪ್ರಕಟಣೆ ಹೊರಡಿಸಿದ್ರು. ಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿಗಳು ಕೂಡ ಸಲ್ಲಿಕೆ ಆದವು. https://ainlivenews.com/big-shock-5-free-guarantee-cancellation-kai-mlas-explosive-statement/ ಕೊನೆಗೆ ಮಂಗಳವಾರ ಮಧ್ಯಾಹ್ನ ಸಾರ್ವಜನಿಕವಾಗಿ ಕಾಣಿಸಿಕೊಂಡ ಹೇಮಂತ್ ಸೋರೆನ್, ಪಕ್ಷದ ಶಾಸಕರ ಜೊತೆ ತುರ್ತು ಸಭೆ ನಡೆಸಿದ್ರು. ಈ ಸಭೆಯಲ್ಲಿ ಸೋರೆನ್ ಪತ್ನಿ ಕಲ್ಪನಾ ಕೂಡ ಇದ್ದರು. ಹೀಗಾಗಿ ಹೇಮಂತ್ ಸೋರೆನ್ ತಮ್ಮ ಪತ್ನಿಯನ್ನು ಸಿಎಂ…
ಬೆಂಗಳೂರು: ಹೊಟೇಲ್ ಬಳಿ ಯುವತಿಯನ್ನ ಟಚ್ ಮಾಡಿ ವಿಕೃತಿ ಮೆರೆದಿದ್ದ ಆರೋಪಿಯನ್ನ ವಿಜಯನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಗರದ ಹಂಪಿನಗರ ನಿವಾಸಿ ಚಂದನ್ ಬಂಧಿತ ಆರೋಪಿಯಾಗಿದ್ದು ಗ್ಯಾಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಚಂದನ್ ಪೊಲೀಸರ ವಿಚಾರಣೆ ವೇಳೆ ಕಿಡಿಗೇಡಿಗಳ ಸವಾಲ್ ಸಿಕ್ರೇಟ್ ಬೆಳಕಿಗೆ ಯುವತಿಯನ್ನ ಟಚ್ ಮಾಡಲು ಸವಾಲ್ ಹಾಕಿದ್ದನಂತೆ ಇನ್ನೊಬ್ಬ ಯುವಕ ಡಿಸೆಂಬರ್ 30ರಂದು ಮೂವರು ಕಾಮುಕರು ಹೋಟೆಲ್ಗೆ ಬರುವ ಯುವತಿಯರು, ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೇಕು ಬೇಕು ಅಂತಲೇ ಟಚ್ ಮಾಡಿ ವಿಕೃತಿ ಮೆರೆಯುತ್ತಿದ್ದದ್ದು ಪತ್ತೆಯಾಗಿದೆ. ಬೇಕು ಬೇಕಂತಲೇ ಯುವತಿಯನ್ನು ಟಚ್ ಮಾಡಿ ವಿಕೃತಿ ಮೆರೆದ ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿಯನ್ನ ಟಚ್ ಮಾಡೋ ಮೊದಲು ಮೂವರು ಕಾಮುಕರು ಪ್ಲಾನ್ ಮಾಡಿಕೊಂಡಿದ್ದು ಒಬ್ಬ ಟಚ್ ಮಾಡೋ ಉದ್ದೇಶದಿಂದ ಹೋದ್ರೆ, ಮತ್ತಿಬ್ಬರು ವಾಚ್ ಮಾಡ್ತಾರೆ. ಬಳಿಕ ಏನಾದ್ರು ಗಲಾಟೆಯಾದ್ರೆ ಏನು ತಪ್ಪಿಲ್ಲ ಎಂಬಂತೆ ಎಸ್ಕೇಪ್ ಆಗ್ತಾರೆ. ಇದೇ ರೀತಿ ವಿಜಯನಗರದ ನಮ್ಮೂಟ ಹೋಟೆಲ್ ಬಳಿ ಯುವತಿಯನ್ನು…