Author: AIN Author

ನವದೆಹಲಿ: ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ತಮ್ಮ ವಿರುದ್ಧ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ದಾಖಲೆಗಳ ಆಧಾರದ ಮೇಲೆ 2022 ರಲ್ಲಿ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ (ACB) ದಾಳಿ ಮಾಡಿತ್ತು. ಬಳಿಕ ಜಮೀರ್ ಅಹ್ಮದ್ ಖಾನ್ ಆದಾಯದಲ್ಲಿ 2000% ಪಟ್ಟು ಏರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಆದಾಯ ಏರಿಕೆ ಬಗ್ಗೆ ಸದ್ಯ ಲೋಕಾಯುಕ್ತ ತನಿಖೆ ನಡೆಸುತ್ತಿದೆ. https://ainlivenews.com/sunny-deol-drunken-bollywood-actor-reveals-rumors/ ಲೋಕಾಯುಕ್ತ (Lokayukta) ನಡೆಸುತ್ತಿರುವ ತನಿಖೆಗೆ ಕೋರಿ ಮೊದಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅದನ್ನು ವಜಾ ಮಾಡಿತ್ತು. ಬಳಿಕ ಸುಪ್ರೀಂಕೋರ್ಟ್‍ಗೆ (Supreme Court) ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ…

Read More

ಧಾರವಾಡ: ಆರ್‌ಟಿಐ ಕಾರ್ಯಕರ್ತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯ್ತಿ ಪಿಡಿಓ ನಾಗರಾಜ ಗಿಣಿವಾಲದ ಅವರಿಗಾದ ಅನ್ಯಾಯ ಬೇರೆ ಯಾವೊಬ್ಬ ಪಿಡಿಓಗೂ ಆಗಬಾರದು ಹಾಗೂ ಪಿಡಿಓಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಪಿಡಿಓಗಳು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಂದು ನಡೆದ ಪಿಡಿಓಗಳ ಪ್ರತಿಭಟನೆಗೆ ಮಾಜಿ ಶಾಸಕ ಅಮೃತ ದೇಸಾಯಿ ಬೆಂಬಲ ಸೂಚಿಸಿದರು. ರಾಜ್ಯದಲ್ಲಿ ಪಿಡಿಓಗಳು ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಯಾರೋ ಒಬ್ಬ ತಪ್ಪು ಮಾಡಿದರೆ ಅದು ಎಲ್ಲ ಪಿಡಿಓಗಳ ಮೇಲೆ ಬರುವುದು ತರವಲ್ಲ. ಕಾನೂನಿನಲ್ಲಿ ಕೆಲವೊಂದಿಷ್ಟು ತಿದ್ದುಪಡಿಗಳಾಗಬೇಕಿದೆ. ಈ ಪ್ರತಿಭಟನೆಯನ್ನು ಬೆಳಗಾವಿ ಸುವರ್ಣಸೌಧಕ್ಕೆ ಶಿಫ್ಟ್ ಮಾಡಿದರೆ ನಾನೂ ಬರುತ್ತೇನೆ ಎಂದರು. ಕೆಲವೊಂದಿಷ್ಟು ಆರ್‌ಟಿಐ ಕಾರ್ಯಕರ್ತರು ವೈಯಕ್ತಿಕವಾಗಿ ಪಿಡಿಓಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಯಾವ ಪಿಡಿಓಗಳೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ನಿಮ್ಮ ಹಿಂದೆ ಸಂಘಟನೆ ಇದೆ. ನಾವೂ ಇದ್ದೇವೆ ಎಂದು ಧೈರ್ಯ…

Read More

ಹಿರಿಯ ನಟಿ ಲೀಲಾವತಿ (Leelvathi) ನಿಧನಕ್ಕೆ ನಟ ಶಿವರಾಜ್‌ ಕುಮಾರ್ (Shivarajkumar) ಅವರು ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರ ನಿಧನ ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ಅಮ್ಮ ಮತ್ತು ಮಗನ ಬಾಂಧವ್ಯವೇ ಬೇರೆ ತರಹ ಇತ್ತು ಎಂದು ಶಿವಣ್ಣ ಭಾವುಕರಾಗಿದ್ದಾರೆ. ಕಳೆದ ವಾರ ಲೀಲಾವತಿ ಅಮ್ಮನವರನ್ನ ಮಾತನಾಡಿಸಿದೆ. ಅವರ ನಿಧನದಿಂದ ನಮ್ಮ ಚಿತ್ರರಂಗಕ್ಕೆ ನಷ್ಟ ಆಗಿದೆ. ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ವಿನೋದ್ ಯಾವಾಗಲೂ ಹೇಳುತ್ತಿದ್ದರು ಅವರ ಆರೋಗ್ಯದ ಬಗ್ಗೆ ನಾವೆಲ್ಲಾ ಅವರ ಜೊತೆಗೆ ಇರುತ್ತೀವಿ ಎಂದು ಹೇಳಿದ್ದೆ, ಲೀಲಾವತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಿವಣ್ಣ ಮಾತನಾಡಿದ್ದಾರೆ. https://ainlivenews.com/good-news-for-tourists-going-to-nandibetta-hill-is-very-easy-from-now-on/ ಲೀಲಾವತಿ ಅಮ್ಮನ ವಿನೋದ್ ತುಂಬಾ ಹಚ್ಚಿಕೊಂಡಿದ್ದರು. ಅವರಿಬ್ಬರ ಬಾಂಧವ್ಯವೇ ಬೇರೇ ತರಹ ಇತ್ತು. ಈಗ ಅದೆನ್ನೆಲ್ಲಾ ಯೋಚನೆ ಮಾಡಿದಾಗ ಬೇಜಾರಾಗುತ್ತದೆ. ವಿನೋದ್ ಹೇಗೆ ತೆಗೆದುಕೊಳ್ತಾರೋ ಅನಿಸುತ್ತಿದೆ. ವಿನೋದ್ ತಾಯಿನ ಕಳೆದುಕೊಂಡ ನೋವಿನಲ್ಲಿದ್ದಾರೆ. ಇದೆಲ್ಲಾ ಸರಿ ಹೋಗಲಿ ಮತ್ತೆ ವಿನೋದ್ ಅವರನ್ನ ಭೇಟಿ ಮಾಡುತ್ತೇವೆ ಎಂದು ಶಿವಣ್ಣ ಪ್ರತಿಕ್ರಿಯೆ…

Read More

ಅಗಲಿದ ಕನ್ನಡದ ಹಿರಿಯ ನಟಿ ಲೀಲಾವತಿ (Leelavati) ಅವರ ನಿಧನಕ್ಕೆ ಮಂಡ್ಯ ಸಂಸದೆ ಮತ್ತು ನಟಿ ಸುಮಲತಾ ಅಂಬರೀಶ್  (Sumalatha Ambarish) ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಅವರ ಜೊತೆ ನಟಿಸಿರುವ ಸಿನಿಮಾದ ಕುರಿತು ಹೇಳಿಕೊಂಡಿದ್ದಾರೆ. ಕನ್ನಡದ ಹೆಸರಾಂತ ಹಿರಿಯ ನಟಿ ಡಾ.ಲೀಲಾವತಿ ಅವರ ನಿಧನದ (Death) ಸುದ್ದಿ ತೀವ್ರ ಆಘಾತ ತಂದಿದೆ. ದಕ್ಷಿಣದ ಸಿನಿಮಾ ರಂಗಕ್ಕೆ ಇದು ತುಂಬಲಾರದ ನಷ್ಟ. ಆರನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಲೀಲಾವತಿ ಅವರು ನಾನಾ ಭಾಷೆಗಳಲ್ಲಿ ನಟಿಸುವ ಮೂಲಕ ದಕ್ಷಿಣ ಯಶಸ್ವಿ ನಟಿಯಾಗಿದ್ದರು. https://ainlivenews.com/good-news-for-tourists-going-to-nandibetta-hill-is-very-easy-from-now-on/ ಅವರೊಂದಿಗೆ ನನಗೂ ಕಥಾನಾಯಕ ಸಿನಿಮಾದಲ್ಲಿ ಪಾತ್ರ ಮಾಡಲು ಅವಕಾಶ ಸಿಕ್ಕಿತ್ತು ಎಂದು ಸುಮಲತಾ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಅಗಲಿಕೆ ನೋವನ್ನು ಭರಿಸುವಂತಹ ಶಕ್ತಿಯನ್ನು ಲೀಲಾವತಿ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಅವರು ಹೇಳಿದ್ದಾರೆ. 

Read More

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಭಾರತೀಯ ಮಹಿಳೆಯರ ಹೆಸರು ಕೇಳಿಬಂದಿದೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris), ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಮೆರಿಕ ಮೂಲದ ಫೋರ್ಬ್ಸ್‌ ಸಂಸ್ಥೆ ಪ್ರಕಟಿಸಿದ ವಿಶ್ವದ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಾಲ್ವರು ಭಾರತೀಯರ ಪೈಕಿ ನಿರ್ಮಲಾ ಸೀತಾರಾಮನ್‌ ಅವರು 32ನೇ ರ‍್ಯಾಂಕ್‌ನಲ್ಲಿದ್ದರೆ, ಎಚ್‌ಸಿಎಲ್ (HCL) ಕಾರ್ಪೊರೇಷನ್ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ (Roshni Nadar Malhotra) 60ನೇ ರ‍್ಯಾಂಕ್‌, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷೆ ಸೋಮಾ ಮೊಂಡಲ್ 70ನೇ ರ‍್ಯಾಂಕ್‌, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ 76ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಇನ್ನೂ ಯುರೋಪಿಯನ್ ಕಮಿಷನ್ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ (Ursula von der Leyen) ನಂ.1, ಯುರೋಪಿಯನ್…

Read More

ಬೆಂಗಳೂರು: ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಲೀಲಾವತಿಯವರು ನಿಧನರಾಗಿರುವ ಸುದ್ದಿ ಕೇಳಿ ಮುನಸ್ಸಿಗೆ ದುಖವಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಕಲಾರಂಗ ಒಬ್ಬ ಮನೆಯ ಹಿರಿಯರನ್ನು ಕಳೆದುಕೊಂಡು ಬಡವಾದಂತಾಗಿದೆ. https://ainlivenews.com/good-news-for-tourists-going-to-nandibetta-hill-is-very-easy-from-now-on/ ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜಕುಮಾರ್ ಸೇರಿದಂತೆ ಎಲ್ಲ ದಿಗ್ಗಜ ನಟರೊಂದಿಗೆ ವಿಭಿನ್ನ ಪಾತ್ರಗಳನ್ನು ಮಾಡಿ ಎಲ್ಲರ ಮನೆ ಮಾತಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ತಾಯಿಯ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ‌ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

Read More

ಮೈಸೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದ ರೈತರಿಂದ 2.25 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಗಳಂತಹ ಅಧಿಕೃತ ಸಂಗ್ರಹಣ ಏಜೆನ್ಸಿಗಳು ರೈತರಿಂದ 1.71 ಲಕ್ಷ ಮೆ.ಟನ್‌ ಪರಿವರ್ತಿತ ಅಕ್ಕಿ ಸೇರಿ ಒಟ್ಟು 2.25 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿಗೆ ಅನುಮತಿ ನೀಡಲಾಗಿದ್ದು, ಪ್ರತಿ ಎಕರೆಯಿಂದ ಕನಿಷ್ಠ 25 ರಿಂದ ಗರಿಷ್ಠ 40 ಕ್ವಿಂಟಾಲ್‌ವರೆಗೆ ಖರೀದಿಸಲಾಗುತ್ತಿದೆ. ನೋಂದಣಿ ಆರಂಭ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಟಾಸ್ಕ್‌ಫೋರ್ಸ್‌ ರಚಿಸಿ, ಸಭೆ ನಡೆಸಬೇಕು. ನ. 20ರೊಳಗೆ ಜಿಲ್ಲಾ ಮಟ್ಟದಲ್ಲಿಅಕ್ಕಿ ಗಿರಣಿಗಳ ಹಲ್ಲಿಂಗ್‌ ಸಾಮರ್ಥ್ಯ, ಭತ್ತ ಸಂಗ್ರಹಣ ಸಾಮರ್ಥ್ಯ, ಪರಿವರ್ತಿತ ಅಕ್ಕಿಯ ಸಾರವರ್ಧನೆ ಬಗ್ಗೆ ಟಾಸ್ಕ್‌ಫೋರ್ಸ್‌ನಿಂದ ಮಾಹಿತಿ ಸಂಗ್ರಹಿಸಬೇಕು. ಬೆಂಬಲ ಬೆಲೆಯಡಿ ಭತ್ತ ಖರೀದಿ ಬಗ್ಗೆ ಡಿ. 30ರವರೆಗೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ಭತ್ತ ಸರಬರಾಜು…

Read More

ಬೆಂಗಳೂರು, ಡಿ,08- ಅನಾರೋಗ್ಯದಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಹೆಸರಾಂತ ಚಿತ್ರ ನಟಿ ಲೀಲಾವತಿ ಅವರ ನಿಧನಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ಆರ್ ಪಾಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು ೬೦೦ ಚಿತ್ರಗಳಲ್ಲಿ ನಟಿಸಿದ್ದ ಅವರ ನಿಧನದಿಂದ ಕನ್ನಡ ಮಾತ್ರವಲ್ಲದೆ, ಭಾರತದ ಚಿತ್ರರಂಗಕ್ಕೂ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ. ಹಿರಿಯ ನಟಿಯನ್ನು ಉಳಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದರು. ಆದರೆ, ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಈಡೇರಲಿಲ್ಲ ಎಂದು ವಿಷಾದಿಸಿದ್ದಾರೆ. https://ainlivenews.com/good-news-for-tourists-going-to-nandibetta-hill-is-very-easy-from-now-on/ ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿ, ೧೯೯೯-೨೦೦೦ನೇ ಸಾಲಿನಲ್ಲಿ ‘ತುಮಕೂರು ವಿಶ್ವವಿದ್ಯಾಲಯ’ದ ಗೌರವ ಡಾಕ್ಟರೇಟ್ ಪದವಿಯನ್ನು ೨೦೦೮ರಲ್ಲಿ ಪಡೆದಿರುವುದು ಅವರ ನಟನೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ. ಕೇವಲ…

Read More

ಲೀಲಾವತಿ (Leelavati) ಅವರು ಬಹಳಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ನಿರ್ಮಾಪಕಿಯಾಗಿ, ನಟಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಸಿನಿಮಾಗೆ ಬಂದವರು ಲೀಲಾವತಿ ಅವರು. ಆನಂತರ ದೊಡ್ಡ ರೀತಿಯಲ್ಲಿ ನಾಯಕಿ ನಟಿಯಾಗಿ ಬೆಳೆದರು. ಸಾಕಷ್ಟು ಸಿನಿಮಾಗಳನ್ನು ಕೊಟ್ಟವರು. ಅಂತಹ ಕಲಾವಿದರು ನಮ್ಮೊಂದಿಗೆ ಇದ್ದರು ಎನ್ನೋದೇ ಹೆಮ್ಮೆ ಅನಿಸುತ್ತಿದೆ ಎನ್ನುವುದು ನಟಿ ಉಮಾಶ್ರೀ (Umashree) ಮಾತು. https://ainlivenews.com/good-news-for-tourists-going-to-nandibetta-hill-is-very-easy-from-now-on/ ಲೀಲಾವತಿ ಅವರದ್ದು ಮಾದರಿ ಜೀವನ. ಆ ತಾಯಿ ಸಾಕಷ್ಟು ಕಷ್ಟ ಪಟ್ಟಿದ್ಧಾರೆ. ಸನ್ಮಾನ, ಅವಮಾನ ಎರಡನ್ನೂ ಪಡೆದಿದ್ದಾರೆ. ತಾಯಿ ಮತ್ತು ಮಗನ ಬಾಂಧವ್ಯಕ್ಕೆ ಮಾದರಿ ಆದಂತಹ ಜೀವವದು. ಈಗ ತಾಯಿ ಮಗ ದೂರವಾಗಿದ್ದು ನೋವು ತಂದಿದೆ. ಅವರು ಇಲ್ಲ ಅನ್ನೋದು ನಂಬೋಕೆ ಆಗ್ತಿಲ್ಲ. ಮಹಿಳೆಯಾಗಿ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಲೀಲಮ್ಮ. ಅವರ ಹಾಕಿಟ್ಟ ದಾರಿ ನಮಗೆಲ್ಲ ಮಾದರಿಯಾಗಬೇಕು ಎಂದು ನಟಿ, ಮಾಜಿ ಸಚಿವೆ ಉಮಾಶ್ರೀ ಎಂದಿದ್ದಾರೆ.

Read More

ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ರಾಕ್ಷಸರು ವರ್ಸಸ್‌ ಗಂಧರ್ವರು ಟಾಸ್ಕ್‌ ಚಾಲ್ತಿಯಲ್ಲಿತ್ತು. ಇದರಲ್ಲಿ ಗಂಧರ್ವನಾಗಿಯೂ, ರಾಕ್ಷಸನಾಗಿಯೂ ಕಾರ್ತಿಕ್ ಅವರ ಪರ್ಫಾಮೆನ್ಸ್ ಚೆನ್ನಾಗಿತ್ತು. ಆದರೆ ಚಪ್ಪಲಿ ವಿಷ್ಯವನ್ನಿಟ್ಟುಕೊಂಡು ವಿನಯ್ & ಗ್ಯಾಂಗ್ ಕಾರ್ತಿಕ್‌ನ ಟಾರ್ಗೆಟ್‌ ಮಾಡಿ ‘ಕಳಪೆ’ ಕೊಟ್ಟಿದ್ದಾರೆ. ಕಾರ್ತಿಕ್ ಮೇಲೆ ಚಪಾತಿ ಹಿಟ್ಟಿನಿಂದ ವಿನಯ್‌ ಪದೇ ಪದೇ ಜೋರಾಗಿ ಹೊಡೆದರು. https://ainlivenews.com/good-news-for-tourists-going-to-nandibetta-hill-is-very-easy-from-now-on/ ಶೇವಿಂಗ್‌ ಫೋಮ್‌ ಮಿಕ್ಸ್ ಆಗಿದ್ದ ಚಪಾತಿ ಹಿಟ್ಟನ್ನ ಕಾರ್ತಿಕ್ ಬಾಯಿಗೆ ವಿನಯ್ ತುರುಕಿದರು. ಆನಂತರ ಸಿಟ್ಟಿನಿಂದ ಕಾರ್ತಿಕ್ ತಮ್ಮ ಚಪ್ಪಲಿಯನ್ನ ನೆಲಕ್ಕೆ ಬಿಸಾಕಿದರು. ಅಗ ಚಪ್ಪಲಿ ಬೌನ್ಸ್ ಆಗಿ ವಿನಯ್‌ಗೆ ತಾಕಿತು. ಅದಕ್ಕೆ, ‘’ಕಾರ್ತಿಕ್ ಚಪ್ಪಲಿಯಿಂದ ನನ್ನ ಹೊಡೆದ’’ ಎಂದು ವಿನಯ್ ದೊಡ್ಡ ರಂಪ ಮಾಡಿದರು. ಇದೇ ಕಾರಣವನ್ನ ಇಟ್ಟುಕೊಂಡು ಕಾರ್ತಿಕ್‌ಗೆ ಈಗ ಕಳಪೆ ಪಟ್ಟ ಕೊಡಲಾಗಿದೆ. ಕಳಪೆ ಪಟ್ಟ ಪಡೆದ ಕಾರ್ತಿಕ್ ಜೈಲಿಗೆ ತೆರಳಿದ್ದಾರೆ. ವೀಕ್ಷಕರ ಅಭಿಪ್ರಾಯ ‘’ಕಾರ್ತಿಕ್‌ಗೆ ಕಳಪೆ ಕೊಟ್ಟಿರೋದು ತಪ್ಪು. ಗ್ರೂಪಿಸಂನಿಂದ ಕಳಪೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಕಾರ್ತಿಕ್ ಪರ್ಫಾಮೆನ್ಸ್ ಚೆನ್ನಾಗಿತ್ತು.…

Read More