Author: AIN Author

ಬೆಂಗಳೂರು:  ನಗರದ ಖಾಸಗಿ ಶಾಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಈ ಘಟನೆ ಮೂರು ದಿನಗಳ ಹಿಂದೆ ನಗರದ ಖಾಸಗಿ ಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಳನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಫರ್ದೀನ್‍ಗೆ ಹೋಂ ವರ್ಕ್ ಮಾಡಿಲ್ಲವೆಂದು ಶಾಲಾ ಶಿಕ್ಷಕಿ ಕೈಗೆ ರಾಡ್‍ನಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಇತ್ತ ವಿದ್ಯಾರ್ಥಿ ಕೈಗೆ ಗಂಭೀರ ಗಾಯಗಳಾಗಿದ್ದು, ಹುಳಿಮಾವು ಸಾಯಿ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫರ್ದಿನ್ ಕೈಗೆ ಆರು ಹೊಲಿಗೆ ಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ, ಅಸೈನ್ಮೆಂಟ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದಾನೆ. ಶಾಲಾ ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚಿ ಹಾಕಲು ಯತ್ನ ಮಾಡುವ ಆರೋಪವೂ ಕೇಳಿಬಂದಿದೆ.

Read More

ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಪೈಲಟ್‌ಗಳಿಗೆ ದಿಕ್ಕು ತಪ್ಪಿಸುವುದನ್ನು ತಡೆಯಲು ಫೈಟರ್‌ಜೆಟ್‌ಗಳಿಗೆ ಶೀಘ್ರದಲ್ಲೇ ಡಿಜಿಟಲ್‌ ನಕ್ಷೆ (India Made Digital Maps) ಗಳನ್ನು ಅಳವಡಿಸಲು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ಸಜ್ಜಾಗಿರುವುದಾಗಿ ಹೆಚ್‌ಎಎಲ್‌ನ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಡಿಜಿಟಲ್‌ ನಕ್ಷೆ (Digital Maps) ಹೊಂದುವುದರಿಂದ ಪೈಲಟ್‌ಗಳು ಅಚಾನಕ್ಕಾಗಿ ಗಡಿ ದಾಟುವುದಿಲ್ಲ. ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ಅವರ ರೀತಿ ಮತ್ತೊಂದು ಘಟನೆ ಸಂಭವಿಸಬಾರದು. ಅದಕ್ಕಾಗಿ ಈ ಡಿಜಿಟಲ್‌ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಇನ್ಮುಂದೆ ಅವರು ತಮ್ಮ ಕೈಯಲ್ಲಿ ಮ್ಯಾಪ್‌ ಹಿಡಿದಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಹೆಚ್‌ಎಎಲ್‌ನ ಎಂಜಿನಿಯರಿಂಗ್‌ ಮತ್ತು ಆರ್‌&ಡಿ ವಿಭಾಗದ ನಿರ್ದೇಶಕ ಡಿ.ಕೆ ಸುನೀಲ್‌ ಹೇಳಿದ್ದಾರೆ. ಡಿಜಿಟಲ್‌ ನಕ್ಷೆಯಿಂದ ಏನು ಅನುಕೂಲ? ಡಿಜಿಟಲ್‌ ನಕ್ಷೆಯಿಂದ ವಿಮಾನ ಹಾರಾಟ ಸಂದರ್ಭದಲ್ಲಿ ಪೈಲಟ್‌ಗಳು ಕಾಕ್‌ಪಿಟ್ ಡಿಸ್‌ಪ್ಲೇನಲ್ಲಿ (Cockpit Display) ನಕ್ಷೆಯನ್ನು ಪರಿಶೀಲಿಸಬಹುದು. 2ಡಿ ಮತ್ತು 3ಡಿ ರೂಪದಲ್ಲಿ ನಕ್ಷೆ ಲಭ್ಯವಿರಲಿದ್ದು, ಪೈಲಟ್‌ಗಳು ಗುಡ್ಡಗಾಡು ಪ್ರದೇಶದಲ್ಲಿದ್ದರೆ ಮೊದಲೇ ಎಚ್ಚರಿಸುತ್ತದೆ. ಹಾಗಾಗಿ ಎತ್ತರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಉಂಟಾಗುವ ಅಪಘಾತಗಳನ್ನು ತಡೆಯಲು ನೆರವಾಗುತ್ತದೆ.…

Read More

ದುಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (Women’s Premier League) ಕರ್ನಾಟಕದ (Karnataka) ಯುವ ಆಟಗಾರ್ತಿ ವೃಂದಾ ದಿನೇಶ್‌ (Vrinda Dinesh) ಅವರು 1.3 ಕೋಟಿ ರೂ.ಗೆ ಯುಪಿ ವಾರಿಯರ್ಸ್‌ (UP Warriorz) ತಂಡಕ್ಕೆ ಸೋಲ್ಡ್‌ ಆಗಿದ್ದಾರೆ. ದೇಶೀಯ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷ ವೃಂದಾ ಇನ್ನೂ ಟೀಂ ಇಂಡಿಯಾವನ್ನು (Team India) ಪ್ರತಿನಿಧಿಸಿಲ್ಲ. ಹೀಗಿದ್ದರೂ ದೇಶೀಯ ಪಂದ್ಯಗಳಲ್ಲಿ ನೀಡಿದ ಅಮೋಘ ಪ್ರದರ್ಶನವನ್ನು ಗಮನಿಸಿ ಯುಪಿ ತಂಡ ವೃಂದಾ ಅವರನ್ನು ಖರೀದಿಸಿದೆ. ಈ ಮೂಲಕ ಟೀಂ ಇಂಡಿಯಾ ಪ್ರತಿನಿಧಿಸದೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಎರಡನೇ ಆಟಗಾರ್ತಿಯಾಗಿ ವೃಂದಾ ದಿನೇಶ್‌ ಹೊರಹೊಮ್ಮಿದ್ದಾರೆ. ಹರಾಜಿನಲ್ಲಿ ಇವರ ಮೂಲ ಬೆಲೆ 10 ಲಕ್ಷ ರೂ. ಇತ್ತು. ಆದರೆ ಘಟಾನುಘಟಿ ಆಟಗಾರರ್ತಿಯರನ್ನು ಹಿಂದಿಕ್ಕಿ ಭಾರೀ ಮೊತ್ತಕ್ಕೆ ವೃಂದಾ ಈಗ ಮಾರಾಟವಾಗಿದ್ದಾರೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಅವರು 2021ರಲ್ಲಿ ಬರೋಡಾ 83 ಎಸೆತಗಳಲ್ಲಿ 69 ರನ್‌ ಹೊಡೆದಿದ್ದರು. ಛತ್ತೀಸ್‌ಗಢದ ವಿರುದ್ಧ ಪಂದ್ಯದಲ್ಲಿ 67 ರನ್‌ ಹೊಡೆದಿದ್ದರು. ಮಹಿಳಾ…

Read More

ಬೆಂಗಳೂರು: ಆತ ಸೋಷಿಯಲ್ ಮೀಡಿಯಾದಲ್ಲಿ ಒಂದ್ ರೀತಿ ಸ್ಟಾರ್ ಆಗ್ಬಿಟ್ಟಿದ್ದ. ಮೈಮೇಲೆ ಕೆಜಿಗಟ್ಟಲೆ ಚಿನ್ನ ಹಾಕೊಂಡು ವಿಡಿಯೋಗಳ ಮೇಲೆ ವಿಡಿಯೋ ಮಾಡಿಸ್ತಿದ್ದ. ಆದ್ರೆ ರೌಡಿ ಆಕ್ಟಿವಿಟಿಯಲ್ಲೂ ಭಾಗಿಯಾಗ್ತಿದ್ದ ಅಸಾಮಿ ಲ್ಯಾಂಡ್ ಲಿಟಿಗೇಷನ್ ಗೆ ಕೈಹಾಕಿ ಈಗ ಜೈಲು ಪಾಲಾಗಿದ್ದಾನೆ. ಈತನನ್ನ ನೋಡ್ತಿದ್ರೆ ಮಿನಿ ಜ್ಯೂವಲಿರಿ ಶಾಪ್ ಅಂದ್ರೆ ತಪ್ಪೇನಿಲ್ಲ. ಮೈಮೇಲೆ ಕೆಜಿಗಟ್ಟಲೇ ಚಿನ್ನ ಹಾಕೊಂಡು ಸುತ್ತಾ ಹುಡುಗರನ್ನ ಇಟ್ಕೊಂಡು ಈತ ಕೊಡ್ತಿದ್ದ ಬಿಲ್ಡಪ್ಗೆ ಕಮ್ಮಿ ಇರ್ಲಿಲ್ಲ. ಆದ್ರೆ ಈ ಅಸಾಮಿ ಯಲಹಂಕ ಸುತ್ತಮುತ್ತ ರೌಡಿ ಚಟುವಟಿಕೆಯಲ್ಲೂ ಭಾಗಿಯಾಗ್ತಿದ್ದ. ಈತನ ಮೇಲೆ ಮೊದಲೇ ಒಂದು ಕಣ್ಣಿಟ್ಟಿದ್ದ ಖಾಕಿ ಪಡೆ ಪ್ರಕರಣವೊಂದರಲ್ಲಿ ಈಗ ಜೈಲಿಗಟ್ಟಿದೆ.  ಯೆಸ್. ದಾಸ ಅಲಿಯಾಸ್ ದಾಸ ಕಿಂಗ್ ಮೇಕರ್ ಎಂದೇ ಕುಖ್ಯಾತನಾಗಿರೋ ಈತನೆ ಈಗ ಜೈಲು ಪಾಲಾಗಿರೋ ಅಸಾಮಿ. ಅಷ್ಟಕ್ಕೂ ಆಗಿದ್ದೇನು ಅಂದ್ರೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ರಾಮಮೂರ್ತಿ ಮತ್ತು ರಾಮದೇವಿ ಅನ್ನೋರು ನಡುವೆ ಜಮೀನು ವಿವಾದ ಇತ್ತು. ಈ ವಿಚಾರವನ್ನ ರಾಮಮೂರ್ತಿ ಅನಧಿಕೃತ ಪ್ರಾಪರ್ಟಿ ಡೀಲರ್ ಆಗಿದ್ದ ದಾಸನಿಗೆ…

Read More

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರವಿಡೀ  ಮನೆ ಪ್ರಕ್ಷುಬ್ದವಾಗಿಯೇ ಇತ್ತು. ರಕ್ಕಸರು-ಗಂಧರ್ವರ ನಡುವಿನ ಜಿದ್ದಾಜಿದ್ದಿ ವೈಯಕ್ತಿಕ ಮಟ್ಟಕ್ಕೆ ಇಳಿದು, ದೈಹಿಕವಾಗಿ ಗಾಯಗೊಳ್ಳುವ ಅತಿರೇಕಕ್ಕೂ ಹೋಯಿತು. ಪರಿಣಾಮವಾಗಿ ಸಂಗೀತಾ (Sangeeta Sringeri) ಮತ್ತು ಪ್ರತಾಪ್ (Drone Pratap) ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಅದೆಲ್ಲದ ಪರಿಣಾಮವಾಗಿ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ. ಇದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. ಗಂಧರ್ವರು ರಕ್ಕಸರಾಗದ್ದಕ್ಕೆ, ರಕ್ಕಸರು ಕಟುಕರಾಗಿ ಬದಲಾಗಿದ್ದಕ್ಕೆ, ವಿನಂತಿಗಳು ಅಪ್ಪಣೆಗಳಾಗಿ ಬದಲಾಗಿದ್ದಕ್ಕೆ ಕಿಚ್ಚ ಸುದೀಪ್‌, ‘ಪಂಚಾಯ್ತಿ’ಯಲ್ಲಿ ಚರ್ಚೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆಯೇ ಟಾಸ್ಕ್‌ನಲ್ಲಿ ಗಾಯಗೊಂಡು ತುರ್ತಾಗಿ ಪ್ರತಾಪ್-ಸಂಗೀತಾ ಆಸ್ಪತ್ರೆಗೆ ಸೇರಿದ್ದರು. ಅವರ ಬಗ್ಗೆ ಮನೆಯವರಿಗೆ ಸುಳಿವೇ ಇರಲಿಲ್ಲ. ಆದರೆ ಇಂದು ಕಿಚ್ಚನ ಪಂಚಾಯ್ತಿಗೆ ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್‌ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ. ತೆರೆದ ಬಾಗಿಲಿನಿಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರೂ ಒಳಗೆ ಬಂದಿದ್ದಾರೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/  ಆದರೆ ಅವರನ್ನು ನೋಡಿ ಮನೆಯವರೆಲ್ಲರೂ ಶಾಕ್…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆದಂತೆ ನೀರಿನ ದಾಹದ ಬೇಡಿಕೆ ಸಹ  ಹೆಚ್ಚಳವಾಗುತ್ತಿದೆ.ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಕುಡಿಯೋದಕ್ಕೆ ನೀರೇ ಸಿಗಲ್ಲ ಅನ್ನೋ ಸರ್ವೇಗಳು ಜನರ ನೆಮ್ಮದಿ ಹಾಳು ಮಾಡಿದೆ..ಹೀಗಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಬೆಂಗಳೂರು ಜಲಮಂಡಳಿ ಕಾವೇರಿ ಐದನೇ ಹಂತ ಯೋಜನೆಗೆ ಕೈ ಹಾಕಿದೆ..ಈಗಾಗಲೇ ಯೋಜನೆ ಆರಂಭವಾಗಿದ್ದು,ಮುಂದಿನ  ವರ್ಷ  ಏಫ್ರಿಲ್ ನಲ್ಲಿ  ಬೆಂಗಳೂರಿಗೆ 10 ಟಿಎಂಸಿ ನೀರು ಹರಿದು ಬರಲಿದೆ. ಬೆಂಗಳೂರು ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ.ನಗರ ವಿಸ್ತಾರವಾಗುತ್ತಿದ್ದಂತೆ ಜನರ ನೀರಿನ ದಾಹ ತಣ್ಣಿಸಲು ಜಲಮಂಡಳಿಗೆ ಸವಾಲು ಆಗಿದೆ. ಇದೀಗ ಕಾವೇರಿ ಒಂದು, ಎರಡು, ಮೂರು ಹಾಗೂ ನಾಲ್ಕನೇ ಹಂತಗಳ ಮೂಲಕ ಕಾವೇರಿ ನೀರು ನಗರಕ್ಕೆ ಪೂರೈಕೆ ಯಾಗುತ್ತಿದೆ.ಸದ್ಯ ಪ್ರತಿದಿನ 135 ಕೋಟಿ ಲೀಟರ್‌ ನೀರು ಪೂರೈಕೆ ಆಗುತ್ತಿದೆ. ಹೀಗಿದ್ದೂ ನಗರ ನಿತ್ಯ 75 ಕೋಟಿ ಲೀಟರ್‌ನಷ್ಟು ಕೊರತೆ ಅನುಭವಿಸುತ್ತಿದೆ. ಐದನೇ ಹಂತದ ಯೋಜನೆ ಅನುಷ್ಠಾನಕ್ಕೆ ಬಂದರೆ ನೀರಿನ ಕೊರತೆ ಸಂಪೂರ್ಣವಾಗಿ ನೀಗಲಿದೆ  ಅನ್ನೋದು ಜಲಮಂಡಳಿ ಲೆಕ್ಕಚಾರವಾಗಿದ್ದು,ಮಂಡಳಿ ಐದನೇ…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಈ ಹಿಂದೆ ಎರಡ್ಮೂರು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಇದೀಗ ಮತ್ತೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ.  ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ್ದ 22 ವರ್ಷದ ಯುವತಿಯ ಮೈಕೈ ಮುಟ್ಟಿದ್ದು, ಯುವತಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿ ಲೋಕೇಶ್​ನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಬಳಿಕ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ. ತನಿಖೆಯ ವೇಳೆ ಆರೋಪಿ ಲೋಕೇಶ್​ನ ಕರಾಳ ಇತಿಹಾಸ ಬಯಲಾಗಿದ್ದು, ಈತನ ಮೇಲೆ ಈ ಹಿಂದೆ ಕೂಡ ಕೆಲ ಕೇಸ್​ ಗಳಿತ್ತು. ಈ ಹಿಂದೆ ಬಿಎಂಟಿಸಿ ಬಸ್​ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಕೊಂಡಿದ್ದ. ತನಿಖೆಯ ವೇಳೆ ಲೊಕೇಶ್ ಕಳ್ಳತನವನ್ನು ಕಾಯಕ ಮಾಡಿರುವ ವಿಷಯ ಬಯಲಾಗಿದೆ. ಆರೋಪಿ ಬಳಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.

Read More

ಮಂಡ್ಯ: ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ಇರಾನಿಗ್ಯಾಂಗ್ ಸದಸ್ಯನನ್ನು ಮಂಡ್ಯದ ಮದ್ದೂರು ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಸಿದ್ದಾರೆ. ಬೀದರ್ ಮೂಲದ ಜಾವೀದ್ ಬಾಲಿ(45) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಸುಮಾರು 28 ಲಕ್ಷ ರೂ ಮೌಲ್ಯದ 435 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು ಹನ್ನೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬೀದರ್ ನಿಂದ ಮಂಡ್ಯಕ್ಕೆ ಕಾರಿನಲ್ಲಿ ಬಂದು ಸರಕಳ್ಳತನ ಮಾಡುತ್ತಿದ್ದನು. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಮಂಡ್ಯದಲ್ಲಿ ಬೈಕ್ ಎಸ್ಕೇಪ್ ಮಾಡಿ ಸರಗಳ್ಳತನ ಮಾಡುತ್ತಿದ್ದು, ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಮಾಂಗಲ್ಯಸರ ಕಸಿದು ಪರಾರಿಯಾಗಿದ್ದನು. ಕಳೆದ ತಿಂಗಳು ಮದ್ದೂರಿನಲ್ಲಿ ವೃದ್ದೆಗೆ ಸಾಯಿಬಾಬ ಭಕ್ತನ ಸೋಗಿನಲ್ಲಿ 62 ಗ್ರಾಂ ಚಿನ್ನದಸರ ಕಸಿದು ಪರಾರಿಯಾಗಿದ್ದ. ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲಿ ಸರಗಳ್ಳತನ ಮಾಡಿದ್ದ ಆರೋಪಿ ಬೀದರ್ ಗೆ ಎಸ್ಕೇಪ್ ಆಗಿದ್ದ. ಸದ್ಯ ಮದ್ದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು,  ಜಾವೀದ್ ಬಾಲಿಗೆ ಸಾಥ್ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

Read More

ಮಂಡ್ಯ: ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ ವರ್ತೂರು ಸಂತೋಷ್ (Varthur Santhosh). ಹಳ್ಳಿಕಾರ್  (Hallikar) ಹೆಸರಿಗೆ ಅಪಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಹಳ್ಳಿಕಾರ್ ರೈತರು ಸಂತೋಷ್ ಮೇಲೆ ಆಕ್ರೋಶಗೊಂಡಿದ್ದಾರೆ. ತಮ್ಮ ವರ್ಚಸ್ಸಿಗಾಗಿ ಹಳ್ಳಿಕಾರ್ ಹೆಸರು ಸಂತೋಷ್ ಬಳಸಿಕೊಂಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ. ವರ್ತೂರ್ ಸಂತೋಷ್ ಗೆ ಹಳ್ಳಿಕಾರ್ ಒಡೆಯರ್ ಎಂಬ  ಹೆಸರು ಕೊಟ್ಟ ಹಿನ್ನೆಲೆಯಲ್ಲಿ ಇಂಥದ್ದೊಂದು ವಿವಾದ ಶುರುವಾಗಿದ್ದು, ಹಳ್ಳಿಕಾರ್ ತಳಿ ಹೆಸರಿಗೆ ವರ್ತೂರ್ ಸಂತೋಷ್ ರಿಂದ ಅಪಮಾನವಾಗಿದೆ ಎಂದು ರೈತರು ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ (Mandya) ಸೇರಿದ್ದ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು, ಈ ತಳಿಯ ಕುರಿತಂತೆ ವರ್ತೂರು ಸಂತೋಷ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಈ ಕುರಿತಂತೆ ಹಳ್ಳಿಕಾರ್ ಬಗ್ಗೆ ಚರ್ಚಾಗೋಷ್ಠಿಯನ್ನೇ ಮಂಡ್ಯದ ರೈತರು ಏರ್ಪಡಿಸಿದ್ದಾರೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ಡಿ.10ರಂದು ನಡೆಯುವ ಬೃಹತ್ ಹಳ್ಳಿಕಾರ್ ಚರ್ಚೆಗೋಷ್ಠಿಗೆ, ಹಳ್ಳಿಕಾರ್ ಕುರಿತಂತೆ ಚರ್ಚೆ ಮಾಡಲು ವರ್ತೂರ್…

Read More

ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ರೈತರು ಬಿತ್ತನೆ ಮಾಡಿದ ಜಮೀನನಲ್ಲಿ ಖಾಸಗಿ ಕಂಪನಿಯ ಸಿಬ್ಬಂದಿಗಳು ಜೆಸಿಬಿ ಬಳಸಿ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ. ಆರ್‌ಐಪಿಎಲ್ ಮೈನಿಂಗ್ ಕಂಪೆನಿಗೆ ವಿಸ್ತರಣೆಗಾಗಿ ಜಮೀನು ನೀಡಿಲ್ಲ ಎಂದು ರೈತರ ಮೇಲಿನ ಸಿಟ್ಟನ್ನು ಅವರು ಬೆಳೆದ ಬೆಳೆಯನ್ನು ನಾಶ ಮಾಡುವ ಮೂಲಕ ತೋರಿಸಿದ್ದಾರೆ. ಆರ್‌ಐಪಿಎಲ್‌ನ ಈ ದೌರ್ಜನ್ಯದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಡೂರಿನ ರಣಜಿತ್‌ಪುರ ಗ್ರಾಮದಲ್ಲಿ ನಡೆದಿರುವ ಈ ಘಟನೆಯಲ್ಲಿ ಸಾವಿರಾರು ರೂ. ಮೌಲ್ಯದ ಬೆಳೆ ನಾಶವಾಗಿದ್ದು, ರಾತ್ರಿ ಕಳೆದು ಬೆಳಗಾಗುವದರೊಳಗೆ ತಮ್ಮ ಶ್ರಮದ ಫಲವು ನಾಶವಾಗಿರುವುದನ್ನು ಕಂಡ ರೈತರು ದುಃಖಿತರಾಗುವುದರ ಜೋತೆಗೆ ಆಕ್ರೋಶಗೊಂಡಿದ್ದಾರೆ. ಕಾಡಪ್ಪ ಮತ್ತು ಪರಮೇಶ್ವರಪ್ಪ ಸೇರಿದಂತೆ ಇತರೆ ರೈತರ ಬೆಳೆನಾಶವಾಗಿದೆ. ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ವಿವಿಧ ಕೃಷಿ ಪರಿಕಗಳು ಈ ಘಟನೆಯಲ್ಲಿ ನಾಶವಾಗಿದೆ ಎಂದು ರೈತರು ಆರೋಪಿಸಿದ್ದಾರೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಆರ್‌ಐಪಿಎಲ್ ಕಂಪನಿಯವರು ತಮ್ಮ ಮೈನಿಂಗ್ ಕಂಪನಿ ಅಭಿವೃದ್ಧಿಗಾಗಿ ಜಮೀನು ತೆಗೆದುಕೊಳ್ಳಲು ಪಯತ್ನ ನಡೆಸಿತ್ತು. ಆದರೇ ರೈತರು ಭೂಮಿ…

Read More