Author: AIN Author

ಬೆಂಗಳೂರು: ಬಿಜೆಪಿಯ ಸುನಿಲ್‌ ಕುಮಾರ್‌, ಸಚಿವರಿಗೆ ಜನರ ಮೇಲೆ ಪ್ರೀತಿಯೋ, ಪ್ರಾಣಿಗಳ ಪ್ರೀತಿಯೋ ಎಂದರು. ಮತ್ತೊಬ್ಬ ಸದಸ್ಯ ಆರಗ ಜ್ಞಾನೇಂದ್ರ, ವನ್ಯ ಜೀವಿ ಸಂಘರ್ಷ ರಾಜ್ಯದ ಎಲ್ಲ ಕಡೆ ಹೆಚ್ಚುತ್ತಿದೆ. ಹಿಂದೆ ರಾಜಾಳ್ವಿಕೆಯಲ್ಲಿ ವನ್ಯಪ್ರಾಣಿಗಳು ಹೆಚ್ಚಾದಾಗ ಬೇಟೆಯಾಡಲು ಅವಕಾಶವಿತ್ತು. ಆ ಮಾದರಿಯಲ್ಲಿ ವನ್ಯಜೀವಿಗಳ ದಾಳಿ ತಡೆಗೆ ಸರ್ಕಾರ ಕೊಂಚ ನಿಯಮ ಸಡಿಲ ಮಾಡಬೇಕು ಎಂದು ವಾದಿಸಿದರು. https://ainlivenews.com/representative-traveled-330-km-on-a-rented-bike-and-went-to-the-assembly/ ಇದಕ್ಕೆ ಸಚಿವರು, ಬೆಂಗಳೂರಿಗೆ ಬಂದ ಚಿರತೆ ಸೆರೆ ಹಿಡಿಯುವಾಗ 4 ಜನರ ಮೇಲೆ ದಾಳಿ ಮಾಡಿತು. ಹಾಗಾಗಿ ಅದಕ್ಕೆ ಗುಂಡು ಹಾರಿಸಬೇಕಾಯಿತು. ಆದರೆ, ಜವಾಬ್ದಾರಿಯುತ ಸರ್ಕಾರವಾಗಿ ಮನುಷ್ಯರ ಜೀವ, ಜೀವನೋಪಾಯಕ್ಕೂ ತೊಂದರೆ ಆಗದಂತೆ ಜೊತೆಗೆ ವನ್ಯಪ್ರಾಣಿಗಳನ್ನೂ ಸಂರಕ್ಷಿಸುವ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

Read More

2019-20ರ ಬಳಿಕ ಮೊದಲ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿರುವ 4 ಬಾರಿ ಚಾಂಪಿಯನ್‌ ಕರ್ನಾಟಕ ತಂಡ, ಸೋವಿಜಯ್‌ ಹಜಾರೆ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ರಾಜ್‌ಕೋಟ್ ಆತಿಥ್ಯ ವಹಿಸಿದ್ದು ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಕರ್ನಾಟಕ ‘ಸಿ’ ಗುಂಪಿನಲ್ಲಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಜಯಿಸಿ, https://ainlivenews.com/representative-traveled-330-km-on-a-rented-bike-and-went-to-the-assembly/ 24 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಕ್ವಾರ್ಟರ್‌ ಪ್ರವೇಶಿಸಿತ್ತು. ಅತ್ತ ‘ಬಿ’ ಗುಂಪಿನಲ್ಲಿದ್ದ ವಿದರ್ಭ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 20 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ ಪ್ರವೇಶಿಸಿದೆ. ಕಳೆದ ಬಾರಿ ರಾಜ್ಯ ತಂಡ ಸೆಮೀಸ್‌ಗೇರಿತ್ತು. ಇನ್ನೂ 3 ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿದ್ದು, ಹರ್ಯಾಣ-ಬಂಗಾಳ, ರಾಜಸ್ಥಾನ-ಕೇರಳ ಹಾಗೂ ಮುಂಬೈ-ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ. ಎಲ್ಲಾ ಪಂದ್ಯಗಳೂ ರಾಜ್‌ಕೋಟ್‌ನ ವಿವಿಧ 4 ಕ್ರೀಡಾಂಗಣಗಳಲ್ಲಿ ನಡೆಯಲಿವೆ.

Read More

ಬೆಂಗಳೂರು: ನನ್ನ ಹಾಗೂ ಸಿಎಂ ಸಿದ್ದರಾಮಯ್ಯನವರ (Siddaramaiah) ನಡುವೆ ಯಾವುದೇ ಅಸಮಾಧಾನ ಇಲ್ಲ. ಅವರಿಗೆ ಅದೃಷ್ಟ ಇದೆ ಸಿಎಂ ಆಗಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಗುದ್ದಾಟ ಇಲ್ಲ. ನನ್ನನ್ನು ಯಾರೂ ಮೂಲೆಗುಂಪು ಮಾಡಲು ಆಗುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (B.K Hariprasad) ಹೇಳಿದ್ದಾರೆ. https://ainlivenews.com/representative-traveled-330-km-on-a-rented-bike-and-went-to-the-assembly/ ಬೆಂಗಳೂರಿನಲ್ಲಿ  ಮಾತನಾಡಿದ ಅವರು, ನನ್ನನ್ನು ಯಾರು ತುಳಿಯುದಕ್ಕೆ ಆಗುವುದಿಲ್ಲ. ತುಳಿಯುವ ಪ್ರಯತ್ನ ಮಾಡಿದರೆ ಅದು ಅವರಿಗೆ ರಿವರ್ಸ್ ಆಗಿ ತಿರುಗುತ್ತದೆ. ನಮ್ಮ ಸಮುದಾಯದಲ್ಲಿ ನನ್ನ ಪರವಾಗಿ ಪರ್ಯಾಯ ನಾಯಕರನ್ನು ಬೆಳೆಸುವ ಪ್ರಕ್ರಿಯೆ ನಿರಂತರವಾಗಿದೆ. ನಾನು ಯಾವುದಕ್ಕೂ ಬಗ್ಗುವುದಿಲ್ಲ. ಯಾರು ತಂತ್ರ ಹಾಗೂ ಕುತಂತ್ರ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.

Read More

ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಐದು ವರ್ಷಗಳ ಕಾಲ ಇರುವುದಿಲ್ಲ, ಮೇ ಬಳಿಕ ಪತನವಾಗುವುದು ಖಚಿತ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು (H.D Kumaraswamy) ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಜನರ ಧ್ವನಿಯಾಗಿ ಇರುತ್ತೇನೆ. ಈ ಸರ್ಕಾರ ಯಾವುದೇ ಕಾರಣಕ್ಕೂ ಐದು ವರ್ಷಗಳ ಕಾಲ ಇರುವುದಿಲ್ಲ. ಮೇ ತಿಂಗಳ ಬಳಿಕ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.  https://ainlivenews.com/representative-traveled-330-km-on-a-rented-bike-and-went-to-the-assembly/ ಕೆ.ಆರ್.ಪೇಟೆಯ ಶಾಸಕ ಗೆದ್ದಮೇಲೆ ಕೆಲಸ ಮಾಡಲಿಲ್ಲ ಎಂದುಕೊಳ್ಳಬೇಡಿ. ನೀವು ಅವರನ್ನು ಒಳ್ಳೆಯವರು ಎಂದು ಗೆಲ್ಲಿಸಿದ್ದೀರಾ. ನೀವು ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ಮಂಜಣ್ಣ ಕೂಡ ಇಟ್ಟುಕೊಂಡಿದ್ದಾರೆ. ನಿಮ್ಮ ಕೆಲಸಗಳನ್ನು ಶಾಸಕರ ಜೊತೆ ನಿಂತು ಮಾಡಿಸುವ ಹೊಣೆ ನನ್ನ ಮೇಲಿದೆ. ಶಾಸಕರಿಗೆ ಐದಾರು ತಿಂಗಳು ಸಮಯ ಕೊಡಿ ಎಂದು ಹೇಳಿದ್ದಾರೆ.

Read More

64 ದಿನಗಳ ಸುಧೀರ್ಘ ಪ್ರಯಾಣ ಮುಗಿಸಿಕೊಂಡು ಸ್ನೇಹಿತ್ ಬಿಗ್‌ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಸ್ನೇಹಿತ್‌, ಈ ಸೀನನ್‌ ಕೊನೆಯ ಕ್ಯಾಪ್ಟನ್ ಕೂಡ ಆಗುವ ಸಾಧ್ಯತೆಯನ್ನು ತೆರೆದಿಟ್ಟೇ ಹೋಗಿದ್ದಾರೆ. ಯಾಕೆಂದರೆ ಅವರೇ ಮನೆಯ ಕ್ಯಾಪ್ಟನ್‌ ರೂಮ್‌ಗೆ ಬೀಗ ಹಾಕಿದ್ದಾರೆ! ಮನೆಯಿಂದ ಹೊರಗೆ ಬಂದಿದ್ದೇ ಸ್ನೇಹಿತ್‌, JioCinema ಆಪ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಗೇಮ್‌ನಲ್ಲಿನ ಛಲ, ನಮ್ರತಾ ಜೊತೆಗಿನ ಸ್ಮರಣೀಯ ಕ್ಷಣಗಳು, ವಿನಯ್‌ ಜೊತೆಗಿನ ಸ್ನೇಹ, ಕ್ಯಾಪ್ಟನ್ ಆದಾಗ ಮಾಡಿದ ತಪ್ಪುಗಳು ಎಲ್ಲದರ ಬಗ್ಗೆಯೂ ಸ್ನೇಹಿತ್,,. ಮನಬಿಚ್ಚಿ ಮಾತಾಡಿದ್ದಾರೆ. https://jiocinema.onelink.me/fRhd/8aj70q5y ಸ್ನೇಹಿತ್ ಸಂದರ್ಶನದ ಅಕ್ಷರರೂಪ ಇಲ್ಲಿದೆ: 64 ದಿನ ಬಿಗ್‌ಬಾಸ್ ಮನೆಯಲ್ಲಿದ್ದು ಹೊರಗೆ ಬಂದಿದ್ದೀನಿ. ಒಂದು ಮೊಮೆಂಟ್‌ನಲ್ಲಿಯೂ ನನಗೆ ಪಶ್ಚಾತ್ತಾಪ ಮಾಡ್ತಿಲ್ಲ. ಪ್ರತಿ ವಾರವನ್ನು ನಾನು ನನ್ನ ಕೊನೆಯ ವಾರ ಎಂದುಕೊಂಡೇ ಆಡಿದ್ದೇನೆ. ಒಂದು ವಾರ ಗೆದ್ದಿರಬಹುದು, ಒಂದು ವಾರ ಸೋತಿರಬಹುದು. ನಿರೀಕ್ಷಿಸಿದ್ದೆ…: ಎಲ್ಲೋ ಒಳಗಡೆ ಫೀಲಿಂಗ್ ಇತ್ತು. ಸಂಜೆ ಅಲ್ಲಿ ಕೂತಾಗ, ಈವತ್ತು ಹೊರಗೆ…

Read More

ಕರುನಾಡ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 14ರಿಂದ 17ರವರೆಗೆ ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಜಿಕೆಜಿಎಸ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರತಿ ವರ್ಷ ನಡೆಯುತ್ತಿರುವ ಈ ಕಾರ್ಯಕ್ರಮ ಈ ಬಾರಿ 12ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾಕಷ್ಟು ವಿಶೇಷತೆ ಹಾಗೂ ಕಲರ್ ಫುಲ್ ನಿಂದ ಕರುನಾಡ ಸಂಭ್ರಮ ಕೂಡಿರಲಿದೆ. ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನದಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ವರುಣ್ ಸ್ಟುಡಿಯೋಸ್, ರಾಜ್ ಇವೆಂಟ್ಸ್ ಜೊತೆಗೂಡಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಟ ರಮೇಶ್ ಅರವಿಂದ್ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕರುನಾಡ ಸಂಭ್ರಮ ಅಂದ್ರೇನೆ ಕಲರ್ ಫುಲ್ ಕಾರ್ಯಕ್ರಮ, ಚಂದನವನದ ತಾರೆಗಳ ಸಮಾಗಮ, ಸ್ಟಾರ್ ಗಾಯಕರ ಹಾಡು, ನಟ, ನಟಿಯರ ಡಾನ್ಸ್. ಈ ಬಾರಿಯೂ ಈ ಸಂಭ್ರಮ ಇನ್ನಷ್ಟು ರಂಗಿನಿಂದ ಕೂಡಿರಲಿದೆ. ಕಾರ್ಯಕ್ರಮದಲ್ಲಿ ಗುರುಕಿರಣ್, ರಾಜೇಶ್ ಕೃಷ್ಣನ್,…

Read More

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮೃಗಾಲಯದಲ್ಲಿ (Zoo) ಹುಲಿ ಇರುವ ಆವರಣಕ್ಕೆ ವ್ಯಕ್ತಿಯೊಬ್ಬ ಬಿದ್ದು ಹುಲಿಗೆ ಆಹಾರವಾಗಿರುವ ಘಟನೆ ನಡೆದಿದೆ. ಪಾಕಿಸ್ತಾನದ ಪಂಜಾಬ್‌ನ ಪೂರ್ವ ಪ್ರಾಂತ್ಯದ ಬಹವಾಲ್‌ಪುರದ ಶೇರ್‌ಬಾಗ್ ಮೃಗಾಲಯದಲ್ಲಿ ಎಂದಿನಂತೆ ಸಿಬ್ಬಂದಿ ಶುಚಿಗೊಳಿಸುತ್ತಿದ್ದ ಸಂದರ್ಭ ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಂಡಿತ್ತು. ಈ ಶೂ ಎಲ್ಲಿಂದ ಬಂತು ಎಂದು ಪರಿಶೀಲಿಸಿದಾಗ ಹುಲಿ ಇರುವ ಆವರಣದ ಒಳಗಡೆಯೇ ವ್ಯಕ್ತಿಯ ಶವ ಪತ್ತೆಯಾಗಿದೆ. https://ainlivenews.com/representative-traveled-330-km-on-a-rented-bike-and-went-to-the-assembly/ ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಳ್ಳುತ್ತಲೇ ಅನುಮಾನಗೊಂಡ ಸಿಬ್ಬಂದಿ ಗುಹೆಯೊಳಗೆ ಪರಿಶೀಲಿಸಿದಾಗ ವ್ಯಕ್ತಿಯ ಶವ ಕಂಡುಬಂದಿದೆ. ಆದರೆ ಪ್ರವಾಸಿಗರು ಆಕಸ್ಮಿಕವಾಗಿ ಹುಲಿ ಇರುವ ಆವರಣದೊಳಗೆ ಬೀಳಲು ಸಾಧ್ಯವೇ ಇಲ್ಲ. ಅದರ ಗೇಟ್‌ಗಳು ಭದ್ರವಾಗಿದೆ. ಹೀಗಾಗಿ ವ್ಯಕ್ತಿ ತಾನಾಗಿಯೇ ಹುಲಿಯ ಆವರಣದೊಳಗೆ ಹೋಗಿರುವ ಶಂಕೆ ವ್ಯಕ್ತಗಿರುವುದಾಗಿ ಬಹವಾಲ್ಪುರದ ಹಿರಿಯ ಸರ್ಕಾರಿ ಅಧಿಕಾರಿ ಜಹೀರ್ ಅನ್ವರ್ ತಿಳಿಸಿದ್ದಾರೆ. 

Read More

ಬೆಂಗಳೂರು: ಅಧಿಕಾರಸ್ಥ ಕಾಂಗ್ರೆಸ್ಸಿಗರ (Congress) ಅಕ್ರಮಗಳ ವಿರುದ್ಧ ದನಿ ಎತ್ತುವ ಬಿಜೆಪಿ (BJP) ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ. ಭದ್ರಾವತಿಯಲ್ಲಿ ಬಿಜೆಪಿ ಮುಖಂಡನ‌ ಮೇಲಿನ ಹಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವಿಜಯೇಂದ್ರ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪೋಸ್ಟ್‌ನಲ್ಲಿ ಏನಿದೆ? ಕಲಬುರ್ಗಿ, ಬೆಳಗಾವಿಯ ಪ್ರಕರಣಗಳ ಬೆನ್ನಲೇ ಭದ್ರಾವತಿಯ ನಮ್ಮ ಬಿಜೆಪಿ ಮುಖಂಡ ಗೋಕುಲ್ ಕೃಷ್ಣನ್ (Gokul Krishnan) ಅವರ ಮೇಲೆ ನಡೆದಿರುವ ಗೂಂಡಾಗಳ ಹಲ್ಲೆ ಆತಂಕಕಾರಿ ಘಟನೆಯಾಗಿದೆ. ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಸ್ಥಳೀಯ ಶಾಸಕರ ಕೈವಾಡ ಇರುವ ಬಗ್ಗೆ ಜಾಲತಾಣದಲ್ಲಿ ಗೋಕುಲ್ ಕೃಷ್ಣನ್ ಪ್ರಶ್ನಿಸಿದ್ದೇ, ಈ ದಾಳಿ ನಡೆಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿರುವಂತಿದೆ. ತಕ್ಷಣವೇ ಭದ್ರಾವತಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಕಾರ್ಯಕರ್ತನಿಗೆ ರಕ್ಷಣೆ ನೀಡಿ, ದುಷ್ಕರ್ಮಿಗಳನ್ನು ಬಂಧಿಸಿ…

Read More

ಮೈಸೂರು: ಮೈಸೂರು ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ ಬ್ಯಾತಹಳ್ಳಿ, ಸಿಂದುವಳ್ಳಿ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿದಿದೆ. ಸರಗೂರು ಟ್ರಾಕ್ ಟೀಮ್, ಅಗ್ನಿಶಾಮಕ ದಳ, ಅರವಳಿಕೆ ವೈದ್ಯರ ತಂಡ, ವಿಶೇಷ ಹುಲಿ ರಕ್ಷಣಾ ದಳ, ಚಿರತೆ ಕಾರ್ಯಪಡೆ ತಂಡ, ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ‌. ಕ್ಯಾಮೆರಾಗಳ ಮೂಲಕ ಹುಲಿ ಚಲನವಲನ ಪತ್ತೆ ಹಚ್ಚಲು ಅರಣ್ಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.ಹುಲಿ ಕಾಣಿಸಿಕೊಂಡಿರುವ ಗ್ರಾಮದ ಜನರು ಅನಾವಶ್ಯಕವಾಗಿ ಓಡಾಡಬಾರದು. ಹುಲಿ ಸೆರೆ ಕಾರ್ಯಾಚರಣೆ ಮುಗಿಯುವವರೆಗೂ ಅರಣ್ಯ ಇಲಾಖೆಗೆ ಸಹಕಾರ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Read More

ಬೆಂಗಳೂರು: ಟಿಕೆಟ್  ಪಡೆದ ನಿಲ್ದಾಣ ಬರುವ ಮೊದಲೇ ಯುವತಿ  ಬಸ್ ಇಳಿಯಲು ಮುಂದಾಗಿದ್ದು, ಯುವತಿ ಹಾಗೂ ಕಂಡಕ್ಟರ್ (Conductor) ನಡುವೆ ಗಲಾಟೆ ನಡೆದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಾಗಿನಿಂದ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವಿನ ಜಟಾಪಟಿ ದಿನೇ ದಿನೇ ಹೆಚ್ಚುತ್ತಿದೆ. ಪ್ರಯಾಣಿಕರು ನಿಗದಿತ ಸ್ಥಳಕ್ಕೆ ಟಿಕೆಟ್ ಪಡೆದು ಸ್ಟಾಪ್ ಬರುವ ಮುನ್ನವೇ ಬಸ್ಸಿನಿಂದ ಇಳಿಯುತ್ತಿರುವ ಘಟನೆಗಳು ಹೆಚ್ಚಿದ್ದು, ಮಹಿಳಾ ಪ್ರಯಾಣಿಕರ ಈ ನಡೆಗೆ ನಿರ್ವಾಹಕರು ಸುಸ್ತಾಗಿದ್ದಾರೆ. ಅಲ್ಲದೇ ಮಹಿಳೆಯರ ನಡೆಯಿಂದ ನಿರ್ವಾಹಕರು ಈಗ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

Read More