Author: AIN Author

ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ಒಟ್ಟು 14 ಆಟಗಾರರು ಅದೃಷ್ಟ ಪರೀಸಲಿದ್ದಾರೆ. ರಾಜ್ಯದ ಬ್ಯಾಟರ್​ಗಳಾದ ಮನೀಷ್​ ಪಾಂಡೆ ಮತ್ತು ಕರುಣ್​ ನಾಯರ್​ ತಲಾ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ರಾಜ್ಯದ ಉಳಿದ 12 ಆಟಗಾರರು ತಲಾ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿ ದೇಶೀಯ ಕ್ರಿಕೆಟ್​ ಋತುವಿನಲ್ಲಿ ವಿದರ್ಭಕ್ಕೆ ವಲಸೆ ಹೋಗಿರುವ ಕರುಣ್​ ನಾಯರ್​, ವಿಸಿಎ ಕಡೆಯಿಂದ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದೇ ರೀತಿ ಕೇರಳಕ್ಕೆ ವಲಸೆ ಹೋಗಿರುವ ಸ್ಪಿನ್ನರ್​ ಶ್ರೇಯಸ್​ ಗೋಪಾಲ್​ ಮತ್ತು ಮಿಜೋರಾಂಗೆ ವಲಸೆ ಹೋಗಿರುವ ಕೆಸಿ ಕಾರ್ಯಪ್ಪ ಕೂಡ ಹರಾಜಿನಲ್ಲಿದ್ದಾರೆ. ಇನ್ನುಳಿದಂತೆ ರಾಜ್ಯ ತಂಡದ ಜೆ. ಸುಚಿತ್​, ಶುಭಾಂಗ್​ ಹೆಗ್ಡೆ, ನಿಹಾಲ್​ ಉಲ್ಲಾಳ್​, ಬಿಆರ್​ ಶರತ್​ ಜತೆಗೆ ಮಹಾರಾಜ ಟ್ರೋಫಿಯಲ್ಲಿ ಮಿಂಚಿರುವ ಮನ್ವಂತ್​ ಕುಮಾರ್​, ಎಲ್​ಆರ್​ ಚೇತನ್​, ಕೆಎಲ್​ ಶ್ರೀಜಿತ್​, ಎಂ. ವೆಂಕಟೇಶ್​, ಮೋನಿಶ್​ ರೆಡ್ಡಿ, ಅಭಿಲಾಷ್​ ಶೆಟ್ಟಿ ಹರಾಜಿನಲ್ಲಿದ್ದಾರೆ. ಉಳಿದಂತೆ ಸದ್ಯ ರಾಜ್ಯದ 10 ಕ್ರಿಕೆಟಿಗರು ವಿವಿಧ ತಂಡಗಳಲ್ಲಿ ರಿಟೇನ್​…

Read More

ಟೀಮ್‌ ಇಂಡಿಯಾ ಯಂಗ್‌ ಪವರ್‌ಫುಲ್‌ ಓಪನರ್‌ ಯಶಸ್ವಿ ಜೈಸ್ವಾಲ್‌ ಅವರ ಬಗ್ಗೆ ಭಾರತೀಯ ಕ್ರಿಕೆಟ್‌ ದಿಗ್ಗಜ ಹಾಗೂ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌ ದೊಡ್ಡ ಭವಿಷ್ಯ ನುಡಿದಿದ್ದಾರೆ. ಭಾರತ ತಂಡದ ಮೂರೂ ಸ್ವರೂಪದಲ್ಲಿ ಜೈಸ್ವಾಲ್‌ ಅವರನ್ನು ಆಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಪ್ರಸ್ತುತ ಭಾರತ ತಂಡದ ಜೊತೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಯಶಸ್ವಿ ಜೈಸ್ವಾಲ್‌ ಇದ್ದಾರೆ. ಭಾನುವಾರ ಡರ್ಬನ್‌ನಲ್ಲಿ ಮೊದಲನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಆಡಬೇಕಾಗಿತ್ತು. ಮಳೆಯ ಕಾರಣ ಟಾಸ್‌ ಕಾಣದೆ ಮೊದಲನೇ ಟಿ20 ಪಂದ್ಯ ಅಂತ್ಯವಾಗಿತ್ತು. ಎರಡನೇ ಟಿ20 ಪಂದ್ಯ ಮಂಗಳವಾರ ನಡೆಯಲಿದೆ. ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, ಯಶಸ್ವಿ ಜೈಸ್ವಾಲ್‌ ಅವರು ಯುವ ಆಟಗಾರರ ಬೋಲ್ಡ್‌ನೆಸ್‌ ಹೊಂದಿದ್ದಾರೆ ಹಾಗೂ ಅತ್ಯುತ್ತಮ ಪ್ರತಿಭೆಯನ್ನು ಹೊಂದಿದ್ದಾರೆ. ಭಾರತ ತಂಡದ ಭವಿಷ್ಯವನ್ನು ಯಶಸ್ವಿ ಜೈಸ್ವಾಲ್‌ ಅತ್ಯುತ್ತಮವಾಗಿ ಆರಂಭಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವರು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.…

Read More

ನವದೆಹಲಿ:- ಸಮಾಜಕ್ಕೆ ಯತ್ನಾಳ್ ಕೊಡುಗೆ ಏನು? ಎಂದು ಮುರುಗೇಶ್ ನಿರಾಣಿ ಪ್ರಶ್ನೆ ಮಾಡಿದ್ದಾರೆ. ವಿಜಯೇಂದ್ರ ಅವರಿಗೆ ಅರ್ಹತೆಯ ಮೇಲೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. ಬ್ಲ್ಯಾಕ್‌ಮೇಲ್‌ ಮಾಡಿ ಅವರಿಗೆ ಪಟ್ಟ ಕಟ್ಟಲಾಗಿದೆ ಎಂಬುದೆಲ್ಲ ಸುಳ್ಳು. ಈ ರೀತಿಯ ಆರೋಪ ಮಾಡುವವರ ಅವನತಿ ಆರಂಭವಾಗಿದೆ. ರಾಜ್ಯಾಧ್ಯಕ್ಷರ ಬಳಿ ಮಾತನಾಡಿ ಅವರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದಲೇ ಮೇಲೆ ಬಂದು, ನಮ್ಮ ಪಕ್ಷದ ಮುಖಂಡರ ವಿರುದ್ಧವೇ ಮಾತಾಡುವ ಆ ವ್ಯಕ್ತಿ ಸ್ವಘೋಷಿತ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾನೆ. ಮಾತನಾಡಿದಾಗ ನಾಲ್ಕು ಜನರು ಚಪ್ಪಾಳೆ ಹೊಡೆದರೆ ಆತ ನಾಯಕ ಅಲ್ಲ. ಸಮಾಜಕ್ಕೆ ಆತನ ಕೊಡುಗೆ ಏನು? ಎಂದು ಪ್ರಶ್ನಿಸಿದರು. ಅವರ ಕೊಡ ತುಂಬಲು ಬಂದಿದೆ, ಇನ್ನು ಬಹಳ ದಿನ ನಡೆಯಲ್ಲ. ಅಧಿಕಾರಕ್ಕಾಗಿ ಅವರು ಹೀಗೆ ಕ್ಷುಲ್ಲಕವಾಗಿ ಮಾತನಾಡುತ್ತಿದ್ದಾರೆ. ದೀಪ‌ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ ಎಂದವರು ಪರೋಕ್ಷವಾಗಿ ಕುಟುಕಿದರು. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ…

Read More

ಬೆಂಗಳೂರು:- ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿ. 17ರಿಂದ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ಹಾಸನ, ಚಿಕ್ಕಮಗಳೂರು, ಮೈಸೂರು, ರಾಮನಗರ ಈ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ಸಾಧಾರಣಕ್ಕಿಂತ ಅತ್ಯಧಿಕ ಪ್ರಮಾಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಕರ್ನಾಟಕದಲ್ಲಿ ಅಲ್ಲಲ್ಲಿ ಹಿಂಗಾರು ಮಳೆ ಚುರುಕುಗೊಳ್ಳುವ ಜೊತೆಗೆ ಚಳಿ ಹೆಚ್ಚಾಗುವ ಮುನ್ಸೂಚನೆ ದೊರೆತಿದೆ. ಉತ್ತರ ಒಳನಾಡಿನಲ್ಲಿ ಈ ವಾರಪೂರ್ತಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಹೀಗಿದ್ದರೂ ಈ ಭಾಗದಲ್ಲಿ ಚಳಿಯ ಪ್ರಮಾನ ಹೆಚ್ಚಿರಲಿದೆ ಎಂದು ವರದಿ ತಿಳಿಸಿದೆ. ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದ ಬಹುತೇಕ ಕಡೆ ಗರಿಷ್ಠ ತಾಪಮಾನ ಮತ್ತು ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಹೀಗಾಗಿ ಚಳಿಗಾಲ ಆರಂಭವಾದ ಅನುಭವವಾಗುತ್ತಿದೆ. ಬೆಳಗಾವಿ ವಿಮಾನ ನಿಲ್ದಾಣ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ…

Read More

ಬೆಳಗಾವಿ: ಗುಳೆ ಹೋಗುವುದನ್ನು ತಪ್ಪಿಸಲು ಮನರೇಗಾ ಯೋಜನೆಯ 100 ಮಾನವ ದಿನಗಳಿಂದ 150 ಮಾನವ ದಿನಗಳನ್ನಾಗಿ ಮಾಡಿಕೊಡಿ ಎಂದು ಕೋರಿದರೂ ಸಹಕಾರ ನೀಡಿಲ್ಲ, ಬರ ನಿರ್ವಹಣೆಗೆ ಕೇಂದ್ರಕ್ಕೆ ಮೂರು ಪತ್ರ ಬರೆದರೂ ಅದಕ್ಕೆ ಸ್ಪಂದನೆ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪ್ರತಿಪಕ್ಷದ ಧರಣಿ ಮಧ್ಯೆಯೇ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬರದ ವಿಷಯವಾಗಿ ಉತ್ತರ ನೀಡುವಾಗ ಮಧ್ಯ ಪ್ರವೇಶಿಸಿ ಅವರು ಮಾತನಾಡಿದರು. ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ತೀವ್ರ ಬರ ಆಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿದೆ. ಕುಡಿವ ನೀರು, ಮೇವು, ಉದ್ಯೋಗ ಕಲ್ಪಿಸುವ ಕೆಲಸಗಳನ್ನೆಲ್ಲ ಮಾಡಿದ್ದೇವೆ. ಜಿಲ್ಲಾಡಳಿತದ ಬಳಿ 900 ಕೋಟಿ ರು. ಇದೆ. ಆದರೆ ಮನರೇಗಾ ಯೋಜನೆಯಡಿ ಇರುವ 100 ಮಾನವ ದಿನಗಳನ್ನು 150ಕ್ಕೆ ಏರಿಸಿ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. https://ainlivenews.com/i-welcome-the-judgment-of-honble-supreme-court-amit-shah/ ಈವರೆಗೂ ಸ್ಪಂದಿಸಿಲ್ಲ ಎಂದರು. ಬರಪರಿಹಾರಕ್ಕಾಗಿ. ರೂ.18,171 ಕೋಟಿ ನೆರವನ್ನು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. ಕೇಂದ್ರದ ತಂಡ…

Read More

ವಾತಾವರಣದಲ್ಲಿ ಶೀತಗಾಳಿಯ ಪರಿಣಾಮ ಕೆಮ್ಮು, ಗಂಟಲು ನೋವು, ನೆಗಡಿ ಆರಂಭಗೊಳ್ಳುತ್ತದೆ. ಆದರೆ ಶೀತ, ಕೆಮ್ಮಿನಿಂದ ಬಳಲುತ್ತಿದ್ದವರು ಅದೆಷ್ಟೇ ಔಷಧಿ ಬಳಸಿದರು ಕೆಲ ದಿನದಲ್ಲಿ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾದ್ರೆ ಶೀತ, ಕೆಮ್ಮುವಿನಂತ ಕಾಯಿಲೆಯಿಂದ ದೂರವಿರಲು ಕೆಲವು ಸಲಹೆ ಇಲ್ಲಿದೆ. ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿರುತ್ತದೆ. ನಾವು ನಿತ್ಯ ಸೇವಿಸುವ ಆರೋಗ್ಯದಲ್ಲಿ ಕಾಳು ಮೆಣಸಿನ ಪುಡಿ ಅಥವಾ ಕಾಳು ಮೆಣಸು ಬಳಸುವುದರಿಂದ ಈ ಕಾಲೋಚಿತ ಕಾಯಿಲೆಗಳಿಂದ ಪಾರಾಗಬಹುದು. ಕಾಳು ಮೆಣಸನ್ನು ಕಪ್ಪು ಚಿನ್ನ ಅಂತಲೂ ಕರೆಯುತ್ತಾರೆ. ಏಕೆಂದರೆ ಕಾಳು ಮೆಣಸಿನಲ್ಲಿ ಅಷ್ಟೊಂದು ಆರೋಗ್ಯಕರ ಅಂಶಗಳಿದ್ದು, ಇದೊಂದು ಅಮೂಲ್ಯ ವಸ್ತು ಎಂದು ಪರಿಗಣಿಸಲಾಗಿದೆ. ಕಾಳು ಮೆಣಸು ಹಲವು ಆರ್ಯುವೇದ ಔಷಧ ತಯಾರಿಕೆಯಲ್ಲೂ ಬಳಸಲ್ಪಡುತ್ತದೆ. ಹೀಗಾಗಿ ಕಾಳು ಮೆಣಸು ಔಷಧಿ ಗುಣವುಳ್ಳ ಕಪ್ಪು ಚಿನ್ನ ಎಂದು ಕರೆಯಲಾಗಿದೆ. ಕಾಳು ಮೆಣಸಿನಿಂದಾಗುವ ಪ್ರಯೋಜನಗಳೇನು? ತೂಕ ಇಳಿಸಲು: ಕಾಳು ಮೆಣಸಿನಲ್ಲಿ ಕೊಬ್ಬಿನಾಂಶ ಕರಗಿಸುವಂತಹ ಅಂಶ ಇರುವುದರಿಂದ ಹೊಸದಾಗಿ ರೂಪುಗೊಳ್ಳುವ ಫ್ಯಾಟ್‌ ಸೆಲ್ಸ್‌ಗಳ ಕರಗಿಸಲಿದೆ.…

Read More

ಹೊಸವರ್ಷಕ್ಕೆ ಯಾರಾದರೂ ಕಾರು ಕೊಳ್ಳುವ ಆಸ್ಕ್ತಿ ಇದೆಯಾ ಹಾಗಿದ್ರೆ ಈ ಸ್ಟೋರಿ ತಪ್ಪದೇ ನೋಡಿ ಯಾಕಂದರೆ 2024ರ ಹೊಸ ವರ್ಷದ ವೇಳೆಗೆ ಹೊಸ ಕಾರುಗಳು ಬಿಡುಗಡೆಯಾಗಲಿವೆ. ಹೊಸ ಕಾರುಗಳ ನೀರಿಕ್ಷಿತ ಬಿಡುಗಡೆ ದಿನಾಂಕ, ತಾಂತ್ರಿಕ ಮಾಹಿತಿ ಮತ್ತು ಅಂದಾಜು ಬೆಲೆಯ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಕಾರಿನ ಹೊಸ ತಲೆಮಾರಿನ ಆವೃತ್ತಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೊಸ ಸ್ವಿಫ್ಟ್ ಮಾದರಿಯು ಹಲವಾರು ಬದಲಾವಣೆಗಳೊಂದಿಗೆ ನವೀಕೃತ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಈ ಬಾರಿ ಜೆಡ್ ಸೀರಿಸ್ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್ ನಲ್ಲೂ ಗ್ರಾಹಕರನ್ನು ಸೆಳೆಯಲಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ ಇದು ಗರಿಷ್ಟ 40 ಕಿ.ಮೀ ಮೈಲೇಜ್ ಟಾಟಾ ಪಂಚ್ ಇವಿ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ…

Read More

ಚಾಮರಾಜನಗರ:- ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸೆನ್ ಅಪರಾಧಿ ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಮನಗರದ ಪ್ರಜ್ವಲ್ @ ಪ್ರಜ್ಜು(೨೨) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ೫.೧೪ ಗ್ರಾಂ ನ ಸುಮಾರು ೬೦ ಸಾವಿರ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಮೈಸೂರಿನ ಖಾಸಗಿ ಕಾಲೇಜು ಬಳಿ ಅಪರಿಚಿತ ವ್ಯಕ್ತಿಯೋರ್ವ ಇದನ್ನು ನೀಡಿದ್ದು, ಇದನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿದ್ದನು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌. ಕಾರ್ಯಾಚರಣೆಯಲ್ಲಿ ಸೆನ್ ಠಾಣೆಯ ಪಿಎಸ್ಐ ಎಸ್.ಎಲ್. ಸಾಗರ್, ಎಎಸ್ಐ ಮಹದೇವಸ್ವಾಮಿ, ಮುಖ್ಯಪೇದೆಗಳಾದ ಮಹೇಶ್, ಸುಬ್ರಹ್ಮಣ್ಯ, ಪೇದೆಗಳಾದ ಜಗದೀಶ್, ರಾಜು, ಮಂಜುನಾಥ್ ಇದ್ದರು. ವರದಿ: ಪ್ರಮೋದ್ ಚಾಮರಾಜನಗರ

Read More

ನೀವು ಹೊಸ ಸಿಮ್‌ ಕಾರ್ಡ್‌ (Sim Card) ಖರೀದಿ ಮಾಡುತ್ತೀರಾ? ಹಾಗಾದ್ರೆ ಕೆಲ ಕಠಿಣ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರು ಮಾತ್ರವಲ್ಲ ಸಿಮ್‌ ವಿತರಿಸುವ ಡೀಲರ್‌ಗಳು ಸಹ ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದಲ್ಲಿ ಜೈಲು (Jail) ಶಿಕ್ಷೆಯನ್ನು ವಿಧಿಸಲಾಗುತ್ತದೆ. ಬಹುತೇಕ ಸೈಬರ್ ಅಪರಾಧಗಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು (Mobile Sim) ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಂಡಿದೆ. ಹೊಸ ನಿಯಮಗಳು ಏನು? ವ್ಯಾಪಾರಸ್ಥರು/ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಬಹುದು ಸಿಮ್‌ ಕಾರ್ಡ್‌ ರದ್ದು/ ನಿಷ್ಕ್ರಿಯಗೊಳಿಸಿದ 90 ದಿನಗಳ ನಂತರ ಆ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ನೀಡಲಾಗುತ್ತದೆ. ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ…

Read More

ಬೆಳಗಾವಿ:- ಬಾಯಿ ಸರಿ ಇದ್ದಿದ್ದರೆ ನಾನು ಸಿಎಂ ಆಗ್ತಿದ್ನಂತೆ ಎಂದು ಯತ್ನಾಳ್ ಹೇಳಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿರುವ ಯತ್ನಾಳ್‌ ಎಚ್‌.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ವಿಜಯಪುರಕ್ಕೆ 105 ಕೋಟಿ ರೂ. ನೀಡಿದ್ದರು. ದುರ್ದೈವ ಅಂದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು ರದ್ದು ಮಾಡಿತ್ತು. ಯತ್ನಾಳ್‌ ಅವರೇ ನಿಮ್ಮ ಬಾಯಿ ಸರಿ ಇದ್ದಿದ್ದರೆ ಸಿಎಂ ಆಗುವ ಯೋಗ್ಯತೆ ಇತ್ತು ಅಂತಾ ಕೆಲವರು ಹೇಳಿದ್ದರು. ನಾನ್ಯಾರಿಗೂ ಹೆದರುವುದಿಲ್ಲ ಹೇಲಬೇಕಾದ್ದನ್ನು ನೇರವಾಗಿ ಹೇಳ್ತೇನೆ ಎಂದಿದ್ದಾರೆ. ಪಿಎಸಿಗೆ ಸಿಸಿ ಪಾಟೀಲ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಮಾಧಾನ ಮಾಡಲು ಯತ್ನಿಸುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು ಸಮಾಧಾನ ಮಾಡಲು ಹೊರಟಿದ್ದಾರೆ. ಇದಕ್ಕೆ ಮೇಲಿಂದ ಅನುಮತಿ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಬೊಮ್ಮಾಯಿ, ಭೈರತಿ ಬಸವರಾಜ್‌ ಅನುದಾನ ನೀಡಿ ನೆರವಾದರು ಅಧಿಕಾರದಲ್ಲಿದ್ದಾಗ ಸಹಾಯ ಮಾಡದವರು ಈಗ ಮಾಜಿಗಳಾಗಿದ್ದಾರೆ. ನಾನು ಟಾರ್ಗೆಟ್‌ ಮಾಡಿದರೆ ಅವರು ಮಾಜಿಯಾಗುವವರೆಗೂ ಬಿಡಲ್ಲ ನಾನು ಒಂಟಿ ಸಲಗ ಇದ್ದೇನೆ. ಒಂಟಿ ಸಲಗ ಆಗಿಯೇ ಹೊಡೆಯುತ್ತೇನೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

Read More