Author: AIN Author

ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಕಾಟೇರ’ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 16ರಂದು ಶನಿವಾರ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಕಾಟೇರ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 16ಕ್ಕೆ ಬಿಡುಗಡೆ’ಯಾಗಲಿದೆ ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ. https://x.com/RocklineEnt/status/1734884415753597158?s=20 ಡಿ ಬಾಸ್ ದರ್ಶನ್ ‘ಕಾಟೇರ’ನಾಗಿ ತೆರೆಮೇಲೆ ಅಬ್ಬರಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ಸದ್ಯ ಚಿತ್ರತಂಡ ಒಂದೊಂದೇ ಹಾಡು ರಿಲೀಸ್ ಮಾಡಿ ಅಭಿಮಾನಿಗಳಿಗೆ ಕಿಕ್ ನಿಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ‘ಪಸಂದಾಗವನ್ನೆ’ ಹಾಗೂ ‘ಯಾವ ಜನುಮದ ಗೆಳತಿ’ ಹಾಡು ಅಭಿಮಾನಿಗಳ ಮನ ಗೆದ್ದಿದೆ. ಇದೀಗ ಟ್ರೈಲರ್ ದಿನಾಂಕ ಘೋಷಣೆಯಾಗಿದ್ದು, ದಾಸನ ಫ್ಯಾನ್ಸ್​ ಥ್ರಿಲ್ ಆಗಿದ್ದಾರೆ. ಇದೇ ಡಿಸೆಂಬರ್ 29ರಂದು ಕಾಟೇರ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಈಗಾಗಲೇ ಡಿ ಬಾಸ್ ಫ್ಯಾನ್ಸ್ ಕಾಟೇರನಿಗೆ ಅದ್ದೂರಿ ಸ್ವಾಗತ ಕೋರಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ವರ್ಷದ ಕೊನೆಯ ಬಹುನಿರೀಕ್ಷಿತ ಚಿತ್ರವಾಗಿದ್ದು, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್…

Read More

ಮುಂಬೈನಿಂದ ವಾಪಸಾಗುತ್ತಿದ್ದಂತೆಯೇ, ಮಾಲಾಶ್ರೀ ಅವರು ಪಸಂದಾಗವ್ನೆ ಸ್ಯಾನೆ ಪಸಂದಾಗವ್ನೆ ಹಾಡಿಗೆ ನಿಂತಲ್ಲಿಯೇ ಒಂದೆರಡು ಸ್ಟೆಪ್​ ಹಾಕಿದ್ದಾರೆ. ಇದರ ರೀಲ್ಸ್​ ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾದ ಈ ರೀಲ್ಸ್​ ಅನ್ನು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ನೀವು ಸಕತ್​ ಪಸಂದ್ ಆಗಿ ಕಾಣಿಸುತ್ತಿದ್ದೀರಿ ಎನ್ನುತ್ತಿದ್ದಾರೆ. ಈ ಹಾಡಿಗೆ ಆರಾಧನಾ ಅವರು ಮಾಡಿದ ಡ್ಯಾನ್ಸ್​ ವಿಡಿಯೋ ರಿಲೀಸ್​ ಆದಾಗಲೂ ಫ್ಯಾನ್ಸ್​ ಥರಹೇವಾರಿ ಕಮೆಂಟ್​ ಮಾಡಿದ್ದರು. ತಾಯಿಯನ್ನು ಮೀರಿಸುವ ಟ್ಯಾಲೆಂಟ್‌, ಆರಾಧನಾಗೆ ಶುಭವಾಗಲಿ ಎಂದು ಹಲವರು ಶುಭ ಕೋರಿದ್ದರು. https://www.instagram.com/reel/C0oyxKDvuYU/?utm_source=ig_web_copy_link ಹಾಡು ಪೂರ್ತಿ ಆರಾಧನಾ ತುಂಬಾ ಚೆನ್ನಾಗಿ ಕಾಣ್ತಾರೆ. ಡ್ಯಾನ್ಸ್‌ ಮೂವ್ಸ್‌, ಎಕ್ಸ್‌ಪ್ರೆಷನ್ಸ್‌ ಎಲ್ಲಾ ಮಾಲಾಶ್ರೀ ಮೇಡಮ್ ನೆನಪಿಸ್ತಾರೆ. ಒಳ್ಳೆ ಹೀರೋಯಿನ್ ಆಗೋ ಎಲ್ಲಾ ಲಕ್ಷಣ ಇದೆ. ದರ್ಶನ್​ ಅವರಿಗೆ ಒಳ್ಳೆ ಜೋಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಮಾಲಾಶ್ರೀ ಅವರ ಸ್ಟೆಪ್​ಗೂ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದೇ ಡಿಸೆಂಬರ್​ ತಿಂಗಳ 29 ರಂದು ಚಿತ್ರ ರಿಲೀಸ್ ಆಗುತ್ತಿದೆ. ಇದಾಗಲೇ ಮಾಲಾಶ್ರೀ ಮತ್ತು ಮಗಳು ಮುಂಬೈಗೆ ತೆರಳಿ…

Read More

ಬೆಳಗಾವಿ:  ನಾನು ಜಾತಿ ಗಣತಿಗೆ ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಜಾತಿ ಗಣತಿಯ ಸಮೀಕ್ಷೆ ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಅಭಿಮತ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುವರ್ಣಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ನಮ್ಮ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದು ದೂರುಗಳು ಬಂದಿವೆ. ಎಲ್ಲಾ ಸಮುದಾಯಗಳು ಅವರ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಹಕ್ಕನ್ನು ಪಡೆಯಬೇಕು. ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ಎಲ್ಲರೂ ತಮ್ಮ ಜನಸಂಖ್ಯೆ ಅನುಗುಣವಾಗಿ ಹಕ್ಕು ಹಾಗೂ ಅನುದಾನ ಕೇಳುತ್ತಾರೆ. ಈ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆಯೇ ಎಂಬ ವಿಚಾರವಾಗಿ ನಾವು ಸ್ಪಷ್ಟೀಕರಣ ಕೇಳಿದ್ದೇವೆ. https://ainlivenews.com/do-you-know-why-you-should-not-cut-your-nails-at-night-heres-why/ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕಾಂಗ್ರೆಸ್ ಪಕ್ಷದ ಬದ್ಧತೆಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಕೇಂದ್ರ ಸರ್ಕಾರದ ವರ್ಗೀಕರಣದ ಅನ್ವಯ ನಾನು…

Read More

ಲಕ್ನೋ: ಸಂಭ್ರಮದಿಂದ ಕೂಡಿರಬೇಕಾಗಿದ್ದ ಮದುವೆ ಮನೆಯಲ್ಲಿ ರಕ್ತ ಹರಿದಿರುವ ಘಟನೆಯೊಂದು ನಡೆದಿದೆ. ಮದುವೆಗೆ ಬಂದ ಅಥಿತಿಗಳ ಮೇಲೆ ಮುಸುರೆ ತಟ್ಟೆಗಳು ಬಿತ್ತು ಎಂದು ವೈಟರ್‌ನನ್ನೇ (Waiter) ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ. ಅಂಕುರ್ ವಿಹಾರ್ ಸಿಜಿಎಸ್ ವಾಟಿಕಾದಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಪಂಕಜ್ ಹತ್ಯೆಯಾದ ವ್ಯಕ್ತಿ. ನವೆಂಬರ್ 17ರಂದು ಮದುವೆ ಸಮಾರಂಭವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾಗ ಮುಸುರೆ ತಟ್ಟೆಗಳು ಅತಿಥಿಗಳಾಗಿ ಆಗಮಿಸಿದ್ದ ರಿಷಬ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಬಿದ್ದಿತ್ತು. ಮುಸುರೆ ತಟ್ಟೆಗಳು ತಮ್ಮ ಮೇಲೆ ಬಿದ್ದ ಪರಿಣಾಮ ರಿಷಬ್ ಸಿಟ್ಟಾಗಿ ವೈಟರ್ ಪಂಕಜ್‌ನೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. https://ainlivenews.com/do-you-know-why-you-should-not-cut-your-nails-at-night-heres-why/ ಜಗಳ ಅತಿರೇಕಕ್ಕೆ ತಿರುಗಿ ಹೊಡೆದಾಟ ನಡೆದಿದ್ದು, ಈ ವೇಳೆ ಪಂಕಜ್‌ನನ್ನು ನೆಲಕ್ಕೆ ಬೀಳಿಸಿ ರಿಷಬ್ ಹೊಡೆದು ಕೊಂದಿದ್ದಾನೆ. ಕೊಲೆ ಬಳಿಕ ಸಿಕ್ಕಿ ಬೀಳುವ ಭಯದಲ್ಲಿ ರಿಷಬ್ ಹಾಗೂ ಆತನ ಸ್ನೇಹಿತರಾದ ಮನೋಜ್ ಹಾಗೂ ಅಮಿತ್ ಪಂಕಜ್‌ನ ಶವವನ್ನು ಹತ್ತಿರದ ಕಾಡಿಗೆ…

Read More

ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Nivedita Gowda) ದಂಪತಿ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ನಿವೇದಿತಾ, ಈ ಹಿಂದೆಯೂ ಸಿನಿಮಾದಲ್ಲಿ ನಟಿಸುವಂತೆ ಆಫರ್ ಬಂದಿತ್ತು. ಆಗ ನಾನಿನ್ನೂ ಓದುತ್ತಿದ್ದೆ. ಹಾಗಾಗಿ ಒಪ್ಪಿಕೊಳ್ಳಲಿಲ್ಲ. ಈಗ ಒಪ್ಪಿಕೊಂಡಿದ್ದೇನೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ನನ್ನ ವೃತ್ತಿ ಬದುಕಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಲಿದೆ ಎಂದಿದ್ದಾರೆ. ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಆ ಚಿತ್ರಕ್ಕೆ ಪುನೀತ್ ಶ್ರೀನಿವಾಸ್ (Puneeth Srinivas) ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರೇ ದಂಪತಿಗೆ ಕತೆ ಒಪ್ಪಿಸಿ ಚಿತ್ರ ಮಾಡಲು ಮುಂದಾಗಿದ್ದಾರೆ. ಅವರು ತಮ್ಮ  ಪ್ರಥಮ ಪ್ರಯತ್ನದಲ್ಲೇ ವಿಭಿನ್ನ ಕಾನ್ಸೆಪ್ಟ್ ಮೂಲಕ ತಮ್ಮ ಹೊಸ ಜರ್ನಿಯನ್ನು  ಆರಂಭಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ  ಶ್ರೀ ಚೌಡೇಶ್ವರಿ ಸಿನಿ ಕ್ರಿಯೇಶನ್ಸ್ ಮೂಲಕ ಎಲ್.ಮೋಹನ್ ಕುಮಾರ್ ಅವರು ದೊಡ್ಡ ಮಟ್ಟದ ಬಂಡವಾಳ ಹೂಡುತ್ತಿದ್ದಾರೆ. ಪುನೀತ್ ಶ್ರೀನಿವಾಸ್ ಕನ್ನಡ  ಚಿತ್ರರಂಗಕ್ಕೆ ಹೊಸಬರೇನಲ್ಲ, ಶಿವಣ್ಣ, ಸುದೀಪ್…

Read More

2023ರ ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ 5 ವಿಕೆಟ್ ಪಡೆದಿದ್ದರು. ಈ ಸಂದರ್ಭದಲ್ಲಿ ಅನುಭವಿ ವೇಗಿ ಮಂಡಿಯೂರಿ ಪ್ರಾರ್ಥನೆ ಮಾಡಲು ಬಯಸಿದ್ದರು ಎಂದು ಎದ್ದಿದ್ದ ಗಾಳಿ ಸುದ್ದಿಯ ಬಗ್ಗೆ ಶಮಿ ಪ್ರಸ್ತಾಪಿಸಿದ್ದು, ಇಂತಹ ವಿವಾದಗಳನ್ನು ಹರಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಎದ್ದಿರುವ ಗಾಳಿ ಸುದ್ದಿಗೆ ಬುಧವಾರ (ಡಿಸೆಂಬರ್ 13) ಅಜೆಂಡಾ ಅಜ್ ತಕ್ ಜೊತೆ ಸಂವಾದ ನಡೆಸಿರುವ ಮೊಹಮ್ಮದ್ ಶಮಿ, ನಾನು ಅಪ್ಪಟ ಭಾರತೀಯ ಹಾಗೂ ಅಪ್ಪಟ ಮುಸಲ್ಮಾನ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ನಾನು ಪ್ರಾರ್ಥನೆ ಮಾಡಲು ಬಯಸಿದರೆ ನನ್ನನ್ನು ತಡೆಯಲು ಆಗುವುದಿಲ್ಲ ಎಂದು ಶಮಿ ಹೇಳಿದ್ದಾರೆ. “ನಾನು ಒಂದು ವೇಳೆ ಪ್ರಾರ್ಥನೆ ಮಾಡಲು ಬಯಸಿದರೆ ನನ್ನನ್ನು ತಡೆಯುವವರು ಯಾರು? ನನ್ನನ್ನು ಪ್ರಾರ್ಥನೆ ಮಾಡದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಪ್ರಾರ್ಥನೆ ಮಾಡಿದರೆ ಅದರಿಂದಾಗುವ ತೊಂದರೆ ತಿಳಿಸಿ? ನಾನು ಮುಸಲ್ಮಾನ ಎಂಬುದನ್ನು…

Read More

ಕೆಸಿಸಿ- ಕನ್ನಡ ಚಲನಚಿತ್ರ ಕಪ್ ಸೀಸನ್ 4ಕ್ಕೆ ದಿನಗಣನೆ ಶುರುವಾಗಿದೆ. ಪ್ರತೀ ವರ್ಷದಿಂದ ಈ ವರ್ಷವೂ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂ 3 ದಿನಗಳ ಅಖಾಡಕ್ಕೆ ಸಜ್ಜಾಗ್ತಿದೆ. ಶಿವರಾಜ್​ಕುಮಾರ್, ಉಪೇಂದ್ರ, ಸುದೀಪ್, ಗಣೇಶ್, ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ನೇತೃತ್ವದ ಆರು ತಂಡಗಳು ಕೆಸಿಸಿಯಲ್ಲಿ ಸೆಣಸಾಡಲಿದ್ದು, ಈ ವರ್ಷವೂ ಸಹ ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಷನಲ್ ಕ್ರಿಕೆಟರ್ಸ್​ ಕನ್ನಡ ಸ್ಟಾರ್ಸ್​ ಜೊತೆ ಗ್ರೌಂಡ್​ಗೆ ಇಳಿಯಲಿದ್ದಾರೆ. ಡಿಸೆಂಬರ್ 23ರಿಂದ 25ರವರೆಗೆ ಸುಮಾರು 3 ದಿನಗಳ ಕಾಲ ನಡೆಯಲಿರೋ ಈ ಟೂರ್ನಮೆಂಟ್​ ಬಗ್ಗೆ ಮಾಹಿತಿ ನೀಡಲು ಕಿಚ್ಚ ಸುದೀಪ್ KSCAನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಅಲ್ಲಿ ಧ್ರುವ ಸರ್ಜಾ, ಯಶ್, ದರ್ಶನ್ ಸೇರಿದಂತೆ ಶೆಟ್ಟಿ ಟೀಂ ಆಡದೇ ಇರೋದರ ಬಗ್ಗೆ ಸ್ಪಷ್ಟನೆ ನೀಡಿದರು. ಅಲ್ಲದೆ, ಈ ವರ್ಷ ಮತ್ತಷ್ಟು ಕಲರ್​ಫುಲ್ ಹಾಗೂ ಅರ್ಥಪೂರ್ಣವಾಗಿ ಸ್ಯಾಂಡಲ್​ವುಡ್ ಒಗ್ಗಟ್ಟಿನ ಮಂತ್ರ ಜಪಿಸಲಿದೆ.

Read More

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 5 ವಿಕೆಟ್‌ಗಳ ಸೋಲುಂಡಿತು. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟ ಮಾಡಿರುವ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಸೂರ್ಯಕುಮಾರ್‌ ಯಾದವ್‌ 36 ಎಸೆತಗಳಲ್ಲಿ 56 ರನ್‌ ಸಿಡಿಸಿ ಅಬ್ಬರಿಸಿದ್ದರು. ಇದರೊಂದಿಗೆ ತಮ್ಮ ಟಿ20-ಐ ಬ್ಯಾಟಿಂಗ್‌ ಶ್ರೇಯಾಂಕದ ರೇಟಿಂಗ್ಸ್‌ನ 865ಕ್ಕೆ ವಿಸ್ತರಿಸಿಕೊಂಡಿದ್ದಾರೆ. ಟಿ20-ಐ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ರಿಝ್ವಾನ್‌ (787 ರೇಟಿಂಗ್ಸ್) ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಹಂಗಾಮಿ ನಾಯಕ ಏಡೆನ್‌ ಮಾರ್ಕ್ರಮ್‌ (758 ರೇಟಿಂಗ್ಸ್‌) ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದಲ್ಲಿ ನಿಧಾನವಾಗಿ ತಮ್ಮ ಸ್ಥಾನ ಬಲ ಪಡಿಸಿಕೊಳ್ಳುತ್ತಿರುವ ಪ್ರತಿಭಾನ್ವಿತ ಯುವ…

Read More

ಜನಪ್ರಿಯ ತಮಿಳಿನ ನಂದಿನಿ ಧಾರಾವಾಹಿಯ ನಾಯಕ ನಟ ರಾಹುಲ್ ರವಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಪತ್ನಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಅವರ ಮೇಲಿತ್ತು. ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದ ನಟನ ಪತ್ನಿ ದೂರು ದಾಖಲಿಸಿದ್ದರು. ಅರೆಸ್ಟ್ ವಾರೆಂಟ್ ಜಾರಿ ಆಗುತ್ತಿದ್ದಂತೆಯೇ ರವಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಪತಿಗೆ ಮತ್ತೋರ್ವ ಹುಡುಗಿಯ ಜೊತೆ ಒಡನಾಟ ಇರುವ ವಿಷಯ ತಿಳಿಯುತ್ತಿದ್ದಂತೆಯೇ ಆ ಹುಡುಗಿಯೊಂದಿಗೆ ಲಕ್ಷ್ಮಿ ಜಗಳ ಕೂಡ ಆಡಿದ್ದರು. ನಂತರ ಲಕ್ಷ್ಮಿಯೊಂದಿಗೆ ರಾಹುಲ್ ಕೂಡ ಸಾಕಷ್ಟು ಬಾರಿ ಜಗಳ ಮಾಡಿದ್ದಾರಂತೆ. ಜೊತೆಗೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ನಿ ಮಾನಸಿಕವಾಗಿ ಸರಿ ಇಲ್ಲವೆಂದು ಹೇಳಿಕೊಂಡಿದ್ದರಂತೆ. ಈ ಎಲ್ಲ ಕಾರಣದಿಂದಾಗಿ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ನಟ ನಾಪತ್ತೆ ಆಗಿದ್ದಾರೆ ಎನ್ನುವುದು ಸದ್ಯಕ್ಕಿರೋ ಮಾಹಿತಿ. ಬಂಧನದ ಭೀತಿಯ ಕಾರಣದಿಂದಾಗಿ ಅವರು ಊರು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ನಟನಿಗಾಗಿ ಹುಡುಕಾಟ ನಡೆಸಿದ್ದಾರೆ.

Read More

ಬೆಂಗಳೂರು : 2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮೊದಲ ಗಗನಯಾನಿಯನ್ನು ಕಳುಹಿಸುವ ಯೋಜನೆ ಹೊಂದಿರುವುದಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ. ಮನೋರಮಾ ಇಯರ್ಬುಕ್ 2024ಕ್ಕೆ ಬರೆದ ವಿಶೇಷ ಲೇಖನದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ‘ಗಗನಯಾನ’ ಎಂಬ ಯೋಜನೆಯಡಿ ಸದ್ಯ ಭೂಮಿಯ ಕೆಳ ಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಿ, ಮೂರು ದಿನಗಳ ನಂತರ ಅವರನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವ ಚೊಚ್ಚಲ ಯೋಜನೆಯ ಸಿದ್ಧತೆಯಲ್ಲಿದ್ದೇವೆ. ಇದಕ್ಕಾಗಿ ಭಾರತೀಯ ವಾಯುಪಡೆಯ ನಾಲ್ವರು ಪೈಲೆಟ್​​ಗಳೂ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ಸದ್ಯ ಇವರು ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾನವಸಹಿತ ಗಗನಯಾನಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ. ಇದರಲ್ಲಿ ಗಗನಯಾನಿಗಳನ್ನು ಸುರಕ್ಷಿತವಾಗಿ ಕರೆದೊಯ್ಯುವ ವಾಹನ, ಅವರು ಬಾಹ್ಯಾಕಾಶದಲ್ಲಿ ಇರಲು ಅನುಕೂಲಕರವಾದ ನೌಕೆ, ಅದರಲ್ಲಿ ಅವರ ಸುರಕ್ಷತೆಗೆ ಅಗತ್ಯವಿರುವ ಸಾಧನಗಳನ್ನು ಅಳವಡಿಸುವ ಕಾರ್ಯದಲ್ಲಿ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Read More