Author: AIN Author

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Leelavathi) ನಿಧನಕ್ಕೆ ಸಿಎಂ ಸಿದ್ದರಾಮಯ್ಯ (Cm Siddaramaiah) ಅವರು ಸಂತಾಪ ಸೂಚಿಸಿದ್ದಾರೆ. ಇಂದು ಲೋ ಬಿ ಪಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ವಿಧಿವಶರಾಗಿದ್ದಾರೆ. ಲೀಲಾವತಿ ಅವರ ನಿಧನಕ್ಕೆ ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಕುಮಾರ್ ಅವರೊಂದಿಗೆ ಮಾತನಾಡಿದ್ದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.  https://twitter.com/CMofKarnataka/status/1733106836243615864?ref_src=twsrc%5Etfw%7Ctwcamp%5Etweetembed%7Ctwterm%5E1733106307954282835%7Ctwgr%5E5c2226957c8c1f7e6ec34c475a034b536e95dd04%7Ctwcon%5Es1_&ref_url=https%3A%2F%2Fpublictv.in%2Fcm-siddaramaiad-reacts-about-actress-leelavathi-death%2F ಹಲವು ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು…

Read More

ನವದೆಹಲಿ: ಸಂಸತ್’ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ (TMC) ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದಿಂದ ಉಚ್ಚಾಟಿಸಲಾಗಿದೆ. ನೀತಿ ಸಮಿತಿಯ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ವರದಿಯನ್ನು ಆಧರಿಸಿ ಲೋಕಸಭೆಯಿಂದ ಮಹುವಾ ಮೊಯಿತ್ರಾ (Mahua Moitra) ಅವರು ಉಚ್ಚಾಟನೆಗೊಂಡಿದ್ದಾರೆ. ಮೊಯಿತ್ರಾ ಅವರು ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ರೂ. ನಗದು ಮತ್ತು ಐಷಾರಾಮಿ ಉಡುಗೊರೆ ವಸ್ತುಗಳು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದರು. https://ainlivenews.com/sunny-deol-drunken-bollywood-actor-reveals-rumors/ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ವರದಿಯನ್ನು ಬಿಜೆಪಿ ಸಂಸದ ವಿನೋದ್‌ ಕುಮಾರ್‌ ಸೋನಕರ್‌ ನೇತೃತ್ವದ ನೀತಿ ಸಮಿತಿಯು ನ.9 ರಂದು ಅಂಗೀಕರಿಸಿತ್ತು. ಮಹುವಾ ಅವರನ್ನು ಉಚ್ಚಾಟನೆ ಮಾಡಬೇಕಾದರೆ ಈ ಬಗ್ಗೆ ಸರ್ಕಾರ ನಿಲುವಳಿ ಮಂಡಿಸಿ, ಸದನದ ಅಂಗೀಕಾರ ಪಡೆಯಬೇಕಿತ್ತು. ಪ್ರಕರಣ ಸಂಬಂಧ ಶುಕ್ರವಾರ ಬಿರುಸಿನ ಚರ್ಚೆ ಮತ್ತು ಧ್ವನಿ ಮತದ ನಂತರ ಸ್ಪೀಕರ್‌ ಓಂ…

Read More

ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ (Passed away). ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. https://ainlivenews.com/demand-money-using-bangalore-district-collectors-name-register-fir/ ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ. ಲೀಲಾವತಿ (Leelavathi) ಅವರು ಕೆಲವು ದಿನಗಳಿಂದ ಅನಾರೋಗ್ಯ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ (Health) ಯೋಗ ಕ್ಷೇಮ ವಿಚಾರಿಸಲು ಖುದ್ದು ಸಿಎಂ ಸಿದ್ದರಾಮಯ್ಯ (Cm Siddaramiah) ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ್ದರು.

Read More

ಮೈಸೂರು: ಚಿರತೆ ಸೆರೆ ಹಿಡಿಯಲು ಇಟ್ಟ ಬೋನಿಗೆ ತಾಯಿ ಚಿರತೆ ಬಿದ್ದು ಆಯರಹಳ್ಳಿ ಗ್ರಾಮದ ಜನರು ನಿಟ್ಟುಸಿರು ಬಿಡುವಂತಾಗಿದೆ. ಕೆಲ ದಿನಗಳ ಹಿಂದೆ ಮೈಸೂರು ತಾಲ್ಲೂಕಿನ ಆಯರಹಳ್ಳಿ ಗ್ರಾಮಸ್ಥರು ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿತ್ತು. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, https://ainlivenews.com/demand-money-using-bangalore-district-collectors-name-register-fir/  ಸ್ಥಳಕ್ಕೆ ಬಂದ ಅಧಿಕಾರಿಗಳು ಚಿರತೆ ಮರಿಯನ್ನು ರಕ್ಷಿಸಿ ತಾಯಿ ಚಿರತೆ ಸೆರೆಗೆ ಬೋನ್ ಇಟ್ಟಿದ್ದರು ಅದರಂತೆ ಗುರುವಾರ ರಾತ್ರಿ ಮರಿಗಳನ್ನು ಹುಡುಕಿಕೊಂಡು ಬಂದ ಚಿರತೆ ಅರಣ್ಯ ಅಧಿಕಾರಿಗಳು ಇಟ್ಟ ಬೋನ್ ನಲ್ಲಿ ಬಂಧಿಯಾಗಿದೆ. ಈ ಕುರಿತು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಅಧಿಕಾರಿಗಳು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

Read More

ಶಿವಮೊಗ್ಗ: ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ. 10 ಸಾವಿರ ಕೋಟಿ ಕೊಡುತ್ತೇನೆ ಎಂದು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ತಿಳಿಸಿದರು. ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಲ್ಪಸಂಖ್ಯಾತರ ಪರ ಹೇಳಿಕೆ ಹಿಂದೂಗಳ ಆಕ್ರೋಶಕ್ಕೆ ಅವಕಾಶ ಆಗುತ್ತದೆ. ಈ ರೀತಿಯ ಮಾತುಗಳನ್ನು ಮುಖ್ಯಮಂತ್ರಿ ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಈಗಾಗಲೇ ಅವರ ಹೇಳಿಕೆಯನ್ನು ಮಠಾಧಿಪತಿಗಳು ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ. ಏನಾದರೂ ಮಾತನಾಡಬೇಕಾದರೆ ಎಚ್ಚರಿಕೆ ವಹಿಸಿ ಮಾತನಾಡಬೇಕು ಎಂಬುದು ನನ್ನ ಸಲಹೆ ಎಂದರು.  https://ainlivenews.com/demand-money-using-bangalore-district-collectors-name-register-fir/ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಮೋದಿ ಹೆಸರಿನಲ್ಲಿ ನೂರಕ್ಕೆ ನೂರು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ. ಓಲೈಕೆ ರಾಜಕಾರಣದಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದರೆ ಅದು ಸಾಧ್ಯವಿಲ್ಲ. ಬಿಜೆಪಿ (BJP) ಪರವಾದ, ಮೋದಿ ಪರವಾದ ವಾತಾವರಣದಿಂದ ನಾವು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಲ್ಲು ಪ್ರಯತ್ನಿಸುತ್ತಿದ್ದೇವೆ.…

Read More

ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿ ಕಾರ್ಯಕ್ರಮಕ್ಕೆ ಐಸಿಸ್ ನಂಟು ಇದೆ ಎಂದು ಶಾಸಕ ಯತ್ನಾಳ್ (Basangouda Patil Yatnal) ಆರೋಪಕ್ಕೆ ಸಚಿವ ಹೆಚ್‌ಕೆ ಪಾಟೀಲ್ (HK Patil) ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯ (Belagavi) ಕೊಂಡಸಕೊಪ್ಪದಲ್ಲಿ ಸಚಿವ ಹೆಚ್‌ಕೆ ಪಾಟೀಲ್ ಪ್ರತಿಕ್ರಿಯೆ ನೀಡಿ, ಸಂತ ಸೂಫಿಗಳ ಪ್ರಭಾವಕ್ಕೆ ಒಳಗಾದವರು ಉಗ್ರಗಾಮಿ ಆಗ್ತಾರಾ? ಭ್ರಾತೃತ್ವ ಭಾವನೆ ಬೆಳೆಸಲು ಪ್ರಯತ್ನ ಮಾಡುವವರು, ಸಂತರನ್ನು ಸಮ ಭಾವನೆಯಿಂದ ನೋಡುವವರು, https://ainlivenews.com/demand-money-using-bangalore-district-collectors-name-register-fir/  ಟೆರರಿಸ್ಟ್ ಮತ್ತು ಉಗ್ರಗಾಮಿ ಅಂತ ಹೇಳುವುದು ಸರಿಯಲ್ಲ. ತಪ್ಪು ಗ್ರಹಿಕೆ ಮತ್ತು ಮಾಹಿತಿ ಕೊರತೆ ಮೂಲಕ ಹಾಗೆ ಹೇಳುವುದು ಸರಿಯಲ್ಲ ಎಂದರು. ಇದೇ ವೇಳೆ ಕೊಂಡಸಕೊಪ್ಪದ ಪ್ರತಿಭಟನೆ ಸ್ಥಳದಲ್ಲಿ ಅಕ್ರಮ ಸಾರಾಯಿ ನಿಷೇಧಕ್ಕೆ ಮಹಿಳೆಯ ಒತ್ತಾಯದ ಬಗ್ಗೆ ಮಾತನಾಡಿ, ಅಕ್ರಮ ಮಾರಾಟದ ಬಗ್ಗೆ ತಕರಾರು ಮಾಡಿದ್ರು. ಆಗ ನಾನು ನೀನು ಹೆಣ್ಣು ಮಗಳಮ್ಮ, ನೀನು ಮದ್ಯ ನಿಷೇಧಕ್ಕೆ ಒತ್ತಾಯ ಮಾಡು. ಕೇವಲ ಅಕ್ರಮ ಮಾರಾಟಕ್ಕೆ ಒತ್ತು ಕೊಡಬೇಡ ಅಂತ ಹೇಳಿದೆ ಎಂದರು. 

Read More

ದುಬೈ: ಐಸಿಸಿ (ICC) ಟಿ20 ಬೌಲಿಂಗ್‌ನಲ್ಲಿ ಭಾರತ ತಂಡದ ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ (Ravi Bishnoi) ನಂಬರ್‌ 1 ಸ್ಥಾನ ಅಲಂಕರಿಸಿದ್ದಾರೆ. ಆ ಮೂಲಕ ಐಸಿಸಿ ರ‍್ಯಾಂಕಿಂಗ್‌ಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ರವಿ ಬಿಷ್ಣೋಯ್, ಈಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ICC T20I ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್‌ 1 ಸ್ಥಾನದಲ್ಲಿದ್ದ ರಶೀದ್‌ ಖಾನ್‌ ಅವರನ್ನು ಹಿಂದಿಕ್ಕಿ ರವಿ ಬಿಷ್ಣೋಯ್‌ ಅಗ್ರಸ್ಥಾನ ಗಳಿಸಿದ್ದಾರೆ. 699 ರೇಟಿಂಗ್‌ ಪಾಯಿಂಟ್ಸ್‌ ಮೂಲಕ ಬಿಷ್ಣೋಯ್‌ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಶುಭಮನ್ ಗಿಲ್, ರವಿಚಂದ್ರನ್ ಅಶ್ವಿನ್ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ODI ಬ್ಯಾಟರ್, ಟೆಸ್ಟ್ ಬೌಲರ್ ಮತ್ತು T20I ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. https://ainlivenews.com/demand-money-using-bangalore-district-collectors-name-register-fir/ ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದರೆ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನ ಪಡೆದಿದ್ದಾರೆ. ಬಿಷ್ಣೋಯ್ ಅವರೊಂದಿಗೆ ಭಾರತೀಯ ಆಟಗಾರರು…

Read More

ಬೆಂಗಳೂರು: ಆ ಯುವಕ ಡಿಲವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ..ಈ ನಡುವೆ ಯುವತಿಯೊಬ್ಬಳ ಪರಿಚಯವಾಗಿ ಅದು ಸ್ನೇಹವಾಗಿತ್ತು..ದಿನ ಕಳೆದಂತೆ ಪ್ರೀತಿಯಾಗಿ ಇಬ್ಬರೂ ಪ್ರಣಯ ಪಕ್ಷಿಗಳಂತೆ ಓಡಾಡ್ತಿದ್ರು..ಹೀಗೆ ಎಂಟು ವರ್ಷಗಳೇ ಕಳೆದಿತ್ತು..ಆದ್ರೆ ಆ ಪ್ರೀತಿ ಮದುವೆ ಹಂತಕ್ಕೆ ಬರ್ತಿದ್ದಂತೆ,ಯುವತಿ ಒಲ್ಲೆ ಎಂದಿದ್ಲು..ಅದ್ಕೆ ಯುವಕ ಏನ್ಮಾಡ್ಬಿಟ್ಟ ಗೊತ್ತಾ . ಪ್ರೀತಿ ಕೊಂದ ಕೊಲೆಗಾತಿ…. ಈ ಸ್ಟೋರಿ ನೋಡಿ. ಈ ಪೋಟೋದಲ್ಲಿ ಕಾಣ್ತಿರೋ ಜೋಡಿಯನ್ನೊಮ್ಮೆ ನೋಡಿ..ಹೆಸ್ರು ರಾಕೇಶ್, ಪ್ರಿಯಾಂಕ ಅಂತ .ರಾಕೇಶ್ ಮೂಲತಃ ಅನೇಕಲ್ ತಾಲೂಕಿನ ಕಲ್ಲಬಾಳು ಗ್ರಾಮದವನು. ವೃತ್ತಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ..ಹೀಗಿರುವಾಗ ಕೆಂಗೇರಿಯ ಕೋಡಿಪಾಳ್ಯದ ಬಳಿ ದೊಡ್ಡಮ್ಮನ ಮನೆಗೆ ಬರುವಾಗ ಇದೇ ಪ್ರೀಯಾಂಕಳ ಪರಿಚಯವಾಗಿತ್ತು..ಸ್ನೇಹ ಪ್ರೀತಿ ಅಂತ ಇಬ್ಬರದ್ದೇ ಒಂದು ಪ್ರಪಂಚವಾಗಿಬಿಟ್ಟಿತ್ತು..ಎಂಟು ವರ್ಷಗಳಿಂದ ಇಬ್ಬರು ಪ್ರೀತಿಸಿದ್ದು, ರೀಲ್ಸ್ ,ಪಾರ್ಕ್ ಮಾಲ್ ಅಂತ ಓಡಾಡಿಕೊಂಡಿದ್ರು..ಯುವತಿಗಾಗಿಯೇ ರಾಕೇಶ್ ಸಾಕಷ್ಟು ಖರ್ಚು ಮಾಡಿದ್ನಂತೆ..ಈ ನಡುವೆ ಮಗನ ಲವ್ ವಿಚಾರ ಗೊತ್ತಾಗಿ  ಮದುವೆಗೆ ಗ್ರೀನ್ ಸಿಗ್ನಲ್ ಕೂಡಾ ಸಿಕ್ಕಿತ್ತಂತೆ..ಆದ್ರೆ ಯುವತಿ ಇತ್ತೀಚೆಗೆ ರಾಕೇಶ್ ನನ್ನ ಅವೈಡ್ ಮಾಡ್ತಿದ್ಲಂತೆ…ಇದ್ರಿಂದ…

Read More

ಮಂಗಳೂರು: ಈ ದೇಶದ ಸಂಪತ್ತು ಭಾರತೀಯರಿಗೆ ಸೇರಿದ್ದು, ಭಾರತಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಸಿ.ಟಿ.ರವಿ (C.T.Ravi) ಟಾಂಗ್ ಕೊಟ್ಟರು. ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆ ಅಪಾಯಕಾರಿ. ಈ ಮಾನಸಿಕತೆಯಿಂದಲೇ ದೇಶ ವಿಭಜನೆಗೆ ಕಾರಣವಾಗಿದ್ದು, ಈ ಹೇಳಿಕೆ ಕೋಮುವಾದ ನೀತಿಯ ನಿದರ್ಶನ. ಓಲೈಕೆ ರಾಜಕಾರಣ ವೋಟ್ ಬ್ಯಾಂಕ್‌ಗಾಗಿ ಇಂತಹ ಅಪಾಯಕಾರಿ ಹೇಳಿಕೆ. https://ainlivenews.com/demand-money-using-bangalore-district-collectors-name-register-fir/ ಈ ದೇಶದ ಸಂಪತ್ತು ಭಾರತೀಯರಿಗೆ ಸೇರಿದ್ದು. ಭಾರತೀಯತೆಯನ್ನ ಒಪ್ಪಿದವರಿಗೆ ಸೇರಿದ್ದು. ಭಾರತದಲ್ಲೇ ಇದ್ದು ಭಾರತ ದೇಶಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ. ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಬೇಕು, ಅದು ನಮ್ಮ ನೀತಿ. ಈ ಓಲೈಕೆಯ ರಾಜನೀತಿಯ ಪರಿಣಾಮ ಕೋಟ್ಯಂತರ ಜನ ನಿರ್ವಸತಿಯಾಗೋದಕ್ಕೆ ಕಾರಣವಾಗಿದ್ದು. ಕಾಂಗ್ರೆಸ್ ಇಸ್ ರಿಯಲ್ ಕಮ್ಯುನಲ್ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.

Read More

ಬೆಂಗಳೂರು: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನಲ್ಲಿರುವ ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಡಿಸೆಂಬರ್ 11 ರಿಂದ ನಂದಿಬೆಟ್ಟಕ್ಕೆ (Nandihills) ಎಲೆಕ್ಟ್ರಿಕ್ ರೈಲು ಆರಂಭಿಸಲು ನೈಋತ್ಯ ರೈಲ್ವೆ ನಿರ್ಧಾರ ಮಾಡಿದೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಈ ರೈಲು (Train) ಕಾರ್ಯನಿರ್ವಹಿಸಲಿದೆ.  ಮೇನ್‍ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳನ್ನು ವಿಸ್ತರಿಸಲು ನಿರ್ಧಾರ ಮಾಡಲಾಗಿದೆ. https://ainlivenews.com/demand-money-using-bangalore-district-collectors-name-register-fir/ 6531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, 06535/06583 ಬೆಂಗಳೂರು, ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಸಂಚರಿಸಲಿವೆ. ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ನೋಡಲು ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಹೀಗಾಗಿ ಚಿಕ್ಕಬಳ್ಳಾಪುರಕ್ಕೆ ರೈಲು ಸೇವೆಗಳನ್ನು ವಿಸ್ತರಿಸುವುದರಿಂದ ಪ್ರಯೋಜನವಾಗಲಿದೆ.

Read More