Author: AIN Author

ಬೆಂಗಳೂರು: ಏಳನೇ ದಿನದ ವಿಧಾನಸಭೆ ಕಲಾಪ ಸದ್ದುಗದ್ದಲದಲ್ಲೇ ಕೊನೆಯಾಯ್ತು.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಯಾಯ್ತು.ಯತ್ನಾಳ್,ಜೆ.ಟಿ.ಪಾಟೀಲ್ ಸೇರಿದಂತೆ ಹಲವರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ರು. ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣವೂ ಸದ್ದುಮಾಡ್ತು.. ಭ್ರೂಣಹತ್ಯೆಯ ಪ್ರಸ್ತಾಪವೂ ಆಯ್ತು.. ಪ್ರಶ್ನೋತ್ತರದ ವೇಳೆ ಹಲವರು ತಮ್ಮ ಕ್ಷೇತ್ರಗಳ ಸಮಸ್ಗೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಂಡ್ರು. ಕುಂದನಗರಿಯಲ್ಲಿ ಅರಂಭವಾಗಿರೋ ಚಳಿಗಾಲದ ಅಧಿವೇಶನದ ಮೊದಲ ದಿನವೇ ಉತ್ತರದ ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯ ಮಾಡಲಾಯಿತು.ಆದ್ರೆ ಕೆಲವೊಂದು ವಿಷಯಗಳ ಸದ್ದುಗದ್ದಲದಲ್ಲಿ ಸದನ ಕದನವಾಗಿತ್ತು. ಆದ್ರೆ ಎರಡನೇ ವಾರದ ಎರಡನೇ ದಿನ ಇದೀಗ ಉತ್ತರದ ಕಡೆ ಕೊನೆಗೂ‌ ಸದನ ಬಂತು.ಇಂದು ಉತ್ತರ ಕರ್ನಾಟಕದ ಬಗ್ಗೆ‌ ಸದನದಲ್ಲಿ ಗಂಭೀರ ಚರ್ಚೆಯಾಯಿತು. ಇನ್ನು‌ ಉತ್ತರ ಕರ್ನಾಟಕದ ಚರ್ಚೆ ಮೊದಲಾವಧಿಯ ವೇಳೆ ಡಿಸಿಎಂ ಡಿಕೆಶಿಯನ್ನ ಯತ್ನಾಳ್ ಲೇವಡಿ ಮಾಡಿದ ಪ್ರಸಂಗಕ್ಕೆ ಸದನ ಸಾಕ್ಷಿಯಾಯ್ತು.ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗ್ತಿಲ್ಲ, ಹಳೆ ಮೈಸೂರು ಭಾಗ ಮಾತ್ರ ಅಭಿವೃದ್ಧಿಯಾಗ್ತಿದೆ.ಅದಕ್ಕೆ ಮೈಸೂರು ಮಹಾರಾಜರು ಕಾರಣ.ಹಾಗೆ ಕನಕಪುರವೂ ಅಭಿವೃದ್ಧಿಯಾಗಿಲ್ಲ. ಅಲ್ಲಿರುವ ಶಾಸಕರ ಆದಾಯ…

Read More

ನಾಗಮಂಗಲ: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ ಆಗಲಿದೆ ಎಂದು ಅವರು ಕನಸು ಕಾಣುತ್ತಲೇ ಇರಲಿ. ನಾವು ಮಾತ್ರ ಇದೇ ರೀತಿ ಅಧಿಕಾರದಲ್ಲಿ ಮುಂದುವರಿಯುತ್ತೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಇಡೀ ಸಚಿವ ಸಂಪುಟ, ಎಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ. 5 ವರ್ಷ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ಲೋಕಸಭಾ ಚುನಾವಣೆ ನಂತರ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಶ್ರೀರಘುರಾಮಪುರ ಗೇಟ್ ಮಾರ್ಗವಾಗಿ ಮೇಲುಕೋಟೆಗೆ, https://ainlivenews.com/i-welcome-the-judgment-of-honble-supreme-court-amit-shah/ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಗೊಟಕಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನಾಡಿ ಕೇಂದ್ರ ಮತ್ತು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮದ…

Read More

ಸುವರ್ಣಸೌಧ:- ಪಂಚಮಸಾಲಿ ಮುಖಂಡರು, ಮಠಾಧೀಶರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೀಸಲಾತಿಗೆ ಆಗ್ರಹಿಸಿದರು. ಈ ವೇಳೆ ಪಂಚಮಸಾಲಿ ಸಮುದಾಯದಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಅಧಿವೇಶನ ಮುಗಿದ ಕೂಡಲೇ ಕಾನೂನು ತಜ್ಞರು, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮತ್ತು ಅಡ್ವೊಕೇಟ್‌ ಜನರಲ್‌ ಜೊತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ನಡುವೆ ಮುಖ್ಯಮಂತ್ರಿಗಳ ಭರವಸೆಯಂತೆ ಅಧಿವೇಶನ ಮುಗಿಯುವವರೆಗೆ ಕಾಯಬೇಕೇ ಅಥವಾ ನಿಗದಿಯಂತೆ ಬುಧವಾರದಿಂದ ಪ್ರತಿಭಟನೆ ಹೋರಾಟ ಆರಂಭಿಸಬೇಕೇ ಎಂಬ ಬಗ್ಗೆ ಸಮುದಾಯದ ಮುಖಂಡರಲ್ಲಿ ಗೊಂದಲ ಮೂಡಿತು. ಈ ವೇಳೆ ಮಾತನಾಡಿದ ಮೀಸಲು ಹೋರಾಟದ ನೇತೃತ್ವದ ವಹಿಸಿರುವ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಸ್ವಾಮೀಜಿ ಅವರು, ಕಳೆದ ಮೂರು ವರ್ಷಗಳಿಂದ ಪಕ್ಷಾತೀತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸಮುದಾಯದ ಹಿತದೃಷ್ಟಿಯಿಂದ ಮುಂದೆಯೂ ಅದೇ ರೀತಿ ಎಲ್ಲರೂ ಒಟ್ಟಾಗಿ ಹೋರಾಟ ನಡೆಸುವುದು ಎಲ್ಲರಿಗೂ ಗೌರವ. ಬುಧವಾರ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಆಯೋಜಿಸಿರುವ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗಿಯಾಗಿ, ಸರ್ಕಾರದ ಭರವಸೆಯಂತೆ…

Read More

ವಿಜಯಪುರ: ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಮುಸ್ಲಿಮರ ಓಲೈಕೆ ಮಾಡುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಬಿಜೆಪಿ ಸೇರುತ್ತಲೇ ‘ಹಿಂದೂ ಹುಲಿ’ ಎಂದು ಬಿರುದು ಇರಿಸಿಕೊಂಡು ಓಡಾಡುತ್ತಿದ್ದಾರೆ. ಅವರು ಸಮಾನತೆ ಸಾರಿರುವ ಬಸವನಾಡಿನಲ್ಲಿ ಜನಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳರು ಇಸ್ಲಾಂ ಹಾಗೂ ಧರ್ಮಗುರು ತನ್ವೀರ್‌ ಪೀರಾ ಹಾಶ್ಮಿ ವಿರೋಧಿ ನಡೆ ಅನುಸರಿಸುತ್ತಾ ಬಂದಿದ್ದಾರೆ.  ಅವರ ಮುಸ್ಲಿಂ ದ್ವೇಷದಿಂದಲೇ ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದ ನೆಪ ಮಾಡಿಕೊಂಡು ಧರ್ಮಗುರು ತನ್ವೀರ್‌ ಪೀರಾ ಹಾಶ್ಮಿ ವಿರುದ್ಧ ಐಸಿಸ್ ಸಂಪರ್ಕದ ಆರೋಪ ಮಾಡಿರುವುದಲ್ಲದೆ, ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ- ಮೌಲ್ವಿ ಜೊತೆಗಿನ ಫೋಟೋ ಹಾಕಿ ವೈರಲ್‌ ಮಾಡಿಸಿದ್ದಾರೆ. ಹೀಗೆ ಯತ್ನಾಳ ಅನಗತ್ಯವಾಗಿ ಮತ್ತೊಬ್ಬರ ಚಾರಿತ್ರ್ಯಹರಣದಂಥ ಹೀನಕೃತ್ಯ ಮಾಡಬಾರದು. ಅವರಿಗದು ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.  https://ainlivenews.com/i-welcome-the-judgment-of-honble-supreme-court-amit-shah/ ಇನ್ನು, ಈ ವಿಷಯದ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಬೇಕಿಲ್ಲ. ತಾಕತ್ತಿದ್ದರೆ ಯತ್ನಾಳರೇ ಎನ್ಐಎ ಮೂಲಕವೋ, ಇಲ್ಲವೆ ಅವರೇ ನೇರವಾಗಿ…

Read More

ಬೆಂಗಳೂರು:- ಕೆಎಸ್‌ಎಟಿ ಕಲಾಪ ವೇಳೆ ಅಶ್ಲೀಲ ವಿಡಿಯೋ ಪ್ರದರ್ಶಿಸಿ ದುಷ್ಕೃತ್ಯ ಎಸಗಲಾಗಿದೆ. ಘಟನೆ ಬಗ್ಗೆ ಕೆಎಸ್‌ಎಟಿಯ ಅಧಿಕಾರಿ ಬೆಂಗಳೂರಿನ ಸೆಂಟ್ರಲ್ ಸೆನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ವೇಳೆ ಲಾಗಿನ್ ಆಗಿ ಆಕ್ಷೇಪಾರ್ಹ ವಿಡಿಯೋ ಪ್ರದರ್ಶನ ಮಾಡಿದ ಅನಾಮಧೇಯ ವ್ಯಕ್ಯಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಅಧಿಕಾರಿಗಳು ಆನ್‌ಲೈನ್ ಕಲಾಪ ಸ್ಥಗಿತಗೊಳಿಸಿದರು. ಈ ಬಗ್ಗೆ ಐಟಿ ಕಾಯ್ದೆ ಸೆಕ್ಷನ್ 67, 67a ಅಡಿ ಪ್ರಕರಣ ದಾಖಲಾಗಿದೆ. ಅಶ್ಲೀಲ ವಿಡಿಯೋ ಪ್ರದರ್ಶಿಸಿದ ಕಿಡಿಗೇಡಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಾರದ ಹಿಂದೆ ಕರ್ನಾಟಕ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಲಾಪದ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ ಘಟನೆ ನಡೆದಿತ್ತು. ಇದೀಗ ಮತ್ತೆ ಅಂತಹ ಘಟನೆ ನಡೆದಿದೆ.

Read More

ನವದೆಹಲಿ: ಪ್ರಶ್ನೆ ಕೇಳಲು (Cash for Query) ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಉಚ್ಛಾಟನೆಯಾಗಿರುವ ಟಿಎಂಸಿ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಶ್ರೀಘ್ರವೇ ತಮ್ಮ ಅಧಿಕೃತ ನಿವಾಸವನ್ನು ತೊರೆಯಲಿದ್ದಾರೆ. ಲೋಕಸಭೆಯ (Lok Sabha) ವಸತಿ ಸಮಿತಿಯು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದು 30 ದಿನಗಳ ಒಳಗಡೆ ತನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಕೇಳಿಕೊಳ್ಳುವಂತೆ ಸೂಚಿಸಿದೆ. ಮೊಯಿತ್ರಾ ಅವರಿಗೆ ವಿಶೇಷ ಕೋಟಾದ ಅಡಿಯಲ್ಲಿ ಸಚಿವಾಲಯವು ಮನೆಯನ್ನು ಮಂಜೂರು ಮಾಡಿದೆ. ಲೋಕಸಭೆಯಿಂದ ಉಚ್ಛಾಟನೆ ಮಾಡಿದ್ದನ್ನು ಪ್ರಶ್ನಿಸಿ ಮೊಯಿತ್ರಾ ಸುಪ್ರೀಂ ಕೋರ್ಟ್‌ನಲ್ಲಿ (Suprme Court) ಅರ್ಜಿ ಸಲ್ಲಿಸಿದ್ದಾರೆ.  ನೀತಿ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಲೋಕಸಭೆಯಿಂದ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಲಾಗಿದೆ. https://ainlivenews.com/see-how-hot-and-hot-this-cold-can-be/ ಮೊಯಿತ್ರಾ ಅವರು ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ರೂ. ನಗದು ಮತ್ತು ಐಷಾರಾಮಿ ಉಡುಗೊರೆ ವಸ್ತುಗಳು ಸೇರಿದಂತೆ ಲಂಚ ಪಡೆದ…

Read More

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಯ ಕುರಿತು ಯಾರೇ ಶಾಸಕರು ಚರ್ಚಿಸಿದರೂ ಅದಕ್ಕೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತಿದೆ. ಈ ಭಾಗದ ಸಮಸ್ಯೆಯ ಬಗ್ಗೆ ಯಾರೇ ಶಾಸಕರು ಚರ್ಚೆ ನಡೆಸಿದರೇ ಅದಕ್ಕೆ ಉತ್ತರ ಕೊಡಲು ಸರ್ಕಾರ ಬದ್ಧವಾಗಿದೆ ಎಂದರು. https://ainlivenews.com/i-welcome-the-judgment-of-honble-supreme-court-amit-shah/ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಸಮಗ್ರ ಕರ್ನಾಟಕ ನಮ್ಮದು. ವಿಧಾನಸಭೆಯಲ್ಲಿ ಸಹಕಾರ ಕೊಡಲು ನಾವು ಸಿದ್ಧ. ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಪ್ರಸ್ತಾವನೆ ಬರಲಿ ಖಂಡಿತವಾಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ತೆರವು ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹತ್ತಿರ ಮಾತನಾಡಿ ಎಂದರು. ಪಾರ್ಲಿಮೆಂಟ್ ಅಫೆರ್ಸ್, ಸ್ಪೀಕರ್ ಅವರ ಸ್ವತ್ತು ಅದು. ಕಲಾಪದಲ್ಲಿ ಬಿಜೆಪಿ ನಾಯಕರ ಮಧ್ಯೆ ಒಮ್ಮತ ಮೂಡದ…

Read More

ಬೆಂಗಳೂರು:- ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆ ಮಾಡಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಭಾಸ್ಕರ್ ಬಂಧಿತ ಆರೋಪಿ. ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ದೊಮ್ಮಲೂರಿನ ನಿಯಂತ್ರಣ ‌ಕೊಠಡಿಗೆ ಸೋಮವಾರ ರಾತ್ರಿ 11.30ರ ಸುಮಾರಿಗೆ ಕರೆ‌ ಮಾಡಿದ್ದ ಆರೋಪಿ, ರಾಜಭವನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಸಿದ್ದ. ಮಾಹಿತಿ‌ ಗೊತ್ತಾಗುತ್ತಿದ್ದಂತೆ ಸ್ಥಳೀಯ ‌ಪೊಲೀಸರು ರಾಜಭವನಕ್ಕೆ ‌ಭೇಟಿ ನೀಡಿ ರಾತ್ರಿಯಿಡೀ ಶೋಧ ನಡೆಸಿದ್ದರು. ಇದೊಂದು ಹುಸಿ ಬೆದರಿಕೆಯೆಂದು ಘೋಷಿಸಿದ್ದರು. ಬೆದರಿಕೆ ಕರೆ ಮಾಡಿದ್ದ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಯೊಬ್ಬನನ್ನು ಗುರುತಿಸಲಾಗಿದೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ಕರೆ ಮಾಡಿದ್ದನೆಂಬುದು ಗೊತ್ತಾಗಿಲ್ಲ. ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Read More

ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ (B S Yediyurappa) ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಮಾಜಿ ಸಚಿವ ವಿ.ಸೋಮಣ್ಣ (V Somanna) ಬ್ಯಾಟ್ ಬೀಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ, ನನ್ನ ನೋವು ನನಗೆ ಗೊತ್ತು, ಅವರ ನೋವು ಅವರಿಗೆ ಗೊತ್ತು ಹಾಗಾಗಿ ಅವರು ಮಾತನಾಡಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. https://ainlivenews.com/see-how-hot-and-hot-this-cold-can ಯಡಿಯೂರಪ್ಪ ಹಿರಿಯ ನಾಯಕರಾಗಿದ್ದು, ಅವರಿಗೆ ಯತ್ನಾಳ್ (Basangouda Patil Yatnal) ಹೀಗೆ ಹೇಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಹಿರಿತನ ಅನ್ನೋದು ನಡತೆಯಲ್ಲಿ ಇರಬೇಕು. ನಾನು 40 ವರ್ಷ ರಾಜಕಾರಣ ಮಾಡಿದರೂ ಯಾರೂ ಬೊಟ್ಟು ಮಾಡಿ ತೋರಿಸುವ ಹಾಗೆ ಮಾಡಿಕೊಂಡಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಕಟುಕಿದ್ದಾರೆ. ಇದೇ ವೇಳೆ ದೆಹಲಿಯಿಂದ ನನಗೆ ಕರೆ ಬಂದಿದ್ದು, ಎರಡು ಮೂರು ದಿನದಲ್ಲಿ ದೆಹಲಿಗೆ ಹೋಗುತ್ತೇನೆ. ನಮ್ಮ ನೋವು ಹೇಳಿಬರುತ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ.

Read More

ರಾಯಚೂರು:- ದೇವರಾಜ ಅರಸು ಮ್ಯಾಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗೆ ವಿದ್ಯಾರ್ಥಿಗಳ ಆಕ್ರೋಶ ಹೊರ ಹಾಕಿದ್ದಾರೆ. ತಡರಾತ್ರಿ ವಾರ್ಡನ್ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿನಿಯರು ಸಿಡಿದೆದ್ದಿದ್ದು, ಬಾಲಕಿಯರು ವಾರ್ಡನ್ ಗೆ ಹಿಗ್ಗಾಮುಗ ತರಾಟೆಗೆ ತಗೊಂಡಿದ್ದಾರೆ. ವಾರ್ಡನ್ ಗಿರಿಜಾ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ತಡ ರಾತ್ರಿ ಪ್ರೊಟೆಸ್ಟ್ ನಡೆಸಲಾಗಿದ್ದು, ದೇವರಾಜ ಅರಸು ಮ್ಯಾಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗೆ ವಿದ್ಯಾರ್ಥಿಗಳ ಆಕ್ರೋಶ ಹೊರ ಹಾಕಿದೆ. ಉಪ್ಪು ಇಲ್ಲದ ಸೊಪ್ಪನ ಊಟ, ತರಕಾರಿ ಇಲ್ಲದ ಸಾರು, 15 ದಿನಕ್ಕೆ ಒಮ್ಮೆ ಶೌಚಾಲಯ ಕ್ಲೀನ್, ಕಸ ಬಳಿಯೋಕೆ ಒಂದು ಬಾರಿ ಇಲ್ಲ, ಸೊಳ್ಳೆ ಬತ್ತಿ ಇಲ್ಲ, ಸೋಪು ಕಿಟ್ ಇಲ್ಲ ಬಳಸಕ್ಕೆ ನೀರಿಲ್ಲ ಕುಡಿಯೋಕೆ ನೀರಿಲ್ಲ ಸ್ನಾನ ಮಾಡದೆ ಕಾಲೇಜಿಗೆ ಹೋಗುತ್ತೇವೆ ವಾರ್ಡನ್ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.

Read More