Author: AIN Author

ಒಂದು ಮೊಟ್ಟೆಯನ್ನು ತಿನ್ನುವುದರಿಂದ ಸುಮಾರು 6ಗ್ರಾಂ ಪ್ರೊಟೀನ್‌ ಸಿಗುತ್ತದೆ ಹಾಗಾಗಿ ಮೊಟ್ಟೆಯನ್ನು ಎಲ್ಲದರ ಜೊತೆ ತಿನ್ನಲೇಬಾರದು . ಮೊಟ್ಟೆಯ ಜೊತೆ ಕೆಲವೊಂದು ವಸ್ತುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಮೊಟ್ಟೆ ಅಪಾಯ ತಂದೊಡ್ಡಬಹುದು .ಹೀಗಾಗಿ ಮೊಟ್ಟೆಯ ಜೊತೆ ಯಾವ ಆಹಾರ ಸೇವನೆ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.. ಮೊಟ್ಟೆ ಜೊತೆ ತಿನ್ನಲೇಬಾರದ ಆಹಾರ ಪದಾರ್ಥ 1.ಚಹಾ ಮತ್ತು ಮೊಟ್ಟೆ ಕಾಂಬೇನೇಷನ್‌ ಅಲ್ಲವೇ ಅಲ್ಲ. 2. ಮೊಟ್ಟೆ ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನಲೇಬಾರದು. 3. ಮೊಟ್ಟೆ ಮತ್ತು ಬಾಳೆಹಣ್ಣು ಕೂಡ ಒಟ್ಟಿಗೆ ತಿನ್ನಬಾರದು 4. ಸೋಯಾ ಹಾಲು ಮತ್ತು ಮೊಟ್ಟೆಗಳನ್ನು ತಿನ್ನಬಾರದು.

Read More

ಬೆಂಗಳೂರು:- ಎಕ್ಸ್‌ನಲ್ಲಿ ಸಚಿವ ಜಾರ್ಜ್ ಬಗ್ಗೆ ಅವಹೇಳನ ಪೋಸ್ಟ್ ಮಾಡಿದ ಆರೋಪದಡಿ ಬಿಆರ್‌ಎಸ್ ಪಕ್ಷದ ಕಾರ್ಯಕರ್ತನನ್ನು ಅರೆಸ್ಟ್ ಮಾಡಲಾಗಿದೆ. ಕರೀಂ ನಗರದ ರವಿಕಾಂತಿ ಶರ್ಮಾ ಬಂಧಿತ ನಾಗಿದ್ದು, ಬಳಿಕ ಬಿಡುಗಡೆಗೊಳಿಸಿ ದ್ದಾರೆ. ಇತ್ತೀಚಿಗೆ ಮುಗಿದ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಸಚಿವರ ಕುರಿತು ಆರೋಪಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ. ತೆಲಂಗಾಣದ ಬಿಆರ್‌ಎಸ್ ಪಕ್ಷದಲ್ಲಿ ರವಿಕಾಂತಿ ಸಕ್ರಿಯ ಕಾರ್ಯ ಕರ್ತನಾಗಿದ್ದು, ಪಕ್ಷದ ಐಟಿ ಸೆಲ್‌ನಲ್ಲಿ ಆತ ಕೆಲಸ ಮಾ ಡುತ್ತಿದ್ದ. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಹಾಗೂ ಗೃಹಜ್ಯೋತಿ ಯೋಜನೆ ಅನುಷ್ಠಾನದ ಕುರಿತು ‘ಎಕ್ಸ್ ‘ನಲ್ಲಿ ಇಂಧನ ಸಚಿವರ ನಕಲಿ ಆಡಿಯೋ ತುಣುಕನ್ನು ಆತ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.

Read More

ಮುಖದ ಮೇಲೆ ಸಣ್ಣದೊಂದು ಗುಳ್ಳೆ ಆದ್ರೆ ಅದೆಷ್ಟೋ ಮಹಿಳೆಯರು ದೊಡ್ಡ ಘಟನೆ ನಡೆದಂತೆ ಶಾಕ್ ಆಗ್ತಾರೆ. ಆ ಒಂದು ಗುಳ್ಳೆ ಹೋಗುವುದಕ್ಕಾಗಿ ಹಲವು ಕ್ರೀಮ್, ಮೆಥಡ್ ಗಳನ್ನ ಫಾಲೋ ಮಾಡ್ತಾರೆ. ಆದ್ರೆ ಪುರುಷರು ಸಣ್ಣ ಪುಟ್ಟ ಗುಳ್ಳೆ, ಕಲೆಗಳಿಗೆ ಕೇರ್ ಮಾಡಲ್ಲ. ಆದರೂ ಪ್ರತಿನಿತ್ಯದ ಲೈಫ್ ಸ್ಟೈಲಿನಲ್ಲಿ ರೋಟಿನ್ ಕೆಲಸಗಳ ನಡುವೆ ಮುಖ ತೊಳೆಯುವಾಗ ಕೆಲವೊಂದು ರೂಲ್ಸ್ ಫಾಲೋ ಮಾಡೋದರಿಂದ ಸುಂದರ ಮತ್ತು ಸ್ವಚ್ಛ, ಕಲೆ ರಹಿತ ಮುಖ ನಿಮ್ಮದಾಗುತ್ತೆ. ಏನು ಮಾಡಬೇಕು? * ಮುಖ ತೊಳೆಯುವಾಗ ಉಗುರು ಬೆಚ್ಚಗಿನ ನೀರು ಬಳಸುವುದು ಉತ್ತಮ. ಹೊರಗಿನಿಂದ ಬಂದಾಗ ಮುಖದ ಮೇಲೆ ಧೂಳಿನ ಕಣಗಳು ಅಂಟಿಕೊಂಡಿರುತ್ತವೆ. ಹಾಗಾಗಿ ಬಿಸಿ ನೀರು ಬಳಸಿದ್ರೆ ನಿಮ್ಮ ಫೇಸ್ ಫ್ರೆಶ್ ಆಗುತ್ತೆ. ಹಾಗಂತ ನೀರು ಅತಿ ಬಿಸಿಯಾಗಿರದಂತೆ ನೋಡಿಕೊಳ್ಳಬೇಕು. ಅತಿ ಬಿಸಿ ನೀರು ಬಳಸಿದ್ರೆ ಮುಖದ ತ್ವಚೆ ಬೇಗನೆ ಸುಕ್ಕು ಗಟ್ಟುತ್ತೆ. * ನಿಮ್ಮದು ಆಯಿಲಿ ಸ್ಕಿನ್ ಆಗಿದ್ರೆ ಉತ್ತಮ ಬ್ರ್ಯಾಂಡ್ ನ ಫೇಸ್ವಾಶ್ ಕ್ರೀಂ ಅಥವಾ…

Read More

ಬೆಂಗಳೂರು: ಹುಟ್ಟಿದಾಗಿಂದಲೂ ಕಾಡುತ್ತಿರುವ ಕಿಡ್ನಿ ರೋಗದ ಸಮಸ್ಯೆ ಬಗ್ಗೆ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಇದೀಗ ಹೇಳಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ಟ್ರೇಡಿಂಗ್‌ ವಿಂಡೋ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಗ್ರೀನ್‌ ಸೇರ್ಪಡೆಯಾಗಿದ್ದರು. ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬರೋಬ್ಬರಿ 17.5 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಆರ್‌ಸಿಬಿ ತಂಡ ಯುವ ಆಲ್‌ರೌಂಡರ್‌ನ ಸೇವೆಯನ್ನು ತನ್ನದಾಗಿಸಿಕೊಂಡಿತು. ಇದಾದ ಬಳಿಕ ಇದೇ ಮೊದಲ ಬಾರಿ ಸಂದರ್ಶನ ನೀಡಿರುವ ಗ್ರೀನ್, ತಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಸೌಮ್ಯ ಸ್ವಭಾವದ ಆಟಗಾರ 24 ವರ್ಷದ ಕ್ಯಾಮೆರಾನ್‌ ಗ್ರೀನ್‌ ಯಾರೊಂದಿಗೂ ಹೆಚ್ಚು ಬೆರೆಯುವವರಲ್ಲ. ತಮ್ಮ ಈ ಸ್ವಭಾವಕ್ಕೆ ತಾವು ಎದುರಿಸಿರುವ ಆರೋಗ್ಯ ಸಮಸ್ಯೆಯೂ ಒಂದು ಕಾರಣ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿಕ್ಕಂದಿನಲ್ಲಿ ಹೆಚ್ಚು ವರ್ಷ ಬದುಕುಳಿಯುವ ಸಾಧ್ಯತೆ ಇರಲಿಲ್ಲ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. “ಆ ಸಮಯದಲ್ಲಿ ಏನು ಮಾಡಬೇಕು ಎಂಬುದೇ…

Read More

2023ರ ವರ್ಷವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಮತ್ತು ಪ್ರತಿಯೊಬ್ಬರೂ 2024 ರ ವರ್ಷವನ್ನು ಉತ್ಸಾಹದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಈ ವರ್ಷದ ಭಾರತದಲ್ಲಿ ನಡೆದ ಪ್ರಮುಖ ಘಟನೆಗಳತ್ತ ಕಣ್ಣು ಹಾಯಿಸಿದರೆ ಸಾಕಷ್ಟು ಸಂಗತಿಗಳು ಕಾಣಿಸುತ್ತವೆ. ಇವುಗಳಲ್ಲಿ ದುರಂತವೇ ಹೆಚ್ಚು. ಆದರೆ ನಾವು ಪ್ರಮುಖ 10 ಪ್ರಮುಖ ಘಟನೆ ಬಗ್ಗೆ ಹೇಳುತ್ತೇವೆ ಕೇಳಿ! ಚಂದ್ರಯಾನ-3ರ ಯಶಸ್ಸು ಬಾಹ್ಯಾಕಾಶ ಲೋಕದಲ್ಲಿನ ಭಾರತದ ಸಾಧನೆ ಇಡೀ ಜಗತ್ತಿನ ಮೆಚ್ಚುಗೆಗೆ ವ್ಯಕ್ತವಾದ ವರ್ಷವಿದು. ಜುಲೈ 14ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಚಂದ್ರಯಾನ-3 ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿತ್ತು. ಈ ಮೂಲಕ ಚಂದ್ರನ ಮೇಲೆ ನೌಕೆ ಇಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಒಡಿಶಾ ರೈಲು ಅಪಘಾತ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲುಗಳ ಅಪಘಾತ, ಇತ್ತೀಚಿನ ವರ್ಷಗಳಲ್ಲಿಯೇ ದೇಶ ಕಂಡ ಘೋರ ರೈಲು ದುರಂತವಾಗುತ್ತು. ಮೂರು ರೈಲುಗಳು ಇಲ್ಲಿ ಡಿಕ್ಕಿಯಾಗಿ ಭೀಕರ ದುರಂತ ಸಂಭವಿಸಿತ್ತು.…

Read More

ವೀಳ್ಯದೆಲೆಯನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ಸೇವಿಸಿದರೆ ಹಲವು ಆರೋಗ್ಯ ಲಾಭ ಪಡೆಯಬಹುದು. ವೀಳ್ಯದೆಲೆಯನ್ನು ರಾತ್ರಿ ಚೆನ್ನಾಗಿ ತೊಳೆದು ನಂತರ ಅವುಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ. ಪ್ರಯೋಜನಗಳು: ವೀಳ್ಯದೆಲೆಯ ಇತರ ಪ್ರಯೋಜನಗಳು ಯಾವುವು ಎಂದು ತಿಳಿಯೋಣ. ವೀಳ್ಯದೆಲೆಯಲ್ಲಿ ಸ್ವಲ್ಪ ಉಪ್ಪು ಮತ್ತು ಜೀರಿಗೆ ಬೀಜಗಳನ್ನು ಸೇವಿಸಿದರೆ, ನೀವು ಅಜೀರ್ಣದಿಂದ ಪರಿಹಾರ ಪಡೆಯುತ್ತೀರಿ. ವೀಳ್ಯದೆಲೆಯ ರಸವನ್ನು ಸೇವಿಸಿದರೆ ಮೂಳೆಗಳು ಬಲಗೊಳ್ಳುತ್ತವೆ. ವೀಳ್ಯದೆಲೆಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಸೇವಿಸಿದರೆ ಗಂಟಲು ಸಮಸ್ಯೆ ಕಡಿಮೆಯಾಗುತ್ತದೆ. ತಲೆನೋವು ಮತ್ತು ಮೈಗ್ರೇನ್ ಸಮಸ್ಯೆ ಇರುವವರು ವೀಳ್ಯದೆಲೆಯನ್ನು ಸೇವಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹೊಟ್ಟೆ ಉಬ್ಬಿಕೊಂಡಿದ್ದರೆ ವೀಳ್ಯದೆಲೆ ತಿನ್ನುವುದರಿಂದ ನಿವಾರಣೆಯಾಗುತ್ತದೆ. ವೀಳ್ಯದೆಲೆಯನ್ನು ತಿಂದರೆ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಕಂಡುಬಂದಿದೆ. ನೀವು ವಾರಕ್ಕೆ ಕನಿಷ್ಠ ಎರಡು ಬಾರಿ ವೀಳ್ಯದೆಲೆಯನ್ನು ಸೇವಿಸಿದರೆ ದೇಹವು ಆರೋಗ್ಯವಾಗಿರುತ್ತದೆ.

Read More

ಜೋಹಾನ್ಸ್‌ಬರ್ಗ್: ವಿಶ್ವದ ನಂ.1 ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ದಕ್ಷಿಣ ಆಫ್ರಿಕಾ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಟಿ20 ಕ್ರಿಕೆಟ್‌ ವೃತ್ತಿಜೀವನದ 4ನೇ ಹಾಗೂ ವೇಗದ ಶತಕ ಸಿಡಿಸಿದ ಸೂರ್ಯ, ಈ ಸಾಧನೆ ಮಾಡಿದ ರೋಹಿತ್‌ ಶರ್ಮಾ ಹಾಗೂ ಆಸೀಸ್‌ನ ಗ್ಲೇನ್‌ ಮ್ಯಾಕ್ಸ್‌ವೆಲ್‌ ದಾಖಲೆಯನ್ನ ಸರಿಗಟ್ಟಿದ್ದಾರೆ. ರೋಹಿತ್‌ ಶರ್ಮಾ 148 ಪಂದ್ಯಗಳು 140 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಹಾಗೆಯೇ ಗ್ಲೇನ್‌ ಮ್ಯಾಕ್ಸ್‌ವೆಲ್‌ 100 ಪಂದ್ಯ, 92 ಇನ್ನಿಂಗ್ಸ್‌ನಲ್ಲಿ 4ನೇ ಶತಕ ಸಿಡಿಸಿದ್ದರು. ಆದ್ರೆ ಸೂರ್ಯಕುಮಾರ್‌ ಕೇವಲ 61 ಪಂದ್ಯ 57 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಗುರುವಾರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ 178.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸೂರ್ಯ ಮೊದಲ 25 ಎಸೆತಗಳಲ್ಲಿ 27 ರನ್‌ ಗಳಿಸಿದ್ರೆ, ಮುಂದಿನ 31 ಎಸೆತಗಳಲ್ಲಿ 73 ರನ್‌ ಚಚ್ಚಿ ಶತಕ ಪೂರೈಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4ನೇ…

Read More

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ತನ್ನ ಮಾರ್ಜಿನಲ್ ಕಾಸ್ಟ್-ಆಧಾರಿತ ಸಾಲದ ದರವನ್ನು (MCLR) ಹೆಚ್ಚಳ ಮಾಡಿದೆ. ಇದರಿಂದಾಗಿ ಬ್ಯಾಂಕ್‌ನ ಸಾಲದ ಇಎಂಐ (EMI) ಏರಿಕೆಯಾಗಲಿದೆ. ಆಯ್ದು ಅವಧಿಗೆ ಅನುಗುಣವಾಗಿ 5-10 ಬೇಸಿಸ್‌ ಪಾಯಿಂಟ್ಸ್‌ ಹೆಚ್ಚಳ ಮಾಡಿದೆ. ಇದರಿಂದಾಗಿ ಗೃಹ ಸಾಲ, ವಾಹನ ಸಾಲ, ಗ್ರಾಹಕರ ಸಾಲ ಏರಿಕೆಯಾಗಲಿದೆ. ಎಸ್‌ಬಿಐ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. ಆರ್‌ಬಿಐ (RBI) ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೋ ದರವನ್ನು ಏರಿಸದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿತ್ತು. ಈಗಾಗಲೇ ಸಾಲ ಪಡೆದಿರುವ ಗ್ರಾಹಕರು ತಮ್ಮ ಮುಂದಿನ ಕಂತುಗಳನ್ನು ಹೆಚ್ಚಿನ ದರದಲ್ಲಿ ಪಾವತಿಸಬೇಕಾಗುತ್ತದೆ. ಹಿಂದೆ ಎಷ್ಟಿತ್ತು? ಎಷ್ಟು ಏರಿಕೆಯಾಗಲಿದೆ?

Read More

ಪ್ರತಿದಿನ ಈರುಳ್ಳಿ ತಿನ್ನುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರ ಗುಣಲಕ್ಷಣಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಆಲಿಲ್ ಪ್ರೊಪೈಲ್ ಡೈಸಲ್ಫೈಡ್ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಇದರೊಂದಿಗೆ, ತೀವ್ರವಾದ ದೀರ್ಘಕಾಲದ ಕಾಯಿಲೆಗಳನ್ನು ಸಹ ತೆಗೆದುಹಾಕಲಾಗುತ್ತದೆ. ವಿನೆಗರ್‌ನಲ್ಲಿ ನೆನೆಸಿದ ಈರುಳ್ಳಿಯನ್ನು ತಿನ್ನುವುದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದಲ್ಲದೇ ಪ್ರತಿದಿನ ತಿನ್ನುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಕೂಡ ದೇಹದಲ್ಲಿ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈರುಳ್ಳಿ ತಿನ್ನುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವೂ ಕಡಿಮೆಯಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ.

Read More

ತಿರುವನಂತಪುರಂ:- ಕೊರೋನಾ ಮತ್ತೆ ಕೇರಳದಲ್ಲಿ ಉಲ್ಬಣವಾಗಿದ್ದು, ಜನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಹಲವಾರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊರೋನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಈ ಸಮಯದಲ್ಲಿ ಕೇರಳದಲ್ಲೂ ಕೊರೋನಾ ತ್ವರಿತ ಏರಿಕೆ ಕಂಡಿದೆ. ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ಹೆಚ್ಚಳವು ಕೇರಳದಲ್ಲಿ ಈಗ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ ವೈರಸ್‌ಗಳ ನಿರಂತರ ಮೇಲ್ವಿಚಾರಣೆ ಮಾಡುವ ಅಗತ್ವಿದೆ ಎಂದು ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಕೇರಳ ಸರ್ಕಾರವು ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಬಂಧಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿಧಿಸಬಹುದು ಎಂದು ಹೇಳಲಾಗುತ್ತಿದೆ. ಕೇವಲ ಒಂದು ತಿಂಗಳಲ್ಲಿ ಕೇರಳದಲ್ಲಿ ಸಕ್ರಿಯ ಪ್ರಕರಣಗಳು 33 ರಿಂದ 768 ಕ್ಕೆ ಏರಿಕೆಯಾಗಿದ್ದು ಆತಂಕವನ್ನು ಉಂಟುಮಾಡಿದೆ. ಜೆಎನ್.1 ಗೆ ಸಂಬಂಧಿಸಿದ ಸಾಮಾನ್ಯ…

Read More