Author: AIN Author

ಬೆಂಗಳೂರು: ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಹೋಗುವ ಜೋಡಿಗಳಿಗೆ ಬೆಂಗಳೂರು ಪೊಲೀಸರು ಸಿಹಿ ಸುದ್ದಿ ಕೊಡಲು ಪ್ಲಾನ್ ಮಾಡಿಕೊಂಡಿದ್ದಾರೆ. https://ainlivenews.com/gang-rape-on-techie-in-bangalore/ ಹೊಸ ವರ್ಷಕ್ಕೆ ಬೆಂಗಳೂರಿನ ಬ್ರಿಗೇಡ್ ರೋಡ್‌ನಲ್ಲಿ ಜೋಡಿಗೆ ಈ ಬಾರಿ ಪ್ರತ್ಯೇಕವಾದ ಮಾರ್ಗ ಮಾಡಿಕೊಟ್ಟು ಸಂಭ್ರಮಾಚರಣೆಗೆ ಅನುವು ಮಾಡಿಕೊಡಲು ಬೆಂಗಳೂರು ಪೊಲೀಸರು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೆಲ ಪುಂಡರು ಜನರ ಗುಂಪಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ಕಳೆದ ವರ್ಷ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೆಲ ಪುಂಡರು ಜನರ ಗುಂಪಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಆಗಮಿಸುವ ಜೋಡಿಗೆ ಎಂದೇ ಪ್ರತ್ಯೇಕ ಮಾರ್ಗ ಮಾಡಿ ಅಲ್ಲಿಯೇ ಹೊಸ ವರ್ಷ ಸಂಭ್ರಮಾಚರಣೆ ಮಾಡಿಕೊಳ್ಳಲು ವಿಶೇಷ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ ಹೀಗಾಗಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಆಗಮಿಸುವ…

Read More

ಬೆಳಗಾವಿ: ಬೆಂಗಳೂರಿನ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ಧಿಪಡಿಸಲು ವೈಟ್ ಟಾಪಿಂಗ್ ಗೆ ಆದ್ಯತೆ ನೀಡಲಾಗುತ್ತಿದ್ದು, ಈ ಬಗ್ಗೆ ಸದ್ಯದಲ್ಲೇ ಬೆಂಗಳೂರಿನ ಶಾಸಕರ ಸಭೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಎಚ್ ಎಸ್ ಗೋಪಿನಾಥ್ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. ಬೆಂಗಳೂರಿನಲ್ಲಿ 1.14 ಕೋಟಿ ವಾಹನಗಳು ಇವೆ. ಬೆಂಗಳೂರಿನ ಜನಸಂಖ್ಯೆಯಷ್ಟೇ ವಾಹನಗಳ ಸಂಖ್ಯೆ ಕೂಡ ಇದೆ. ನಗರದಲ್ಲಿ ನಿತ್ಯ ಸರಾಸರಿ 1300 ದ್ವಿಚಕ್ರ ವಾಹನಗಳು ಹಾಗೂ 490 ಕಾರುಗಳು ನೊಂದಣಿಯಾಗುತ್ತಿವೆ. ವಾಹನಗಳ ಒತ್ತಡದಿಂದ ರಸ್ತೆಗಳು ಹಾಳಾಗುತ್ತಿದ್ದು, ರಸ್ತೆಗುಂಡಿ ಮುಚ್ಚುವುದೇ ದೊಡ್ಡ ಕೆಲಸವಾಗಿದೆ. ಹೀಗಾಗಿ ರಸ್ತೆಗುಂಡಿ ಮುಚ್ಚುವ ಕೆಲಸವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಸಾರ್ವಜನಿಕರು ಅಥವಾ ಪೊಲೀಸ್ ಸಿಬ್ಬಂದಿ ಫೋಟೋ ತೆಗೆದು ಕಳುಹಿಸುವ ಗುಂಡಿಗಳನ್ನು ಪಾಲಿಕೆ ಅಧಿಕಾರಿಗಳು ಮುಚ್ಚಿಸುತ್ತಿದ್ದಾರೆ ಎಂದರು. ವೈಟ್ ಟಾಪಿಂಗ್ ಗೆ 1000 ಕೋಟಿ ಅನುದಾನವಿದ್ದು, ಮುಖ್ಯರಸ್ತೆಗಳಲ್ಲದೆ ಬೇರೆ ರಸ್ತೆಗಳನ್ನು ಮಾಡಬೇಕೆಂಬ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಕೇಬಲ್ ಗಳ ಹಾವಳಿ ಹೆಚ್ಚಾಗಿದೆ. ಇದಕ್ಕಾಗಿ…

Read More

ಬೆಂಗಳೂರು: ಖಾಸಗಿ ಕಂಪನಿಯೊಂದರ ಟೆಕ್ಕಿ ತನ್ನ ಮೇಲೆ ಗ್ಯಾಂಗ್ ರೇಪ್ (Gang Rape) ನಡೆದಿದೆ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದಾರೆ. ಡಿ.12 ರಂದು ರಾತ್ರಿ ಯುವತಿ ಕೋರಮಂಗಲ ಪಬ್ (Pub) ಒಂದಕ್ಕೆ ಹೋಗಿದ್ದಳು. ಬಳಿಕ ಪ್ರಜ್ಞೆ ಬಂದಾಗ ಆಕೆ ಆಡುಗೋಡಿಯ (Adugodi) ದೇವೇಗೌಡ ಲೇಔಟ್ ಬಳಿ ಇದ್ದುದು ತಿಳಿದುಬಂದಿದೆ. ತಕ್ಷಣ ಆಕೆ ಹತ್ತಿರ ಇದ್ದ ಮನೆಯೊಂದರ ಬಾಗಿಲು ಬಡಿದಿದ್ದಾಳೆ. ನಂತರ ಸ್ಥಳೀಯರು 112ಕ್ಕೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಆಡುಗೋಡಿ ಪೊಲೀಸರು ಯುವತಿಯ ರಕ್ಷಣೆ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಕೋರಮಂಗಲ ಠಾಣೆಗೆ ಕರೆತಂದಿದ್ದಾರೆ. ಅಲ್ಲಿ ಯುವತಿ ತಾನು ಪ್ರಜ್ಞಾಹೀನಳಾಗಿದ್ದಾಗ ಅತ್ಯಾಚಾರ ನಡೆದಿರುವ ಶಂಕೆಯಿದೆ ಎಂದು ದೂರು ನೀಡಿದ್ದಾಳೆ. ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.

Read More

ಬಾಲಿವುಡ್ (Bollywood) ನ ಖ್ಯಾತ ಯುವನಟ ಶ್ರೇಯಸ್ ತಲ್ಪಾಡೆಗೆ (Shreyas Talpade) ಹೃದಯಾಘಾತವಾಗಿದೆ (Heart Attack). ಶೂಟಿಂಗ್ ಸಮಯದಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಲಘು ಹೃದಯಾಘಾತವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಅಂಧೇರಿ ಪ್ರದೇಶದ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಿನ್ನೆ ರಾತ್ರಿ 10 ಗಂಟಗೆ ವೈದ್ಯರು ಆಂಜಿಯೋಪ್ಲಾಸ್ಟಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಗ್ಯ ಸ್ಥಿರವಾಗಿದ್ದು, ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲೇ ನಟ ಮನೆಗೆ ವಾಪಸ್ಸಾಗಲಿದ್ದಾರೆ. ಲಘು ಹೃದಯಾಘಾತವಾದಾಗ ಶ್ರೇಯಸ್ ವೆಲ್ ಕಲ್ ಟು ಜಂಗಲ್ ಸಿನಿಮಾದ  ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಹೃದಯಾಘಾತ ಸಂದರ್ಭದಲ್ಲಿ ಕುಸಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.

Read More

ಬೆಳಗಾವಿ: ರಾಜ್ಯಾಧ್ಯಂತ ಆತಂಕ ಸೃಷ್ಟಿಸಿದ್ದ ಭ್ರೂಣ ಹತ್ಯೆ ಪ್ರಕರಣದ ತನಿಖೆಗೆ ಎಸ್ ಐಟಿ ತನಿಖೆಗೆ ನೀಡಿ ಎಂದು‌ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಈಗಾಗಲೇ ಈ ಪ್ರಕರಣವನ್ನು ಸಿಐಡಿ ತನಿಖೆಗೆ‌ ನೀಡಲಾಗಿದೆ. ಆದರೆ‌ ಸಿಐಡಿಗಿಂತ ಎಸ್ ಐ ಟಿ ಗೆ ನೀಡಿ. ಅಲ್ಲದೆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸದನದಲ್ಲಿ ಭ್ರೂಣ ಹತ್ಯೆ ವಿಚಾರ ಪ್ರಸ್ತಾಪಿಸಿದ‌ ಅವರು, ಇಷ್ಟೆಲ್ಲಾ ಚರ್ಚೆಯಾದರೂ ಹೊಸಕೋಟೆಯಲ್ಲಿ 16 ವಾರಗಳ ಭ್ರೂಣ ಹತ್ಯೆ ಮಾಡಲಾಗಿದೆ. ಕಾನೂನಿಗೆ ಎಷ್ಟು ಗೌರವ ಕೊಡ್ತಾರೆ? ಎಷ್ಟು ಬಲಾಢ್ಯರಿದ್ದಾರೆ? ಎಂದು ಅರ್ಥ ಆಗುತ್ತದೆ ಎಂದರು. 27 ವರ್ಷಗಳಲ್ಲಿ ಆರೋಗ್ಯ ಇಲಾಖೆ ಕೇವಲ 87 ಪ್ರಕರಣ ದಾಖಲಾಗಿದೆ. ಒಬ್ಬೊಬ್ಬ ವೈದ್ಯರು 300 ಭ್ರೂಣ ಹತ್ಯೆ ಮಾಡಿದ್ದಾರೆ. ಇದೊಂದು ರೀತಿಯಲ್ಲಿ ಕೊಲೆ, ಗಂಡು ಮಗ ಬೇಕು ಎಂಬುದು‌ ಇದಕ್ಕೆ ಕಾರಣ. ವರದಕ್ಷಿಣೆ ಕೂಡಾ ಇದಕ್ಕೆ ಕಾರಣವಾಗ್ತಿದೆ ಎಂದು‌ ಹೇಳಿದರು. https://ainlivenews.com/faster-mohammad-shami-farm-house-tight-security/ ಗರ್ಭಿಣಿ ತಾಯಿಗೆ ತೀರ್ಮಾನದ ಅಧಿಕಾರ ಇರಲ್ಲ, ಬದಲಾಗಿ ಕುಟುಂಬ ಮಾಡ್ತಿದೆ.…

Read More

ಮೈಸೂರು: ಸಂಸತ್ ಭವನಕ್ಕೆ ನುಗ್ಗಿ ಕೋಲಾಹಲ ಎಬ್ಬಿಸಿದ್ದ ಬಂಧಿತರು ಸಂಸದ ಪ್ರತಾಪ್ ಸಿಂಹ ಐಟಿ ಸೆಲ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರು. ಬಂಧಿತ ಮನೋರಂಜನ್, ಪ್ರತಾಪ್ ಸಿಂಹ ಬಹಳ ಹತ್ತಿರವಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ. ನಗದರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರು, ಮಡಿಕೇರಿ ಹಾಗೂ ಡೆಲ್ಲಿಯಲ್ಲಿ ಇವರ ಜೊತೆ ಸಭೆ ನಡೆಸಿದ್ದಾರೆ. ಪ್ರತಾಪ್ ಜೊತೆ ಒಂದು ಸಭೆಯು ಆಗಿದೆ. ಆದರೆ ಯಾವಾಗ ಸಭೆ ಆಗಿದೆ ಎಂದು ಗೊತ್ತಿಲ್ಲ. ಪ್ರತಾಪ್ ಸಿಂಹ ಕಚೇರಿ ಸೀಜ್ ಮಾಡಬೇಕು ಎಂದು ಹೇಳಿದ್ದಾರೆ. ನ್ಯಾಷನಲ್ ಸೆಕ್ಯೂರಿಟಿ ವಿಚಾರದಲ್ಲಿ ದಾಖಲೆ ಇಲ್ಲದೆ ನಾವು ಮಾತನಾಡುತ್ತಿಲ್ಲ. ನಾಳೆ ನ್ಯಾಷನಲ್ ಸೆಕ್ಯೂರಿಟಿ ಕೇಳಿದರೆ ದಾಖಲೆ ನೀಡಬೇಕಾಗುತ್ತದೆ. ಆದರಿಂದ ನಾವು ಹೇಳುವ ವಿಷಯ ಸತ್ಯಕ್ಕೆ ಹತ್ತಿರವಾದದ್ದು ಎಂದಿದ್ದಾರೆ. ಇಲ್ಲಿಯವರೆಗೂ ಬಿಜೆಪಿ ಸಂಸದರು, ಸಚಿವರು, ಗೃಹ ಸಚಿವರು ಒಬ್ಬರು ಪ್ರತಿಕ್ರಿಯೆ ನೀಡಿಲ್ಲ. https://ainlivenews.com/do-you-know-why-you-should-not-cut-your-nails-at-night-heres-why/ ಸ್ವತಃ ಪ್ರತಾಪ್ ಸಿಂಹ ಕೂಡ ಒಂದು ಪ್ರತಿಕ್ರಿಯೆ ನೀಡಿಲ್ಲ. ಘಟನೆ ನಡೆದು 24 ಗಂಟೆಯಾದರೂ ಒಂದು ಟ್ವೀಟ್​ ಮಾಡಿಲ್ಲ. ಇದು…

Read More

ನವದೆಹಲಿ: ದೆಹಲಿ-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್‍ಗೆ (RRTS) ಅನುದಾನ ಒದಗಿಸುವಲ್ಲಿ ವಿಳಂಬ ಮಾಡುತ್ತಿರುವ ದೆಹಲಿ ಸರ್ಕಾರವನ್ನು ಸುಪ್ರೀಂಕೋರ್ಟ್ (Supreme Court) ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದ ಅನುದಾನ ನೀಡದಿದ್ದಲ್ಲಿ ಜಾಹೀರಾತಿಗೆ ಮೀಸಲಿಟ್ಟ ಹಣವನ್ನು ಬಳಸುವ ಆದೇಶವನ್ನು ನ್ಯಾಯಾಲಯ ಪುನರ್ ಉಚ್ಚರಿಸಿದೆ. ಕ್ಷಿಪ್ರ ರೈಲು ಯೋಜನೆಗೆ ಹಣವನ್ನು ಒದಗಿಸಲು ದೆಹಲಿ (Delhi) ಸರ್ಕಾರ ವಿಫಲವಾದರೆ, ಈ ಮೊತ್ತವನ್ನು ಅರವಿಂದ್ ಕೇಜ್ರಿವಾಲ್ (Arvind Crazywal) ಸರ್ಕಾರದ ಈ ವರ್ಷದ ಜಾಹೀರಾತು ಬಜೆಟ್‍ನಿಂದ ನೀಡುವ ಬಗ್ಗೆ ಕಳೆದ ನವೆಂಬರ್‌ನಲ್ಲಿ ನ್ಯಾಯಾಲಯ ಆದೇಶಿಸಿತ್ತು. ಇಂದಿನ ವಿಚಾರಣೆಯಲ್ಲಿ, ಸರ್ಕಾರ ಬಜೆಟ್ ಹಂಚಿಕೆಗೆ ಅನುಮತಿ ನೀಡಿದೆ ಮತ್ತು ಕೇಂದ್ರದ ಅನುಮೋದನೆಗೆ ಕಾಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. 7 ದಿನಗಳೊಳಗೆ ಕೇಂದ್ರದ ಒಪ್ಪಿಗೆ ಪಡೆಯುವಂತೆ ದೆಹಲಿ ಸರ್ಕಾರಕ್ಕೆ ಈ ವೇಳೆ ಸುಪ್ರೀಂಕೋರ್ಟ್ ಸೂಚಿಸಿದೆ. https://ainlivenews.com/do-you-know-why-you-should-not-cut-your-nails-at-night-heres-why/ ಹಿಂದಿನ ವಿಚಾರಣೆಯ ವೇಳೆ, ದೆಹಲಿ ಸರ್ಕಾರ ಜಾಹೀರಾತಿಗಾಗಿ 580 ಕೋಟಿ ರೂ. ಬಜೆಟ್ ಮಾಡಬಹುದು ಆದರೆ ಯೋಜನೆಗೆ ಪಾವತಿಸಬೇಕಾದ 400 ಕೋಟಿ ರೂ. ಹಣ ಒದಗಿಸಲು ಸಾಧ್ಯವಿಲ್ಲವೇ?…

Read More

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ಸೂಪರ್ ಹಿಟ್ ಸಿನಿಮಾ ಮುಗುಳುನಗೆಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಪ್ರತಿಭೆ ಯಶಸ್ವಿನಿ ನಾಚಪ್ಪ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬ ಸಡಗರದಲ್ಲಿರುವ ಈ ಕೊಡಗಿವ ಕುವರಿ “ಒಂದು ಸನ್ನೆ ಒಂದು ಮಾತು” (Ondu Sanne Ondu Maatu) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅನೇಕ ಚಿತ್ರಗಳಲ್ಲಿ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಹಲವಾರು ಚಿತ್ರಗಳಿಗೆ ಡಬ್ಬಿಂಗ್ ಕಲಾವಿದೆಯಾಗಿ ಕಾರ್ಯ ನಿರ್ವಹಿಸಿದವರು ಯಶಸ್ವಿನಿ ನಾಚಪ್ಪ (Yashaswini Nachappa). ಮೂಲತಃ ರಂಗಭೂಮಿಯ ನಂಟಿರುವ ಈ ಪ್ರತಿಭೆ ಇತ್ತೀಚಿನ ದಿನಗಳಲ್ಲಿ ಬಂದಂತಹ ಹೊಸ ಕಲಾವಿದರಿಗೆ ನಟನೆಯಲ್ಲಿ ಟ್ರೇನಿಂಗ್ ಮಾಡಿದ ಅನುಭವವನ್ನೂ ಕೂಡ ಇವರಿಗೆ. ಟಗರು ಪಲ್ಯ ಸಿನಿಮಾ ಮೂಲಕ ನಾಯಕಿಯಾದ ಅಮೃತಾ ಪ್ರೇಮ್, ಪದವಿ ಪೂರ್ವ ಮೂಲಕ ನಾಯಕನಾದ ಪೃಥ್ವಿ ಶ್ಯಾಮನೂರ್, ಅಂಜಲಿ, ಯಶಾ ಶಿವಕುಮಾರ್ ಹಾಗೂ ಅರ್ಜುನ್ ಗೌಡ ಸೇರಿದಂತೆ ಒಂದಷ್ಟು ಯುವ…

Read More

ದಾವಣಗೆರೆ: ದಾವಣಗೆರೆ ಬೆಣ್ಣೆದೋಸೆ ಇತಿಹಾಸ ಪ್ರಸಿದ್ದವಾಗಿದ್ದು ಇದಕ್ಕೊಂದು ಬ್ರಾಂಡಿಂಗ್ ನೀಡಲು ಜಿಲ್ಲಾಡಳಿತ ಡಿಸೆಂಬರ್ 23, 24, 25 ರಂದು ದಾವಣಗೆರೆಯಲ್ಲಿ ಬೆಣ್ಣೆದೋಸೆ ಹಬ್ಬವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೋಸೆ ಉತ್ಸವ ಆಯೋಜನೆಗೆ ಸಂಬಂಧಿಸಿದಂತೆ ಸಿದ್ದತೆಯ ಕುರಿತು ಏರ್ಪಡಿಸಲಾದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಹೋಟೆಲ್ ಮಾಲಿಕರೊಂದಿಗೆ ಚರ್ಚಿಸಲಾಗಿದ್ದು ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದಾರೆ. ದಾವಣಗೆರೆ ನಗರದ ಎಂ.ಬಿ.ಎ. ಮೈದಾನ ಮತ್ತು ಗ್ಲಾಸ್‍ಹೌಸ್ ಮುಂಭಾಗ ದೋಸೆ ಹಬ್ಬವನ್ನು ಆಯೋಜಿಸಲಾಗಿದ್ದು ಮೂರು ದಿನಗಳ ಕಾಲ ಬೆಳಗ್ಗೆ 8 ಗಂಟೆಯಿಂದ ರಾತ್ರಿವರೆಗೆ ದೋಸೆ ಸವಿಯಬಹುದಾಗಿದೆ. ಬೆಣ್ಣೆದೋಸೆ ಹಬ್ಬದಲ್ಲಿ ಸುಮಾರು 5 ಲಕ್ಷ ಜನರು ಭಾಗಿಯಾಗಬೇಕೆಂಬ ಗುರಿ ಹೊಂದಲಾಗಿದೆ. ಇದಕ್ಕಾಗಿ ಎರಡು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ದೋಸೆ ಹೋಟೆಲ್ ಮಾಲಿಕರೊಂದಿಗೆ ಸಭೆ ನಡೆಸಲಾಗಿದ್ದು 10 ಕ್ಕಿಂತ ಹೆಚ್ಚು ಹೋಟೆಲ್ ಮಾಲಿಕರು ಭಾಗವಹಿಸಲಿದ್ದಾರೆ. https://ainlivenews.com/do-you-know-why-you-should-not-cut-your-nails-at-night-heres-why/ ದೋಸೆ ಹಬ್ಬವನ್ನು ಏರ್ಪಡಿಸುವ ಮೂಲಕ ದಾವಣಗೆರೆ ದೋಸೆಯ ಸಾಂಪ್ರದಾಯಿಕತೆ ಉಳಿಸುವ…

Read More

ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಕಾಟೇರ’ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 16ರಂದು ಶನಿವಾರ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಕಾಟೇರ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 16ಕ್ಕೆ ಬಿಡುಗಡೆ’ಯಾಗಲಿದೆ ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ. https://x.com/RocklineEnt/status/1734884415753597158?s=20 ಡಿ ಬಾಸ್ ದರ್ಶನ್ ‘ಕಾಟೇರ’ನಾಗಿ ತೆರೆಮೇಲೆ ಅಬ್ಬರಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ಸದ್ಯ ಚಿತ್ರತಂಡ ಒಂದೊಂದೇ ಹಾಡು ರಿಲೀಸ್ ಮಾಡಿ ಅಭಿಮಾನಿಗಳಿಗೆ ಕಿಕ್ ನಿಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ‘ಪಸಂದಾಗವನ್ನೆ’ ಹಾಗೂ ‘ಯಾವ ಜನುಮದ ಗೆಳತಿ’ ಹಾಡು ಅಭಿಮಾನಿಗಳ ಮನ ಗೆದ್ದಿದೆ. ಇದೀಗ ಟ್ರೈಲರ್ ದಿನಾಂಕ ಘೋಷಣೆಯಾಗಿದ್ದು, ದಾಸನ ಫ್ಯಾನ್ಸ್​ ಥ್ರಿಲ್ ಆಗಿದ್ದಾರೆ. ಇದೇ ಡಿಸೆಂಬರ್ 29ರಂದು ಕಾಟೇರ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಈಗಾಗಲೇ ಡಿ ಬಾಸ್ ಫ್ಯಾನ್ಸ್ ಕಾಟೇರನಿಗೆ ಅದ್ದೂರಿ ಸ್ವಾಗತ ಕೋರಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ವರ್ಷದ ಕೊನೆಯ ಬಹುನಿರೀಕ್ಷಿತ ಚಿತ್ರವಾಗಿದ್ದು, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್…

Read More