ವಿಜಯಪುರ:- ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಡಿಸೆಂಬರ್ 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಈ ಅದಾಲತನಲ್ಲಿ ಕಕ್ಷಿದಾರರು ಭಾಗವಹಿಸಿ, ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶವಿರುವುದರಿಂದ, ಈ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಿವಾಜಿ ಅನಂತ ನಲವಡೆ ಹೇಳಿದರು. https://ainlivenews.com/power-cut-today-in-these-areas-of-bangalore-is-your-area-there/ ಈ ಕುರಿತು ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿಗೆ ಒಳಪಡಬಹುದಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತದಲ್ಲಿ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು, ವಿಚ್ಛೇದನವನ್ನು ಹೊರತುಪಡಿಸಿ ಇರುವ ಕೌಟುಂಬಿಕ ವ್ಯಾಜ್ಯಗಳು, ಆಸ್ತಿಯಲ್ಲಿ ವಿಭಾಗ ಕೋರಿರುವ ದಾವೆಗಳು ಹಾಗೂ ದೂರವಾಣಿ ಬಾಕಿ ಬಿಲ್ಲುಗಳ ಪಾವತಿ ಪ್ರಕರಣಗಳು, ನೀರಿನ ಬಿಲ್ ಪಾವತಿ ಪ್ರಕರಣಗಳು, ಜೀವನಾಂಶ ಕೋರಿರುವ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂ-ಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಾಲ ವಸೂಲಾತಿ…
Author: AIN Author
ಸೇವಂತಿಗೆ ಹೂವು ನೋಡಲು ಬಹಳ ಸುಂದರ. ಹೀಗಾಗಿಯೇ ಈ ಹೂವನ್ನು ದೇವರ ಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬಿಳಿ ಸೇವಂತಿಗೆ ಹೂವು ಲಕ್ಷ್ಮೀ ದೇವಿಯ ಪೂಜೆಗೆ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಇದನ್ನು ಔಷಧವಾಗಿಯೂ ಬಳಸುವುದು ಉಂಟು. ಒಂದು 1 ಎಕರೆಯಲ್ಲಿ ಬಿಳಿ ಸೇವಂತಿಗೆ ಬೆಳೆದು 5 ಲಕ್ಷ ರೂ. ಲಾಭ ಗಳಿಸಬಹುದು ಎನ್ನುತ್ತಾರೆ ರೈತರು. ಸೇವಂತಿಗೆ ಹೂವಿನ ಕೃಷಿಗಾಗಿ ಅನುಸರಿಸಬೇಕಾದ ಬೇಸಾಯ ಕ್ರಮಗಳು ಸೂಕ್ತವಾದ ಮಣ್ಣು ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿರುವ ಕೆಂಪು ಮಣ್ಣು ಸೇವಂತಿಗೆ ಕೃಷಿಗೆ ಸೂಕ್ತವಾದದ್ದು. 6-7 ರವರೆಗಿನ pH ಹೊಂದಿರುವ ಮಣ್ಣು ಈ ಬೆಳೆಗೆ ಒಳ್ಳೆಯದು. ಭೂಮಿ ತಯಾರಿ ಸೇವಂತಿಗೆ ಕೃಷಿಗೆ ಚೆನ್ನಾಗಿ ಹದ ಮಾಡಿದ ಭೂಮಿ ಅಗತ್ಯವಿದೆ. ಮಣ್ಣನ್ನು ಉತ್ತಮವಾದ ಇಳಿಜಾರಿಗೆ ತರಲು, 2-3 ಉಳುಮೆಗಳ ಅಗತ್ಯವಿದೆ. ಕೊನೆಯ ಉಳುಮೆಯ ಸಮಯದಲ್ಲಿ, ಎಕರೆಗೆ 8-10 ಟನ್‌ಗಳಷ್ಟು ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು. ಬಿತ್ತನೆ ಸಮಯ: ಸಾಮಾನ್ಯವಾಗಿ ಫೆಬ್ರವರಿ-ಮಾರ್ಚ್‌ನಲ್ಲಿ ನಾಟಿ ಮಾಡಲಾಗುತ್ತದೆ ಮತ್ತು ಟರ್ಮಿನಲ್ ಕಟಿಂಗ್‌ಗಳನ್ನು ಜೂನ್-ಜುಲೈ ತಿಂಗಳಲ್ಲಿ ನಾಟಿ…
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/chitradurga-the-leopard-that-put-people-to-sleep-has-finally-joined-people-are-worried/ 66/11 ಕೆವಿ ಪುಟ್ಟೇನಹಳ್ಳಿ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ 18.11.2024 ರಂದು ಬೆಳಗ್ಗೆ 10:30 ಯಿಂದ ಮಧ್ಯಾಹ್ನ 3:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಸೆಂಚುರಿ ಲೇಔಟ್, ಅನಂತಪುರ ಗೇಟ್, ಏರ್ ಫೋರ್ಸ್, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ರಾಮ್‌ಕಿ ಉತ್ತರ-1, ಮಾರುತಿ ನಗರ, ಪ್ರೆಸ್ಟೀಜ್ ನಗರ, ಮಾರುತಿ ನಗರ, ಮಾರುತಿ ರಾಯಲ್ ಗಾರ್. ಕಟ್ಟಿಗೇನಹಳ್ಳಿ, ಮಾರುತಿ ನಗರ, ಕೋಗಿಲು, ಪೂಜಾ ಮಹಾಲಕ್ಷ್ಮಿ L/O, ಸಪ್ತಗಿರಿ L/O, ಪ್ರಕೃತಿ ನಗರ, ಶ್ರೀನಿವಾಸಪುರ, ಅಯ್ಯಪ್ಪ ಎನ್‌ಕ್ಲೇವ್, SN ಹಳ್ಳಿ, ಮೈಲಪನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಕೆಪಿಟಿಸಿಎಲ್ ವತಿಯಿಂದ ಗ್ಲೋಬಲ್ ಟೆಕ್ ಪಾರ್ಕ್, ನಿಮಾನ್ಸ್ ಮತ್ತು ಜಯದೇವ ಉಪಕೇಂದ್ರಗಳಲ್ಲಿ ತುರ್ತ…
ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಭಾರತ ರಕ್ಷಣ ಸಚಿವಾಲಯ ಅಧೀನದ ನವರತ್ನ ಕಂಪನಿ ಮತ್ತು ಇಂಡಿಯಾದ ಪ್ರೀಮಿಯರ್ ಪ್ರೊಫೇಶನಲ್ ಇಲೆಕ್ಟ್ರಾನಿಕ್ಸ್ ಕಂಪನಿಯು ಆದ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಒಟ್ಟು 3 ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಶೈಕ್ಷಣಿಕ ಅರ್ಹತೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್/ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್/ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಿಕಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರಬೇಕು. ವಯೋಮಿತಿ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 1, 2024ಕ್ಕೆ ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ…
ಚಿತ್ರದುರ್ಗ:- ಚಿತ್ರದುರ್ಗ ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಹಲವು ದಿನಗಳಿಂದ ಜನರ ನೆಮ್ಮದಿ ಕೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. https://ainlivenews.com/tractor-overturned-father-and-son-died-on-the-spot/ ಕಳೆದ ಒಂದು ತಿಂಗಳಿಂದ ಕಡ್ಲೆಗುದ್ದು, ಸಿದ್ದಾಪುರ, ಕುರುಬರ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಚಿರತೆ ಇಂದು ಬೋನಿಗೆ ಬಿದ್ದಿದೆ. ಈ ಚಿರತೆ ಹಲವು ಬಾರಿ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಸಂಜೆಯಾದರೆ ಗ್ರಾಮಸ್ಥರು ಮನೆಯಿಂದ ಹೊರ ಬರಲು ಸಹ ಭಯ ಪಡುವ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನನ್ನು ಇಟ್ಟಿದ್ದರು. ಶನಿವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಅದನ್ನು ಸುರಕ್ಷಿತವಾಗಿ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಒಟ್ಟಾರೆ ಚಿರತೆ ಸೆರೆ ಸಿಕ್ಕ ಬಳಿಕ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ತುಮಕೂರು:- ಜಿಲ್ಲೆಯ ಕುಣಿಗಲ್ ತಾಲೂಕಿನ ಲಕ್ಕೆಗೌಡನಪಾಳ್ಯದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ. https://ainlivenews.com/breaking-news-conductor-assaulted-by-passenger-for-showing-pass/ 50 ವರ್ಷದ ಶಿವರಾಮಯ್ಯ, ಮಗ 21 ವರ್ಷದ ಹರೀಶ್ ಮೃತರು. ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಅಡಕೆ ತುಂಬಿಕೊಂಡು ಬರುತ್ತಿದ್ದಾಗ ನಡೆದ ಘಟನೆ ಸಂಭವಿಸಿದ್ದು, ಟ್ರ್ಯಾಕ್ಟರ್ ಕೆಳಗೆ ಸಿಲುಕಿ ತಂದೆ ಮತ್ತು ಮಗ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಮೃತರು ಜಾಣಗೆರೆ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಚಾಲಕ ಮತ್ತು ಕಂಡಕ್ಟರ್ ಗಳ ನಡುವೆ ಇರುವ ವಾಗ್ವಾದ ಹೆಚ್ಚಾಗಿ ನಡೆಯುತ್ತಿದೆ. ಅಲ್ಲದೇ ಕೆಲವು ಬಾರಿ ಹಲ್ಲೆಗಳು ಕೂಡ ನಡೆಯುತ್ತಿದೆ. ಅದರಂತೆ ಮತ್ತೊಂದು ಘಟನೆ ನಗರದಲ್ಲಿ ಜರುಗಿದೆ. https://ainlivenews.com/dead-bodies-are-floating-in-tungabhadre-villagers-are-worried/ ಎಸ್, ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಬಸ್ ನಿರ್ವಾಹಕ ಮತ್ತು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಓರ್ವ ಪ್ರಯಾಣಿಕ ಮುಂದಾಗಿರುವಂತಹ ಘಟನೆ ನಡೆದಿದೆ. ಹಲವು ಬಾರಿ ಪಾಸ್ ತೋರಿಸುವಂತೆ ಬಸ್ ನಿರ್ವಾಹಕ ಕೇಳಿದ್ದಾರೆ. ಎಷ್ಟು ಬಾರಿ ಕೇಳಿದ್ರೂ ಪಾಸ್ ತೋರಿಸಲ್ಲ ಅಂತಾ ಪ್ರಯಾಣಿಕ ವಾಗ್ವಾದ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಹ ಪ್ರಯಾಣಿಕರಿಗೂ ಆವಾಜ್ ಹಾಕಲಾಗಿದೆ. ಆದರೆ ನಿರ್ವಾಹಕ-ಪ್ರಯಾಣಿಕನ ವಾಗ್ವಾದಕ್ಕೆ ನಿಖರ ಮಾಹಿತಿ ಗೊತ್ತಾಗಿಲ್ಲ. ವಿಡಿಯೋ ಭಾರೀ ವೈರಲ್ ಆಗಿದೆ.
ಗದಗ:- ಜಿಲ್ಲೆಯಲ್ಲಿರುವ ತುಂಗಭದ್ರಾ ನದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲೊಂದರಂತೆ ಶವಗಳು ತೇಲಿ ಬರುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. https://ainlivenews.com/team-indias-biggest-problem-is-coach-gautam-gambhir-australia-made-fun-of/ ಅದರಂತೆ ಇಂದು ಕೂಡ ಒಂದು ಶವ ತೇಲಿ ಬಂದಿದ್ದು, ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯಲ್ಲಿರುವ ತುಂಗಭದ್ರಾ ನದಿಯಲ್ಲಿ ಪದೇ ಪದೇ ಹೆಣಗಳು ತೇಲಿ ಬರುತ್ತಿದ್ದು, ಇಲ್ಲಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ನವೆಂಬರ್ 5 ರಂದು ಮೂರು ಮಕ್ಕಳ ನದಿಗೆ ಎಸೆದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಶವ ಪತ್ತೆಯಾಗಿದೆ. ಇನ್ನೂ ಇದು ಆತ್ಮಹತ್ಯೆಯೋ, ಕೊಲೆಯೋ ಅನ್ನೋ ಅನುಮಾನ ಶುರುವಾಗಿದೆ. ಸುಮಾರು 40 ವರ್ಷದ ವ್ಯಕ್ತಿಯ ಶವ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಶಂಕರಾವ್ ಟೇಲರ್, ಮುಂಡರಗಿ ಅಂತ ಲೇಬಲ್ ಇರೋ ಶರ್ಟ್ ಹಾಕಿರುವುದು ತಿಳಿದು ಬಂದಿದೆ. ಕೂಡಲೇ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಟೀಮ್ ಇಂಡಿಯಾದ ದೊಡ್ಡ ಸಮಸ್ಯೆಯೇ ಕೋಚ್ ಗೌತಮ್ ಗಂಭೀರ್ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೈನ್ ಟೀಮ್ ಇಂಡಿಯಾ ಕೋಚ್ ಅವರು ಗೇಲಿ ಮಾಡಿದ್ದಾರೆ. https://ainlivenews.com/another-controversy-of-the-pak-team-will-jason-gillespie-be-fired-from-the-post-of-head-coach/ ಆಸ್ಟ್ರೇಲಿಯಾದಲ್ಲಿ ಈ ಬಾರಿ ಭಾರತ ತಂಡ ಸರಣಿ ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಈ ಸಲ ಟೀಮ್ ಇಂಡಿಯಾದ ಕೋಚ್ ಬದಲಾಗಿದ್ದಾರೆ. ಇಲ್ಲಿ ಎಲ್ಲರೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನನ್ನ ಪ್ರಕಾರ ಅದು ಸಮಸ್ಯೆಯೇ ಅಲ್ಲ ಎಂದು ಟಿಮ್ ಪೈನ್ ಹೇಳಿದ್ದಾರೆ. ಟೀಮ್ ಇಂಡಿಯಾದ ಅಸಲಿ ಸಮಸ್ಯೆ ಎಂದರೆ ಅವರ ಕೋಚ್ ಗೌತಮ್ ಗಂಭೀರ್. ಆತನಿಗೆ ಒತ್ತಡದ ಸಂದರ್ಭಗಳಲ್ಲಿ ಸಂಯಮ ಕಾಪಾಡಿಕೊಳ್ಳಲು ಬರಲ್ಲ. ಅದನ್ನು ಮೊದಲು ಕಲಿಯಬೇಕಾದ ಅವಶ್ಯಕತೆಯಿದೆ ಎಂದು ಟಿಮ್ ಪೈನ್ ಹೇಳಿದ್ದಾರೆ. ಟಿಮ್ ಪೈನ್ ಇಂತಹದೊಂದು ಹೇಳಿಕೆ ನೀಡಲು ಮುಖ್ಯ ಕಾರಣ, ಇತ್ತೀಚೆಗೆ ರಿಕಿ ಪಾಂಟಿಂಗ್ ಅವರಿಗೆ ಗಂಭೀರ್ ನೀಡಿದ ಪ್ರತ್ಯುತ್ತರ. ಸಂದರ್ಶನವೊಂದರಲ್ಲಿ ಪಾಂಟಿಂಗ್ ಅವರಲ್ಲಿ ಟೀಮ್ ಇಂಡಿಯಾ…
ಪಾಕ್ ತಂಡದಲ್ಲಿ ಮತ್ತೊಂದು ವಿವಾದ ಸೃಷ್ಟಿ ಆಗಿದ್ದು, ಮುಖ್ಯ ಕೋಚ್ ಹುದ್ದೆಗೆ ಜೇಸನ್ ಗಿಲ್ಲೆಸ್ಪಿ ಗುಡ್ಬೈ ಹೇಳಿದ್ದಾರೆ. ಹಲವು ತಿಂಗಳುಗಳ ನಂತರ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಯನ್ನು ಪಾಕಿಸ್ತಾನ ಗೆಲ್ಲುವಂತೆ ಮಾಡಿದ ಕೋಚ್ ಜೇಸನ್ ಗಿಲ್ಲೆಸ್ಪಿ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಲು ಪಾಕ್ ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ. https://ainlivenews.com/cancellation-of-10000-bpl-cards-in-karnataka-this-is-proof-that-the-government-is-bankrupt-says-joshi/ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೇವಲ 6 ತಿಂಗಳೊಳಗೆ ಗಿಲ್ಲೆಸ್ಪಿ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ. ಕಳೆದ ತಿಂಗಳು, ಗ್ಯಾರಿ ಕರ್ಸ್ಟನ್ ಕೂಡ ಪಾಕಿಸ್ತಾನಿ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ESPN-Cricinfo ವರದಿಯ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತುತ ಎಲ್ಲಾ ಮೂರು ಸ್ವರೂಪಗಳ ಮುಖ್ಯ ಕೋಚ್ ಆಗಿರುವ ಗಿಲ್ಲೆಸ್ಪಿಯನ್ನು ಈ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ. ಗಿಲ್ಲೆಸ್ಪಿ ಪ್ರಸ್ತುತ ಪಾಕಿಸ್ತಾನಿ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರ ನೇತೃತ್ವದಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ ಮಣಿಸಿತ್ತು. ಆದರೆ ಟಿ20 ಸರಣಿ ಗೆಲ್ಲುವಲ್ಲಿ…