Author: AIN Author

ಹುಬ್ಬಳ್ಳಿ- ನಮಗೆ ಸ್ವಾತಂತ್ರ್ಯ ಸಿಕ್ಕು 7 ದಶಕ ಕಳೆದಿದೆ..ಆದ್ರೆ ಇನ್ನು ದೇಶದ ಬಹುತೇಕ ಕಡೆ ಅಸ್ಪ್ರಶ್ಯತೆ ಜೀವಂತವಾಗಿದೆ.ಕೆಳಜಾತಿ ಮೇಲ್ಜಾತಿ ಅನ್ನೋ ಪೆಂಡಭೂತ ನಮ್ಮ ಸಮಾಜದಲ್ಲಿದೆ.ದಲಿತರು ಸವರ್ಣೀಯರು ನಡುವಿನ ಕಂದಕ ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿದೆ.ಇದಕ್ಕೆ ತಾಜಾ ಉದಾಹರಣೆಗೆ ಮತ್ತೊಂದು ಜಿಲ್ಲೆ ಸೇರಿದೆ.ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲೂ ಈ ಸಾಮಾಜಿಕ ಪಿಡುಗು ಜೀವಂತವಾಗಿದೆ.. ಧಾರವಾಡ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತರಿಗೆ ಅಘೋಷಿತ‌ ಬಹಿಷ್ಕಾರ ಹಾಕಲಾಗಿದೆ. ಗ್ರಾಮದ ಹೊಟೆಲ್, ಕಟಿಂಗ್,ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇಲ್ಲ.ಇದು ಆ ಗ್ರಾಮದ ಯುವಕರನ್ನ ಕೆರಳಿಸಿದೆ.ನಮಗೂ ಸಮಾನತೆ ಬೇಕು ಎನ್ನುತ್ತಿದ್ದಾರೆ. ಒಂದು ಕಡೆ ಹೊಟೆಲ್ ನಲ್ಲಿ ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಉಪಹಾರ. ಇನ್ನೊಂದು ಕಡೆ ಕಟಿಂಗ್ ಶಾಪ್ ನಲ್ಲಿ ಹೋದ್ರೆ ಪಂಚಾಯತ್ ಗೆ ಹೋಗಿ ಎನ್ನುತ್ತಿರೋ ಕಟಿಂಗ್ ಅಂಗಡಿ ಮಾಲೀಕರು..ಮತ್ತೊಂದು ಕಡೆ ತಮಗಾದ ಅನ್ಯಾಯ ತೋಡಿಕೊಳ್ತಿರೋ ದಲಿತ ಸಮುದಾಯದ ಜನ..ಎಸ್ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಜಿಲ್ಲೆಯಲ್ಲಿ.ಎಸ್ ಧಾರವಾಡ ಜಿಲ್ಲೆಯ ರೊಟ್ಟಿಗವಾಡ ಗ್ರಾಮದಲ್ಲಿ ಅಸ್ಪ್ರಶ್ಯತೆ ಅನ್ನೋ ಪೆಂಡಭೂತ ಇನ್ನು ಜೀವಂತವಾಗಿದೆ.ಅಂಬೇಡ್ಕರ್…

Read More

ಬೆಂಗಳೂರು:   ಸಂಸತ್ತಿನ ಮೇಲೆ ದಾಳಿಯಾಗಲು ಸಹಕರಿಸಿದ ಸಂಸದ ಪ್ರತಾಪ್‌ ಸಿಂಹಾ ಅವರನ್ನು ಅಮಾನತು ಮಾಡುವುದಿರಲಿ ಕನಿಷ್ಠ ವಿಚಾರಣೆಗೂ ಒಳಪಡಿಸಲಿಲ್ಲ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದೆ! ಭದ್ರತಾ ಲೋಪವನ್ನು ಚರ್ಚಿಸಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ನ 5 ಸಂಸದರನ್ನು ಕಲಾಪದಿಂದ ಅಮಾನಾತು ಮಾಡಲಾಗಿದೆ. ಭದ್ರತಾ ಲೋಪದ ಬಗ್ಗೆ ಮಾತನಾಡಲು ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ಹಾಗೂ ಲೋಕಸಭಾ ಸ್ಪೀಕರ್ ಗೆ ಯಾಕಿಷ್ಟು ಭಯ. ಇದು ಬಿಜೆಪಿ ಪ್ರಾಯೋಜಿತ ಘಟನೆಯೇ? ಎಂದು ಕಿಡಿಕಾರಿದ್ದಾರೆ.

Read More

ಕಲಬುರಗಿ: ಪ್ರಯಾಣಿಕನಂತೆ ನಟಿಸಿ ಆಟೋದಲ್ಲಿದ್ದ ಮಹಿಳೆಯ  ಸರ ಕಿತ್ತು ಎಸ್ಕೇಪ್ ಆಗಿರುವ ಘಟನೆ ಕಲಬುರಗಿ ನಗರದ ಓಲ್ಡ್ RTO ಕ್ರಾಸ್ ಬಳಿ ನಡೆದಿದೆ. ಸೂಪರ್ ಮಾರ್ಕೆಟಿನಿಂದ ಹೊರಟಿದ್ದ ಮಹಿಳೆಯ ಆಟೋ ಹತ್ತಿದ ಆರೋಪಿ ಬ್ಲೇಡ್ ತೋರಿಸಿ ಮಹಿಳೆಗೆ ಬೆದರಿಕೆ ಆಗಿದ್ದಾನೆ. ಮಹಿಳೆಗೆ ಬೆದರಿಸಿ 1.20 ಲಕ್ಷ ಮೌಲ್ಯದ ಚಿನ್ನದ ಸರ ಕಿತ್ತು ಎಸ್ಕೇಪ್  ಆಗಿದ್ದು, ಜಸ್ಟ್ 24 ಗಂಟೆಯಲ್ಲಿ ಆರೋಪಿ ಮೆಹಬೂಬ್ ಶೇಖ್ ಅರೆಸ್ಟ್  ಆಗಿದ್ದಾನೆ. ಇನ್ನೂ ಈ ಘಟನೆ ಸಂಬಂಧ ಬ್ರಹ್ಮಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಸಮಯಕ್ಕೆ ಸರಿಯಾಗಿ ಸರ್ಕಾರಿ ಸಾರಿಗೆ ಬಸ್ಸ ಬೀಡಲು ಅಗ್ರಹಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದರು. ನಗರದ ಕೆಲಗೇರಿ ಬಳಿಯ ಧಾರವಾಡ ಗೋವಾ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಹಾಗೂ ಸಚಿವರ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಮಕ್ಕಳ ಹೋರಾಟಕ್ಕೆ ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ಕೂಡಾ ಸಾಥ ನೀಡಿದರು. ಇನ್ನೂ ಪ್ರತಿಭಟನೆ ತಿವ್ರಗೊಂಡ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಬಂದ್ ಆಗಿತ್ತು. ವಾರದ ಎರಡು ದಿನದಲ್ಲಿ‌ಮಾತ್ರ ಸಮಯಕ್ಕೆ ಸರಿಯಾಗಿ ಬಸ್ಸ ಬರುತ್ತೆ, ಉಳಿದ ದಿನ ಬಸ್ಸ ಬರದೆ ನಾವು ಒರದಾಟ ಮಾಡಬೇಕಾಗಿದೆ. ಸಮಯಕ್ಕೆ ಶಾಲೆಗೆ ತೆರಳಲು‌ಆಗುತ್ತಿಲ್ಲ. ಜೊತೆಗೆ ಇದರಿಂದಾಗಿ ನಮ್ಮ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಹಾಗಾಗಿ ಈ ಕೂಡಲೇ ನಮ್ಮಗೆ ಸಾರಿಗೆ ಬಸ್ಸನಿಂದಾಗುತ್ತಿರುವ ತೊಂದರೆ ಆದಷ್ಟು ಬೇಗ ಸರಿ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಾವು ಹಮ್ಮಿಕೊಳ್ಳಬೇಕಾಗುತ್ತದೆ ಎಂದು…

Read More

ಬೆಳಗಾವಿ: ಲೋಕಸಭೆಯಲ್ಲಿ ಸ್ಮೋಕ್ ದಾಳಿ ನಡೆಸಿದ ಆರೋಪಿ ಮನೋರಂಜನ್ ಹಿನ್ನೆಲೆ ಬಗ್ಗೆ ಕರ್ನಾಟಕ ಪೊಲೀಸರು ತನಿಖೆ ಮಾಡಬೇಕು ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಮಾತನಾಡಿದ ಅವರು,‌‌ನಿನ್ನೆ ಮನೋರಂಜನ್ ದೇಶಕ್ಕೆ ಮನರಂಜನೆ ಕೊಟ್ಟಿದ್ದಾನೆ. ವಿಶ್ವಗುರು ನರೇಂದ್ರ ಮೋದಿಯವರನ್ನು ದೇವರು ಎಂದು ಮನೋರಂಜನ್ ಪರಿಗಣಿಸುತ್ತಿದ್ದರು ಎಂದು ಅವರ ತಂದೆ ಹೇಳಿದ್ದಾರೆ ಎಂದರು. ಫೇಕ್ ಅಂಧಭಕ್ತರು ಯಾವ ರೀತಿ ಇರ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ. ರಾಷ್ಟ್ರದ ಪ್ರಖ್ಯಾತಿಗೆ ಕಪ್ಪು ಬಣ ಬಳಿದಿದ್ದಾರೆ. ವಿಶ್ವಗುರು ಆಡಳಿತ ವೈಫಲ್ಯವನ್ನು ಇಡಿ ವಿಶ್ವವೇ ನೋಡಿದೆ. ಆದ್ದರಿಂದ ವಿಶ್ವಗುರು ಇದರ ಹೊಣೆ ಹೊರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಡಿಸೆಂಬರ್ 13 ರಂದು ಯೋಧರು, ಪೊಲೀಸರು ಪಾರ್ಲಿಮೆಂಟ್ ರಕ್ಷಣೆ ಮಾಡಿದ ದಿನವಾಗಿದೆ. ಇವರೆಲ್ಲ ಅಂತಹ ದಿನವನ್ನೇ ಹುಡುಕಾತ್ತಾರೆ‌. https://ainlivenews.com/do-you-know-why-you-should-not-cut-your-nails-at-night-heres-why/  ಡಿಸೆಂಬರ್ 6, ಬುದ್ದ ಹುಟ್ಟಿದ ದಿನಗಳನ್ನೇ ಇವರು ಹುಡುಕುತ್ತಾರೆ. ಮನೋರಂಜನ್ ಹಿನ್ನೆಲೆಯನ್ನು ಕರ್ನಾಟಕ ರಾಜ್ಯದ ಪೊಲೀಸರು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಘಟನೆಯ ಬಗ್ಗೆ ಕೆಲವರು ಕಾಂಗ್ರೆಸ್…

Read More

ಬೆಳಗಾವಿ.ಸುವರ್ಣಸೌಧ‌ ಡಿ.14: ಕೃಷಿ ಇಲಾಖೆ ವತಿಯಿಂದ ಬೆಳಗಾವಿ ಸುವರ್ಣ ಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ, ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಪೂರ್ವಭಾವಿ ಕಾರ್ಯಕ್ರಮ ಅತ್ಯಂತ ಯಶ್ವಸಿಯಾಗಿ ನಡೆಯಿತು.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಸಿರಿಧಾನ್ಯ ಹೆಚ್ಚು ಜನಪ್ರಿಯ ಹಾಗು ಲಾಭದಾಯಕವಾಗಿ ರೂಪುಗೊಂಡಿದೆ. ಸರ್ಕಾರ ಕೂಡ ಇದನ್ನು ಪ್ರೋತ್ಸಾಹಿಸುತ್ತಿದೆ.. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಬೆಳೆಯಬೇಕಿದೆ ಎಂದರು.. ಸಿರಿಧಾನ್ಯ ಅತ್ಯಂತ ಆರೋಗ್ಯಪೂರ್ಣ ಆಹಾರವಾಗಿದ್ದು, ನಮ್ಮ ಪೂರ್ವಜರು ಇದನ್ನು ಬೆಳೆಸಿ, ಬಳಸುತ್ತಿದ್ದರು. ಒಂದು ಹಂತದಲ್ಲಿ ಬಹುಸಂಖ್ಯೆ ಜನರಿಂದ ದೂರ ಉಳಿದಿದ್ದ ಸಿರಿಧಾನ್ಯ ಇದೀಗ ಉಳ್ಳವರ ಪಾಲಿಗೂ ಫೆವರೇಟ್ ಆಗಿದೆ ಎಂದರು.. ಅತ್ಯಂತ ಕಡಿಮೆ ನೀರಿನಲ್ಲಿಯೂ ಬೆಳೆಯಬಹುದಾದ ಸಿರಿಧಾನ್ಯ ಆರ್ಥಿಕವಾಗಿಯೂ ವರದಾನವಾಗಬಲ್ಲದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, 2017 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಸಿರಿಧಾನ್ಯ ಮೇಳಕ್ಕೆ ನೀಡಿದ ಪ್ರೋತ್ಸಾಹ ಹಾಗು ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ಸಿಕ್ಕ ಮನ್ನಣೆ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿ ಆಡಿದ ಕೃಷಿ ಸಚಿವ…

Read More

ಬೆಂಗಳೂರು: ಸಾರಿಗೆ ಇಲಾಖೆ ಅಂದರೆ ಸಾಕು ಸಮಸ್ಯೆಗಳ ಕೂಪ,ಬೇಜವಾಬ್ದಾರಿಗಳ ಯಡವಟ್ಟು ಅನ್ನುವಷ್ಟರ ಮಟ್ಟಿಗೆ ಫೇಮಸ್. ಅಧಿಕಾರಿಗಳು ಹಾಗೂ ರೋಸ್ ಮಾರ್ಟ್ ಕಂಪನಿ ಆಟಕ್ಕೆ ವಾಹನ ಸವಾರರು ಅಂತೂ ಸುಸ್ತು ಆಗ್ಬಿಟ್ಟಿದ್ದಾರೆ.ಯಾಕೆಂದರೆ ಅಕ್ರಮ ತಪ್ಪಲಿ ಎಂಬ ಉದ್ದೇಶದಿಂದ ಆರ್‌ಸಿ, ಡಿಎಲ್‌ಗಳನ್ನು ಸ್ಮಾರ್ಟ್‌ ಕಾರ್ಡ್‌ ರೂಪದಲ್ಲಿ ನೀಡಲಾಗುತ್ತಿದೆ.ಆದರೆ ಇದೇ ವ್ಯವಸ್ಥೆಯಿಂದ ಜನರಿಗೆ ತೊಂದರೆಯಾಗುತ್ತಿದೆ.ಬರೋಬ್ಬರಿ ಹತ್ತು ದಿನದಿಂದ ಆರ್ಟಿಓ ಕಚೇರಿಗಳಲ್ಲಿ ಸ್ಮಾರ್ಟ್ ಕೊರತೆ ಎದುರಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಹಾಗೂ ಅಕ್ರಮ ತಪ್ಪಲಿ ಅಂತ ಆರ್ ಟಿ ಓ ಕಚೇರಿಗಳಲ್ಲಿ ವಾಹನಗಳ ಆರ್ಸಿ ಕಾರ್ಡ್ ಹಾಗೂ ಡಿಎಲ್ ಗಳನ್ನ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ನೀಡಲಾಗ್ತಿದೆ.ಆದ್ರೆ ಇದೇ ವ್ಯವಸ್ಥೆ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡಿದೆ‌..ಹೌದು ಆರ್ಟಿಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸಾಗಿ ದಿನಗಳೇ ಗತಿಸಿದರೂ ಡಿಎಲ್‌ ಕೈಸೇರಿಲ್ಲನೋಂದಣಿ ಪ್ರಮಾಣ ಪತ್ರ ದ್ದೂ ಇದೇ ಸ್ಥಿತಿ ಇದೆ.ವಾಹನ ಖರೀದಿಸಿರುವವರು ಸ್ಮಾರ್ಟ್‌ ಕಾರ್ಡ್‌ ಲಭಿಸದೆ ಇರುವುದರಿಂದ ಕಾರು, ಬೈಕ್‌ಗಳನ್ನು ಖರೀದಿಸಿ ಮನೆಯ ಮುಂದೆ ನಿಲ್ಲಿಸುವ ಸ್ಥಿತಿ ಎದುರಾಗಿದೆ.ನಗರ ಎಲ್ಲ ಆರ್‌ಟಿಒಗಳಲ್ಲಿ ಪರಿಸ್ಥಿತಿ…

Read More

ಬೆಂಗಳೂರು ಗ್ರಾಮಾಂತರ:  ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ‘ಮಾಂಗಲ್ಯ ಭಾಗ್ಯ’ ಎಂಬ ಯೋಜನೆಯ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನ 2024ರ ಜನವರಿ 31ರ ಬೆಳಗ್ಗೆ 11:20 ರಿಂದ 12:20ರವರೆಗೆ ಅಭಿಜಿನ್ ಲಗ್ನದಲ್ಲಿ ಆಯೋಜಿಸಲಾಗಿದೆ. ಮಾಂಗಲ್ಯ ಭಾಗ್ಯ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವರನಿಗೆ 5 ಸಾವಿರ ಹಾಗೂ ವಧುವಿಗೆ 10 ಸಾವಿರ ಸೇರಿದಂತೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಹೀಗೆ ಒಟ್ಟು 55 ಸಾವಿರ ರೂ.ಗಳನ್ನ ದೇವಾಲಯದ ವತಿಯಿಂದ ಭರಿಸಲಾಗುವುದು. ಅದೇ ರೀತಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಸಹ ದೇವಾಲಯ ವತಿಯಿಂದ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 9590300410, 9241297450, 9980907997ನ್ನು ಸಂಪರ್ಕಿಸಬಹುದಾಗಿದೆ. ಮಾಂಗಲ್ಯ ಭಾಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಅರ್ಜಿಯನ್ನು ದೇವಾಲಯದ ಕಾರ್ಯನಿರ್ವಾಹ ಕಚೇರಿಯಲ್ಲಿ ಪಡೆದು ಜನವರಿ 20ರೊಳಗಾಗಿ ಸೂಕ್ತ…

Read More

ಮೈಸೂರು: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ (Security Breach in LokSabha) ಎಸೆದಿದ್ದ ಮನೋರಂಜನ್ ಮೈಸೂರು ಮೂಲದವನಾಗಿದ್ದು, ಪುಸ್ತಕಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದನಂತೆ. ಹಾಗಾದ್ರೆ ಈತನಿಗೆ ಪಾಸ್ ಸಿಕ್ಕಿದ್ದೇಗೆ, ಏನನ್ನೂ ಪರಿಶೀಲನೆ ಮಾಡದೇ ಹಾಗೆ ಪಾಸ್ ವಿತರಣೆ ಮಾಡಿದ್ರಾ..? ಮನೋರಂಜನ್ ಅಪ್ಪ ಏನಂತಾರೆ ಅನ್ನೋದ್ರ ವರದಿ ಇಲ್ಲಿದೆ.  ಸಂಸತ್‍ನಲ್ಲಿ ಹಲ್‍ಚಲ್ ಎಬ್ಬಿಸಿದವರಲ್ಲಿ ಓರ್ವ ಮನೋರಂಜನ್. ಈತ ಮೈಸೂರಿನಲ್ಲಿ ವಾಸವಿದ್ದು, ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದವನು. ಶಿಕ್ಷಣಕ್ಕಾಗಿಯೇ ಕುಟುಂಬಸ್ಥರು ಮೈಸೂರು ಸೇರಿದರು. ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಬೆಂಗಳೂರಿನ ಬಿಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಮನೋರಂಜನ್, https://ainlivenews.com/do-you-know-why-you-should-not-cut-your-nails-at-night-heres-why/ 2016ರಲ್ಲಿ ಕಾಂಬೋಡಿಯಾಗೆ ತೆರಳಿದ್ದ. ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ಮೈಸೂರಿನ ಮನೋರಂಜನ್, ಕ್ರಾಂತಿಕಾರಿ ಪುಸ್ತಕಗಳ ಪ್ರೇಮಿಯಾಗಿದ್ದನಂತೆ. ಮೈಸೂರಿನ ಮನೋರಂಜನ್ ಮನೆಯಲ್ಲಿ ಹಲವಾರು ಐತಿಹಾಸಿಕ ಪುಸ್ತಕ ಪತ್ತೆಯಾಗಿವೆ. ಸುಭಾಶ್ ಚಂದ್ರ ಬೋಸ್, ಸ್ವಾತಿ ಚರ್ತುವೇದಿ, ಅಂಬಾನಿಯ ಐತಿಹಾಸಿಕ ಕ್ರಾಂತಿಕಾರಿ ಪುಸ್ತಕಗಳು ಲಭ್ಯವಾಗಿವೆ.  

Read More

ಬೆಂಗಳೂರು: ರಾಷ್ಟ್ರದ ಅಭಿವೃದ್ಧಿಗೆ ನರೇಂದ್ರ ಮೋದಿ ಬೇಕು ಎಂದು ಮಾಜಿ ವಿ.ಸೋಮಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಸುಳ್ಳು ವಿಚಾರ, ಚುನಾವಣೆ ನಿಲ್ಲೋದು ಬಿಡೋದು ಅನ್ನುವುದಕ್ಕಿಂತ ಹೆಚ್ಚಾಗಿ ನನಗೆ ಅದರ ಅವಶ್ಯಕತೆಯಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು. ದೇಶದ ಜನ ಅಲ್ಲ ಇಡೀ ಜಗತ್ತಿನ  ಜನ ಇವತ್ತಿನ ಸಂದರ್ಭ, ಸನ್ನಿವೇಶಕ್ಕೆ ಮೋದಿಯವರ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳುತ್ತಿದ್ದಾರೆ. ಮೋದಿ ಇಲ್ಲದಿದ್ದರೆ ದೇಶದ ಪರಿಸ್ಥಿತಿ  ಬೇರೆಯಾಗುತ್ತಿತ್ತು ಹಾಗಾಗಿ ದೇಶದ ಬಗ್ಗೆ ಚಿಂತನೆ ಮಾಡೋಣ ಎಂದರು. ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದನ್ನು ಕನಸಿನಲ್ಲಿಯೂ ಕಂಡಿಲ್ಲ. ಯೋಚನೆಯೂ ಮಾಡಿಲ್ಲ. ಚುನಾವಣೆ ನಿಲ್ಲೋದು ಬಿಡೋದು ಅನ್ನುವುದಕ್ಕಿಂತ ಹೆಚ್ಚಾಗಿ ಅದರ ಅವಶ್ಯಕತೆಯಿಲ್ಲ. ವೈಯಕ್ತಿಯ ರಾಜಕೀಯ ಇದೀಗ ಮಾತನಾಡಲಾರೆ, ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ ಎಂದರು.

Read More