Author: AIN Author

ಬೆಂಗಳೂರು: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನಲ್ಲಿರುವ ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಡಿಸೆಂಬರ್ 11 ರಿಂದ ನಂದಿಬೆಟ್ಟಕ್ಕೆ (Nandihills) ಎಲೆಕ್ಟ್ರಿಕ್ ರೈಲು ಆರಂಭಿಸಲು ನೈಋತ್ಯ ರೈಲ್ವೆ ನಿರ್ಧಾರ ಮಾಡಿದೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಈ ರೈಲು (Train) ಕಾರ್ಯನಿರ್ವಹಿಸಲಿದೆ.  ಮೇನ್‍ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳನ್ನು ವಿಸ್ತರಿಸಲು ನಿರ್ಧಾರ ಮಾಡಲಾಗಿದೆ. https://ainlivenews.com/demand-money-using-bangalore-district-collectors-name-register-fir/ 6531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, 06535/06583 ಬೆಂಗಳೂರು, ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಸಂಚರಿಸಲಿವೆ. ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ನೋಡಲು ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಹೀಗಾಗಿ ಚಿಕ್ಕಬಳ್ಳಾಪುರಕ್ಕೆ ರೈಲು ಸೇವೆಗಳನ್ನು ವಿಸ್ತರಿಸುವುದರಿಂದ ಪ್ರಯೋಜನವಾಗಲಿದೆ.

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಮುಸ್ಲಿಮರ ಮೇಲೆ ಅಷ್ಟೊಂದು ಕಾಳಜಿ, ಪ್ರೀತಿ ಇದ್ದಿದ್ದೇ ಆದರೆ ನೀವು ನಿಮ್ಮ ಆಸ್ತಿಯನ್ನು ಮಾರಿ ಅವರಿಗೆ ಹಣ ಕೊಡಿ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಅಲ್ಪಸಂಖ್ಯಾತರಿಗೆ ಸರ್ಕಾರ 10 ಸಾವಿರ ಕೋಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಗೌರವ ಇದೆ. ಸಿಎಂ ಆದವರು ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ನಮಗೆ ಸಂಘರ್ಷದ ಅವಶ್ಯಕತೆ ಇಲ್ಲ. ಆದರೆ ಇಲ್ಲಿ ಸಿದ್ದರಾಮಯ್ಯ ಅವರು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ರು. ಸಿದ್ದರಾಮಯ್ಯ ಅವರು ನಾನು ಕುಂಕುಮ ಹಚ್ಚಲ್ಲ, ಕೇಸರಿ ಪೇಟಾ ಹಾಕಲ್ಲ ಅಂತ ಹೇಳುತ್ತಾರೆ. https://ainlivenews.com/demand-money-using-bangalore-district-collectors-name-register-fir/ ನಿಮ್ಮ ಹೆಸರಲ್ಲಿ ಸಿದ್ದರಾಮ ಎಂದು ಭಗವಂತನ ಹೆಸರಿಟ್ಟಿದ್ದಾರೆ. ಅಷ್ಟೊಂದು ಕಾಳಜಿ ಪ್ರೀತಿ ಇದ್ರೆ ನಿಮ್ಮ ಮನೆಯಿಂದ ಕೊಡಿ. ನೀವೇನ್ ದೇಶದ ಪ್ರಧಾನ ಮಂತ್ರಿನಾ..?, ಸಿದ್ದರಾಮಯ್ಯ ಇದು ನಿಮ್ಮ ಆಸ್ತಿನಾ..?, ಇಲ್ಲೇನ್ ಪಾಕಿಸ್ತಾನ…

Read More

ಬೆಂಗಳೂರು: ವಿದ್ಯುತ್ ಅಪಘಾತವನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯುತ್ ಸುರಕ್ಷತೆ ಕುರಿತಾದ ಜನಜಾಗೃತಿ ಜಾಥಾವನ್ನು ಬೆಸ್ಕಾಂನ ಬೆಂಗಳೂರು ನಗರ ಉತ್ತರ ವಲಯದಲ್ಲಿ (BMAZ) ಶುಕ್ರವಾರ (08-12-2023) ಹಮ್ಮಿಕೊಳ್ಳಲಾಯಿತು. https://ainlivenews.com/demand-money-using-bangalore-district-collectors-name-register-fir/ ಬೆಸ್ಕಾಂ ವ್ಯಾಪ್ತಿಯ ಆಯಾ ಉಪವಿಭಾಗಗಳಲ್ಲಿ ವಿದ್ಯುತ್ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಜಾಗೃತಿ ಜಾಥಾ ಅಭಿಯಾನದಲ್ಲಿ ಬೆಸ್ಕಾಂ ಸಹಾಯಕ ಅಭಿಯಂತರರು, ಕಾರ್ಯನಿರ್ವಾಹಕ ಅಭಿಯಂತರರು, ಬೆಸ್ಕಾಂ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರು, ಸ್ಥಳೀಯ ಸಮಿತಿ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಕೊಂಡರು.

Read More

ಕಾರವಾರ: ವೀಕೆಂಡ್, ರಜಾ ದಿನಗಳು ಬಂತೆಂದರೇ ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಅದರಲ್ಲೂ ಕರಾವಳಿಯ ಮುರುಡೇಶ್ವರದಲ್ಲಿ (Murudeshwara) ದೇಶದ ನಾನಾ ಭಾಗದಿಂದ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಸಮುದ್ರ ಸ್ನಾನದ ಜೊತೆ ಜಲಸಾಹಸ ಕ್ರೀಡೆ, ಸ್ಕೂಬಾ ಡೈವ್‌ನಂತಹ ಚಟುವಟಿಕೆಯಲ್ಲಿ ಭಾಗಿಯಾಗುವ ಪ್ರವಾಸಿಗರಿಗೆ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್ ತಯಾರಾಗಿದ್ದು, ಸಮುದ್ರದಲ್ಲಿ ಹೆಜ್ಜೆ ಹಾಕಲು ಇದೀಗ ಅವಕಾಶ ಒದಗಿ ಬಂದಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಮುರುಡೇಶ್ವರಕ್ಕೆ ಪ್ರತಿ ತಿಂಗಳು ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಉಡುಪಿಯ ಮಲ್ಪೆ ಬೀಚ್‌ನಲ್ಲಿ 100 ಮೀಟರ್ ಫ್ಲೋಟಿಂಗ್ ಬ್ರಿಡ್ಜ್‌ (Floating Bridge) ಅನ್ನು 80 ಲಕ್ಷ ರೂ. ಖರ್ಚು ಮಾಡಿ ನಿರ್ಮಿಸಲಾಗಿತ್ತು. ಆದರೆ ಸಮುದ್ರದ ಅಲೆಗೆ ಈ ಫ್ಲೋಟಿಂಗ್ ಬ್ರಿಡ್ಜ್ ಕಿತ್ತುಹೋಗಿ ಪ್ರವಾಸಿಗರಿಗೆ (Tourists) ನಿರಾಸೆ ತಂದೊಡ್ಡಿತ್ತು. ಆದರೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal) ತಾಲೂಕಿನ ಮುರುಡೇಶ್ವರದಲ್ಲಿ 130 ಮೀಟರ್ ಉದ್ದದ…

Read More

ಬಾಲಿವುಡ್ (Bollywood0) ಖ್ಯಾತ ನಟ ಸನ್ನಿ ಡಿಯೋಲ್ (Sunny Deol) ರಸ್ತೆಯಲ್ಲಿ ಕಂಠಪೂರ್ತಿ ಕುಡಿದುಕೊಂಡು (Drinks) ಜೋಲಿ ಹೊಡೆಯುತ್ತಾ ಬರುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಈ ವಿಡಿಯೋವನ್ನು ಫೋಟೋಗೆ ಕನ್ವರ್ಟ್ ಮಾಡಿಯೂ ಟ್ರೋಲ್ ಮಾಡಲಾಗಿತ್ತು. ಅನೇಕರು ನಾನಾ ರೀತಿಯಲ್ಲಿ ಕಾಮೆಂಟ್ ಕೂಡ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಡಿಯೋಲ್ ಅಲರ್ಟ್ ಆಗಿದ್ದಾರೆ. ಬಾಲಿವುಡ್ ಪಾರ್ಟಿಗಳಲ್ಲಿ ತೂರಾಡಿಕೊಂಡು ಕಾರು ಹತ್ತುವುದು ಸಾಮಾನ್ಯ. ಅನೇಕ ನಟ ನಟಿಯರು ಪಾರ್ಟಿಗಳಿಂದ ಆಚೆ ಬರುವಾಗ ಜೋಲಿ ಹೊಡೆಯುವ ದೃಶ್ಯವನ್ನು ಅನೇಕರು ಸೆರೆ ಹಿಡಿದಿದ್ದಾರೆ. ಆದರೆ, ಸನ್ನಿ ಡಿಯೋಲ್ ತೂರಾಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುವ ವಿಡಿಯೋ ಅದಾಗಿತ್ತು. ಹಾಗಾಗಿ ವೈರಲ್ ಆಗಿತ್ತು. https://ainlivenews.com/demand-money-using-bangalore-district-collectors-name-register-fir/ ಆ ವಿಡಿಯೋ ಯಾವುದು, ಅದರ ಅಸಲಿತ್ತು ಏನು ಎನ್ನುವುದನ್ನು ಮತ್ತೊಂದು ವಿಡಿಯೋ ಮೂಲಕ ಸನ್ನಿ ಸ್ಪಷ್ಟ ಪಡಿಸಿದ್ದಾರೆ. ರಸ್ತೆಯಲ್ಲಿ ತೂರಾಡುತ್ತ ಬರುವ ಮತ್ತು ಆ ದೃಶ್ಯವನ್ನು ಹಲವು ಕ್ಯಾಮೆರಾಗಳು ಸೆರೆ ಹಿಡಿಯುತ್ತಿರುವ ವಿಡಿಯೋವನ್ನು ಶೇರ್ ಮಾಡಿ, ಗಾಳಿ…

Read More

ಬಾಲಿವುಡ್ (Bollywood) ನ ಹೆಸರಾಂತ ಪೋಷಕ ನಟ, ಮೇರಾ ನಾಮ್ ಜೋಕರ್ ಖ್ಯಾತಿಯ ಜೂನಿಯರ್ ಮೆಹಮೂದ್ (Junior Mehmood) ನಿಧನರಾಗಿದ್ದಾರೆ. ಅವರು ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೊಹಮೂದ್ ಇಹಲೋಕ (passed away) ತ್ಯಜಿಸಿದ್ದಾರೆ. ಐದು ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಇವರು, ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 67ರ ವಯಸ್ಸಿನ ಮೊಹಮೂದ್, 4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ನಟರ ಪುತ್ರರೇ ಮಾತನಾಡಿದ್ದು, ಮಧ್ಯರಾತ್ರಿ ಮನೆಯಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. https://ainlivenews.com/big-shock-to-china-italy-out-of-one-belt/ ದೋ ಔರ್ ದೋ ಪಾಂಚ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿರುವ ಇವರ ನಿಧನಕ್ಕೆ ಬಾಲಿವುಡ್ ನ ಸಾಕಷ್ಟು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇಂದು ಮಧ್ಯಾಹ್ನ ಅವರ ಅಂತ್ಯ ಸಂಸ್ಕಾರ ಮುಂಬೈ ಸಾಂತಾಕ್ರೂಜ್ ವೆಸ್ಟ್ ನಲ್ಲಿರುವ ಜುಹು ಮುಸ್ಲಿಂ ಸ್ಮಶಾನದಲ್ಲಿ ನಡೆಯಲಿದೆ.

Read More

ಕಾರವಾರ: ಕಾರು ಮತ್ತು ಸರ್ಕಾರಿ ಬಸ್ಸಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿರುವ ಘಟನೆ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲದಲ್ಲಿ ನಡೆದಿದೆ. ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ಸು ಹಾಗೂ ಕುಮಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, https://ainlivenews.com/big-shock-to-china-italy-out-of-one-belt/ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಗಳು ಮಂಗಳೂರು ಸಮೀಪದವರು ಎನ್ನಲಾಗಿದ್ದು, ಗಂಭೀರ ಗಾಯಗೊಂಡ ವ್ಯಕ್ತಿ ತಮಿಳುನಾಡಿನ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಬಸ್‌ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ 60ಕ್ಕೂ ಅಧಿಕ ಪ್ರಯಾಣಿಕರಿದ್ದು ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶ್ರೀಬ್ರಹ್ಮಲಿಂಗೇಶ್ವರ ಫಿಲಂಸ್ ಲಾಂಛನದಲ್ಲಿ ಕೆ.ಭಾಸ್ಕರ್ ನಾಯ್ಕ್ (ಮಾರಣಕಟ್ಟೆ) ಹಾಗೂ ಸಾಮ್ರಾಟ್ ಮಂಜುನಾಥ್.ವಿ (ಗರುಡಾಚಾರ್ ಪಾಳ್ಯ) ನಿರ್ಮಿಸುತ್ತಿರುವ‌ ಹಾಗೂ ಮುರಳಿ ಎಸ್ ವೈ ನಿರ್ದೇಶನದ “ಕದನ ವಿರಾಮ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಬಿಲ್ಡರ್ ಸುರೇಶ್ ಆರಂಭ‌ ಫಲಕ ತೋರಿದರು. ಉದ್ಯಮಿ ಚಿಕ್ಕಣ್ಣ ಕ್ಯಾಮೆರಾ ಚಾಲನೆ ಮಾಡಿದರು. ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. “ರಿವಿಲ್” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. “ಕದನ ವಿರಾಮ” ಎಂದರೆ ಭೂಮಿ ಹಾಗೂ ಮನುಷ್ಯನ ನಡುವೆ ನಡೆಯುವ ಕಥೆ(ಲ್ಯಾಂಡ್ ವಿಚಾರವಾಗಿ). ನಿರ್ಮಾಪಕ ಭಾಸ್ಕರ್ ನಾಯ್ಕ್ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ಐದು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ರಿಜೊ ಪಿ ಜಾನ್ ಅವರ ಛಾಯಾಗ್ರಹಣವಿರುವ “ಕದನ ವಿರಾಮ” ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದಲ್ಲಿ ನಡೆಯಲಿದೆ. ಈ ತಿಂಗಳ ಕೊನೆಗೆ…

Read More

ಬೆಂಗಳೂರು: ಈ ಬಿಬಿಎಂಪಿ ಅಧಿಕಾರಿಗಳ ದರ್ಪ, ಅಧಿಕಾರ ಏನಿದ್ರೂ, ಕೇವಲ ಬಡ ಜನರ ಅಮಾಯಕರ ಮೇಲೆ ಮಾತ್ರ. ನಗರದ ದೊಡ್ಡ ದೊಡ್ಡ ಉದ್ಯಮಿಗಳು ಉಳ್ಳವರ ಮುಂದಾಗಲಿ ಪಾಲಿಕೆ ಅಧಿಕಾರಿಗಳ ಆಟ ಏನು ನೆಡೆಯುವುದಿಲ್ಲ ಅಂತ ಇದೀಗ ಮತ್ತೊಮ್ಮೆ ಸಾಬೀತಾಗಿದೆ.ಏನು ಅಂತೀರಾ ಈ ಸ್ಟೋರಿ ನೋಡಿ. ಬಿಬಿಎಂಪಿಯ ಕೆಲ ಅಧಿಕಾರಿಗಳು ಯಾವ ಕೆಲಸ ಮಾಡಲು ಇದ್ದರೋ ಗೊತ್ತಾಗ್ತಿಲ್ಲ, ಯಾಕಂದ್ರೆ ನಗರದಲ್ಲಿ ರಾಜಾ ರೋಷಾವಾಗಿ ಎಲ್ಲಾರೆದುರು ಜಾಹಿರಾತು ಪ್ರದರ್ಶನ ಮಾಡುವ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಿಂದ ಸುಮಾರು ಹತ್ತು ವರ್ಷಗಳಿಂದ ನಾಯಾಪೈಸೆ ಕೂಡ ಕಲೆಕ್ಟ ಮಾಡಿಲ್ವಂತೆ.ಹಾಗಾದ್ರೆ ಬಿಬಿಎಂಪಿಗೆ ಹತ್ತು ವರ್ಷಗಳಿಂದ  ಶುಲ್ಕ ಕಟ್ಟದೇ ನೂರಾರು ಕೋಟಿ‌  ವಂಚನೆ ಮಾಡಿರುವುದಾಗಿ ಮಾಹಿತಿ  ಹಕ್ಕು ಕಾಯ್ದೆ  ಅಡಿಯಲ್ಲಿ KSCA  ವಂಚನೆ ಮಾಡಿರೋದು ಬಯಲಿಗೆ ಬಂದಿದೆ. ಇನ್ನೂ ಪ್ರತಿ ಪಂದ್ಯಾ  ನಡೆಯುವಾಗ  ವಿವಿಧ ಸಂಸ್ಥೆಗಳು ಬ್ರ್ಯಾಂಡ್ ಗಳ ಜಾಹೀರಾತು ಪ್ರದರ್ಶನ ಮಾಡಿ ಎಂದು KSCA ಗೆ  ಸಾವಿರಾರು ಕೋಟಿ ರೂಪಾಯಿ ಜಾಹೀರಾತು ಶುಲ್ಕ ಎಂದು ಕೋಟಿ ಕೋಟಿ ಸಂಗ್ರಹ…

Read More

ವಿಜಯ್‍ ರಾಘವೇಂದ್ರ ಅಭಿನಯದ ‘ಗ್ರೇ ಗೇಮ್ಸ್’ ಚಿತ್ರವು ಇತ್ತೀಚೆಗಷ್ಟೇ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ರೆಡ್ ಕಾರ್ಪೆಟ್‍ ಗಾಲಾ ಪ್ರೀಮಿಯರ್ ವಿಭಾಗದಲ್ಲಿ ಪ್ರದರ್ಶನವಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ್‍ ನಿರ್ದೇಶನದ ಈ ಚಿತ್ರಕ್ಕೆ ನೆರೆದಿದ್ದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಒಳ್ಳೆಯ ವಿಮರ್ಶೆಗಳು ಸಿಕ್ಕಿವೆ. ಮೆಟಾವರ್ಸ್ ಮತ್ತು ಆನ್‍ಲೈನ್‍ ಗೇಮಿಂಗ್‍ ವೈಷಮ್ಯದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ‘ಗ್ರೇ ಗೇಮ್ಸ್’ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್ ಪೊಲೀಸ್‍ ಅಧಿಕಾರಿಯಾಗಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್‍ ಈ ಚಿತ್ರದಲ್ಲಿ ಒಬ್ಬ ನಟಿಯಾಗಿ ಅಭಿನಯಿಸಿದ್ದು, ಈ ಚಿತ್ರದ ಮೂಲಕ ವಿಜಯ್‍ ರಾಘವೇಂದ್ರ ಅವರ ಅಕ್ಕನ ಮಗ ಜೈ, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದರ ಜೊತೆಗೆ, ಇಲ್ಲಿ ಒಬ್ಬ ಗೇಮರ್ ಆಗಿ ಕಾಣಿಸಿಕೊಂಡಿದ್ದಾರೆ. ಗೋವಾ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನವಾಗಿದ್ದರ ಕುರಿತು ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ಗಂಗಾಧರ್ ಸಾಲಿಮಠ್‍, ‘ಚಿತ್ರೋತ್ಸವದಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹ ಮತ್ತು ವಿಮರ್ಶೆಗಳಿಂದ ನಿಜಕ್ಕೂ ಹೃದಯ…

Read More