Author: AIN Author

ಬೆಳಗಾವಿ:- ಬೆಂಗಳೂರಿನಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಕೊಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಪ್ರಶ್ನೋತ್ತರ ವೇಳೆ ರಾಜರಾಜೇಶ್ವರಿ ನಗರದ ಕ್ಷೇತ್ರದ ಶಾಸಕ ಮುನಿರತ್ನ ಅವರು, ತಮ್ಮ ಕ್ಷೇತ್ರದಲ್ಲಿ ವಾರ್ಡ್ ನಂ. 73 ರಲ್ಲಿ 2 ಎಕರೆಯ ಪಾರ್ಕ್ ಜಾಗ ಒತ್ತುವರಿಯಾಗಿದೆ. ಕೆಲವರು ಪಾರ್ಕ್‍ಗೆ ಬೋರ್ಡ್ ಹಾಕಿದ್ದು, ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ ಎಂದು ತಿಳಿಸಿದ್ದಾರೆ. ಪ್ರಮೋದ್ ಲೇಔಟ್‍ನಲ್ಲಿ 2 ಎಕರೆ ವಿಸ್ತೀರ್ಣದಲ್ಲಿರುವ ಮತ್ತೊಂದು ಪಾರ್ಕ್‍ನಲ್ಲಿದ್ದ ಸಲಕರಣೆಗಳನ್ನು ರಾತ್ರೋರಾತ್ರಿ ತೆರವು ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪ್ರಭಾವಿಗಳ ಹೆಸರನ್ನು ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಅವರು, ನಿಮಗಿಂತ ಪ್ರಭಾವಿಗಳಿದ್ದಾರೆಯೇ ಎಂದು ಮುನಿರತ್ನ ಅವರನ್ನು ಛೇಡಿಸುತ್ತಲೇ ಯಾರೇ ಸರ್ಕಾರಿ ಬಿಡಿಎ, ಬಿಬಿಎಂಪಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದರೂ ನಮ್ಮ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸುತ್ತದೆ. ಸರ್ಕಾರದ ಆಸ್ತಿ, ರಕ್ಷಣಾ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಒತ್ತುವರಿದಾರರ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮ ಜರುಗಿಸಲಾಗುವುದು. ಯಾರನ್ನೂ ರಕ್ಷಣೆ…

Read More

ಬೆಂಗಳೂರು:- ನಮ್ಮ ಯಾತ್ರಿ ಆಯಪ್‌ ಸರ್ವೀಸ್ ಸಂಸ್ಥೆ ಹಾಗೂ ಬೆಂಗಳೂರು ಆಟೋ ಚಾಲಕರ ಸಂಘದ ನಡುವೆ ಬಿರುಕು ಮೂಡಿದೆ. ಪರಿಣಾಮ ಆಟೋಚಾಲಕರ ಸಂಘ ನಮ್ಮ ಯಾತ್ರಿ ಆಯಪ್ ಪಾರ್ಟ್ನರ್‌ಶಿಪ್‌ನಿಂದ ಹೊರಬಂದಿದೆ. ARDU ಬೆಂಬಲಿತ ನಮ್ಮ ಯಾತ್ರಿ ಆಯಪ್‌ನಲ್ಲಿ ಪ್ರಯಾಣ ದರ ವಿಚಾರಕ್ಕೆ ಸಂಬಂಧಿಸಿದಂತೆ ARDU ಹಾಗೂ ಆಟೋ ಚಾಲಕರ ಸಂಘದ ಜೊತೆ ಒಮ್ಮತ ಮೂಡಿಲ್ಲ. ಇಷ್ಟೇ ಅಲ್ಲ ಈ ಹಿಂದೆ ARDU ತೆಗೆದುಕೊಂಡ ನಿರ್ಧಾರಕ್ಕೂ ಆಟೋಚಾಲಕರ ಸಂಘ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆಟೋ ಚಾಲಕರ ಸಂಘ, ನಮ್ಮ ಯಾತ್ರಿ ಸಂಬಂಧ ಮುರಿದುಕೊಂಡಿದೆ. ಮೆಟ್ರೋ ನಿಲ್ದಾಣದಿಂ 2 ಕಿಲೋಮೀಟರ್ ವ್ಯಾಪ್ತಿ ಪ್ರದೇಶಕ್ಕೆ 40 ರೂಪಾಯಿ ದರ ವಿಧಿಸುವಂತೆ ಆಟೋ ಚಾಲಕರು ಆಗ್ರಹಿಸಿದ್ದರು. ಆದರೆ ನಮ್ಮ ಯಾತ್ರಿ ಪೇಮೆಂಟ್ ಸೊಲ್ಯುಶನ್ ಪ್ರೊವೈಡರ್ ಈ ಪ್ರಸ್ತಾವನೆ ಒಪ್ಪಿಕೊಂಡಿಲ್ಲ. ಇದರಿಂದ ಮನಸ್ತಾಪ ಜೋರಾಗಿದೆ. ಯೂನಿಯನ್ ಹಾಗೂ ಆಟೋ ಚಾಲಕರ ಸಂಘದ ನಡುವಿನ ಮನಸ್ತಾಪದಿಂದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಮೊಬೈಲ್‌ ಆಯಪ್‌ ಆಧರಿತ…

Read More

ಬೆಂಗಳೂರು:- ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡಲು ಯೋಜನೆ ಅನುಷ್ಠಾನ ಮಾಡಿದೆ. ಮನೆ ಯಜಮಾನಿಯ ಹೆಸರು ಮತ್ತು ವಿಳಾಸ, ಆಧಾರ್‌ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ನಿಮ್ಮ ಮೊಬೈಲ್‌ ನಂಬರ್‌ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವು ವರ್ಗಾವಣೆ ಆಗುತ್ತಿದ್ದು, ಮೊದಲ ಹಂತದಲ್ಲಿ 15ಜಿಲ್ಲೆಗಳ ಫಲಾನುಭವಿಗಳು ಪಡೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು 5,96,268 ಫಲಾನುಭವಿಗಳ ಖಾತೆ ಆಧಾರ್ ಕಾರ್ಡ್​ಗೆ ಲಿಂಕ್ ಆಗಿಲ್ಲ. ಆದರೆ 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿದ್ದು, ಅವರಿಗೆ ಯೋಜನೆಯ ಹಣ ಜಮಾ ಆಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ. ಈ ಜಿಲ್ಲೆಗಳಲ್ಲಿ 4ನೇ ಕಂತಿನ ಹಣ ಸಂದಾಯವಾಗಿದೆ? 1 ಚಿತ್ರದುರ್ಗ 2 ಬೆಂಗಳೂರು 3 ಕೋಲಾರ 4 ಮಂಡ್ಯ 5 ಬೆಳಗಾವಿ 6. ಬಾಗಲಕೋಟೆ 7. ಧಾರವಾಡ 8. ಹಾಸನ…

Read More

ಬೆಂಗಳೂರು:- ಇನ್ಶೂರೆನ್ಸ್ ಪಾಲಿಸಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ದಂಪತಿಯನ್ನು ಅರೆಸ್ಟ್ ಮಾಡಲಾಗಿದೆ. ಉದಯ್.ಬಿ ಹಾಗೂ ತೀರ್ಥಾ ಗೌಡ ಬಂಧಿತ ದಂಪತಿ ಎಂದು ಗುರುತಿಸಲಾಗಿದ್ದು,ಈ ಹಿಂದೆ ಇನ್ಶೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳಿಬ್ಬರಿಗೂ ಅದರ ಜ್ಞಾನವಿತ್ತು. ಕೋವಿಡ್ ನಂತರ ಬರುತ್ತಿದ್ದ ಆದಾಯ ಇಬ್ಬರಿಗೂ ಸಾಕಾಗುತ್ತಿರಲಿಲ್ಲ. ಇದರಿಂದ ಅಡ್ಡದಾರಿ ಹಿಡಿದಿದ್ದ ದಂಪತಿಗಳು, ಇಂದಿರಾನಗರದಲ್ಲಿ ಶ್ರೀನಿಧಿ ಇನ್ಫೋಸೋರ್ಸ್ ಎಂಬ ಕಚೇರಿಯನ್ನು ಆರಂಭಿಸಿದ್ದರು. ಆ ಕಚೇರಿಯಲ್ಲಿ 4 ರಿಂದ 5 ಜನರು ಟೆಲಿ ಕಾಲರ್ ಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ಇನ್ಶೂರೆನ್ಸ್ ಲ್ಯಾಪ್ಸ್ ಆಗಿರುವ ಪಾಲಿಸಿದಾರರುಗಳಿಗೆ ಪಾಲಿಸಿ ಹಣ ಕಟ್ಟಿದಲ್ಲಿ ಇನ್ಶೂರೆನ್ಸ್ ಹಣವು ದೊರೆಯುವುದು ಅಥವಾ ಈಗಾಗಲೇ ಕಂತನ್ನು ಕಟ್ಟಿ ಬಿಟ್ಟಿರುವ ಹಣಕ್ಕೆ ಬಡ್ಡಿ ಸಮೇತ ಹಣವನ್ನು ವಾಪಸ್ ನೀಡಲಾಗುವುದು ಎಂದು ಹೇಳಿಸುವ ಕೆಲಸವನ್ನು ಮಾಡಿಸುತ್ತಿದ್ದರು. ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೆ 1 ಕೋಟಿ ರೂ. ಪಾಲಿಸಿ ಮಾಡಿಸಿದ್ದಲ್ಲಿ 5 ಕೋಟಿ ರೂ. ಹಣವು ಬರುತ್ತದೆ ಎಂದು ನಂಬಿಸಿ, ಅವರ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿಯೂ ಹೆಚ್ಚಿನ ಪಾಲಿಸಿಗಳನ್ನು…

Read More

ಬೆಂಗಳೂರು:- ಕುಮಾರಪಾರ್ಕ್ ವೆಸ್ಟ್ ನ ನಿವಾಸಿಯಾಗಿರುವ ವಿಪ್ಲವಿ ವಕೀಲೆಯಾಗಿ ಇಂಗ್ಲೆಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಮಾರಪಾರ್ಕ್ ಬಳಿ ಕಂಪನಿ ಹಾಗೂ ಮನೆ ಹೊಂದಿದ್ದರು. ಇಲ್ಲಿ ವಾಸವಾಗಿದ್ದಾಗ ಹಲವು ವರ್ಷಗಳಿಂದ ಮೂರು ಬೀದಿ ನಾಯಿ ಸಾಕಿದ್ದರು. ಬಳಿಕ ಪತಿ ಜೊತೆ ವಿಪ್ಲವಿ ಲಂಡನ್‌ಗೆ ಹೋಗಿ ನೆಲೆಸಿದ್ರು, ಅವರ ಅನುಪಸ್ಥಿತಿಯಲ್ಲಿ ಅವರ ಕಂಪನಿ ಅಕೌಂಟೆಂಟ್ ಆಗಿದ್ದ ಪ್ರಕಾಶ್‌ ಆ ಬೀದಿ ನಾಯಿಗಳನ್ನು ಪೋಷಿಸುತ್ತಿದ್ದರು. ನಾಯಿಗಳಿಗೆ ಪ್ರತಿನಿತ್ಯ ಮೂರು ಹೊತ್ತು ಆಹಾರ ಕೊಟ್ಟು ಆರೈಕೆ ಮಾಡುತ್ತಿದ್ದರು. ಅಕ್ಟೋಬರ್ 4ರಿಂದ 20ರ ಅವಧಿಯಲ್ಲಿ ಮೂರೂ ನಾಯಿಗಳು ಇದ್ದಕ್ಕಿದ್ದಂತೆ ಕಾಣೆಯಾಗಿವೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದೆ. ಪ್ರಕಾಶ್ ಎಷ್ಟೆ ಹುಡುಕಿದ್ರು ನಾಯಿ ಸಿಗದ ಕಾರಣ, ನವೆಂವರ್ 30ನೇ ತಾರೀಕು ವಿಪ್ಲವಿ ಸೀದಾ ಕೆಲಸಕ್ಕೆ ರಜೆ ಹಾಕಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಂಗಳೂರಿಗೆ ಬಂದು ನಿರಂತರವಾಗಿ ಬೀದಿನಾಯಿಗಳಿಗಾಗಿ ಇನ್ನೂ ಹುಡುಕಾಟ. ಈಗ ಇನ್ನೂ ಸುಳಿವು ಸಿಗದ ಹಿನ್ನೆಲೆ ಬಿಎಂಟಿಸಿಯಲ್ಲೂ ಫೋಸ್ಟರ್ ಹಾಕಿಸಿ, ಸುಳಿವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

Read More

ಬೆಂಗಳೂರು:- ಸಚಿವ ಪರಮೇಶ್ವರ್‌ ಮಾಧ್ಯಮಗಳೊಂದಿಗೆ ಮಾತನಾಡಿ, ಜಾತಿ ಗಣತಿ ಬಗ್ಗೆ ಊಹಾಪೋಹ ಬೇಡ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಜಾತಿ ಗಣತಿ ವರದಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳದೇ ಊಹಿಸಿಕೊಂಡು ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು. ಹಿಂದುಳಿದ ವರ್ಗದಲ್ಲಿ ನೂರಕ್ಕೂ ಅಧಿಕ ಜಾತಿಗಳಿವೆ. ಕೆಲವು ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮರ್ಪಕವಾಗಿ ಮೀಸಲಾತಿ ಲಬಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದ್ದರು. ಆಯೋಗ ನೀಡಿರುವ ವರದಿಯಲ್ಲಿ ಏನಿದೆ ಎಂದು ಊಹಿಸಿಕೊಂಡು ವ್ಯಾಖ್ಯಾನ ಮಾಡುತ್ತಿರುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ನಾಳೆ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಮಲೆನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ, ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಶನಿವಾರದಿಂದಲೂ ರಾತ್ರಿ ವೇಳೆ ಧಾರಾಕಾರ ಮಳೆಯಾಗಿದ್ದು, ಕೃಷಿಕರು ತೊಂದರೆಗೆ ಒಳಗಾಗಿದ್ದಾರೆ. ಕಾಫಿ ಕೊಯ್ಲು, ಭತ್ತ ಹಾಗೂ ರಾಗಿ ಪೈರಿನ ಕಟಾವಿಗೂ ಸಮಸ್ಯೆಯಾಗಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಮಳೆಯಲ್ಲಿ ತೊಯ್ದು ಹೋಗಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

Read More

ಬೆಳಗಾವಿ:- ಬಿಜೆಪಿ ಮತ್ತು ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ವಿಪಕ್ಷ ನಾಯಕರು ಇನ್ನೂ ಭ್ರಮಾಲೋಕದಲ್ಲೇ ಇದ್ದಾರೆ. ಅದರಿಂದ ಅವರು ಹೊರಬರುವುದೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶೀಘ್ರದಲ್ಲೇ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಹೇಳುತ್ತಲೇ ಇರುವ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಇನ್ನೂ ಭ್ರಮಾಲೋಕದಲ್ಲೇ ಇದ್ದಾರೆ. ಅದರಿಂದ ಅವರು ಹೊರಬರುವುದೂ ಇಲ್ಲ ಎಂದರು. ನಮ್ಮ ಸರ್ಕಾರ ಸುಭದ್ರವಾಗಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್‌ ನೀರಿನಿಂದ ತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದು ಭ್ರಮಾಲೋಕದಲ್ಲಿದ್ದಾರೆ. ಅಧಿವೇಶನದಲ್ಲಿ ವಿಪಕ್ಷಗಳು ಯಾವುದೇ ವಿಚಾರ ಎತ್ತಿದರೂ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ. ಅನಗತ್ಯವಾಗಿ ವಿಳಂಬ ಅಥವಾ ಕಾಲಹರಣ ಮಾಡುವುದಿಲ್ಲ. ಬರಗಾಲದ ಚರ್ಚೆ ಮೇಲೆ ಸರ್ಕಾರ ಸೂಕ್ತ ಉತ್ತರ ಕೊಡಲಿದೆ. ಬಿಜೆಪಿ ನಾಯಕರ ಮಧ್ಯೆ ಸಮನ್ವಯದ ಕೊರತೆಯಿಂದ ಕಲಾಪದ ಸಮಯ ವ್ಯರ್ಥವಾಗುತ್ತಿದೆ. ಬಿಜೆಪಿಯೊಳಗೆ ಎಂದಿಗೂ ಸಮನ್ವಯ ಇಲ್ಲ. ಅವರು ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದರು. ನಂತರ ಜನರು ಅವರನ್ನು ತಿರಸ್ಕರಿಸಿದ್ದಾರೆ. ಅವರಲ್ಲಿ ಸಮನ್ವಯ…

Read More

ಬೆಳಗಾವಿ: ಶೇಕ್ ಅಬ್ದುಲ್ಲಾ ಖುಷಿಪಡಿಸಲು ನೆಹರೂ ಅವರು ಆರ್ಟಿಕಲ್ 370 ಜಾರಿಗೆ ತಂದಿದ್ದರು. ಆದರೆ ಮೋದಿ (Narendra Modi) ಅವರು ಧೈರ್ಯದಿಂದ ಆರ್ಟಿಕಲ್ 370 (Article 370) ರದ್ದು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ (BasanaGouda Patil Yatnal) ಹೇಳಿದ್ದಾರೆ. ಬೆಳಗಾವಿ ಸುವರ್ಣ ಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ (Pakistan) ಏಜೆಂಟ್ ನಂತೆ ವರ್ತಿಸುತ್ತಿದ್ದ ಲೋಕಸಭೆ ಸದಸ್ಯನೊಬ್ಬ 370 ರದ್ದು ಪ್ರಶ್ನಿಸಿ ಸುಪ್ರಿಂಕೋರ್ಟಿಗೆ ಹೋಗಿದ್ದ. ಸುಪ್ರಿಂಕೋರ್ಟ್ (Supreme Court) ಮೋದಿ ಸರ್ಕಾರ ರದ್ದು ಮಾಡಿದ್ದನ್ನ ಮಾನ್ಯ ಮಾಡಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಕನಸು-ನನಸು ಮಾಡಿದ್ದಕ್ಕೆ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ಜನ ಸಂಘ ಹುಟ್ಟಿದ್ದು ಆರ್ಟಿಕಲ್ 370 ತೆಗೆದುಹಾಕಬೇಕೆಂದು. ಯಾಕೆಂದರೆ ಒಂದು ದೇಶದಲ್ಲಿ ಎರಡು ಧ್ವಜ ಎರಡು ಸಂವಿಧಾನ ಇರಬಾರದು ಎಂದು ಹೇಳಿದರು. https://ainlivenews.com/i-welcome-the-judgment-of-honble-supreme-court-amit-shah/ ಇದೇ ವೇಳೆ ಮುಸ್ಲಿಂ ಸ್ಪೀಕರ್ ಕುರಿತು ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಹೇಳಿಕೆ ಸಂವಿಧಾನಕ್ಕೆ ಮಾಡಿದ ಅವಮಾನ. ಸ್ಪೀಕರ್ ಅವರು ಪೀಠಕ್ಕೆ…

Read More

ಚಿಕ್ಕಮಗಳೂರು :- ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಬಿಜೆಪಿ ಪಕ್ಷದ ಮುಖಂಡರು ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಿಲ್ಲುವಂತೆ ಆಗ್ರಹಿಸಿದ್ದಾರೆ. ಸೋಮವಾರ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು. ಮುಖಂಡರು ಸಿ.ಟಿ.ರವಿ ಸಮ್ಮುಖದಲ್ಲೇ ಅವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಜಿಲ್ಲೆಯ 5 ಕ್ಷೇತ್ರಗಳಲ್ಲಿ ಸೋತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇದೇ ಫಲಿತಾಂಶ ಬಂದರೆ ಪಕ್ಷಕ್ಕೆ ತುಂಬಾ ಹಾನಿಯಾಗಲಿದೆ. ಅಂಥ ಪರಿಸ್ಥಿತಿ ಬರಬಾರದು, ಪಕ್ಷ ಇನ್ನಷ್ಟು ಸಂಘಟನಾತ್ಮಕವಾಗಿ ಬೆಳೆಯಬೇಕಾದರೆ ತಾವೇ ಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಿ.ಟಿ.ರವಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಕೋರಿ ಪಕ್ಷದ ವರಿಷ್ಠರಿಗೆ ಆಗ್ರಹಿಸಲು ಜಿಲ್ಲೆಯಿಂದ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದ ಮುಖಂಡರು, ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ, ನೀವು ಇಲ್ಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ…

Read More