Author: AIN Author

ಬೆಳಗಾವಿ:- ಬಾಯಿ ಸರಿ ಇದ್ದಿದ್ದರೆ ನಾನು ಸಿಎಂ ಆಗ್ತಿದ್ನಂತೆ ಎಂದು ಯತ್ನಾಳ್ ಹೇಳಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿರುವ ಯತ್ನಾಳ್‌ ಎಚ್‌.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ವಿಜಯಪುರಕ್ಕೆ 105 ಕೋಟಿ ರೂ. ನೀಡಿದ್ದರು. ದುರ್ದೈವ ಅಂದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು ರದ್ದು ಮಾಡಿತ್ತು. ಯತ್ನಾಳ್‌ ಅವರೇ ನಿಮ್ಮ ಬಾಯಿ ಸರಿ ಇದ್ದಿದ್ದರೆ ಸಿಎಂ ಆಗುವ ಯೋಗ್ಯತೆ ಇತ್ತು ಅಂತಾ ಕೆಲವರು ಹೇಳಿದ್ದರು. ನಾನ್ಯಾರಿಗೂ ಹೆದರುವುದಿಲ್ಲ ಹೇಲಬೇಕಾದ್ದನ್ನು ನೇರವಾಗಿ ಹೇಳ್ತೇನೆ ಎಂದಿದ್ದಾರೆ. ಪಿಎಸಿಗೆ ಸಿಸಿ ಪಾಟೀಲ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಮಾಧಾನ ಮಾಡಲು ಯತ್ನಿಸುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು ಸಮಾಧಾನ ಮಾಡಲು ಹೊರಟಿದ್ದಾರೆ. ಇದಕ್ಕೆ ಮೇಲಿಂದ ಅನುಮತಿ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಬೊಮ್ಮಾಯಿ, ಭೈರತಿ ಬಸವರಾಜ್‌ ಅನುದಾನ ನೀಡಿ ನೆರವಾದರು ಅಧಿಕಾರದಲ್ಲಿದ್ದಾಗ ಸಹಾಯ ಮಾಡದವರು ಈಗ ಮಾಜಿಗಳಾಗಿದ್ದಾರೆ. ನಾನು ಟಾರ್ಗೆಟ್‌ ಮಾಡಿದರೆ ಅವರು ಮಾಜಿಯಾಗುವವರೆಗೂ ಬಿಡಲ್ಲ ನಾನು ಒಂಟಿ ಸಲಗ ಇದ್ದೇನೆ. ಒಂಟಿ ಸಲಗ ಆಗಿಯೇ ಹೊಡೆಯುತ್ತೇನೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

Read More

ಬಹುನಿರೀಕ್ಷಿತ ಸಲಾರ್ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ (Censor) ಮಂಡಳಿಯ ಪ್ರಮಾಣ ಪತ್ರವನ್ನು ನೀಡಿದೆ. ತೀವ್ರಗತಿಯ ಸಾಹಸ ಸನ್ನಿವೇಶಗಳು ಇರುವ ಕಾರಣದಿಂದಾಗಿ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಭಾರತದಲ್ಲಿನ ಪ್ರದರ್ಶನಕ್ಕಾಗಿ ‘ಎ’ ಮತ್ತು ಹೊರ ದೇಶದಲ್ಲಿನ ಪ್ರದರ್ಶನಕ್ಕಾಗಿ ಯು/ಎ ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 55 ನಿಮಿಷ ಎಂದು ಹೇಳಲಾಗುತ್ತಿದೆ. ನಾನಾ ಕಾರಣಗಳಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ. ಡಾರ್ಲಿಂಗ್ ಪ್ರಭಾಸ್ (Prabhas) ನಾಯಕತ್ವದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊನ್ನೆಯಷ್ಟೇ ‘ಸಲಾರ್’ (Salaar) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಫ್ರೆಂಡ್‌ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಟ್ರೈಲರ್ ನೋಡಿದಾಗಲೇ ಚಿತ್ರಕ್ಕೆ ಯಾವ ಪ್ರಮಾಣ ಪತ್ರ ಸಿಗಬಹುದು ಎಂದು ಅಂದಾಜಿಸಲಾಗಿತ್ತು ಹೊಂಬಾಳೆ ಸಂಸ್ಥೆ ನಿರ್ಮಾಣದ ಸಲಾರ್…

Read More

ಮಂಗಳೂರು: ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈಗ ಕಾಂಗ್ರೆಸಿಗರು ಬಿಜೆಪಿ ಗೆದ್ದಲ್ಲಿ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ, ನಿಷ್ಪಕ್ಷಪಾತ ಚುನಾವಣೆಗೆ ಎಸಗುವ ಅಪಚಾರವಾಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದರು. ಇಂತಹ ಅಪನಂಬಿಕೆ ಮೂಡಿಸುವವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿ, ಮುಂದೆ ಚುನಾವಣೆಗೆ ಸ್ಪರ್ಧಿಸದಂತೆ ನಿಬಂಧನೆ ವಿಧಿಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು. https://ainlivenews.com/i-welcome-the-judgment-of-honble-supreme-court-amit-shah/ ಮೂರು ರಾಜ್ಯಗಳ ಚುನಾವಣಾ ಜನಾದೇಶ ಬಿಜೆಪಿಗೆ ಸೆಮಿ ಫೈನಲ್‌ ಗೆಲವು ಮಾತ್ರವಲ್ಲ, ಫೈನಲ್‌ ಗೆಲವು ಕೂಡ ನಮ್ಮದೇ ಎಂದರು.  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಡಿಎನ್‌ಎ ಸಂಘ ಪರಿವಾರದ್ದೇ ಹೊರತು ಕಾಂಗ್ರೆಸ್ ನದ್ದಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರ ಚಿಕ್ಕಪ್ಪ ಜನ ಸಂಘ ದಿಂದ ಗೆದ್ದಿದ್ದರು. ಶೆಟ್ಟರ್ ಸಹ ಬಿಜೆಪಿಯಿಂದಲೇ ಗೆದ್ದು ಅಧಿಕಾರ ಅನುಭವಿಸಿದವರು. ಈಗ ಕಾಂಗ್ರೆಸ್ ಸೇರಿಕೊಂಡು ಏನೇನೋ ಮಾತನಾಡುತ್ತಿದ್ದಾರೆ ಎಂದು ದೂರಿದರು. 

Read More

ನವದೆಹಲಿ: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ಇನ್ನೊಂದು ತಿಂಗಳಷ್ಟೇ ಬಾಕಿಯಿದೆ. ಈ ಐತಿಹಾಸಿಕ ದಿನಕ್ಕಾಗಿ ಕೇವಲ ಭಾರತವಷ್ಟೇ ಅಲ್ಲ ವಿದೇಶಗಳೂ ಕಾತುರದಿಂದ ಕಾಯುತ್ತಿದೆ. ಇದೀಗ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್ (Thailand) ವಿಶೇಷ ಮಣ್ಣನ್ನು (Soil) ಕಳುಹಿಸುತ್ತಿದೆ. ಹೌದು, ಅಯೋಧ್ಯೆಯಿಂದ 3,500 ಕಿ.ಮೀ ದೂರದಲ್ಲಿರುವ ಥೈಲ್ಯಾಂಡ್‌ನ ಅಯುತಾಯ (Ayutthaya) ನಗರದಿಂದ ವಿಶೇಷ ಮಣ್ಣನ್ನು ತರಲಾಗುತ್ತಿದೆ. 2024ರ ಜನವರಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮ ಮಂದಿರಕ್ಕೆ ಥೈಲ್ಯಾಂಡ್ ಮಣ್ಣನ್ನು ಕಳುಹಿಸುತ್ತಿದೆ. ಭಾರತ-ಥೈಲ್ಯಾಂಡ್ ಸಂಬಂಧ: ಥೈಲ್ಯಾಂಡ್‌ನ ಸಿಯಾಮ್ ಸಾಮ್ರಾಜ್ಯದಲ್ಲಿರುವ ಅಯುತಾಯಾವನ್ನು 13ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಸಿಯಾಮ್ ಸಾಮ್ರಾಜ್ಯದ ರಾಜಧಾನಿ ಮತ್ತು ಆರ್ಥಿಕ ಕೇಂದ್ರವೂ ಆಗಿತ್ತು. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್‌ನಿಂದ ಈ ರೀತಿ ಕಳುಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್‌ನಿಂದ ವಿಶೇಷ ನೀರನ್ನು ಕಳುಹಿಸಲಾಗಿತ್ತು. ಈ ಕ್ರಿಯೆಯು ಥೈಲ್ಯಾಂಡ್ ಮತ್ತು ಭಾರತದ ನಡುವಿನ ಅನನ್ಯ ಸಾಂಸ್ಕೃತಿಕ ಸಂಬಂಧಗಳಿಂದ ಹುಟ್ಟಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಆಳವಾಗಲಿದೆ. ವಿಶ್ವ…

Read More

ಪತಿ-ಪತ್ನಿ ಕೆಲ ಕೆಲಸಗಳನ್ನು ಮಾಡುವಾಗ, ಅವರ ಮಧ್ಯ ಹೋಗಬಾರದಂತೆ. ಹಾಗಾದ್ರೆ ಯಾವಾಗ ಅಧಿಕಪ್ರಸಂಗತನ ಮಾಡಬಾರದು ಅಂತಾ ತಿಳಿಯೋಣ ಬನ್ನಿ. ಪತಿ-ಪತ್ನಿ ಜಗಳ ಮಾಡುವಾಗ ಮೂರನೇಯವರು ಹೋಗಬಾರದು. ಪತಿ- ಪತ್ನಿ ಜಗಳವಾಡುವಾಗ, ಮೂರನೇಯವರು ಮಧ್ಯ ಹೋಗಬಾರದು. ಪತಿ-ಪತ್ನಿ ಜಗಳವಾಡಿ, ಒಂದಾಗಬಹುದು. ಮಧ್ಯ ಜಗಳ ಬಿಡಿಸಲು ಹೋದವರು, ಕೆಟ್ಟವರಾಗಬಹುದು. ಅಥವಾ ನೀವು ಒಳ್ಳೆಯದನ್ನೇ ಬಯಸಿ, ಜಗಳ ನಿಲ್ಲಿಸಲು ಹೋಗಿರಬಹುದು. ಆದರೆ ನಿಮ್ಮ ಮಾತಿನಿಂದ, ಅವರ ಜಗಳ ಇನ್ನೂ ಹೆಚ್ಚಾಗಬಹುದು. ಆಗಲೂ ನೀವೇ ಕೆಟ್ಟವರಾಗುತ್ತೀರಿ. ಹಾಗಾಗಿ ಪತಿ-ಪತ್ನಿ ಮಧ್ಯೆ ಜಗಳವಾಗುವಾಗ, ಮಧ್ಯೆ ಹೋಗಬೇಡಿ. ಪತಿ-ಪತ್ನಿ ಅನ್ಯೋನ್ಯವಾಗಿ ಮಾತನಾಡುತ್ತ, ಕಾಲ ಕಳೆಯುವಾಗ ಮೂರನೇಯವರು ಹೋಗಬಾರದು. ಪತಿ-ಪತ್ನಿ ಮಾತನಾಡುತ್ತಾ, ಪರಸ್ಪರ ಸಮಯ ಕಳೆಯುತ್ತಿದ್ದರೆ, ಮಧ್ಯದಲ್ಲಿ ಹೋಗಿ, ಅವರನ್ನು ಮಾತಾಡಿಸಿ, ಅವರ ಸಮಯವನ್ನು ಹಾಳು ಮಾಡಬಾರದು. ಇದು ಬುದ್ಧಿವಂತರ ಲಕ್ಷಣವಲ್ಲ. ಪತಿ-ಪತ್ನಿ ಸೇರಿ ಯಾವುದಾದರೂ ಕೆಲಸ ಮಾಡುವಾಗ ಮೂರನೇಯವರು ಹೋಗಬಾರದು. ಪತಿ ಪತ್ನಿ ಸೇರಿ ನಗು ನಗುತ್ತಾ ಅಡುಗೆ ಕೆಲಸ, ಸ್ವಚ್ಛತೆಯ ಕೆಲಸ, ಅಥವಾ ಬೇರೆ ಇನ್ಯಾವುದೇ ಕೆಲಸ ಮಾಡುವಾಗ,…

Read More

 ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಭಿಮಾನಿಗಳಿಗೆ ಸಂತಸದ ಸುದ್ದಿ. ರಸ್ತೆ ಅಪಘಾತದಿಂದ ಸುಮಾರು ಒಂದು ವರ್ಷದಿಂದ ಕ್ರಿಕೆಟ್‌ನಿಂದ ದೂರ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತೆ ಮೈದಾನಕ್ಕೆ ಮರಳಲಿದ್ದಾರೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪಂತ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಅವರು ಪೂರ್ಣ ಪ್ರಮಾಣದಲ್ಲಿ ಆಡಲು ಸಾಧ್ಯವಾಗದಿದ್ದರೂ ಕನಿಷ್ಠ ಪ್ರಮುಖ ಆಟಗಾರನಾಗಿ ಕಣಕ್ಕೆ ಇಳಿಯುವ ಲಕ್ಷಣಗಳು ಎದ್ದು ಕಾಣುತ್ತಿದೆ. 2024ರ ಐಪಿಎಲ್‌ ಆರಂಭದ ವೇಳೆಗೆ ರಿಷಬ್ ಪಂತ್ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಅವರು ಬ್ಯಾಟಿಂಗ್ ಮಾತ್ರ ಮಾಡಬಲ್ಲರು ಎಂದು ವರದಿಯಾಗಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವಿಕೆಟ್ ಕೀಪ್ ಮಾಡದಿದ್ದರೂ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆಯಂತೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮಾಲೀಕರು ಈಗಾಗಲೇ ತಂಡದ ಕೋಚ್ ರಿಕಿ ಪಾಂಟಿಂಗ್ ಮತ್ತು ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ ಪಂತ್ ರೀ ಎಂಟ್ರಿ ಬಗ್ಗೆ ಸಾಮಾಜಿಕ…

Read More

ಇಬ್ಬನಿ, ಚಳಿ ಹೀರಿ ಬೆಳೆಯುವ ಹಿಂಗಾರು ಬೆಳೆಗಳು ಈ ಬಾರಿ ಎರಡೂ ಇಲ್ಲದೆ ಪರಿತಪಿಸುತ್ತಿವೆ. ನವೆಂಬರ್ ತಿಂಗಳು ಮುಗಿಯುತ್ತಿದ್ದರೂ ಇಬ್ಬನಿಯೂ ಇಲ್ಲ, ಚಳಿಯೂ ಇಲ್ಲ, ಹಾಗಾಗಿ ಕಡಲೆ ಸೇರಿ ಇನ್ನಿತರೆ ಹಿಂಗಾರು ಬೆಳೆಗಳಿಗೆ ರೋಗ ನಿರೋಧಕ ಶಕ್ತಿಯಿಲ್ಲದೆ ರೋಗಗಳು ಬಾಧಿಸುವ ಆತಂಕ ರೈತರಿಗೆ ಶುರುವಾಗಿದೆ. ವ್ಯವಸಾಯ ಪ್ರಕೃತಿಯೊಟ್ಟಿಗಿನ ಜೈವಿಕ ಕ್ರಿಯೆ ಎಂಬುದು ಇದಕ್ಕೆ ಸಾಕ್ಷಿ. ಹಿಂಗಾರಲ್ಲಿ ಚಳಿಗಾಲದ ಬೆಳೆಗಳನ್ನು ಬೆಳೆಯುವ ವಾಡಿಕೆಯಿದೆ. ಮಧ್ಯ ಕರ್ನಾಟಕದ ದಾವಣಗೆರೆ ಸೇರಿ ನೆರೆಹೊರೆಯ ಜಿಲ್ಲೆಗಳಲ್ಲಿ ಕಡಲೆ, ಅಲಸಂದೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ, ಹಾವೇರಿ, ಧಾರವಾಡ ಭಾಗದಲ್ಲಿ ಹಿಂಗಾರು ಜೋಳ ಮತ್ತು ಕುಸುಬೆ ಬೆಳೆಯಿದೆ. ಈ ಬೆಳೆಗಳಿಗೆ ಹೆಚ್ಚಿನ ಮಳೆಯ ಅಗತ್ಯವಿಲ್ಲ, ಬದಲಿಗೆ ಇವು ಇಬ್ಬನಿ ಹೀರಿ ಕಪ್ಪು ಭೂಮಿಯಲ್ಲಿ ಬೆಳೆಯುವ ಬೆಳೆಗಳು. ಆದರೀಗ ಇಬ್ಬನಿಯೇ ಇಲ್ಲದೆ ಈ ಬೆಳೆಗಳಿಗೆ ಸಮಸ್ಯೆ ಆಗಿದೆ. ಮಧ್ಯ ಕರ್ನಾಟಕದಲ್ಲಿ ಹೆಚ್ಚು ಕಡಲೆ ಬೆಳೆಯಲಾಗುತ್ತದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಕೆಳ ಭಾಗದಲ್ಲಿಈ ಬಾರಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ…

Read More

ಚಳಿಗಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದ್ದು, ಒಂದೆಲ್ಲಾ ಒಂದು ಸಮಸ್ಸೆಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ. ನಮ್ಮ ಆರೋಗ್ಯ ನಮ್ಮಗೆ ಎಷ್ಟೂ ಮುಖ್ಯನಾ ಆಗಿಯೇ ನಮ್ಮ ಹಲ್ಲು ಹಾಗೂ ವಸಡುಗಳ ಕಾಳಜಿಯೂ ಕೂಡ ಮುಖ್ಯ ಹಾಗಿದ್ರೆ ನಾವು ಹಲ್ಲುಗಳ ಆರೈಕೆಗೆ ಕೆಲವೊಂದು ಟಿಪ್ಸ್​ ಫಾಲೋ ಮಾಡಲೇಬೇಕು. ನಮ್ಮ ಆರೋಗ್ಯದಲ್ಲಿ ಉತ್ತಮವಾಗಿರಬೇಕೆಂದರೆ ಬಾಯಿಯ ಆರೋಗ್ಯ ಅತ್ಯಂತ ಮುಖ್ಯವಾಗುತ್ತದೆ. ಆದರೆ, ಸಾಕಷ್ಟು ಜನರು ಬಾಯಿಯ ಆರೋಗ್ಯವನ್ನು ಲಘುವಾಗಿ ಪರಿಗಣಿಸುವುದುಂಟು. ಆದರೆ, ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುಬೇಕು. ಬಾಯಿಯ ಕುಹರದ ಬದಲಾವಣೆಗಳನ್ನು ಆಗಾಗ್ಗೆ ಪರಿಶೀಲಿಸಿ ಮೌತ್‌ವಾಶ್‌ಗಳ ಆಯ್ಕೆಯಲ್ಲಿ ಎಚ್ಚರವಹಿಸಿ ದೇಹದಲ್ಲಿ ಕಂಡು ಬರುವ ಬದಲಾವಣೆಗಳು,ಲಕ್ಷಣಗಳ ಮೇಲೆ ಇರಲಿ ಕಾಳಜಿ ವಿಟಮಿನ್ ಡಿ ಮಟ್ಟವನ್ನು ಗಮನಿಸಿ. ಉಗುರು ಕಚ್ಚುವುದನ್ನು ಮೊದಲು ನಿಲ್ಲಿಸಿ. ಟೂತ್‌ಪಿಕ್ ಬಳಕೆ ತಪ್ಪಿಸಿ ಹಲ್ಲುಗಳನ್ನು ಹೆಚ್ಚು ಉಜ್ಜಿದಷ್ಟು ಹಾಳಾಗುವುದೂ ಹೆಚ್ಚು ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಗಳನ್ನು ಬದಲಿಸಿ.…

Read More

ಬೆಳಗಾವಿ:- ಭ್ರೂಣ ಹತ್ಯೆ ತಡೆಗೆ ಕಾರ್ಯ ಪಡೆ ರಚನೆ ಮಾಡಲಾಗುತ್ತಿದ್ದು, 3 ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್ ತಪಾಸಣೆ ಮಾಡಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ಸಚಿವರು ಸದನಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ 6,395 ಸ್ಕ್ಯಾನಿಂಗ್​ ಸೆಂಟರ್ ನೋಂದಣಿಯಾಗಿದ್ದು, ಅದರಲ್ಲಿ 6068 ಖಾಸಗಿ, 327 ಸರ್ಕಾರಿ ಸ್ಕ್ಯಾನಿಂಗ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ. ಬಾಲಿಕಾ ಸಾಫ್ಟ್್ಟೇರ್ ಮೂಲಕ ನೋಂದಣಿ ಕಡ್ಡಾಯಗೊಳಿಸಲಾಗುತ್ತಿದೆ. ಪಿಸಿ ಮತ್ತು ಪಿಎನ್​ಡಿಟಿ ಕಾಯ್ದೆ ಅಡಿ ಎಲ್ಲ ಶಾಸನಬದ್ಧ ಸಮಿತಿಗಳು ರಾಜ್ಯ, ಜಿಲ್ಲಾ ಮಟ್ಟದಲ್ಲಿ ರಚನೆಗೊಂಡಿವೆ. ಈ ಸಮಿತಿಗಳು ಪ್ರತಿ 3 ತಿಂಗಳಿಗೊಮ್ಮೆ ಸ್ಕಾಯನಿಂಗ್ ಸೆಂಟರ್ ತಪಾಸಣೆ ನಡೆಸಲಿವೆ. ಇಲ್ಲಿಯವರೆಗೆ 4,408 ಸ್ಕಾಯನಿಂಗ್ ಸೆಂಟರ್​ಗಳನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿರುವುದು ಬೆಳಕಿಗೆ ಬಂದಿದು, 100 ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, 24 ಪ್ರಕರಣಗಳನ್ನು ದಂಡ ವಿಧಿಸಿ ಖುಲಾಸೆಗೊಳಿಸಲಾಗಿದೆ ಎಂದರು. 50ಸಾವಿರ ರೂ. ಬಹುಮಾನ: ರಾಜ್ಯದ ಯಾವುದೇ ಭಾಗದಲ್ಲಿ ಭ್ರೂಣ ಪತ್ತೆ…

Read More

ಬೆಂಗಳೂರು:- ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದ ನಗರದಲ್ಲಿ ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅತ್ಯಂತ ಅನುಕೂಲವಾಗಿ ಪರಿಸರ ಸೃಷ್ಟಿಯಾಗಿದೆ. ಹೀಗಾಗಿ, ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ನವೆಂಬರ್‌ 1ರಿಂದ ಡಿಸೆಂಬರ್‌ 8ರವರೆಗೆ ನಗರದಲ್ಲಿ ಒಟ್ಟು 7,642 ಮಂದಿಯಲ್ಲಿ ಡೆಂಘೀ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 1,468 ಮಂದಿಯಲ್ಲಿ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. ಆರ್‌ಆರ್‌ನಗರ ವಲಯ, ಪಶ್ಚಿಮ ವಲಯ, ದಕ್ಷಿಣ ವಲಯ ಹಾಗೂ ಪೂರ್ವ ವಲಯದ ವ್ಯಾಪ್ತಿಯಲ್ಲಿ ಡೆಂಘೀ ಪ್ರರಕಣಗಳ ಪಾಸಿಟಿವಿಟಿ ದರ ಹೆಚ್ಚಾಗಿದೆ. ಇನ್ನು ನಗರದ ದಕ್ಷಿಣ ವಲಯದ ಕೋರಮಂಗಲ ವಾರ್ಡ್‌ನಲ್ಲಿ ಅತಿ ಹೆಚ್ಚು 41 ಡೆಂಘೀ ಪ್ರಕರಣಗಳಿವೆ. ಉಳಿದಂತೆ ಬಿಬಿಎಂಪಿಯ ವಲಯವಾರು ಅತಿ ಹೆಚ್ಚು ಡೆಂಘೀ ಪ್ರಕರಣ ಕಾಣಿಸಿಕೊಂಡ ವಾರ್ಡ್‌ಗಳನ್ನು ಗುರುತಿಸಿಕೊಂಡು ನಿಯಂತ್ರಣ ಕಾರ್ಯಗಳನ್ನು ನಡೆಸಲಾಗುತ್ತಿದೆ. ಜಾಗೃತಿ, ತಪಾಸಣೆ: ಡೆಂಘೀ ಹಾಗೂ ಚಿಕೂನ್‌ ಗುನ್ಯಾ ಪ್ರಕರಣ ಕಾಣಿಸಿಕೊಂಡ 100 ಮೀಟರ್…

Read More