Author: AIN Author

 ಬೆಂಗಳೂರು:  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮೊಬೈಲ್‌ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯು ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ ಜಾಬ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್‌ 18 ಆಗಿದೆ. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ…

Read More

ಚೇತನ್ ಕುಮಾರ್ ಹಾಗೂ ರಕ್ಷ್ ಜೋಡಿಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬರ್ಮದ ಶೂಟಿಂಗ್ ಭರದಿಂದ ಸಾಗುತ್ತಿದೆ. ಟೈಟಲ್ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಅಂಗಳದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಬರ್ಮ ಬಳಗದಲ್ಲಿ ಯಾವ ಯಾವ ತಾರೆಯರು ಇರ್ತಾರೆ? ಯಾರು ಚಿತ್ರದ ಭಾಗವಾಲಿದ್ದಾರೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಆದ್ರೀಗ ನಿರ್ದೇಶಕ ಚೇತನ್ ಕುಮಾರ್ ಬರ್ಮಗಾಗಿ ಬಾಲಿವುಡ್ ತಾರೆಯನ್ನು ಕರೆದು ತಂದಿದ್ದಾರೆ. ಬರ್ಮ ಅಖಾಡಕ್ಕೀಗ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದೆ. ಹಿಂದಿ ಮಾತ್ರವಲ್ಲ ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ಶಾವರ್ ಅಲಿ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಆದಿತ್ಯ ನಟನೆಯ ರೆಬಲ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಶಾವರ್ ಅಲಿ, ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿಯೂ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಆರು ವರ್ಷದ ನಂತ್ರ ಮಗದೊಮ್ಮೆ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ಸಿನಿಮಾರಂಗದಿಂದ ಬಣ್ಣದ ಬದುಕು ಆರಂಭಿಸಿದ್ದ ಅವರೀಗ ಟಾಲಿವುಡ್, ಸ್ಯಾಂಡಲ್…

Read More

ಮೊಟ್ಟೆಯಲ್ಲಿ ದೇಹಕ್ಕೆ ದಿನದಲ್ಲಿ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳಿವೆ. ಇಡೀ ಮೊಟ್ಟೆಯು 6 ಗ್ರಾಂ ಪ್ರೋಟೀನ್ ಮತ್ತು ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತದೆ. 44 ಗ್ರಾಂ ತೂಕದ 1 ಬೇಯಿಸಿದ ಮೊಟ್ಟೆ 5.5 ಗ್ರಾಂ ಪ್ರೋಟೀನ್‌ನ್ನು ಒಳಗೊಂಡಿದೆ. 4.2 ಗ್ರಾಂ ಕೊಬ್ಬಿನ ಪ್ರಮಾಣ, 24.6 ಮಿ.ಗ್ರಾಂ ಕ್ಯಾಲ್ಸಿಯಂ, 0.8 ಮಿಗ್ರಾಂ ಕಬ್ಬಿಣ, 5.3 ಮಿಗ್ರಾಂ ಮೆಗ್ನೀಸಿಯಮ್, 86.7 ಮಿಗ್ರಾಂ ರಂಜಕ, 60.3 ಮಿಗ್ರಾಂ ಪೊಟ್ಯಾಸಿಯಮ್, 0.6 ಮಿಗ್ರಾಂ ಸತು, 162 ಮಿಗ್ರಾಂ ಕೊಲೆಸ್ಟ್ರಾಲ್, 13.4 ಮೈಕ್ರೋಗ್ರಾಂ ಸೆಲೆನಿಯಮ್ ಒಳಗೊಂಡಿದೆ. ಮೊಟ್ಟೆಗಳನ್ನು ಸಂಗ್ರಹಿಸಲು ಸರಿಯಾದ ರೀತಿ ಯಾವುದು ? ಆರೋಗ್ಯಕ್ಕೆ ಉತ್ತಮ ಎಂದು ಮನೆಗೆ ಒಂದು ಟ್ರೇ ತಂದಿಟ್ಟು ದಿನಕ್ಕೊಂದು ಮೊಟ್ಟೆ ಎಂದು ಬೇಯಿಸಿ ತಿನ್ಬೋದು ಎಂದು ನೀವು ಪ್ಲಾನ್ ಏನೋ ಮಾಡ್ಬೋದು. ಆದರೆ, ಮೊಟ್ಟೆಗಳನ್ನು ಸಂಗ್ರಹಿಸುವ ಸರಿಯಾದ ಮಾರ್ಗ ಯಾವುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಕೆಲವು ದೇಶಗಳಲ್ಲಿ ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಾರದು ಎಂದು…

Read More

ಓಪನ್ ಸಿಗ್ನಲ್ ವರದಿಯಲ್ಲಿ, 5ಜಿ ಡೌನ್‌ಲೋಡ್ ವೇಗದಲ್ಲಿ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋದ 5ಜಿ ಡೌನ್‌ಲೋಡ್ ವೇಗವು ಏರ್‌ಟೆಲ್‌ಗಿಂತ ಶೇ 25.5ರಷ್ಟು ಹೆಚ್ಚಾಗಿದೆ. ಜಿಯೋದ ಸರಾಸರಿ 5ಜಿ ಡೌನ್‌ಲೋಡ್ ವೇಗವು 344.5 ಎಂಬಿಪಿಎಸ್ ನಲ್ಲಿ ದಾಖಲಾಗಿದ್ದರೆ, ಏರ್‌ಟೆಲ್ 274.5 ಎಂಬಿಪಿಎಸ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ವೊಡಾಫೋನ್ ಐಡಿಯಾ ಸದ್ಯಕ್ಕೆ 5ಜಿ ಸೇವೆಯನ್ನು ಒದಗಿಸುತ್ತಿಲ್ಲ.ಬೆಸ್ಟ್ ಮೊಬೈಲ್ ನೆಟ್ ವರ್ಕ್, ಫಾಸ್ಟೆಸ್ಟ್ ಮೊಬೈಲ್ ನೆಟ್ ವರ್ಕ್, ಬೆಸ್ಟ್ ಮೊಬೈಲ್ ಕವರೇಜ್, ಟಾಪ್ ರೇಟೆಡ್ ಮೊಬೈಲ್ ನೆಟ್ ವರ್ಕ್, ಬೆಸ್ಟ್ ಮೊಬೈಲ್ ವಿಡಿಯೋ ಎಕ್ಸ್ ಪೀರಿಯೆನ್ಸ್, ಬೆಸ್ಟ್ ಮೊಬೈಲ್ ಗೇಮಿಂಗ್ ಎಕ್ಸ್ ಪೀರಿಯೆನ್ಸ್, ಫಾಸ್ಟೆಸ್ಟ್ 5ಜಿ ಮೊಬೈಲ್ ನೆಟ್ ವರ್ಕ್, ಬೆಸ್ಟ್ 5ಜಿ ಮೊಬೈಲ್ ವಿಡಿಯೋ ಎಕ್ಸ್ ಪೀರಿಯೆನ್ಸ್, ಹಾಗೂ ಬೆಸ್ಟ್ 5ಜಿ ಮೊಬೈಲ್ ಗೇಮಿಂಗ್ ಎಕ್ಸ್ ಪೀರಿಯೆನ್ಸ್ ಹೀಗೆ ಒಂಬತ್ತು ಪ್ರಶಸ್ತಿಗಳು ಬಂದಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 5ಜಿ ಮೊಬೈಲ್ ನೆಟ್ ವರ್ಕ್ ಮೆಟ್ರಿಕ್ ನಲ್ಲಿ ಜಿಯೋ 335.75 ಅಂಕ ಪಡೆದ್ದರೆ, ಭಾರ್ತಿ…

Read More

ಸೂರ್ಯೋದಯ: 06.33 AM, ಸೂರ್ಯಾಸ್ತ : 05.56 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ,ಶರತ್ ಋತು, ತಿಥಿ: ಇವತ್ತು ಬಿದಿಗೆ 12:55 AM ತನಕ ನಂತರ ತದಿಗೆ 10:30 PM ತನಕ ನಂತರ ಚೌತಿ ನಕ್ಷತ್ರ: ಇವತ್ತು ಆಷಾಢ 08:10 AM ತನಕ ನಂತರ ಉತ್ತರ ಆಷಾಢ  ಯೋಗ: ಇವತ್ತು ವೃದ್ಧಿ10:17 AM ತನಕ ನಂತರ ಧ್ರುವ ಕರಣ: ಇವತ್ತು ಕೌಲವ 12:55 AM ತನಕ ನಂತರ ತೈತಲೆ 11:44 AM ತನಕ ನಂತರ ಗರಜ 10:30 PM ತನಕ ನಂತರ ವಣಿಜ ರಾಹು ಕಾಲ:10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 03.42 AM to 05.11 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:49 ನಿಂದ ಮ.12:32 ವರೆಗೂ ಮೇಷ ರಾಶಿ: ದಂಪತಿಗಳಿಗೆ ಸಂತಾನ ಭಾಗ್ಯ,ಸಿದ್ಧ ಉಡುಪು…

Read More

ಒಬ್ಬೊಬ್ಬರು ಕೆಲಸವೇ ಇಲ್ಲ ಎಂದು ಕುಳಿತಿದ್ದರೆ, ಮತ್ತಲವರು ತಮಗೆ ಬರುವ ಕೆಲಸವನ್ನೇ ಆದಾಯವಾಗಿ ಪರಿಣಮಿಸುತ್ತಾರೆ. ಅಂತಹದ್ದೇ, ಒಬ್ಬ ಯುವಕನ ಸ್ಟೋರಿ ನಾವು ಹೇಳ್ತೀವಿ ಕೇಳಿ. ಪಾನಿಪುರಿ ಭಾರತದಲ್ಲಿ ಸಾಕಷ್ಟು ಪ್ರಸಿದ್ಧ ಮತ್ತು ವ್ಯಾಪಕವಾಗಿ ಸೇವಿಸುವ ಬೀದಿ ಆಹಾರವಾಗಿದೆ. ಇವುಗಳನ್ನು ಬೀದಿ ಬದಿ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಇವುಗಳನ್ನು ಮಾರುವುದರಿಂದ ಏನು ಲಾಭ ಇದ್ಯಾ? ಎಂದು ಪ್ರಶ್ನೆ ಮಾಡುವವರಿ ಪಾನಿಪುರಿ ಮಾರುವ ವ್ಯಾಪಾರಿಯ ದಿನದ ಆದಾಯ ತಿಳಿದು ಅಂತರ್ಜಾಲದಲ್ಲಿ ಚರ್ಚೆಯ ವಿಷಯವಾಗಿದೆ. ಸೋಶಿಯಲ್​ ಮೀಡಿಯಾ ಬಳಕೆ ದಾರರೊಬ್ಬರು ಪಾನಿಪುರಿ ಮಾರಾಟಗಾರ ಬಳಿ ಹೋಗಿ ‘ನಿಮ್ಮ ದೈನಂದಿನ ಸಂಬಳವನ್ನು ನಾನು ತಿಳಿಯಬಹುದೇ?’ ಎಂದು ಕೇಳುವುದು ಕೇಳುತ್ತಾರೆ. ವ್ಯಾಪಾರಿ 2,500 ರೂ. ‘ದಿನದ ಸಂಬಳ?’ ಎಂದು ಕೇಳಿದಾಗ ಹೌದು ಎಂದು ಉತ್ತರ ನೀಡಿದ್ದಾನೆ. ಇದನ್ನು ಮಾಸಿಕ ವೇತನ ಎಂದು ಲೆಕ್ಕ ಹಾಕಿದರೆ 75,000 ರೂ. ಆಗುತ್ತದೆ. ಎನ್ನುವುದನ್ನು ನಾವು ವಿಡಯೋದಲ್ಲಿ ನೋಡಬಹುದಾಗಿದೆ. ಈ ಪಾನಿಪುರಿ ವ್ಯಾಪಾರಿಯ ಆದಾಯದ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆ ಪ್ರಾರಂಭವಾಯಿತು. ಖಾಸಗಿ ಕಂಪನಿ…

Read More

ದೇಶದಲ್ಲಿ ಮಹಾಮಾರಿ ಕೊರೊನಾ ಆವರಿಸಿದ ಬಳಿಕ ಸಾಕಷ್ಟು ಯುವಕರು ಉದ್ಯೋಗ ಇಲ್ಲದೇ ಹಾಗೂ ಇರುವ ಉದ್ಯೋಗ ಕಳೆದುಕೊಂಡು ಸುಮ್ಮನಿದ್ದಾರೆ. ಅಂತವರು ಈ ಸುದ್ದಿ ಮಿಸ್ ಮಾಡ್ದೆ ಓದಿ. ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತಿರುವವರು ಈ ಕೌಶಲ್ಯಗಳನ್ನು ಹೊಂದಿದ್ದರೆ ನಿಮ್ಮಿಷ್ಟದ ಸಂಸ್ಥೆಯಲ್ಲಿ ಮೊದಲ ಪ್ರಯತ್ನದಲ್ಲೇ ಉದ್ಯೋಗವನ್ನು ಪಡೆಯಬಹುದು. ಆ ಕೌಶಲ್ಯಗಳು ಯಾವುವು ಮತ್ತು ಅವುಗಳನ್ನು ಹೊಂದುವುದು ಹೇಗೆ ಎಂದು ಇಲ್ಲಿ ತಿಳಿಯಿರಿ. ನೀವು ತಂತ್ರಜ್ಞಾನ ಅಥವಾ ಮಾರ್ಕೆಟಿಂಗ್ ಅನ್ನು ಅಧ್ಯಯನ ಮಾಡುತ್ತಿರಲಿ, ನಿಮ್ಮ ವಿಷಯದ ಬಗ್ಗೆ ನೀವು ಬಲವಾದ ಗ್ರಹಿಕೆಯನ್ನು ಹೊಂದಿರಬೇಕು. ಭಾರತವು ಡಿಜಿಟಲೀಕರಣಗೊಳ್ಳುತ್ತಿದೆ ಹೀಗಾಗಿ ಉದ್ಯೋಗಾಕಾಂಕ್ಷಿಗಳ ದೃಷ್ಟಿಕೋನದಿಂದ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪ್ರಪಂಚವನ್ನು ಯಶಸ್ವಿಯಾಗಿ ನ್ಯಾವಿಗೇಟ್ ಮಾಡಲು ಉತ್ತಮ ಜ್ಞಾನವನ್ನು ಹೊಂದಿರುವ ಫ್ರೆಶರ್‌ಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಒಬ್ಬ ವ್ಯಕ್ತಿಯ ಪರಿಣಾಮಕಾರಿ ಸಂವಹನವು ಹೆಚ್ಚು ಬೇಡಿಕೆಯಿರುವ ಕೌಶಲ್ಯಗಳಲ್ಲಿ ಒಂದಾಗಿದೆ. ನಿಮ್ಮಲ್ಲಿರುವ ಕೌಶಲ್ಯಗಳ ಮೇಲೆ ನೀವು ಹೆಚ್ಚು ಗಮನ ಕೊಡಬೇಕು. ಸಕ್ರಿಯ ಆಲಿಸುವಿಕೆ, ಲಿಖಿತ ಮತ್ತು ಮೌಖಿಕ ಸಂವಹನದಂತಹ ಸಾಮರ್ಥ್ಯಗಳನ್ನು…

Read More

ಬೆಳಗಾವಿ:- ಕಾಂಗ್ರೆಸ್ ಸಿಎಲ್‌ಪಿ ಸಭೆಗೆ ನಾನು ಹೋಗಿಲ್ಲ, ಸುಳ್ಳು ಸುದ್ದಿ ಬೇಡ ಎಂದು ಮಾಜಿ ಸಚಿವ ST ಸೋಮಶೇಖರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಸ್ಪಷ್ಟೀಕರಣ ನೀಡಿರುವ ಎಸ್.ಟಿ. ಸೋಮಶೇಖರ್‌, ಕಾಂಗ್ರೆಸ್ ಸಿಎಲ್‌ಪಿ ಸಭೆಗೆ ನಾನು ಹೋಗಿಲ್ಲ. ಬುಧವಾರ ರಾತ್ರಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಹ ಔತಣಕೂಟವನ್ನು ಇಟ್ಟುಕೊಂಡಿದ್ದರು. ಅವರ ಆಯೋಜಿಸಿದ್ದ ಔತಣಕೂಟದಲ್ಲಿ ನಾನು ಭಾಗಿಯಾಗಿ ಊಟ ಮಾಡಿದ್ದೇನೆ ಎಂದು ಹೇಳಿದರು. ಅಲ್ಲದೆ, ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಹ ನನಗೆ ಊಟಕ್ಕೆ ಆಹ್ವಾನ ಕೊಟ್ಟಿದ್ದರು. ಹೀಗಾಗಿ 11 ಗಂಟೆ ವೇಳೆಗೆ ನಾನು ಡಿ.ಕೆ. ಶಿವಕುಮಾರ್ ಕರೆದಿದ್ದ ಔತಣಕೂಟದಲ್ಲಿ ಭಾಗಿಯಾದೆ. ಅಲ್ಲಿಗೆ ಹೋಗಿ ಅವರಿಗೆ ವಿಶ್‌ ಮಾಡಿ ಬಂದೆ ಎಂದು ಎಸ್.ಟಿ. ಸೋಮಶೇಖರ್‌ ಪ್ರತಿಕ್ರಿಯೆ ನೀಡಿದರು. ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ. ಸೋಮಶೇಖರ್‌, ಯಾವ ಲೋಕಸಭೆ ಚುನಾವಣೆಗೂ ಸ್ಪರ್ಧೆ ಮಾಡಲ್ಲ. ಮೈಸೂರಿನಲ್ಲಿ ಸ್ಪರ್ಧೆ ಮಾಡಲು…

Read More

ಬೆಳಗಾವಿ:- ಭ್ರೂಣಹತ್ಯೆ ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಸಚಿವ ದಿನೇಶ್​ ಗುಂಡೂರಾವ್ ಹೇಳಿದ್ದಾರೆ. ಇಂದು ಶೂನ್ಯ ವೇಳೆಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದ ರಾಜ್ಯದಲ್ಲಿ ಭ್ರೂಣಹತ್ಯೆ ತಡೆಗಟ್ಟುವ ಕುರಿತ ವಿಷಯಕ್ಕೆ ಉತ್ತರಿಸಿದ ಸಚಿವರು, ಆರೋಗ್ಯ ಇಲಾಖೆಯು 1994ರಲ್ಲಿ ರಚನೆಗೊಂಡಿರುವ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಅನ್ವಯ ಲಿಂಗ ಪತ್ತೆ ನಿಷೇಧಿಸಿದೆ. ಆದರೂ ಭ್ರೂಣಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. 2002 ರಿಂದ 2023ರ ಆರೋಗ್ಯ ಇಲಾಖೆಯ ಈ ಕುರಿತ ವರದಿ ನೋಡಿದಾಗ ಕೇವಲ 100 ಪ್ರಕರಣಗಳು ದಾಖಲಾಗಿವೆ. ಗಂಭೀರವಾಗಿ ಪರಿಗಣಿಸದಿರುವುದು ತಿಳಿದು ಬರುತ್ತದೆ. ಕಳೆದ ವರ್ಷ 1000ಕ್ಕೆ 947 ಇದ್ದ ಲಿಂಗಾನುಪಾತ ಪ್ರಸಕ್ತ ವರ್ಷ 929ಕ್ಕೆ ಇಳಿದಿದೆ. ಈ ಕುರಿತು ಎಲ್ಲರೂ ಗಂಭೀರವಾಗಿ ಚಿಂತಿಸುವ ಮತ್ತು ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸುವವರನ್ನು ಕಠಿಣವಾಗಿ ಶಿಕ್ಷಿಸುವ ಕ್ರಮವಾಗಬೇಕು ಎಂದು ಹೇಳಿದರು. ಸರ್ಕಾರವು ಭ್ರೂಣಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಈ ಕುರಿತು ಸಿ.ಐ.ಡಿ ತನಿಖೆಗೆ ಆದೇಶಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ತನಿಖಾ ವರದಿಯನ್ನು ಪಡೆಯಲು ಸರ್ಕಾರ…

Read More

ದೇವನಹಳ್ಳಿ:- ಹೊಸಕೋಟೆಯಲ್ಲಿ ಹೆಣ್ಣು ಭ್ರೂಣ ಹತ್ಯ ಕೇಸ್ ಪತ್ತೆ ಹಿನ್ನಲೆ ಬೆಂಗಳೂರು ಗ್ರಾ. ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ. ದೊಡ್ಡಬಳ್ಳಾಪುರ ಖಾಸಗಿ‌ ಆಸ್ಪತ್ರೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ದೊಡ್ಡಬಳ್ಳಾಪುರದ ಸತ್ಯ ಸಾಯಿ ಆಸ್ಪತ್ರೆಯ ಲ್ಯಾಬ್ ಸೀಜ್ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಲ್ಯಾಬ್ ಸರಿಯಾಗಿ ನಿರ್ವಹಿಸದ ಕಾರಣ ಸೀಜ್ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಸುನೀಲ್ ಕುಮಾರ್ ತಾಲೂಕು ವೈದ್ಯಾಧಿಕಾರಿ ಶಾರದ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ‌ ಲ್ಯಾಬ್ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಕಂಡುಬಂದಿದೆ. ಕೂಡಲೇ ಆರೋಗ್ಯ ಇಲಾಖೆ ಲ್ಯಾಬ್ ನ ಸೀಜ್ ಮಾಡಿದ್ದಾರೆ. ಅಲ್ಲದೆ ಲ್ಯಾಬ್ ನಡೆಸಲು ಸರಿಯಾದ ದಾಖಲೆಗಳೂ ಇರಲಿಲ್ಲ. ದಾಖಲೆ ಇಲ್ಲದೆ ಅನಧಿಕೃತವಾಗಿ ಆಸ್ಪತ್ರೆ ‌ಸಿಬ್ಬಂದಿ ಲ್ಯಾಬ್ ನಡೆಸುತ್ತಿದ್ದರು ಎನ್ನಲಾಗಿದೆ.

Read More