Author: AIN Author

ಬೆಳಗಾವಿ: ಮೇ ಬಳಿಕ ಸರ್ಕಾರ ಪತನ ಎಂಬ ಹೆಚ್‌ಡಿಕೆ (HD Kumaraswamy) ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ -ಜೆಡಿಎಸ್‌ನವರು ಪಾಪ ನೀರಿನಿಂದ ತೆಗೆದ ಮೀನಿನ ರೀತಿ ವಿಲಿವಿಲಿ ಎಂದು ಒದ್ದಾಡುತ್ತಿದ್ದಾರೆ. ಅವರು ಭ್ರಮಾ ಲೋಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆ ಪ್ರಸ್ತಾಪಿಸಿದರೂ ಉತ್ತರ ಕೊಡೋಕೆ ಸರ್ಕಾರ ತಯಾರಿದೆ. ನಾವು ಯಾವುದಕ್ಕೂ ವಿಳಂಬ ಮಾಡೋದಾಗಲಿ, ಕಾಲಹರಣ ಮಾಡಲ್ಲ. ಇವತ್ತು ಬರಗಾಲದ ಬಗ್ಗೆ ಚರ್ಚೆಯಾಗುತ್ತಿದ್ದು, ಉತ್ತರ ಕೊಡುತ್ತಿದ್ದೇವೆ. https://ainlivenews.com/samantha-gave-a-bold-look-like-never-before-in-jeans-see-photos/ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ವಿಷಯ ಪ್ರಸ್ತಾಪ ಆಗಿದೆ ಎಂದರು. ಬಿಜೆಪಿ (BJP) ನಾಯಕರ ಸಮನ್ವಯ ಕೊರತೆಯಿಂದ ಕಲಾಪದ ಸಮಯ ವ್ಯರ್ಥ ಆರೋಪ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ಯಾವತ್ತೂ ಸಮನ್ವಯ ಇಲ್ಲ. ಅವರು ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದವರು. ಬಳಿಕ ಸೋತಿದ್ದಾರೆ, ಜನ ತಿರಸ್ಕರಿಸಿದ್ದಾರೆ. ಇದಾದ ಮೇಲೆ ಸಮನ್ವಯ ಬರಲು ಸಾಧ್ಯವೇ ಇಲ್ಲ. ಅಲ್ಲಿ…

Read More

ಬೆಂಗಳೂರು:- ಕಾರ್ತಿಕ ಮಾಸದಲ್ಲಿ ಮಾಂಸಾಹಾರವನ್ನು ಸೇವಿಸುವ ಮಂದಿ ಕಡಿಮೆ. ಇದರ ಪರಿಣಾಮ ಬೆಂಗಳೂರು ಸೇರಿ ಹಲವೆಡೆ ಕೋಳಿ ಬೆಲೆಯಲ್ಲಿ ಕುಸಿತವಾಗಿದೆ. ಕಳೆದ ಹಲವು ದಿನಗಳಿಂದ ಚಿಕನ್ ಬೆಲೆ 260 ರಿಂದ 300 ರೂಪಾಯಿ ವರೆಗೆ ಇತ್ತು. ಪ್ರಸ್ತುತ ಬೆಂಗಳೂರಿನಲ್ಲಿ 1 ಕೆಜಿ ಚಿಕನ್ ಬೆಲೆ 160 ರೂಪಾಯಿ ಇದೆ. ಚಿಕನ್ ಲಿವರ್ 120 ರೂಪಾಯಿ ಇದ್ದರೆ, ಬೊನ್‌ಲೆಸ್ ಚಿಕನ್ 210 ರೂಪಾಯಿ, ನಾಟಿ ಕೋಳಿ 360 ರೂಪಾಯಿ, ಲೈವ್ ಚಿಕನ್ ರೂ. 130 ಹಾಗೂ ಸ್ಕಿನ್‌ಲೆಸ್ ಚಿಕನ್ ಕೆಜಿಗೆ ರೂ. 200 ರೂಪಾಯಿ ಇದೆ. ಆರ್‌ಟಿ ನಗರದಲ್ಲಿ ಲೈವ್ ಚಿನ್ ಕೆಜಿಗೆ 130 ರೂಪಾಯಿ ಇದ್ದರೆ, ಲಿವರ್ 105 ರೂಪಾಯಿ, ಸ್ಕಿನ್‌ಲೆಸ್ 180 ರೂ. ಹಾಗೂ ವಿತ್‌ ಸ್ಕಿನ್ 150 ರೂಪಾಯಿ ಇದೆ. ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತಿವೆ. ಕಾರ್ತಿಕ ಮಾಸ, ಹಬ್ಬ ಹರಿದಿನಗಳು ಯಾವುದನ್ನೂ ನಂಬದ ನಾನ್ ವೆಜ್‌ ಪ್ರಿಯರಿಗೆ ಬೆಲೆ ಕುಸಿತದಿಂದ ಫುಲ್…

Read More

ಬೆಂಗಳೂರು:- ಕಳೆದ ವರ್ಷಕ್ಕಿಂತ ಈ ಬಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಅಕ್ಟೋಬರ್‌, ನವೆಂಬರ್‌ನಲ್ಲಿ ತುಸು ಇಳಿಕೆಯಾಗಿದ್ದರೂ ಆ ಬಳಿಕ ಮತ್ತೆ ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಒಟ್ಟು 15,089 ಮಂದಿ ಡೆಂಗ್ಯೂಗೆ ತುತ್ತಾಗಿದ್ದಾರೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಹಾಗೂ ಕೊಡಗು, ಹಾಸನ, ತುಮಕೂರು ವ್ಯಾಪ್ತಿಯಲ್ಲಿ ತಲಾ ಒಬ್ಬರು, ಉಡುಪಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 2021ರಲ್ಲಿ 6,300 ಪ್ರಕರಣ ದಾಖಲಾಗಿದ್ದು, ಐವರು ಮೃತಪಟ್ಟಿದ್ದರು. 2022ರಲ್ಲಿ 8,500 ಪ್ರಕರಣ ಪಾಸಿಟಿವ್‌ ಇದ್ದು, 9 ಮಂದಿ ಸಾವಿಗೀಡಾಗಿದ್ದರು. ಬಿಟ್ಟು ಬಿಟ್ಟು ಮಳೆ, ಹೊಸ ಕಟ್ಟಡ ನಿರ್ಮಾಣ, ರಸ್ತೆಗಳಲ್ಲಿ ಹೊಂಡ ಗುಂಡಿ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಎಲ್ಲೆಂದರಲ್ಲಿ ಕಾಂಕ್ರೀಟ್‌ ರಸ್ತೆಗಳು ನಿರ್ಮಾಣವಾಗುತ್ತಿದ್ದು, ಇದರಿಂದಾಗಿ ನೀರು ಇಂಗಲು ಅವಕಾಶವೇ ಇಲ್ಲವಾಗಿದೆ. ರಸ್ತೆ ಗುಂಡಿಯಲ್ಲಿ ನಿಂತ ನೀರಿನಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವ ಅಭಿಪ್ರಾಯ ಆರೋಗ್ಯ ತಜ್ಞರದು. ರಾಜ್ಯದ ಪ್ರತಿಯೊಂದು ಸ್ಥಳೀಯಾಡಳಿತದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಸಿವಿಕ್‌ ಬೈಲಾ ಅಳವಡಿಸಿದರೆ…

Read More

ತುಮಕೂರು: ಕಿಡಿಗೇಡಿಗಳಿಂದ ಸರ್ಕಾರಿ ಶಾಲೆ ಪೀಠೋಪಕರಣಗಳು ಧ್ವಂಸವಾಗಿರುವ ಘಟನೆ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿರುವ ಸಂತೇಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಕಳೆದ ರಾತ್ರಿ ಕಿಡಿಗೇಡಿಗಳಿಂದ ಪೀಠೋಪಕರಣಗಳ ಧ್ವಂಸವಾಗಿದ್ದು, ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ಕ್, ಕುರ್ಚಿಗಳನ್ನು ಪುಡಿಗಟ್ಟಿರುವ ಕಿಡಿಗೇಡಿಗಳು. ಶಾಲಾ ಕಾಂಪೌಂಡ್ ಗೋಡೆ ಎತ್ತರ ಹೆಚ್ಚಿಸುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ. ಇನ್ನೂ ಸ್ಥಳಕ್ಕೆ ಶಿರಾ ಬಿಇಒ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಇತ್ತೀಚೆಗಷ್ಟೇ ಆರಂಭವಾದ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ತಿರುವಾಂಕೂರು ದೇವಸ್ಥಾನಂ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ದರ್ಶನದ ಸಮಯವನ್ನು ಟಿಬಿಡಿ ಒಂದು ಗಂಟೆ ವಿಸ್ತರಿಸಿದೆ. ಪ್ರಸ್ತುತ ದಿನದಲ್ಲಿ ಸಂಜೆ 4 ರಿಂದ ರಾತ್ರಿ 11 ರವರೆಗೆ ಭಕ್ತರು ಅಯ್ಯಪ್ಪನ ದರ್ಶನ ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ದರ್ಶನ ರಾತ್ರಿ 11 ರವರೆಗೆ ನಡೆಯಲಿದೆ. ವರ್ಚುವಲ್ ಸರತಿ ಮೂಲಕ 90 ಸಾವಿರ ಬುಕ್ಕಿಂಗ್ ಆಗಿದೆ. ಪ್ರತಿ ದಿನ ಸ್ಥಳದಲ್ಲೇ 30 ಸಾವಿರ ಬುಕ್ಕಿಂಗ್ ಆಗುತ್ತಿದೆ ಎಂದು ಅಯ್ಯಪ್ಪ ದೇಗುಲದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಐಜಿ ಸ್ಪರ್ಜನ್ ಕುಮಾರ್ ತಿಳಿಸಿದ್ದಾರೆ. ಮಹಿಳೆಯರು, ವೃದ್ಧರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಶೀಘ್ರ ದರ್ಶನ ಪಡೆಯುವ ಕಾರ್ಯಕ್ಕೆ ಸ್ವಲ್ಪ ಮಟ್ಟಿಗೆ ಅಡ್ಡಿಯಾಗುತ್ತಿದೆ ಎಂದ ಅವರು ತಿಳಿಸಿದ್ದಾರೆ. ಅಯ್ಯಪ್ಪನ ದರ್ಶನದ ಸಮಯವನ್ನು ಪ್ರತಿದಿನ 17 ಗಂಟೆಗಳಿಗೂ ಮೀರಿ…

Read More

ಡಿ ಬಾಸ್ ದರ್ಶನ್ ‘ಕಾಟೇರ’ನಾಗಿ ತೆರೆಮೇಲೆ ಅಬ್ಬರಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ಸದ್ಯ ಚಿತ್ರತಂಡ ಒಂದೊಂದೇ ಹಾಡು ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡ್ತಿದೆ. ‘ಪಸಂದಾಗವನ್ನೆ’ ಸಾಂಗ್ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಇದೀಗ ಮತ್ತೊಂದು ಮೆಲೋಡಿ ಸಾಂಗ್ ರಿಲೀಸ್ ಆಗಿದೆ. ‘ಕಾಟೇರ’ ಚಿತ್ರದ ಹಾಡುಗಳನ್ನ ಚಿತ್ರತಂಡ ಪ್ಲಾನ್ ಮಾಡಿ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ಪಸಂದಾಗವ್ನೆ’ ಹಾಡಿನಲ್ಲಿ ಆರಾಧನಾ ಅವರು ದರ್ಶನ್ ಗುಣವನ್ನ ವರ್ಣಿಸಿದ್ದರು. ಕಾಟೇರನ ಬತ್ತಳಿಕೆಯಿಂದ ಯಾವ ಹಾಡು ಬರುತ್ತೆ ಅಂತ ನಿರೀಕ್ಷೆಯಲ್ಲಿದ್ದ ದಾಸನ ಫ್ಯಾನ್ಸ್​ಗೆ ಚಿತ್ರತಂಡ ಮತ್ತೊಂದು ಹಾಡು ರಿಲೀಸ್ ಮಾಡಿ ಸರ್ಪ್ರೈಸ್ ನೀಡಿದೆ. ಈ ಹಾಡು ಸಹ ಅಭಿಮಾನಿಗಳ ಮನ ಗೆದ್ದಿದೆ. ಕಾಟೇರ ಚಿತ್ರದ ‘ಯಾವ ಜನುಮದ ಗೆಳತಿ’ ಹಾಡು ಸ್ಪೆಷಲ್ ಆಗಿದೆ. ಆರಾಧನಾ ಮತ್ತು ದರ್ಶನ್ ಈ ಹಾಡಿನಲ್ಲಿ ಸಖತ್ ಆಗಿಯೇ ಕಾಣಿಸಿದ್ದಾರೆ. ನಾಯಕಿಯ ಬಗ್ಗೆ ನಾಯಕ ವರ್ಣನೆ ಮಾಡಿರುವುದು ಹಾಡಿನ ಹೈಲೆಟ್. ಡಾ. ನಾಗೇಂದ್ರ ಪ್ರಸಾದ್ ಅವರ ಸಾಲುಗಳು, ವಿ.…

Read More

ಇಸ್ಲಮಾಬಾದ್: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ಜಯ ಸಾಧಿಸಿರುವ ಬಿಜೆಪಿ (BJP) ಸಂಭ್ರಮದ ನಡುವೆ ಪಾಕ್ (Pakistan) ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria) ರಾಹುಲ್ ಗಾಂಧಿಯವರಿಗೆ (Rahul Gandhi) ಪರೋಕ್ಷವಾಗಿ ಕುಟುಕಿದ್ದಾರೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನತ್ತ ಮುನ್ನುಗ್ಗುತ್ತಿದ್ದಂತೆ ಕನೇರಿಯಾ, ಯಾವ ಪಕ್ಷ ಹಾಗೂ ಯಾರ ಹೆಸರನ್ನೂ ತೆಗೆದುಕೊಳ್ಳದೆ ತಮ್ಮ ಎಕ್ಸ್ ಖಾತೆಯಲ್ಲಿ ಪನೌತಿ ಕೌನ್? ಎಂದು ಬರೆದುಕೊಂಡು ನಗುವ ಎಮೋಜಿಯೊಂದಿಗೆ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯವರನ್ನು ಪನೌತಿ ಎಂದಿದ್ದ ರಾಹುಲ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ನ.19 ರಂದು ಏಕದಿನ ವಿಶ್ವಕಪ್ ಫೈನಲ್ ಪಂದ್ಯವ ವೇಳೆ ನರೇಂದ್ರ ಮೋದಿಯವರು (Narendra Modi) ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸಿದ ಕಾರಣ ಭಾರತ ಸೋಲನ್ನು ಅನುಭವಿಸಿತು ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ದಾನಿಶ್ ಕನೇರಿಯಾ ಅವರು ಪಾಕ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದರು.…

Read More

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಲೋಕಸಭಾ ಚುನಾವಣೆಗೆ (Loksabha Election) ಅಭ್ಯರ್ಥಿ ಘೋಷಣೆ ಆಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು (Vishweshwar Hegde Kageri) ಹೇಳಿದ್ದಾರೆ. ಬಿಜೆಪಿಯಿಂದ (BJP) ಮುಂದೆ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೆನರಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿಲಾಗಿದೆ. ಆ ಅಭ್ಯರ್ಥಿಯೇ ಬಿಜೆಪಿಯ ಕಮಲ ಎಂದಿದ್ದಾರೆ. ಈ ಕಮಲಕ್ಕಾಗಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಿ ಗೆಲ್ಲಿಸುತ್ತಾರೆ ಎಂದು ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಂದದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ರಾಜಕೀಯವಾಗಿ ನಿವೃತ್ತಿಯಾಗುವುದಾಗಿ ಈ ಹಿಂದೆಯೇ ಹೇಳಿಕೊಂಡಿದ್ದು, ಪಕ್ಷದ ಸಂಘಟನೆಯಾಗಲಿ ಅಥವಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ದೂರ ಉಳಿದಿದ್ದರು. ಹೀಗಾಗಿ ಬಿಜೆಪಿ ಪಕ್ಷದಿಂದ ಮುಂಬರುವ ಲೋಕಸಭಾ ಚುನಾವಣೆಗೆ ಯಾರು ಸ್ಪರ್ಧಿಗಳಾಗುತ್ತಾರೆ ಅಥವಾ ಜೆಡಿಎಸ್‍ಗೆ ಸ್ಥಾನ ಬಿಟ್ಟುಕೊಡುತ್ತಾ ಎಂಬುದು ಕುತೂಹಲ ಮೂಡಿಸಿತ್ತು.  https://ainlivenews.com/samantha-gave-a-bold-look-like-never-before-in-jeans-see-photos/ ಈ ನಡುವೆ ಶಿರಸಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸ್ಪೀಕರ್…

Read More

ಬೆಂಗಳೂರು: ಕರ್ನಾಟಕ ಕ್ರಿಕೆಟ್‌ನಲ್ಲಿ (Karnataka Cricket) 13 ವರ್ಷದ ಬೆಂಗಳೂರಿನ ಬಾಲಕ 2023-24ರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಪಂದ್ಯಗಳಲ್ಲಿ 1,400ಕ್ಕೂ ಹೆಚ್ಚು ರನ್‌ ಸಿಡಿಸಿ ಸುದ್ದಿಯಾಗಿದ್ದಾನೆ. ರಾಜಾಜಿನಗರ ನಿತೀಶ್‌ ಆರ್ಯ (Nitish Arya) 16 ವರ್ಷದೊಳಗಿನವರ ಟೂರ್ನಿಯಲ್ಲಿ 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 565 ರನ್ ಗಳಿಸಿ ಟಾಪ್‌ ಸ್ಕೋರರ್‌ ಆಗಿ ಹೊರಹೊಮ್ಮಿದ್ದಾರೆ. ಹಿರಿಯರ ಕ್ರಿಕೆಟ್‌ನಲ್ಲಿ 13ನೇ ವಯಸ್ಸಿನಲ್ಲೇ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದು ನಿಜಕ್ಕೂ ದೊಡ್ಡ ಸಾಧನೆ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ನಿತೀಶ್ ರಾಜಾಜಿನಗರ ಕ್ರಿಕೆಟರ್ಸ್ ಮತ್ತು ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ (ಬಸವೇಶ್ವರನಗರ) ಪರವಾಗಿ ಆಡುತ್ತಾರೆ. 7ನೇ ತರಗತಿ ಓದುತ್ತಿರುವ ನಿತೀಶ್‌ ಮೂರು ವರ್ಷ ಇರುವಾಗಲೇ ಕ್ರಿಕೆಟ್‌ ಆಡಲು ಆರಂಭಿಸಿದರು. ಈಗ ಅವರು ವಿಕ್ಟರಿ ಕ್ರಿಕೆಟ್ ಕ್ಲಬ್‌ಗಾಗಿ ಕೆಎಸ್‌ಸಿಎಯ 4ನೇ ಡಿವಿಷನ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕದೊಂದಿಗೆ ಅಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿಯ (Virat Kohli)…

Read More

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ, ಸಚಿವ ಮಲ್ಲಿಕಾರ್ಜುನ್​ಗೆ ಹೈಕೋರ್ಟ್​​ ನೋಟಿಸ್​ ಜಾರಿ ಮಾಡಿದೆ. ಚುನಾವಣೆ ಸಮಯದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ S.S.ಮಲ್ಲಿಕಾರ್ಜುನ್​​ ಕುಕ್ಕರ್, ಸೀರೆ ಹಂಚಿಕೆ ಮಾಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್ ವಿರುದ್ಧ ಅಂದಿನ SP ಸಿ.ಬಿ.ರಿಷ್ಯಂತ್ ದೂರು ದಾಖಲಿಸಿದ್ದರು. ದೂರು ದಾಖಲಾಗಿ 6 ತಿಂಗಳಾದ್ರೂ ಪೊಲೀಸರು ನ್ಯಾಯಾಲಯಕ್ಕೆ ಚಾರ್ಟ್ ಸಲ್ಲಿಸಿರಲಿಲ್ಲ. ಚಾರ್ಜ್​​ ಶೀಟ್​ ಹಾಕದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ದಾವಣಗೆರೆ ದಕ್ಷಿಣ ಕ್ಷೇತ್ರದ‌ ಪರಾಜಿತ ಪಕ್ಷೇತರ ಅಭ್ಯರ್ಥಿ ಸುಭಾನ್​ ಖಾನ್​​ ಹೈಕೋರ್ಟ್​ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗು ಮಲ್ಲಿಕಾರ್ಜುನ ಶಿವಶಂಕರಪ್ಪ ಅವರ ಆರೋಪ ಸಾಭೀತಾದರೆ ತಂದೆ, ಮಗನಿಗೆ ಸಂಕಷ್ಟ ಎದುರಾಗಲಿದೆ.

Read More