Author: AIN Author

ಹೆಸರಾಂತ ನಟಿ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಿಂಗಳ ಹಿಂದೆಯಷ್ಟೇ ಇವರ ಡೀಪ್‌ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಸರಕಾರದ ಮಟ್ಟದಲ್ಲಿ ಚರ್ಚೆಗೂ ಕಾರಣವಾಗಿತ್ತು. ಆದರೂ, ಅದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಹರಿಬಿಟ್ಟ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ. ತಿಂಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ರಶ್ಮಿಕಾ ಪರ ಅನೇಕರು ಮಾತನಾಡಿದ್ದರು. ದುರುಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು, ಡೀಪ್‌ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿತ್ತು. ಆದರೂ, ಡೀಪ್‌ಫೇಕ್ ಕಾಟ ಮುಂದುವರೆದಿದೆ. ಡೀಪ್‌ನೆಕ್ ಬ್ಲಾಕ್ ಡ್ರೆಸ್‌ನಲ್ಲಿದ್ದ ಯುವತಿಯೊಬ್ಬರ ವಿಡಿಯೋವನ್ನು ಥೇಟ್ ರಶ್ಮಿಕಾ ಮಂದಣ್ಣ ಅವರಂತೆ ಮಾರ್ಫ್ ವಿಡಿಯೋ ಸೃಷ್ಟಿಸಿದ್ದರು. ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಜರಾ ಪಟೇಲ್ ಎನ್ನುವುದು ಗೊತ್ತಾಗಿತ್ತು. ಡೀಪ್‌ಫೇಕ್ ತಂತ್ರಜ್ಞಾನ (Deepfake Technology) ಬಳಸಿ ರಶ್ಮಿಕಾ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಯತ್ನಿಸಿದ್ದಕ್ಕೆ…

Read More

ನವದೆಹಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತಾ ಉಲ್ಲಂಘನೆಯ ಮಾಸ್ಟರ್‌ಮೈಂಡ್‌ ಲಲಿತ್‌ ಝಾನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋಲ್ಕತ್ತಾ ಮೂಲದ ಶಿಕ್ಷಕ ಎರಡು ದಿನಗಳ ಕಾಲ ಪರಾರಿಯಾಗಿದ್ದ. ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಜಿಗಿದ ಇಬ್ಬರು ಯುವಕರು ಹಳದಿ ಬಣ್ಣದ ಹೊಗೆ ಸಿಂಪಡಿಸಿದ್ದರು. ಭದ್ರತಾ ಉಲ್ಲಂಘನೆಗಾಗಿ ಐವರನ್ನು ಬುಧವಾರ ಬಂಧಿಸಲಾಗಿತ್ತು. https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಸಾಗರ್‌, ಮನೋರಂಜನ್‌, ಅಮೋಲ್‌ ಮತ್ತು ನೀಲಂ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿತ್ತು. ಅವರ ಜೊತೆ ಕೈಜೋಡಿಸಿದ್ದ ಮತ್ತೊಬ್ಬ ಆರೋಪಿ ವಿಶಾಲ್‌ನನ್ನು ಬಳಿಕ ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿಗಳು ಸಂಸತ್ತಿಗೆ ಬರುವ ಮೊದಲು ವಿಶಾಲ್‌ ಅವರ ಗುರುಗ್ರಾಮದ ಮನೆಯಲ್ಲೇ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಲಲಿತ್‌ ಝಾ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈಗ ಪ್ರಕರಣದ ಮಾಸ್ಟರ್‌ಮೈಂಡ್‌ನನ್ನು ಬಂಧಿಸಿದ್ದಾರೆ. ಲಲಿತ್‌ ಝಾ ತಾನಾಗಿಯೇ ಠಾಣೆಗೆ ಬಂದು ಸರೆಂಡರ್‌ ಆಗಿದ್ದಾನೆ ಎನ್ನಲಾಗಿದೆ. 

Read More

ಬೆಳಗಾವಿ, ಡಿ. 15: “ಬಿಜೆಪಿ ನಾಯಕರಿಗೆ ರಾಜಕಾರಣ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿಯಾಗಲಿ, ಜನರ ಸಮಸ್ಯೆಯಾಗಲಿ ಅಲ್ಲ. ಅವರಿಗೆ ಜನರ ಸಮಸ್ಯೆ ಬಗ್ಗೆ ಆಸಕ್ತಿ ಇಲ್ಲವೆಂದರೆ ನಾವೇನು ಮಾಡೋಕಾಗುತ್ತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ಸುವರ್ಣಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಉತ್ತರಿಸಿದರು. “ಬಿಜೆಪಿ ಹಾಗೂ ಜನತಾದಳದವರಿಗೆ ಜನರ ಸಮಸ್ಯೆ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಮುಖ್ಯ. ಆದರೆ ಬಿಜೆಪಿಯವರಿಗೆ ಈ ಬಗ್ಗೆ ಚರ್ಚೆ ಮಾಡಲು ಆಸಕ್ತಿ ಇಲ್ಲದಿದ್ದರೆ ನಾವೇನು ಮಾಡಲು ಸಾಧ್ಯ? ಬಿಜೆಪಿಗೆ ಕೇವಲ ರಾಜಕಾರಣ ಬೇಕು. ಅವರು ರಾಜಕಾರಣ ಮಾಡಿಕೊಂಡಿರಲಿ, ನಾವು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ” ಎಂದರು. ಭೋಜನಕೂಟದಲ್ಲಿ ಅನ್ಯ ಪಕ್ಷಗಳ ಶಾಸಕರ ಭಾಗಿ ವಿಚಾರವಾಗಿ ಕೇಳಿದಾಗ, “ಮದುವೆ, ಶುಭ ಸಮಾರಂಭ, ಭೋಜನ ಕೂಟದಲ್ಲಿ ನಾಯಕರು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸೇರುತ್ತಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿಯವರು ನನ್ನ ಜೊತೆ ಮಾತನಾಡುವುದು, ನಮ್ಮ ಪಕ್ಷದ ನಾಯಕರು ಅವರ ಜೊತೆ ಮಾತನಾಡುವುದು ಸಹಜವಾದುದ್ದು. ರಾಜಕೀಯವಾಗಿ…

Read More

ಬೆಂಗಳೂರು: ದ್ವೇಷದ ಭಾಷಣ ಪ್ರಕರಣಗಳನ್ನು ತಡೆಯಲು ಬಲಪಂಥೀಯ ಕಾರ್ಯಕರ್ತರ ಮೇಲೆ ಸರ್ಕಾರ ನಿಗಾ ಇರಿಸಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ತುಳಸಿ ಮುನಿರಾಜು ಕೇಳಿದ ಪ್ರಶ್ನೆಗೆ ಡಾ.ಜಿ.ಪರಮೇಶ್ವರ ಉತ್ತ ತಿಳಿಸಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು. ಚಕ್ರವರ್ತಿ ಸೂಲಿಬೆಲೆ ಅವರಂತಹ ಕಾರ್ಯಕರ್ತರನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದುತ್ವವಾದಿಗಳ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಬಗ್ಗೆ ಬಿಜೆಪಿಯ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಅಂತಹ ಯಾವುದೇ ಘಟನೆ ವರದಿಯಾಗಿಲ್ಲ. ಆದರೂ ಸರ್ಕಾರ ಬಲಪಂಥೀಯ ಕಾರ್ಯಕರ್ತರು ನೀಡುವ ಹೇಳಿಕೆಗಳ ಮೇಲೆ ನಿಗಾ ಇಟ್ಟಿದೆ ಎಂದು ಹೇಳಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರು ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಿದ್ದಾರೆ. ಅವರ ವಿರುದ್ಧ ಕೋಮುಗಲಭೆ ಪ್ರಕರಣಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಅವರನ್ನು ಗುರಿಯಾಗಿಸುತ್ತಿದೆ ಎಂದು ಗೌಡ ದೂರಿದ್ದಾರೆ.

Read More

ಮಹಾರಾಷ್ಟ್ರ: ತಮ್ಮ ನಟನೆಯ ‘ಡಂಕಿ’ ಸಿನಿಮಾದ ಬಿಡುಗಡೆಗೂ ಮುನ್ನ, ಬಾಲಿವುಡ್‌ನ ಖ್ಯಾತ ನಟ ಶಾರುಕ್ ಖಾನ್ ತಮ್ಮ ಪುತ್ರಿ ಸುಹಾನಾ ಖಾನ್ ಅವರೊಂದಿಗೆ ಶಿರ್ಡಿಯ ಸಾಯಿಬಾಬಾ ಸಮಾಧಿ ದೇಗುಲಕ್ಕೆ ಭೇಟಿ ನೀಡಿದರು. https://ainlivenews.com/katera-trailer-release-on-december-16/ ಶಾರುಕ್ ಖಾನ್ ಅವರ ಭೇಟಿ ವೇಳೆ ದೇಗುಲದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾರೂಕ್ ಜತೆಗೆ ಅವರ ವ್ಯವಸ್ಥಾಪಕಿ ಪೂಜಾ ದದ್ದಾನಿ ಕೂಡ ಇದ್ದರು. ಎರಡು ದಿನಗಳ ಹಿಂದಷ್ಟೇ ಜಮ್ಮುವಿನ ರೆಯಾಸಿ ಜಿಲ್ಲೆಯಲ್ಲಿರುವ ವೈಷ್ಟೋದೇವಿ ದೇಗುಲಕ್ಕೂ ಶಾರುಕ್ ಭೇಟಿ ನೀಡಿದ್ದರು. ಜವಾನ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅವರು ತಿರುಪತಿಗೆ ಭೇಟಿ ನೀಡಿದ್ದರು. ಶಾರುಕ್ ಅಭಿನಯದ ‘ಡುಂಕಿ’ ಚಿತ್ರ ಡಿ.21ರಂದು ಬಿಡುಗಡೆಯಾಗಲಿದೆ.

Read More

2021ರಲ್ಲಿ ತೆರೆಗೆ ಬಂದ ‘ಬಡವ ರಾಸ್ಕಲ್ ‘ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ ಅವರು ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ನಿರ್ಮಿಸಿ ನಟಿಸಿದ್ದ ‘ಬಡವ ರಾಸ್ಕಲ್’ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ಫ್ಯಾನ್ಸ್ ರಂಜಿಸಲು ಅಣಿಯಾಗಿದ್ದಾರೆ. ಹೌದು ಡಾಲಿ ಧನಂಜಯ್ ಜನ್ಮದಿನಕ್ಕೆ ಸಣ್ಣದೊಂದು ಝಲಕ್ ಬಿಟ್ಟು ಥ್ರಿಲ್ ಹೆಚ್ಚಿಸಿರುವ ಅಣ್ಣ From Mexico ಚಿತ್ರತಂಡವೀಗ ಸದ್ದಿಲ್ಲದೇ ಮುಹೂರ್ತ ಮುಗಿಸಿ ಶೂಟಿಂಗ್ ಅಖಾಡಕ್ಕೆ ಹೆಜ್ಜೆ ಇಡಲು ತಯಾರಾಗಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ಧನು ಹಾಗೂ ಶಂಕರ್ ಗುರು ಜೋಡಿಯ ಅಣ್ಣ From Mexico ಸಿನಿಮಾದ ಮುಹೂರ್ತ ನೆರವೇರಿದೆ. ರಾಯಲ ಸ್ಟುಡಿಯೋಸ್ ನ ಪಾಲುದಾರರಾದ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮೆರಾಗೆ ಚಾಲನೆ ನೀಡಿದರು. ಸ್ನೇಹಿತ ಹಾಗು ಹಿತೈಷಿಗಳಾದ ಮೃಣಾಲ್ ಹೆಬ್ಬಾಳ್ಕರ್ ರವರು ಸಿನಿಮಾದ ಮುಹೂರ್ತಕ್ಕೆ ಆಗಮಿಸಿ…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರಾಧ್ಯದೈವ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಕಳಸರೋಹಣ ಹಾಗೂ ಲಕ್ಷದೀಪೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಡಿಸೆಂಬರ 18. 12. 2023 ರಂದು ಮುಂಜಾನೆ 9 ಗಂಟೆಗೆ ಶ್ರೀ ವೈಭವ ಚಿತ್ರಮಂದಿರದಿಂದ ಭವ್ಯ ಕಳಸದ ಮೆರವಣಿಗೆ ಕುಂಭಮೇಳ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಪ್ರಾರಂಭಗೊಂಡು ಬನಹಟ್ಟಿಯ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಶ್ರೀ ಕಾಡುಸಿದ್ದೇಶ್ವರ ದೇವಾಲಯಕ್ಕೆ ತಲುಪುವುದು ಮತ್ತು ಮಂಗಳವಾರ ದಿನಾಂಕ 19. 12. 2023 ರಂದು ಶ್ರೀ ಕಾಡಸಿದ್ದೇಶ್ವರ, ದೇವಾಲಯದಲ್ಲಿ ಕಳಸಾರೋಹಣ ಮತ್ತು ಲಕ್ಷದೀಪೋತ್ಸವ ದೀಪ ಸ್ತಬ್ದ ಪರಮ ಪೂಜ್ಯ ಶ್ರೀ ಜಗದ್ಗುರು ಅದೃಷ್ಟಕಾಡ ಶಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಸಿದ್ದಗಿರಿ ಮಹಾಸಂಸ್ಥಾನ ಮಠ ಕಣೆರಿ ಕೊಲ್ಲಾಪುರ ಇವರ ಅಮೃತ ಹಸ್ತ ಮತ್ತು ವಿವಿಧ ಮಹಾಸ್ವಾಮಿಗಳ ಕೃಪ ಆಶೀರ್ವಾದಗಳೊಂದಿಗೆ ಉದ್ಘಾಟನಾ ಸಮಾರಂಭ ಮತ್ತು, ಧಾರ್ಮಿಕ ಸಭೆಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಂಗಳವಾರ ಪೇಟ ಹಟಗಾರ ದೈವ ಮಂಡಳಿ, ಚೇರ್ಮಣ್ಣರಾದ ಶ್ರೀಶೈಲ ದಬಾಡಿ ಹೇಳಿದರು. ಇದೇ ಸಂದರ್ಭದಲ್ಲಿ…

Read More

ನಮ್ಮ ಭಾರತ ಪವಿತ್ರನಾಡು. ತತ್ವಾದರ್ಶಗಳ ನೆಲೆವೀಡು. ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ಋಷಿಗಳು, ಮಹರ್ಷಿಗಳು, ತತ್ವಜ್ಞಾನಿಗಳು, ಶರಣರು, ದಾಸರು, ಸಾಧು ಸಂತರು, ಸತ್ಪುರುಷರು ಮತ್ತು ಮಠಾಧಿಪತಿಗಳು ಸಮಾಜವನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ದಿದ್ದಾರೆ ವಿಶ್ವಗುರು ಬಸವಣ್ಣನವರು ಗುರುಸ್ಥಾನದಲ್ಲಿ ನಿಂತು ಜನರಲ್ಲಿ ಸದ್ಗುಣಗಳ ಬೀಜ ಬಿತ್ತಿ, ಸದಾ ಜೀವನಾದರ್ಶ ಮೌಲ್ಯ, ಜ್ಞಾನ ಪಸರಿಸಿ, ಸಮಾಜ ಕಟ್ಟುವಲ್ಲಿ ಇವರ ಸೇವೆ ಅನನ್ಯವಾಗಿದೆ ಎಂದು ಶ್ರೀ ಪರಮಪೂಜ್ಯ ಬಸವಗೀತಾ ಮಹಾತಾಯಿಯವರು ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ವಿರಕ್ತ ಮಠದಲ್ಲಿ ಇಳಕಲ್ಲಿನ ಪರಮಪೂಜ್ಯ ಲಿಂಗೈಕ ಶ್ರೀ ಮ. ನಿ. ಪ್ರ ಡಾ ಮಾಹಾಂತ ಶಿವಯೋಗಿಗಳವರ ಹಾಗೂ ಶ್ರೀ ಮ. ನಿ. ಪ್ರ. ಗುರುಮಹಾಂತ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಪ್ರತಿ ವರ್ಷದಂತೆ ಈ ವರ್ಷವೂ ವಿರಕ್ತ ಮಠದ ಪೂಜ್ಯರಾದ ಲಿಂಗ ಶ್ರೀ ಸಿದ್ದರಾಮ ಶಿಯೋಗಿಗಳ, ಮತ್ತು ಶ್ರೀ ಸಿದ್ಧರಾಮ ಸ್ವಾಮಿಗಳ ಉಪಸ್ಥಿತಿಯಲ್ಲಿ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ನಿಮಿತ್ಯ ಜರುಗುವ 15 ದಿನಗಳ ಪ್ರವಚನ…

Read More

ಬೆಂಗಳೂರು: ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿತ್ತು ನಕಲಿ ಕ್ಲಿನಿಕ್ ಗಳು ಹಣಕೋಸ್ಕರ ಜನರ ಜೀವದ ಜೊತೆ ಚೆಲ್ಲಾಟ ಆಡ್ತಿದ್ದವರಿಗೆ ಶಾಕ್ ಕೊಟ್ಟ ಆರೋಗ್ಯ ಇಲಾಖೆ  ರಾಜ್ಯದ್ಯಂತ 1400ಕ್ಕೂ ಅಧಿಕ ನಕಲಿ ಕ್ಲೀನಿಕ್ಗಳಿಗೆ ಬಿತ್ತು ಬ್ರೇಕ್ ನಕಲಿ ಕ್ಲಿನಿಕ್ ಗಳಿಗೆ ಬ್ರೇಕ್ ಜಿಲ್ಲೆ ಪತ್ತೆ ಹಚ್ಚಿದ ಕೇಸ್ ಬೆಂಗಳೂರು ನಗರ 67 ಬೆಳಗಾವಿ 170 ಬೀದರ್ 423 ಬಳ್ಳಾರಿ 33 ಬಾಗಲಕೋಟೆ 01 ಬೆಂ.ಗ್ರಾಮಾಂತರ 03 ಚಾಮರಾಜನಗರ 51 ಚಿಕ್ಕಬಳ್ಳಾಪುರದ 45 ಚಿಕ್ಕಮಗಳೂರು 11 ಚಿತ್ರ ದುರ್ಗ 02 ದಕ್ಷಿಣ ಕನ್ನಡ 26 ದಾವಣಗೆರೆ 21 ಧಾರವಾಡ 70 ಗದಗ 11 ಹಾಸನ 22 ಹಾವೇರಿ 19 ಕಲಬುರಗಿ 82 ಕೊಡಗು 01 ಕೋಲಾರ 179 ಕೊಪ್ಪಳ 33 ಮಂಡ್ಯ 17 ಮೈಸೂರು 02 ರಾಯಚೂರು 11 ರಾಮನಗರ 09 ಶಿವಮೊಗ್ಗ 74 ತುಮಕೂರು 12 ಉಡುಪಿ 2 ಉತ್ತರ ಕನ್ನಡ 15 ವಿಜಯಪುರ 11 ಯಾದಗಿರಿ 11 ವಿಜಯನಗರ 2…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಜಮಖಂಡಿ ಅರ್ಬನ್ ಬ್ಯಾಂಕ್‌ನ ಜಿ.ಎಸ್.ನ್ಯಾಮಗೌಡ ಪರ ಪ್ರಚಾರ ಸಭೆಯಲ್ಲಿ ಅವಳಿ ನಗರದ ಸದಸ್ಯರ ಪರ ಮಾತನಾಡಿದ ಧುರೀಣ ರಾಜಶೇಖರ ಸೋರಗಾಂವಿ. ಜಮಖಂಡಿ ಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ನಾಮ್ ಕೆ ವಾಸ್ತಾ ಎಂಬಂತೆ ಬನಹಟ್ಟಿಯ ಒಬ್ಬನೇ ಅಭ್ಯರ್ಥಿಯನ್ನು ಪ್ರತಿ ಬಾರಿ ಪೆನಲ್‌ನಲ್ಲಿ ತೆಗೆದುಕೊಂಡರೂ ನಮ್ಮ ಪ್ರದೇಶದ ಸದಸ್ಯರ ಮತಗಳನ್ನು ಪಡೆದುಕೊಂಡರೂ ಜಮಖಂಡಿ ಪ್ರದೇಶದ ಸದಸ್ಯರ ನೀರಸ ಪ್ರತಿಕ್ರಿಯೆ ಕಾರಣ ಆದ್ಯತೆಯ ಮತಗಳ ಕೊರತೆಯಿಂದ ನಮ್ಮ ಅಭ್ಯರ್ಥಿ ಪರಾಭವಗೊಳ್ಳುವುದು ನಿರಂತರವಾಗಿದೆ. ಜಮಖಂಡಿ ಮತದಾರರು ಹೆಚ್ಚಿದ್ದು, ರಬಕವಿ-ಬನಹಟ್ಟಿ ಮತದಾರರ ಸಂಖ್ಯೆ ಕಡಿಮೆಯಿರುವ ಕಾರಣ ನಮ್ಮ ಅಭ್ಯರ್ಥಿಗಳತ್ತ ಮತ ಬಾರದ ಕಾರಣ ನಾವು ವಂಚಿತರಾಗುತ್ತಿದ್ದೇವೆ. ಈ ಬಾರಿ ಜಿ.ಎಸ್.ನ್ಯಾಮಗೌಡ ಪೆನಲ್‌ನಲ್ಲಿ ನಮ್ಮ ಭಾಗದ ಯುನೂಸ್ ಚೌಗಲಾ ಮತ್ತು ರಾಜೇಂದ್ರ ಅಂಬಲಿಯವರನ್ನು ಸೇರ್ಪಡೆಗೊಳಿಸಿಕೊಂಡಿದ್ದು, ಪೆನೆಲ್‌ನ ಪ್ರತಿಯೊಬ್ಬರೂ ನಮ್ಮ ಪ್ರದೇಶದ ಅಭ್ಯರ್ಥಿಗಳಿಗೆ ಜಮಖಂಡಿ ಮತದಾರರಿಂದ ಮತ ಹಾಕಿಸಬೇಕು. ನಾವು ರಬಕವಿ-ಬನಹಟ್ಟಿ ಪ್ರದೇಶದಿಂದ ಬಂದು ನಿಮಗೆ ಮತ್ತು…

Read More