ಕಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ನಟ, ನಿರ್ದೇಶಕ ಅನೀಶ್ (Anish Tejaswar) ರೋಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ‘ಆರಾಮ್ ಅರವಿಂದ್ ಸ್ವಾಮಿ’ಆಗಿ ತೆರೆ ಮೇಲೆ ನಯಾ ಅವತಾರದಲ್ಲಿ ಬರಲು ರೆಡಿಯಾಗಿರುವ ಅವರು, ಧಿಡೀರನೇ ಟಾಲಿವುಡ್ ಮೆಗಾ ಸ್ಟಾರ್ ಚಿರಜೀವಿ (Megastar Chiranjeevi) ಜೊತೆ ಪ್ರತ್ಯಕ್ಷರಾಗಿದ್ದಾರೆ. ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟ ಅನೀಶ್ ಭೇಟಿಯಾಗಿದ್ದಾರೆ (Meets), ಇಂದು ಚಿರು ಹೈದ್ರಾಬಾದ್ ನಿವಾಸದಲ್ಲಿ ಭೇಟಿಯಾಗಿರುವ ಅವರು, ಮೆಗಾಸ್ಟಾರ್ ಗೆ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಬಹುನಿರೀಕ್ಷಿತ ಆರಾಮ್ ಅರವಿಂದ ಸ್ವಾಮಿ ಚಿತ್ರದ ಕಂಟೆಂಟ್ ತೋರಿಸಿದ್ದಾರೆ. ಸಿನಿಮಾದ ಕಂಟೆಂಟ್ ನೋಡಿ ಮೆಚ್ಚಿಕೊಂಡ ಚಿರಂಜೀವಿ ಅನೀಶ್ ಚಿತ್ರಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಅನೀಶ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದ ಆರಾಮ್ ಅರವಿಂದ ಸ್ವಾಮಿ ಟೈಟಲ್ ಟ್ರ್ಯಾಕ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯ ಮ್ಯೂಸಿಕ್, ನಾಗಾರ್ಜುನ್ ಶರ್ಮಾ…
Author: AIN Author
ಬಿಗ್ ಬಾಸ್ ಕನ್ನಡದ (Bigg Boss Kannada 10) ಈ ಸೀಸನ್‌ನಲ್ಲಿ ಅತ್ಯಂತ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿರುವ ಸ್ಪರ್ಧಿ ವರ್ತೂರು ಸಂತೋಷ್. ಕೆಲವು ಕಹಿ ಘಟನೆಗಳು ನಡೆದಾಗಲೂ, ಮತ್ತೆ ಅದರ ನೋವಿನಿಂದ ಹೊರಬಂದು ಆಡಿದ ವರ್ತೂರು (Varthur Santhosh) ಅವರು 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜಿಯೋ ಸಿನಿಮಾ ನಡೆಸಿದ ಸಂದರ್ಶನದಲ್ಲಿ ಅವರು ಆಡಿದ ಮಾತುಗಳು ಹೀಗಿವೆ ನಮಸ್ಕಾರ ನನ್ನ ಹೆಸರು ಸಂತೋಷ್ ಕುಮಾರ್. ವರ್ತೂರು ಸಂತೋಷ್ ಮತ್ತು ಹಳ್ಳಿಕಾರ್ ಸಂತೋಷ್ ಅಂತ ಕರೀತಾರೆ. ನನಗಂತೂ ರಿಯಾಲಿಟಿ ಶೋಗಳ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಬಿಗ್ ಬಾಸ್ ಅಂದರೆ ವ್ಯಕ್ತಿತ್ವದ ಆಟ. ಅಂದರೆ ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ತೋರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಒಂದು ರಿಯಾಲಿಟಿ ಶೋ ಕಂಪ್ಲೀಟ್ ಆಗುವುದು ಡೇ ಒಂದರಿಂದ ಲಾಸ್ಟ್ ವೀಕ್‌ವರೆಗೆ ಇರುವುದು. ವೀಕೆಂಡ್‌ನಲ್ಲಿ ಎಲಿಮಿನೇಟ್ ಆಗುವುದು, ಮಿಡ್ ವೀಕ್ ಎಲಿಮಿನೇಟ್ ಆಗುವುದೆಲ್ಲ ಇನ್ನೊಂದು ರೀತಿ. ಆದರೆ ಇಡೀ ಸೀಸನ್ ಕಂಪ್ಲೀಟ್ ಮಾಡುವುದು ಬೆರಳೆಣಿಕೆಯಷ್ಟು…
ದಿಟ್ಟ ಹುಡುಗಿ, ಗಟ್ಟಿ ವ್ಯಕ್ತಿತ್ವದ ಸಂಗೀತಾ ಶೃಂಗೇರಿ (Sangeetha) ಬಿಗ್‌ಬಾಸ್ (Bigg Boss Kannada) ಈ ಸೀಸನ್‌ನ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮನೆಯೊಳಗೆ ಕಾಣಿಸುತ್ತಿದ್ದ ಹಾಗೆಯೇ ಹೊರಗೂ ಅವರದ್ದು ನೇರ ಮಾತು, ದಿಟ್ಟ ವ್ಯಕ್ತಿತ್ವ. ಜಿಯೊಸಿನಿಮಾಗೆ ಅವರು ನೀಡಿದ ಸಂದರ್ಶನದಲ್ಲಿಯೂ ಆ ನೇರವಂತಿಕೆಯ ಕಿಡಿ ಕಾಣಿಸುತ್ತದೆ. ಅವರ ಜೊತೆಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ತುಂಬಾ ಅಂದ್ರೆ ತುಂಬ ಖುಷಿಯಾಗ್ತಿದೆ. ಬಿಗ್‌ಬಾಸ್ ಕನ್ನಡ 10ನೇ ಸೀಸನ್ ಸೆಕೆಂಡ್ ರನ್ನರ್ ಅಪ್ ನಾನು. ಇಲ್ಲಿವರೆಗೂ ನನ್ನನೋಡ್ತಾನೇ ಬಂದಿದೀರಾ… ಇನ್ಮುಂದೆ ನನ್ನ ಲೈವ್ ನೋಡಕ್ಕಾಗಲ್ಲ. ಹಾಗಾಗಿ ನನ್ನನ್ನು ನೂರ ಹನ್ನೆರಡು ದಿನಗಳವರೆಗೆ ನೇರವಾಗಿ ತೋರಿಸಿ, ಎಲ್ಲಜನರ ಜೊತೆಗೆ ಸಂಪರ್ಕದಲ್ಲಿ ಇರಿಸಿದ್ದಕ್ಕೆ ನಾನು ಜಿಯೊಸಿನಿಮಾಗೆ ಥ್ಯಾಂಕ್ಸ್ ಹೇಳಲೇಬೇಕು. ಈ ಸಲ ಒಂದು ಹೊಸ ಅನಭವ ಇತ್ತು. ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಿದ್ದರು, ಐದಲ್ಲ. ಆರರಿಂದ ಟಾಪ್ 5 ಸೆಲೆಕ್ಟ್ ಆದಾಗಲೂ ಸಾಕಷ್ಟು ಎಕ್ಸೈಟ್‌ಮೆಂಟ್ ಇತ್ತು. ನರ್ವಸ್‌ನೆಸ್ ಕೂಡ ಇತ್ತು. 4ರಿಂದ 3ಬಂದ ನಂತರ ಸುದೀಪ್…
ಬೆಂಗಳೂರು: ಬಡವರ ಪಾಲಿನ ಆಶಾಕಿರಣ ಡಾ.ಸಿ.ಎನ್.ಮಂಜುನಾಥ್ (CN Manjunath) ಅವರಿಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಮನವಿ ಮಾಡಿದ್ದಾರೆ. ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಮಂಜುನಾಥ್ ಅವರು ಇಂದು (ಬುಧವಾರ) ನಿವೃತ್ತರಾಗಲಿದ್ದಾರೆ. ಅವರ ಸಾಧನೆ ಸ್ಮರಿಸಿರುವ ಆರ್.ಅಶೋಕ್ ಸೋಷಿಯಲ್ ಮೀಡಿಯಾದ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತರಾಗುತ್ತಿರುವ ನಾಡಿನ ಪ್ರಖ್ಯಾತ ವೈದ್ಯರಾದ ಡಾ.ಸಿ.ಎನ್.ಮಂಜುನಾಥ್ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಮನಸಾರೆ ಶುಭ ಹಾರೈಸುತ್ತೇನೆ ಎಂದಿದ್ದಾರೆ. ಬಡರೋಗಿಗಳ ಪಾಲಿನ ಆಶಾಕಿರಣವಾಗಿ “ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್” ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ಕೊಟ್ಟ ಡಾ.ಮಂಜುನಾಥ್ ಅವರು ಬಡವರ ಪಾಲಿನ ಧನ್ವಂತರಿ ಅಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದ್ದಾರೆ.
ವಿಜಯಪುರ: ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ವಿಜಯಪುರ ಡಿಡಿಪಿಐ ಹಾಗೂ ವಿಜಯಪುರ ಡಯಟ್‌ನ ಹಿರಿಯ ಉಪನ್ಯಾಸಕರಿಬ್ಬರನ್ನು ಅಮಾನತು ಮಾಡಲಾಗಿದೆ. ಐಇಡಿಎಸ್‌ಎಸ್ ಯೋಜನೆ ಅನುಷ್ಠಾನ ಮಾಡುವಲ್ಲಿ ಗಂಭೀರ ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಅಮಾನತು ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊಡಿಸಲಾಗಿದೆ. ವಿಜಯಪುರ ಡಿಡಿಪಿಐ ಎನ್‌ಹೆಚ್ ನಾಗೂರ, ವಿಜಯಪುರ ಡಯಟ್ ಹಿರಿಯ ಉಪನ್ಯಾಸಕರಾದ ಎಸ್‌ಎ ಮುಜಾವರ, ಎಎಸ್ ಹತ್ತಳ್ಳಿ ಅಮಾನತು ಆದ ಅಧಿಕಾರಿಗಳು. 2009-10 ಹಾಗೂ 2011-12 ರಲ್ಲಿ ಐಇಡಿಎಸ್‌ಎಸ್ ಯೋಜನೆ ಅನುದಾನ ದುರುಪಯೋಗ ಮಾಡಿರೋ ಆರೋಪ ಇವರ ಮೇಲೆ ಇದೆ. https://ainlivenews.com/big-shock-5-free-guarantee-cancellation-kai-mlas-explosive-statement/ ಇವರು ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದಾರೆ. ನಿಯಮ ಬಾಹಿರವಾಗಿ ಅಸ್ತಿತ್ವದಲ್ಲಿ ಇರದ ಎನ್‌ಜಿಓಗಳಿಗೆ ಹಣ ಬಿಡುಗಡೆ ಮಾಡಿರೋ ಆರೋಪ ಇದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅವರಿಂದ ಅಮಾನತು ಆದೇಶ ಮಾಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪರಿಂದ ಅಮಾನತು ಆದೇಶ ಮಾಡಲಾಗಿದೆ.
ಬೆಂಗಳೂರು : ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆಗೆ ಮತ್ತು ಸಂವಿಧಾನಕ್ಕೆ ಪೂರ್ತಿ ಬದ್ದರಾಗಿರಬೇಕು: ಇಲ್ಲದಿದ್ದರೆ ಅಂಥವರಿಗೆ ಇಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಎಚ್ಚರಿಕೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮೊಟ್ಟ ಮೊದಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಆರಂಭದಲ್ಲಿ ಈ ಸೂಚನೆಯನ್ನು ಮುಖ್ಯಮಂತ್ರಿ ನೀಡಿದರು. ನಿಮ್ಮ ಅನುಭವಗಳು ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ ಎಂದರು. ಸಭೆಯ ಆರಂಭದಲ್ಲಿ ಮುಖ್ಯಮಂತ್ರಿಗಳು ನೀಡಿದ ಇತರೆ ಸೂಚನೆಗಳ ಹೈಲೈಟ್ಸ್.. ಸರ್ಕಾರ ಬಂದು 8 ತಿಂಗಳಾಗಿದೆ. DC, CEO ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿ 3-4 ತಿಂಗಳಾಗಿದೆ. ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ ಎನ್ನುವ ಮಾಹಿತಿಗಳನ್ನು ಸಭೆಗೆ ನೀಡಬೇಕು ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವಲ್ಲಿ ನಿಮ್ಮಗಳ…
ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಹತ್ತು ವರ್ಷ ಆಯ್ತು.ಆದರೆ ಇನ್ನೂ ಚಾಲಕ ರಹಿತ ಟ್ರೈನ್ ಹಳಿಗೆ ಬಂದಿಲ್ಲ..ಬೇರೆ ಬೇರೆ ದೇಶಗಳಲ್ಲಿ ಈಗಾಗಲೇ ಚಾಲಕನಿಲ್ಲದೆ ಸ್ವಯಂಚಾಲಿತ ಟ್ರೈನ್ ಓಡುತ್ತದೆ.ಇದೇ ಮಾದರಿಯಲ್ಲಿ ಬೆಂಗಳೂರು ಮೆಟ್ರೋದಲ್ಲೂ ಚಾಲಕ ರಹಿತ ಮೆಟ್ರೋ ಓಡಿಸಲು ಮೆಟ್ರೋ ನಿಗಮ ಮುಂದಾಗಿದ್ದು,ಇದಕ್ಕೆ ಅಂತ ಎಲ್ಲಾ ರೀತಿಯ ಸಿದ್ದತೆಗಳು ಆರಂಭವಾಗಿವೆ.ಹಾಗಾದರೆ ಯಾವತ್ತಿನಿಂದ ಡ್ರೈವರ್ ಲೆಸ್ ಟ್ರೈನ್ ಓಡುತ್ತೆ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿಯಲ್ಲಿ. ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಒಂದು ದಶಕ ಕಳೆದಿದೆ.ಈಗಾಗಲೇ ನಗರದ ನಾಲ್ಕು ದಿಕ್ಕಿನಲ್ಲಿ ಮೆಟ್ರೋ ಓಡಾಟ ನಡೆಸುತ್ತಿದ್ದು, ಜನ ಕೂಡ ಸಿಕ್ಕಪಟ್ಟೆ ಪಿಧಾ ಆಗಿದ್ದಾರೆ.ಸದ್ಯ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಚಾಲಕರ ಮೂಲಕ ಮೆಟ್ರೋ ರನ್ ಮಾಡಲಾಗ್ತಿದೆ.ಆದ್ರೆ ಚಾಲಕ ಮೂಲಕ ಓಡುತ್ತಿರೋ ಮೆಟ್ರೋ ಚಾಲಕನ ತಪ್ಪು ಗಳಿಂದ ಆಗಾಗ ಸ್ಥಗಿತವಾಗ್ತಿದೆ.ಹೀಗಾಗಿ ಇದೀಗ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ಮುಂದಾಗಿದೆ. ಟ್ರೈನ್ನ್ನ ಕಾರ್ಯಾಚರಣೆಗೊಳಿಸಲು ಈಗಾಗಲೇ ಸಕಲ ಸಿದ್ದತೆ ನಡೆದಿದೆ.ಬೇರೆ ದೇಶಗಳಲ್ಲಿ ಚಾಲಕನಿಲ್ಲದೆ ಸ್ವಯಂಚಾಲಿತವಾಗಿ…
ನವದೆಹಲಿ: ಇಂದಿನಿಂದ ಹೊಸ ಸಂಸತ್ ಭವನದಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೊಸ ಸಂಸತ್‌ನಲ್ಲಿ ನನ್ನ ಮೊದಲ ಭಾಷಣ ಎಂದು ಸ್ಮರಿಸಿದ್ದಾರೆ. ಇಂದಿನಿಂದ ಬಜೆಟ್ ಅಧಿವೇಶನ ಹಿನ್ನೆಲೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದರು, ಹೊಸ ಸಂಸತ್ ‘ಏಕ ಭಾರತ್ ಶ್ರೇಷ್ಠ ಭಾರತ’ದ ಪರಿಕಲ್ಪನೆ ಇದೆ. ಭಾರತದ ಭವಿಷ್ಯದ ಕನಸುಗಳಿವೆ, ನಮ್ಮ ಸಂಸ್ಕೃತಿಗಳಿವೆ. ಇಲ್ಲಿ ಭಾರತದ ಉಜ್ವಲ ಭವಿಷ್ಯ ನಿರ್ಮಾಣವಾಗಲಿದೆ ಎಂದು ಭಾವಿಸುತ್ತೇನೆ. ಎಲ್ಲ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಕರ್ತವ್ಯ ಪಥದಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಾಪಿಸಿದೆ. ಪ್ರಧಾನಮಂತ್ರಿಗಳ ಮ್ಯೂಸಿಯಂ ಸ್ಥಾಪಿಸಿದೆ. ಬಿರ್ಸಾ ಮುಂಡಾ ಜನ್ಮ ದಿನಕ್ಕೆ ವಿಶೇಷ ಗೌರವ ನೀಡಿದೆ. ಭಾರತದ ಚಂದ್ರನ ದಕ್ಷಿಣ ಧ್ರುವದಲ್ಲಿ ಧ್ವಜ ಹಾರಿಸಿದ ಮೊದಲ ದೇಶವಾಗಿದೆ. ಸೂರ್ಯನತ್ತ ಉಪಗ್ರಹ ಕಳುಹಿಸಿದೆ. ಏಷ್ಯನ್ ಗೇಮ್ಸ್‌ನಲ್ಲಿ 100 ಕ್ಕೂ ಅಧಿಕ ಪದಕ ಗಳಿಸಿದೆ. ಅಮೃತ್ ಭಾರತ್ ರೈಲ್ವೆ ಆರಂಭವಾಗಿದೆ. ಭಾರತದ ಏರ್…
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲೇ ದಾಖಲೆ ಬರೆದ ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) 2024ರ ಐಪಿಎಲ್ ಟೂರ್ನಿಯನ್ನೇ ಎದುರು ನೋಡುತ್ತಿದ್ದಾರಂತೆ. ಈ ವಿಷಯವನ್ನು ಸಂದರ್ಶನವೊಂದರಲ್ಲಿ ತಾವೇ ಖುದ್ದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಆರ್‌ಸಿಬಿ ತಂಡದಲ್ಲಿದ್ದಾಗ ವಿರಾಟ್ ಕೊಹ್ಲಿ ಜೊತೆಗಿನ ನೆನಪುಗಳನ್ನ ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಟಾರ್ಕ್, ನಾನು RCB ಪ್ರವೇಶಿಸಿದಾಗ ಕೊಹ್ಲಿ (Virat Kohli) ಟೀಂ ಕ್ಯಾಪ್ಟನ್ ಆಗಿದ್ದರು. ಆಗಲೇ ನಾನು ಅವರನ್ನು ಸರಿಯಾಗಿ ತಿಳಿದುಕೊಂಡೆ. ಮೈದಾನದ ಹೊರಗೆ ಮತ್ತು ಮೈದಾನದ ಆಚೆ ವಿಭಿನ್ನ ವ್ಯಕ್ತಿತ್ವ ಅವರದ್ದು. ಈಗಲೂ ಅವರನ್ನು ಹೆಚ್ಚು ನೆನಪಿಸಿಕೊಳ್ತೇನೆ ಎಂದಿದ್ದಾರೆ. 2022ರ ಐಪಿಎಲ್ ಟೂರ್ನಿಗೆ ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕ್ರಿಸ್‌ಮೋರಿಸ್ ತನಗಿಂತಲೂ ಹೆಚ್ಚು ಬೆಲೆಗೆ ಖರೀದಿಯಾಗಿರುವ ಬಗ್ಗೆ ಮಾತನಾಡಿದ್ದಾರೆ. ಸ್ಟಾರ್ಕ್, ತನ್ನ ಸಾಮರ್ಥ್ಯದಿಂದ ಇದನ್ನ ಸಾಧ್ಯವಾಗಿಸಿಕೊಂಡಿದ್ದಾರೆ. ಇತರ ಕ್ರೀಡೆಗಳೊಂದಿಗೆ ಕ್ರಿಕೆಟ್‌ನಲ್ಲೂ ವಿಶ್ವದ ಅತ್ಯುತ್ತಮ ಆಟಗಾರರಿಗೆ ಹೆಚ್ಚಿನ ಸಂಭಾವನೆ ನೀಡುತ್ತಿರುವುದು ಅದ್ಭುತವಾಗಿದೆ. ಇದು ಸಾಧನೆಯಾದರೂ ಹೆಚ್ಚುವರಿ ಒತ್ತಡ ತರುತ್ತದೆ. ಆದ್ರೆ…
ವಿಮಾನದಲ್ಲಿ ಸೀಟಿನ ಮುಂಭಾಗ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥರಾದ ಕಾರಣ ಕರ್ನಾಟಕದ ರಣಜಿ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಬಿಗ್ಸ್ ಅಪ್ಡೇಟ್ ಹೊರಬಿದ್ದಿದೆ ಅಗರ್ತಲಾ ಐಎಲ್‌ಎಸ್ ಆಸ್ಪತ್ರೆ (ILS Hospital) ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಮಯಾಂಕ್ ಅಗರ್ವಾಲ್, ಸದ್ಯ ವೈದ್ಯಕೀಯವಾಗಿ ಸ್ಥಿರವಾಗಿದ್ದಾರೆ. ಅವರನ್ನು ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ ಮಯಾಂಕ್‌ಗೆ ಏನಾಗಿತ್ತು? ಕರ್ನಾಟಕ ರಣಜಿ ತಂಡದೊಂದಿಗೆ ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಅಗರ್ವಾಲ್ ಪ್ರಯಾಣ ಬೆಳೆಸಿದ್ದರು. ವಿಮಾನದಲ್ಲಿ ಕುಳಿತಿದ್ದ ಮಯಾಂಕ್, ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದರು. ನೀರು ಕುಡಿಯುತ್ತಿದ್ದಂತೆ ಮಯಾಂಕ್ ನಾಲಿಗೆ, ಬಾಯಿಗೆ ಸುಟ್ಟ ಅನುಭವವಾಗಿದೆ. ಪರಿಣಾಮ ಅವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ತ್ರಿಪುರಾ ವಿರುದ್ಧ ಸೋಮವಾರ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯಕ್ಕಾಗಿ ಸೂರತ್‌ಗೆ…