Author: AIN Author

ಬೆಳಗಾವಿ: ನಾನು ದೇಶೀಯ ಆಕಳಿನ ತುಪ್ಪವನ್ನು (Ghee) ಕೆಜಿಗೆ 5,000 ರೂ.ನಂತೆ ಮಾರುತ್ತಿದ್ದೇನೆ. ನನ್ನ ಬಳಿ ಗಿರ್ ತಳಿಯ 250 ಹಸುಗಳಿವೆ. ಅದರ ತುಪ್ಪವನ್ನು ಕೆಜಿಗೆ 2,500 ರೂ. ನಂತೆ ಮಾರುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ (Belagavi) ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಜೋಳ ಬೆಳೆದರೆ ಗೋ ಸಂಪತ್ತು ಉಳಿಯುತ್ತದೆ. ತೊಗರಿಯಿಂದ ಗೋ ಸಂಪತ್ತು ಉಳಿಯುವುದಿಲ್ಲ. ನನ್ನದೇ ಒಂದು ಗೋಶಾಲೆ ಇದೆ. ತುಪ್ಪ ಮಾರುವುದರೊಂದಿಗೆ ವಿಭೂತಿ, ಕರ್ಪೂರ ಹಾಗೂ ಕುಂಕುಮವನ್ನು ತಯಾರಿಸುತ್ತಿದ್ದೇನೆ. ಅಲ್ಲದೇ ಸಾಬೂನು ಕೂಡಾ ತಯಾರು ಮಾಡುತ್ತಿದ್ದೇನೆ. ಗೋಮೂತ್ರವನ್ನು ಸಹ 130 ರೂ.ಗೆ ಮಾರುತ್ತಿದ್ದೇನೆ. ಆಕಳಿನ ಮಜ್ಜಿಗೆಯನ್ನು 30 ರೂ.ಗೆ ಹಾಗೂ ದೇಶೀಯ ಆಕಳಿನ ಹಾಲನ್ನು 100 ರೂ.ಗೆ ಮಾರುತ್ತಿದ್ದೇನೆ. ನಮ್ಮಲ್ಲಿ ಗೋ ಸಂಪತ್ತು ಉಳಿಯ ಬೇಕಾದರೆ ಜೋಳಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಎಂದರು. https://ainlivenews.com/do-you-know-why-you-should-not-cut-your-nails-at-night-heres-why/ ನಮ್ಮ ಭಾಗದಲ್ಲಿ ಅಕ್ಕಿಯ ಬದಲಾಗಿ ಜೋಳ ಕೊಡಿ. 10…

Read More

ಬೆಂಗಳೂರು:  ಖಾಸಗಿ ಶಾಲೆಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದು  ಖಾಸಗಿ ಶಾಲೆಗಳ ಮೇಲೆ RTO ದಾಳಿ ನಡೆಸಿದೆ. ನಗರದ ವಿವಿಧ ಖಾಸಗಿ ಶಾಲಾ ವಾಹನಗಳ ಮೇಲೆ ದಾಳಿ ನಡೆಸಿದ್ದು  ನಿಯಮ ಉಲ್ಲಂಘನೆ ಮಾಡುತ್ತಿರುವ ನೂರಾರು ‌ಬಸ್ ಗಳ ವಿರುದ್ಧ  ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ಖಾಸಗಿ ಬಸ್ ಗಳ ನಿಯಮ ಉಲ್ಲಂಘನೆ ಖಾಸಗಿ ಶಾಲಾ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಪತ್ತೆ ಒಮ್ನಿ ವಾಹನಗಳಲ್ಲಿ ನಿಯಮಮೀರಿ ಮಕ್ಕಳನ್ನು ಪಿಕ್ ಡ್ರಾಪ್ ಮಾಡುತ್ತಿರುವ ಶಾಲೆಗಳು ನಿಯಮ ಉಲ್ಲಂಘನೆ ಮಾಡಿದ ಒಮ್ನಿ, ಬಸ್ ಗಳನ್ನು ಸೀಜ್ ಮಾಡಿದ ಅಧಿಕಾರಿಗಳು ಜಯನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಶಾಲೆಗಳ ಬಸ್ಗಳನ್ನ ತೀವ್ರ ತಪಾಸಣೆ ಮಾಡುತ್ತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಬಸ್ ಒಮ್ಮಿ ವಾಹನಗಳಲ್ಲಿ ಸೇಫ್ಟಿ ಇಲ್ಲ ಅಂತ ಸಾಲು ಸಾಲು ಹೀಗಾಗಿ ವಿವಿಧ ಶಾಲೆಗಳ ಬಸ್ ಗಳನ್ನ ತಪಾಸಣೆ ಮಾಡ್ತಿರೋ ಸಾರಿಗೆ…

Read More

ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ (Malashree) ಅವರು ಪುತ್ರಿಯ ಜೊತೆ ಸಿದ್ಧಿವಿನಾಯಕ ದೇವರ ದರ್ಶನ ಪಡೆದಿದ್ದಾರೆ. ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಪಡ್ಡೆಹುಡುಗರ ಕನಸಿನ ರಾಣಿಯಾಗಿ ಮರೆದವರು. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಜ್ಯೂ.ಮಾಲಾಶ್ರೀ ಆರಾಧಾನಾ (Aradhana Ram) ಕೂಡ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ. ಈ ಬೆನ್ನಲ್ಲೇ ದೇವರ ಸನ್ನಿಧಿಗೆ ಮಾಲಾಶ್ರೀ-ಆರಾಧಾನಾ ಭೇಟಿ ನೀಡಿದ್ದಾರೆ. 5ಕ್ಕೂ ಹೆಚ್ಚು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿರುವ ಸಿದ್ಧಿ ವಿನಾಯಕನ ದೇವಸ್ಥಾನಕ್ಕೆ ಮಾಲಾಶ್ರೀ ಕುಟುಂಬವು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Read More

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಬಾಲಿವುಡ್ ನಟಿ, ಹಾಗೂ ಡಾನ್ಸರ್ ಜರೀನ್ ಖಾನ್ ಅವರಿಗೆ ಷರತ್ತುಬದ್ಧ ಜಾಮೀನು (Bail) ಸಿಕ್ಕಿದೆ. ವಿದೇಶ ಪ್ರವಾಸ ಮಾಡದಂತೆ ನಿರ್ಬಂಧದ ಜೊತೆಗೆ ಮೂವತ್ತು ಸಾವಿರ ರೂಪಾಯಿಗಳ ಬಾಂಡ್ ಅನ್ನು ಭದ್ರತೆಗೆ ನೀಡುವಂತೆ ಆದೇಶಿಸಲಾಗಿದೆ. ನಟಿ ಜರೀನ್ ಖಾನ್‌ಗೆ (Zareen Khan) ಈ ಹಿಂದೆ ಸಂಕಷ್ಟ ಎದುರಾಗಿತ್ತು. ವಂಚನೆ ಪ್ರಕರಣದ ಸಂಬಂಧಿಸಿದಂತೆ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ವಂಚನೆ ಪ್ರಕರಣ ಸಂಬಂಧವಾಗಿ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು.. 2018ರಲ್ಲಿ ಕೋಲ್ಕತಾದಲ್ಲಿ (Kolkata) ಆಯೋಜಿಸಿದ್ದ ದುರ್ಗಾ ಪೂಜೆ ಕಾರ್ಯಕ್ರಮದಲ್ಲಿ ಜರೀನ್‌ಗೆ ಆಹ್ವಾನ ನೀಡಲಾಗಿತ್ತು. ಈ ಸಮಾರಂಭಕ್ಕಾಗಿ ಸಂಭಾವನೆ ಕೂಡ ನೀಡಲಾಗಿತ್ತು. ಆದರೆ ಅಂದು ನಟಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ವಿಚಾರವಾಗಿ ನಟಿಯ ವಿರುದ್ದ ಆಯೋಜಕರು ಎಫ್‌ಐಆರ್ ದಾಖಲಿಸಿದ್ದರು. 2018ರಿಂದ ದಾಖಲಾದ ಪ್ರಕರಣದ ಕುರಿತು ನಟಿ ಕೋರ್ಟ್ ವಿಚಾರಣೆಗೆ ಹಾಜರಾಗಲಿಲ್ಲ.

Read More

ಕಲಬುರಗಿ: ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿಅವರ ತಾಯಿ ಹಿಟ್ ಆ್ಯಂಡ್​ ರನ್​ಗೆ ಬಲಿಯಾಗಿದ್ದಾರೆ. ಕಲಬುರಗಿಯ ಸೇಡಂ ರಿಂಗ್ ರಸ್ತೆಯಲ್ಲಿರುವ ಟೊಯೋಟಾ ಶೋರೂಂ ಬಳಿ ಅರವಿಂದ ಅರಳಿ ಅವರ ತಾಯಿ ಸುಮಿತ್ರಾಗೆ ಬೈಕ್ ಬಂದು ಗುದ್ದಿದೆ. ಪರಿಣಾಮ ಸುಮೀತ್ರಾಬಾಯಿ (75) ಮೃತಪಟ್ಟಿದ್ದಾರೆ. https://ainlivenews.com/do-you-know-why-you-should-not-cut-your-nails-at-night-heres-why/ ಬೀದರ್‌ನಿಂದ ಕಲಬುರಗಿಯಲ್ಲಿರುವ ಅಳಿಯನ ಮನೆಗೆ ಬಂದಿದ್ದ ಸುಮಿತ್ರಾ ಅವರು, ಟೊಯೋಟಾ ಶೋರೂಂ ಬಳಿ ರಸ್ತೆ ದಾಟುತ್ತಿದ್ದಾಗ ಅಪರಿಚಿತ ಬೈಕ್ ಬಂದು​ ಡಿಕ್ಕಿ ಹೊಡಿದೆ.​ ಬೈಕ್​ ಗುದ್ದಿದ ರಭಸಕ್ಕೆ ಸುಮಿತ್ರಾ ಸ್ಥಳದಲ್ಲೇ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.  

Read More

ರಾಕಿಂಗ್ ಸ್ಟಾರ್ ಯಶ್ (Yash) ಅವರು ಅದೆಷ್ಟೇ ಬ್ಯುಸಿಯಾಗಿದ್ದರು. ಕುಟುಂಬದಲ್ಲಿ ವಿಚಾರದಲ್ಲಿ ರಾಜಿ ಆಗೋ ಮಾತೇಯಿಲ್ಲ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಹೊಸ ಸಿನಿಮಾ ಕೆಲಸದ ಬ್ಯುಸಿ ಶೆಡ್ಯೂಲ್ ನಡುವೆಯೂ ಮುದ್ದು ಮಗಳು ಐರಾ (Ayra Yash) ಹುಟ್ಟುಹಬ್ಬವನ್ನು ಗ್ರ್ಯಾಂಡ್‌ ಆಗಿ ಯಶ್‌-ರಾಧಿಕಾ ಆಚರಿಸಿದ್ದಾರೆ ಯಶ್-ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಬರ್ತ್‌ಡೇಯನ್ನು ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಡಿಸೆಂಬರ್ 2ರಂದು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಯಿತು. ಐರಾಸ್ ವಿಂಟರ್ ಲ್ಯಾಂಡ್ ಥೀಮ್‌ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಇದು ಐರಾಗೆ 5ನೇ ವರ್ಷದ ಹುಟ್ಟುಹಬ್ಬದ ಸ್ಪೆಷಲ್ ಆಗಿದೆ. 2.12.2028ರಂದು ನನ್ನ ಏಂಜಲ್ ನಮ್ಮ ಜೀವನಕ್ಕೆ ನಂದ ಸ್ಪೆಷಲ್ ಡೇ ಇದು. ಸಂತೋಷವನ್ನು ತಂದುಕೊಟ್ಟ ಮುದ್ದು ಮಗಳಿಗೆ 5 ವರ್ಷವಾಗಿದೆ ಅಂದರೆ ನಂಬಲು ಆಗ್ತಿಲ್ಲ. ಲವ್ ಯೂ ಮೈ ಲಿಟಲ್ ಗರ್ಲ್ ಎಂದು ನಟಿ ರಾಧಿಕಾ ಪಂಡಿತ್ (Radhika Pandit) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಐರಾ ಹುಟ್ಟುಹಬ್ಬದ ಸೆಲೆಬ್ರೇಶನ್‌ನ ಸ್ಪೆಷಲ್ ವಿಡಿಯೋ ಕೂಡ ನಟಿ ಶೇರ್…

Read More

ನವದೆಹಲಿ: ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಜಿಗಿದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣದ ಕುರಿತು ಭದ್ರತಾ ಲೋಪಕ್ಕೆ (Security Breach) ಸಂಬಂಧಿಸಿದಂತೆ ಕನಿಷ್ಠ ಎಂಟು ಲೋಕಸಭಾ ಸಿಬ್ಬಂದಿಯನ್ನು (Lok Sabha Personnel) ಅಮಾನತುಗೊಳಿಸಲಾಗಿದೆ. ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ ಒಟ್ಟು ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ (Parliament) ಭವನದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಪಾಸ್ ಪಡೆದು ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಸಂದರ್ಶಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಇನ್ನಿಬ್ಬರು ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಐವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೋರ್ವ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿದಿದೆ.ಬಂಧಿತ ಆರೋಪಿಗಳನ್ನು ಸಾಗರ್ ಶರ್ಮಾ, ಮನೋರಂಜನ್, ನೀಲಂ ಆಜಾದ್, ವಿಕ್ಕಿ ಶರ್ಮಾ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ.…

Read More

ಹುಬ್ಬಳ್ಳಿ: ದೇಶದ ಪ್ರಜಾಪ್ರಭುತ್ವದ ದೇಗುಲವಾಗಿರುವ ಸಂಸತ್ ಮೇಲೆ ಅಧಿವೇಶನ ನಡೆದ ಸಮಯದಲ್ಲಿ, ಆರು ಜನರು ಸೇರಿ ಕುತಂತ್ರದಿಂದ ಸಂಸತ್ ಒಳಗೆ ದಾಳಿ ಮಾಡಿ ಸ್ಮೋಕ್ ಬಾಂಬ್ ಸಿಡಿಸಿ, ದೇಶದ ಮಾನ ಹರಾಜು ಹಾಕಿರುವ ಈ ಕೃತ್ಯವು ಯಾವುದೇ ಭಯೋತ್ಪಾದನೆ ಕೃತ್ಯಕ್ಕೆ ಕಡಿಮೆ ಇಲ್ಲದಂತಹ ಹಾಗೂ ದೇಶದ್ರೋಹಕ್ಕೆ ಸಮನಾದ ಕೆಲಸವಾಗಿದೆ ಎಂದು ಖಂಡಿಸುತ್ತಾ,ಇವರನ್ನು ಯಾವುದೇ ಕಾರಣಕ್ಕೂ ಕ್ಷಮೆ ತೋರದೆ ದೇಶದ್ರೋಹದ ಕಾಯ್ದೆ ಅಡಿ ಇವರನ್ನು ಶಿಕ್ಷಿಸಬೇಕೆಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಭಾಸ್ಕರ ಜಿತೂರಿ ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದೇಶದ್ರೋಹಿ ಕೃತ್ಯ ನಡೆಸಿರುವವರನ್ನು ಖಂಡಿಸುವುದನ್ನು ಬಿಟ್ಟು,ಇವರಿಗೆ ಸಂಸತ್ ಪ್ರವೇಶದ ಪಾಸು ನೀಡಿರುವ ಸಂಸದರಾದ ಶ್ರೀ ಪ್ರತಾಪ ಸಿಂಹರನ್ನು ಸಂಸದರ ಸ್ಥಾನದಿಂದ ಉಚ್ಛಾಟಿ ಸಬೇಕೆಂದು ವಿಪಕ್ಷಗಳ ಆಗ್ರಹದಲ್ಲಿ ರಾಜಕೀಯದ ವಾಸನೆ ಎದ್ದು ಕಂಡು ಬರುತ್ತಿದೆ. ಈ ಕು ಕೃತ್ಯ ಮಾಡಿ ದೇಶದ ಮಾನ ಹರಾಜು ಹಾಕಿರುವವರ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕು ಅಥವಾ…

Read More

ಬೆಂಗಳೂರು: ಲೋಕಸಭೆಯ (Lok Sabha) ಮೇಲೆ ದಾಳಿ ನಡೆಸಿದ್ದ ಮೈಸೂರು (Mysuru) ಮೂಲದ ಮನೋರಂಜನ್‌ (Manoranjan) ಮೂರು ಬಾರಿ ಸಂಸದ ಪ್ರತಾಪ್ ಸಿಂಹ (Pratap Simha) ಕಚೇರಿಯಿಂದ ಪಾಸ್ (Pass) ಪಡೆದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಕಳೆದ ಅಧಿವೇಶನದ ಸಮಯದಲ್ಲಿ ಹೊಸ ಸಂಸತ್ ವೀಕ್ಷಣೆ ನೆಪದಲ್ಲಿ ಎರಡು ಬಾರಿ ಮನೋರಂಜನ್ ಪಾಸ್‌ ಪಡೆದಿದ್ದ. ಪಾಸ್ ಪಡೆದು ವೀಕ್ಷಕರ ಗ್ಯಾಲರಿಯವರೆಗೂ ಇರುವ ಭದ್ರತಾ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದಾನೆ. ಹಾಗೆ ಆರೋಪಿ ಮನೋರಂಜನ್ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಆರೋಪಿ ಮನೋರಂಜನ್​ಗೆ ಬೆಂಗಳೂರಿನ ಜೊತೆ ಅವಿನಾಭಾವ ಸಂಬಂಧವಿದೆ. ಈತನ ಬಹುತೇಕ ಸ್ನೇಹಿತರು ಬೆಂಗಳೂರಿನವರಾಗಿದ್ದು (Bengaluru) ತನಿಖೆ ನಡೆಯುತ್ತಿದೆ. ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ. ಬಳಿಕ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ವಿವಿಪುರಂ ಬಳಿ ಇರುವ ಬೆಂಗಳೂರು…

Read More

ಬೆಂಗಳೂರು: ಸಂಸತ್ (Parliament) ಭವನದಲ್ಲಿ ಸ್ಮೋಕ್ ದಾಳಿ (Smoke Bomb) ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಸಂಸದ ಪ್ರತಾಪ್ ಸಿಂಹ (Prathap Simha) ವಿರುದ್ಧ ಕಾಂಗ್ರೆಸ್ (Congress) ಕಾರ್ಯಕರ್ತರು (Activist) ಪ್ರತಿಭಟನೆ (Protest) ನಡೆಸಿದ್ದಾರೆ. ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಪ್ರತಾಪ್ ಸಿಂಹ ಹಾಗೂ ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಬಂಧನಕ್ಕೆ ಆಗ್ರಹಿಸಿ ಕಾರ್ಯಕರ್ತರು ಪ್ರತಾಪ್ ಸಿಂಹ ಫೋಟೋಗೆ ಬೆಂಕಿ ಹಚ್ಚಿದ್ದು, ಅವರ ಪ್ಲೇ ಕಾರ್ಡ್‌ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಕೂಡಲೇ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More