Author: AIN Author

ಬೆಂಗಳೂರು:- ಕಾಂಗ್ರೆಸ್ ಸರ್ಕಾರದ 6 ತಿಂಗಳ ಆಡಳಿತದಲ್ಲಿ ಭ್ರಷ್ಟಾಚಾರ ಹಾಗೂ ಅರಾಜಕತೆ ಸದ್ದು ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸುವ ಬದಲು ಕಾಂಗ್ರೆಸ್‌ ಸರ್ಕಾರ ಪ್ರತಿಭಟನಾ ನಿರತರನ್ನು ಹತ್ತಿಕ್ಕುತ್ತಿದೆ. ಬೆಳಗಾವಿಯ ಸುವರ್ಣ ಸೌಧದ ಬಳಿ ಪೋಲಿಸಪ್ಪ ದರ್ಪದಿಂದ ಪ್ರತಿಭಟನಾಕಾರರ ವಿರುದ್ದ ತೊಡೆ ತಟ್ಟಿದ್ದೆ ಇದಕ್ಕೆ ಸಾಕ್ಷಿ. ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿನಿತ್ಯ ಹೋರಾಟ, ಮುಷ್ಕರ, ಘೇರಾವ್‌, ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದು, ಸರ್ಕಾರದ ದಯನೀಯ ಆಡಳಿತದ ವೈಫಲ್ಯ ಹಾಗೂ ಜನತೆಯಲ್ಲಿ ಸರ್ಕಾರದ ವಿರುದ್ಧ ಮಡುಗಟ್ಟಿರುವ ಆಡಳಿತ ವಿರೋಧಿ ಅಲೆಯ ಸುಸ್ಪಷ್ಟ ನಿದರ್ಶನ’ವೆಂದು ಬಿಜೆಪಿ ಕಿಡಿಕಾರಿದೆ. ಎಂ.ಕೆ.ಸ್ಟಾಲಿನ್‌ ನಾಡಿಗೆ ಕಾವೇರಿಯನ್ನು ಬೇಕಾಬಿಟ್ಟಿಯಾಗಿ ಹರಿಬಿಟ್ಟು, ರಾಜ್ಯದ ರೈತರ ಅಧಃಪತನವನ್ನು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮೊದಲು ತಟ್ಟಿದ್ದೇ ಕಾವೇರಿ ನೀರು ಹೋರಾಟ ಸಮಿತಿಯ ಪ್ರತಿಭಟನೆ, ಬೆಂಗಳೂರು ಬಂದ್.‌ ಆದರೆ ವೋಟಿಗಾಗಿ ಮೂರನ್ನೂ ಬಿಟ್ಟಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರಿಗೆ ಮೇಲಿಂದ ಮೇಲೆ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇ‌ತ್ರದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂದಿನಿಂದ ಎರಡು ದಿನ ನಮ್ಮ ಜಾತ್ರೆ’ ಹಮ್ಮಿಕೊಂಡಿದೆ. ಅನ್ ಬಾಕ್ಸಿಂಗ್ ಬಿಎಲ್ಆರ್‌ ಹಬ್ಬ’ದ ಅಡಿ ಈ ಜಾತ್ರೆ ಆಯೋಜಿಸಲಾಗುತ್ತಿದೆ. ಭಾನುವಾರ ಬೆಳಿಗ್ಗೆ 9.30ಕ್ಕೆ ವಿಧಾನಸೌಧದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಲಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಆನೆ, ರಥ, ಹೂವಿನ ಪಲ್ಲಕ್ಕಿ ಹಾಗೂ ಎತ್ತಿನಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಎರಡು ದಿನಗಳ ಜಾತ್ರೆ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ ಎಂದು ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ತಿಳಿಸಿದ್ದಾರೆ. ಎರಡು ದಿನಗಳ ಈ ಜಾತ್ರೆಯು ಹಲವು ವೈಶಿಷ್ಟ್ಯ ಒಳಗೊಂಡಿದೆ. ನೈಜ ಜಾನಪದ ಸಂಪ್ರದಾಯವನ್ನು ಈ ಜಾತ್ರೆಯಲ್ಲಿ ಅನುಭವಿಸಬಹುದಾಗಿದೆ. ಎರಡು ನೂರು ಕಲಾವಿದರಿಂದ ಜಾನದಪ ನೃತ್ಯ ಪ್ರದರ್ಶನ ನಡೆಯಲಿದೆ. ಕರಕುಶಲ ಮಳಿಗೆಗಳು ಜಾತ್ರೆಯಲ್ಲಿ ಇರಲಿದ್ದು, ತಯಾರಕರಿಂದ ನೇರವಾಗಿ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಉಚಿತವಾಗಿ ಎತ್ತಿನ ಗಾಡಿಯ ಸವಾರಿಯನ್ನೂ ಅನುಭವಿಸಬಹುದು. ಸ್ಥಳೀಯ ಆಹಾರ ವೈವಿಧ್ಯತೆಯನ್ನು ಆಸ್ವಾದಿಸಬಹುದು…

Read More

ಕಲಬುರಗಿ: -ಕಲಬುರಗಿಯಲ್ಲಿ ಇತ್ತೀಚಿಗೆ ಬರ್ಬರವಾಗಿ ಕೊಲೆಯಾಗಿದ್ದ ವಕೀಲ ಈರಣ್ಣಗೌಡನ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಮುಖ ಆರೋಪಿಯನ್ನ ಪೋಲೀಸ್ರು ಬಂಧಿಸಿದ್ದಾರೆ. ನೀಲಕಂಠ ಪಾಟೀಲ್ ಬಂಧಿತ ಆರೋಪಿ. ಜಮೀನು ವಿವಾದಕ್ಕೆ ಸಂಭಂಧಿಸಿದಂತೆ ಕೊಲೆ ಮಾಡಲಾಗಿತ್ತು ಅನ್ನೋದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈಗಾಗಲೇ ಬಂಧಿತ ಮೂವರು ಆರೋಪಿಗಳು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ವಿವಿ ಪೋಲೀಸ್ರು ಮೇನ್ ಕುಳವನ್ನ ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸೆಂಬರ್ 7 ರಂದು ಸಾಯಿನಗರದ ಅಪಾರ್ಟ್‌ಮೆಂಟಿನಲ್ಲಿ ಕೊಲೆಯಾಗಿತ್ತು.ಭೀಕರ ದೃಶ್ಯ CCTV ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು..

Read More

ವಿಜಯಪುರ:- ಬೆಂಗಳೂರು ಉಗ್ರಗಾಮಿಗಳಿಗೆ ಸೇಫ್ ಜಾಗ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಸಂಬಂಧ X ಮಾಡಿರುವ ಅವರು, ಬೆಂಗಳೂರು ಅಪರಾಧಿಗಳಿಗೆ ಸುರಕ್ಷಿತ ತಾಣವಾಗಿದೆ. ನಗರದಲ್ಲಿ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿವೆ ಎಂಬ ಅಂಶವನ್ನು ಎನ್‌ಐಎ ಅಧಿಕಾರಿಗಳ ಇಂದಿನ ದಾಳಿಯಿಂದ ಸಾಬೀತುಪಡಿಸಲಾಗಿದೆ. ಮುಸ್ಲಿಂ ಉಗ್ರಗಾಮಿಗಳು ರೂಪಿಸಿರುವ ಯಾವುದೇ ಕೆಟ್ಟ ಯೋಜನೆಗಳನ್ನು ವಿಫಲಗೊಳಿಸಲು ಸರ್ಕಾರ ಮತ್ತು ಪೋಲೀಸರು ತಮ್ಮ ಕಣ್ಗಾವಲು ಹೆಚ್ಚಿಸುವುದು ಮತ್ತು ತಮ್ಮ ಗುಪ್ತಚರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಯತ್ನಾಳ್ ಬರೆದುಕೊಂಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿದ್ದರು. ಬೆಂಗಳೂರಿನಲ್ಲೂ ನಡೆದ ದಾಳಿ ವೇಳೆ ಶಂಕಿತ ಉಗ್ರ ಅಲಿ ಅಬ್ಬಾಸ್ ಎಂಬಾತನನ್ನು ಬಂಧಿಸಲಾಗಿದೆ. ಶಂಕಿತ ಉಗ್ರರನು ಐಸಿಸ್​ ಜೊತೆ ನಂಟು ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್​ಐಎ ದಾಳಿ ನಡೆಸಿ ಬಂಧಿಸಿದೆ.

Read More

ಬೆಂಗಳೂರು:- ನೀರು ಹರಿಯಲು ಅಡ್ಡಿಯಾಗದಂತೆ ರಾಜಕಾಲುವೆ ಮೇಲೆ ಸೇತುವೆ ನಿರ್ಮಿಸಿದರೆ ಒತ್ತುವರಿಯಲ್ಲ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜಕಾಲುವೆಯ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ಸೇತುವೆ ನಿರ್ಮಾಣ ಮಾಡಿ, ರಾಜಕಾಲುವೆ ಒಳಭಾಗದಲ್ಲಿ ಯಾವುದೇ ರೀತಿಯ ನಿರ್ಮಾಣ ಮಾಡದೆ, ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಾಗದಂತಿದ್ದರೆ, ಅದು ಒತ್ತುವರಿ ಮಾಡಿದಂತೆ ಆಗುವುದಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೆ, ಒತ್ತುವರಿ ಎಂದರೆ ಯಾವುದೇ ಒಬ್ಬ ವ್ಯಕ್ತಿಯೊಬ್ಬರಿಗೆ ಸೇರದ ಆಸ್ತಿಯ ಮೇಲೆ ಒತ್ತಾಯಪೂರ್ವಕ ಹಾಗೂ ಅನಧಿಕೃತವಾಗಿ ಸ್ವಾಧೀನ ಮಾಡಿಕೊಂಡಿರಬೇಕಾಗುತ್ತದೆ. ಜೊತೆಗೆ, ಪ್ರಸ್ತುತ ಅರ್ಜಿಗೆ ಸಂಬಂಧಿಸಿದಂತೆ ಯೋಜನಾ ಪ್ರಾಧಿಕಾರ ಪರಿಶೀಲನೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದಾದರೆ ಒತ್ತುವರಿಯಾಗಿಲ್ಲ ಎಂಬುದಾಗಿ ಅರ್ಥವಾಗಲಿದೆ. ಆದರೆ, ಬಳಿಕ ಖಾಸಗಿ ವ್ಯಕ್ತಿ ನೀಡಿದ ದೂರಿನ ಅನ್ವಯ ಒತ್ತುವರಿ ಆರೋಪದಲ್ಲಿ ಮತ್ತೆ ತಹಶೀಲ್ದಾರರಿಗೆ ಪತ್ರ ಪತ್ರ ಬರೆಯಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿರುವ…

Read More

ಚಿಕ್ಕಬಳ್ಳಾಪುರ:- ನಗರದ ಬೈಪಾಸ್ ಬಳಿಯ ಅಂಜನೇಯ ಸ್ವಾಮಿ ದೇವಾಲಯದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದು ನಾಲ್ವರು ದುರ್ಮರಣ ಹೊಂದಿದ ಘಟನೆ ಜರುಗಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದು ಗುಂಡಿಯೊಳಗೆ ಬಿದ್ದಿದ್ದರಿಂದ ಕಾರಿನೊಳಗಿದ್ದ ನಾಲ್ವರು ಜಲಸಮಾಧಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಕಾರನ್ನು ಗುಂಡಿಯಿಂದ ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮೃತರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Read More

ಬೆಂಗಳೂರು:- ನಾಳೆ ಸೋಮವಾರ ಕಡಲೆಕಾಯಿ ಪರಿಷೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಹೀಗಾಗಿ ಮಧುವಣಗಿತ್ತಿಯಂತೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ಸುತ್ತಮುತ್ತಲಿನ ಆವರಣ, ರಸ್ತೆ ಸಿದ್ಧವಾಗಿದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಡಲೆಕಾಯಿ ಪರಿಷೆಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪರಿಷೆ ಉದ್ಘಾಟಿಸಲಿದ್ದಾರೆ. ಸುಮಾರು 200 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ದೊಡ್ಡ ಬಸವಣ್ಣ, ದೊಡ್ಡಗಣಪತಿ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ ನಡೆಯಲಿವೆ. ಕಡಲೆಕಾಯಿಗಳಿಂದ ದೊಡ್ಡಗಣಪತಿಗೆ ಅಭಿಷೇಕ ನಡೆಯಲಿದೆ. ರೈತರು ಮತ್ತು ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಸೋಮವಾರ ವಿದ್ಯುಕ್ತವಾಗಿ ಚಾಲನೆಗೊಳ್ಳಲಿರುವ ಬಸವನಗುಡಿಯ ಇಕ್ಕೇಲಗಳಲ್ಲಿ ರೈತರು, ವ್ಯಾಪಾರಿಗಳು ನಾನಾ ಬಗೆಯ ಹಸಿ, ಹುರಿದ ಕಡಲೆಕಾಯಿ ಹಾಕಿಕೊಂಡು ವ್ಯಾಪಾರ ಆರಂಭಿಸಿದ್ದಾರೆ. ಜನ ತಂಡೋಪ ತಂಡವಾಗಿ ಪರಿಷೆಗೆ ಆಗಮಿಸುತ್ತಿದ್ದಾರೆ. ಹಸಿದ ಮತ್ತು ಹುರಿದ ಕಡಲೆ ಕಾಯಿ ಖರೀದಿಸುತ್ತಿದ್ದಾರೆ, ಸವಿಯುತ್ತಿದ್ದಾರೆ.…

Read More

ಬೆಂಗಳೂರು:- ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲು ಕಾಣಿಸಿಕೊಂಡಿದ್ದು, ಮಧ್ಯಾಹ್ನದ ಬಳಿಕ ಮೋಡಕವಿದ ವಾತಾವರಣ ನಿರ್ಮಾಣವಾಗಲಿದೆ. ಎಚ್​ಎಎಲ್​ನಲ್ಲಿ 28.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Read More

ಬೆಂಗಳೂರು:- ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ನಗರದಲ್ಲಿ ವೈರಲ್ ಫೀವರ್ ಹೆಚ್ಚಾಗಿದೆ. ಜ್ವರ, ಶೀತ, ಟೈಫಡ್ ಪ್ರಕರಣಗಳ ಜೊತೆ ಡೆಂಗ್ಯೂ ಪ್ರಕರಣಗಳು ಡಬ್ಬಲ್ ಆಗಿವೆ. ಹಿಂದಿನ ವರ್ಷಕ್ಕೆ ಕಂಪೇರ್ ಮಾಡಿದ್ರೆ ಈ ವರ್ಷ ಡೆಂಗ್ಯೂ ಲಕ್ಷಣಗಳು ಚೇಂಜ್ ಆಗಿವೆ. ಜ್ವರ ಬಿಟ್ಟು ಮತ್ತೆ 3 ದಿನಕ್ಕೆ ಜ್ವರ ಕಾಣಿಸಿಕೊಳ್ತಿದೆ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ನಿಗಾ ವಹಿಸಿರುವ ವೈದ್ಯರು, ಜ್ವರ ಎಂದು ಬರುವ ಮಕ್ಕಳಿಗೆ ಡೆಂಗ್ಯೂ ಪರೀಕ್ಷೆ ಮಾಡುತ್ತಿದ್ದಾರೆ. ಬೆಂಗಳೂರಿಗೆ ಡೆಡ್ಲಿ ಡೆಂಗ್ಯೂ ಭೀತಿ ಜೋರಾಗಿದೆ. ರಾಜಧಾನಿಯಲ್ಲಿ ತಗ್ಗದ ಡೆಂಗ್ಯೂ ಆರ್ಭಟದಿಂದ ಜನರು ಹೈರಾಣಾಗಿದ್ದಾರೆ. ಕಳೆದೊಂದು ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲೆಯ ಕೇಸ್ ಪತ್ತೆಯಾಗಿವೆ. ಕಳೆದ 30 ದಿನಗಳಲ್ಲಿ ರಾಜಧಾನಿಯಲ್ಲಿ ಬರೊಬ್ಬರಿ 2970 ಹೊಸ ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಕಳೆದ ತಿಂಗಳು ಕೊಂಚ ಇಳಿಕೆಯತ್ತ ಸಾಗಿದ್ದ ಹೆಮ್ಮಾರಿ ಡೆಂಗ್ಯೂ ಈಗ ಮತ್ತೆ ಸೈಲೆಂಟ್ ಆಗಿ ಏರಿಕೆಯತ್ತ ಸಾಗಿದೆ. ರಾಜಧಾನಿಯಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ದಾಖಲೆಯ 7673 ಹೊಸ ಡೆಂಗ್ಯೂ ಕೇಸ್ ಕಾಣಿಸಿಕೊಂಡಿದ್ರೆ ಕಳೆದೊಂದೇ…

Read More

ದಾವಣಗೆರೆ:- ಬಹುಸಂಖ್ಯಾತ ಹಿಂದೂಗಳಿಗೆ ಯಾವುದೇ ಅನುದಾನವನ್ನೂ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಮುಸ್ಲಿಮರಿಗೆ ಅನುದಾನ ನೀಡಬೇಕೆಂದರೆ ನಿಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಕೊಡಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಾಕೀತು ಮಾಡಿದರು. ದೇವಸ್ಥಾನಗಳ ಹುಂಡಿಗಳಿಗೆ ಹಿಂದೂ ಭಕ್ತರು ನೀಡುವ ಕಾಣಿಕೆ ಹಣವನ್ನು ಮುಸ್ಲಿಮರಿಗೆ ನೀಡುತ್ತೀರಾ? ಇಡೀ ರಾಜ್ಯವೇ ಬರದಿಂದ ತತ್ತರಿಸಿದೆ. ರೈತರಿಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಚಕಾರ ಎತ್ತದ ಕಾಂಗ್ರೆಸ್ ಸರ್ಕಾರ ಹೇಳಿದಂತೆ ರೈತರ ಖಾತೆಗೆ 2 ಸಾವಿರ ರು. ಪರಿಹಾರ ಹಣ ಬಂದಿಲ್ಲ. ಒಬೊಬ್ಬ ಶಾಸಕರಿಗೂ ಕ್ಷೇತ್ರದ ಅಭಿವೃದ್ಧಿಗೆ 50 ಲಕ್ಷ ರು. ಮಾತ್ರ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಗೆ ತುತ್ತಾದ ರೈತರಿಗೆ ಈ ವರೆಗೆ ಸರ್ಕಾರ ಬೆಳೆ ಹಾನಿ ಪರಿಹಾರವನ್ನೇ ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಕೇಸರಿ ಪೇಟ ಧರಿಸುವುದಿಲ್ಲ, ಹಣೆಗೆ ಕುಂಕುಮ ಹಚ್ಚಲು ವಿರೋಧಿಸುವ ಸಿದ್ದರಾಮಯ್ಯ, ದೇವಸ್ಥಾನದ ಹುಂಡಿ ಹಣ ಅನ್ಯ ಧರ್ಮೀಯರ ಅಭಿವೃದ್ಧಿಗೆ ಬಿಡುಗಡೆ ಮಾಡುತ್ತೀರಾ? ಬೆಳಗಾವಿ ಅಧಿವೇಶನ ನಡೆಯುತ್ತಿದೆ. ಮೊದಲು ಶಾಸಕರ ಕ್ಷೇತ್ರದ…

Read More