Author: AIN Author

ಧಾರವಾಡ: ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆ ಬೆತ್ತಲೆ ಮಾಡಿ ಹಲ್ಲೆ ಮಾಡಿದ ಪ್ರಕರಣ ಖಂಡಿಸಿ ಧಾರವಾಡದಲ್ಲಿ ರಾಜ್ಯ ಸರ್ಕಾರದ ವಿರುದ್ದ ಬೀದಿಗಿಳಿದು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ಧಾರವಾಡ ಜಿಲ್ಲೆಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹು-ಧಾ ಮಾಹಾನಗರ ಜಿಲ್ಲಾಧ್ಯಕ್ಷ ಸಂಜಯ ಹಾಗೂ ಮಾಜಿ ಶಾಸಕಿ ಸೀಮಾ ನೇತೃತ್ವದಲ್ಲಿ ಪ್ರತಿಭಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಘಟನೆ ಖಂಡನೀಯವಾಗಿದೆ ಸರ್ಕಾರ ಗ್ಯಾರಂಟಿ ಹೆಸರು ಹೇಳಿಕೊಂಡು ದಿನಗಳ ದೂಡುತ್ತಿದೆ ಹಲವಾರು ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿ ಮುಟ್ಟಿಲ್ಲವೆಂದು ಹೇಳುತ್ತಿದ್ದಾರೆ ಈ ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಮುಖ್ಯವಾಗಿದೆ ದಿನ ದಲಿತರ ಹಾಗೂ ಸಾಮನ್ಯ ಜನರ ಸುರಕ್ಷತೆ ಕಾಂಗ್ರೆಸ್ ಸರ್ಕಾರಕ್ಕೆ ಮುಖ್ಯವಾಗಿಲ್ಲ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ವಂಟಮೂರಿ ಘಟನೆಯ ಬಳಿಕ ಹೈ ಕೋರ್ಟ ಪೀಠವು ಕೂಡಾ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಧಾನ ಹೊರಹಾಕಿದೆ ಘಟನೆಯ ಕುರಿತು…

Read More

ಬೆಂಗಳೂರು:   ತೆಲಂಗಾಣ ಮಾಜಿ ಕಾರ್ಪೋರೇಟರ್ ಮಗನ ಬಂಧನ ಮಾಡಲಾಗಿದ್ದು  ಸಚಿವ ಜಾರ್ಜ್ ವಿರುದ್ಧ ಪೋಸ್ಟ್ ಮಾಡಿದ್ದ ಆರೋಪಿಯನ್ನ ಬಂಧಿಸಿದ ಸೈಬರ್‌ ಕ್ರೈಂ ಪೊಲೀಸರು. ಬಿಆರ್ ಎಸ್ ಪಾರ್ಟಿಯ ಐಟಿ ಸೆಲ್ ಉದ್ಯೋಗಿಯಾಗಿದ್ದ ರವಿಕಾಂತ ಶರ್ಮಾ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ತೆಲಂಗಾಣದ ಕರೀಂನಗರ ನಿವಾಸಿ ರವಿಕಾಂತ ಶರ್ಮಾ (33) ಬಂಧಿತ ಆರೋಪಿಯಾಗಿದ್ದು  ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಪೋಸ್ಟ್ ಮಾಡಲಾಗಿದ್ದು  ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹಜ್ಯೋತಿ ಯೋಜನೆ ಬಗ್ಗೆ ನಕಲಿ ಆಡಿಯೋ ಕ್ಲಿಪ್ ವೊಂದನ್ನ ಕಕೂ ಶೇರ್ ಮಾಡಿ ಪೋಸ್ಟ್.. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿತ್ತು ಪ್ರಕರಣ ಸಂಬಂಧ ಆರೋಪಿ ಬಂಧನ.. ತೆಲಂಗಾಣದ ಬಿಆರ್ ಎಸ್ ಪಕ್ಷದಲ್ಲಿ ಗುರುತಿಸಿಕೊರೋ ಆರೋಪಿಅವರ ತಂದೆ ತಾಯಿ ಕೂಡ ಮಾಜಿ ಕಾರ್ಪೋರೆಟರ್ ಗಳು ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿರೋ ಸೈಬರ್ ಕ್ರೈಮ್…

Read More

ಬೆಂಗಳೂರು : ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ಮಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು  ನಕಲಿ ದಾಖಲೆಗಳ ಸೃಷ್ಟಿಸಿದ ಆರೋಪದಲ್ಲಿ ತನಿಖೆಗೆ ಕೋರ್ಟ್ ಆದೇಶ ನೀಡಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮೇರೆಗೆ ವಿಲ್ಸನ್ ಗಾರ್ಡನ್ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಹೌದು.. ಕಾರಣವೆನೆಂದರೆ ಕೊರ್ಟ್ ಬದಲಾವಣೆಗಾಗಿ ನಕಲಿ ವಿಳಾಸದ ದಾಖಲೆ ಸೃಷ್ಟಿಸಿದ ಆರೋಪ ಹಾಗೆ  ವಿಚ್ಚೇದನ ಕೋರಿದ್ದ ಅರ್ಜಿಯಲ್ಲಿ ದೀಪಾಲಿ ಲಿಂಗಾಡೆ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದ್ದು ಹೀಗಾಗಿ  ಪತ್ನಿ ದೀಪಾಲಿ ವಿರುದ್ಧವೇ ಕೋರ್ಟ್ಗೆ ದೂರು ನೀಡಿದ್ದ ಪತಿ ಸಂದೀಪ್ ಲಿಂಗಾಡೆ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದ ಪೊಲೀಸರ ಮೇಲೆಯೂ ಒತ್ತಡ ಹಾಕಲಾಗಿದ್ದು   ಪೊಲೀಸರು ಸಲ್ಲಿಸಿದ್ದ ಬಿ.ರಿಪೋರ್ಟ್ ನಿರಾಕರಿಸಿ ಮರುತನಿಖೆಗೆ ಆದೇಶ ಮಾಡಿದ ಕೋರ್ಟ್  ಹಾಗೆ ಪೊಲೀಸರ ಮೇಲೆ ಒತ್ತಡ ಹಾಕಲಾಗಿದೆ ಎಂದು ಸಂದೀಪ್ ಲಿಂಗಾಡೆ ಆರೋಪ ಮಾಡಿದ್ದಾರೆ. ವಿಚ್ಚೇದನ ಕೋರಿದ್ದ ಅರ್ಜಿಯಲ್ಲಿ ಹೆಚ್ಚು ಜೀವನಾಂಶ ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಲಾಗಿದ್ದು  ಬಿಸಿನೆಸ್ ಮೆನ್ ಆಗಿರುವ ಸಂದೀಪ್ ಲಿಂಗಾಡೆಯಿಂದ ಜೀವನಾಂಶಕ್ಕಾಗಿ  ದೀಪಾಲಿ  ಷಡ್ಯಂತ್ರ…

Read More

ಚಿನ್ನ, ಬೆಳ್ಳಿ ಬೆಲೆ ಆಗಾಗ್ಗೆ ಏರಿಕೆ – ಇಳಿಕೆಯಾಗುತ್ತಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಏರಿಕೆ – ಇಳಿಕೆಯ ಆಧಾರದ ಮೇಲೂ ಆಭರಣ ದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಇಂದು ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಆಭರಣ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ.. ಇಂದು ದೇಶದಲ್ಲಿ ಬಂಗಾರದ ದರದಲ್ಲಿ ಹೆಚ್ಚಿದ್ದು, ಆದರೆ ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇನ್ನು ಬೆಂಗಳೂರಲ್ಲಿ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ ನೋಡಿ.. ಒಂದು ಗ್ರಾಂ ಚಿನ್ನ (1GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5,770 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,295 ಎಂಟು ಗ್ರಾಂ ಚಿನ್ನ (8GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 46,160 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 50,360 ಹತ್ತು ಗ್ರಾಂ ಚಿನ್ನ…

Read More

ಬೆಂಗಳೂರು:   ಬೊಮ್ಮನಹಳ್ಳಿ ಶಾಸಕ‌‌ ಸತೀಶ್ ರೆಡ್ಡಿಗೆ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಆಗಿದ್ದು  ಚಾಲೇಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿ‌ ಆರೋಗ್ಯ ‌ವಿಚಾರಿಸಿದ್ದಾರೆ. ಕೆಲ‌ ತಿಂಗಳುಗಳಿಂದ ಮೊಣಕಾಲು‌ ನೋವಿಂದ ಬಳಲುತ್ತಿದ್ದ ಶಾಸಕ.ಸತೀಶ್ ರೆಡ್ಡಿ ಅವರು  ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ  ಈಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ . ಈ ಹಿನ್ನೆಲೆಯಲ್ಲಿ ನಟ ದರ್ಶನ್‌ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತೀಶ್ ರೆಡ್ಡಿ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

Read More

ನವದೆಹಲಿ: ‘ಪೀರಿಯೆಡ್ ಲೀವ್’ ನೀಡುವ ಕುರಿತ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಹೇಳಿಕೆಯನ್ನು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಬೆಂಬಲಿಸಿದ್ದಾರೆ. ಇರಾನಿ ಹೇಳಿಕೆಯನ್ನು ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿರುವ ನಟಿ, ಮನುಕುಲದ ಇತಿಹಾಸದಲ್ಲಿ ದುಡಿಯದ ಮಹಿಳೆ ಇಲ್ಲವೇ ಇಲ್ಲ. ವ್ಯವಸಾಯದಿಂದ ಹಿಡಿದು ಮನೆ ಕೆಲಸ, ಮಕ್ಕಳನ್ನು ಬೆಳೆಸುವವರೆಗೆ ಹೀಗೆ ಪ್ರತಿ ದಿನ ಕೆಲಸ ಮಾಡುತ್ತಲೇ ಇರುತ್ತಾರೆ. ಕುಟುಂಬ ಸಮುದಾಯ ಅಥವಾ ರಾಷ್ಟ್ರದ ಮೇಲಿನ ಅವರ ಬದ್ಧತೆಗೆ ಯಾವ ವಿಚಾರಗಳು ಅಡ್ಡಿಯಾಗುವುದಿಲ್ಲ. ಹೀಗಾಗಿ ಪೀರಿಯೆಡ್ ಸಮಯದಲ್ಲಿ ಮಹಿಳೆಯರಿಗೆ ರಜೆಯ ಅವಶ್ಯಕತೆ ಇಲ್ಲ. ಇದು ಋತುಚಕ್ರವೇ ಹೊರತು ರೋಗ ಅಥವಾ ಅಂಗವಿಕಲತೆ ಅಲ್ಲ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇರಾನಿ ಹೇಳಿಕೆಯನ್ನು ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿರುವ ನಟಿ, ಮನುಕುಲದ ಇತಿಹಾಸದಲ್ಲಿ ದುಡಿಯದ ಮಹಿಳೆ ಇಲ್ಲವೇ ಇಲ್ಲ. ವ್ಯವಸಾಯದಿಂದ ಹಿಡಿದು ಮನೆ ಕೆಲಸ, ಮಕ್ಕಳನ್ನು ಬೆಳೆಸುವವರೆಗೆ ಹೀಗೆ ಪ್ರತಿ ದಿನ ಕೆಲಸ ಮಾಡುತ್ತಲೇ…

Read More

ಕೇರಳ: ಏಷ್ಯಾ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿದೆ ಪ್ರಮುಖವಾಗಿ ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಕೋವಿಡ್ ಗಣನೀಯ ಏರಿಕೆಯಾಗಿದ್ದು, ಮಾಸ್ಕ್ ಸೇರಿದಂತೆ ಇತರ ಮಾರ್ಗಸೂಚಿಗಳು ಜಾರಿಯಾಗಿದೆ. ಇದೀಗ ಭಾರತದಲ್ಲೂ ಕೋವಿಡ್ ಪ್ರಕರಣ ಏರಿಕೆಯಾಗಿದೆ. ಪ್ರಮುಖವಾಗಿ ಕೇರಳದಲ್ಲಿ ಶೇಕಡಾ 90 ರಷ್ಟು ಪ್ರಕರಣ ದಾಖಲಾಗಿದೆ. ನವೆಂಬರ್ ತಿಂಗಳಲ್ಲಿ ಕೇರಳದಲ್ಲಿ 450 ಕೋವಿಡ್ ಪ್ರಕರಣ ದಾಖಲಾಗಿತ್ತು. ಆದರೆ, ಡಿಸೆಂಬರ್ ತಿಂಗಳ 15ರವರೆಗೆ 825 ಕೋವಿಡ್ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲ ಈ ತಿಂಗಳಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿದ್ದಾರೆ. ಬಹುತೇಕ ಕೋವಿಡ್ ಪ್ರಕರಣಗಳು ಆಸ್ಪತ್ರೆ ದಾಖಲಾಗಿರುವ ರೋಗಿಗಳಲ್ಲಿ ಪತ್ತೆಯಾಗಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗುವ ರೋಗಿಗಳನ್ನು H1N1 ಹಾಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಈ ಪೈಕಿ ಬಹುತೇಕ ರೋಗಿಗಳ H1N1 ನೆಗಟೀವ್ ವರದಿ ಬಂದಿದ್ದರೆ, ಕೋವಿಡ್ ಪಾಸಿಟೀವ್ ಆಗಿದೆ. ಕೋವಿಡ್ ಮೂರು ಅಲೆಗಳ ಬಳಿಕವೂ ಭಾರತದಲ್ಲಿ ಹವಾಮಾನ ಬದಲಾದಂತೆ ಕೋವಿಡ್ ಕಾಣಿಸಿಕೊಂಡಿದೆ. ಈ ಬಾರಿ ಡಿಸೆಂಬರ್ ತಿಂಗಳ ಆರಂಭದಲ್ಲೇ ಕೇರಳದಲ್ಲಿ 2 ಸಾವು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

Read More

ನವದೆಹಲಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಎಂದೇ ಕರೆಸಿಕೊಳ್ಳುತ್ತಿರುವ ಲಲಿತ್ ಝಾ (Lalit Jha) ಹೆಚ್ಚಿನ ವಿಚಾರಣೆಗೆ ಏಳು ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಲಲಿತ್ ಝಾನನ್ನು ಶುಕ್ರವಾರ ಪಟಿಯಾಲ ಕೋರ್ಟ್ (Patiala Court) ಮುಂದೆ ಹಾಜರುಪಡಿಸಲಾಯಿತು, ಘಟನೆಯ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆಗೆ ಹದಿನೈದು ದಿನಗಳ ಸಮಯಬೇಕು ಎಂದು ಪೊಲೀಸರ ಪರ ವಕೀಲರು ಮನವಿ ಮಾಡಿದರು. ಘಟನೆಯ ವಿವರ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್ ಇಂದು ದೆಹಲಿ ಪೊಲೀಸರ ಪರವಾಗಿ ಹಾಜರಾಗಿ ಝಾನನ್ನು ಹದಿನೈದು ದಿನಗಳ ಕಸ್ಟಡಿಗೆ ಕೋರಿದರು. ಆದರೆ ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಧೀಶರು ಏಳು ದಿನಗಳ ಪೊಲೀಸ್ ಕಸ್ಟಡಿಗೆ (Police Custody) ನೀಡುವುದಾಗಿ ಹೇಳಿದರು ಘಟನೆಯ ಬಳಿಕ ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಲಲಿತ್ ಝಾ  ಗುರುವಾರ ರಾತ್ರಿ ಏಕಾಏಕಿ ಕರ್ತವ್ಯಪಥ್ ಪೊಲೀಸ್ ಠಾಣೆಗೆ ಬಂದು ಶರಣಾದನು. ಆತನನ್ನು ಬಂಧಿಸಿದ ಪೊಲೀಸರು ಪ್ರಕರಣ ತನಿಖೆ ನಡೆಸುತಿರುವ ಸ್ಪೇಷಲ್ ಟೀಂಗೆ ಹಸ್ತಾಂತರ ಮಾಡಿದರು. ಶನಿವಾರ ಪ್ರಾಥಮಿಕ…

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ  ದಾರಿ ತಪ್ಪಿ ಬಂದು ಅಪರಿಚಿತ ವಾಹನಕ್ಕೆ ಗಂಡು ಜಿಂಕೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋರಮಂಗಲ 100 ಫೀಟ್ ರಸ್ತೆಯಲ್ಲಿ ನಡೆದಿದೆ. ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವು‌ ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತಕ್ಕೆ ಬಲಿಯಾಗಿದ್ದು ಕೋರಮಂಗಲ 100 ಫೀಟ್ ರಸ್ತೆಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕೋರಮಂಗಲ 100 ಫೀಟ್ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಜಿಂಕೆ ಅಪರಿಚಿತ ವಾಹನಕ್ಕೆ ಸಿಲುಕಿ ಗಂಡು ಜಿಂಕೆ ಸಾವುಆರ್ಮಿ ಫೋರ್ಸ್ ರಸ್ತೆ ಬಳಿಯೇ ನಡೆದ ಘಟನೆ ವಿಷಯ ತಿಳಿದ ತಕ್ಷಣ ಅಪಘಾತ ನಡೆದ ಜಾಗಕ್ಕೆ ಧಾವಿಸಿದ ಗ್ರಿನ್ ಆರ್ಮಿ ಫೋರ್ಸ್‌ ನಿಂದ ಜಿಂಕೆಗೆ ಚಿಕಿತ್ಸೆ ನೀಡುವ ಪ್ರಯತ್ನ ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಜಿಂಕೆ ಸದ್ಯ ಜಿಂಕೆ ಮೃತದೇಹ ಅರಣ್ಯ ಇಲಾಖೆಗೆ ಶಿಫ್ಟ್ ಮಾಡಿದ ಜಾಗೃತದಳ ಕೋರಮಂಗಲದ ಆರ್ಮಿ ಫೋರ್ಸ್ ಒಳಭಾಗದಿಂದ ಜಿಂಕೆ ರಸ್ತಗೆ ಬಂದಿರೋ ಸಾಧ್ಯತೆ ದಾರಿ ತಪ್ಪಿ ಬಂದು ಅಪರಿಚಿತ ವಾಹನಕ್ಕೆ ಡಿಕ್ಕಿ ಘಟನೆ ಕಂಡು ಗ್ರೀನ್…

Read More

ಭೋಪಾಲ್: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವಕನೊಬ್ಬನನ್ನು ಇಂದೋರ್ (Indore) ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರವೀಣ್ ಸಿಂಗ್ ಧಾಕಡ್ (24) ಎಂದು ಗುರುತಿಸಲಾಗಿದೆ. ಮೂಲತಃ ಗುಣಾ ಜಿಲ್ಲೆಯ ನಿವಾಸಿಯಾಗಿರುವ ಈತ ಲಿವ್- ಇನ್- ಪಾರ್ಟ್ನರ್‌ ನ ಕುತ್ತಿಗೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಸಂತ್ರಸ್ತೆ ಮತ್ತು ಆರೋಪಿ ಇನ್‍ಸ್ಟಾಗ್ರಾಮ್‍ನಲ್ಲಿ (Instagram) ಸ್ನೇಹಿತರಾಗಿ ಕಳೆದ ಕೆಲವು ದಿನಗಳಿಂದ ನಗರದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಡೆದಿದ್ದೇನು..?: ಡಿಸೆಂಬರ್ 7 ರಂದು ರಾವ್ಜಿ ಬಜಾರ್ ಪ್ರದೇಶದಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ಮಹಿಳೆಯನ್ನು ಕೊಲ್ಲಲಾಯಿತು. ಎರಡು ದಿನಗಳ ನಂತರ ಡಿಸೆಂಬರ್ 9 ರಂದು ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಂಡರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಭಿನಯ್ ವಿಶ್ವಕರ್ಮ ಸುದ್ದಿಗಾರರಿಗೆ ತಿಳಿಸಿದರು. ಆರೋಪಿ ಪ್ರವೀಣ್, ಸಂತ್ರಸ್ತೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದಾಗ ಕೋಪಗೊಂಡು ಅವಳ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ಪರಿಣಾಮ ಮಹಿಳೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ಆರೋಪಿಗಳು ಗಾಬರಿಗೊಂಡು…

Read More