Author: AIN Author

ಬೆಂಗಳೂರು:  ಬಿಎಂಟಿಸಿ ಡ್ರೈವರ್ಗಳೆಂದ್ರೆ ಅವರು ಯಮದೂತರೆನ್ನೋ ಕಳಂಕವಿದೆ. ಅವರ ಯಾವಾಗಲೂ ಸುದ್ದಿಯಾಗದೇ ಆಕ್ಸಿಡೆಂಟ್ ಗಳಿಂದ. ಹೀಗಾಗಿ ಬಿಎಂಟಿಸಿಗೆ ಕಿಲ್ಲರ್ ಬಸ್ ಅನ್ನೋ ಹಣೆಪಟ್ಟಿ ಅಂಟಿದೆ. ಆದ್ರೆ ಇದೀಗ ಈ ಅಪವಾದಿಂದ ಮುಕ್ತವಾಗುವದಕ್ಕೆ ಹೆಜ್ಜೆ ಇರಿಸಿದೆ. ನಗರದಲ್ಲಿ ಹೆಚ್ಚಾಗ್ತಿರೋ ಆಕ್ಸಿಡೆಂಟ್ ರೇಟ್ ಇಳಿಸಲು ಇದೀಗ ಬಿಎಂಟಿಸಿಗೆ ಗುದ್ದು ನೀಡಲು ಪೊಲೀಸ್ ಇಲಾಖೆ ಮಧ್ಯೆ ಪ್ರವೇಶ ಮಾಡಿದೆ. ಅದು ಹೇಗೆ ಅಂತೀರಾ. ಈ ಸ್ಟೋರಿ.. ಬಿಎಂಟಿಸಿ ಬೆಂಗಳೂರು ನಗರದ ಜೀವನಾಡಿ. ಮೆಟ್ರೋ ಶುರುವಾದ್ರೂ ನಗರದಲ್ಲಿ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಇಳಿಯಾಗಿಲ್ಲ. ನಗರದ‌ ರಸ್ತೆ ರಸ್ತೆಯಲ್ಲೂ ಬಿಎಂಟಿಸಿ ಬಸ್ ಗಳು ಓಡಾಟ ನಡೆಸುತ್ತವೆ. ಬೆಂಗಳೂರಿನ ಟ್ರಾಫಿಕ್ ದಟ್ಟನೆಯಲ್ಲಿ ಓಡಾಟದ ವೇಳೆ ಈ ಬಿಎಂಟಿಸಿ ಬಸ್ ಗಳು ನೆಗಟಿವ್ ಕಾರಣಕ್ಕೆ ತುಂಬಾನೆ ಸುದ್ದಿ ಮಾಡ್ತಾವೆ. ಯಾವಾಗಲೂ ಬಿಎಂಟಿಸಿ ಡ್ರೈವರ್ ಗಳು ಸರಿಯಿಲ್ಲ, ಸರಿಯಾಗಿ ಡ್ರೈವ್ ಮಾಡಲ್ಲ, ರ್ಯಾಶ್ ಡ್ರೈವಿಂಗ್ ಮಾಡ್ತಾರೆ ಅನ್ನೋ ಸಾಲು ಸಾಲು ಆರೋಪ ಜನ ಮಾಡ್ತಾರೆ. ಮುಖ್ಯವಾಗಿ ನಗರದಲ್ಲಿ ಬಿಎಂಟಿಸಿ ಬಸ್ ಗಳು ಆಕ್ಸಿಡೆಂಟ್…

Read More

ಬೆಂಗಳೂರು: ಇದು ಪವಾಡವೋ? ಚರಿತ್ರೆಯೋ? ಮರು ಜನ್ಮವೋ? ಯಾಕಂದ್ರೆ ಅಂತಹದೊಂದು ಘಟನೆ ನಡೆದಿದೆ. ತಲೆಗೆ ಗುಂಡು ಹೊಕ್ಕಿ 18 ವರ್ಷ ಕಳೆದವನಿಗೆ ನಗರದ ಆಸ್ಪತ್ರೆಯಲ್ಲಿ ಮರುಜನ್ಮ ಸಿಕ್ಕಿದೆ. ಈ ಕುರಿತ ವರದಿ ಇಲ್ಲಿದೆ. ಕಿವಿ ಕೇಳಿಸುತ್ತಿರಲಿಲ್ಲ, ಭಾಷೆ ಬರ್ತಿರ್ಲಿಲ್ಲ. ಅಲೆಯದ ಆಸ್ಪತ್ರೆ ಇಲ್ಲ..ಭೇಟಿಯಾಗದ ವೈದ್ಯರಿಲ್ಲ.ನೋವು ಅನುಭವಿಸದ ದಿನಗಳಿಲ್ಲ…ಇದು 18 ವರ್ಷಗಳ ಕಾಲ ಯಾತನೆ ಅನುಭವಿಸಿ ಸಾವಿನ ಮನೆಯಿಂದ ಹೊರ ಬಂದವನ ಸ್ಟೋರಿ. ಯೆಮನ್ ಪ್ರಜೆಗೆ ನಗರದ ಆಸ್ಪತ್ರೆಯಲ್ಲಿ ಮರುಜನ್ಮ ಸಿಕ್ಕ ಕಹಾನಿ. ತಲೆಗೆ ಗುಂಡು ಹೊಕ್ಕಿ 18 ವರ್ಷ ಕಳೆದವನಿಗೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಮರು ಜನ್ಮ ಕೊಟ್ಟಿದೆ. ಬದುಕಿನುದ್ದಕ್ಕೂ ನರಕ ಯಾತನೆ ಕಟ್ಟಿಟ್ಟ ಬುತ್ತಿ ಅಂದುಕೊಂಡು ದಿನ ದೂಡುತ್ತಿದ್ದ ಅಮಾಯಕ ವ್ಯಕ್ತಿಯ ಬಾಳಿಗೆ ಹೊಸ ಹುರುಪು ಸಿಕ್ಕಿದೆ. ಇನ್ನೇನು ಜೀವನ ಮುಗಿದೇ ಹೋಯಿತು, ಬದುಕು ಕ್ಷಣಿಕ ಅಂದುಕೊಂಡವನಿಗೆ ಬೆಂಗಳೂರು ವೈದ್ಯರು ದೇವರಾಗಿ ಬಂದು ಜೀವ ಉಳಿಸಿದ್ದಾರೆ. ಇದು ಪವಾಡವೋ? ಚರಿತ್ರೆಯೋ? ಮರು ಜನ್ಮವೋ? ಗೊತ್ತಿಲ್ಲ. ಆದರೆ ನಮ್ಮ ಹೆಮ್ಮೆಯ ಬೆಂಗಳೂರಿನ…

Read More

ಚಿತ್ರದುರ್ಗ:  ಮಾಜಿ ಸಚಿವ ಹೆಚ್. ಏಕಾಂತಯ್ಯ ಅವರು ಮುರುಘಾ ಮಠದಿಂದ ನಿರ್ಮಾಣ ಮಾಡುತ್ತಿರುವ ಕಂಚಿನ ಬಸವ ಪುತ್ಥಳಿ ಅನುದಾನದಲ್ಲಿ ದುರುಪಯೋಗವಾಗಿದೆ ಎಂದು ಜಿಲ್ಲಾಧಿಕಾರಿಗೆ ದೂರು‌ ನೀಡಿದ್ದು, ಇದರಲ್ಲಿ ಯಾವುದೇ ದುರುಪಯೋಗವಾಗಿಲ್ಲ ಎಂದು ಮಠದ ಉಸ್ತುವಾರಿಗಳಾದ ಬಸವಪ್ರಭು ಶ್ರೀಗಳು ಸ್ಪಷ್ಟನೆ ನೀಡಿದರು. ಅವರು ಮುರುಘಾ ಮಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಮುರುಘಾ ಮಠದಲ್ಲಿ ನಿರ್ಮಾಣವಾಗುತ್ತಿರುವ 320 ಅಡಿಗಳ ಬಸವ ಪುತ್ಥಳಿ ಯಲ್ಲಿ ದುರಪಯೋಗವಾಗಿದೆ ಎಂದು ಅವರು ಆರೋಪಿಸಿರುವುದು ಯಾವುದೋ ದ್ವೇಷದಿಂದ ಮಾಡಿದ್ದಾರೆ. ಜಿಲ್ಲೆ ಅಭಿವೃದ್ದಿಯಾಗುವುದು ಅವರಿಗೆ ಬೇಡವಾಗಿದೆ ಅನಿಸುತ್ತದೆ. ದುರಪಯೋಗವಾಗಿದೆ ಎಂಬ ದೂರಿನ ಮೇರೆಗೆ ಜಿಲ್ಲಾಧಿಕಾರಿ ಐದು ಜನರ ಸಮಿತಿಯೊಂದನ್ನು ರಚಿಸಿದ್ದಾರೆ. ಅವರು ತನಿಖೆ ನಡೆಸಲು ಬಂದಾಗ ಅವರಿಗೆ ಎಲ್ಲಾ ರೀತಿಯ ದಾಖಲೆಗಳನ್ನು ಕೊಡಲು ನಾವು ಸಿದ್ದರಿದ್ದೇವೆ. 25ಕೋಟಿ  ಹಣ ಖರ್ಚಾಗಿದೆ. 10 ಕೋಟಿ ಬ್ಯಾಂಕಿನಲ್ಲಿದೆ. ಈ ಹಣದಲ್ಲಿ ಮತ್ತೆ ಕಾಮಗಾರಿ ಆರಂಭವಾಗುತ್ತದೆ . ಏಕಾಂತಯ್ಯ ಅವರು ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದು, ಯಾವುದೇ ತನಿಖೆ ಎದುರಿಸಲು ಸಿದ್ದರಿದ್ದೇವೆ. ಇದರ ಬಗ್ಗೆ ಕಾನೂನಿ ಹೋರಾಟ…

Read More

ಕಲಬುರಗಿ: ಸರ್ಕಾರಿ ಬಸ್ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಜೇವರ್ಗಿ ರಸ್ತೆಯ ಸೆಂಟ್ರಲ್ ಜೈಲ್ ಬಳಿ ಘಟನೆ ನಡೆದಿದ್ದು ರಾಯಚೂರಿನಿಂದ ಕಲಬುರಗಿ ಕಡೆ ಬಸ್ ಬರ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೋಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ..

Read More

ಬೆಂಗಳೂರು:    9 ಸಾವಿರ ಸಾರಿಗೆ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿರುವ ಅವರು, 2016ರ ನಂತರ ಸಿಬ್ಬಂದಿ ನೇಮಕಾತಿ ಆಗಲಿಲ್ಲ. ಪ್ರಯಾಣಿಕರಿಗೆ ಗುಣಮಟ್ಟದ ಸಂಚಾರ ಸೌಲಭ್ಯ ಒದಗಿಸುವ ಉದ್ದೇಶದಿಂದ 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಶಕ್ತಿ ಯೋಜನೆಯಿಂದ ನಮ್ಮ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ 15 ರಿಂದ 20 ಲಕ್ಷ ಹೆಚ್ಚಾಗಿದೆ. 4 ವರ್ಷ ಸತತವಾಗಿ ಬಸ್ ಖರೀದಿ ಮಾಡಿಲ್ಲ. ಫೆಬ್ರವರಿ ಕೊನೆ ವೇಳೆಗೆ 5,500 ಬಸ್ ಬರಲಿವೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ‌ಬಸ್ ಸಮಸ್ಯೆ ಕುರಿತು ಶಾಸಕ ಬಿ.ವೈ ವಿಜಯೇಂದ್ರ‌ ಪೋಸ್ಟ್ ‌ವಿಚಾರವಾಗಿ ಮಾತನಾಡಿ, ವಿಜಯೇಂದ್ರ‌ ಅವರು ತುಮಕೂರಿನ ವಿದ್ಯಾರ್ಥಿಗಳ‌ ಬಸ್ ಸಮಸ್ಯೆ‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ‌ ಮಾಡ್ತಿದ್ದೇವೆ. ಜನವರಿ, ಫೆಬ್ರವರಿಯಲ್ಲಿ‌ ಹೊಸ‌ ಬಸ್ ಗಳು ಬರಲಿವೆ. ಜೊತೆಗೆ ಡ್ರೈವರ್, ಕಂಡಕ್ಟರ್ ಗಳ ನೇಮಕಾತಿ ಕೂಡ‌ ಆಗಲಿದೆ ಎಂದು ತಿಳಿಸಿದ್ದಾರೆ. ಈಗಿನ ಸಮಸ್ಯೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ‌ಕಾರಣ. ಹಿಂದೆ ‌ನೇಮಕಾತಿ ಮಾಡಿರಲಿಲ್ಲ. ಈಗ…

Read More

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಶಾಲೆ ಆವರಣದಲ್ಲಿ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬವನ್ನು ಡಿ. 16ರಂದು ಸಂಜೆ 5ಗಂಟೆಗೆ ಏರ್ಪಡಿಸಲಾಗಿದೆ ಎಂದು ಆಯೋಜಕಕ ರಾಜು ಜರತಾರಘರ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಇತರ ನಾಯಕರು ಆಗಮಿಸುವರು ಎಂದರು. ಸತತ ಮೂರು ವರ್ಷ ಈ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಿದ್ದೇವೆ. ಇದು ನಾಲ್ಕನೇ ವರ್ಷ. ಈ ವರ್ಷ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು. ಈಗಾಗಲೇ 10 ಶಾಲೆಗಳಲ್ಲಿ ಮಕ್ಕಳಿಗೆ ಆಕಾಶ ಬುಟ್ಟಿ ತಯಾರಿಸುವ ಸ್ಪರ್ಧೆ ನಡೆದಿದೆ. ಬೆಂಕಿಯಿಲ್ಲದೇ ಅಡುಗೆ ತಯಾರಿಸುವುದು, ಮಕ್ಕಳಿಗೆ ಆನ್‌ಲೈನ್ ಶ್ಲೋಕ ಅಥವಾ ಮಂತ್ರ ಪಠಣ, ವೇಷಭೂಷಣ, ಕೇಶವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿದೆ. ಗೆದ್ದವರಿಗೆ ನಗದು ಬಹುಮಾನ ನೀಡಲಾಗುವುದು. 10 ಲಕ್ಕಿ ಡ್ರಾ ಕೂಪನ್ ಬಹುಮನವನ್ನೂ ಕೊಡಲಾಗುತ್ತಿದೆ ಎಂದರು. ಬಿಜೆಪಿ ರಾಜ್ಯ ಶಿಸ್ತು ಸಮಿತಿ…

Read More

ಬೆಳಗಾವಿ: ಸಹಕಾರಿ ಸಾಲದ ಮೇಲಿನ‌ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ನಮ್ಮ ಸರ್ಕಾರ ತೀರ್ಮಾನಿಸಿದೆ. ಇದರಿಂದ ಸಾಲಮನ್ನಾ ಮಾಡುವ ಕುರಿತು ನಾವು ನಮ್ಮ ಪ್ರಣಾಳಿಕೆಯಲ್ಲಿ  ಹೇಳಿಲ್ಲ. ಬಿಜೆಪಿಯವರು 2018 ರ ತಮ್ಮ ಪ್ರಣಾಳಿಕೆಯಲ್ಲಿ ನಮ್ಮ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರಿಕೃತ ಬ್ಯಾಂಕ್‌ ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಈ ಕುರಿತು ಏನಾದರೂ ಮಾಡಿದರಾ? ನಯಾಪೈಸೆ ಬಿಡುಗಡೆ ಮಾಡಿದರಾ? ಹೇಳಿ. ಯಡಿಯೂರಪ್ಪನವರು 2019 ರ ಆಗಸ್ಟ್‌ನಲ್ಲಿ ಅತಿವೃಷ್ಟಿಯ ಕಾರಣಕ್ಕೆ ಬೆಳೆ ಹಾನಿಯಾಗಿತ್ತು. https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಆಗ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಏನು ಹೇಳಿದರು ಗೊತ್ತಾ? “ಕೇಳಿದಷ್ಟು ಹಣ ಕೊಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ” ಎಂದು ಹೇಳಿದ್ದರು. ಯಡಿಯೂರಪ್ಪನವರು ಈ ರೀತಿ ಹೇಳಿದ್ದು…

Read More

ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ತಮ್ಮ ವರ್ಷಾಂತ್ಯದ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಪುಟಿನ್ ಅವರು ತನ್ನ ಗುರಿಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದು, ಶಾಂತಿ ಸ್ಥಾಪನೆಯಾಗುವ ತನಕ ಉಕ್ರೇನ್‌ನಲ್ಲಿ ತಮ್ಮ ಗುರಿಯ ಹಿಂದೆ ಸಾಗುವುದಾಗಿ ಘೋಷಿಸಿದರು. ಪುಟಿನ್ ಅವರು 2024ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಮರಳಿ ಭಾಗವಹಿಸಲು ಇಚ್ಛಿಸುವುದಾಗಿ ಘೋಷಿಸಿದ ಕೆಲ ಸಮಯದಲ್ಲಿ ಈ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ರಷ್ಯಾದಲ್ಲಿ ಅವರು ಹೊಂದಿರುವ ಛಾಪು, ಪ್ರಭಾವವನ್ನು ಗಮನಿಸಿದರೆ, 71 ವರ್ಷದ ಪುಟಿನ್ ಐದನೇ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, 2030ರ ತನಕ ತನ್ನ ಅಧ್ಯಕ್ಷೀಯ ಗದ್ದುಗೆಯನ್ನು ವಿಸ್ತರಿಸುವ ಸಾಧ್ಯತೆಗಳು ದಟ್ಟವಾಗಿವೆ. ಈ ಗೆಲುವು ಅಧ್ಯಕ್ಷರಾಗಿ ಅವರ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದ್ದು, ಅವರು ಒಟ್ಟು 24 ವರ್ಷಗಳ ಕಾಲ ರಷ್ಯಾ ಅಧ್ಯಕ್ಷರಾದಂತಾಗುತ್ತದೆ. https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಪ್ರಶ್ನೋತ್ತರ ಅವಧಿಯಲ್ಲಿ ಪುಟಿನ್ ಅವರು ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಆ ರಾಷ್ಟ್ರ ನಾಜಿ ಮುಕ್ತವಾಗಬೇಕು, ನಿಶ್ಶಸ್ತ್ರೀಕರಣಗೊಳ್ಳಬೇಕು ಮತ್ತು…

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಅವರು ಸಿಂಗಾಪುರಕ್ಕೆ (Singapore) ಹಾರಿದ್ದಾರೆ. ಶನಿವಾರ ಕುಮಾರಸ್ವಾಮಿ ಅವರ ಹುಟ್ಟುಹಬ್ಬವಿದ್ದು, ಜನ್ಮದಿನದ (Birthday) ಆಚರಣೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುಟುಂಬ ಮತ್ತು ಕೆಲ ಆಪ್ತರ ಜೊತೆ ಕುಮಾರಸ್ವಾಮಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. https://ainlivenews.com/govt-monitoring-right-wing-activists-to-prevent-hate-speech-cases-g-parameshwar/ ಅಭಿಮಾನಿಗಳಲ್ಲಿ ಮನವಿ: ನನ್ನ ಜನ್ಮದಿನವಾದ ಡಿಸೆಂಬರ್ 16ರಂದು, ಅಂದರೆ ನಾಳೆ ನಾನು ಬೆಂಗಳೂರು ನಗರದಲ್ಲಿ ಲಭ್ಯವಿರುವುದಿಲ್ಲ. ಕಾರ್ಯಕರ್ತರಾದಿಯಾಗಿ ನನ್ನ ಮೇಲೆ ಪ್ರೀತಿ, ವಾತ್ಸಲ್ಯ ಇರಿಸಿರುವ ಪ್ರತಿಯೊಬ್ಬರೂ ನನ್ನ ವೈಯಕ್ತಿಕ ಭೇಟಿಗೆ ಪ್ರಯತ್ನಿಸದೇ ತಾವು ಇದ್ದಲ್ಲಿಂದಲೇ ಶುಭ ಕೋರಬೇಕಾಗಿ ನಿಮ್ಮೆಲ್ಲರಲ್ಲೂ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೆಚ್‌ಡಿಕೆ ಪೋಸ್ಟ್ ಮಾಡಿದ್ದಾರೆ.

Read More

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡ ಹೆಸರಾಂತ ನಟಿ, ಕನಸಿನ ರಾಣಿ ಮಾಲಾಶ್ರೀ ಕುರಿತಾಗಿ ಬಿಸಿಬಿಸಿ ಚರ್ಚೆಯಾಗಿದೆ. ವಿಧಾನ ಪರಿಷತ್ (Vidhana Parishad) ನಲ್ಲಿ ಈ ಚರ್ಚೆ ನಡೆದಿದ್ದು, ಉಮಾಶ್ರೀ (Umashree) ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಿದ್ದರು. ಅಷ್ಟಕ್ಕೂ ಮಾಲಾಶ್ರೀಯನ್ನು ನೆನಪಿಸಿಕೊಂಡಿದ್ದು ಬಿಜೆಪಿಯ ಸದಸ್ಯ ವಿಶ್ವನಾಥ್ (Vishwanath) ಎನ್ನುವುದು ವಿಶೇಷ. ವಿಧೇಯಕದ ಮೇಲಿನ ಚರ್ಚೆ ವೇಳೆ ಉಮಾಶ್ರೀ ಹೆಸರಿನ ಬದಲಾಗಿ, ಬಾಯ್ತಪ್ಪಿ ಮಾಲಾಶ್ರೀ (Malashree) ಅವರ ಹೆಸರು ಹೇಳಿದರು ವಿಶ್ವನಾಥ್. ಮಾಲಾಶ್ರೀ ಹೆಸರು ಕೇಳಿ ಸಭಾಪತಿಗಳಿಗೆ ಒಂದು ರೀತಿಯಲ್ಲಿ ಅಚ್ಚರಿ ಆಯಿತು. ಹಾಗಾಗಿ ಮಾಲಾಶ್ರೀ ಅವರನ್ನು ಈಗೇಕೆ ನೆನಪಿಸಿಕೊಂಡಿರಿ ಎಂದು ತಮಾಷೆಯಾಗಿಯೇ ವಿಶ್ವನಾಥ್ ಅವರನ್ನು ಕೇಳಿದರು.  ಈ ವೇಳೆ ಮಧ್ಯ ಪ್ರವೇಶ ಮಾಡಿದ ತೇಜಸ್ವಿನಿ ಗೌಡ, ಭಾರತದಲ್ಲಿ ಹೇಮಾಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ರೊ, ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ನಟನೆಯಿಂದ ಹೆಸರು ಮಾಡಿದ್ರು ಎಂದರು. ಮಾತು ಮುಂದುವರೆಸಿದ ತೇಜಸ್ವಿನಿಗೌಡ  ನಾಯಕಿಯಾಗಲು ಸೌಂದರ್ಯದ ಮಾನದಂಡ ಬದಲು ನಟನೆಯ…

Read More