Author: AIN Author

ರೈತರ ಜಮೀನಿಗೆ ತೆರಳುವ ದಾರಿಗೆ ಅನ್ಯಭೂಮಾಲೀಕರು ಇನ್ನುಮುಂದೆ ಅಡ್ಡಿಪಡಿಸುವಂತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯಾದ್ಯಂತ ರೈತರಿಂದ ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿಯ ಸಮಸ್ಯೆ ಇದೆ. ಇದರಿಂದ ರೈತರಿಗೆ ತೊಂದರೆಗಳಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಸರ್ಕಾರಕ್ಕೆ ಬಂದ ದೂರುಗಳು ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಮಾಡಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿರುವುದು ಸಾರ್ವಜನಿಕರಿಂದ ಮನವಿ/ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ರಿಜಿಸ್ಟರ್‌ನಲ್ಲಿ ನಮೂದಿಗೂ ಅವಕಾಶ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರಲ್ಲಿ ದಾರಿಯ ಹಕ್ಕುಗಳು ಮತ್ತು ಇತರ, ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು, ಸಂಬಂಧಪಟ್ಟ ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ…

Read More

ಕಳೆದ ವಾರದ ಕೋಲಾಹಲಗಳು, ಜಗಳಗಳು, ಟಾಸ್ಕ್‌ ಎಂಬುದು ವಿಕೋಪಕ್ಕೆ ತಿರುಗಿಕೊಂಡ ವಿಪರ್ಯಾಸಗಳು, ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ತೆಗೆದುಕೊಂಡ ಕ್ಲಾಸ್‌… ಎಲ್ಲವೂ ಮುಗಿದು ಬಿಗ್‌ಬಾಸ್‌ ಮನೆಯೀಗ ಹೊಸ ವಾರದ ಹೊಸ ದಿನಕ್ಕೆ ಕಾಲಿರಿಸಿದೆ. ಈ ವಾರದ ಮೊದಲ ದಿನ ಹೇಗಿತ್ತು? ಅದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. ಹೊಸ ವಾರದ ಮೊದಲ ದಿನ ಭಾವಪೂರ್ಣವಾಗಿತ್ತು. ಮನೆಯ ಸದಸ್ಯರೆಲ್ಲರೂ ಈ ಭಾವದ ಮಳೆಯಲ್ಲಿ ಭರಪೂರ ನೆನೆದಿದ್ದಾರೆ. ಇಂಥದ್ದೊಂದು ಎಮೋಷನಲ್‌ ಓಪನ್‌ಅಪ್‌ ಆಗುವ ಅವಕಾಶವನ್ನು ಕಲ್ಪಿಸಿದ್ದು ಬಿಗ್‌ಬಾಸ್‌. ಬಿಗ್‌ಬಾಸ್‌, ಮನೆಯ ಪ್ರತಿ ಸದಸ್ಯರನ್ನು ಕನ್ಫೆಷನ್‌ ರೂಮಿಗೆ ಕರೆದು ಅವರ ಮನದಾಳದ ಮಾತುಗಳಿಗೆ ಕಿವಿಯಾಗಿದ್ದಾರೆ. ಒಂಟಿಯಾಗಿ ಕನ್‌ಪೆಷನ್‌ ರೂಮಿನಲ್ಲಿ ಕೂತ ಸ್ಪರ್ಧಿಗಳು ತಮ್ಮ ಮನಸಲ್ಲಿ ಮುಚ್ಚಿಕೊಂಡಿದ್ದ ಹಲವು ಸಂಗತಿಗಳನ್ನು, ಕಾಡುವ ವಿಷಯಗಳನ್ನು, ಗಾಯದ ನೋವುಗಳನ್ನು ಮನಬಿಚ್ಚಿ ಮಾತಾಡಿದ್ದಾರೆ. ಹೊರಜಗತ್ತಿಗೆ ಇದುವರೆಗೆ ಒರಟು, ಸಂಚುಕೋರರು, ಅವಕಾಶವಾದಿ, ಚೇಲಾ, ಡಾಮಿನೆಂಟ್, ಉದ್ಧಟ, ನೆಗೆಟೀವ್, ಕುತಂತ್ರಿ, ಮಾತುಗಾರರು ಹೀಗೆ ಹತ್ತು ಹಲವು ಲೇಬಲ್‌ಗಳನ್ನು ಮನೆಯ ಉಳಿದ ಸದಸ್ಯರಿಂದಲೇ ಪಡೆದುಕೊಂಡು…

Read More

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದ ಕ್ಷಮತಾ ಸೇವಾ ಸಂಸ್ಥೆ ಹಾಗೂ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ನೇತೃತ್ವದಲ್ಲಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಸಸಿಗೆ ನೀರುಣಿಸುವ ಮೂಲಕ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು. ಉಪ್ಪಿನ ಬೆಟಗೇರಿ ಗ್ರಾಮವಷ್ಟೇ ಅಲ್ಲದೇ ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರೂ ಸಹ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಲಾಭ ಪಡೆದುಕೊಂಡರು. ಫಿಜಿಶಿಯನ್ನರು, ನೇತ್ರ ಶಸ್ತ್ರಚಿಕಿತ್ಸಕರು, ಶಸ್ತ್ರ ಚಿಕಿತ್ಸಕರು, ಚರ್ಮ ರೋಗ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಚಿಕ್ಕಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ನರರೋಗ ತಜ್ಞರು, ದಂತ ವೈದ್ಯರು ಹಾಗೂ ಎಸ್‌ಡಿಎಂ ನಾರಾಯಣ ಹೃದಯಾಲಯದ ಹೃದಯ ರೋಗ ತಜ್ಞರು ಒಂದೇ ಸೂರಿನಡಿ ಲಭ್ಯವಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುವ ಮೂಲಕ ಉಚಿತವಾಗಿ ಔಷಧಿ ಕೂಡ ವಿತರಣೆ ಮಾಡಿದರು. ಮಾಜಿ ಶಾಸಕರಾದ ಅಮೃತ ದೇಸಾಯಿ,…

Read More

ಬೆಂಗಳೂರು:- ಅನ್ನಭಾಗ್ಯ ಯೋಜನೆಯ ಯಜಮಾನಿ ಫಲಾನುಭವಿ ಖಾತೆಗೆ ಇದುವರೆಗೂ ಹಣ ಹೋಗದೇ ಇದ್ದಲ್ಲಿ ಇನ್ನು ಮುಂದೆ ಎರಡನೇ ಯಜಮಾನ/ನಿ ಖಾತೆಗೆ (ಅಂದರೆ ಸೀನಿಯರ್‌ ಖಾತೆಗೆ) ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯದ ಹಣವನ್ನು ಇದುವರೆಗೂ ಪಡೆಯದೇ ಇದ್ದವರಿಗೆ ಈ ಡಿಸೆಂಬರ್‌ ತಿಂಗಳಿಂದ ಕೆಜಿ ಅಕ್ಕಿಗೆ ತಲಾ 30 ರೂಪಾಯಿಯಂತೆ ಒಬ್ಬರಿಗೆ 170 ರೂಪಾಯಿಯನ್ನು ರಾಜ್ಯ ಸರ್ಕಾರ ಜಮೆ ಮಾಡಲಿದೆ. ಇದುವರೆಗೆ ಪಡಿತರವನ್ನು ಸಮರ್ಪಕವಾಗಿ ಪಡೆದರೂ ಅನ್ನಭಾಗ್ಯ ಯೋಜನೆಯಡಿ ಬಾಕಿ 5 ಕೆಜಿ ಅಕ್ಕಿ ಸಿಗದೇ ಇದ್ದ ಕುಟುಂಬಕ್ಕೆ ಈ ಡಿಸೆಂಬರ್‌ ತಿಂಗಳಿಂದ ಹಣ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮನೆ ಯಜಮಾನಿ ಖಾತೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ಹಣ ಹಾಕಲು ಆಗಿರುವುದಿಲ್ಲ. ಹೀಗಾಗಿ ಅವರ ತರುವಾಯ ಸೀನಿಯರ್‌ ಇರುವವರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಈಚೆಗೆ ತೀರ್ಮಾನವನ್ನು ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ…

Read More

ಹುಬ್ಬಳ್ಳಿ: ಕರ್ನಾಟಕದಲ್ಲಿ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕಬೇಕು ಅನ್ನೋದಾ ಕುಮಾರಸ್ವಾಮಿ ಅವರ ಉದ್ದೇಶ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ .ಕೆ. ಪಾಟೀಲ್ ಕಿಡಿ ಕಾರಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಶಾಸಕರನ್ನ ಖರೀದಿ ವಸ್ತುಗಳನ್ನಾಗಿ ಮಾಡುವ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ ಲೋಕಸಭಾ ಚುನಾವಣೆ ಚುನಾವಣೆ ನಂತರ ಕಾದು ನೋಡಿ ಎಂದು ‌ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರವನ್ನು ಅಭದ್ರಗೊಳಿಸುವಂತ ಮಾತುಗಳು ಯಾವ ಪುರುಷಾರ್ಥಕ್ಕೆ, ಉದ್ದೇಶ ಏನು? ಕರ್ನಾಟಕದಲ್ಲಿ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕಬೇಕು ಅನ್ನೋದಾ ಇದಿಯಾ ಸರ್ಕಾರಗಳನ್ನ ಅಭದ್ರಗೊ ಳಿಸುವುದು ಒಂದು ರೀತಿ ಷಡ್ಯಂತ್ರ ಜನರಿಗೆ ಕೆಲಸ ಆಗಬೇಕು. ಅಭಿವೃದ್ಧಿ ಕಡೆ ಗಮನ ಹರಿಸಬೇಕು ಅದನ್ನು ಬಿಟ್ಟು ಮಾಧ್ಯಮಗಳ ಮೂಲಕ ಜನರ ಮನಸ್ಸನ್ನು ಅಭದ್ರಗೊಳಿಸುವ ಪ್ರಯತ್ನ ಯಶಸ್ವಿ ಆಗೋದಿಲ್ಲ ಇದು ಸರಿಯಲ್ಲ. ಜನರಿಗೆ ಎಲ್ಲವೂ ತಿಳಿಯೋಕೆ ಪ್ರಾರಂಭವಾಗಿದ್ದು…

Read More

ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಟನೆಯ ಸಿನಿಮಾದಲ್ಲಿ ನಟಿಸುವಂತೆ ತಮಗೆ ಆಫರ್ ಬಂದಿದ್ದು ನಿಜ ಎಂದಿದ್ದಾರೆ ಕನ್ನಡದ ಹೆಸರಾಂತ ಶಿವರಾಜ್ ಕುಮಾರ್ (Shivaraj Kumar). ಮೊದ ಮೊದಲು ಕನ್ನಡದ ಹೊರತಾಗಿ ಬೇರೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಶಪಥ ಮಾಡಿದ್ದರು ಶಿವಣ್ಣ. ಯಾವಾಗ ಒಪ್ಪಿಕೊಳ್ಳೋಕೆ ಶುರು ಮಾಡಿದರೂ, ಅಲ್ಲಿಂದ ಅನೇಕ ಕರೆಗಳು ಅವರಿಗೆ ಬಂದಿವೆ. ಅದರಲ್ಲೂ ಜೈಲರ್ ಗೆಲುವಿನ ನಂತರ ಬೇಡಿಕೆ ಇನ್ನೂ ಹೆಚ್ಚಾಗಿದೆ. ಜೈಲರ್ ಒಪ್ಪಿಕೊಳ್ಳುವಾಗಲೇ ಧನುಷ್ (Dhanush) ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೂ ಸಹಿ ಮಾಡಿದ್ದರು ಶಿವರಾಜ್ ಕುಮಾರ್. ಇದೀಗ ರಾಮ್ ಚರಣ್ ಅವರ ಸಿನಿಮಾದಲ್ಲೂ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಒಪ್ಪಿಗೆ ಸೂಚಿಸಿದೇ ಇದ್ದರೂ, ಆಫರ್ ಬಂದಿದ್ದು, ಮಾತುಕತೆ ನಡೆದಿದ್ದು ನಿಜ ಎಂಬುದು ಬಹಿರಂಗವಾಗಿದೆ. ಜೈಲರ್ ಸಿನಿಮಾದ ನಂತರ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.  ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ವಿವಿಧ ಬಗೆಯ ಬಂದೂಕು ಹಿಡಿದುಕೊಂಡಿರುವ…

Read More

ಗ್ಯಾಂಗ್ ಕಟ್ಟಿಕೊಂಡು ಗೆಲ್ತೀನಿ ಎಂದವರೆಲ್ಲ ಬಿಗ್​ ಬಾಸ್​ ಮನೆಯಿಂದ ಒಬ್ಬೊಬ್ಬರೇ ಔಟ್ ಆಗ್ತಿದ್ದಾರೆ. ಡಿಸೆಂಬರ್ 10ರ ಎಪಿಸೋಡ್​ನಲ್ಲಿ ಸ್ನೇಹಿತ್ ಗೌಡ ಎಲಿಮಿನೇಟ್ ಆಗಿದ್ದಾರೆ. ಇದು ವಿನಯ್ ಗೌಡ ಹಾಗೂ ನಮ್ರತಾ ಗೌಡ ಅವರಿಗೆ ಶಾಕ್ ನೀಡಿದೆ. ‘ಟಾಪ್​ 5ರಲ್ಲಿ ನಾವೇ ಇರೋದು’ ಎಂದು ಬೀಗಿದ್ದವರೆಲ್ಲ ಒಬ್ಬೊಬ್ಬರೇ ಬಿಗ್ ಬಾಸ್​ನಿಂದ ಔಟ್ ಆಗುತ್ತಿದ್ದಾರೆ. ಇನ್ನಾದರೂ ನಮ್ರತಾ ಹಾಗೂ ವಿನಯ್ ಪಾಠ ಕಲಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಆರಂಭದಲ್ಲಿ ಸಮರ್ಥರು, ಅಸಮರ್ಥರು ಎಂದು ಎರಡು ಟೀಂ ಮಾಡಲಾಗಿತ್ತು. ಸಮರ್ಥರ ಸಾಲಿನಲ್ಲಿ ವಿನಯ್, ಸ್ನೇಹಿತ್, ನಮ್ರತಾ ಮೊದಲಾದವರು ಇದ್ದರು. ಅವರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಬಿಗ್ ಬಾಸ್​ ವಾರದ ಟಾಸ್ಕ್​ ಆಡಲು ತಂಡದವೊಂದನ್ನು ರೂಪಿಸಿದ್ದರು. ಈ ತಂಡದಲ್ಲಿ ನಮ್ರತಾ, ವಿನಯ್, ಸ್ನೇಹಿತ್, ಈಶಾನಿ, ತುಕಾಲಿ ಸಂತೋಷ್, ರಕ್ಷಕ್ ಹಾಗೂ ನೀತು ವನಜಾಕ್ಷಿ ಇದ್ದರು. ವಿನಯ್ ಅವರು ಎಲ್ಲರನ್ನೂ ಕರೆದು ಫಿನಾಲೆ ಬಗ್ಗೆ ಮಾತನಾಡಿದ್ದರು. ‘ಸ್ಟ್ರೆಟಜಿ ಮಾಡೋಣ . ನಮ್ಮ ವಿರುದ್ಧ ತಂಡದ ಒಬ್ಬೊಬ್ಬರನ್ನು…

Read More

ಬೆಂಗಳೂರು: ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ ಆರೋಪದಡಿ ದೂರು ದಾಖಲಾಗಿದೆ. ಡಾ.ವೆಂಕಟೇಶಯ್ಯ ಅವರು ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲಾಗಿದೆ. ನಕಲಿ ಲೆಟರ್ ಹೆಡರ್ ಸೃಷ್ಟಿಸಿ ಸಿಎಂ ಕಚೇರಿಯಿಂದ ಲೋಕೋಪಯೋಗಿ ಸಚಿವರಿಗೆ ಕಡತವೊಂದನ್ನು ಕಳುಹಿಸಲಾಗಿದೆ. ಈ ಕಡತದಲ್ಲಿ ರಾಜೇಂದ್ರ ಹೆಸರಿನಲ್ಲಿ ಸಹಿ ಹಾಕಲಾಗಿದ್ದು, ಅಂಕಿತ್ ಎಂಬಾತನಿಗೆ ಇಲಾಖೆಯಲ್ಲಿ ತಾತ್ಕಾಲಿಕ ಕೆಲಸ ನೀಡುವಂತೆ ಉಲ್ಲೇಖಿಸಲಾಗಿದೆ. ಆದರೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ರಾಜೇಂದ್ರ ಎಂಬ ವ್ಯಕ್ತಿಯೇ ಇಲ್ಲ. ಈ ಹಿನ್ನೆಲೆ ಸಿಎಂ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Read More

ಬೆಳಗಾವಿ: ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ 6 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಯತ್ನಾಳ್ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಕೈಗೆತ್ತುಕೊಳ್ಳಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ,ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ಚರ್ಚೆಯಲ್ಲಿ ಭಾಗಿ ಸಾಧ್ಯತೆ ಇದೆ. ಇನ್ನೂ ಬರ ಮತ್ತು ಪರಿಹಾರ ಕುರಿತಂತೆ ಕಳೆದ ಮೂರು ದಿನಗಳಿಂದ ನಡೆದ ಚೆರ್ಚೆ ಮೇಲೆ ಕಂದಾಯ ಇಲಾಖೆ,‌ ಗ್ರಾಮೀಣಾಭಿವೃದ್ದಿ ಇಲಾಖೆ ಹಾಗೂ ಕೃಷಿ ಇಲಾಖೆ ಸಚಿವರಿಂದ ಉತ್ತರ ಸಾಧ್ಯತೆ ಇದೆ. ವಿಧಾನ ಸಭೆಯಲ್ಲಿ ಹಾಕಿರುವ ಸಾವರ್ಕರ್ ಪೋಟೋ ಮತ್ತು ನಿಯಮಾವಳಿ ಪ್ರಕಾರ ಬದಲಾವಣೆಗೆ ಕಾಂಗ್ರೆಸ್ ಕೆಲ ಶಾಸಕರ ಆಗ್ರಹ ಗಮನ ಸೆಳೆಯುವ ಸೂಚನೆ ಮೂಲಕ ಚೆರ್ಚೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಇಂದು ನಡೆಸಲು ಉದ್ದೇಶಿಸಿದ್ದ ಬಿಜೆಪಿ ಶಾಸಕಾಂಗ ಸಭೆ ರದ್ದು ಮಾಡಲಾಗಿದೆ. ಅಧಿವೇಶನ ಆರಂಭಕ್ಕು ಮುನ್ನ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ದೂರದ ಊರಿಂದ ಎಲ್ಲರು ಸಮಯಕ್ಕೆ ಸರಿಯಾಗಿ ಸಭೆಗೆ ಬರೋದು ಕಷ್ಟ.…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಕಳ್ಳನೊಬ್ಬ ಇದ್ದಾನೆ. ಲೋಡ್ ಗಟ್ಟಲೇ ಸಿಮೆಂಟ್ ಬಿಟ್ಪ ಸಿಮೆಂಟ್ ಗೆ ಮುಚ್ಚಿದ್ದ ಟಾರ್ಪಲ್ ಮಾತ್ರ ಕದ್ದು ಕಳ್ಳ ಎಸ್ಕೇಪ್ ಆಗಿರುವ ಘಟನೆ ಜರುಗಿದೆ ಗೂಡ್ಸ್ ಆಟೋದಲ್ಲಿ ಬಂದು ಖದೀಮ ಟಾರ್ಪಲ್ ಕದ್ದಿದ್ದ. ಟಾರ್ಪಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕದ್ದ ಟಾರ್ಪಲ್ ನಲ್ಲೇ ಗಾಡಿ ನಂಬರ್ ಫ್ಲೇಟ್ ಕಾಣದಂತೆ ಮುಚ್ಚಿ ಎಸ್ಕೇಪ್ ಆಗಿದ್ದಾನೆ. ಫಿಕಪ್ ನಲ್ಲಿ ಸಿಮೆಂಟ್ ಲೋಡ್ ಗೆ ಮುಚ್ಚಿದ್ದ ಟಾರ್ಪಲ್ ಕಳವಾಗಿದೆ. 19 ಸಾವಿರ ರೂಪಾಯಿ ಟಾರ್ಪಲ್ ಕದ್ದು ಕಳ್ಳ ಎಸ್ಕೇಪ್ ಆಗಿದ್ದಾನೆ. ನಾಗರಬಾವಿಯ ಮಾಳಗಾಳದಲ್ಲಿ ನಡೆದಿರುವ ಕಳ್ಳತನ ಎನ್ನಲಾಗಿದೆ. ಗೂಡ್ಸ್ ಆಟೋದಲ್ಲಿ ಬಂದ್ರೂ ಕಳ್ಳ ಮಾತ್ರ ಒಂದು ಮೂಟೆ ಸಿಮೆಂಟ್ ಕದ್ದಿಲ್ಲ. ಸಿಮೆಂಟ್ ಲೋಡ್ ಮಾಡಿ ಮಾಲೀಕ ಪಿಕಫ್ ನಲ್ಲಿಟ್ಟಿದ್ದ. ಬೆಳಗ್ಗೆ ಕಸ್ಟಮರ್ ಗೆ ಡೆಲಿವರಿ ಕೊಡೊದಕ್ಕೆ ಅಂತಾ ಲೋಡ್ ಮಾಡಿಟ್ಟಿದ್ದ. ಾತ್ರಿ 1 ಗಂಟೆ ಸುಮಾರಿಗೆ ಬಂದು ಟಾರ್ಪಲ್ ಮಾತ್ರ ಕಳ್ಳತನವಾಗಿದೆ.

Read More