Author: AIN Author

ಬೆಳಗಾವಿ: ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಭಿನ್ನಮತ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ವಪಕ್ಷೀಯರಿಗೆ ಕಿವಿಮಾತು ಹೇಳಿದ್ದಾರೆ. ಆಂತರಿಕ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಸದನದಲ್ಲಿ ಹೋರಾಟ ನಡೆಸಿ ಎಂದು ಸೂಚನೆ ನೀಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಸದನದಲ್ಲೇ ಬಿಜೆಪಿ ಭಿನ್ನಮತ ಬಹಿರಂಗವಾಗಿತ್ತು. ಬಸನಗೌಡ ಪಾಟೀಲ್ ಯತ್ನಾಳ್, ಬಿ.ವೈ ವಿಜಯೇಂದ್ರ ಹಾಗೂ ಆರ್. ಅಶೋಕ್ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿ ಗೋಚರಿಸುತ್ತಿತ್ತು. ಇದರ ಪರಿಣಾಮವಾಗಿ ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ರಚನಾತ್ಮಕ ಹೋರಾಟ ರೂಪಿಸುವಲ್ಲಿ ಬಿಜೆಪಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ. https://ainlivenews.com/see-how-hot-and-hot-this-cold-can-be/ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪಕ್ಷದ ನಾಯಕರು ಹಾಗೂ ಶಾಸಕರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಆಂತರಿಕ ಅಸಮಾಧಾನ ಬಿಟ್ಟು ಒಗ್ಗಟ್ಟಿನಿಂದ ಸದನದಲ್ಲಿ ಇರುವಂತೆ ಸೂಚಿಸಿದ್ದಾರೆ. ನಾನು‌ ಚುನಾವಣಾ ನಿವೃತ್ತಿ ಅಷ್ಟೇ ಅಗಿರೋದು‌ ಹೋರಾಟದಿಂದಲ್ಲ. ರಾಜ್ಯದ ಯಾವುದೇ ಮೂಲೆಗೆ ಕರೆದರೂ ನಾನು ಬರುತ್ತೇನೆ.…

Read More

ಮಂಡ್ಯ:- ಹೆಣ್ಣು ಕೊಟ್ಟ ಅತ್ತೆಯನ್ನೇ ಕಿರಾತಕ ಅಳಿಯ ಕೊಂದಿದ್ದು, ಕೊಲೆಯ ಕಾರಣ ಕೇಳಿ ಪತ್ನಿಯೇ ಶಾಕ್ ಆಗಿದ್ದಾಳೆ. ಕಾಂತರಾಜು ಕೊಲೆ ಮಾಡಿರುವ ಆರೋಪಿ. ಮೊನ್ನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದಲ್ಲಿ ನಡೆದಿದ್ದ ಹತ್ಯೆ. ಮಗಳು ಅರ್ಪಿತಾ ಮುಂದೆಯೇ ಮಧ್ಯ ರಾತ್ರಿ 12.30 ರಲ್ಲಿ ಕೊಲೆಯಾಗಿದ್ದ ತಾಯಿ ಪಾರ್ವತಮ್ಮ(50). ರಾತ್ರಿ ಮುಸುಕುದಾರಿಯೊಬ್ಬ ಫಾಲೋ ಮಾಡಿಕೊಂಡು ಬಂದು ಚಾಕುವಿನಿಂದ ಕತ್ತು ಕೂಯ್ದು ಕೊಲೆಗೈದು ಎಸ್ಕೇಪ್ ಆಗಿದ್ದ ಹಂತಕ. ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಮಗಳ ಗಂಡನೇ ಅತ್ತೆಯನ್ನು ಕೊಂದಿರುವ ಆಘಾತಕಾರಿ ವಿಚಾರ ಬಯಲು ಮಾಡಿದ್ದಾರೆ. ಅರ್ಪಿತಾ ತವರು ಮನೆ ಸೇರಲು ಮೃತ ಪಾರ್ವತಮ್ಮಳೆ ಕಾರಣ ಎಂಬ ಸೇಡು ತುಂಬಿಕೊಂಡಿದ್ದ ಆರೋಪಿ ಕಾಂತರಾಜ್ ಹೀಗಾಗಿ ಅತ್ತೆಯನ್ನು ಮುಗಿಸಲು ಸಂಚು ಮಾಡಿದ್ದ. ಮೊನ್ನೆ ಹಬ್ಬದ ಹಿನ್ನಲೆ ಮನೆ ದೇವರ ಪೂಜೆಗೆ ತೆರಳಿದ್ದ ಪಾರ್ವತಮ್ಮ ಹಾಗೂ ಮಗಳು. ಪೂಜೆ ಮುಗಿಸಿ ವಾಪಸ್ಸು ಆಗುವಾಗ ಹಿಂದೆ ಫಾಲೋ ಮಾಡಿದ್ದ ಅಳಿಯ. ಯಾರಿಗೂ ಗುರುತು ತಿಳಿಯದಂತೆ…

Read More

ರಂಗಿತರಂಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಚಿರಪರಿಚಿತರಾದ ನಿರೂಪ್ ಭಂಡಾರಿ ಆ ನಂತರ ರಾಜರಥ, ವಿಕ್ರಾಂತ್ ರೋಣ, ಆದಿ ಲಕ್ಷ್ಮಿ ಪುರಾಣ ಮತ್ತು ವಿಂಡೋ ಸೀಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿಭಾಯಿಸುತ್ತಿರುವ ಯುವ ಪ್ರತಿಭೆ ಸಚಿನ್ ವಾಲಿ ಜೊತೆ ಕೈ ಜೋಡಿಸಿದ್ದಾರೆ. ಕೆಲವೊಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಸಚಿನ್ ವಾಲಿ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೇಳಲು ಸಚಿನ್ ಹೊರಟ್ಟಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರೂಪ್ ಭಂಡಾರಿ ಬಣ್ಣ ಹಚ್ಚಲಿದ್ದಾರೆ. ಸ್ಕ್ರಿಪ್ಟ್ ಪೂಜೆ ಮುಗಿಸಿಕೊಂಡಿರುವ ಈ ಸಿನಿಮಾಗೆ ಅಂಕೆತ್ ಸಿನಿಮಾಸ್‌ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ‌ ನಿರ್ಮಿಸಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ.…

Read More

ಬೆಳಗಾವಿ: ಸರ್ಕಾರದ ವಿರುದ್ಧ ಹೋರಾಟದ ಬದಲಾಗಿ‌ ಮೊದಲು ಆಂತರಿಕ ಭಿನ್ನಮತ ಬಗೆಹರಿಸಲಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದರು. ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುವ ವಿಚಾರವಾಗಿ ಲೇವಡಿ ಮಾಡಿದರು. ಯಡಿಯೂರಪ್ಪ ಅವರು ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಬೇಡ. ಮೊದಲು ಅವರ ಪಕ್ಷವನ್ನು ಸರಿ ಮಾಡಿಕೊಳ್ಳಲಿ. ಆಂತರಿಕ ಕಚ್ಚಾಟ ನಿಲ್ಲಿಸುವ ಕೆಲಸ ಮಾಡಲಿ‌ ಎಂದರು. https://ainlivenews.com/see-how-hot-and-hot-this-cold-can-be/ ಸದನದಲ್ಲಿ ಬಿಜೆಪಿ ಸದಸ್ಯರು ಒಗ್ಗಟ್ಟಿನಿಂದ ಇಲ್ಲ. ಸದನ ನಡೆಯುತ್ತಿದ್ದರೂ ರೈತರ, ಉತ್ತರ ಕರ್ನಾಟಕ, ಬರದ ವಿಚಾರ ಚರ್ಚೆ ಮಾಡುತ್ತಿಲ್ಲ. ಬರ ಪರಿಹಾರ ಕೊಟ್ಟಿಲ್ಲ ಅಂತ ನಮ್ಮ ಮೇಲೆ ಹೇಳ್ತಿದ್ದಾರೆ. ಯಡಿಯೂರಪ್ಪ ಅವರು ಮೊದಲು ಕೇಂದ್ರ ಏನು ಪರಿಹಾರ ಕೊಟ್ಟಿದೆ ಅಂತ‌ ಮಾತಾಡಲಿ ಎಂದು ಸವಾಲು ಹಾಕಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಉಳಿದವರು ಜೋರಾಗಿ ಸರ್ಕಾರದ ಬಗ್ಗೆ ಮಾತಾಡ್ತಾರೆ. ಆದರೆ ಕೇಂದ್ರದ ಬಗ್ಗೆ…

Read More

ಭೋಪಾಲ್:- ಸಿಎಂ ಆದ ಕೂಡಲೇ ಎರಡು ಮಹತ್ವದ ನಿರ್ಧಾರ ಕೈಗೊಂಡಿರುವ ಮೋಹನ್ ಯಾದವ್ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದ್ದಾರೆ. ಅಲ್ಲದೆ ತೆರೆದ ಜಾಗಗಳಲ್ಲಿ ಮಾಂಸ ಮಾರಾಟವನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ. ನಿಗದಿತ ಮಿತಿಯೊಳಗೆ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಲಾಗುವುದು ಎಂದು ಅವರು ಒತ್ತಿ ಹೇಳಿದರು. ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕಗಳ ಅನಧಿಕೃತ ಬಳಕೆಯನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು. ಮೋಹನ್ ಯಾದವ್ ಅವರು ಮಧ್ಯಪ್ರದೇಶದಲ್ಲಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಯುವ ಜನರಿಗಾಗಿ ಶ್ರೇಷ್ಠತೆಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಯಾದವ್ ಹೇಳಿದರು. 52 ಕಾಲೇಜುಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳನ್ನು ಪ್ರಧಾನ ಮಂತ್ರಿಗಳ ಶ್ರೇಷ್ಠ ಕಾಲೇಜುಗಳು ಎಂದು ಕರೆಯಲಾಗುವುದು. ಎಲ್ಲಾ ಕಾಲೇಜುಗಳಲ್ಲಿ ಡಿಜಿಟಲ್ ಲಾಕರ್‌ ಗಳ ಸೌಲಭ್ಯವಿರುತ್ತದೆ. ಪದವಿ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ನಾವು ಡಿಜಿಟಲ್ ಲಾಕರ್ ಕಾಲೇಜು / ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಸಿಎಂ ಯಾದವ್ ಹೇಳಿದ್ದಾರೆ.

Read More

ಬೆಳಗಾವಿ: ಬರಗಾಲ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮರೋಪಾದಿಯಲ್ಲಿ ಸ್ಪಂದಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನದಲ್ಲಿ ಮಾತನಾಡಿದ ಅವರು, ಬರ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಉತ್ತರ ಕರ್ನಾಟಕದ ಹೆಬ್ಬಾಗಿಲು ಕುಂದಾನಗರಿ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಹೊಸ ಸರ್ಕಾರ ಬಂದು ಆರು ತಿಂಗಳು ಕಳೆಯುತ್ತಿದೆ. ಕಳೆದ 50 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಭೀಕರ ಬರಗಾಲ ರಾಜ್ಯದಲ್ಲಿ 400- 450 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅಂತಹ ಈ ಸಂದರ್ಭದಲ್ಲಿ ರೈತರು ತೀವ್ರವಾದಂತಹ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗಮನ ಸೆಳೆದರು. ಸಂಕಷ್ಟದಲ್ಲಿ ಇರುವ ರೈತರು ರಾಜ್ಯ ಸರ್ಕಾರದ ಕಡೆಗೆ ಮುಖ ಮಾಡಿಕೊಂಡಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ, ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ರಾಜ್ಯದಲ್ಲಿ ಒಬ್ಬ ಅನುಭವಿ ಶಾಸಕರು ಮುಖ್ಯಮಂತ್ರಿಗಳಾಗಿ ಆ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಸನ್ಮಾನ್ಯ ಎಸ್.ಎಂ.ಕೃಷ್ಣ…

Read More

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ ಒಟ್ಟು 34,115 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. ಈ ಪೈಕಿ ಉತ್ತರ ಕರ್ನಾಟಕ ಭಾಗದಲ್ಲಿಯೇ 9,461 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ರಾಜ್ಯದ ಒಟ್ಟಾರೆ ಹೂಡಿಕೆಯಿಂದ 13,308 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಹೆಚ್ಚುವರಿ ರೂ 13,911 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವ ಫಾಕ್ಸ್‌ಕಾನ್‌ನ ಪ್ರಸ್ತಾವನೆಯನ್ನು ಸಮಿತಿಯು ಅನುಮೋದಿಸಿದೆ. ಫಾಕ್ಸ್‌ಕಾನ್‌, ಈಗಾಗಲೇ ರಾಜ್ಯದಲ್ಲಿ ರೂ 8,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಅನುಮೋದನೆ ಪಡೆದಿದೆ. ಜೆಎಸ್‌ಡಬ್ಲ್ಯು ರಿನ್ಯೂ ಎನರ್ಜಿ ಫೋರ್ ಲಿಮಿಟೆಡ್ (ರೂ 4,960 ಕೋಟಿ ), ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ (ರೂ 3,804 ಕೋಟಿ ), ಟೊಯೊಟಾ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ (ರೂ 3237.30 ಕೋಟಿ ), ಟಿಆರ್‌ಐಎಲ್‌…

Read More

ಬೆಳಗಾವಿ:- ಬೆಂಗಳೂರು ಸಹಿತ ರಾಜ್ಯದ ಎಲ್ಲ ಕಡೆ ಕಂದಾಯ ಬಡಾವಣೆಗಳ ನೋಂದಣಿಯನ್ನು ಸ್ಥಗಿತ ಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿಯ ಎಸ್‌.ಆರ್‌.ವಿಶ್ವನಾಥ್‌ ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಕಂದಾಯ ಬಡಾವಣೆ ಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗುವುದು. ಈ ಸಂಬಂಧ ಸಮಿತಿ ರಚಿಸಿ ಅದರ ಬಗ್ಗೆ ನಿಗಾವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದೇ ವಿಷಯಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ನೀಡಿರುವ ಲಿಖೀತ ಉತ್ತರದಲ್ಲೂ, ಕಂದಾಯ ನಿವೇಶನಗಳನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ವ್ಯವಸ್ಥಿತ ಬದಲಾಣೆ ತರಲು ಇಲಾಖೆಯು ಬದ್ಧವಾಗಿದ್ದು, ಇಲಾಖೆಯಲ್ಲಿ ಇದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸರಕಾರದ ನಿಯಮಗಳನ್ನು ಉಲ್ಲಂಘಿಸಿ ನೋಂದಣಿ ಮಾಡಿರುವ ಉಪ ನೋಂದಣಾಧಿಕಾರಿಗಳ ವಿರುದ್ಧ ಇಲಾಖಾ ಹಂತದಲ್ಲಿ ವಿಚಾರಣೆ ಕೈಗೊಳ್ಳಲಾಗುತ್ತದೆ. ಅಲ್ಲದೆ, ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸಲು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುಂದ್ರಾಂಕಗಳ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಲಾಗಿದೆ ಎಂದರು

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರ ಅಲಿ ಅಬ್ಬಾಸ್​ನನ್ನು ಎನ್​ಐಎ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಅಲಿ ಅಬ್ಬಾಸ್ ಮನೆ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ದಿನ‌ ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳುಹಿಸಲಾಗಿತ್ತು. ಇದಾದ ಬಳಿಕ ದಾಖಲೆಗಳ‌ ಪರಿಶೀಲನೆ ನಡೆಸಿ ಮತ್ತಷ್ಟು ವಿಚಾರಣೆಗಾಗಿ ಮತ್ತೆ ವಶಕ್ಕೆ ಪಡೆದಿದ್ದರು. ಸದ್ಯ ಈಗ ಅಬ್ಬಾಸ್ ಅಲಿಯನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸ್ತಿದ್ದಾರೆ. ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿ ವಾಸವಾಗಿದ್ದ ಅಲಿ ಅಬ್ಬಾಸ್ ಪೇಟಿವಾಲ ಎಂಬಾತನ ಮನೆಯ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿ ತೀವ್ರ ಶೋಧ ನಡೆಸಿದ್ದರು. ಬಳಿಕ ಮರುದಿನ ಮತ್ತೆ ಅಬ್ಬಾಸ್ ಮನೆಯ ಮೇಲೆ ದಾಳಿ ಮಾಡಿ ಪರಿಶೀಲಿಸಿ 16,42,000 ಹಣ ಸೀಜ್ ಮಾಡಿದ್ದರು. ಮೊಬೈಲ್​, ಲ್ಯಾಪ್​ಟಾಪ್​​​ ಪರಿಶೀಲನೆ ನಡೆಸಿ ಐಸಿಸ್​​ ಶಂಕಿತ ಉಗ್ರ ಅಬ್ಬಾಸ್​ನನ್ನ ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದರು. ನಂತರ ದಾಖಲೆಗಳ ಪರಿಶೀಲನೆ ನಡೆಸಿ ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ…

Read More

ಬೆಂಗಳೂರು:- ಎಲೆಕ್ಟ್ರಿಕ್ ವಾಹನಗಳ ಮೇಲಿನ ಶೇ 20ರ ತೆರಿಗೆ ಪ್ರಸ್ತಾವವನ್ನು ಕರ್ನಾಟಕ ಸರ್ಕಾರ ಹಿಂಪಡೆದಿದೆ. ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಶಾಸಕರ ಒತ್ತಾಯದ ನಂತರ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ರೆಡ್ಡಿ ಅವರು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಮಸೂದೆಯ ಭಾಗವಾಗಿ ಹೊಸ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 20 ರಷ್ಟು ಜೀವಿತಾವಧಿ ತೆರಿಗೆಯನ್ನು ಪ್ರಸ್ತಾಪಿಸಿದ್ದರು. 20ರಷ್ಟು ತೆರಿಗೆ ಪ್ರಸ್ತಾವನೆಯನ್ನು ಕೈಬಿಡಲು ಸಚಿವರು ಒಪ್ಪಿಗೆ ಸೂಚಿಸಿದ ಬಳಿಕ ವಿಧೇಯಕವನ್ನು ವಿಧಾನಸಭೆ ಅಂಗೀಕರಿಸಿತು. ಮಸೂದೆಯ ತಿದ್ದುಪಡಿ ಆವೃತ್ತಿಯು ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ 10ರ ತೆರಿಗೆಯನ್ನು ಪ್ರಸ್ತಾಪಿಸಿದೆ. ಮಸೂದೆಯ ಪ್ರಕಾರ, 10 ಲಕ್ಷದಿಂದ 15 ಲಕ್ಷ ಮೌಲ್ಯದ ಹಳದಿ ಬೋರ್ಡ್ ಕಾರುಗಳು ಮತ್ತು 1,500-12,000 ಕೆಜಿ ಸಾಮರ್ಥ್ಯದ ಉತ್ತಮ ವಾಹನಗಳ ಮೇಲೆ ಸರ್ಕಾರವು ಜೀವಿತಾವಧಿಯ ತೆರಿಗೆ ವಿಧಿಸುವುದಿಲ್ಲ ಎಂದು ರೆಡ್ಡಿ ತಿಳಿಸಿದ್ದಾರೆ.

Read More