Author: AIN Author

ಪ್ಯೊಂಗ್ಯಾಂಗ್: ದೇಶದ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಮನವಿ ಮಾಡಿ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ (Kim Jong Un) ಕಣ್ಣೀರಿಟ್ಟಿದ್ದಾರೆ. ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ಕಿಮ್‌ ಜಾಂಗ್‌ ಉನ್‌ ಕಣ್ಣೀರಿಟ್ಟಿದ್ದಾರೆ. ಉತ್ತರ ಕೊರಿಯಾದಲ್ಲಿ (North Korea) ಜನನ ಪ್ರಮಾಣ ಕ್ಷೀಣಿಸುತ್ತಿದೆ. ರಾಷ್ಟ್ರೀಯ ಶಕ್ತಿಯನ್ನು ಬಲಪಡಿಸಲು ದೇಶದ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಮನವಿ ಮಾಡಿದ್ದಾರೆ.  https://twitter.com/OliLondonTV/status/1732130034863800647?ref_src=twsrc%5Etfw%7Ctwcamp%5Etweetembed%7Ctwterm%5E1732130034863800647%7Ctwgr%5E9d3292e455c15fec166480a34e69b60ed0be6ef0%7Ctwcon%5Es1_&ref_url=https%3A%2F%2Fpublictv.in%2Fkim-jong-un-cries-as-he-tells-north-korean-women-to-have-more-babies%2F ಪ್ಯೋಂಗ್ಯಾಂಗ್‌ನಲ್ಲಿ ತಾಯಂದಿರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಮನವಿ ಮಾಡುವಾಗ ಬಿಳಿ ಕರವಸ್ತ್ರದಿಂದ ತನ್ನ ಕಣ್ಣುಗಳನ್ನು ಒರೆಸಿಕೊಂಡ ದೃಶ್ಯ ಕಂಡುಬಂದಿದೆ. ಜನನ ಪ್ರಮಾಣ ಕುಸಿತವಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಉತ್ತಮ ಆರೈಕೆ ಮತ್ತು ಅವರಿಗೆ ಶಿಕ್ಷಣ ಒದಗಿಸುವುದು ನಮ್ಮ ಕುಟುಂಬದ ಆದ್ಯ ಕರ್ತವ್ಯ. ನಾವು ನಮ್ಮ ತಾಯಂದಿರೊಂದಿಗೆ ಒಟ್ಟಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಜನನದಲ್ಲಿ ವಿಸ್ತೃತ ಕುಸಿತದ ನಡುವೆ 2023 ರ ಹೊತ್ತಿಗೆ ಉತ್ತರ ಕೊರಿಯಾದಲ್ಲಿ ಜನಿಸಿದ ಮಕ್ಕಳ ಸರಾಸರಿ ಸಂಖ್ಯೆ 1.8 ರಷ್ಟಿದೆ.

Read More

ಬೆಳಗಾವಿ:- ಬಿಜೆಪಿ ಅವರಿಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ತಮ್ಮ ಪಕ್ಷದೊಳಗಿನ ಒಳಜಗಳ ಮತ್ತು ಬರಗಾಲ ಪರಿಹಾರಕ್ಕೆ ಹಣ ನೀಡದ ಕೇಂದ್ರ ಸರ್ಕಾರದ ವೈಫಲ್ಯ ಮುಚ್ಚಿಹಾಕಿ, ಜನರ ಗಮನ ಬೇರೆ ಕಡೆ ಸೆಳೆಯುವ ದುರುದ್ದೇಶದಿಂದ ರಾಜ್ಯದ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಿ ಕಲಾಪಕ್ಕೆ ತಡೆಯೊಡ್ಡುತ್ತಿದ್ದಾರೆ. ಇವರಿಗೆ ರಾಜ್ಯದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಜನತೆ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರಿಗೆ ಛೀಮಾರಿ ಹಾಕುತ್ತಿರುವುದಕ್ಕೆ ಚುನಾಯಿತ ಪ್ರತಿನಿಧಿಗಳ ಇಂತಹ ಬೇಜವಾಬ್ದಾರಿ ನಡವಳಿಕೆಗಳೇ ಕಾರಣ ಎಂದರು. ಜನರ ತೆರಿಗೆ ಹಣದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ವರ್ಷಕ್ಕೊಂದು ಬಾರಿ ವಿಧಾನಮಂಡಲದ ಅಧಿವೇಶನ ನಡೆಸುತ್ತಿರುವುದೇ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವುದಕ್ಕಾಗಿ. ಇಂತಹ ಚರ್ಚೆಗೆ ಅವಕಾಶವನ್ನೇ ಕೊಡದೇ ಇರುವ ರಾಜ್ಯದ ಬಿಜೆಪಿ ಶಾಸಕರು, ತಾವು ಉತ್ತರ ಕರ್ನಾಟಕದ ವಿರೋಧಿಗಳು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ಎಂದು ವಾಗ್ದಾಳಿ…

Read More

ಬೆಂಗಳೂರು:- ಆಟೋ ಚಾಲಕನನ್ನ ಬರ್ಬರವಾಗಿ ಹತ್ಯೆಗೈದಿದ್ದ 11 ಜನ ಆರೋಪಿಗಳ ಬಂಧಿಸಲಾಗಿದೆ. ಹರೀಶ್, ಮಧು, ಪ್ರಶಾಂತ್ ಸೇರಿ 11 ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಡಿಸೆಂಬರ್ 5ರಂದು ರಾತ್ರಿ ಬ್ಯಾಟರಾಯನಪುರದ ಟಿಂಬರ್ ಯಾರ್ಡ್ ಲೇಔಟ್​ನಲ್ಲಿ ಅರುಣ್ (24) ಎಂಬಾತನನ್ನು ಹತ್ಯೆಗೈಯ್ಯಲಾಗಿತ್ತು. ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಅರುಣ್ ಮನೆ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಬಂದಿದ್ದ ಆರೋಪಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ಕಾಲ್ಕಿತ್ತಿದ್ದರು. ಇನ್ನೂ ಪ್ರಕರಣದ ಪ್ರಮುಖ ಆರೋಪಿ ಹರೀಶ್ ಈ ಹಿಂದೆ ಒಂದು ಹತ್ಯೆ ಪ್ರಕರಣದಲ್ಲಿ ಬಂಧನವಾಗಲು ಅರುಣ್ ಕಾರಣವಾಗಿದ್ದ. ಅಂದಿನಿಂದಲೂ ಹರೀಶ್ ಮತ್ತು ಅರುಣ್ ನಡುವೆ ವೈಷಮ್ಯವಿತ್ತು. ಇತ್ತೀಚೆಗೆ ಹರೀಶ್ ವಿರೋಧಿಗಳ ಪರವಾಗಿ ಅರುಣ್ ಸಹಾಯ ಮಾಡುತ್ತಿದ್ದ. ಹರೀಶ್ ಮನೆ ಬಳಿ ಓಡಾಡುವುದು, ಆತನ ಬಗ್ಗೆ ವಿಚಾರಿಸುವುದನ್ನು ಮಾಡಲಾರಂಭಿಸಿದ್ದ. ಈ ವಿಚಾರ ತಿಳಿದ ಹರೀಶ್, ಅರುಣ್ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಡಿಸೆಂಬರ್ 5ರಂದು ಟಿಂಬರ್ ಯಾರ್ಡ್ ಲೇಔಟ್ ರಸ್ತೆಯಲ್ಲಿ ಉಳಿದ ಆರೋಪಿಗಳ ಜೊತೆ ಸೇರಿ…

Read More

ನವದೆಹಲಿ: ರೋಹಿತ್ ಶರ್ಮಾ (Rohit Sharma) ಉತ್ತಮ ಫಾರ್ಮ್‍ನಲ್ಲಿಯೇ ಉಳಿದಿದ್ದರೆ, 2024ರ ಟಿ20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಭಾರತ ತಂಡವನ್ನು (Team India) ಮುನ್ನಡೆಸಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ರೋಹಿತ್ ಉತ್ತಮ ಫಾರ್ಮ್‍ನಲ್ಲಿ ಉಳಿದರೆ ಟಿ20 ವಿಶ್ವಕಪ್‍ನ್ನು ಮುನ್ನಡೆಸಲಿ. ಅಲ್ಲದೇ ಉತ್ತಮ ಫಾರ್ಮ್’‍ನಲ್ಲಿ ಇಲ್ಲದವರನ್ನು ಟಿ20 ವಿಶ್ವಕಪ್‍ಗೆ ಆಯ್ಕೆ ಮಾಡಬಾರದು. ನಾಯಕತ್ವ ಎನ್ನುವುದು ದೊಡ್ಡ ಜವಾಬ್ದಾರಿ. ಆಟಗಾರನ ಉತ್ತಮ ಪ್ರದರ್ಶನದ ಮೇಲೆ ನಾಯಕನಾಗುವ ಅರ್ಹತೆ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  https://ainlivenews.com/notice-to-shah-rukh-khan-ajay-akshay-kumar-do-you-know-why/ ಆಟಗಾರನನ್ನು ತಂಡದಿಂದ ಕೈಬಿಡಲು ವಯಸ್ಸು ಮಾನದಂಡವಾಗಬಾರದು. ಕೇವಲ ಫಾರ್ಮ್ ಮಾತ್ರ ಮಾನದಂಡವಾಗಿರಬೇಕು. ಆಟಗಾರನನ್ನು ಏಕೆ ಕೈಬಿಡಬೇಕು ಅಥವಾ ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ವಯಸ್ಸು ಅರ್ಹತೆಯೇ ಅಲ್ಲ. ಆಟಗಾರನ ನಿವೃತ್ತಿ ಆತನ ವೈಯಕ್ತಿಕ ನಿರ್ಧಾರವಾಗಿದೆ. ಇದರಲ್ಲಿ ಯಾರ ಒತ್ತಾಯವು ಇರಬಾರದು ಎಂದು ಅವರು ಹೇಳಿದ್ದಾರೆ.

Read More

ಭೋಪಾಲ್: ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲೊಂದು (Indore) ಅಪರೂಪದ ವಿವಾಹ ನಡೆದಿದೆ. ಇಂದೋರ್‌ನ ಸೋನಿ ಎಂಬ ಮಹಿಳೆ ತನ್ನ ಬಹುಕಾಲದ ಗೆಳತಿಯನ್ನು ವಿವಾಹವಾಗಲು (Marriage) ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾರೆ. ಸೋನಿ ಹೆಣ್ಣಾಗಿ ಹುಟ್ಟಿದ್ದರೂ ವರ್ಷಗಳ ಬಳಿಕ ಪುರುಷನಾಗಿ ಬದುಕಲು ಪ್ರಾರಂಭಿಸಿದರು. ತಮ್ಮ 47ನೇ ಹುಟ್ಟುಹಬ್ಬಕ್ಕೆ ಲಿಂಗ ರೂಪಾಂತರ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದೀಗ ಸೋನಿ ತಮ್ಮ ಹೆಸರನ್ನು ಅಲ್ಕಾ ಎಂದು ಬದಲಾಯಿಸಿಕೊಂಡು ಬಹುಕಾಲದ ಗೆಳತಿ ಆಸ್ತಾ ಅವರನ್ನು ವರಿಸಿದ್ದಾರೆ. https://ainlivenews.com/great-news-for-farmers-who-have-no-roads-to-reach-their-farms/ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಟ್ರಾನ್ಸ್‌ಜೆಂಡರ್ (Transgender) ವ್ಯಕ್ತಿ ಭಿನ್ನಲಿಂಗೀಯ ವ್ಯಕ್ತಿಯೊಂದಿಗಿನ ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ತೀರ್ಪು ನೀಡಿದ ಬಳಿಕ ಜೋಡಿ ಒಂದಾಗಿದ್ದಾರೆ. ವಿಶೇಷ ವಿವಾಹ ಕಾಯ್ದೆಯಡಿ ಜೋಡಿ ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಅಲ್ಕಾ ಮತ್ತು ಆಸ್ತಾ ಮದುವೆಯಾಗಿದ್ದು, ವಿಶೇಷವೆಂದರೆ ಈ ಸಮಾರಂಭದಲ್ಲಿ ಎರಡೂ ಕಡೆಯ ಕುಟುಂಬದವರೂ ಭಾಗಿಯಾಗಿದ್ದರು.

Read More

ಅಮವಾಸೆ ಸೂರ್ಯೋದಯ: 06.32 AM, ಸೂರ್ಯಾಸ್ತ : 05.55 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಚತುರ್ದಶಿ 06:24 AM ತನಕ ನಂತರ ಅಮವಾಸ್ಯೆ ನಕ್ಷತ್ರ: ಇವತ್ತು ಅನುರಾಧ 11:57 AM ತನಕ ನಂತರ ಜೇಷ್ಠ ಯೋಗ: ಇವತ್ತು ಧೃತಿ06:52 PM ತನಕ ನಂತರ ಶೂಲ ಕರಣ: ಇವತ್ತು ಶಕುನಿ 06:24 AM ತನಕ ನಂತರ ಚತುಷ್ಪಾದ 05:47 PM ತನಕ ನಂತರ ನಾಗವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 01.40 AM to 03.15 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:47 ನಿಂದ ಮ.12:31 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ,…

Read More

ಬೆಂಗಳೂರು:- ಜಾತಿ ಗಣತಿ ಬಗ್ಗೆ ಊಹಾಪೋಹ ಬೇಡ ಎಂದು ಸಚಿವ ಪರಮೇಶ್ವರ್‌ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಜಾತಿ ಗಣತಿ ವರದಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳದೇ ಊಹಿಸಿಕೊಂಡು ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು. ಹಿಂದುಳಿದ ವರ್ಗದಲ್ಲಿ ನೂರಕ್ಕೂ ಅಧಿಕ ಜಾತಿಗಳಿವೆ. ಕೆಲವು ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮರ್ಪಕವಾಗಿ ಮೀಸಲಾತಿ ಲಬಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದ್ದರು. ಆಯೋಗ ನೀಡಿರುವ ವರದಿಯಲ್ಲಿ ಏನಿದೆ ಎಂದು ಊಹಿಸಿಕೊಂಡು ವ್ಯಾಖ್ಯಾನ ಮಾಡುತ್ತಿರುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

Read More

ಬೆಂಗಳೂರು:- ಕಡಲೆಕಾಯಿ ಪರಿಷೆ ನಮ್ಮ ನೆಲದ ಸಂಸ್ಕೃತಿ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಹಳ ಹಿಂದಿನಿಂದಲೂ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ಈ ರೀತಿಯ ಆಚರಣೆಗಳಿಂದಾಗಿ ನಮ್ಮ ನೆಲದ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಹೀಗಾಗಿ, ಈ ವರ್ಷವೂ ಲಕ್ಷಾಂತರ ಜನರು ಕಡಲೆಕಾಯಿ ಪರಿಷೆಯಲ್ಲಿ ಭಾಗಿಯಾಗ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ಥಳೀಯ ವ್ಯಾಪಾರಿಗಳಿಗೆ ಆರ್ಥಿಕತೆ ಉತ್ತೇಜನ ನೀಡುವಲ್ಲಿ ಮುಂದಾಗಿದ್ದಾರೆ. ಹೀಗಾಗಿ, ಕಡಲೆಕಾಯಿ ಪರಿಷೆ ಸಾಕಷ್ಟು ಸಣ್ಣಪುಟ್ಟ ವ್ಯಾಪಾರಿಗಳಿಗೆ ಬಹಳಷ್ಟು ಆದಾಯ ತಂದುಕೊಡಲಿದೆ. ಈ ಬಾರಿ ಪರಿಷೆಯಲ್ಲಿ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆಯಿದೆ. ಎಲ್ಲರೂ ತಮ್ಮ ಕುಟುಂಬ ಸಮೇತರಾಗಿ ಕಡೆಲೆಕಾಯಿ ಪರಿಷೆಗೆ ಬಂದು ಸಂಭ್ರಮಿಸಿ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ

Read More

ಬೆಂಗಳೂರು:- ನೀರು ಹರಿಯಲು ಅಡ್ಡಿಯಾಗದಂತೆ ರಾಜಕಾಲುವೆ ಮೇಲೆ ಸೇತುವೆ ನಿರ್ಮಿಸಿದರೆ ಒತ್ತುವರಿಯಲ್ಲ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜಕಾಲುವೆಯ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ಸೇತುವೆ ನಿರ್ಮಾಣ ಮಾಡಿ, ರಾಜಕಾಲುವೆ ಒಳಭಾಗದಲ್ಲಿ ಯಾವುದೇ ರೀತಿಯ ನಿರ್ಮಾಣ ಮಾಡದೆ, ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಾಗದಂತಿದ್ದರೆ, ಅದು ಒತ್ತುವರಿ ಮಾಡಿದಂತೆ ಆಗುವುದಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

Read More

ಬೆಳಗಾವಿ:- ತಾಲ್ಲೂಕಿನ ವಂಟಮೂರಿ ಗ್ರಾಮದ ಬಸವೇಶ್ವರ ಗಲ್ಲಿಯಲ್ಲಿ ಮಹಿಳೆಯನ್ನು ಬೆತ್ತಲೆ ಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೆ 7 ಜನರನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಘಟನೆ ಹಿನ್ನಲೆ ನಾನು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಆರೋಗ್ಯ ವಿಚಾರಣೆ ಮಾಡ್ತೀನಿ . ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಂತ ಹೇಳಿದರು.

Read More