Author: AIN Author

ತಿಂಡಿ ಪ್ರಿಯರು ಏನಾದರೂ ತಿನ್ನುತ್ತಲೆ ಇರುತ್ತಾರೆ. ಬರ್ಗರ್, ನಿಪ್ಪಟ್ಟು, ಬೇಲ್ ಪುರಿ, ಮಸಾಲ್ ಪುರಿ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜೊತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಸರಳವಾಗಿ ಮನೆಯಲ್ಲಿ ಕೇವಲ 10 ನಿಮಿಷಗಳಲ್ಲಿ ನಿಪ್ಪಟ್ಟು ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು: * ಕಡಲೆಕಾಯಿ- 1ಕಪ್ * ಎಳ್ಳು- ಅರ್ಧ ಕಪ್ * ಜೀರಿಗೆ- ಅರ್ಧ ಸ್ಪೂನ್ * ರುಚಿಗೆ ತಕ್ಕಷ್ಟು ಉಪ್ಪು * ಖಾರದ ಪುಡಿ- 2 ಟೀ ಸ್ಪೂನ್ * ಕಡಲೆ ಹಿಟ್ಟು- ಅರ್ಧ ಕಪ್ * ಕರಿಬೇವು- ಸ್ವಲ್ಪ * ಅಕ್ಕಿ ಹಿಟ್ಟು- ಅರ್ಧ ಕಪ್ * ಅಡುಗೆ ಎಣ್ಣೆ ಮಾಡುವ ವಿಧಾನ: * ಮೊದಲು ಒಂದು ಮಿಕ್ಸಿ ಜಾರಿಗೆ ಕಡಲೆಕಾಯಿ ಹಾಕಿ ಪುಡಿ ಮಾಡಿಕೊಳ್ಳಿ, * ಒಂದು ಬೌಲ್‍ಗೆ ಪುಡಿ ಮಾಡಿದ ಕಡಲೆಕಾಯಿ ಪುಡಿ, ಜೀರಿಗೆ, ಎಳ್ಳು, ಕಡಲೆ ಹಿಟ್ಟು, ಖಾರದ ಪುಡಿ, ಅಕ್ಕಿ ಹಿಟ್ಟು, ಉಪ್ಪು,…

Read More

ಬೆಂಗಳೂರು: ದಿವಂಗತ ನಟ ವಿಷ್ಣುವರ್ಧನ್ ಪತ್ನಿ ಹಾಗೂ ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆಯಂತೆ.ಭಾರತೀ ವಿಷ್ಣುವರ್ಧನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅಳಿಯ ಅನಿರುದ್ಧ್ ಮಾಹಿತಿ ನೀಡಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರು ಮಂಡಿ ನೋವಿನಿಂದ ಹಾಸಿಗೆ ಹಿಡಿದಿರುವ ಎಂದು ಅನಿರುದ್ದ್ ಮಾಹಿತಿ ನೀಡಿದ್ದಾರೆ. ಅಮ್ಮನ ಆರೋಗ್ಯ ಸರಿಯಿಲ್ಲ. ಅನಾರೋಗ್ಯ ಕಾಡುತ್ತಿದೆ ಎಂದಿದ್ದಾರೆ.

Read More

ಜೈಪುರ: ಛತ್ತೀಸ್‌ಗಢ, ಮಧ್ಯಪ್ರದೇಶದ ರೀತಿಯಲ್ಲಿ ರಾಜಸ್ಥಾನದಲ್ಲೂ (Rajasthan) ಬಿಜೆಪಿ (BJP) ಹೈಕಮಾಂಡ್ ಅಚ್ಚರಿಯ ನಿರ್ಧಾರ ಕೈಗೊಂಡಿದ್ದು, ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ (Bhajan Lal Sharma) ಅವರನ್ನು ಆಯ್ಕೆ ಮಾಡಿದೆ. https://twitter.com/ANI/status/1734530763218178188?ref_src=twsrc%5Etfw%7Ctwcamp%5Etweetembed%7Ctwterm%5E1734530763218178188%7Ctwgr%5Eb5e468a66ddd3888cf3b684abd3920b087f53f2e%7Ctwcon%5Es1_&ref_url=https%3A%2F%2Fpublictv.in%2Fbhajan-lal-sharma-as-chief-minister-of-rajasthan%2F ಇವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಾಗಿದ್ದು, ಈ ಮೂಲಕ ಬಿಜೆಪಿ ಹೈಕಮಾಂಡ್ ಮತ್ತೊಂದು ಅಚ್ಚರಿಯ ಆಯ್ಕೆ ಮಾಡಿದೆ. ಮುಂದಿನ ಲೋಕಸಭೆ ಚುನಾವಣೆಗಾಗಿ ಹೊಸ ಮುಖಗಳನ್ನು ಬಿಜೆಪಿ ಹೈಕಮಾಂಡ್ ಮಾಡಿದಂತಿದೆ. ಈ ಮೂಲಕ ಛತ್ತೀಸ್‌ಗಢ, ಮಧ್ಯಪ್ರದೇಶ ಇದೀಗ ರಾಜಸ್ಥಾನದಲ್ಲಿಯೂ ಹೊಸ ಮುಖಕ್ಕೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. https://ainlivenews.com/samantha-gave-a-bold-look-like-never-before-in-jeans-see-photos/ ಸಾಂಗನೇರ್ ಕ್ಷೇತ್ರದ ಶಾಸಕರಾಗಿರುವ ಭಜನ್ ಲಾಲ್ ಶರ್ಮಾ ಅಮಿತ್ ಶಾ ಆಪ್ತರಾಗಿದ್ದಾರೆ. ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಭಜನ್ ಲಾಲ್ ಶರ್ಮಾ ಬ್ರಾಹಣ ಸಮುದಾಯದವರಾಗಿದ್ದು, 48,000 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಪ್ರೇಮ್ ಚಂದ್ ಬೈರ್ವಾ ಹಾಗೂ ದಿಯಾ ಕುಮಾರಿ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

Read More

ಬೆಂಗಳೂರು: ಸಾಕು ನಾಯಿ ಬೊಗಳಿದ್ದಕ್ಕೆ ನಾಯಿಯ (Dog) ಮಾಲೀಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ದೇವನಹಳ್ಳಿಯ (Devanahalli) ದೊಡ್ಡಚೀಮನಹಳ್ಳಿಯಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾದ ವ್ಯಕ್ತಿಯನ್ನು ಮಧುಕುಮಾರ್ (34) ಎಂದು ಗುರುತಿಸಲಾಗಿದೆ. ಚಾಕು ಇರಿತದ ರಭಸಕ್ಕೆ ಚಾಕುವಿನ ತುದಿ ಮುರಿದು ದೇಹದೊಳಗೆ ಉಳಿದುಕೊಂಡಿದೆ. ಆತನನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮನ್ನು ನೋಡಿ ನಿಮ್ಮ ನಾಯಿ ಬೊಗಳುತ್ತಿದೆ ಅದಕ್ಕೆ ಬುದ್ದಿ ಹೇಳಲು ಆಗಲ್ವಾ? ಎಂದು ಅದೇ ಗ್ರಾಮದ ಸುನೀಲ್, ಅನೀಲ್, ದೇವರಾಜ್ ಹಾಗೂ ಅಜಯ್ ಎಂಬವರು ಮಧುಕುಮಾರ್ ಬಳಿ ಗಲಾಟೆ ಆರಂಭಿಸಿದ್ದಾರೆ. ಬಳಿಕ ಗಲಾಟೆ ತಾರಕಕ್ಕೇರಿ ನಾಲ್ವರು ಸೇರಿ ಚಾಕುವಿನಿಂದ ಇರಿದಿದ್ದಾರೆ. ಅಲ್ಲದೇ ಆತನ ಪತ್ನಿ ಮಮತಾ ಮೇಲೂ ಹಲ್ಲೆ ನಡೆಸಿದ್ದಾರೆ. ಕೃತ್ಯದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ (Police) ಠಾಣೆಯಲ್ಲಿ ಐಪಿಸಿ ಸೆಕ್ಷನ್ 307ರ ಅಡಿ ಕೊಲೆ ಯತ್ನ, 504, 506ರ ಅಡಿ ಸಾರ್ವಜನಿಕ ಸ್ಥಳದಲ್ಲಿ ನಿಂದನೆ, 354,…

Read More

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ (Customs Officers) ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನ ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಕೆಂಪೇಗೌಡ ಏರ್ ಪೋರ್ಟ್‍ಗೆ (Bengaluru Aiport) ಆಗಮಿಸಿದ್ದ ಪ್ರಯಾಣಿಕನನ್ನು ಚೆಕ್ಕಿಂಗ್ ಮಾಡಿದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ಆತನನ್ನು ತೀವ್ರ ತಪಾಸಣೆ ನಡೆಸಿದಾಗ ಪೇಸ್ಟ್ ರೂಪದಲ್ಲಿ ಚಿನ್ನವನ್ನ ಪ್ಯಾಂಟ್ ನ ಸೊಂಟದ ನಡುವೆ ಮರೆಮಾಚಿ ಸಾಗಾಟಕ್ಕೆ ಯತ್ನಿಸಿದ್ದು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

Read More

ಬೆಂಗಳೂರು: ಸೋಮವಾರ ರಾತ್ರಿ 11.30ರ ಸುಮಾರಿಗೆ ರಾಜಭವನಕ್ಕೆ ಬಾಂಬ್ ​ಬೆದರಿಕೆ ಕರೆಯೂ ಬಂದಿದ್ದು, ಪೊಲೀಸರು ತಕ್ಷಣ ರಾಜಭವನದಲ್ಲಿ ಪರಿಶೀಲನೆ ನಡೆಸಿದ್ದಾರೆ, ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಗೊತ್ತಾಗಿದೆ. ಬಾಂಬ್ ಬೆದರಿಕೆ ಕರೆಯ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಈ ಬಗ್ಗೆ ನಗರ  ಪೊಲೀಸ್ ಕಮೀಷನರ್  ದಯಾನಂದ್‌ ಸುದ್ದಿಗೋಷ್ಠಿ ನಡೆಸಿ  ನೆನ್ನೆ ರಾತ್ರಿ ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಫೋನ್ ಕರೆ ಬಂದಿತ್ತು. ನಮ್ಮ ಪೊಲೀಸರು ರಾಜಭವನದಲ್ಲಿ ಸಂಪೂರ್ಣವಾಗಿ ಪರಿಶೀಲನೆ ಮಾಡಿದ್ದಾರೆ.ಅಲ್ಲಿ ಆ ರೀತಿಯ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಕರೆಯಾಗಿದೆ ಎಂದಿದ್ದಾರೆ. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರೋ ವ್ಯಕ್ತಿಯ ಶೋಧ ನೆಡೆಯುತ್ತಿದೆ. ಆರೋಪಿಯನ್ನು ಆದಷ್ಟು ಬೇಗ ಅರೆಸ್ಟ್ ಮಾಡ್ತೀವಿ. ಎಂದು ನಗರ ಪೊಲೀಸ್ ಕಮೀಷನರ್ ಬಿ ದಯಾನಂದ್  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Read More

ಗದಗ: ಗದಗ ನಗರದ 31 ನೇ ವಾರ್ಡ ನಿವಾಸಿಗಳಿಂದ ಶೌಚಾಲಯಕ್ಕೆ ಆಗ್ರಹಿಸಿ ಬಕೆಟ್, ಚಂಬು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು. 1ನೇ ನಂಬರ್ ಶಾಲೆಯ ಹತ್ತಿರ ಇರುವ ಸಾರ್ವಜನಿಕ ಶೌಚಾಲಯ ದುರಸ್ಥಿಗೊಳಿಸುವಂತೆ ಆಗ್ರಹಿಸಿದ್ದಾರೆ. ವಾರ್ಡ ಮೇಂಬರ್ ಗೆ ಹೇಳಿದ್ರೂ ಕ್ಯಾರೆ ಅಂತಿಲ್ಲ, ಮಹಿಳೆಯರು ಮಕ್ಕಳಿಗೆ ತೊಂದರೆಯಾಗಿದೆ. ಕಲುಶಿತ ನೀರು ನಿಂತಿದ್ರಿಂದಾಗಿ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ.

Read More

ಬೆಂಗಳೂರು: ಹೊಸ‌ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅದಾಗಲೇ ಸಿಲಿಕಾನ್‌ ಸಿಟಿಯನ್ನು ನಶೆಯಲ್ಲಿ ತೇಲಿಸೋಕ್ಕೆ ಗ್ಯಾಂಗ್ ರೆಡಿಯಾಗಿತ್ತು. ಆದ್ರೆ ಪಕ್ಕಾ ಮಾಹಿತಿ ಕಲೆ ಹಾಕಿದ್ದ ಸಿಸಿಬಿ .ಹೊಸ ವರ್ಷಕ್ಕೆ ಡ್ರಗ್ಸ್ ಸರಬರಾಜಗೆ ಬ್ರೇಕ್ ಹಾಕಿದೆ. ಸಿಸಿಬಿ ಸಿಕ್ರೇಟ್ ಅಪರೇಷನ್ ಡಿಟೇಲ್ಸ್ ಇಲ್ಲಿದೆ ನೋಡಿ. ಪ್ರತಿವರ್ಷದಂತೆ ಈ ವರ್ಷವು ನಗರದಲ್ಲಿ ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರ ಮೇಲೆ ಸಿಸಿಬಿ ನಿಗಾ ಇಟ್ಟಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದ ತಂಡ ನಗರದಲ್ಲಿ ಹೊಸ ವರ್ಷಕ್ಕೆ ರೆಸ್ಟೋರೆಂಟ್ ‌ಹೊಟೇಲ್ ಪಾರ್ಟಿ, ರೇವಾ ಪಾರ್ಟಿಗಳಿಗೆ ಸರಬರಾಜು ಮಾಡೋದಿಕ್ಕೆ ಇಟ್ಟಿದ್ದ 21 ಕೋಟಿ ಮೌಲ್ಯದ ಎಮ್ ಡಿ ಎಮ್ ಎ ಕಿಸ್ಟ್ರಲ್, ಹಾಗು 500 ಗ್ರಾಂ ಕೋಕೇನ್ ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಫ್ರಿಕಾ ಪ್ರಜೆ ಲಿಯೋನಾರ್ಡ್ ಒಕ್ವಿಡಿಲಿ ಎಂಬಾತ ಡ್ರಗ್ಸ್ ಸ್ಟಾಕ್ ಮಾಡಿಟ್ಟಿಕೊಂಡಿದ್ದ. ಸಿಸಿಬಿ ದಾಳಿ ನಡೆಸಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಬ್ಯೂಸಿನೆಸ್ ವೀಸಾದಲ್ಲಿ ನಗರಕ್ಕೆ…

Read More

ಬೆಂಗಳೂರು: ಸೋಮವಾರ ರಾತ್ರಿ 11.30ರ ಸುಮಾರಿಗೆ ರಾಜಭವನಕ್ಕೆ ಬಾಂಬ್ ​ಬೆದರಿಕೆ ಕರೆಯೂ ಬಂದಿದ್ದು, ಪೊಲೀಸರು ತಕ್ಷಣ ರಾಜಭವನದಲ್ಲಿ ಪರಿಶೀಲನೆ ನಡೆಸಿದ್ದಾರೆ, ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಗೊತ್ತಾಗಿದೆ. ಬಾಂಬ್ ಬೆದರಿಕೆ ಕರೆಯ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಬಾಂಬ್​ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಸರಿಯಾಗಿ 12 ದಿವಸದ ಹಿಂದೆ ಡಿಸೆಂಬರ್​​ 1 ರಂದು ಬೆಂಗಳೂರಿನ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್​ ಬೆದರಿಕೆ ಕರೆ ಬಂದಿತ್ತು. ಇದು ಶಾಲಾ ಆಡಳಿತ ಮಂಡಳಿಗೆ ಶಾಕ್​ ನೀಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ತಂಡ ಎಲ್ಲ ಶಾಲೆಗಳನ್ನು ಪರಿಶೀಲಿಸಿದ್ದರು. ಆಗ ಇದೊಂದು ಹುಸಿ ಬಾಂಬ್​ ಬೆದರಿಕೆ ಕರೆ ಎಂದು ತಿಳಿಯಿತು. ಇನ್ನು ವಿಷಯ ಗೊತ್ತಾಗುತ್ತಿದ್ದಂತೆ ಶಾಲೆಗಳಿಗೆ ತೆರಳಿದ ಪೋಷಕರು ಮಕ್ಕಳನ್ನು ಮನೆಗಳಿಗೆ ಕರೆದುಕೊಂಡು ಬಂದಿದ್ದರು. ಅಂದು ಒಂದು ದಿನ ಶಾಲೆಗಳಿಗೆ ರಜೆ ನೀಡಲಾಗಿತ್ತು.

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕಾವೇರಿ ನೀರು ಕಳ್ಳರಿಗೆ ಮತ್ತೊಂದು  ಶಾಕ್ ಕಾದಿದ್ದು  ಅಕ್ರಮ ನೀರಿನ ಸಂಪರ್ಕ ಪಡೆದ  ಜನರ ಮೇಲೆ ಕಾನೂನು ಅಸ್ತ್ರ ಪ್ರಯೋಗಿಸಲು ಜಲಮಂಡಳಿ ರೆಡಿಯಾಗಿದೆ. ಇನ್ಮೇಲೆ ಅಕ್ರಮ ನೀರಿನ ಸಂಪರ್ಕ ಪಡೆದಿದ್ರೆ ದಂಡ ಅಲ್ಲಜೈಲು ಶಿಕ್ಷೆ ಕೂಡ ವಿಧಿಸಲಾಗುತ್ತೆ  ಬೆಂಗಳೂರಿನಲ್ಲಿ ಅನಧಿಕೃತ ಕಾವೇರಿ ನೀರಿನ ಸಂಪರ್ಕ ಶಿಕ್ಷಾರ್ಹ ಅಪರಾಧ ಆದ್ರೂ ಕಾವೇರಿ ನೀರು ಕಳ್ಳತನ ಮಾಡ್ತಿರೋ ಸಿಲಿಕಾನ್ ಸಿಟಿ ಜನ ಕೇಸ್‌ ಹಾಕ್ತೀವಿ ಅಂದ್ರೂ ಅನಧಿಕೃತ ಸಂಪರ್ಕ ಪಡೆದಯುತ್ತಿದ್ದಾರೆ  ಹೀಗಾಗಿ ಅನಧಿಕೃತ ಸಂಪರ್ಕ ಪಡೆದವರ ಮೇಲೆ ಕಾನೂನು ಕ್ರಮಕ್ಕೆ ಸನ್ನದ್ದ ಬೆಂಗಳೂರು ನಗರದಲ್ಲಿ ಸಾವಿರಾರು ಮಂದಿ ಅನಧಿಕೃತ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ ರಾಜಧಾನಿಯಲ್ಲಿ ಶೇ 35 ರಷ್ಟು ನೀರು ಲೆಕ್ಕಕ್ಕೆ ಸಿಗ್ತಿಲ್ಲಅನಧಿಕೃತ ಸಂಪರ್ಕಗಳನ್ನ ಪತ್ತೆಗೆ ವಿಶೇಷ ತಂಡ ರಚನೆ ಇದ್ರೂ ಕೇವಲ ದಂಡಕ್ಕೆ ಮಾತ್ರ ಸೀಮಿತ ಇಷ್ಟು ದಿನ ಜಲಮಂಡಳಿ ಇಂಜಿನಿಯರ್ಸ್ ದಂಡ ಹಾಕಿ ಸೈಲೆಂಟ್ ಆಗ್ತಿದ್ರು ಇದೀಗ ಅನಧಿಕೃತ ನೀರಿನ ಸಂಪರ್ಕ ಪಡೆದವರ ಮೇಲೆ ಎಫ್ ಐಆರ್…

Read More