Author: AIN Author

ಭಾರತದಲ್ಲಿ ಉಗುರು ಕತ್ತರಿಸುವ ಬಗ್ಗೆ ಕೆಲ ರೂಢಿಯಿದೆ.  ಭಾರತದಲ್ಲಿ ಸ್ನಾನದ ನಂತ್ರ ಉಗುರು ಕತ್ತರಿಸಬಾರದು ಎನ್ನುತ್ತಾರೆ. ಅದ್ರಲ್ಲೂ ರಾತ್ರಿ ಉಗುರನ್ನು ಕತ್ತರಿಸಬಾರದು ಎಂದು ಹಿರಿಯರು ಹೇಳ್ತಾರೆ. ನಾವು ಯಾಕೆ ರಾತ್ರಿ ಉಗುರು ಕತ್ತರಿಸಬಾರದು ಎಂದು ಮರುಪ್ರಶ್ನೆ ಮಾಡಿದ್ರೆ ಅನೇಕರಿಗೆ ಅದ್ರ ಬಗ್ಗೆ ತಿಳಿದಿಲ್ಲ. ಹಿರಿಯರು ಹೇಳ್ತಾರೆ,ಅದಕ್ಕೆ ಕತ್ತರಿಸಬಾರದು, ಕಾರಣ ಕೇಳ್ಬೇಡಿ ಎನ್ನುತ್ತಾರೆ. ಯಾಕೆ ರಾತ್ರಿ ಉಗುರು ಕತ್ತರಿಸಬಾರದು? ಅದಕ್ಕೆ ಕಾರಣವೇನು ಎಂಬುದನ್ನು ನಾವು ಹೇಳ್ತೇವೆ. ಇದು ಮೂಢನಂಬಿಕೆಯೇ?: ಅನೇಕರು ಇದನ್ನು ಮೂಢನಂಬಿಕೆ ಎಂದುಕೊಂಡಿದ್ದಾರೆ. ಆದ್ರೆ ಇದಕ್ಕೆ ಯಾವುದೇ ದೃಢವಾದ ಆಧಾರ ಅಥವಾ ತರ್ಕಬದ್ಧ ವಿವರಣೆಯಿಲ್ಲ. ಆದಾಗ್ಯೂ, ಮೂಢನಂಬಿಕೆಗಳನ್ನು ತಳ್ಳಿಹಾಕುವ ಹೆಸರಿನಲ್ಲಿ ನಾವು ತಲೆಮಾರುಗಳಿಂದ ನಮಗೆ ಹಸ್ತಾಂತರಿಸಲ್ಪಟ್ಟ ಬಹಳಷ್ಟು ಉಪಯುಕ್ತ ಸಲಹೆಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ಇದು ಮೂಢನಂಬಿಕೆ ಎನ್ನುವ ಮೊದಲು ಅದರ ಹಿಂದಿನ ಕಾರಣವನ್ನು ತಿಳಿಯಬೇಕಾಗುತ್ತದೆ. ಕಾರಣ ಒಂದು : ಆ ದಿನಗಳಲ್ಲಿ ವಿದ್ಯುತ್ ಇರಲಿಲ್ಲ. ಆದುದರಿಂದ ಜನರು ರಾತ್ರಿ ಹೆಚ್ಚು ಗಾಢವಾದ ಬೆಳಕನ್ನು ಹೊಂದಿರಲಿಲ್ಲ. ಅನೇಕರು ರಾತ್ರಿಯಾಗ್ತಿದ್ದಂತೆ ಮಲಗ್ತಿದ್ದರು. ಮತ್ತೆ ಕೆಲವರು ಮಂದ ಬೆಳಕಿನ…

Read More

ಸೂರ್ಯೋದಯ: 06.33 AM, ಸೂರ್ಯಾಸ್ತ : 05.55 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಪಾಡ್ಯ 03:09 AM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ಮೂಲ 09:47 AM ತನಕ ನಂತರ ಆಷಾಢ ಯೋಗ: ಇವತ್ತು ಗಂಡ01:25 PM ತನಕ ನಂತರ ವೃದ್ಧಿ ಕರಣ: ಇವತ್ತು ಬವ 02:04 PM ತನಕ ನಂತರ ಬಾಲವ 03:09 AM ತನಕ ನಂತರ ಕೌಲವ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 03.44 AM to 05.14 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:48 ನಿಂದ ಮ.12:32 ವರೆಗೂ ಮೇಷ ರಾಶಿ :ಎಲ್ಲ ಸಾಮರ್ಥ್ಯ ಇದ್ದರು ವಿದೇಶ ಪ್ರವಾಸ ಏಕೆ ಅಡತಡೆ? ಕೆಲವರಿಗೆ ಮದುವೆ ವಿಳಂಬ ಏಕೆ?ಕೆಲವರಿಗೆ ಹಣಕಾಸಿನಲ್ಲಿ ಸಮಸ್ಯೆ…

Read More

ಬೆಳಗಾವಿ:- ಜಿಲ್ಲೆಯ ಅಥಣಿ ತಾಲೂಕಿನ ಯಲಹಡಗಿ ಗ್ರಾಮದಿಂದ ಅಥಣಿ ಮತ್ತು ಯಕಂಚ್ಚಿಗೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ವೇಳೆ ಸಿದ್ರು ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆ ಆಗ್ತಿದೆ ಬೆಳಗ್ಗೆ 7 ಘಂಟೆಗೆ ಬಸ್ ಗೋಸ್ಕರ ನಿಲ್ದಾಣದಲ್ಲಿ ಕಾದು ಕಾದು ಸುಸ್ತ ಆಗ್ತಾ ಇದ್ದಾರೆ ವಿದ್ಯಾರ್ಥಿಗಳು ಯಾವುದೇ ಬಸ್ಸು ನಿಲ್ಲಿಸೋದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ಸಿಗದೆ ವಿದ್ಯಾರ್ಥಿಗಳು ವಾಪಸ್ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆದಷ್ಟು ಬೇಗನೆ ಎಲ್ಲಾ ಬಸ್ ಗಳು ನಿಲ್ಲಿಸಿ ವಿದ್ಯಾರ್ಥಿಗಳನ್ನು ತೊಗೋಂದ ಹೋಗಬೇಕು ಎಂದರು. ಈ ಹಿಂದೆ ಎರಡು ಬಾರಿ ಅಥಣಿ ಬಸ್ ಡಿಪೋ ಮ್ಯಾನೇಜರ್ ಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು ಕ್ಯಾರೇ ಎನ್ನದ ಡಿಪೋ ಮ್ಯಾನೇಜರ್ ನ ವಿದ್ಯಾರ್ಥಿಗಳು ಮತ್ತು ಪಾಲಕರು ತರಾಟೆಗೆ ತೆಗೆದುಕೊಂಡರು. ಅದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಊರಿನ ಯುವಕರು ಗ್ರಾಮಕ್ಕೆ ಕರೆಸಿ ಮಾತನಾಡಿ ದಿನಾಲೂ ಬೆಳಿಗ್ಗೆ ಬಸ್ ಬಿಡುವುದಾಗಿ…

Read More

ಬೆಳಗಾವಿ:- ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ, ಗುಂಡೇವಾಡಿ, ಬಳ್ಳಿಗೇರಿ ಗ್ರಾಮಗಳಲ್ಲಿ ಮನಬಂದಂತೆ ದಾಳಿ ನಡಿಸಿರುವ ಹುಚ್ಚು ನಾಯಿ, ಗುಂಡೇವಾಡಿ ಗ್ರಾಮದಲ್ಲಿ ಬೃಹತ್ತ ಪ್ರಮಾಣದಲ್ಲಿ ಜರುಗಿದ್ದ ಜಾತ್ರಾ ಮಹೋತ್ಸವದ ಲ್ಲಿ ನಾಯಿ ನುಗ್ಗಿ ಹನ್ನೆರಡು ಜನರಿಗೆ ಗಾಯಗೊಳಿಸಿದ್ದು, ಪಾರ್ಥನಹಳ್ಳಿ ಗ್ರಾಮದಲ್ಲಿ ಮೂರು ಚಿಕ್ಕಮಕ್ಕಳು ಮಹಿಳೆಯರು ಸೇರಿದಂತೆ ಆರು ಜನ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಒಂಬತ್ತು ವರ್ಷದ ಬಾಲಕ ಮುಖಕ್ಕೆ ಮೈ ಭಾಗಗಳಿಗೆ ತೀವ್ರಗಾಯವಾಗಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ವಿಫರಿತ ಗಾಯಕ್ಕೆ ಒಳಗಾದ ಒಂಬತ್ತು ವರ್ಷದ ಬಾಲಕನ್ನು ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಸಾಂಗಲಿ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಇನ್ನುಳಿದವರನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ “ಆಂಟಿರಾಬಿಜ್” ಚುಚ್ಚುಮದ್ದು ನೀಡಿಲಾಗಿ, ಒಟ್ಟು ಸಂಜೆ ವರೆಗೆ 18 ಕೇಸೆಸ್ ದಾಖಲಾದ ಬಗ್ಗೆ ತಾಲೂಕಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

Read More

ಅಜೇಯವಾಗಿ ಫೈನಲ್​ ಪ್ರವೇಶಿಸಿ, ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ ಹೀನಾಯವಾಗಿ ಸೋಲುಂಡುವ ಮೂಲಕ ಟೀಮ್​ ಇಂಡಿಯಾ ಅಸಂಖ್ಯಾತ ಕ್ರೀಡಾಭಿಮಾನಿಗಳಿಗೆ ನಿರಾಸೆ ಉಂಟುಮಾಡಿತು. ಇಂದಿಗೂ ಈ ಪಂದ್ಯವನ್ನು ನೆನೆದರೆ ಭಾರತೀಯರಲ್ಲಿ ಬೇಸರ ತುಂಬಿಕೊಳ್ಳುತ್ತದೆ. ಫೈನಲ್​ ಸೋಲಿನಿಂದ ತೀವ್ರವಾಗಿ ಕುಗ್ಗಿ ಹೋಗಿದ್ದ ನಾಯಕ ರೋಹಿತ್​ ಶರ್ಮ ಅಂದಿನಿಂದ ಇಂದಿನವರೆಗೂ ಈ ಬಗ್ಗೆ ಮುಕ್ತವಾಗಿ ಮಾತನಾಡಿರಲಿಲ್ಲ. ಕೊನೆಗೂ ಮೌನ ಮುರಿದಿರುವ ರೋಹಿತ್​, ಮುಕ್ತ ಮನಸ್ಸಿನಿಂದ ಎಲ್ಲವನ್ನು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಚಾಟಿಂಗ್​ನಲ್ಲಿ ಎಲ್ಲವನ್ನು ತಿಳಿಸಿದ್ದಾರೆ. ರೋಹಿತ್​ ಖಿನ್ನತೆಗೆ ಜಾರಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇನ್​ಸ್ಟಾಗ್ರಾಂ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತಿದೆ. ಫೈನಲ್​ ಪಂದ್ಯ ಸೋಲಿನಿಂದ ರೋಹಿತ್​ ತುಂಬಾ ಕುಗ್ಗಿರುವಂತೆ ಮತ್ತು ಇನ್ನೂ ಪೂರ್ತಿಯಾಗಿ ಅದರಿಂದ ಹೊರ ಬರದಿರುವುದು ಗೋಚರವಾಗುತ್ತದೆ. ಮೊದಲ ಕೆಲವು ದಿನಗಳಲ್ಲಿ ಸೋಲನ್ನು ಮರೆತು ಹೇಗೆ ಹಿಂತಿರುಗಬೇಕು ಎಂದು ನನಗೆ ತಿಳಿದಿರಲಿಲ್ಲ. ಏನು ಮಾಡಬೇಕೆಂಬುದು ಸಹ ನನಗೆ ತಿಳಿದಿರಲಿಲ್ಲ. ನಿಮಗೆ ಗೊತ್ತಾ, ನನ್ನ…

Read More

ಬೆಳಗಾವಿ:- ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು, ಕಾಂಗ್ರೆಸ್​ ದುರಾಡಳಿತಕ್ಕೆ ಎಷ್ಟು ಹಣ ಬಂದರೂ ಸಾಕಾಗಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ದುರಾಡಳಿತಕ್ಕೆಎಷ್ಟು ಹಣ ಬಂದರೂ ಸಾಕಾಗಲ್ಲ, ಈ ಮೂಲಕ ಜನರಿಗೆ ಕಿರುಕುಳ ನೀಡಿದರೆ, ಅಧಿವೇಶನ ಮುಗಿದ ಮೇಲೆ ಅಧಿಕಾರ ಬಿಟ್ಟು ತೊಲಗಿ ಎಂದು ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಕ್ಷಣ ವಾಪಸ್ ಪಡೆಯಬೇಕು ಎಂದರು.

Read More

ಬೆಳಗಾವಿ:- ಮುಲ್ಲಾ ಗಳಿಗೆ 10 ಸಾವಿರ ಕೋಟಿ ಘೋಷಿಸಿದ ಸಿಎಂ ಗೆ ರೈತರ ನೆನಪಿಲ್ವಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ . ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ ಅಂದಿದ್ದಾರೆ. ಮಾಡಿದ್ದಾರೆ ಅದು ಮುಲ್ಲಾಗಳಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಅದೇ ರೈತರಿಗೆ ನಯಾಪೈಸೆ ಅನುದಾನವನ್ನ ಕೊಟ್ಟಿಲ್ಲ. ನೀವು ಯಾರಾದರೂ ಮಕ್ಕಳನ್ನ ದತ್ತು ತಗೊಂಡ್ರೆ ಸರ್ಕಾರಕ್ಕೆ ಟ್ಯಾಕ್ಸ್ ಕೊಡಬೇಕು. ತೆರಿಗೆ ಸಂಗ್ರಹಿಸುವ ಬಿಲ್ ಗಳನ್ನು ಸದನದಲ್ಲಿ ಪಾಸ್ ಮಾಡುತ್ತಿದ್ದಾರೆ. 14 ಬಜೆಟ್ ಮಂಡಿಸಿರೋ ಸಿದ್ದರಾಮಯ್ಯ, ಮಕ್ಕಳು ಹಾಲು ಕುಡಿಬೇಕು ಅಂದ್ರೆ 3ರೂಪಾಯಿ ಹೆಚ್ಚಳ ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸರ್ಕಾರ ಜನರ ಮೇಲೆ ವಿವಿಧ ರೀತಿಯಲ್ಲಿ 60 ಟ್ಯಾಕ್ಸ್​ಗಳನ್ನ ಹಾಕುತ್ತಿದೆ. ಸರ್ಕಾರದ ಫ್ರೀ ಯೋಜನೆ ದೊಡ್ಡ ಮೋಸ. ಇಂತಹ ಸಿಎಂಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಲೆವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಬಜೆಟ್…

Read More

ಬೆಂಗಳೂರು:- ಲೋಕಸಭೆ ಕಲಾಪದ ವೇಳೆ ಭಾರಿ ಭದ್ರತಾ ಲೋಪ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಇದರಲ್ಲಿ ಸಂಸದ ಪ್ರತಾಪ್​​​ ಸಿಂಹ ಹೆಸರು ಕೂಡ ಕೇಳಿಬಂದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ವಿದ್ಯಾರ್ಥಿಗಳೊಂದಿಗಿನ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ‘ಸೋಮವಾರ ವಿದ್ಯಾವರ್ಧಕ ಕಾಲೇಜಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳೊಂದಿಗೆ’ ಎಂದು ಬರೆದುಕೊಂಡಿದ್ದಾರೆ. ಮೈಸೂರಿನ ಇಬ್ಬರಿಗೆ ಎಂಟ್ರಿ ಪಾಸ್​ ಬಗ್ಗೆ ಸಂಸದ ಪ್ರತಾಪ್​​​ ಸಿಂಹ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇಬ್ಬರು ಯುವಕರು ಲೋಕಸಭೆಗೆ ನುಗ್ಗಿರೋದು ಆತಂಕ ಸೃಷ್ಟಿಸಿತ್ತು. ಹೀಗೆ ಲೋಕಸಭೆಯಲ್ಲಿ ಆತಂಕ ಸೃಷ್ಟಿಸಿದ್ದವರ ಪೈಕಿ ಒಬ್ಬ ಸಾಗರ್​ ಶರ್ಮಾ ಆಗಿದ್ದರೆ, ಮತ್ತೋರ್ವ ಮೈಸೂರು ಮೂಲದ ವಿದ್ಯಾರ್ಥಿ ಮನೋರಂಜನ್ ಅಂತ ಹೇಳಲಾಗುತ್ತಿದೆ. ಸಂಸದ ಪ್ರತಾಪ್ ಸಿಂಹ ಪಿಎ ಮೂಲಕ ಈ ಇಬ್ಬರು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಗೆ ಎಂಟ್ರಿ ಕೊಟ್ಟಿದ್ದರು ಅನ್ನೋ ಮಾಹಿತಿ ಕೂಡ ಇದೆ.

Read More

ಧಾರವಾಡ:- ತುರ್ತು ಕಾಮಗಾರಿ ಹಿನ್ನೆಲೆ, ಧಾರವಾಡದ ಹಲವು ಭಾಗದಲ್ಲಿ ಡಿಸೆಂಬರ್ 15 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಡಿಸೆಂಬರ್ 15 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 11ಕೆವಿ ಮಾರ್ಗಗಳಲ್ಲಿರುವ ಮುರುಘಾಮಠ, ಮದಿಹಾಳ, ಪತ್ರೇಶ್ವರ ನಗರ, ರಾಜನಗರ, ಹಾವೇರಿಪೇಟ, ನಿಜಾಮುದ್ದಿನ್ ಕಾಲೋನಿ, ಸವದತ್ತಿ ರೋಡ್, ಕಾಮನಕಟ್ಟಿ, ಚರಂತಿಮಠ ಗಾರ್ಡನ್, ಹೆಬ್ಬಳ್ಳಿ ಅಗಸಿ, ಮನಕಿಲ್ಲಾ, ಕಾರ್ಪೋರೇಶನ್ ಸರ್ಕಲ್, ಗಾಂಧಿಚೌಕ, ಸೂಪರ್ ಮಾರ್ಕೆಟ್, ಸುಭಾಶ್ ರೋಡ್, ಶಿವಾಜಿ ರೋಡ್, ಮರಾಠ ಕಾಲೋನಿ, ಜುಬ್ಲೀ ಸರ್ಕಲ್, ಭಾರತ ಹೈಸ್ಕೂಲ್, ಮಾರ್ಕೆಟ್, ಕಮಲಾಪುರ, ಕಲಾಭವನ, ಕರಡಿಗುಡ್ಡ, ವಿದ್ಯಾರಣ್ಯ, ಮರೇವಾಡ ಜಿನ್ನಿಂಗ್ ಫ್ಯಾಕ್ಟರಿ, ವನಹಳ್ಳಿ, ಕವಲಗೇರಿ, ಮಂಗಳಗಟ್ಟಿ, ಅಮ್ಮಿನಭಾವಿ, 33ಕೆವಿ ಉಪ್ಪಿನ ಬೆಟಗೇರಿ, 33ಕೆವಿ ಕುಡಿಯುವ ನೀರಿನ ಸರಬರಾಜು ಘಟಕ, ಮುಕ್ತಿಧಾಮ, ಕೊಳಿಕೇರಿ, ಪೆಂಡಾರ ಓಣಿ, ದರ್ಗಾ ಓಣಿ, ರವಿವಾರ ಪೇಟ, ಶುಕ್ರವಾರ ಪೇಟ, ಅಷ್ಟಗಿ ಜಿನ್ನಿಂಗ್…

Read More

ಬೆಂಗಳೂರು:- ಹಿಂದಿನ ಸರ್ಕಾರದ ಅವಧಿಯಲ್ಲಿನ 40% ಕಮಿಷನ್‌ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಹೈಕೋರ್ಟ್ 45 ದಿನ ಡೆಡ್​ಲೈನ್ ನೀಡಿದೆ. ಅಕ್ರಮವಿಲ್ಲದ‌ ಕಾಮಗಾರಿಗಳಿಗೆ ಶೇ.75ರಷ್ಟು ಬಿಲ್ ಪಾವತಿಸಲಾಗುವುದು. ಆರೋಪಗಳಿರುವ ಗುತ್ತಿಗೆದಾರರಿಗೆ ಶೇ.50ರಷ್ಟು ಬಿಲ್ ಪಾವತಿಸಲಾಗುವುದು ಎಂದು ಹೈಕೋರ್ಟ್​ಗೆ ಅಡ್ವೊಕೇಟ್ ಜನರಲ್‌ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದು,ನ್ಯಾ.ನಾಗಮೋಹನದಾಸ್ ಆಯೋಗದ ತನಿಖೆಗೆ ಕಾಲಾವಕಾಶ ನೀಡಲು ಮನವಿ ಮಾಡಿದರು. ಆದ್ರೆ, 45 ದಿನಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ವರದಿ ನೀಡಲು ಸೂಚನೆ ನೀಡಿರುವ ಹೈಕೋರ್ಟ್, ಸಂಬಂಧಪಟ್ಟ ದಾಖಲೆ ಪರಿಶೀಲಿಸಿ, ಅಹವಾಲು ಆಲಿಸಬೇಕು ಎಂದು ತಿಳಿಸಿ. ಫೆಬ್ರವರಿ 6ಕ್ಕೆ ವಿಚಾರಣೆ ನಿಗದಿಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ.

Read More