Author: AIN Author

ತಾಯಿ ಅಗಲಿಕೆಯ ನೋವಿನ ನಡುವೆಯೇ ಇಂದು ಹಾಲು ತುಪ್ಪ ಬಿಡುವ ಶಾಸ್ತ್ರವನ್ನ ವಿನೋದ್ ನೆರವೇರಿಸಿದ್ದಾರೆ. ಕನ್ನಡದ ಹಿರಿಯ ನಟಿ, ಬೆಳ್ಳಿ ಪರದೆಯಲ್ಲಿ 6 ದಶಕಕ್ಕೂ ಹೆಚ್ಚು ಕಾಲ ಅಭಿಮಾನಿಗಳ ಮನಸ್ಸು ಗೆದ್ದಿದ್ದ ನಾಯಕಿ, ಪೋಷಕ ನಟಿಯಾಗಿ, ನೂರಾರು ಪಾತ್ರಗಳಿಗೆ ಜೀವ ತುಂಬಿದ್ದ ನಟಿ ಲೀಲಾವತಿ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರನೇ ದಿನವಾಗಿದ್ದು, ಹಾಲುತುಪ್ಪ ಕಾರ್ಯವನ್ನ ಇಂದು ಕುಟುಂಬಸ್ಥರು ನೆರವೇರಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಲೀಲಾವತಿ ಡಿ.8ರಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ತಿಂಗಳಿಂದ ಹಾಸಿಗೆ ಹಿಡಿದಿದ್ದ ಅವರು ಶುಕ್ರವಾರ ಸಂಜೆ ಇಹಲೋಕದ ಪಯಣ ಮುಗಿಸಿ ಚಿರನಿದ್ರೆಗೆ ಜಾರಿದ್ದರು. ನಿನ್ನೆ ನೆಲಮಂಗಲದ ಸೋಲದೇವನಹಳ್ಳಿಯ ತಮ್ಮ ನೆಚ್ಚಿನ ಕನಸಿನ ತೋಟದ ಮನೆಯ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆದಿತ್ತು. https://ainlivenews.com/dengue-outbreak-record-level-cases-detected-in-last-1-month/ ಮೂರನೇ ದಿನದ ಹಾಲು ತುಪ್ಪ ಕಾರ್ಯವನ್ನ ಇಂದು ಮದ್ಯಾಹ್ನ ಕುಟುಂಬದ ಸದಸ್ಯರು, ಅಪ್ತರು, ಮತ್ತು ಸೋಲದೇವನಹಳ್ಳಿಯ ಸುತ್ತಮುತ್ತಲಿನ ಜನರು ಸೇರಿ ಮಾಡಿದ್ದಾರೆ. ಅಗಲಿದ ತಾಯಿಗೆ ಮಗ ವಿನೋದ್…

Read More

ಬೆಂಗಳೂರು: ಸ್ಯಾಂಡಲ್‍ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ (Shivaraj Kumar) ಲೋಕಸಭೆಗೆ ನಿಲ್ಲಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಫರ್ ಕೊಟ್ಟಿದ್ದಾರೆ. ಇಂದು ಅರಮನೆ ಮೈದಾನದಲ್ಲಿ ಈಡಿಗರ (Ediga) ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಟ ಶಿವಣ್ಣಗೆ ಈ ಆಫರ್ ನೀಡಿದ್ದಾರೆ. ಪಾರ್ಲಿಮೆಂಟಿಗೆ ರೆಡಿ ಆಗಿ ಅಂತ ನಾನು ಈಗಾಗಲೇ ಶಿವಣ್ಣಗೆ ಹೇಳಿದ್ದೇನೆ. ಆಗ ಅವರು, ಇಲ್ಲ ಒಂದು 5 ಚಿತ್ರ ಒಪ್ಪಿಕೊಂಡಿದ್ದೇನೆ ಅಂದ್ರು. ಚಿತ್ರ ಯಾವಾಗಾದ್ರೂ ಮಾಡಬಹುದು. ಆದರೆ ಪಾರ್ಲಿಮೆಂಟ್‍ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಅಂತಾ ಹೇಳಿದ್ದೇನೆ ಎಂದು ಡಿಕೆಶಿ (DK Shivakumar) ತಿಳಿಸಿದರು. ಲೋಕಸಭೆಯಲ್ಲಿ (Loksabha) ನಮಗೆ ಆಶೀರ್ವಾದ ಮಾಡುವ ಕೆಲಸ ನೀವು ಮಾಡಬೇಕು. ಮಂಗಳೂರು, ಉಡುಪಿ, ಉತ್ತರ ಕರ್ನಾಟಕ ಎಲ್ಲೆ ಇರ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಿ ಎಂದರು.

Read More

ಬೆಂಗಳೂರು:  ಸ್ವಚ್ಛ ಭಾರತ ಅಭಿಯಾನ ಅನುಷ್ಠಾನಕ್ಕಾಗಿ 2,912 ಕೋಟಿ ರು. ಅನುದಾನ ಮೀಸಲಿಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಬಿಜೆಪಿ ಸದಸ್ಯ ಜ್ಯೋತಿ ಗಣೇಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಚ್ಛ ಭಾರತ ಅಭಿಯಾನದ ಮೊದಲ ಹಂತದಲ್ಲಿ 854 ಕೋಟಿ ರು., ಎರಡನೇ ಹಂತದಲ್ಲಿ 2,058 ಕೋಟಿ ರು. ಅನುದಾನ ಒದಗಿಸಲಾಗಿದೆ. 92 ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಗಿದ್ದು, https://ainlivenews.com/dengue-outbreak-record-level-cases-detected-in-last-1-month/ ನಗರ ಭಾಗದಲ್ಲಿನ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಮೆಟೀರಿಯಲ್ ರಿಕವರಿ ಸ್ಪೆಷಾಲಿಟಿ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಲಭ್ಯವಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು. ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನಕ್ಕಾಗಿಯೇ ಪ್ರತ್ಯೇಕ ಐಎಎಸ್ ಅಧಿಕಾರಿ ನಿಯೋಜಿಸಲಾಗಿದೆ ಎಂದರು.

Read More

ಬೆಂಗಳೂರು: ತೆಲಂಗಾಣದ ಜನರಿಗೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಆರು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಮೊದಲ ಗ್ಯಾರಂಟಿಯನ್ನು ಈಡೇರಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಜನತೆಗೆ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಲಾಗಿತ್ತು. https://ainlivenews.com/dengue-outbreak-record-level-cases-detected-in-last-1-month/ ಪಕ್ಷದ ಮೇಲೆ ವಿಶ್ವಾಸವಿಟ್ಟು ಜನ ಅಧಿಕಾರಕ್ಕೆ ತಂದಿದ್ದಾರೆ. ಹೀಗಾಗಿ, ಪಕ್ಷದ ಹೈಕಮಾಂಡ್ ನಮ್ಮ ರಾಜ್ಯದ ನಾಯಕರಿಗೆ ತೆಲಂಗಾಣ ಚುನಾವಣೆ ಉಸ್ತುವಾರಿ ನೀಡಿತ್ತು. ಪ್ರಚಾರದ ವೇಳೆ ಕೆಲವು ಗ್ಯಾರಂಟಿ ಯೋಜನೆಗಳ ಭರವಸೆ ನೀಡಲಾಗಿತ್ತು. ಅದರಲ್ಲಿ ಮಹಿಳೆಯರಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವುದಾಗಿ ಭರವಸೆಯೂ ಒಂದಾಗಿದೆ. ಮಹಿಳೆಯರು ಬಹು ದೊಡ್ಡ ಬೆಂಬಲ ನೀಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ. 

Read More

ಕೇಂದ್ರ ಸರಕಾರ ನ್ಯಾಯವಾದಿಗಳ ಹಿತರಕ್ಷಣೆಗೆ ಮುಂದಾಗಬೇಕೆಂದು ಕಲಬುರಗಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮೋದಿ ಆಗ್ರಹಿಸಿದ್ದಾರೆ.ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಶರಣು ಮೋದಿ ಸಾರ್ವಜನಿಕರ ಹಿತರಕ್ಷಣೆಗೆ ಶ್ರಮಿಸುವ ನ್ಯಾಯವಾದಿಗಳಿಗೆ ರಕ್ಷಣೆ ನೀಡಬೇಕಾದ್ದು ಸರಕಾರದ ಹೊಣೆಗಾರಿಕೆ ಅಂತ ಹೇಳಿದ್ದಾರೆ. ಈ ಸಂಬಂಧ ಕೇಂದ್ರ ಸರಕಾರ ಅನಗತ್ಯವಾಗಿ ವಿಳಂಬ ಧೋರಣೆ ಮಾಡಬಾರದು ಅಂತ ಕೋರಿದ್ದಾರೆ. ಮಾತ್ರವಲ್ಲ ಸಿಎಂ ಸಿದ್ದರಾಮಯ್ಯನವರೂ ಸಹ ರಾಜ್ಯದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರುವ ಮೂಲಕ ನ್ಯಾಯವಾದಿಗಳ ಹಿತರಕ್ಷಣೆಗೆ ಮುಂದಾಗಬೇಕು. ಆ ಮೂಲಕ ಇಡೀ ರಾಷ್ಟ್ರಕ್ಕೆ ಮಾದರಿ ಆಗಬೇಕೆಂದು ಮನವಿ ಮಾಡಿದ್ದಾರೆ…

Read More

ಗದಗ: ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ವ್ಯಕ್ತಿವೋರ್ವನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ರೈತ ಬಾಲಪ್ಪ ಕೊಪ್ಪದ ಎನ್ನುವ ರೈತನ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ಸಣ್ಣ ಹನಮಪ್ಪ ವಜ್ರದ ಎಂಬಾತನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ರುಂಡ ಹೊತ್ತೊಯ್ದದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗದಗ ಜಿಲ್ಲಾ ಎಸ್ಪಿ ಬಿ.ಎಸ್. ನೇಮಗೌಡ ಅವರು, ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ. ನಿನ್ನೆಯಿಂದಲೇ ಶ್ವಾನದಳ, ಸೀನ್ ಆಫ್ ಕ್ರೈಂ ತಂಡದೊಂದಿಗೆ ರುಂಡಕ್ಕಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರಿಗೆ ಇಂದು ಕೊಲೆ ನಡೆದ ಸ್ಥಳದಿಂದ ನಾಲ್ಕು ನೂರು ಮೀಟರ್ ದೂರದ ಮೆಕ್ಕೆಜೋಳ ಜಮೀನೊಂದರಲ್ಲಿ ವಿಕೃತಿ ‌ಸ್ಥಿತಿಯಲ್ಲಿ ಪತ್ತೆಯಾಗಿದೆ.  ತಲೆ ಬುರುಡೆ, ಮುಖದ ಚರ್ಮ ಸುಲಿದ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಗಾಬರಿ ಬಿಳುವಂತಾಗಿದೆ.

Read More

ಬೆಂಗಳೂರು: ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ ಪತ್ತೆಯಾಗಿರುವ ಕೋಟಿ ಕೋಟಿ ಹಣ ಕಾಂಗ್ರೆಸ್ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ. ಸುದೀರ್ಘ ಕಾಲ ಕಾಂಗ್ರೆಸ್ ಲೂಟಿ ಹೊಡೆದಿರುವ ಈ ದೇಶದ ಸಂಪತ್ತು ಎಲ್ಲೆಲ್ಲಿವೆ ಎಂಬುದನ್ನು ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ನೀವೇ ಹೊರತಂದು ಸಕ್ರಮ ಮಾರ್ಗದಲ್ಲಿ ಜನರಿಗೆ ಹಂಚಿಬಿಡಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಟಾಂಗ್‌ ಕೊಟ್ಟಿದ್ದಾರೆ. https://ainlivenews.com/dengue-outbreak-record-level-cases-detected-in-last-1-month/ ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳ ಮೂಲದ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿಗಳ ಮೇಲೆ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಈವರೆಗೆ 290 ಕೋಟಿರೂ. ಪತ್ತೆಯಾಗಿದೆ. ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ (Siddaramaiah) ಹುಬ್ಬಳ್ಳಿ ಭಾಷಣ ಪ್ರಸ್ತಾಪಿಸಿ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಟಾಂಗ್ ಕೊಟ್ಡಿದ್ದಾರೆ.

Read More

ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1 (Aditya L1) ಬಾಹ್ಯಾಕಾಶ ನೌಕೆಯು ಸೂರ್ಯನ ಪೂರ್ಣ ಚಿತ್ರಣವನ್ನು ಸೆರೆಹಿಡಿದಿದೆ. ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಸೋಲಾರ್ ಅಲ್ಟ್ರಾ ವಯೊಲೆಟ್‌ ಇಮೇಜ್‌ ಟೆಲಿಸ್ಕೋಪ್‌- SUIT) ಸೂರ್ಯನ ಡಿಸ್ಕ್‌ನ ಆರಂಭಿಕ ಸಂಪೂರ್ಣ ಚಿತ್ರಗಳನ್ನು ಸೆರೆಹಿಡಿಯುವ ಶ್ಲಾಘನೀಯ ಸಾಧನೆಯನ್ನು ಮಾಡಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ಮಾಹಿತಿಯನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. https://twitter.com/isro/status/1733104993668915365 ಸೂರ್ಯನನ್ನು ನೇರಳಾತೀತ ವರ್ಣಪಟಲದೊಳಗೆ ವೀಕ್ಷಿಸಲು ವಿನ್ಯಾಸಗೊಳಿಸಲಾದ ಮಹತ್ವದ ಸಾಧನವಾಗಿರುವ SUIT ಪೇಲೋಡ್ ಅನ್ನು ಕಳೆದ ತಿಂಗಳು ನವೆಂಬರ್ 20 ರಂದು ಸಕ್ರಿಯಗೊಳಿಸಲಾಗಿದೆ. ಇದು ಸೂರ್ಯನ ಕ್ರೋಮೋಸ್ಪಿಯರ್ ಮತ್ತು ಪರಿವರ್ತನೆಯ ಪ್ರದೇಶದ ಪರೀಕ್ಷೆಯಲ್ಲಿ ಸಹಾಯ ಮಾಡುತ್ತದೆ. ಸೂರ್ಯಶಿಕಾರಿಗೆ ಹೊರಟಿರುವ ಆದಿತ್ಯ-ಎಲ್1 ಮಿಷನ್ ಮೂಲಕ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ. ಫೋಟೋಗಳು – ಸಮೀಪದ ನೇರಳಾತೀತ ತರಂಗಾಂತರಗಳಲ್ಲಿ – ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ…

Read More

ಕಲಬುರಗಿ: ಇಡೀ ಕಲಬುರಗಿ ಜನರನ್ನ ಬೆಚ್ಚಿ  ಬೀಳಿಸಿದ್ದ ವಕೀಲ ಈರಣ್ಣಗೌಡನ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಮುಖ ಆರೋಪಿ ನೀಲಕಂಠ ಪಾಟೀಲ್ ಬಂಧನ ಬೆನ್ನಲ್ಲೇ ಹೆಂಡ್ತಿ ಸಿದ್ದಮ್ಮ ಸಹ ಅರೆಸ್ಟಾಗಿದ್ದಾಳೆ.. ಕೊಲೆ ಮಾಡಿದ್ದ ಆರೋಪಿ ಮಲ್ಲಿನಾಥನಿಗೆ ಕೃತ್ಯದ ನಂತ್ರ 50 ಸಾವಿರ ರೂಪಾಯಿ ನೀಡಿದ ಆರೋಪದ ಮೇಲೆ ವಿವಿ ಪೋಲೀಸ್ರು ಬಂಧಿಸಿದ್ದಾರೆ. ಒಟ್ಟಾರೆ ಈರಣ್ಣಗೌಡನ ಕೊಲೆ ಕೇಸಲ್ಲಿ ಈವರೆಗೆ ಒಟ್ಟು ಐದು ಜನರ ಬಂಧನ ಆದಂತಾಗಿದೆ..

Read More

ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಇವೆರಡೂ ಒಂದೇ ನಾಣ್ಯದ ಎರಡು ಮುಖವಿದಂತೆ, ಇದೂ ಮೊದಲಿನಿಂದಲೂ ಗೊತ್ತಿರುವಂತಹದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ಧಾರವಾಡದ ತಾಲೂಕಿನ ಉಪ್ಪಿನ‌ ಬೇಟಗೇರಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವರು ಇತ್ತೀಚೆಗೆ ಇಂಡಿ ಅಲೈನ್ಸ್ ಎಂದು ಮಾಡಿದರು. ಯುಪಿಎ ಇದ್ದದ್ದನ್ನು ಇಂಡಿ ಅಲೈನ್ಸ್ ಯಾಕೆ ಮಾಡಿದರು ಎಂದರೆ. ಯುಪಿಎದಲ್ಲಿ 12 ಲಕ್ಷ ಕೋಟಿಗಿಂತಲೂ ಹೆಚ್ಚು ಹಗರಣ ನಡೆದಿವೆ. ಅದಕ್ಕೆ ಬ್ರ್ಯಾಂಡ್ ನೇಮ್ ಹಾಳಾಗಿತ್ತು ಈಗ ಹೊಸ ಹೆಸರಿನಲ್ಲಿ ಟೊಪ್ಪಿಗೆ ಹಾಕಲು ತೀರ್ಮಾನಿಸಿದ್ದರು. ಜೊತೆಗೆ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಒಂದು ರಾಜ್ಯದಲ್ಲಿ ಮಾತ್ರ ಸ್ಥಳೀಯ ಕಾರಣದಿಂದ ಕಾಂಗ್ರೆಸ್ ಬಂದಿದೆ. ಕಾಂಗ್ರೆಸ್ ಪಾರ್ಟಿ ಅಂದರೆ ಅದೂ ಸಿಸಿ‌ಪಾರ್ಟಿ, ಕಾಂಗ್ರೆಸ್ ಕರಫ್ಸೆನ್ ಪಾರ್ಟಿ ಎಂದು ಕುಟುಕಿದರು.‌ ಇನ್ನೂ ರಾಜಸ್ಥಾನ ಬಿಜೆಪಿ ಯಲ್ಲಿ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ಎಲ್ಲವೂ ಸುಳ್ಳು, ವಸುಂಧರಾ ರಾಜೆ ಸೇರಿ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲರೂ ನನ್ನೊಂದಿಗೆ…

Read More