Author: AIN Author

ಬದುಕು, ರಂಗೋಲಿ ಸೀರಿಯಲ್ ಸೇರಿದಂತೆ ದರ್ಶನ್, ಸುದೀಪ್ (Sudeep) ನಟನೆಯ ಸಿನಿಮಾಗಳಲ್ಲಿ ನಟಿಸಿದ್ದ ಸಿರಿ ಬಿಗ್ ಬಾಸ್ ಮನೆಯಿಂದ 12ನೇ ವಾರ ಎಲಿಮಿನೇಟ್ ಆದ ಬೆನ್ನಲ್ಲೇ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಕಳೆದ ಭಾನುವಾರ (ಡಿ.31) ಔಟ್ ಆಗಿದ್ದ ಸಿರಿ (Siri) ಈಗ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/bbks10-is-this-issue-creating-a-rift-between-sangeeta-and-pratap/ ವಿಡಿಯೋ ಶೇರ್ ಮಾಡಿ ಬಿಗ್ ಬಾಸ್ ಶೋನ (Bigg Boss Kannada 10) ಅನುಭವ ಶೇರ್ ಮಾಡಿದ್ದಾರೆ. ಬಿಗ್ ಬಾಸ್‌ಗೆ (Bigg Boss) ಹೋಗುವುದಕ್ಕೂ ಮುನ್ನ ಸಾಕಷ್ಟು ಯೋಚನೆ ಮಾಡಿದೆ. ಅಲ್ಲಿ ಹೋಗಿ ಹೇಗೆ ಇರುವುದು, ಏನು ಮಾಡುವುದು, ನಾನು ಇರುವುದಕ್ಕೆ ಸಾಧ್ಯನಾ ಎಂಬೆಲ್ಲಾ ವಿಚಾರವಾಗಿ ಯೋಚನೆ ಮಾಡಿದೆ. ಆದರೂ ಧೈರ್ಯ ಮಾಡಿ ಬಿಗ್ ಬಾಸ್ ಮನೆಗೆ ಹೋದೆ. ಅಲ್ಲಿ ಸಾಕಷ್ಟು ಕಲಿತೆ. ಅಲ್ಲಿಂದ ಹೊರಗೆ ಬಂದ ಮೇಲೆ ಯೋಚನೆ ಮಾಡಿದೆ. ಬಿಗ್ ಬಾಸ್ ಗೆ ಹೋಗಿ ಗಳಿಸಿದ್ದು ಏನು ಅಂತ. ಆಮೇಲೆ ಅರ್ಥ ಆಯ್ತು ನಿಮ್ಮೆಲ್ಲರ ಪ್ರೀತಿ ಗಳಿಸಿದೆ ಎಂದಿದ್ದಾರೆ ಸಿರಿ. ನಾನು…

Read More

ಬಾಗಲಕೋಟೆ: ನವೀನ ಚಟುವಟಿಕೆಗಳ ಮೂಲಕ ಬೋಧನೆ ಮಾಡಿ ಮಕ್ಕಳ ಕಲಿಕೆ ಸುಗಮ ಮಾಡಬೇಕು. ಜ್ಞಾನದ ಜೊತೆಗೆ ಆತ್ಮವಿಶ್ವಾಸ ಬೆಳೆಸಬೇಕು. ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ ಹತ್ತಿರವಾದಾಗ ಮಕ್ಕಳು ಆಪ್ತರಾಗಿ ಪರಿಣಾಮಕಾರಿಯಾಗಿ ಕಲಿಯುತ್ತಾರೆ ಎಂದು ತೇರದಾಳ ಪೊಲೀಸ್ ಠಾಣೆಯ ಪಿಎಸ್ಐ ಅಪ್ಪಣ್ಣ ಐಗಳಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ತೇರದಾಳ ನಗರದ ಖೋತ ಇಂಗ್ಲೀಷ ಟುಟೋರಿಯಲ ಸಂಸ್ಥೆಯಲ್ಲಿ ಎನ್ ಎಮ್ ಎಮ್ ಎಸ್ ವಿದ್ಯಾರ್ಥಿಗಳ ಪೂರ್ವ ತಯಾರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಿತು. ಇದೇ ಸಂದರ್ಭದಲ್ಲಿ ಡಾ. ಎಮ್ ಆರ್ ಪಾಟೀಲ. ಬಿ ಎಡ್ ಕಾಲೇಜಿನ ಪ್ರಾಚಾರ್ಯರು. ಸಂಸ್ಥೆಯ ಅಧ್ಯಕ್ಷರಾದ ಮುರಲಿಧರ ಸೋಪಾನ ಖೋತ, ವ್ಯವಸ್ಥಾಪಕರಾದ ನಾಮದೇವ ಸೋಪಾನ ಖೋತ. ಕಿರಣ ಹುಲ್ಲೊಳ್ಳಿ. ಮಲ್ಲಿಕಾರ್ಜುನ ಚಿಂಚನ್ನವರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಪ್ರಕಾಶ ಕುಂಬಾರ ಬಾಗಲಕೋಟೆ

Read More

ಹುಬ್ಬಳ್ಳಿ: 1992ರಲ್ಲಿ ಶ್ರೀ ರಾಮಜನ್ಮಭೂಮಿಗಾಗಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಚನ್ನಪೇಟೆಯ ಆಟೊರಿಕ್ಷಾ ಚಾಲಕ ಶ್ರೀಕಾಂತ ಪೂಜಾರಿಗೆ ಈಗ ವಯಸ್ಸು 54. ಆದರೆ, 31 ವರ್ಷ ಹಿಂದಿನ ಗಲಭೆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂಬುದು ಗೊತ್ತಿರಲಿಲ್ಲ. ಪೊಲೀಸರ ಕಾರ್ಯಾಚರಣೆ ಬಗ್ಗೆ ಮಾಹಿತಿ ಇರಲಿಲ್ಲ ಅಂತೆ. ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಕಾಂತ ಪೂಜಾರಿ ಆಗಾಗ್ಗೆ ಬೇರೆ ಬೇರೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿ, ಸಹಿ ಮಾಡುತ್ತಿದ್ದರೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗುವ ಬಗ್ಗೆ ಕಿಂಚಿತ್ತೂ ಸುಳಿವು ಇರಲಿಲ್ಲ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನಾಪತ್ತೆಯೂ ಆಗಿರಲಿಲ್ಲ. ಶ್ರೀಕಾಂತ ಪೂಜಾರಿ ವಿರುದ್ಧ 1992ರಿಂದ 2014ರ ಅವಧಿಯಲ್ಲಿ ಹುಬ್ಬಳ್ಳಿಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮೂರು ದೊಂಬಿ, ಗಲಭೆ ಪ್ರಕರಣಗಳು ಸೇರಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಮದ್ಯ ಅಕ್ರಮ ಮಾರಾಟದ ಕುರಿತು 9 ಪ್ರಕರಣಗಳು ದಾಖಲಾದರೆ, ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಜೂಜು ಪ್ರಕರಣ ಇದೆ. ಕಸಬಾ…

Read More

ಬೆಂಗಳೂರು: ಕರ್ನಾಟಕದಲ್ಲಿ (Karnataka) ತುಘಲಕ್ ಸರ್ಕಾರ ನಡೆಯುತ್ತಿದೆ. ಅದಕ್ಕಾಗಿ ಸರ್ಕಾರ ಕರ ಸೇವಕರ ಬಂಧನ ಮಾಡುತ್ತಿದೆ ಎಂದು ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ದ ಮಾಜಿ ಸಚಿವ ರೇಣುಕಾಚಾರ್ಯ (MP Renukacharya) ಕಿಡಿಕಾರಿದ್ದಾರೆ. https://ainlivenews.com/the-state-government-has-withdrawn-the-fee-hike-for-graduate-students-how-much-is-the-increase/ ಕರ ಸೇವಕರ ಬಂಧನ ವಿಚಾರಕ್ಕೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುತ್ತಿಲ್ಲ. ಇದು ತುಘಲಕ್ ದರ್ಬಾರ್ ಸರ್ಕಾರ. ಸದ್ದಾಂ ಹುಸೇನ್ ತರಹ ಆಡಳಿತ ಮಾಡುತ್ತಿದ್ದಾರೆ. 31 ವರ್ಷದ ಕೇಸ್ ಈಗ ರೀ ಓಪನ್ ಮಾಡುತ್ತಾರೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಜನ ಖುಷಿ ಪಡುತ್ತಿದ್ದಾರೆ. ಈ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಕರ ಸೇವಕರ ಬಂಧನ ಮಾಡಿದ್ದಾರೆ. ಅವರೇನು ಕೊಲೆ ಮಾಡಿದ್ರಾ, ಲೂಟಿ ಮಾಡಿದ್ರಾ? ದೌರ್ಜನ್ಯ ಮಾಡಿದ್ರಾ? ಈ ಕಾಂಗ್ರೆಸ್ ಸರ್ಕಾರ ಸೇಡಿನ ಸರ್ಕಾರ. ರಾಜ್ಯದ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದ್ದಾರೆ ಎಂದು ಆಂಜನೇಯ ಹೇಳುತ್ತಾರೆ. ಬೋರ್ಡ್ ಅಧ್ಯಕ್ಷ…

Read More

ಬೆಂಗಳೂರು:   ಸಿಲಿಕಾನ್‌ ಸಿಟಿಯಲ್ಲಿ ಹೊಸ  ವರ್ಷದ ಪಾರ್ಟಿ ಟಿಕೆಟ್​ ಕೊಡಿಸುವುದಾಗಿ ಮಹಿಳೆಗೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು  ಪ್ರತಿಷ್ಠಿತ ಸ್ಟಾರ್ ಹೋಟೆಲ್ JW ಮ್ಯಾರಿಯೇಟ್ ಹೆಸರಲ್ಲಿ ಮಹಿಳೆಗೆ ವಂಚನೆ ಮಾಡಲಾಗಿದೆ. https://ainlivenews.com/the-state-government-has-withdrawn-the-fee-hike-for-graduate-students-how-much-is-the-increase/ ಪಾರ್ಟಿ ಟಿಕೆಟ್​ಗಾಗಿ ಸಂಪರ್ಕ ಮಾಡಿದ್ದ ಹೇಮ ಮಾಲಿನಿ ಎಂಬ ಮಹಿಳೆ ಸುರೇಂದರ್ ಕುಮಾರ್ ಎಂಬಾತನ ಸಂಪರ್ಕ ಮಾಡಲಾಗಿದೆ. ಟಿಕೆಟ್ ಬೇಕು ಎಂದಾಗ ಒಂದು ಟಿಕೆಟ್​ಗೆ ಬರೋಬ್ಬರಿ‌ 19500 ಹಣ ಪಡೆದಿದ್ದಾನೆ. ಗೂಗಲ್ ಪೇ ಮೂಲಕ ಹಣ ನೀಡಲಾಗಿತ್ತು.. ನಂತರ ಅಂಬಿಕಾ ಅನ್ನೋ ಮ್ಯಾನೇಜರ್ ಹೆಸರು ಹೇಳಿ ಟಿಕೆಟ್ ಪಡೆಯಲು ಸೂಚನೆ ನೀಡಲಾಗಿತ್ತು  ಆದರೆ ಹೋಟೆಲ್ ಬಳಿ ಹೋದಾಗ ಅಂಬಿಕಾ ಎಂಬ ಸಿಬ್ಬಂದಿ ಇಲ್ಲಾ ಎನ್ನುವುದು ಗೊತ್ತಾಗಿದೆ ಆ ನಂತರ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ವಂಚಕರನ್ನು ಬಂಧಿಸುವಂತೆ ಮನವಿ ಮಾಡಲಾಗಿದೆ.

Read More

ಬೆಂಗಳೂರು: ರಾಜ್ಯ ಸರ್ಕಾರ ಪದವಿ ಮಕ್ಕಳಿಗೆ ಶುಲ್ಕ ಹೆಚ್ಚಳದ ಬರೆ ಎಳೆದಿದೆ, ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ.10ರಷ್ಟು ಏರಿಕೆಗೆ ಮಾಡಿ ಆದೇಶ ಮಾಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್ ಗಳ ಶುಲ್ಕ 10 % ಏರಿಕೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಈ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮತ್ತಷ್ಟು ಹೊರೆಯಾಗಲಿದೆ. ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಅನೇಕ ಪದವಿ ಕೋರ್ಸ್​ಗಳ ಶುಲ್ಕ ಹೆಚ್ಚಳ ಮಾಡಲು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ, ಈಗಾಗಲೇ ಈ ಪರಿಷ್ಕೃತ ಶುಲ್ಕ ಪಟ್ಟಿಯನ್ನ ಯೂನಿವರ್ಸಿಟಿಗಳಿಗೆ ನೀಡಿ ಸರ್ಕಾರ ಸೂಚನೆ ನೀಡಿದೆ. https://ainlivenews.com/k-set-exam-on-january-13-notice-to-download-to-get-admit-card/ ಇನ್ನೂ ಶುಲ್ಕ ಹೆಚ್ಚಳದಿಂದ ಪದವಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದು, ಸರ್ಕಾರ ವಿದ್ಯಾರ್ಥಿಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ, ಸರ್ಕಾರ ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನ ಅನುಷ್ಠಾನಕ್ಕೆ ತಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತೆ…

Read More

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪೋಲಿಸ್ ಠಾಣೆಯಿಂದ ಮಾದಕ ದ್ರವ್ಯಗಳ ವಿರುದ್ದ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆ ಜಾಗೃತಿ ಜಾಥಾ ನಡೆಸಿದ ಪೋಲಿಸ್ ಸಿಬ್ಬಂದಿ ಅಥಣಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ, ಮಾದಕ ವಸ್ತುಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರಲ್ಲದೆ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಕಾನೂನು ಪ್ರಕಾರ ಅಪರಾಧವಾಗಿದ್ದು ಅಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕಾಯಲು ಸಹಕರಿಸಬೇಕು. https://ainlivenews.com/13-lakhs-to-be-paid-if-childless-women-are-made-pregnant-fraud-in-the-name-of-pregnant-job-service/ ಮೊದಲು ಸಿಗರೇಟು,ತಂಬಾಕು,ಗುಟಕಾಗಳಿಂದ ಆರಂಭವಾಗುವ ದುಶ್ಚಟಗಳು ಕ್ರಮೇಣ ಗಾಂಜಾ,ಕಾಫ್ ಸಿರಪ್,ವೈಟ್ನರ್,ಪೆಟ್ರೋಲ್ ಸೇರಿದಂತೆ ಹಲವು ಮಾದಕ ವಸ್ತುಗಳ ದುಶ್ಚಟವಾಗಿ ಪರಿಣಮಿಸುತ್ತವೆ. ಇದರಿಂದ ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವದರ ಜೊತೆಗೆ ಆತನ ಕುಟುಂಬಕ್ಕೆ ಅದರ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ  ವಿಶೇಷವಾಗಿ ಇಂದಿನ ಯುವಕರು ಮಾದಕ ವಸ್ತುಗಳಿಂದ ದೂರ…

Read More

ಉಡುಪಿ: ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿಯ ಹಿರಿಯ ಬಿಜೆಪಿ ಮುಖಂಡರೂ ಆಗಿರುವ ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ಮಾಲಿಕ ಸುಧಾಕರ ಶೆಟ್ಟಿ ನಿಧನ ಹೊಂದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹೊಟೇಲ್ ಉದ್ಯಮದಲ್ಲಿ ಹೆಚ್ಚು ಹೆಸರುವಾಸಿ ಯಾಗಿದ್ದರು. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. https://ainlivenews.com/13-lakhs-to-be-paid-if-childless-women-are-made-pregnant-fraud-in-the-name-of-pregnant-job-service/ ಮೂರು ಬಾರಿ ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಧಾಕರ ಶೆಟ್ಟಿ, ಎರಡು ಬಾರಿ ಬಿಜೆಪಿ ಹಾಗೂ ಒಂದು ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಮೂರು ಚುನಾವಣೆ ಯಲ್ಲೂ ಇವರು ಸೋಲು ಅನುಭವಿಸಿದ್ದರು. 2009 ರಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.

Read More

ಅಯೋಧ್ಯೆ: ಇದೇ ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನೇರವೇರಲಿದೆ. ಅಂದು ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮವೂ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ದೇಶ-ವಿದೇಶಗಳಿಂದ ವಿಶೇಷ ಕೊಡುಗೆಗಳನ್ನು ಶ್ರೀರಾಮನ ಭಕ್ತರು ಅಯೋಧ್ಯೆಗೆ ಕಳುಹಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹಾಗೆಯೇ ದೇಶಾದ್ಯಂತ ರಾಮನ ಭಕ್ತರು ಅಕ್ಕಿ, ತರಕಾರಿ ಹಾಗೂ ಇತರ ಆಹಾರ ಪದಾರ್ಥಗಳನ್ನು ಅಯೋಧ್ಯೆಗೆ ಕಳುಹಿಸುತ್ತಿರುವುದು ಗಮನಸೆಳೆದಿದೆ. ರಾಮಲಲ್ಲಾ ಪ್ರಾಣಪ್ರತಿಷ್ಠಾ ಸಮಾರಂಭಕ್ಕೆ ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗಾಗಿ ಅಕ್ಕಿ, ವಿವಿಧ ಬಗೆಯ ತರಕಾರಿಗಳು ಹಾಗೂ ಇತರ ಆಹಾರ ಪದಾರ್ಥಗಳನ್ನು ಅಯೋಧ್ಯೆಗೆ ಕಳುಹಿಸುತ್ತಿದ್ದಾರೆ.  https://ainlivenews.com/a-500-year-old-inscription-was-discovered-in-which-kannada-kings-ruled-tamil-nadu/ ದೇಶದ ವಿವಿಧೆಡೆಯಿಂದ ಅಕ್ಕಿ, ಸಾಂಬಾರ್ ಪದಾರ್ಥ ಹಾಗೂ ಇತರ ಆಹಾರ ಪದಾರ್ಥಗಳು ಸೇರಿದಂತೆ ಸುಮಾರು 300 ಟನ್ ಅಗತ್ಯ ವಸ್ತುಗಳನ್ನು ಅಯೋಧ್ಯೆಗೆ ರವಾನಿಸಲಾಗುತ್ತಿದೆ. ಎಲ್ಲಾ ಆಹಾರ ಪದಾರ್ಥಗಳನ್ನು ಅಯೋಧ್ಯೆಯ ಕಾರ್ಯಶಾಲೆಯಲ್ಲಿ ಸಂಗ್ರಹಿಸಲಾಗುತ್ತಿದೆ. ನಂತರದಲ್ಲಿ ಪ್ರಸಾದ ವಿನಿಯೋಗ, ಮುಂತಾದ ಕೆಲಸಗಳಿಗೆ ಬಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಎಲ್ಲಿಂದ ಏನೇನು…

Read More

ಬೆಂಗಳೂರು : ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ದ್ವೇಷದ ರಾಜಕಾರಣವನ್ನು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು  ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪೂರ್ವಸಭೆ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. https://ainlivenews.com/k-set-exam-on-january-13-notice-to-download-to-get-admit-card/ ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧಸಿ, ಹಿಂದಿನ ಪ್ರಕರಣಕ್ಕೆ ಈಗ ಜೀವನೀಡಿರುವ ಬಗ್ಗೆ ಬಿಜೆಪಿಯವರು ಇಂದು ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿ, ತಪ್ಪು ಮಾಡಿದವರನ್ನು ರಕ್ಷಿಸಿ ಶಿಕ್ಷೆ ನೀಡಬಾರದೆಂದು ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರಶ್ನೆಯನ್ನು ಮಾಧ್ಯಮದವರು ಬಿಜೆಪಿಯವರಿಗೆ ಕೇಳಬೇಕು. ಅಪರಾಧ ಮಾಡಿರುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ. ನಿರಪರಾಧಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ. ಟೀಕೆಗಳಿಗೆ , ಅನುಮಾನಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದರು.

Read More