Author: AIN Author

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಎರಡು ದಿನ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಮಲೆನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ, ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಶನಿವಾರದಿಂದಲೂ ರಾತ್ರಿ ವೇಳೆ ಧಾರಾಕಾರ ಮಳೆಯಾಗಿದ್ದು, ಕೃಷಿಕರು ತೊಂದರೆಗೆ ಒಳಗಾಗಿದ್ದಾರೆ. ಕಾಫಿ ಕೊಯ್ಲು, ಭತ್ತ ಹಾಗೂ ರಾಗಿ ಪೈರಿನ ಕಟಾವಿಗೂ ಸಮಸ್ಯೆಯಾಗಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಮಳೆಯಲ್ಲಿ ತೊಯ್ದು ಹೋಗಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆ ಅವಧಿಯಲ್ಲಿ, ಧರ್ಮಸ್ಥಳದಲ್ಲಿ 10 ಸೆಂ.ಮೀ, ಬೆಳ್ತಂಗಡಿಯಲ್ಲಿ 4, ಪಣಂಬೂರು, ಚಿಕ್ಕಮಗಳೂರಿನಲ್ಲಿ 3, ಮಂಗಳೂರು, ಉಡುಪಿಯ ಸಿದ್ದಾಪುರದಲ್ಲಿ 2, ಚಾಮರಾಜನಗರದ ಕೆ.ವಿ.ಕೆ…

Read More

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯರತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಟಾಸ್ಕ್​ ಆಡುವ ವಿಚಾರಕ್ಕೆ ಬಂದರೆ ಸ್ಪರ್ಧಿ ವಿನಯ್​ ಗೌಡ ತುಸು ಅಗ್ರೆಸ್ಸಿವ್​ ಆಗಿ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಎದುರಾಳಿ ತಂಡದ ಸದಸ್ಯರನ್ನು ಅವರು ಗುರಿಯಾಗಿಸಿ ಮಾತನಾಡುವುದು, ಸೋತಾಗ ಶಿಕ್ಷೆ ನೀಡುವುದುಮ ಧಮ್ಕಿ ಹಾಕುವುದು ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ಬಿಗ್​ಬಾಸ್​ ಶೋ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೆಲ್ಲದರ ನಡುವೆ ಈಗ ಬಿಗ್​ಬಾಸ್​ ಸ್ಪರ್ಧಿ ವಿನಯ್​ ಕುರಿತು ನಟಿ ಇಳಾ ವಿಟ್ಲ ಆರೋಪ ಒಂದನ್ನು ಮಾಡಿದ್ದು, ಇದಕ್ಕೆ ನಟಿ ಸ್ವಪ್ನ ದೀಕ್ಷಿತ್​ ಸಹ ದನಿಗೂಡಿಸಿದ್ದಾರೆ. 8 ವರ್ಷಗಳ ಹಿಂದೆ ಅಂದರೆ 2015ರಲ್ಲಿ ಖಾಸಗಿ ವಾಹಿನಿ ಒಂದರಲ್ಲಿ ರಿಯಾಲಿಟಿ ಶೋ ಒಂದು ಪ್ರಸಾರವಾಗಿತ್ತು. ಅದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ವಿನಯ್​ ತುಂಬಾ ಅಗ್ರೆಸ್ಸಿವ್​ ಆಗಿ ನಡೆದುಕೊಳ್ಳುತ್ತಿದ್ದರು ಎಂದು ನಟಿ ಇಳಾ ವಿಟ್ಲ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನೊಬ್ಳು ಆರ್ಟಿಸ್ಟ್ ಆಗಿ…

Read More

ಅಥಣಿ : ಅಖಂಡ ಬೆಳಗಾವಿ ಜಿಲ್ಲೆಯಲ್ಲಿ ಕೊನೆಯ ತಾಲೂಕು ಅಥಣಿ, ಆಡಳಿತವನ್ನು ಇನ್ನಷ್ಟು ಜನರ ಸಮೀಪ ತರುವುದಕ್ಕೆ ಅಥಣಿ ಜಿಲ್ಲೆ ಆಗಬೇಕು ಈ ಕುರಿತು ನಾನು ಸದನದಲ್ಲಿ ಸರ್ಕಾರ ಗಮನವನ್ನು ಸೆಳೆಯುತ್ತೆನೆ ಜೊತೆಗೆ ಅಥಣಿ ಸುತ್ತಮುತ್ತಲಿನ ಶಾಸಕರು ಬೆಂಬಲ ಸೂಚಿಸಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು. ಅವರು ಅಥಣಿ ಜಿಲ್ಲಾ ಹೋರಾಟ ಸಮೀತಿ ವತಿಯಿಂದ ಹಮ್ಮಿಕೊಂಡ ಅಥಣಿ ಬಂದ್ ನಲ್ಲಿ ಭಾಗವಹಿಸಿ ಮಾಧ್ಯಮದವರ ಜೊತೆ ಮಾತನಾಡಿ ಅಥಣಿ ಜಿಲ್ಲಾ ಕೇಂದ್ರಕ್ಕಾಗಿ ಸುತ್ತಮುತ್ತಲಿನ ಶಾಸಕರು ಕೂಡ ಸದನದಲ್ಲಿ ಧ್ವನಿ ಎತ್ತುತ್ತಾರೆ. ಈ ಬಾಗದ ಜನರ ಭಾವನೆಯನ್ನು ಸಿಎಂ ಅವರನ್ನು ಖುದ್ದಾಗಿ ಭೇಟಿ ನೀಡಿ ಈ ಪ್ರಸ್ತಾಪ ಸಲ್ಲಿಸುತ್ತೇನೆ ಎಂದರು. ಚಿಕ್ಕೋಡಿ ಗೋಕಾಕ್ ಜಿಲ್ಲಾ ರಚನೆಗೆ ಕೂಗು ಬರುತ್ತೆ, ಈ ಮದ್ಯದಲ್ಲಿ ಬೈಲಹೊಂಗಲ ಜಿಲ್ಲಾ ರಚನೆ ಬೇಡಿಕೆ ಬರುತ್ತಿದೆ. ಗಂಡ ಹೆಂಡತಿ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ ಅಥಣಿ ಜನರ ಸ್ಥಿತಿ ಜಿಲ್ಲಾ ರಚನೆಯಲ್ಲಿ ಯಾವುದೇ ರಾಜಕೀಯ ಹೋರಾಟಗಳು ನಡೆಯುತ್ತಿಲ್ಲ.…

Read More

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅವಮಾನವೀಯ ಘಟನೆ ನಡೆದಿದೆ. ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿರುವ ಆರೋಪ ಕೇಳಿ ಬಂದಿದೆ. ಈ ಅವಮಾನೀವಿಯ ಕೃತ್ಯ ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದ ಬಸವೇಶ್ವರ ಗಲ್ಲಿಯಲ್ಲಿ ನಡೆದಿದೆ. ದುಂಡಪ್ಪ ಮತ್ತು ಪ್ರಿಯಾಂಕ ಎಂಬುವರು ಪರಸ್ಪರ ಪ್ರೀತಿ ಮಾಡುತರಿದ್ದರು. ಪ್ರೀತಿಸಿದ ಜೋಡಿ ನಿನ್ನೆ ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವತಿಯ ಮನೆಯವರು ಯುವಕನ ತಾಯಿ ಕಮಲವ್ವ ನಾಯಕ್ (42)ಳನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಯುವತಿ ಪ್ರಿಯಾಂಕಾಳ ಮದುವೆ ನಿಗಡಿಯಾಗಿತ್ತು. ಇಂದು ನಿಶ್ಚಿತಾರ್ಥ ಕೂಡಾ ಇತ್ತು. ಆದರೆ ನಿನ್ನೆ ರಾತ್ರಿ ಪ್ರೇಮಿ ದುಂಡಪ್ಪ ಜೊತೆ ಓಡಿ ಹೋಗಿದ್ದಕ್ಕೆ ಯುವತಿ ಕುಟುಂಬಸ್ಥರು ಯುವಕನ ಮನೆ ಮೇಲೆ ದಾಳಿ ಮಾಡಿ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ 7 ಜನರನ್ನು ಬಂಧಿಸಿದ್ದಾರೆ. ಇನ್ನು ಗ್ರಾಮದಲ್ಲಿ 2…

Read More

ದಾವಣಗೆರೆ:- ಚಿಕ್ಕಬಳ್ಳಾಪುರ, ಚಿಂತಾಮಣಿಯಿಂದ ದಲಿತ ಮುಖಂಡರು ಬೆಳಗಾವಿ ಅಧಿವೇಶನಕ್ಕೆ ತೆರಳ ಮನವಿ ಸಲ್ಲಿಸಲು ಸೋಮವಾರ ದಾವಣಗೆರೆ ಸಮೀಪ ತೆರಳುವಾಗ ಬಸ್ ಅಪಘಾತವಾಗಿ ಕೆಲವರು ಗಾಯಾಳುಗಳಾಗಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮವನ್ನು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ವಿಚಾರಿಸಿದರು. ಇಂದು ಬೆಳಗಿನ ವೇಳೆ ದಾವಣಗೆರೆ ಹೊರಭಾಗದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ರಾ.ಹೆದ್ದಾರಿಯಲ್ಲಿ ಬಸ್ ಅಪಘಾತವಾಗಿ ಸುಮಾರು 18 ಜನರು ಗಾಯಾಳುಗಳಾಗಿದ್ದಾರೆ. ಇವರು ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ನಿವಾಸಿಗಳಾಗಿದ್ದಾರೆ. ಈ ವೇಳೆ ಗಾಯಾಳುಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಸೂಚನೆ ನೀಡಿದ ಅವರು ಇವರಿಗೆ ಯಾವುದೇ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಕೂಡಲೇ ನೀಡಲು ತಿಳಿಸಿದರು. ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.

Read More

ಬೆಳಗಾವಿ:- ಸ್ವಾಯತ್ತ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ಮುಂಬಡ್ತಿ ಮತ್ತು ನೇಮಕಾತಿ ನೀಡುವ ಕುರಿತು ಹಾಲಿ ಇರುವ ವೃಂದ ಮತ್ತು ನೇಮಕಾತಿ( ಸಿ ಅಂಡ್ ಆರ್) ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸೋಮವಾರ ವಿಧಾನಪರಿಷನಲ್ಲಿ ತಿಳಿಸಿದ್ದಾರೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇ ಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಗಳಡಿ ಬರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳ ಸಿಬ್ಬಂದಿಗಳ ನೇಮಕಾತಿ, ಜೇಷ್ಠತೆ, ಪದೋನ್ನತೆ ಮತ್ತು ಬಡ್ತಿ ನೀಡುವ ಸಂಬಂಧ ಹಾಲಿ ಇರುವ ನಿಯಮಕ್ಕೆ ತಿದ್ದುಪಡಿ ಮಾಡಲಾಗುವುದು. ಒಂದು ತಿಂಗಳೋಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಬೋಧಕೇತರ ಸಿಬ್ಬಂದಿಗಳಿಗೆ ಬಡ್ತಿ ಮತ್ತು ನೇಮಕ ಮಾಡುವ ಕುರಿತು ಇದುವರೆಗೂ ಸಿ ಅಂಡ್ ಆರ್ ನಿಯಮಕ್ಕೆ ಯಾರೂ ಕೂಡ ತಿದ್ದುಪಡಿ ಮಾಡಿರಲಿಲ್ಲಘಿ. ನಾವು ಸಚಿವರಾದ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ…

Read More

ತುಮಕೂರು:- ವ್ಯಕ್ತಿಯ ಮೇಲೆ ಕ್ರಷರ್ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶೆಟ್ಟಿಕೆರೆ ಗೇಟ್ ಬಳಿ ಜರುಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆಯಲ್ಲಿ ಘಟನೆ ಜರುಗಿದೆ. ಚಿಕ್ಕನಾಯಕನಹಳ್ಳಿ ಕಡೆಯಿಂದ ಕ್ರಷರ್ ಲಾರಿ ಬಂದಿದ್ದು, ಲೋಡ್ ತುಂಬಿದ್ದ ಲಾರಿ ಹರಿದ ಹಿನ್ನೆಲೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದೆ. ಸಾವನ್ನಪ್ಪಿದ ವ್ಯಕ್ತಿ ಗುರುತು ಹಚ್ಚಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ವ್ಯಕ್ತಿ ಮೃತದೇಹ ಸಂಪೂರ್ಣ ನಚ್ಚುಗುಜ್ಜಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ:- ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಇನ್ನೂ ಭ್ರಮಾಲೋಕದಲ್ಲೇ ಇದ್ದಾರೆ. ಅದರಿಂದ ಅವರು ಹೊರಬರುವುದೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶೀಘ್ರದಲ್ಲೇ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಹೇಳುತ್ತಲೇ ಇರುವ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಇನ್ನೂ ಭ್ರಮಾಲೋಕದಲ್ಲೇ ಇದ್ದಾರೆ. ಅದರಿಂದ ಅವರು ಹೊರಬರುವುದೂ ಇಲ್ಲ ಎಂದರು. ನಮ್ಮ ಸರ್ಕಾರ ಸುಭದ್ರವಾಗಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್‌ ನೀರಿನಿಂದ ತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದು ಭ್ರಮಾಲೋಕದಲ್ಲಿದ್ದಾರೆ. ಅಧಿವೇಶನದಲ್ಲಿ ವಿಪಕ್ಷಗಳು ಯಾವುದೇ ವಿಚಾರ ಎತ್ತಿದರೂ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ. ಅನಗತ್ಯವಾಗಿ ವಿಳಂಬ ಅಥವಾ ಕಾಲಹರಣ ಮಾಡುವುದಿಲ್ಲ. ಬರಗಾಲದ ಚರ್ಚೆ ಮೇಲೆ ಸರ್ಕಾರ ಸೂಕ್ತ ಉತ್ತರ ಕೊಡಲಿದೆ. ಬಿಜೆಪಿ ನಾಯಕರ ಮಧ್ಯೆ ಸಮನ್ವಯದ ಕೊರತೆಯಿಂದ ಕಲಾಪದ ಸಮಯ ವ್ಯರ್ಥವಾಗುತ್ತಿದೆ. ಬಿಜೆಪಿಯೊಳಗೆ ಎಂದಿಗೂ ಸಮನ್ವಯ ಇಲ್ಲ. ಅವರು ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದರು. ನಂತರ ಜನರು ಅವರನ್ನು ತಿರಸ್ಕರಿಸಿದ್ದಾರೆ. ಅವರಲ್ಲಿ ಸಮನ್ವಯ ಬರಲು ಸಾಧ್ಯವೇ ಇಲ್ಲ ಎಂದರು.

Read More

ದಾವಣಗೆರೆ:- ಶೇಂಗಾ ತುಂಬಿದ್ದ ಮಿನಿ ಟ್ರಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಘಟನೆ ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಬಳಿ ಜರುಗಿದೆ. ಶೇಂಗಾ ತೆಗೆದುಕೊಳ್ಳಲು ಜನತೆ ಮುಗಿ ಬೀಳುತ್ತಿದ್ದು, ಅದೃಷ್ಟವಶಾತ್ ಟ್ರಕ್ ಸವಾರ ಬಚಾವ್ ಆಗಿದ್ದಾರೆ. ಚಿತ್ರದುರ್ಗದಿಂದ ದಾವಣಗೆರೆ ಕಡೆಗೆ ಶೇಂಗಾ ತುಂಬಿಕೊಂಡು‌ ಟ್ರಕ್ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿ ಎನ್ನಲಾಗಿದೆ.

Read More

ಹುಬ್ಬಳ್ಳಿ: ರಾಜ್ಯದ ಎರಡನೇ ‘ದಿ ಆರೋಗ್ಯ ಕೆಫೆ’ ಹುಬ್ಬಳ್ಳಿಯಲ್ಲಿಂದು ಆರಂಭವಾಗಿದ್ದು, ಖ್ಯಾತ ಕನ್ನಡ ಚಲನಚಿತ್ರ ನಟ ಹಾಗೂ ಉದ್ಯಮಿ ಬಸಂತಕುಮಾರ ಪಾಟೀಲ್ ರುಚಿ ರುಚಿಯಾದ ಉಪಹಾರ ಸೇವಿಸಿ ಶುಭ ಹಾರೈಸಿದರು. ತಾಜಾ ಹಾಗೂ ಗುಣಮಟ್ಟದಿಂದ ಗ್ರಾಹಕರನ್ನು ತನ್ನತ್ತ ಸೆಳೆಯಲಿದ್ದು ಈಗಾಗಲೇ ಬೆಂಗಳೂರಿನಲ್ಲಿ ದಿ ಆರೋಗ್ಯ ಕೆಫೆ ತೆರೆಯಲಾಗಿದ್ದು, ಇಲ್ಲಿನ ತೋಳನಕೆರೆ ಎದುರಿಗೆ ಮತ್ತೊಂದು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಕೆಫೆ ಆರಂಭವಾಗಲಿವೆ. ತಟ್ಟೆ ಇಡ್ಲಿ, ಘೀ ಪುದಿ ಇಡ್ಲಿ, ಬಟನ್ ಇಡ್ಲಿ, ಓಪನ್ ದೋಸೆ, ಘೀ ಮಸಾಲ ದೋಸೆ, ಘೀ ಗಾರ‌್ಲಿಕ್ ಮಸಾಲ ದೋಸೆ, ಖಾಲಿ ದೋಸೆ, ಪಡ್ಡು, ಅಕ್ಕಿ ರೊಟ್ಟಿ, ಬಿಸಿ ಬೇಳೆ ಬಾತ್, ಲೆಮನ್ ರೈಸ್, ಪೈನಾಪಲ್ ಕೇಸರಿ ಬಾತ್, ಫಿಲ್ಟರ್ ಕಾಫಿ ಮತ್ತು ಟಿ ಇಲ್ಲಿ ಲಭ್ಯವಿದೆ. ಮನೆಯಲ್ಲಿಯೇ ತಯಾರಿಸಿದ ಮಸಾಲೆಯನ್ನು ಅಡುಗೆಗೆ ಬಳಸಲಾಗುತ್ತಿದೆ ಎಂದು ಮಾಲೀಕರಾದ ಚಂದನ್ ಕುನ್ನೂರ ಹಾಗೂ ಸೂರಜ್ ಅಳವಂಡಿ ತಿಳಿಸಿದರು. ಮಾಜಿ ಸಂಸದ ಹಾಗೂ ಹಾವೇರಿ ಲೋಕಸಭಾ ಕಾಂಗ್ರೆಸ್ ಟಿಕೆಟ್…

Read More