Author: AIN Author

ಕೋಲಾರ: ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಸಮೀಪ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ದೇವರ ಯಂತ್ರ ಕೊಡುವ ನೆಪದಲ್ಲಿ ಮೊಬೈಲ್, ಹಣ ದೋಚಲು ಯತ್ನಿಸಿದ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಆಂಧ್ರಪ್ರದೇಶದ ನರಸಿಂಹ ಮತ್ತು ಗಣೇಶ ಎಂಬುವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ ಇವರಿಬ್ಬರು ದೇವರ ಯಂತ್ರ ಕೊಡುವ ನೆಪದಲ್ಲಿ ವಂಚಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read More

ಚೆನ್ನೈ ಚಂಡಮಾರುತದಿಂದ ತತ್ತರಿಸಿದ ಕಾರಣದಿಂದಾಗಿ ರಜನಿಕಾಂತ್ ಇಂದು ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ ಅಭಿಮಾನಿಗಳು ಮತ್ತು ನಿರ್ಮಾಪಕರು ಸುಮ್ಮನೆ ಕೂತಿಲ್ಲ. ತಮ್ಮ ಪಾಡಿಗೆ ತಾವು ತಲೈವಾ ಹುಟ್ಟು ಹಬ್ಬವನ್ನು ಸಡಗರದಿಂದಲೇ ಆಚರಿಸುತ್ತಿದ್ದಾರೆ. ಇಂದು ರಜನಿ ಅವರ 170ನೇ  (Thalaiva 170) ಸಿನಿಮಾದ ಟೈಟಲ್ (Title) ಮತ್ತು ಟೀಸರ್ (Teaser) ರಿಲೀಸ್ ಆಗಲಿದ್ದು, ಅದಕ್ಕಾಗಿ ರಜನಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಂಜೆ 5 ಗಂಟೆಗೆ ಚಿತ್ರದ ಟೈಟಲ್ ರಿವಿಲ್ ಆಗಲಿದೆ. ಹಲವು ದಿನಗಳಿಂದ ರಜನಿ ನಟನೆಯ 170ನೇ ಸಿನಿಮಾ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರ ಬೀಳುತ್ತಿವೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಸಂಸ್ಥೆಯು ಒಂದೊಂದು ಮಾಹಿತಿಯನ್ನು ಹೊರ ಹಾಕುತ್ತಿದೆ. ಜೊತೆಗೆ ಕೆಲ ದಿನಗಳ ಹಿಂದೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಜೊತೆಗೆ ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಎನ್ನುವ ವಿಷಯವನ್ನು ಸಂಸ್ಥೆ ಹೇಳಿಕೊಂಡಿದೆ. ರಜನಿಕಾಂತ್ ಮತ್ತು ಅಮಿತಾಭ್ ಕಾಂಬಿನೇಷನ್ ನ ಈ…

Read More

ಬೆಂಗಳೂರು ಮಹಾನಗರವಾಗಿ ಬೆಳೆದಿದೆ. ಆದ್ರೆ ಕೆಲವು ಪದೇಶಗಳಲ್ಲಿ ಕೆಲವು ಆಚರಣೆಗಳಲ್ಲಿ ಇನ್ನೂ ಹಳ್ಳಿಯ ಸೊಗಡು ಉಳಿದುಕೊಂಡಿದೆ. ಹೌದು ನಗರ ಬಸವನಗುಡಿಯಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಎಲ್ಲಿ ನೋಡಿದ್ರು ರಾಶಿ ರಾಶಿ ಕಡಲೆ, ಕಾಲಿಡಲು ಜಾಗವಿಲ್ಲದಷ್ಟು ಜನಜಂಗಳಿಯ ಅದ್ದೂರಿ ಹಬ್ಬಕ್ಕೆ ಇವತ್ತು ಚಾಲನೆ ಸಿಕ್ಕಿದೆ. ಹಾಗಾದ್ರೆ ಹೇಗಿದೆ ಈ ಬಾರಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಬನ್ನಿ ನೋಡಿಕೊಂಡು ಬರೋಣ ರಸ್ತೆ ಬದಿಗಳಲ್ಲೆಲ್ಲ ರಾಶಿ ರಾಶಿ ಕಡಲೆ ಕಾಲಿಡಲೂ ಜಾಗವಿಲ್ಲದಷ್ಟು ಜನಜಂಗುಳಿ. ಅತ್ತಿತ್ತ ನೋಡಿದರೆ ಗಿರಗಿಟ್ಲೆ, ಉಸಿರುಬುಂಡೆ, ಪೀಪಿ, ಮಿಟಾಯಿ ಮಳಿಗೆಗಳು. ಅರೆ! ಇದ್ಯಾವ ಊರಿನ ಜಾತ್ರೆ ಎಂದು ಆಶ್ಚರ್ಯವಾಯ್ತೇ?ಇಂದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ.ಹೌದು . ಕಾರ್ತಿಕ ಸೋಮವಾರ ಬಂತೆಂದರೆ ಬಸವನಗುಡಿಯಲ್ಲಿ ಹೀಗೊಂದು ಹೊಸ ಪ್ರಪಂಚವೇ ಸೃಷ್ಟಿಯಾಗತ್ತೆ. ಕಾಂಕ್ರೀಟ್‌ ಕಾಡಿನಲ್ಲಿ ಮಾಲ್ ಸಂಸ್ಕೃತಿಯನ್ನೇ ನೋಡಿ ನೋಡಿ ಬೋರ್‌ ಹೊಡೆದ ಬೆಂಗಳೂರಿಗರಿಗೆ ಕಡಲೆಕಾಯಿ ಕಾಯಿ ಪರಿಷೆ ಎಂದರೆ ಹಬ್ಬವೋ ಹಬ್ಬ.ಈ ಪಾರಂಪರಿಕ ಹಬ್ಬಕ್ಕೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿತ್ತು. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ…

Read More

ಬೆಂಗಳೂರು: ಹಿರಿಯ ನಟಿ ಲೀಲಾವತಿಯವರ (Leelavathi) ನಿಧನಕ್ಕೆ ವಿಧಾನಪರಿಷತ್‍ನಲ್ಲಿ ಸಂತಾಪ ಸೂಚಿಸಲಾಯಿತು. ಕಲಾಪ ಪ್ರಾರಂಭವಾದ ತಕ್ಷಣ ಉಪಸಭಾಪತಿಗಳು ಸಂತಾಪ ಸೂಚನೆ ಓದಿದರು. ಇದಕ್ಕೆ ಸಭಾ ನಾಯಕರ ಬೋಸರಾಜು, ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯವರು ಸಹ ದನಿಗೂಡಿಸಿದರು. ಸಂತಾಪ ಸೂಚನೆ ವೇಳೆ ಮಾತನಾಡಿದ ನಟಿ ಹಾಗೂ ಪರಿಷತ್ ಸದಸ್ಯೆ ಉಮಾಶ್ರೀ (Umashree), ಲೀಲಾವತಿಯವರು ಬಾಲ್ಯದಿಂದ ಸಾವಿನವರೆಗೂ ಸಂಘರ್ಷದ ಜೀವನ ಮಾಡಿಕೊಂಡು ಬಂದವರು. ಇಷ್ಟು ಸಂಘರ್ಷಗಳನ್ನು ಜಯಿಸಿಕೊಂಡು ಬಂದಿದ್ದರು. ಲೀಲಾವತಿ ಮಾಡದ ಪಾತ್ರಗಳೇ ಇಲ್ಲ. ನಾವು ನಟರಾಗಿದ್ದರು ಅವರ ನಟನೆಗೆ ಸಾಟಿ ಅಲ್ಲ. ಪಾತ್ರಕ್ಕೆ ತಕ್ಕ ನ್ಯಾಯ ಹಾಗೂ ಪೋಷಣೆಯನ್ನು ಅವರು ಒದಗಿಸುತ್ತಿದ್ದರು ಎಂದು ಲೀಲಾವತಿಯವರ ಗುಣಗಾನ ಮಾಡಿದ್ದಾರೆ. ಸೋಲದೇವನಹಳ್ಳಿಯಲ್ಲಿ ಅವರು ಮಾಡಿದ ಸೇವೆ ಅಲ್ಲಿನ ಜನರು ಹೇಳುತ್ತಾರೆ. ಅಂತಹ ತಾಯಿಯ ಸೇವೆಯನ್ನು ಪುತ್ರ ವಿನೋದ್ ರಾಜ್  (Vinod Raj) ಮಾಡಿದ್ದಾರೆ. ವಿನೋದ್, ತಾಯಿಗೆ ತಕ್ಕ ಮಗ, ಲೀಲಾವತಿಯವರೂ ಸಹ ಮಗನಿಗೆ ತಕ್ಕ ತಾಯಿ ಎಂದು ಅವರು ಹೇಳಿದ್ದಾರೆ.

Read More

ಕೊಪ್ಪಳ: ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಘಟನೆ. ಮಹೇಶ್ ಕುದ್ರಿಕಟಗಿ(37) ಆತ್ಮಹತ್ಯೆಗೆ ಶರಣಾದ ರೈತ, ಸೋಮವಾರ ಸಂಜೆ ತನ್ನದೇ ಜಮೀನಿನಲ್ಲಿ ವಿಷ ಸೇವಿಸಿ ಮಹೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳಿದ್ದಾನೆ. ರೈತ ಮಹೇಶ್ ತನ್ನ ಜಮೀನಿನಲ್ಲಿ ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳದಿದ್ದ. ಆದರೇ, ಬರಗಾಲ ಹಿನ್ನೆಲೆಯಲ್ಲಿ ಬೆಳೆ ಕೈಕೊಟ್ಟಿತ್ತು ಬ್ಯಾಂಕ್ ನಿಂದ ಹಾಗೂ ಖಾಸಗಿಯವರಿಂದ ಬೆಳೆಯನ್ನು ನಂಬಿ ನಾಲ್ಕು ಲಕ್ಷ ಸಾಲ ಮಾಡಿಕೊಂಡಿದ್ದ. ಮಳೆ ಕೈಕೊಟ್ಟ ಹಿನ್ನೆಲೆ ಸಾಲವನ್ನು ಮರಳಿ ತೀರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ಹಾಯ್​ ನಾನ್ನ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಎಮೋಷನಲ್​ ಕಥಾಹಂದರಕ್ಕೆ ಸಿನಿರಸಿಕರು ಮಾತ್ರವಲ್ಲ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಮನೆ ದೊರೆ ಶಿವಣ್ಣ ನಾನಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಹಾಯ್​ ನಾನ್ನ’ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನಾನಿ, ಚಿತ್ರ ಬಿಡುಗಡೆಗೂ ಮುನ್ನ ಶಿವಣ್ಣ ಅವರನ್ನು ಭೇಟಿಯಾಗಿದ್ದರು. ಈಗ ಮೈಸೂರಿಯಲ್ಲಿ ಶಿವರಾಜ್​ಕುಮಾರ್​ ಅವರು ‘ಹಾಯ್​ ನಾನ್ನ’ ಚಿತ್ರ ವೀಕ್ಷಿಸಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮಾಧ್ಯಮದರೊಂದಿಗೆ ಮಾತನಾಡಿದ ಶಿವಣ್ಣ , ತುಂಬ ಅದ್ಭುತ ಸಿನಿಮಾ. ಎಮೋಷನ್, ಸೆಂಟಿಮೆಂಟ್ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದರೆ ಬೇಗ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಬೇಗ ಕನೆಕ್ಟ್ ಆಯ್ತು. ಮ್ಯೂಸಿಕ್ ತುಂಬಾ ಚೆನ್ನಾಗಿದೆ. ನಾನಿ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲರ ಅಭಿಯನ ಅದ್ಭುತವಾಗಿದೆ. ನನಗೆ ಬಹಳ ಟಚ್ ಆಯ್ತು ಸಿನಿಮಾ. ಕೊನೆ ಹತ್ತು ನಿಮಿಷ ಕಣ್ಣಲ್ಲಿ ನೀರು ಬಂತು. ನಾನಿ ನಾನು ನಿಮ್ಮ…

Read More

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ಹಾಯ್​ ನಾನ್ನ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಎಮೋಷನಲ್​ ಕಥಾಹಂದರಕ್ಕೆ ಸಿನಿರಸಿಕರು ಮಾತ್ರವಲ್ಲ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಮನೆ ದೊರೆ ಶಿವಣ್ಣ ನಾನಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಯ್​ ನಾನ್ನ’ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನಾನಿ, ಚಿತ್ರ ಬಿಡುಗಡೆಗೂ ಮುನ್ನ ಶಿವಣ್ಣ ಅವರನ್ನು ಭೇಟಿಯಾಗಿದ್ದರು. ಈಗ ಮೈಸೂರಿಯಲ್ಲಿ ಶಿವರಾಜ್​ಕುಮಾರ್​ ಅವರು ‘ಹಾಯ್​ ನಾನ್ನ’ ಚಿತ್ರ ವೀಕ್ಷಿಸಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮಾಧ್ಯಮದರೊಂದಿಗೆ ಮಾತನಾಡಿದ ಶಿವಣ್ಣ , ತುಂಬ ಅದ್ಭುತ ಸಿನಿಮಾ. ಎಮೋಷನ್, ಸೆಂಟಿಮೆಂಟ್ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದರೆ ಬೇಗ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಬೇಗ ಕನೆಕ್ಟ್ ಆಯ್ತು. ಮ್ಯೂಸಿಕ್ ತುಂಬಾ ಚೆನ್ನಾಗಿದೆ. ನಾನಿ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲರ ಅಭಿಯನ ಅದ್ಭುತವಾಗಿದೆ. ನನಗೆ ಬಹಳ ಟಚ್ ಆಯ್ತು ಸಿನಿಮಾ. ಕೊನೆ ಹತ್ತು ನಿಮಿಷ ಕಣ್ಣಲ್ಲಿ ನೀರು ಬಂತು. ನಾನಿ ನಾನು ನಿಮ್ಮ…

Read More

ಬೆಳಗಾವಿ: ಮುಸ್ಲಿಂ ಸ್ಪೀಕರ್‌ ಕುರಿತಾದ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ಹಿಂದೂಗಳು (Hindu) ನಮಸ್ಕಾರ ಮಾಡ್ಬೇಕು ಅಂತ ನಾನು ಹೇಳಿದ್ದೀನಾ? ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ (Zameer Ahmed Khan) ಪ್ರಶ್ನೆ ಮಾಡಿದರು. ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, https://ainlivenews.com/samantha-gave-a-bold-look-like-never-before-in-jeans-see-photos/ ಸದನ 4ನೇ ತಾರೀಖು ಶುರುವಾಗಿದೆ. ಮೊದಲ ವಾರ ಏನೂ ಮಾತಾಡಿಲ್ಲ. 2ನೇ ವಾರ ಇದ್ದಕ್ಕಿದ್ದಂತೆ ಈ ವಿಷಯ ತೆಗೆದುಕೊಂಡಿದ್ದಾರೆ. ಇದರ ಅಗತ್ಯವಾದರೂ ಏನಿತ್ತು? ನಾ‌ನೇನು ತಪ್ಪು ಮಾತಾಡಿದ್ದೇನೆ? ಹೈದರಾಬಾದ್ ಸಭೆಯಲ್ಲಿ ಮಾತಾಡಿದ್ದೇನೆ. ಸಭೆಯಲ್ಲಿ ಯಾರೋ ಒಬ್ಬ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಮಾನ ಅವಕಾಶ ಕೊಡಲ್ಲ ಎಂದು ಕೇಳಿದ್ರು. ಆಗ ನಿನ್ನ ಭಾವನೆ ತಪ್ಪಿದೆ ಎಂದು ತಿಳಿವಳಿಕೆ ಹೇಳಿದೆ ಎಂದರು. 

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆದಂತೆ ನೀರಿನ ದಾಹದ ಬೇಡಿಕೆ ಸಹ ಹೆಚ್ಚಳವಾಗುತ್ತಿದೆ. ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಕುಡಿಯೋದಕ್ಕೆ ನೀರೇ ಸಿಗಲ್ಲ ಅನ್ನೋ ಸರ್ವೇಗಳು ಜನರ ನೆಮ್ಮದಿ ಹಾಳು ಮಾಡಿದೆ..ಹೀಗಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಬೆಂಗಳೂರು ಜಲಮಂಡಳಿ ಕಾವೇರಿ ಐದನೇ ಹಂತ ಯೋಜನೆಗೆ ಕೈ ಹಾಕಿದೆ..ಈಗಾಗಲೇ ಯೋಜನೆ ಆರಂಭವಾಗಿದ್ದು,ಮುಂದಿನ ವರ್ಷ ಏಫ್ರಿಲ್ ನಲ್ಲಿ ಬೆಂಗಳೂರಿಗೆ 10 ಟಿಎಂಸಿ ನೀರು ಹರಿದು ಬರಲಿದೆ. ಬೆಂಗಳೂರು ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ.ನಗರ ವಿಸ್ತಾರವಾಗುತ್ತಿದ್ದಂತೆ ಜನರ ನೀರಿನ ದಾಹ ತಣ್ಣಿಸಲು ಜಲಮಂಡಳಿಗೆ ಸವಾಲು ಆಗಿದೆ. ಇದೀಗ ಕಾವೇರಿ ಒಂದು, ಎರಡು, ಮೂರು ಹಾಗೂ ನಾಲ್ಕನೇ ಹಂತಗಳ ಮೂಲಕ ಕಾವೇರಿ ನೀರು ನಗರಕ್ಕೆ ಪೂರೈಕೆ ಯಾಗುತ್ತಿದೆ.ಸದ್ಯ ಪ್ರತಿದಿನ 135 ಕೋಟಿ ಲೀಟರ್‌ ನೀರು ಪೂರೈಕೆ ಆಗುತ್ತಿದೆ. ಹೀಗಿದ್ದೂ ನಗರ ನಿತ್ಯ 75 ಕೋಟಿ ಲೀಟರ್‌ನಷ್ಟು ಕೊರತೆ ಅನುಭವಿಸುತ್ತಿದೆ. ಐದನೇ ಹಂತದ ಯೋಜನೆ ಅನುಷ್ಠಾನಕ್ಕೆ ಬಂದರೆ ನೀರಿನ ಕೊರತೆ ಸಂಪೂರ್ಣವಾಗಿ ನೀಗಲಿದೆ ಅನ್ನೋದು ಜಲಮಂಡಳಿ ಲೆಕ್ಕಚಾರವಾಗಿದ್ದು,ಮಂಡಳಿ…

Read More

ಬೆಳಗಾವಿ: ಮೇ ಬಳಿಕ ಸರ್ಕಾರ ಪತನ ಎಂಬ ಹೆಚ್‌ಡಿಕೆ (HD Kumaraswamy) ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ -ಜೆಡಿಎಸ್‌ನವರು ಪಾಪ ನೀರಿನಿಂದ ತೆಗೆದ ಮೀನಿನ ರೀತಿ ವಿಲಿವಿಲಿ ಎಂದು ಒದ್ದಾಡುತ್ತಿದ್ದಾರೆ. ಅವರು ಭ್ರಮಾ ಲೋಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆ ಪ್ರಸ್ತಾಪಿಸಿದರೂ ಉತ್ತರ ಕೊಡೋಕೆ ಸರ್ಕಾರ ತಯಾರಿದೆ. ನಾವು ಯಾವುದಕ್ಕೂ ವಿಳಂಬ ಮಾಡೋದಾಗಲಿ, ಕಾಲಹರಣ ಮಾಡಲ್ಲ. ಇವತ್ತು ಬರಗಾಲದ ಬಗ್ಗೆ ಚರ್ಚೆಯಾಗುತ್ತಿದ್ದು, ಉತ್ತರ ಕೊಡುತ್ತಿದ್ದೇವೆ. https://ainlivenews.com/samantha-gave-a-bold-look-like-never-before-in-jeans-see-photos/ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ವಿಷಯ ಪ್ರಸ್ತಾಪ ಆಗಿದೆ ಎಂದರು. ಬಿಜೆಪಿ (BJP) ನಾಯಕರ ಸಮನ್ವಯ ಕೊರತೆಯಿಂದ ಕಲಾಪದ ಸಮಯ ವ್ಯರ್ಥ ಆರೋಪ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ಯಾವತ್ತೂ ಸಮನ್ವಯ ಇಲ್ಲ. ಅವರು ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದವರು. ಬಳಿಕ ಸೋತಿದ್ದಾರೆ, ಜನ ತಿರಸ್ಕರಿಸಿದ್ದಾರೆ. ಇದಾದ ಮೇಲೆ ಸಮನ್ವಯ ಬರಲು ಸಾಧ್ಯವೇ ಇಲ್ಲ. ಅಲ್ಲಿ…

Read More