Author: AIN Author

ಗದಗ: ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ವ್ಯಕ್ತಿವೋರ್ವನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ರೈತ ಬಾಲಪ್ಪ ಕೊಪ್ಪದ ಎನ್ನುವ ರೈತನ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ಸಣ್ಣ ಹನಮಪ್ಪ ವಜ್ರದ ಎಂಬಾತನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ರುಂಡ ಹೊತ್ತೊಯ್ದದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗದಗ ಜಿಲ್ಲಾ ಎಸ್ಪಿ ಬಿ.ಎಸ್. ನೇಮಗೌಡ ಅವರು, ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ. ನಿನ್ನೆಯಿಂದಲೇ ಶ್ವಾನದಳ, ಸೀನ್ ಆಫ್ ಕ್ರೈಂ ತಂಡದೊಂದಿಗೆ ರುಂಡಕ್ಕಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರಿಗೆ ಇಂದು ಕೊಲೆ ನಡೆದ ಸ್ಥಳದಿಂದ ನಾಲ್ಕು ನೂರು ಮೀಟರ್ ದೂರದ ಮೆಕ್ಕೆಜೋಳ ಜಮೀನೊಂದರಲ್ಲಿ ವಿಕೃತಿ ‌ಸ್ಥಿತಿಯಲ್ಲಿ ಪತ್ತೆಯಾಗಿದೆ.  ತಲೆ ಬುರುಡೆ, ಮುಖದ ಚರ್ಮ ಸುಲಿದ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಗಾಬರಿ ಬಿಳುವಂತಾಗಿದೆ.

Read More

ಬೆಂಗಳೂರು: ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ ಪತ್ತೆಯಾಗಿರುವ ಕೋಟಿ ಕೋಟಿ ಹಣ ಕಾಂಗ್ರೆಸ್ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ. ಸುದೀರ್ಘ ಕಾಲ ಕಾಂಗ್ರೆಸ್ ಲೂಟಿ ಹೊಡೆದಿರುವ ಈ ದೇಶದ ಸಂಪತ್ತು ಎಲ್ಲೆಲ್ಲಿವೆ ಎಂಬುದನ್ನು ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ನೀವೇ ಹೊರತಂದು ಸಕ್ರಮ ಮಾರ್ಗದಲ್ಲಿ ಜನರಿಗೆ ಹಂಚಿಬಿಡಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಟಾಂಗ್‌ ಕೊಟ್ಟಿದ್ದಾರೆ. https://ainlivenews.com/dengue-outbreak-record-level-cases-detected-in-last-1-month/ ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳ ಮೂಲದ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿಗಳ ಮೇಲೆ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಈವರೆಗೆ 290 ಕೋಟಿರೂ. ಪತ್ತೆಯಾಗಿದೆ. ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ (Siddaramaiah) ಹುಬ್ಬಳ್ಳಿ ಭಾಷಣ ಪ್ರಸ್ತಾಪಿಸಿ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಟಾಂಗ್ ಕೊಟ್ಡಿದ್ದಾರೆ.

Read More

ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1 (Aditya L1) ಬಾಹ್ಯಾಕಾಶ ನೌಕೆಯು ಸೂರ್ಯನ ಪೂರ್ಣ ಚಿತ್ರಣವನ್ನು ಸೆರೆಹಿಡಿದಿದೆ. ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಸೋಲಾರ್ ಅಲ್ಟ್ರಾ ವಯೊಲೆಟ್‌ ಇಮೇಜ್‌ ಟೆಲಿಸ್ಕೋಪ್‌- SUIT) ಸೂರ್ಯನ ಡಿಸ್ಕ್‌ನ ಆರಂಭಿಕ ಸಂಪೂರ್ಣ ಚಿತ್ರಗಳನ್ನು ಸೆರೆಹಿಡಿಯುವ ಶ್ಲಾಘನೀಯ ಸಾಧನೆಯನ್ನು ಮಾಡಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ಮಾಹಿತಿಯನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. https://twitter.com/isro/status/1733104993668915365 ಸೂರ್ಯನನ್ನು ನೇರಳಾತೀತ ವರ್ಣಪಟಲದೊಳಗೆ ವೀಕ್ಷಿಸಲು ವಿನ್ಯಾಸಗೊಳಿಸಲಾದ ಮಹತ್ವದ ಸಾಧನವಾಗಿರುವ SUIT ಪೇಲೋಡ್ ಅನ್ನು ಕಳೆದ ತಿಂಗಳು ನವೆಂಬರ್ 20 ರಂದು ಸಕ್ರಿಯಗೊಳಿಸಲಾಗಿದೆ. ಇದು ಸೂರ್ಯನ ಕ್ರೋಮೋಸ್ಪಿಯರ್ ಮತ್ತು ಪರಿವರ್ತನೆಯ ಪ್ರದೇಶದ ಪರೀಕ್ಷೆಯಲ್ಲಿ ಸಹಾಯ ಮಾಡುತ್ತದೆ. ಸೂರ್ಯಶಿಕಾರಿಗೆ ಹೊರಟಿರುವ ಆದಿತ್ಯ-ಎಲ್1 ಮಿಷನ್ ಮೂಲಕ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ. ಫೋಟೋಗಳು – ಸಮೀಪದ ನೇರಳಾತೀತ ತರಂಗಾಂತರಗಳಲ್ಲಿ – ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ…

Read More

ಕಲಬುರಗಿ: ಇಡೀ ಕಲಬುರಗಿ ಜನರನ್ನ ಬೆಚ್ಚಿ  ಬೀಳಿಸಿದ್ದ ವಕೀಲ ಈರಣ್ಣಗೌಡನ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಮುಖ ಆರೋಪಿ ನೀಲಕಂಠ ಪಾಟೀಲ್ ಬಂಧನ ಬೆನ್ನಲ್ಲೇ ಹೆಂಡ್ತಿ ಸಿದ್ದಮ್ಮ ಸಹ ಅರೆಸ್ಟಾಗಿದ್ದಾಳೆ.. ಕೊಲೆ ಮಾಡಿದ್ದ ಆರೋಪಿ ಮಲ್ಲಿನಾಥನಿಗೆ ಕೃತ್ಯದ ನಂತ್ರ 50 ಸಾವಿರ ರೂಪಾಯಿ ನೀಡಿದ ಆರೋಪದ ಮೇಲೆ ವಿವಿ ಪೋಲೀಸ್ರು ಬಂಧಿಸಿದ್ದಾರೆ. ಒಟ್ಟಾರೆ ಈರಣ್ಣಗೌಡನ ಕೊಲೆ ಕೇಸಲ್ಲಿ ಈವರೆಗೆ ಒಟ್ಟು ಐದು ಜನರ ಬಂಧನ ಆದಂತಾಗಿದೆ..

Read More

ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಇವೆರಡೂ ಒಂದೇ ನಾಣ್ಯದ ಎರಡು ಮುಖವಿದಂತೆ, ಇದೂ ಮೊದಲಿನಿಂದಲೂ ಗೊತ್ತಿರುವಂತಹದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ಧಾರವಾಡದ ತಾಲೂಕಿನ ಉಪ್ಪಿನ‌ ಬೇಟಗೇರಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವರು ಇತ್ತೀಚೆಗೆ ಇಂಡಿ ಅಲೈನ್ಸ್ ಎಂದು ಮಾಡಿದರು. ಯುಪಿಎ ಇದ್ದದ್ದನ್ನು ಇಂಡಿ ಅಲೈನ್ಸ್ ಯಾಕೆ ಮಾಡಿದರು ಎಂದರೆ. ಯುಪಿಎದಲ್ಲಿ 12 ಲಕ್ಷ ಕೋಟಿಗಿಂತಲೂ ಹೆಚ್ಚು ಹಗರಣ ನಡೆದಿವೆ. ಅದಕ್ಕೆ ಬ್ರ್ಯಾಂಡ್ ನೇಮ್ ಹಾಳಾಗಿತ್ತು ಈಗ ಹೊಸ ಹೆಸರಿನಲ್ಲಿ ಟೊಪ್ಪಿಗೆ ಹಾಕಲು ತೀರ್ಮಾನಿಸಿದ್ದರು. ಜೊತೆಗೆ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಒಂದು ರಾಜ್ಯದಲ್ಲಿ ಮಾತ್ರ ಸ್ಥಳೀಯ ಕಾರಣದಿಂದ ಕಾಂಗ್ರೆಸ್ ಬಂದಿದೆ. ಕಾಂಗ್ರೆಸ್ ಪಾರ್ಟಿ ಅಂದರೆ ಅದೂ ಸಿಸಿ‌ಪಾರ್ಟಿ, ಕಾಂಗ್ರೆಸ್ ಕರಫ್ಸೆನ್ ಪಾರ್ಟಿ ಎಂದು ಕುಟುಕಿದರು.‌ ಇನ್ನೂ ರಾಜಸ್ಥಾನ ಬಿಜೆಪಿ ಯಲ್ಲಿ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ಎಲ್ಲವೂ ಸುಳ್ಳು, ವಸುಂಧರಾ ರಾಜೆ ಸೇರಿ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲರೂ ನನ್ನೊಂದಿಗೆ…

Read More

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ರಿಯಾಲಿಟಿ ಶೋ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಶೋ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲರಾದ ಕೆವಿ ಪ್ರವೀಣ ಎಂಬುವವರು  ದೂರು ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಭಾರತೀಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಇಮೇಲ್ ಹಾಗೂ ಅಂಚೆ ಮೂಲಕ ದೂರು ನೀಡಲಾಗಿದೆ. ಈ ಕಾರ್ಯಕ್ರಮವು ತೀರ ನೈತಿಕ ಗುಣಮಟ್ಟವನ್ನು ಕಳೆದುಕೊಂಡಿದೆ. ಅಶ್ಲೀಲ ಪದ ಮತ್ತು ಚಪ್ಪಲಿಯಿಂದ ಹೊಡೆದಾಡುವ ದೃಶ್ಯಗಳು, ಬೆದರಿಕೆ ಹಾಕುತ್ತಿರುವುದು ಸ್ಪರ್ಧಿಗಳ ನಡುವೆ ಬಿತ್ತರಗೊಳ್ಳುತ್ತಿವೆ. ಇದು ಕೌಟುಂಬಿಕ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನೊಂದೆಡೆ ವ ಬಿಗ್ ಬಾಸ್ ಸ್ವರ್ಧಿಗಳ ವರ್ತನೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. https://ainlivenews.com/dengue-outbreak-record-level-cases-detected-in-last-1-month/  ಕೆಲ ಸ್ಫರ್ಧಿ‌ಗಳ ಅತಿರೇಕದ ವರ್ತನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಲವು ಮಂದಿ ಟ್ವಿಟರ್(X)ನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.…

Read More

ನವದೆಹಲಿ: ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ (Narayana Murthy) ನಾನು 40 ವರ್ಷಗಳ ಕಾಲ ವಾರದಲ್ಲಿ ಆರು ದಿನ 85 ರಿಂದ 90 ಗಂಟೆ ಕೆಲಸ ಮಾಡುತ್ತಿದ್ದೆ. ನನ್ನ ಶ್ರಮ ವ್ಯರ್ಥ ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಾಧ್ಯಮದ ಜೊತೆ ಇನ್ಫೋಸಿಸ್‌ (Infosys) ಕಂಪನಿ ಸ್ಥಾಪನೆ ಮಾಡುವ ಸಂದರ್ಭದಲ್ಲಿನ ಅನುಭವ ಹಂಚಿಕೊಂಡ ಅವರು,  ಬೆಳಗ್ಗೆ 6:20ಕ್ಕೆ ಕಚೇರಿಯಲ್ಲಿದ್ದರೆ ರಾತ್ರಿ 8:30ಕ್ಕೆ ಮನೆಗೆ ಹೊರಡುತ್ತಿದ್ದೆ ಎಂದು ಹೇಳುವ ಮೂಲಕ 70 ಗಂಟೆಗಳ ಕೆಲಸದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ಪ್ರತಿಯೊಂದು ರಾಷ್ಟ್ರವೂ ಕಠಿಣ ಪರಿಶ್ರಮದ ಮೂಲಕ ಮಾಡಿದೆ ಎಂದು ನನಗೆ ತಿಳಿದಿದೆ. ಬಡತನದಿಂದ ಪಾರಾಗುವ ಏಕೈಕ ಮಾರ್ಗವೆಂದರೆ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ನನ್ನ ಪೋಷಕರು ನನಗೆ ಕಲಿಸಿಕೊಟ್ಟಿದ್ದರು ಎಂದು ತಿಳಿಸಿದರು. https://ainlivenews.com/dengue-outbreak-record-level-cases-detected-in-last-1-month/ ಅಕ್ಟೋಬರ್‌ನಲ್ಲಿ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿ, ಪಾಶ್ಚಿಮಾತ್ಯರಿಂದ…

Read More

ಸ್ಯಾಂಡಲ್‌ವುಡ್ ನಲ್ಲಿ ಕರಾವಳಿ ಭಾಗದ ಸಂಸ್ಕೃತಿ ಸಾರುವ ಮತ್ತೊಂದು ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ‘ಕರಾವಳಿ’ ಹೆಸರಿನಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಸದ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಕರಾವಳಿ ಭಾಗದ ಬಗ್ಗೆಯೇ ಇರುವ ಈ ಸಿನಿಮಾದ ಟೀಸರ್ ಅನ್ನು ಮಂಗಳೂರಿನಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಲಾಯಿತು. ಅಂದಹಾಗೆ ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.

Read More

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಮೋಸ ಮಾಡಿ ಕ್ಯಾಪ್ಟನ್ ಪಟ್ಟ ಏರೋದ್ದಕ್ಕೂ ಒಗ್ಗಟ್ಟಿದೆ. ಕಳಪೆ ಹಣೆಪಟ್ಟಿ ಕೊಟ್ಟು ಸ್ಪರ್ಧಿಯನ್ನ ಜೈಲಿಗೆ ಕಳುಹಿಸೋದ್ದಕ್ಕೂ ಒಗ್ಗಟ್ಟಿದೆ. ಇದೀಗ ವಿನಯ್ ತಾಳಕ್ಕೆ ಕುಣಿದು ಕಳಪೆ ಎಂದು ಜೈಲಿಗಟ್ಟಿದ ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ವಾರದ ಆಟ, ಅವಮಾನ, ಹಠ ಇವೆಲ್ಲವೂ ಗಮನಿಸಿ ಈ ಬಾರಿ ಸುದೀಪ್, ಕಾರ್ತಿಕ್‌ಗೆ (Karthik Mahesh) ಭೇಷ್ ಎಂದಿದ್ದಾರೆ. ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ (Kichchana Chappale) ಸಿಕ್ಕಿದೆ. ಈ ವಾರವಿಡೀ ಮನೆಯಲ್ಲಿ ಸ್ಪರ್ಧಿಗಳ ಜಗಳ, ರಂಪಾಟ ಇತ್ತು. ಇದರ ನಡುವೆ ಟಾಸ್ಕ್‌ನಲ್ಲಿ ಚಪ್ಪಲಿ ಎಸೆದರು ಎಂಬ ಕಾರಣಕ್ಕೆ, ಟಾಯ್ಲೆಟ್ ವಿಚಾರ & ಮೈಮ್‌ನಿಂದಾಗಿ ಕಾರ್ತಿಕ್ ಕಳಪೆ ಕೊಟ್ಟು ಜೈಲಿಗಟ್ಟಿದ್ದರು ವಿನಯ್ & ಟೀಮ್. ಇದೀಗ ಅದೇ ಕಾರ್ತಿಕ್‌ಗೆ ಸುದೀಪ್ (Sudeep) ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ. ಕಿಚ್ಚನ ಚಪ್ಪಾಳೆ ಪಡೆದ ಕಾರ್ತಿಕ್ ಭಾವುಕರಾಗಿ ಗಳಗಳನೇ ಅತ್ತಿದ್ದಾರೆ. https://ainlivenews.com/dengue-outbreak-record-level-cases-detected-in-last-1-month/ ಕಾರ್ತಿಕ್ ಟಾಯ್ಲೆಟ್ ವಿಚಾರವಾಗಿ ಪವಿ ಪೂವಪ್ಪ, ವಿನಯ್ (Vinay),…

Read More

ಸ್ಯಾಂಡಲ್‌ವುಡ್ ನಲ್ಲಿ ಕರಾವಳಿ ಭಾಗದ ಸಂಸ್ಕೃತಿ ಸಾರುವ ಮತ್ತೊಂದು ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ‘ಕರಾವಳಿ’ ಹೆಸರಿನಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಸದ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಕರಾವಳಿ ಭಾಗದ ಬಗ್ಗೆಯೇ ಇರುವ ಈ ಸಿನಿಮಾದ ಟೀಸರ್ ಅನ್ನು ಮಂಗಳೂರಿನಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಲಾಯಿತು. ಅಂದಹಾಗೆ ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ. ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯದ ಜೊತೆಗೆಯೇ ಕೋಣ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತಿದೆ. ಈ ಟೀಸರ್ ನೋಡ್ತಿದ್ರೆ ಮನುಷ್ಯ ಮತ್ತು ಪ್ರಾಣಿ ನಡುವಿನ…

Read More