Author: AIN Author

ರೋಹಿತ್​ ಸಾರಥ್ಯದಲ್ಲಿ ಮುಂಬೈ ತಂಡ 2013, 2015, 2017, 2019, 2020ರಲ್ಲಿ ಐಪಿಎಲ್​ ಪ್ರಶಸ್ತಿ ಗೆದ್ದಿತ್ತು. ಮೊದಲ 5 ಆವೃತ್ತಿಗಳಲ್ಲಿ ನಿರಾಸೆ ಅನುಭವಿಸಿದ್ದ ಮುಂಬೈ, ರೋಹಿತ್​ ನಾಯಕತ್ವ ವಹಿಸಿಕೊಂಡ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿತ್ತು ಎಂಬುದು ವಿಶೇಷ. ಐಪಿಎಲ್​ ನಾಯಕತ್ವದ ಈ ಯಶಸ್ಸಿನಿಂದಲೇ ರೋಹಿತ್​ಗೆ ಟೀಮ್​ ಇಂಡಿಯಾದ ನಾಯಕತ್ವವೂ ಒಲಿದಿತ್ತು. ರೋಹಿತ್​ ತವರಿನ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡವನ್ನೂ ಫೈನಲ್​ಗೇರಿಸಿದ್ದರು. ಮುಂದಿನ ವರ್ಷದ ಟಿ20 ವಿಶ್ವಕಪ್​ಗೂ ಅವರೇ ಭಾರತ ತಂಡದ ನಾಯಕರಾಗಿರುವ ನಿರೀಕ್ಷೆ ಇದೆ. ಇದರ ನಡುವೆ ಅವರು ಮುಂಬೈ ಇಂಡಿಯನ್ಸ್ ಅಂದರೆ ಫ್ರಾಂಚೈಸಿ ತಂಡವೊಂದರ ನಾಯಕತ್ವ ಕಳೆದುಕೊಂಡಿರುವುದು ಆಘಾತಕಾರಿಯಾಗಿದೆ. ಹಾರ್ದಿಕ್​ ಇತ್ತೀಚೆಗೆ ಮುಂಬೈಗೆ ಮರಳಿದಾಗಲೇ ಮುಂಬೈಗೆ ಭವಿಷ್ಯದ ನಾಯಕರಾಗುವ ನಿರೀಕ್ಷೆ ಇತ್ತು. ಆದರೆ ಈ ಸಲವೇ ನಾಯಕನ ಪಟ್ಟಕ್ಕೇರಿರುವುದು ಅಚ್ಚರಿ ಎನಿಸಿದೆ. ರೋಹಿತ್​ ಸಹಮತ ಪಡೆದೇ ಹಾರ್ದಿಕ್​ ಈ ಬಾರಿ ನಾಯಕರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ರೋಹಿತ್​ ಅನುಮತಿ ಇಲ್ಲದೆ ನಾಯಕತ್ವ ಬದಲಾವಣೆ ಮಾಡಿದ್ದರೆ ಮುಂಬೈ ಇಂಡಿಯನ್ಸ್ ತಂಡದ ಅದರ ಪರಿಣಾಮವನ್ನೂ…

Read More

ಬೆಂಗಳೂರು:- ಜನಪ್ರತಿನಿಧಿಗಳ ಪ್ರಮಾಣ ಅಸಿಂಧು ಕೋರಿದ್ದ ಅರ್ಜಿಯನ್ನು ಬೆಂಗಳೂರು ಹೈಕೋರ್ಟ್ ಪೀಠ ತಿರಸ್ಕರಿಸಿದೆ. ಸಂವಿಧಾನದ ನಿಗದಿತ ನಮೂನೆಯಲ್ಲಿ ಪ್ರಮಾಣ ವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿ.ಝಡ್‌ ಜಮೀರ್ ಅಹ್ಮದ್ ಖಾನ್ ಮತ್ತು ಕೆ.ಎನ್.ರಾಜಣ್ಣ ಸೇರಿದಂತೆ 9 ಸಚಿವರು ಹಾಗೂ 37 ಶಾಸಕರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಬೆಳಗಾವಿ ಜಿಲ್ಲೆಯ ನಿವಾಸಿ ಭೀಮಪ್ಪ ಗಡಾದ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಹಾಕಿತು. ಪ್ರಜಾಸತ್ತಾತ್ಮಕ ವ್ಯವಸ್ಥೆ, ಸಚಿವರು ಹಾಗೂ ಶಾಸಕರು ಮತದಾರರಿಂದ ಚುನಾಯಿತರಾಗಿದ್ದಾರೆ. ನಿಗದಿತ ನಮೂನೆ ಹೊರತಾಗಿ ಇತರೆ ಮಾದರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ತಾಂತ್ರಿಕ ಅಂಶವಷ್ಟೇ. ಕೆಲವೊಮ್ಮೆ ಉತ್ಸಾಹದಲ್ಲಿ ಯಾರನ್ನಾದರೂ ಹೆಸರಿಸಬಹುದು. ಅವರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲಿ. ನಿಮಗೆ ಅಷ್ಟೊಂದು ಅತೃಪ್ತಿಯಿದ್ದರೆ ಮುಂಬರುವ…

Read More

ಬೆಂಗಳೂರು:- ಬೆಳಗಾವಿ ಘಟನೆ ಬಳಸಿ ರಾಜಕೀಯ ಮಾಡುತ್ತಿರುವ ನಡ್ಡಾ ಅವರದ್ದು ಕೀಳು ಮನಸ್ಥಿತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬೆಳಗಾವಿಯಲ್ಲಿ ಮಹಿಳೆ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಅತ್ಯಂತ ಖಂಡನೀಯ. ಮನುಷ್ಯರೆಲ್ಲರೂ ತಲೆತಗ್ಗಿಸುವಂತಹ ಆ ಘಟನೆಯನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿರುವ ಜೆ.ಪಿ.ನಡ್ಡಾ ಅವರ ಕೀಳು ಮನಸ್ಥಿತಿ ಇನ್ನೂ ಖಂಡನೀಯ ಎಂದಿದ್ದಾರೆ. ಬೆಳಗಾವಿಯ ಘಟನೆ ಗೊತ್ತಾದ ಕ್ಷಣವೇ ನಮ್ಮ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್​ ಅವರು ಸಂತ್ರಸ್ತೆಯ ಮನೆಗೆ ಭೇಟಿ ಕೊಟ್ಟು ಸಾಂತ್ವನ ನೀಡಿದ್ದು ಮಾತ್ರವಲ್ಲ ಪರಿಹಾರವನ್ನೂ ನೀಡಿದ್ದಾರೆ. ಪೊಲೀಸರು ಇಪ್ಪತ್ತನಾಲ್ಕು ಗಂಟೆಗೊಳಗೆ ದೌರ್ಜನ್ಯ ನಡೆಸಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಿದ್ದಾರೆ. ನಾನೇ ಖುದ್ದಾಗಿ ಈ ಪ್ರಕರಣದ ತನಿಖೆಯ ಮೇಲೆ ನಿಗಾ ಇಟ್ಟಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಅಮಾನುಷ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು…

Read More

ಧನು ಸಂಕ್ರಾಂತಿ ಸೂರ್ಯೋದಯ: 06.34 AM, ಸೂರ್ಯಾಸ್ತ : 05.56 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರದ ಋತು, ತಿಥಿ: ಇವತ್ತು ಚೌತಿ 08:00 PM ತನಕ ನಂತರ ಪಂಚಮಿ ನಕ್ಷತ್ರ: ಇವತ್ತು ಉತ್ತರ ಆಷಾಢ  06:24 AM ತನಕ ನಂತರ ಶ್ರವಣ  ಯೋಗ: ಇವತ್ತು ಧ್ರುವ07:03 AM ತನಕ ನಂತರ ವ್ಯಾಘಾತ ಕರಣ: ಇವತ್ತು ವಣಿಜ 09:15 AM ತನಕ ನಂತರ ವಿಷ್ಟಿ 08:00 PM ತನಕ ನಂತರ ಬವ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ 07:30 ವರೆಗೂ ಅಮೃತಕಾಲ: 12.29 AM to 01.58 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:49 ನಿಂದ ಮ.12:33 ವರೆಗೂ ಮೇಷ ರಾಶಿ: ಕಂಕಣ ಬಲದ ಸಿಹಿ ಸುದ್ದಿ ಹಂಚಿಕೊಳ್ಳುವಿರಿ, ಅಮಾನತು ಗೊಂಡಿರುವ ಉದ್ಯೋಗಿಗಳು ಮರು ನೇಮಕ,…

Read More

ಬೆಂಗಳೂರು: ಇನ್ನು ಸಿಎಂ‌ ಉತ್ತರದ ಚರ್ಚೆಯ ವೇಳೆ ಉತ್ತರಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಕಲಾಪದಲ್ಲಿ ಸಾಕಷ್ಟು ಘೋಷಣೆಗಳನ್ನ ಉತ್ತರಕ್ಕೆ ನೀಡಿದ್ರು. ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸುವ ಮೂಲಕ ಆರ್ಥಿಕತೆಗೆ, ಸ್ಥಳೀಯರಿಗೆ ಉದ್ಯೋಗಕ್ಕೆ ಉತ್ತೇಜನ.. ಬೆಳಗಾವಿ ಸಮೀಪ 2 ಸಾವಿರ ಎಕರೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ, 500 ಎಕರೆಯಲ್ಲಿ ಫೌಂಡರಿ ಕ್ಲಸ್ಟರ್ ಸ್ಥಾಪನೆ.. ಧಾರವಾಡದಲ್ಲಿ ಎಸ್‌ಎಂಸಿಜಿ ಕೈಗಾರಿಕಾ ಕ್ಲಸ್ಟರ್, ಇದಕ್ಕೆ 19 ಘಟಕಗಳು 1255 ಕೋಟಿ ಬಂಡವಾಳ ಹೂಡ್ತಿವೆ, ಇದರಿಂದ 2450 ಉದ್ಯೋಗ ಸೃಷ್ಟಿ ನಿರೀಕ್ಷೆ.. ಧಾರವಾಡ ಸಮೀಪ 3 ಸಾವಿರ ಎಕರೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆ.. ರಾಯಚೂರಿನಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳಿಗೆ ವಿಶೇಷ ಒತ್ತು.. ವಿಜಯಪುರದಲ್ಲಿ ಉತ್ಪಾದನಾ ಕ್ಕಸ್ಟರ್ ಅನ್ನು 1500 ಎಕರೆ ಪ್ರದೇಶದಲ್ಲಿ ಸ್ಥಾಪನೆ.. ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಸಮಗ್ರ ಕ್ರಿಯಾಯೋಜನೆ ಧಾರವಾಡದ ವಾಲ್ಮಿ ನೀರಾವರಿ ಸಂಸ್ಥೆ ಮೇಲ್ದರ್ಜೆಗೆ ಏರಿಕೆ, ಇದರಿಂದ ಜಲಶಿಕ್ಷಣ ನೀಡಲು ಒತ್ತು ಬಳ್ಳಾರಿ, ರಾಯಚೂರು ಏರ್‌ಪೋರ್ಟ್ ಗಳ ಅಭಿವೃದ್ಧಿ ಹೀಗೆ ೧೦…

Read More

ಬೆಂಗಳೂರು: ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನಕ್ಕೆ ಇಂದು ತೆರೆಬಿದ್ದಿದೆ.ಉತ್ತರ ಕರ್ನಾಟಕ ಚರ್ಚೆಗೆ ಉತ್ತರ ನೀಡುವ ವೇಳೆ,ನಾಡಿನ ಅನ್ನದಾತರಿಗೆ ಸಿಎಂ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಬಿಜೆಪಿ,ಜೆಡಿಎಸ್ ಧರಣಿ ನಡುವೆ ,ಸದನವನ್ನ ಅನಿರ್ದಿಷ್ಟವಾಧಿಗೆ ಸ್ಪೀಕರ್ ಮುಂದೂಡಿದ್ರು.   ರೈತಾಪಿ ವರ್ಗಕ್ಕೆ ಸಿಎಂ‌ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ.. ರೈತರು ಮಧ್ಯಮ ಅವಧಿ, ದೀರ್ಘಾವಧಿ ಸಾಲ ಕಟ್ಟಿದರೆ, ಅದರ ಮೇಲಿನ ಬಡ್ಡಿ ಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ರು.. ಮೊನ್ನೆ ರೈತರ ಸಾಲ ಮನ್ನ ಮಾಡಲಿಲ್ಲ ಅಂದರೆ ರಾಜ್ಯಾದ್ಯಂತ ಹೋರಾಟ ಮಾಡುವೆ ಎಂದು ಗರ್ಜಿಸಿದ್ದ ರಾಜಾಹುಲಿಗೆ ಇಂದು ಸಾಲ ಮನ್ನಾ ಮಾಡುವ ಮೂಲಕ ಟಗರು ಟಕ್ಕರ್ ಕೊಡ್ತು..

Read More

ಬೆಳಗಾವಿ: ಮಹಿಳೆಯೊಬ್ಬರನ್ನು ಬೆತ್ತಲುಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾಜ್ಯಾಧ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಕಳೆದ ವಾರ ಬೆಳಗಾವಿ ಗ್ರಾಮಾಂತರ ವಂಟಮೂರಿ ವಿಷಯ ದೇಶಾದ್ಯಂತ ಚರ್ಚೆ ಆಗಿದೆ. ಒಬ್ಬ ಮಹಿಳೆಯನ್ನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲೇ ಘಟನೆ ನಡೆದಿದೆ ಎಂದರು ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದ್ದೇನೆ. ಗೃಹ ಮಂತ್ರಿಗಳು ಭೇಟಿ ನೀಡಿದ್ದಾರೆ. ಆದರೆ ಇಡೀ ರಾಜ್ಯದ ಜನ ತಲೆ ತಗ್ಗಿಸುವ ಘಟನೆ ಇದಾಗಿದೆ. ಈ ಸಂಬಂಧ ಆರು ಮಂದಿಯ ಬಂಧನವೂ ಆಗಿದೆ. ಆದರೆ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More

ನವದೆಹಲಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಸುಪ್ರೀಂ ಕೋರ್ಟ್ ಸುಚನೆ ನೀಡಿದೆ. ಒಂದು ವೇಳೆ ಪೋಸ್ಟ್‌ ಡಿಲೀಟ್ ಮಾಡಲು ಇಷ್ಟವಿಲ್ಲ ಎಂದಾದರೆ ತಮ್ಮ ಬರಹವನ್ನು ವಾಪಸ್ ಪಡೆದಿರೋದಾಗಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಬಹುದು ಎಂದೂ ಸುಪ್ರೀಂ ಕೋರ್ಟ್‌ ಡಿ. ರೂಪಾ ಅವರಿಗೆ ಸೂಚನೆ ನೀಡಿದೆ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ ಪ್ರಕಟಿಸಿದ್ದ ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ರದ್ದುಪಡಿಸಬೇಕೆಂದು ಕೋರಿ ಡಿ. ರೂಪಾ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಪ್ರಕರಣದ ವಿಚಾರಣೆ ವೇಳೆ ತಮ್ಮ ವಾದ ಮಂಡಿಸಿದ ಡಿ. ರೂಪಾ ಪರ ವಕೀಲರು, ಪುರುಷ ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಅವರು ತಮ್ಮ ಫೋಟೋಗಳನ್ನು ಕಳಿಸುತ್ತಾರೆ ಎಂದು ಆರೋಪಿಸಿದರು.…

Read More

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಗಮನ ಬೇರೆಡೆಗೆ ಸೆಳೆದು ಹಾಡಹಗಲೇ ಬ್ಯಾಗ್​ನಲ್ಲಿ 10 ಲಕ್ಷ ರೂ. ಕಳ್ಳತನ ಮಾಡಿರುವಂತಹ ಘಟನೆ  ತಡವಾಗಿ ಬೆಳಕಿಗೆ ಬಂದಿದೆ  . ನಾಲ್ವರು ಖದೀಮರಿಂದ ಕೃತ್ಯವೆಸಗಲಾಗಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೌದು ಬೆಂಗಳೂರು ಹೊರವಲಯದ  ಆನೇಕಲ್ ತಾಲೂಕಿನ ಚಂದಾಪುರ ಸಾಯಿ ಮೆಡಿಕಲ್ ನಲ್ಲಿ   ಮೆಡಿಕಲ್ಗೆ ಬಂದಾಗ ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಗಮನ ಬೇರೆಡೆಗೆ ಸೆಳೆದು ಹಾಡಹಗಲೇ ಬ್ಯಾಗ್​ನಲ್ಲಿ 10 ಲಕ್ಷ ರೂ. ಕಳ್ಳತನ ಎಸಗಿದ್ದಾರೆ … ಇನ್ನು ಎರಡು ಬೈಕ್​ಗಳಲ್ಲಿ ಬಂದಿದ್ದ ನಾಲ್ವರು ಖದೀಮರಿಂದ ಕೃತ್ಯವೆಸಗಲಾಗಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಚಂದಾಪುರದ ಸಾಯಿ ಮೆಡಿಕಲ್ ಮಾಲೀಕ ಮಾದವ ರೆಡ್ಡಿ ಎನ್ನುವವರು ಬ್ಯಾಂಕಿನಿಂದ 10 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು…

Read More

ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಿವಿಧ ಆರೋಪಗಳನ್ನು ಮಾಡುತ್ತಿರುವ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ” ವಿ ಸೋಮಣ್ಣ ಹಾಗೂ ಯತ್ನಾಳ್‌ ಬ್ಲಾಕ್ ಮೇಲ್ ರಾಜಕಾರಣ ಬಿಡಬೇಕು. ಬ್ಲಾಕ್ ಮೇಲ್ ರಾಜಕಾರಣ ಯಾವತ್ತೂ ಮಾತಾಡಬಾರದು. ಇವರಿಗೆ ಪಾಪದ ಕೊಡ ತುಂಬಿದ್ದು, https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಅಂತ್ಯವಾಗುವುದಕ್ಕೋಸ್ಕರ ಹೀಗೆಲ್ಲ ಮಾತಾಡುತ್ತಿದ್ಧಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರರನ್ನ ಜನರ ಮುಂದೆ ವಿಲನ್ ಮಾಡೋಕೆ ಇಬ್ಬರು ಹೊರಟಿದ್ದಾರೆ. ಇವರೇನು ಮಾಡಿದ್ದಾರೆ ಅಂತ ನಾವು ಇನ್ನು ಹೇಳುತ್ತೇವೆ. ನಾವೇನು ಯಾರಿಗೂ ಹೆದರಲ್ಲ, ಸೊಪ್ಪು ಹಾಕಲ್ಲ. ಇಬ್ಬರು ಅವರ ಬಗ್ಗೆ ಮಾತಾಡುವುದನ್ನು ಬಿಡಬೇಕು, ಒಟ್ಟಾಗಿ ಹೋಗಬೇಕು. ಏನಾದರೂ ಸಮಸ್ಯೆ ಇದ್ದರೆ ನಾಲ್ಕು ಗೋಡೆಗಳ ಮಧ್ಯೆ ಮಾತಾಡಿ ಬಗೆಹರಿಸಕೊಳ್ಳಬೇಕು ” ಎಂದರು.

Read More