Author: AIN Author

ನವದೆಹಲಿ: ‘ಪೀರಿಯೆಡ್ ಲೀವ್’ ನೀಡುವ ಕುರಿತ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಹೇಳಿಕೆಯನ್ನು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಬೆಂಬಲಿಸಿದ್ದಾರೆ. ಇರಾನಿ ಹೇಳಿಕೆಯನ್ನು ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿರುವ ನಟಿ, ಮನುಕುಲದ ಇತಿಹಾಸದಲ್ಲಿ ದುಡಿಯದ ಮಹಿಳೆ ಇಲ್ಲವೇ ಇಲ್ಲ. ವ್ಯವಸಾಯದಿಂದ ಹಿಡಿದು ಮನೆ ಕೆಲಸ, ಮಕ್ಕಳನ್ನು ಬೆಳೆಸುವವರೆಗೆ ಹೀಗೆ ಪ್ರತಿ ದಿನ ಕೆಲಸ ಮಾಡುತ್ತಲೇ ಇರುತ್ತಾರೆ. ಕುಟುಂಬ ಸಮುದಾಯ ಅಥವಾ ರಾಷ್ಟ್ರದ ಮೇಲಿನ ಅವರ ಬದ್ಧತೆಗೆ ಯಾವ ವಿಚಾರಗಳು ಅಡ್ಡಿಯಾಗುವುದಿಲ್ಲ. ಹೀಗಾಗಿ ಪೀರಿಯೆಡ್ ಸಮಯದಲ್ಲಿ ಮಹಿಳೆಯರಿಗೆ ರಜೆಯ ಅವಶ್ಯಕತೆ ಇಲ್ಲ. ಇದು ಋತುಚಕ್ರವೇ ಹೊರತು ರೋಗ ಅಥವಾ ಅಂಗವಿಕಲತೆ ಅಲ್ಲ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇರಾನಿ ಹೇಳಿಕೆಯನ್ನು ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿರುವ ನಟಿ, ಮನುಕುಲದ ಇತಿಹಾಸದಲ್ಲಿ ದುಡಿಯದ ಮಹಿಳೆ ಇಲ್ಲವೇ ಇಲ್ಲ. ವ್ಯವಸಾಯದಿಂದ ಹಿಡಿದು ಮನೆ ಕೆಲಸ, ಮಕ್ಕಳನ್ನು ಬೆಳೆಸುವವರೆಗೆ ಹೀಗೆ ಪ್ರತಿ ದಿನ ಕೆಲಸ ಮಾಡುತ್ತಲೇ…

Read More

ಕೇರಳ: ಏಷ್ಯಾ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿದೆ ಪ್ರಮುಖವಾಗಿ ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಕೋವಿಡ್ ಗಣನೀಯ ಏರಿಕೆಯಾಗಿದ್ದು, ಮಾಸ್ಕ್ ಸೇರಿದಂತೆ ಇತರ ಮಾರ್ಗಸೂಚಿಗಳು ಜಾರಿಯಾಗಿದೆ. ಇದೀಗ ಭಾರತದಲ್ಲೂ ಕೋವಿಡ್ ಪ್ರಕರಣ ಏರಿಕೆಯಾಗಿದೆ. ಪ್ರಮುಖವಾಗಿ ಕೇರಳದಲ್ಲಿ ಶೇಕಡಾ 90 ರಷ್ಟು ಪ್ರಕರಣ ದಾಖಲಾಗಿದೆ. ನವೆಂಬರ್ ತಿಂಗಳಲ್ಲಿ ಕೇರಳದಲ್ಲಿ 450 ಕೋವಿಡ್ ಪ್ರಕರಣ ದಾಖಲಾಗಿತ್ತು. ಆದರೆ, ಡಿಸೆಂಬರ್ ತಿಂಗಳ 15ರವರೆಗೆ 825 ಕೋವಿಡ್ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲ ಈ ತಿಂಗಳಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿದ್ದಾರೆ. ಬಹುತೇಕ ಕೋವಿಡ್ ಪ್ರಕರಣಗಳು ಆಸ್ಪತ್ರೆ ದಾಖಲಾಗಿರುವ ರೋಗಿಗಳಲ್ಲಿ ಪತ್ತೆಯಾಗಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗುವ ರೋಗಿಗಳನ್ನು H1N1 ಹಾಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಈ ಪೈಕಿ ಬಹುತೇಕ ರೋಗಿಗಳ H1N1 ನೆಗಟೀವ್ ವರದಿ ಬಂದಿದ್ದರೆ, ಕೋವಿಡ್ ಪಾಸಿಟೀವ್ ಆಗಿದೆ. ಕೋವಿಡ್ ಮೂರು ಅಲೆಗಳ ಬಳಿಕವೂ ಭಾರತದಲ್ಲಿ ಹವಾಮಾನ ಬದಲಾದಂತೆ ಕೋವಿಡ್ ಕಾಣಿಸಿಕೊಂಡಿದೆ. ಈ ಬಾರಿ ಡಿಸೆಂಬರ್ ತಿಂಗಳ ಆರಂಭದಲ್ಲೇ ಕೇರಳದಲ್ಲಿ 2 ಸಾವು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

Read More

ನವದೆಹಲಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಎಂದೇ ಕರೆಸಿಕೊಳ್ಳುತ್ತಿರುವ ಲಲಿತ್ ಝಾ (Lalit Jha) ಹೆಚ್ಚಿನ ವಿಚಾರಣೆಗೆ ಏಳು ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಲಲಿತ್ ಝಾನನ್ನು ಶುಕ್ರವಾರ ಪಟಿಯಾಲ ಕೋರ್ಟ್ (Patiala Court) ಮುಂದೆ ಹಾಜರುಪಡಿಸಲಾಯಿತು, ಘಟನೆಯ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆಗೆ ಹದಿನೈದು ದಿನಗಳ ಸಮಯಬೇಕು ಎಂದು ಪೊಲೀಸರ ಪರ ವಕೀಲರು ಮನವಿ ಮಾಡಿದರು. ಘಟನೆಯ ವಿವರ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್ ಇಂದು ದೆಹಲಿ ಪೊಲೀಸರ ಪರವಾಗಿ ಹಾಜರಾಗಿ ಝಾನನ್ನು ಹದಿನೈದು ದಿನಗಳ ಕಸ್ಟಡಿಗೆ ಕೋರಿದರು. ಆದರೆ ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಧೀಶರು ಏಳು ದಿನಗಳ ಪೊಲೀಸ್ ಕಸ್ಟಡಿಗೆ (Police Custody) ನೀಡುವುದಾಗಿ ಹೇಳಿದರು ಘಟನೆಯ ಬಳಿಕ ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಲಲಿತ್ ಝಾ  ಗುರುವಾರ ರಾತ್ರಿ ಏಕಾಏಕಿ ಕರ್ತವ್ಯಪಥ್ ಪೊಲೀಸ್ ಠಾಣೆಗೆ ಬಂದು ಶರಣಾದನು. ಆತನನ್ನು ಬಂಧಿಸಿದ ಪೊಲೀಸರು ಪ್ರಕರಣ ತನಿಖೆ ನಡೆಸುತಿರುವ ಸ್ಪೇಷಲ್ ಟೀಂಗೆ ಹಸ್ತಾಂತರ ಮಾಡಿದರು. ಶನಿವಾರ ಪ್ರಾಥಮಿಕ…

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ  ದಾರಿ ತಪ್ಪಿ ಬಂದು ಅಪರಿಚಿತ ವಾಹನಕ್ಕೆ ಗಂಡು ಜಿಂಕೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋರಮಂಗಲ 100 ಫೀಟ್ ರಸ್ತೆಯಲ್ಲಿ ನಡೆದಿದೆ. ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವು‌ ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತಕ್ಕೆ ಬಲಿಯಾಗಿದ್ದು ಕೋರಮಂಗಲ 100 ಫೀಟ್ ರಸ್ತೆಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕೋರಮಂಗಲ 100 ಫೀಟ್ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಜಿಂಕೆ ಅಪರಿಚಿತ ವಾಹನಕ್ಕೆ ಸಿಲುಕಿ ಗಂಡು ಜಿಂಕೆ ಸಾವುಆರ್ಮಿ ಫೋರ್ಸ್ ರಸ್ತೆ ಬಳಿಯೇ ನಡೆದ ಘಟನೆ ವಿಷಯ ತಿಳಿದ ತಕ್ಷಣ ಅಪಘಾತ ನಡೆದ ಜಾಗಕ್ಕೆ ಧಾವಿಸಿದ ಗ್ರಿನ್ ಆರ್ಮಿ ಫೋರ್ಸ್‌ ನಿಂದ ಜಿಂಕೆಗೆ ಚಿಕಿತ್ಸೆ ನೀಡುವ ಪ್ರಯತ್ನ ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಜಿಂಕೆ ಸದ್ಯ ಜಿಂಕೆ ಮೃತದೇಹ ಅರಣ್ಯ ಇಲಾಖೆಗೆ ಶಿಫ್ಟ್ ಮಾಡಿದ ಜಾಗೃತದಳ ಕೋರಮಂಗಲದ ಆರ್ಮಿ ಫೋರ್ಸ್ ಒಳಭಾಗದಿಂದ ಜಿಂಕೆ ರಸ್ತಗೆ ಬಂದಿರೋ ಸಾಧ್ಯತೆ ದಾರಿ ತಪ್ಪಿ ಬಂದು ಅಪರಿಚಿತ ವಾಹನಕ್ಕೆ ಡಿಕ್ಕಿ ಘಟನೆ ಕಂಡು ಗ್ರೀನ್…

Read More

ಭೋಪಾಲ್: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವಕನೊಬ್ಬನನ್ನು ಇಂದೋರ್ (Indore) ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರವೀಣ್ ಸಿಂಗ್ ಧಾಕಡ್ (24) ಎಂದು ಗುರುತಿಸಲಾಗಿದೆ. ಮೂಲತಃ ಗುಣಾ ಜಿಲ್ಲೆಯ ನಿವಾಸಿಯಾಗಿರುವ ಈತ ಲಿವ್- ಇನ್- ಪಾರ್ಟ್ನರ್‌ ನ ಕುತ್ತಿಗೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಸಂತ್ರಸ್ತೆ ಮತ್ತು ಆರೋಪಿ ಇನ್‍ಸ್ಟಾಗ್ರಾಮ್‍ನಲ್ಲಿ (Instagram) ಸ್ನೇಹಿತರಾಗಿ ಕಳೆದ ಕೆಲವು ದಿನಗಳಿಂದ ನಗರದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಡೆದಿದ್ದೇನು..?: ಡಿಸೆಂಬರ್ 7 ರಂದು ರಾವ್ಜಿ ಬಜಾರ್ ಪ್ರದೇಶದಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ಮಹಿಳೆಯನ್ನು ಕೊಲ್ಲಲಾಯಿತು. ಎರಡು ದಿನಗಳ ನಂತರ ಡಿಸೆಂಬರ್ 9 ರಂದು ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಂಡರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಭಿನಯ್ ವಿಶ್ವಕರ್ಮ ಸುದ್ದಿಗಾರರಿಗೆ ತಿಳಿಸಿದರು. ಆರೋಪಿ ಪ್ರವೀಣ್, ಸಂತ್ರಸ್ತೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದಾಗ ಕೋಪಗೊಂಡು ಅವಳ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ಪರಿಣಾಮ ಮಹಿಳೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ಆರೋಪಿಗಳು ಗಾಬರಿಗೊಂಡು…

Read More

ಧಾರವಾಡ : ಜಿಲ್ಲೆಯ 525 ವಿಶೇಷ ಚೇತನರಿಗೆ ದಾಖಲೆಯ ತ್ರಿಚಕ್ರ ವಾಹನ ವಿತರಣೆಗೆ ಕ್ಷಣಗಣಗನೆ ಅರಂಭವಾಗಿದೆ. ಹೌದು ಕರ್ನಾಟಕ ಕಾಲೇಜು ಮೈದಾನದಲ್ಲಿ ಈಗಾಗಲೇ ವಿಶೇಷ ಚೇತನರಿಗೆ ನೀಡು ಮೊಟಾರ್ ಸೈಕಲ್ ಬಂದಿದ್ದು, ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನ ಹಾಗೂ ಉಪ ಮುಖ್ಯಂಮತ್ರಿ ಡಿಕೆಶಿ ಸಚಿವ ಸಂತೋಷ ಲಾಡ ಅವರ ನೇತೃತ್ವದಲ್ಲಿ ವಾಹನ‌ ವಿತರಣೆಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಕಳೆದ ಶನಿವಾರದಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮ ನಡೆಯುವ ಕೆಸಿಡಿ ಮೈದಾನಕ್ಕೆ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರವರೊಂದಿಗೆ ಭೇಟಿ ನೀಡಿ ಕಾರ್ಯಕ್ರಮದ ಸಿದ್ಧತೆ ಕುರಿತು ಪರಿಶೀಲನೆ ಕೈಗೊಂಡಿ್ದಾರೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿಬರಾದ ಲಾಡ್ ಅವರಿಂದ ಇದು ಮತ್ತೊಂದು ಮಹೋನ್ನತ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮ ಯಶಸ್ವಿಗೆ ಧಾರವಾಡ ಜಿಲ್ಲಾಡಳುತ ಕಾರ್ಮಿಕ ಇಲಾಖೆ ಹಾಗೂ ಸಂತೋಷ ಲಾಡ್ ಪೌಂಡೇಶನ ಕೂಡಾ ಸಾಥ ನಾಡಿದೆ. ಇನ್ನೂ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ 25 ತ್ರಿ ಚಕ್ರವಾಹನವು ಇದರಲ್ಲಿ ಸೇರಿದ್ದು, ಒಟ್ಟು 525 ವಿಶೇಷ…

Read More

ನವದೆಹಲಿ: ಪ್ರಶ್ನೆಗಾಗಿ ನಗದು ಪಡೆದು ಪ್ರಕರಣದಲ್ಲಿ ಸಂಸತ್ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಟಿಎಂಸಿ (TMC) ನಾಯಕಿ ಮಹುವಾ ಮೊಯಿತ್ರಾ (Mahua Moitra) ಅರ್ಜಿಯನ್ನು ಜನವರಿ 3ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಉಚ್ಛಾಟನೆಯನ್ನು ಪ್ರಶ್ನೆ ಮಾಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ (Snajeev Khanna) ನೇತೃತ್ವ ಪೀಠ ಪ್ರಕರಣದ ಬಗ್ಗೆ ಅಧ್ಯಯನ ಮಾಡಲು ಸಮಯ ಸಿಕ್ಕಿಲ್ಲ ಎಂದು ಹೇಳಿದೆ. ಇತರೆ ಹಲವು ಪ್ರಕರಣಗಳ ಅರ್ಜಿಗಳನ್ನು ಅಧ್ಯಯನ ಮಾಡಬೇಕಿದ್ದು, ಈ ಪ್ರಕರಣದ ಫೈಲ್ ಅನ್ನು ಓದಲು ನನಗೆ ಸಮಯ ಸಿಕ್ಕಿಲ್ಲ. ಹೀಗಾಗಿ ವಿಚಾರಣೆ ದಿನಾಂಕ ಬದಲಾಯಿಸಲಾಗುತ್ತಿದೆ. ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಿಚಾರಣೆ ವೇಳೆ ನ್ಯಾ. ಸಂಜೀವ್ ಖನ್ನಾ ಹೇಳಿದರು. ಡಿಸೆಂಬರ್ 22ಕ್ಕೆ ಕಲಾಪ ಅಂತ್ಯವಾಗುತ್ತಿರುವ ಹಿನ್ನೆಲೆ ಸುಪ್ರೀಂಕೋರ್ಟ್ (Supreme Court) ಈ ನಿರ್ಧಾರದಿಂದ ಮಧ್ಯಂತರ ರಿಲೀಫ್ ಪಡೆದು ಮಹುವಾ ಮೊಯಿತ್ರಾ ಪ್ರಸಕ್ತ ಅಧಿವೇಶನದಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ

Read More

ಹುಬ್ಬಳ್ಳಿ: ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ಮಾರ್ತಂಡಗೌಡ ಪ್ರಲ್ಹಾದಗೌಡ ಪಾಟೀಲ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೂ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ಧಾರವಾಡದ ಹೈಕೋರ್ಟ್‌ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದೆ. https://ainlivenews.com/illegally-collected-1635-grams-of-ganja-seized/ ವಿರುಪಾಕ್ಷಗೌಡ ಪಾಟೀಲ, ತುಳಸರಡ್ಡಿ ಗಾಡರಡ್ಡಿ, ನಿಂಗಪ್ಪ ಈರಗಾರ ಹಾಗೂ ನೀಲವ್ವ ಪಾಟೀಲ ಶಿಕ್ಷೆಗೊಳಗಾದವರು. ಆಸ್ತಿಗೆ ಸಂಬಂಧಿಸಿದಂತೆ 2011ರ ಡಿಸೆಂಬರ್‌ 11ರಂದು ಮಾರ್ತಂಡಗೌಡ ಅವರ ಕೊಲೆಯಾಗಿತ್ತು. ನ್ಯಾಯಮೂರ್ತಿಗಳಾದ ಎಚ್‌.ಪಿ. ಸಂದೇಶ ಹಾಗೂ ರಾಮಚಂದ್ರ ಡಿ.ಹುದ್ದಾರ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪಿರ್ಯಾದಿ ಪರವಾಗಿ ಎಲ್‌.ಎಸ್‌. ಸುಳ್ಳದ ವಾದಿಸಿದ್ದರು. ಇದಕ್ಕೂ ಮುಂಚೆ 2019ರ ಮಾರ್ಚ್‌ 30ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆ ಮಾಡಿ ಆದೇಶಿಸಿತ್ತು. ಈ ಆದೇಶವನ್ನು ಧಾರವಾಡ ಹೈಕೋರ್ಟ್‌ ರದ್ದುಪಡಿಸಿ, ಶಿಕ್ಷೆ ವಿಧಿಸಿದೆ.

Read More

ಬೆಂಗಳೂರು: ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಂಬಂಧ ಅಧಿವೇಶನದಲ್ಲಿ ಸರ್ಕಾರ ದರ ಏರಿಸುವ ಸುಳಿವು ನೀಡಿದೆ. ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ಹೇಳಿದೆ. ದರ ಹೆಚ್ಚಳ ಕುರಿತು ಮಾಲೂರು ಶಾಸಕ ಕೆ.ವೈ ನಂಜೇಗೌಡ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ.ವೆಂಕಟೇಶ್ ಉತ್ತರ ನೀಡಿದ್ದಾರೆ. ಇತರೆ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ಗಳ ದರ 10-12 ರೂಪಾಯಿ ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಉತ್ತರ ಕೊಟ್ಟಿದ್ದಾರೆ. ಇದರೊಂದಿಗೆ ಹೊಸವರ್ಷಕ್ಕೆ ನಂದಿನ ಹಾಲಿನ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗುವುದಂತು ಗ್ಯಾರೆಂಟಿಯಾಗಿದೆ.

Read More

ಕಾಸರಗೋಡು: ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಟೆಕ್ವಾಂಡೋದಲ್ಲಿ ಚಿನ್ನದ ಪದಕ ಗೆದ್ದು, (Taekwondo) ಕನ್ನಡತಿ ಎನ್.‌ ಗಣ್ಯ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು (Kasaragod) ಜಿಲ್ಲೆಯ ಎಡನೀರು ಸ್ವಾಮೀಜಿಸ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ ಒನ್‌ ವಿದ್ಯಾರ್ಥಿನಿಯಾಗಿರುವ ಗಣ್ಯ, 17 ವರ್ಷದೊಳಗಿನ ಬಾಲಕಿಯರ 50-65 ಕೆಜಿ ವಿಭಾಗದಲ್ಲಿ ಮಿಂಚಿದರು. ಗಣ್ಯ ಸಾಧನೆಯಿಂದಾಗಿ ಕಾಸರಗೋಡು ಜಿಲ್ಲೆ ಸೀನಿಯರ್‌ ಹಾಗೂ ಜೂನಿಯರ್‌ ಟೆಕ್ವಾಂಡೋ (Junior Taekwondo) ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದಿದೆ. ಆರ್‌ಎಸ್‌ಸಿ ಎರ್ನಾಕುಳಂನಲ್ಲಿ (Ernakulam) ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಗೆಲುವಿನೊಂದಿಗೆ ಗಣ್ಯ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಸ್‌ ಒನ್‌ ವಿಜ್ಞಾನ ವಿಭಾಗದಲ್ಲಿ (PCMB) ವಿದ್ಯಾಭ್ಯಾಸ ಮಾಡುತ್ತಿರುವ ಗಣ್ಯ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ಯೋಗಾಭ್ಯಾಸದಲ್ಲೂ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು ಯೋಧ ಟೆಕ್ವಾಂಡೋ ಅಕಾಡೆಮಿಯಲ್ಲಿ ಜಯನ್ ಪೊಯಿನಾಚಿ ಅವರಿಂದ ಗಣ್ಯ ತರಬೇತಿ ಪಡೆದಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್…

Read More