Author: AIN Author

ಪರಭಾಷಾ ಬಿಗ್ ಬಾಸ್ (Bigg Boss Telugu) ಶೋನಲ್ಲಿ ಭಾಗಿಯಾಗಿ, ಸಖತ್ ಸದ್ದು ಮಾಡಿದ್ದ ಕನ್ನಡತಿ ಶೋಭಾ ಶೆಟ್ಟಿ ಈ ವಾರ ಎಲಿಮಿನೇಟ್ (Eliminated) ಆಗಿದ್ದಾರೆ. ಈ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ಶೋಭಾ ಶೆಟ್ಟಿ ಇರಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಆ ನಂಬಿಕೆ ಇದೀಗ ಸುಳ್ಳಾಗಿದೆ. ‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದರು. ನಾಗಾರ್ಜುನ (Nagarjuna) ನಿರೂಪಣೆಯ ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿ ಕಮಾಲ್ ಮಾಡ್ತಿದ್ದರು. ಕನ್ನಡದ ನಟಿಯ ಆಟ ನೋಡಿ, ಇವ್ರು ಕನ್ನಡದ ಬಿಗ್ ಬಾಸ್ ಸೀಸನ್ 10ನಲ್ಲಿ ಇರಬಾರದಿತ್ತಾ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದರು. ತೆಲುಗು ಬಿಗ್ ಬಾಸ್ ಸೀಸನ್-7ರಲ್ಲಿ ಬೆಂಗಳೂರಿನ ಈ ಬೆಡಗಿ ದೊಡ್ಮನೆಯಲ್ಲಿ ರೆಬೆಲ್ ಆಗಿ ಆಟ ಆಡುತ್ತಿದ್ದರು. ಅವರ ಆಟಕ್ಕೆ ಮನೆ ಮಂದಿ ಗಪ್ ಚುಪ್ ಆಗಿದ್ದರು. ಶೋಭಾ ಖಡಕ್ ಆಟ ನೋಡಿ, ಅಯ್ಯೋ ಇವರು ಕನ್ನಡದ…

Read More

ಚಿಕ್ಕಬಳ್ಳಾಪುರ, ಚಿಂತಾಮಣಿಯಿಂದ ದಲಿತ ಮುಖಂಡರು ಬೆಳಗಾವಿ ಅಧಿವೇಶನಕ್ಕೆ ತೆರಳಲಿ ಮನವಿ ಸಲ್ಲಿಸಲು ಸೋಮವಾರ ದಾವಣಗೆರೆ ಸಮೀಪ ತೆರಳುವಾಗ ಬಸ್ ಅಪಘಾತವಾಗಿ ಕೆಲವರು ಗಾಯಾಳುಗಳಾಗಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮವನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ವಿಚಾರಿಸಿದರು. https://ainlivenews.com/samantha-gave-a-bold-look-like-never-before-in-jeans-see-photos/ ಇಂದು ಬೆಳಗಿನ ವೇಳೆ ದಾವಣಗೆರೆ ಹೊರಭಾಗದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ರಾ.ಹೆದ್ದಾರಿಯಲ್ಲಿ ಬಸ್ ಅಪಘಾತವಾಗಿ ಸುಮಾರು 18 ಜನರು ಗಾಯಾಳುಗಳಾಗಿದ್ದಾರೆ. ಇವರು ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ನಿವಾಸಿಗಳಾಗಿದ್ದಾರೆ.ಈ ವೇಳೆ ಗಾಯಾಳುಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಸೂಚನೆ ನೀಡಿದ ಅವರು ಇವರಿಗೆ ಯಾವುದೇ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಕೂಡಲೇ ನೀಡಲು ತಿಳಿಸಿದರು. ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.

Read More

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಮತ್ತೊಂದು ರಸ್ತೆಯ ಕ್ವಾಲಿಟಿ ಈಗ ಮತ್ತೊಮ್ಮೆ ಬಟಾಬಯಲಾಗಿದೆ. ನಗರದ ಮತ್ತೊಂದು ವೈಟ್ ಟ್ಯಾಪಿಂಗ್ ರಸ್ತೆ ಕುಸಿತಗೊಂಡಿದ್ದು  ರಸ್ತೆ ಮಧ್ಯೆಯೆ ಭಾರಿ ಪ್ರಮಾಣದ ಹೊಂಡ ಸೃಷ್ಠಿಯಾಗಿ ವಾಹನಗಳಿಗೆ ಓಡಾಡಲು ಕಷ್ಟವಾಗುತ್ತಿದ್ದು ತಪ್ಪಿದ ಭಾರಿ ಅನಾಹುತ- ವಾಹನ ಸವಾರರು ಪಾರು ಕೂಡ ಆಗಿದ್ದಾರೆ. ರಸ್ತೆ ಮಧ್ಯೇ ಭಾರಿ ಪ್ರಮಾಣದಲ್ಲಿ ಕುಸಿದಿರೋ ರಸ್ತೆ ಹಲಸೂರು ಕೆರೆ ಬಳಿಯ ಡಿ ಭಾಸ್ಕರನ್ ರಸ್ತೆಯಲ್ಲಿ ರಸ್ತೆ ಕುಸಿದಿದ್ದು ಸುಮಾರು 4 ಅಡಿಯಷ್ಟು ಕುಸಿದಿದ್ದು ನಿನ್ನೆ ರಾತ್ರಿ 8 ಗಂಟೆ ವೇಳೆಗೆ ನಡೆದಿರೋ ಘಟನೆಯಾಗಿದೆ. ಕಳೆದ ಒಂದು ವರ್ಷದ ಹಿಂದಷ್ಟೇ ಆಗಿದ್ದ ಕಾಮಗಾರಿ ಧಿಡೀರ್ ರಸ್ತೆ ಕುಸಿತದಿಂದ ವಾಹನ ಸವಾರರ ಪರದಾಟ ಸದ್ಯ ಹೊಂಡ ಸುತ್ತ ಬ್ಯಾರಿಕೇಡ್ ಹಾಕಿರೋ ಪೊಲೀಸರು ಪಕ್ಕದ ರಸ್ತೆಯಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿರುವ ಸಂಚಾರಿ ಪೊಲೀಸರು

Read More

ಪವಾಡ ಪುರುಷನ ನೆಲೆ ಹಾಗೂ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ನಡೆದವು. ಮಾದಪ್ಪನ ಬೆಟ್ಟದಲ್ಲಿ ಮಾದಪ್ಪನ ದೇವಾಲಯದಲ್ಲಿ ಕಡೆಯ ಕಾರ್ತಿಕ ಮಾಸದಪ್ರಯಕ್ತ ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ಪವಾಡಪುರುಷ ಮಹದೇಶ್ವರ ಸ್ವಾಮಿಯ ಮಹಾ ಜ್ಯೋತಿಯನ್ನು ಬೆಳಗಲಾಯಿತು. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಅರ್ಚಕರು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ನೂರಾರು ಭಕ್ತರ ಸಮ್ಮುಖದಲ್ಲಿ ಮಹಾ ಜ್ಯೋತಿ ಬೆಳಗಿದರು. ಈ ಸಂದರ್ಭದಲ್ಲಿ ಭಕ್ತರು ‘ಉಫೇ ಮಾದಪ್ಪ, ಮಾಯ್ಕಾರ ಮಾದಪ್ಪ…’ ಮುಂತಾದ ಘೋಷಣೆಗಳನ್ನು ಕೂಗಿದರು. https://ainlivenews.com/samantha-gave-a-bold-look-like-never-before-in-jeans-see-photos/ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದ ರಾತ್ರಿ ಈ ಸೇವೆಯನ್ನು ನೆರವೇರಿಸಲಾಗುತ್ತದೆ. ಜ್ಯೋತಿ ಬೆಳಗುವುದಕ್ಕೂ ಮುನ್ನ, ದೇವಾಲಯದ ಒಳ ಆವರಣದಲ್ಲಿ ಮಹದೇಶ್ವರ ಸ್ವಾಮಿಯ ಉತ್ಸವ ಪೂಜೆ ನೆರವೇರಿಸಿ ಮೂರ್ತಿಗೆ ವಿಶೇಷ ಒಳ ಆವರಣದಲ್ಲಿ ಉತ್ಸಮೂರ್ತಿಯನ್ನು ದೇವಾಲಯಕ್ಕೆ ಮೂರು…

Read More

ಕೋಲಾರ: ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಸಮೀಪ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ದೇವರ ಯಂತ್ರ ಕೊಡುವ ನೆಪದಲ್ಲಿ ಮೊಬೈಲ್, ಹಣ ದೋಚಲು ಯತ್ನಿಸಿದ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಆಂಧ್ರಪ್ರದೇಶದ ನರಸಿಂಹ ಮತ್ತು ಗಣೇಶ ಎಂಬುವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ ಇವರಿಬ್ಬರು ದೇವರ ಯಂತ್ರ ಕೊಡುವ ನೆಪದಲ್ಲಿ ವಂಚಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read More

ಚೆನ್ನೈ ಚಂಡಮಾರುತದಿಂದ ತತ್ತರಿಸಿದ ಕಾರಣದಿಂದಾಗಿ ರಜನಿಕಾಂತ್ ಇಂದು ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ ಅಭಿಮಾನಿಗಳು ಮತ್ತು ನಿರ್ಮಾಪಕರು ಸುಮ್ಮನೆ ಕೂತಿಲ್ಲ. ತಮ್ಮ ಪಾಡಿಗೆ ತಾವು ತಲೈವಾ ಹುಟ್ಟು ಹಬ್ಬವನ್ನು ಸಡಗರದಿಂದಲೇ ಆಚರಿಸುತ್ತಿದ್ದಾರೆ. ಇಂದು ರಜನಿ ಅವರ 170ನೇ  (Thalaiva 170) ಸಿನಿಮಾದ ಟೈಟಲ್ (Title) ಮತ್ತು ಟೀಸರ್ (Teaser) ರಿಲೀಸ್ ಆಗಲಿದ್ದು, ಅದಕ್ಕಾಗಿ ರಜನಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಂಜೆ 5 ಗಂಟೆಗೆ ಚಿತ್ರದ ಟೈಟಲ್ ರಿವಿಲ್ ಆಗಲಿದೆ. ಹಲವು ದಿನಗಳಿಂದ ರಜನಿ ನಟನೆಯ 170ನೇ ಸಿನಿಮಾ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರ ಬೀಳುತ್ತಿವೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಸಂಸ್ಥೆಯು ಒಂದೊಂದು ಮಾಹಿತಿಯನ್ನು ಹೊರ ಹಾಕುತ್ತಿದೆ. ಜೊತೆಗೆ ಕೆಲ ದಿನಗಳ ಹಿಂದೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಜೊತೆಗೆ ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಎನ್ನುವ ವಿಷಯವನ್ನು ಸಂಸ್ಥೆ ಹೇಳಿಕೊಂಡಿದೆ. ರಜನಿಕಾಂತ್ ಮತ್ತು ಅಮಿತಾಭ್ ಕಾಂಬಿನೇಷನ್ ನ ಈ…

Read More

ಬೆಂಗಳೂರು ಮಹಾನಗರವಾಗಿ ಬೆಳೆದಿದೆ. ಆದ್ರೆ ಕೆಲವು ಪದೇಶಗಳಲ್ಲಿ ಕೆಲವು ಆಚರಣೆಗಳಲ್ಲಿ ಇನ್ನೂ ಹಳ್ಳಿಯ ಸೊಗಡು ಉಳಿದುಕೊಂಡಿದೆ. ಹೌದು ನಗರ ಬಸವನಗುಡಿಯಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಎಲ್ಲಿ ನೋಡಿದ್ರು ರಾಶಿ ರಾಶಿ ಕಡಲೆ, ಕಾಲಿಡಲು ಜಾಗವಿಲ್ಲದಷ್ಟು ಜನಜಂಗಳಿಯ ಅದ್ದೂರಿ ಹಬ್ಬಕ್ಕೆ ಇವತ್ತು ಚಾಲನೆ ಸಿಕ್ಕಿದೆ. ಹಾಗಾದ್ರೆ ಹೇಗಿದೆ ಈ ಬಾರಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಬನ್ನಿ ನೋಡಿಕೊಂಡು ಬರೋಣ ರಸ್ತೆ ಬದಿಗಳಲ್ಲೆಲ್ಲ ರಾಶಿ ರಾಶಿ ಕಡಲೆ ಕಾಲಿಡಲೂ ಜಾಗವಿಲ್ಲದಷ್ಟು ಜನಜಂಗುಳಿ. ಅತ್ತಿತ್ತ ನೋಡಿದರೆ ಗಿರಗಿಟ್ಲೆ, ಉಸಿರುಬುಂಡೆ, ಪೀಪಿ, ಮಿಟಾಯಿ ಮಳಿಗೆಗಳು. ಅರೆ! ಇದ್ಯಾವ ಊರಿನ ಜಾತ್ರೆ ಎಂದು ಆಶ್ಚರ್ಯವಾಯ್ತೇ?ಇಂದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ.ಹೌದು . ಕಾರ್ತಿಕ ಸೋಮವಾರ ಬಂತೆಂದರೆ ಬಸವನಗುಡಿಯಲ್ಲಿ ಹೀಗೊಂದು ಹೊಸ ಪ್ರಪಂಚವೇ ಸೃಷ್ಟಿಯಾಗತ್ತೆ. ಕಾಂಕ್ರೀಟ್‌ ಕಾಡಿನಲ್ಲಿ ಮಾಲ್ ಸಂಸ್ಕೃತಿಯನ್ನೇ ನೋಡಿ ನೋಡಿ ಬೋರ್‌ ಹೊಡೆದ ಬೆಂಗಳೂರಿಗರಿಗೆ ಕಡಲೆಕಾಯಿ ಕಾಯಿ ಪರಿಷೆ ಎಂದರೆ ಹಬ್ಬವೋ ಹಬ್ಬ.ಈ ಪಾರಂಪರಿಕ ಹಬ್ಬಕ್ಕೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿತ್ತು. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ…

Read More

ಬೆಂಗಳೂರು: ಹಿರಿಯ ನಟಿ ಲೀಲಾವತಿಯವರ (Leelavathi) ನಿಧನಕ್ಕೆ ವಿಧಾನಪರಿಷತ್‍ನಲ್ಲಿ ಸಂತಾಪ ಸೂಚಿಸಲಾಯಿತು. ಕಲಾಪ ಪ್ರಾರಂಭವಾದ ತಕ್ಷಣ ಉಪಸಭಾಪತಿಗಳು ಸಂತಾಪ ಸೂಚನೆ ಓದಿದರು. ಇದಕ್ಕೆ ಸಭಾ ನಾಯಕರ ಬೋಸರಾಜು, ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯವರು ಸಹ ದನಿಗೂಡಿಸಿದರು. ಸಂತಾಪ ಸೂಚನೆ ವೇಳೆ ಮಾತನಾಡಿದ ನಟಿ ಹಾಗೂ ಪರಿಷತ್ ಸದಸ್ಯೆ ಉಮಾಶ್ರೀ (Umashree), ಲೀಲಾವತಿಯವರು ಬಾಲ್ಯದಿಂದ ಸಾವಿನವರೆಗೂ ಸಂಘರ್ಷದ ಜೀವನ ಮಾಡಿಕೊಂಡು ಬಂದವರು. ಇಷ್ಟು ಸಂಘರ್ಷಗಳನ್ನು ಜಯಿಸಿಕೊಂಡು ಬಂದಿದ್ದರು. ಲೀಲಾವತಿ ಮಾಡದ ಪಾತ್ರಗಳೇ ಇಲ್ಲ. ನಾವು ನಟರಾಗಿದ್ದರು ಅವರ ನಟನೆಗೆ ಸಾಟಿ ಅಲ್ಲ. ಪಾತ್ರಕ್ಕೆ ತಕ್ಕ ನ್ಯಾಯ ಹಾಗೂ ಪೋಷಣೆಯನ್ನು ಅವರು ಒದಗಿಸುತ್ತಿದ್ದರು ಎಂದು ಲೀಲಾವತಿಯವರ ಗುಣಗಾನ ಮಾಡಿದ್ದಾರೆ. ಸೋಲದೇವನಹಳ್ಳಿಯಲ್ಲಿ ಅವರು ಮಾಡಿದ ಸೇವೆ ಅಲ್ಲಿನ ಜನರು ಹೇಳುತ್ತಾರೆ. ಅಂತಹ ತಾಯಿಯ ಸೇವೆಯನ್ನು ಪುತ್ರ ವಿನೋದ್ ರಾಜ್  (Vinod Raj) ಮಾಡಿದ್ದಾರೆ. ವಿನೋದ್, ತಾಯಿಗೆ ತಕ್ಕ ಮಗ, ಲೀಲಾವತಿಯವರೂ ಸಹ ಮಗನಿಗೆ ತಕ್ಕ ತಾಯಿ ಎಂದು ಅವರು ಹೇಳಿದ್ದಾರೆ.

Read More

ಕೊಪ್ಪಳ: ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಘಟನೆ. ಮಹೇಶ್ ಕುದ್ರಿಕಟಗಿ(37) ಆತ್ಮಹತ್ಯೆಗೆ ಶರಣಾದ ರೈತ, ಸೋಮವಾರ ಸಂಜೆ ತನ್ನದೇ ಜಮೀನಿನಲ್ಲಿ ವಿಷ ಸೇವಿಸಿ ಮಹೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳಿದ್ದಾನೆ. ರೈತ ಮಹೇಶ್ ತನ್ನ ಜಮೀನಿನಲ್ಲಿ ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳದಿದ್ದ. ಆದರೇ, ಬರಗಾಲ ಹಿನ್ನೆಲೆಯಲ್ಲಿ ಬೆಳೆ ಕೈಕೊಟ್ಟಿತ್ತು ಬ್ಯಾಂಕ್ ನಿಂದ ಹಾಗೂ ಖಾಸಗಿಯವರಿಂದ ಬೆಳೆಯನ್ನು ನಂಬಿ ನಾಲ್ಕು ಲಕ್ಷ ಸಾಲ ಮಾಡಿಕೊಂಡಿದ್ದ. ಮಳೆ ಕೈಕೊಟ್ಟ ಹಿನ್ನೆಲೆ ಸಾಲವನ್ನು ಮರಳಿ ತೀರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ಹಾಯ್​ ನಾನ್ನ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಎಮೋಷನಲ್​ ಕಥಾಹಂದರಕ್ಕೆ ಸಿನಿರಸಿಕರು ಮಾತ್ರವಲ್ಲ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಮನೆ ದೊರೆ ಶಿವಣ್ಣ ನಾನಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಹಾಯ್​ ನಾನ್ನ’ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನಾನಿ, ಚಿತ್ರ ಬಿಡುಗಡೆಗೂ ಮುನ್ನ ಶಿವಣ್ಣ ಅವರನ್ನು ಭೇಟಿಯಾಗಿದ್ದರು. ಈಗ ಮೈಸೂರಿಯಲ್ಲಿ ಶಿವರಾಜ್​ಕುಮಾರ್​ ಅವರು ‘ಹಾಯ್​ ನಾನ್ನ’ ಚಿತ್ರ ವೀಕ್ಷಿಸಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮಾಧ್ಯಮದರೊಂದಿಗೆ ಮಾತನಾಡಿದ ಶಿವಣ್ಣ , ತುಂಬ ಅದ್ಭುತ ಸಿನಿಮಾ. ಎಮೋಷನ್, ಸೆಂಟಿಮೆಂಟ್ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದರೆ ಬೇಗ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಬೇಗ ಕನೆಕ್ಟ್ ಆಯ್ತು. ಮ್ಯೂಸಿಕ್ ತುಂಬಾ ಚೆನ್ನಾಗಿದೆ. ನಾನಿ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲರ ಅಭಿಯನ ಅದ್ಭುತವಾಗಿದೆ. ನನಗೆ ಬಹಳ ಟಚ್ ಆಯ್ತು ಸಿನಿಮಾ. ಕೊನೆ ಹತ್ತು ನಿಮಿಷ ಕಣ್ಣಲ್ಲಿ ನೀರು ಬಂತು. ನಾನಿ ನಾನು ನಿಮ್ಮ…

Read More