Author: AIN Author

ವಿಜಯಪುರ: ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಮುಸ್ಲಿಮರ ಓಲೈಕೆ ಮಾಡುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಬಿಜೆಪಿ ಸೇರುತ್ತಲೇ ‘ಹಿಂದೂ ಹುಲಿ’ ಎಂದು ಬಿರುದು ಇರಿಸಿಕೊಂಡು ಓಡಾಡುತ್ತಿದ್ದಾರೆ. ಅವರು ಸಮಾನತೆ ಸಾರಿರುವ ಬಸವನಾಡಿನಲ್ಲಿ ಜನಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳರು ಇಸ್ಲಾಂ ಹಾಗೂ ಧರ್ಮಗುರು ತನ್ವೀರ್‌ ಪೀರಾ ಹಾಶ್ಮಿ ವಿರೋಧಿ ನಡೆ ಅನುಸರಿಸುತ್ತಾ ಬಂದಿದ್ದಾರೆ.  ಅವರ ಮುಸ್ಲಿಂ ದ್ವೇಷದಿಂದಲೇ ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದ ನೆಪ ಮಾಡಿಕೊಂಡು ಧರ್ಮಗುರು ತನ್ವೀರ್‌ ಪೀರಾ ಹಾಶ್ಮಿ ವಿರುದ್ಧ ಐಸಿಸ್ ಸಂಪರ್ಕದ ಆರೋಪ ಮಾಡಿರುವುದಲ್ಲದೆ, ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ- ಮೌಲ್ವಿ ಜೊತೆಗಿನ ಫೋಟೋ ಹಾಕಿ ವೈರಲ್‌ ಮಾಡಿಸಿದ್ದಾರೆ. ಹೀಗೆ ಯತ್ನಾಳ ಅನಗತ್ಯವಾಗಿ ಮತ್ತೊಬ್ಬರ ಚಾರಿತ್ರ್ಯಹರಣದಂಥ ಹೀನಕೃತ್ಯ ಮಾಡಬಾರದು. ಅವರಿಗದು ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.  https://ainlivenews.com/i-welcome-the-judgment-of-honble-supreme-court-amit-shah/ ಇನ್ನು, ಈ ವಿಷಯದ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಬೇಕಿಲ್ಲ. ತಾಕತ್ತಿದ್ದರೆ ಯತ್ನಾಳರೇ ಎನ್ಐಎ ಮೂಲಕವೋ, ಇಲ್ಲವೆ ಅವರೇ ನೇರವಾಗಿ…

Read More

ಬೆಂಗಳೂರು:- ಕೆಎಸ್‌ಎಟಿ ಕಲಾಪ ವೇಳೆ ಅಶ್ಲೀಲ ವಿಡಿಯೋ ಪ್ರದರ್ಶಿಸಿ ದುಷ್ಕೃತ್ಯ ಎಸಗಲಾಗಿದೆ. ಘಟನೆ ಬಗ್ಗೆ ಕೆಎಸ್‌ಎಟಿಯ ಅಧಿಕಾರಿ ಬೆಂಗಳೂರಿನ ಸೆಂಟ್ರಲ್ ಸೆನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ವೇಳೆ ಲಾಗಿನ್ ಆಗಿ ಆಕ್ಷೇಪಾರ್ಹ ವಿಡಿಯೋ ಪ್ರದರ್ಶನ ಮಾಡಿದ ಅನಾಮಧೇಯ ವ್ಯಕ್ಯಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಅಧಿಕಾರಿಗಳು ಆನ್‌ಲೈನ್ ಕಲಾಪ ಸ್ಥಗಿತಗೊಳಿಸಿದರು. ಈ ಬಗ್ಗೆ ಐಟಿ ಕಾಯ್ದೆ ಸೆಕ್ಷನ್ 67, 67a ಅಡಿ ಪ್ರಕರಣ ದಾಖಲಾಗಿದೆ. ಅಶ್ಲೀಲ ವಿಡಿಯೋ ಪ್ರದರ್ಶಿಸಿದ ಕಿಡಿಗೇಡಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಾರದ ಹಿಂದೆ ಕರ್ನಾಟಕ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಲಾಪದ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ ಘಟನೆ ನಡೆದಿತ್ತು. ಇದೀಗ ಮತ್ತೆ ಅಂತಹ ಘಟನೆ ನಡೆದಿದೆ.

Read More

ನವದೆಹಲಿ: ಪ್ರಶ್ನೆ ಕೇಳಲು (Cash for Query) ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಉಚ್ಛಾಟನೆಯಾಗಿರುವ ಟಿಎಂಸಿ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಶ್ರೀಘ್ರವೇ ತಮ್ಮ ಅಧಿಕೃತ ನಿವಾಸವನ್ನು ತೊರೆಯಲಿದ್ದಾರೆ. ಲೋಕಸಭೆಯ (Lok Sabha) ವಸತಿ ಸಮಿತಿಯು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದು 30 ದಿನಗಳ ಒಳಗಡೆ ತನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಕೇಳಿಕೊಳ್ಳುವಂತೆ ಸೂಚಿಸಿದೆ. ಮೊಯಿತ್ರಾ ಅವರಿಗೆ ವಿಶೇಷ ಕೋಟಾದ ಅಡಿಯಲ್ಲಿ ಸಚಿವಾಲಯವು ಮನೆಯನ್ನು ಮಂಜೂರು ಮಾಡಿದೆ. ಲೋಕಸಭೆಯಿಂದ ಉಚ್ಛಾಟನೆ ಮಾಡಿದ್ದನ್ನು ಪ್ರಶ್ನಿಸಿ ಮೊಯಿತ್ರಾ ಸುಪ್ರೀಂ ಕೋರ್ಟ್‌ನಲ್ಲಿ (Suprme Court) ಅರ್ಜಿ ಸಲ್ಲಿಸಿದ್ದಾರೆ.  ನೀತಿ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಲೋಕಸಭೆಯಿಂದ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಲಾಗಿದೆ. https://ainlivenews.com/see-how-hot-and-hot-this-cold-can-be/ ಮೊಯಿತ್ರಾ ಅವರು ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ರೂ. ನಗದು ಮತ್ತು ಐಷಾರಾಮಿ ಉಡುಗೊರೆ ವಸ್ತುಗಳು ಸೇರಿದಂತೆ ಲಂಚ ಪಡೆದ…

Read More

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಯ ಕುರಿತು ಯಾರೇ ಶಾಸಕರು ಚರ್ಚಿಸಿದರೂ ಅದಕ್ಕೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತಿದೆ. ಈ ಭಾಗದ ಸಮಸ್ಯೆಯ ಬಗ್ಗೆ ಯಾರೇ ಶಾಸಕರು ಚರ್ಚೆ ನಡೆಸಿದರೇ ಅದಕ್ಕೆ ಉತ್ತರ ಕೊಡಲು ಸರ್ಕಾರ ಬದ್ಧವಾಗಿದೆ ಎಂದರು. https://ainlivenews.com/i-welcome-the-judgment-of-honble-supreme-court-amit-shah/ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಸಮಗ್ರ ಕರ್ನಾಟಕ ನಮ್ಮದು. ವಿಧಾನಸಭೆಯಲ್ಲಿ ಸಹಕಾರ ಕೊಡಲು ನಾವು ಸಿದ್ಧ. ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಪ್ರಸ್ತಾವನೆ ಬರಲಿ ಖಂಡಿತವಾಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ತೆರವು ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹತ್ತಿರ ಮಾತನಾಡಿ ಎಂದರು. ಪಾರ್ಲಿಮೆಂಟ್ ಅಫೆರ್ಸ್, ಸ್ಪೀಕರ್ ಅವರ ಸ್ವತ್ತು ಅದು. ಕಲಾಪದಲ್ಲಿ ಬಿಜೆಪಿ ನಾಯಕರ ಮಧ್ಯೆ ಒಮ್ಮತ ಮೂಡದ…

Read More

ಬೆಂಗಳೂರು:- ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆ ಮಾಡಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಭಾಸ್ಕರ್ ಬಂಧಿತ ಆರೋಪಿ. ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ದೊಮ್ಮಲೂರಿನ ನಿಯಂತ್ರಣ ‌ಕೊಠಡಿಗೆ ಸೋಮವಾರ ರಾತ್ರಿ 11.30ರ ಸುಮಾರಿಗೆ ಕರೆ‌ ಮಾಡಿದ್ದ ಆರೋಪಿ, ರಾಜಭವನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಸಿದ್ದ. ಮಾಹಿತಿ‌ ಗೊತ್ತಾಗುತ್ತಿದ್ದಂತೆ ಸ್ಥಳೀಯ ‌ಪೊಲೀಸರು ರಾಜಭವನಕ್ಕೆ ‌ಭೇಟಿ ನೀಡಿ ರಾತ್ರಿಯಿಡೀ ಶೋಧ ನಡೆಸಿದ್ದರು. ಇದೊಂದು ಹುಸಿ ಬೆದರಿಕೆಯೆಂದು ಘೋಷಿಸಿದ್ದರು. ಬೆದರಿಕೆ ಕರೆ ಮಾಡಿದ್ದ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಯೊಬ್ಬನನ್ನು ಗುರುತಿಸಲಾಗಿದೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ಕರೆ ಮಾಡಿದ್ದನೆಂಬುದು ಗೊತ್ತಾಗಿಲ್ಲ. ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Read More

ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ (B S Yediyurappa) ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಮಾಜಿ ಸಚಿವ ವಿ.ಸೋಮಣ್ಣ (V Somanna) ಬ್ಯಾಟ್ ಬೀಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ, ನನ್ನ ನೋವು ನನಗೆ ಗೊತ್ತು, ಅವರ ನೋವು ಅವರಿಗೆ ಗೊತ್ತು ಹಾಗಾಗಿ ಅವರು ಮಾತನಾಡಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. https://ainlivenews.com/see-how-hot-and-hot-this-cold-can ಯಡಿಯೂರಪ್ಪ ಹಿರಿಯ ನಾಯಕರಾಗಿದ್ದು, ಅವರಿಗೆ ಯತ್ನಾಳ್ (Basangouda Patil Yatnal) ಹೀಗೆ ಹೇಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಹಿರಿತನ ಅನ್ನೋದು ನಡತೆಯಲ್ಲಿ ಇರಬೇಕು. ನಾನು 40 ವರ್ಷ ರಾಜಕಾರಣ ಮಾಡಿದರೂ ಯಾರೂ ಬೊಟ್ಟು ಮಾಡಿ ತೋರಿಸುವ ಹಾಗೆ ಮಾಡಿಕೊಂಡಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಕಟುಕಿದ್ದಾರೆ. ಇದೇ ವೇಳೆ ದೆಹಲಿಯಿಂದ ನನಗೆ ಕರೆ ಬಂದಿದ್ದು, ಎರಡು ಮೂರು ದಿನದಲ್ಲಿ ದೆಹಲಿಗೆ ಹೋಗುತ್ತೇನೆ. ನಮ್ಮ ನೋವು ಹೇಳಿಬರುತ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ.

Read More

ರಾಯಚೂರು:- ದೇವರಾಜ ಅರಸು ಮ್ಯಾಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗೆ ವಿದ್ಯಾರ್ಥಿಗಳ ಆಕ್ರೋಶ ಹೊರ ಹಾಕಿದ್ದಾರೆ. ತಡರಾತ್ರಿ ವಾರ್ಡನ್ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿನಿಯರು ಸಿಡಿದೆದ್ದಿದ್ದು, ಬಾಲಕಿಯರು ವಾರ್ಡನ್ ಗೆ ಹಿಗ್ಗಾಮುಗ ತರಾಟೆಗೆ ತಗೊಂಡಿದ್ದಾರೆ. ವಾರ್ಡನ್ ಗಿರಿಜಾ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ತಡ ರಾತ್ರಿ ಪ್ರೊಟೆಸ್ಟ್ ನಡೆಸಲಾಗಿದ್ದು, ದೇವರಾಜ ಅರಸು ಮ್ಯಾಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗೆ ವಿದ್ಯಾರ್ಥಿಗಳ ಆಕ್ರೋಶ ಹೊರ ಹಾಕಿದೆ. ಉಪ್ಪು ಇಲ್ಲದ ಸೊಪ್ಪನ ಊಟ, ತರಕಾರಿ ಇಲ್ಲದ ಸಾರು, 15 ದಿನಕ್ಕೆ ಒಮ್ಮೆ ಶೌಚಾಲಯ ಕ್ಲೀನ್, ಕಸ ಬಳಿಯೋಕೆ ಒಂದು ಬಾರಿ ಇಲ್ಲ, ಸೊಳ್ಳೆ ಬತ್ತಿ ಇಲ್ಲ, ಸೋಪು ಕಿಟ್ ಇಲ್ಲ ಬಳಸಕ್ಕೆ ನೀರಿಲ್ಲ ಕುಡಿಯೋಕೆ ನೀರಿಲ್ಲ ಸ್ನಾನ ಮಾಡದೆ ಕಾಲೇಜಿಗೆ ಹೋಗುತ್ತೇವೆ ವಾರ್ಡನ್ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.

Read More

2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್, ಯುವ ವೇಗಿ ಯಶ್ ದಯಾಳ್ ಅವರ ಬೌಲಿಂಗ್‌ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಅಸಾಧ್ಯವಾದ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ಆಡಿದ 14 ಪಂದ್ಯಗಳಿಂದ 150 ಸ್ಟ್ರೆಕ್ ರೇಟ್ ನಲ್ಲಿ 474 ರನ್ ಗಳಿಸಿದ್ದರು. ಇದೇ ಪ್ರದರ್ಶನದ ಆಧಾರದ ಮೇಲೆ ರಿಂಕು ಸಿಂಗ್ ಅವರನ್ನು ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆಡಿದ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ರಿಂಕು ಸಿಂಗ್, ಭಾರತ ತಂಡದ ಪರ ಇಲ್ಲಿಯವರೆಗೂ ಆಡಿರುವ 6 ಟಿ20-ಐ ಪಂದ್ಯಗಳಿಂದ 187ರ ಸ್ಟ್ರೆಕ್ ರೇಟ್‌ನಲ್ಲಿ 180 ರನ್ ಗಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಫಿನಿಷರ್ ಪಾತ್ರ ವಹಿಸಿ 106 ರನ್ ಗಳಿಸಿದ್ದರು. ರಿಂಕು ಸಿಂಗ್ ಟೀಮ್ ಇಂಡಿಯಾಗೆ ಸಿಕ್ಕಿರುವ ಅತ್ಯಮೂಲ್ಯ ಆಟಗಾರ ಎಂದು ಸುನೀಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಜೊತೆ ನಡೆಸಿದ ಸಂವಾದದಲ್ಲಿ ಶ್ಲಾಘಿಸಿದ್ದಾರೆ. ಐಪಿಎಲ್ ಟೂರ್ನಿಯ…

Read More

ನವದೆಹಲಿ: ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿಯಲ್ಲಿ (Acid Attack) ಮಹಾನಗರಗಳ ಪೈಕಿ ಬೆಂಗಳೂರು (Bengaluru) ಮೊದಲನೇ ಸ್ಥಾನವನ್ನು ಪಡೆದಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಈ ಪೈಕಿ ನವದೆಹಲಿ (New Delhi) ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಅಹಮದಾಬಾದ್ (Ahmedabad) ಮೂರನೇ ಸ್ಥಾನವನ್ನು ಪಡೆದಿದೆ. 2022ರಲ್ಲಿ ಬೆಂಗಳೂರಿನಲ್ಲಿ ಒಟ್ಟು 8 ಆ್ಯಸಿಡ್ ದಾಳಿ ನಡೆದಿತ್ತು. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ (NCRB) ವರದಿಯಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ. ಎನ್‌ಸಿಆರ್‌ಬಿ ಬಿಡುಗಡೆ ಮಾಡಿದ ವರದಿ ಅನ್ವಯ ದೇಶದ 19 ಮಹಾನಗರಗಳ ಪೈಕಿ 2022ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ 8 ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾಗಿದ್ದು, https://ainlivenews.com/i-welcome-the-judgment-of-honble-supreme-court-amit-shah/ ಇದು ಆ ವರ್ಷದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣವಾಗಿದೆ. 7 ಆ್ಯಸಿಡ್ ದಾಳಿ ಪ್ರಕರಣಗಳನ್ನು ದಾಖಲಿಸಿರುವ ದೆಹಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 5 ಪ್ರಕರಣಗಳೊಂದಿಗೆ ಗುಜರಾತ್‌ನ ಅಹಮದಾಬಾದ್ 3ನೇ ಸ್ಥಾನದಲ್ಲಿದೆ. ಹೈದರಾಬಾದ್‌ನಲ್ಲಿ 2 ಆ್ಯಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಬೆಂಗಳೂರಿನಲ್ಲಿ ಯುವತಿಯ ಮೇಲಿನ ಆ್ಯಸಿಡ್ ದಾಳಿ…

Read More

ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ಒಟ್ಟು 14 ಆಟಗಾರರು ಅದೃಷ್ಟ ಪರೀಸಲಿದ್ದಾರೆ. ರಾಜ್ಯದ ಬ್ಯಾಟರ್​ಗಳಾದ ಮನೀಷ್​ ಪಾಂಡೆ ಮತ್ತು ಕರುಣ್​ ನಾಯರ್​ ತಲಾ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ರಾಜ್ಯದ ಉಳಿದ 12 ಆಟಗಾರರು ತಲಾ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿ ದೇಶೀಯ ಕ್ರಿಕೆಟ್​ ಋತುವಿನಲ್ಲಿ ವಿದರ್ಭಕ್ಕೆ ವಲಸೆ ಹೋಗಿರುವ ಕರುಣ್​ ನಾಯರ್​, ವಿಸಿಎ ಕಡೆಯಿಂದ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದೇ ರೀತಿ ಕೇರಳಕ್ಕೆ ವಲಸೆ ಹೋಗಿರುವ ಸ್ಪಿನ್ನರ್​ ಶ್ರೇಯಸ್​ ಗೋಪಾಲ್​ ಮತ್ತು ಮಿಜೋರಾಂಗೆ ವಲಸೆ ಹೋಗಿರುವ ಕೆಸಿ ಕಾರ್ಯಪ್ಪ ಕೂಡ ಹರಾಜಿನಲ್ಲಿದ್ದಾರೆ. ಇನ್ನುಳಿದಂತೆ ರಾಜ್ಯ ತಂಡದ ಜೆ. ಸುಚಿತ್​, ಶುಭಾಂಗ್​ ಹೆಗ್ಡೆ, ನಿಹಾಲ್​ ಉಲ್ಲಾಳ್​, ಬಿಆರ್​ ಶರತ್​ ಜತೆಗೆ ಮಹಾರಾಜ ಟ್ರೋಫಿಯಲ್ಲಿ ಮಿಂಚಿರುವ ಮನ್ವಂತ್​ ಕುಮಾರ್​, ಎಲ್​ಆರ್​ ಚೇತನ್​, ಕೆಎಲ್​ ಶ್ರೀಜಿತ್​, ಎಂ. ವೆಂಕಟೇಶ್​, ಮೋನಿಶ್​ ರೆಡ್ಡಿ, ಅಭಿಲಾಷ್​ ಶೆಟ್ಟಿ ಹರಾಜಿನಲ್ಲಿದ್ದಾರೆ. ಉಳಿದಂತೆ ಸದ್ಯ ರಾಜ್ಯದ 10 ಕ್ರಿಕೆಟಿಗರು ವಿವಿಧ ತಂಡಗಳಲ್ಲಿ ರಿಟೇನ್​…

Read More